Tag: ಹನುಮಂತ ಲಮಾಣಿ

  • ಇಂದು ಸ್ವಗ್ರಾಮಕ್ಕೆ ಬಿಗ್ ಬಾಸ್ ವಿನ್ನರ್ ಹನುಮಂತ – ಅದ್ಧೂರಿ ಸ್ವಾಗತಕ್ಕೆ ಸ್ನೇಹಿತರು, ಗ್ರಾಮಸ್ಥರ ಸಿದ್ಧತೆ

    ಇಂದು ಸ್ವಗ್ರಾಮಕ್ಕೆ ಬಿಗ್ ಬಾಸ್ ವಿನ್ನರ್ ಹನುಮಂತ – ಅದ್ಧೂರಿ ಸ್ವಾಗತಕ್ಕೆ ಸ್ನೇಹಿತರು, ಗ್ರಾಮಸ್ಥರ ಸಿದ್ಧತೆ

    ಹಾವೇರಿ: ಭಜನೆ ಮತ್ತು ಶಿಶುನಾಳ ಶರೀಫ ತತ್ವಗಳನ್ನ ಹೇಳುತ್ತಾ, ಸರಿಗಮಪ ವೇದಿಕೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದ ಹಳ್ಳಿಹೈದ ಹನುಮಂತ (Hanumantha Lamani) ಬಿಗ್ ಬಾಸ್ ಸೀಸನ್ 11ರಲ್ಲಿ (Bigg Boss 11) ವಿನ್ನರ್ ಆಗಿ ಕರುನಾಡಿನ ಜನರ ಮನಸ್ಸು ಗೆದ್ದಿದ್ದಾರೆ. ಈ ಹಿನ್ನೆಲೆ ಗ್ರಾಮದ ಸ್ನೇಹಿತರು ಹಾಗೂ ಅಭಿಮಾನಿಗಳು ಹನುಮಂತ ಅವರಿಗೆ ಅದ್ಧೂರಿ ಸ್ವಾಗತ ಮಾಡುವ ಪ್ಯ್ಲಾನ್ ಮಾಡುತ್ತಿದ್ದಾರೆ. ಹನುಮಂತ ಅವರ ತಂದೆ ತಾಯಿ ಕೂಡಾ ಇಂದು ಬೆಂಗಳೂರಿನಿಂದ ಆಗಮಿಸಲಿದ್ದಾರೆ.

    ಬಿಗ್ ಬಾಸ್ 11ರಲ್ಲಿ ಹಾವೇರಿ (Haveri) ಜಿಲ್ಲೆ ಸವಣೂರು (Savanur) ತಾಲೂಕಿನ ಚಿಲ್ಲೂರುಬಡ್ನಿಯ (Chillur Badni) ಹನುಮಂತ ಲಮಾಣಿ ವಿನ್ನರ್ ಆಗಿ ಕರುನಾಡ ಜನರ ಮನಗೆದ್ದಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಇಂದು ಸ್ವಗ್ರಾಮಕ್ಕೆ ಹನುಮಂತ ಆಗಮಿಸಲಿದ್ದು, ಗ್ರಾಮದ ಜನರು ಅದ್ಧೂರಿ ಸ್ವಾಗತ ಸಿದ್ಧತೆ ನಡೆಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆಯಲ್ಲಿ ಡೊಳ್ಳು, ಭಜನೆ ಹಾಗೂ ಜಾಂಜ್ ಮೇಳೆ ಸೇರಿದಂತೆ ವಿವಿಧ ಕಲಾತಂಡಗಳ ಮೂಲಕ ಸ್ವಾಗತ ಮಾಡಲಿದ್ದಾರೆ. ಅಲ್ಲದೆ ಕೆಲವು ಅಭಿಮಾನಿಗಳು ಈಗಾಗಲೇ ಹನುಮಂತ ಅವರನ್ನು ನೋಡಲು ಮನೆಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: My Dear Friend – ಟ್ರಂಪ್‌ ಜೊತೆಗೆ ಮೋದಿ ದೂರವಾಣಿ ಸಂಭಾಷಣೆ

    ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಕುರಿಗಾಹಿ ಹನುಮಂತ ಈಗ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಹನುಮಂತ ಅವರು ಬಹಳ ಏನೂ ಕಲಿತಿಲ್ಲ. ಕಡುಬಡತನದ ಕುಟುಂಬದಲ್ಲಿ ಬೆಳೆದ ಹನುಮಂತ, ಕುರಿ ಕಾಯುವ ಕೆಲಸ ಮಾಡುತ್ತಿದ್ದರು. ಕುರಿ ಕಾಯುತ್ತಾ ಕಾಯುತ್ತಾ ಶಿಶುನಾಳ ಶರೀಫರ ನಿನ್ನೊಳಗ ನೀನು ತಿಳದ ನೋಡಣ್ಣ ಹಾಗೂ ಕೇಳ ಜಾಣ ಶಿವ ಧ್ಯಾನ ಮಾಡಣ್ಣ ಎಂಬ ಹಾಡುಗಳನ್ನು ಹಾಡುತ್ತಿದ್ದರು. ಕೋಗಿಲೆ ಕಂಠದ ಹನುಮಂತ ಅವರ ಹಾಡುಗಳು ಖಾಸಗಿ ವಾಹಿನಿಯ ಸರಿಗಮಪ ವೇದಿಕೆಗೆ ಪ್ರವೇಶಿಸಿದವು. ಕುರಿಗಾಹಿ ಹನುಮಂತ ಅವರ ಹಾಡು ಹೇಳಿದ ತೀರ್ಪುಗಾರರು ಅವರ ಕೋಗಿಲೆ ಕಂಠಕ್ಕೆ ಫುಲ್‌ಫಿದಾ ಆಗಿಬಿಟ್ಟರು. ಸರಿಗಮಪ ವೇದಿಕೆಯಲ್ಲೂ ಹನುಮಂತ ಅವರು ಭರ್ಜರಿಯಾಗಿ ಮಿಂಚಿ ಸಖತ್ ಫೇಮಸ್ ಆಗಿದ್ದಾರೆ. ಇದೀಗ ಬಿಗ್ ಬಾಸ್‌ನಲ್ಲಿ ಸರಳ ವ್ಯಕ್ತಿತ್ವ, ತನ್ನ ಜಾನಪದ ಶೈಲಿಯ ಹಾಡುಗಳ ಮೂಲಕ ಹನುಮಂತ ಜನರ ಮನಸ್ಸು ಗೆದ್ದು, ಬಿಗ್ ಬಾಸ್‌ನಲ್ಲಿ ಜಯಶಾಲಿಯಾಗಿದ್ದಾರೆ. ಇದನ್ನೂ ಓದಿ: ತುಮಕೂರಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ವೇಳೆ ಬಂಡೆ ಸ್ಫೋಟ – ಓರ್ವ ಕಾರ್ಮಿಕ ಸಾವು

  • BBK 11: ಟಾಸ್ಕ್‌ನಲ್ಲಿ ರೊಚ್ಚಿಗೆದ್ದ ಸ್ಪರ್ಧಿ- ಹನುಮಂತನ ಬೆನ್ನಿಗೆ ಬಾರಿಸಿದ ಭವ್ಯಾ

    BBK 11: ಟಾಸ್ಕ್‌ನಲ್ಲಿ ರೊಚ್ಚಿಗೆದ್ದ ಸ್ಪರ್ಧಿ- ಹನುಮಂತನ ಬೆನ್ನಿಗೆ ಬಾರಿಸಿದ ಭವ್ಯಾ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಇದೀಗ 100ನೇ ದಿನಕ್ಕೆ ಕಾಲಿಟ್ಟಿದೆ. ಫಿನಾಲೆಗೆ ಟಿಕೆಟ್ ಬಾಚಿಕೊಳ್ಳಲು 9 ಸ್ಪರ್ಧಿಗಳ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಇದೀಗ ಬಾಲ್ ಟಾಸ್ಕ್‌ನಲ್ಲಿ ಭವ್ಯಾ (Bhavya Gowda) ರೊಚ್ಚಿಗೆದ್ದಿದ್ದಾರೆ. ಆಟ ಆಡುವ ಭರದಲ್ಲಿ ಹನುಮಂತನ (Hanumantha) ಬೆನ್ನಿಗೆ ಭವ್ಯಾ ಬಾರಿಸಿದ್ದಾರೆ. ಇದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.

    ಸಾಕಷ್ಟು ಚೆಂಡುಗಳನ್ನು ಸಂಗ್ರಹಿಸಿದ್ದ ಅವರು ಒಂದಷ್ಟು ತಂತ್ರಗಳನ್ನು ಬಳಸಲು ಪ್ರಯತ್ನಿಸಿದರು. ಬಟ್ಟೆಯಿಂದ ಬಾಸ್ಕೆಟ್ ಮುಚ್ಚಿಕೊಳ್ಳುವಂತಿಲ್ಲ ಎಂದು ಕ್ಯಾಪ್ಟನ್ ರಜತ್ ಹೇಳಿದರು. ಹಾಗಾಗಿ ಚೆಂಡುಗಳನ್ನು ಕಾಪಾಡಿಕೊಳ್ಳುವುದು ಇನ್ನಷ್ಟು ಕಷ್ಟ ಆಯಿತು. ಆ ಸಂದರ್ಭವನ್ನು ಬಳಸಿಕೊಂಡು ಹನುಮಂತ ಟಾಸ್ಕ್ ವೇಳೆ, ಭವ್ಯಾ ಸಂಗ್ರಹಿಸಿದ್ದ ಬಾಲ್ ಕಸಿಯಲು ಬಂದಿದ್ದಾರೆ. ಇದರಿಂದ ಹನುಮಂತ ಹಾಗೂ ಭವ್ಯಾ ಅವರ ಮಧ್ಯೆ ನಡೆದ ಗಲಾಟೆ ಕೈ, ಕೈ ಮಿಲಾಯಿಸೋ ಹಂತಕ್ಕೆ ತಲುಪಿದೆ.

    ಚೈತ್ರಾ, ಗೌತಮಿ, ಭವ್ಯಾ, ಧನರಾಜ್, ಹನುಮಂತ ಅವರಲ್ಲಿ ಬಾಲ್‌ಗಳನ್ನು ಬುಟ್ಟಿಗೆ ಹಾಕುವ ಹೋರಾಟ ನಡೆದಿದೆ. ಇದರಲ್ಲಿ ಪ್ರತಿಯೊಬ್ಬರು ಎದುರಾಳಿಯ ಬುಟ್ಟಿಯಲ್ಲಿದ್ದ ಬಾಲ್‌ಗಳನ್ನ ಕಿತ್ತುಕೊಳ್ಳಲು ಮುಂದಾಗುತ್ತಾರೆ. ಇದೇ ವೇಳೆ, ಹನುಮಂತ ಅವರು ಭವ್ಯಾ ಅವರ ಬುಟ್ಟಿಯಲ್ಲಿದ್ದ ಬಾಲ್‌ಗಳನ್ನ ಹಿಡಿದು ಎಳೆಯುತ್ತಾರೆ. ಹನುಮಂತ ತನ್ನ ಬುಟ್ಟಿಗೆ ಕೈ ಹಾಕಿದ್ದಕ್ಕೆ ಸಿಟ್ಟಿಗೆದ್ದ ಸ್ಪರ್ಧಿ ಭವ್ಯಾ ಅವರ ಟಾಸ್ಕ್ನಲ್ಲಿ ಹನುಮಂತು ಅವರ ಬೆನ್ನಿನ ಮೇಲೆ ಬಾರಿಸಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಕಾಲ್ತುಳಿತ ಪ್ರಕರಣ: ಮೃತ ರೇವತಿ ಪುತ್ರನನ್ನು ಭೇಟಿಯಾದ ಅಲ್ಲು ಅರ್ಜುನ್

    ಭವ್ಯಾ ಅವರು ಹೊಡೆದಿದ್ದಕ್ಕೆ ಖಂಡಿಸಿದ ಹನುಮಂತ ಅದನ್ನ ಕ್ಯಾಪ್ಟನ್ ರಜತ್ ಅವರ ಗಮನಕ್ಕೆ ತರುತ್ತಾರೆ. ರಜತ್ ಅವರು ಭವ್ಯಾ ನೀವು ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದು, ಆಟದಲ್ಲಿ ಪಾಜ್ ಕೊಡುತ್ತಾರೆ. ಇಷ್ಟಾದರೂ ಭವ್ಯಾ ಅವರು ಹನುಮಂತು ಮೇಲೆ ಕೈ ಮಾಡಿದ್ದು, ಪ್ರೇಕ್ಷಕರ ಕೋಪಕ್ಕೆ ಕಾರಣವಾಗಿದೆ.

    ಇನ್ನೂ ಟಾಸ್ಕ್ ಮುಗಿದ ಬಳಿಕ ಭವ್ಯಾ ಹನುಮಂತನ ಬಳಿ ಹೋಗಿ ಕಾಲಿಗೆ ನಮಿಸುತ್ತಾರೆ. ತಪ್ಪಾಯ್ತು ಕ್ಷಮಿಸಿ ಬೇಕಂತ ಮಾಡಿದ್ದಲ್ಲ ಎಂದು ಹನುಮಂತನ ಬಳಿ ಭವ್ಯಾ ಕ್ಷಮೆಯಾಚಿಸಿದ್ದಾರೆ. ಈ ಕುರಿತು ವೀಕೆಂಡ್ ಪಂಚಾಯಿತಿಯಲ್ಲಿ ಸುದೀಪ್ ನಡೆಯೇನು? ಎಂದು ಕಾಯಬೇಕಿದೆ.

  • ನಿಮ್ಮ ಬುದ್ಧಿವಂತಿಕೆಯಿಂದ ನಾವು ಯಾರು ಆಟ ಆಡಲಿಲ್ಲ: ಶೋಭಾ, ಹನುಮಂತ ನಡುವೆ ಕಿರಿಕ್

    ನಿಮ್ಮ ಬುದ್ಧಿವಂತಿಕೆಯಿಂದ ನಾವು ಯಾರು ಆಟ ಆಡಲಿಲ್ಲ: ಶೋಭಾ, ಹನುಮಂತ ನಡುವೆ ಕಿರಿಕ್

    ದೊಡ್ಮನೆಯ (Bigg Boss Kannada 11) ಆಟ ರೋಚಕ ತಿರುವುಗಳನ್ನು ಪಡೆದು 60ನೇ ದಿನದತ್ತ ಮುನ್ನುಗ್ಗುತ್ತಿದೆ. ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ (Rajath Kishen) ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಮೇಲೆ ಆಟ ಇಂಟರೆಸ್ಟಿಂಗ್ ಆಗಿದೆ. ಇದೀಗ ಹನುಮಂತ ನಾಮಿನೇಟ್ ಮಾಡಿದ್ದಕ್ಕೆ ಫೈರ್ ಲೇಡಿ ಶೋಭಾ ಶೆಟ್ಟಿ ಗರಂ ಆಗಿದ್ದಾರೆ. ಈ ವೇಳೆ, ಹನುಮಂತ, ಶೋಭಾ, ಮಂಜು ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ:ಝೈನಾಬ್ ಜೊತೆ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ಅಖಿಲ್ ಅಕ್ಕಿನೇನಿ

    ವಾರದ ನಾಮಿನೇಷನ್ ಪ್ರಕ್ರಿಯೆ ವೇಳೆ, ಶೋಭಾ ಶೆಟ್ಟಿ ಹೆಸರನ್ನು ಹನುಮಂತ ಸೂಚಿಸಿದರು. ಅದಕ್ಕೆ ಕೊಟ್ಟ ಕಾರಣ ಶೋಭಾಗೆ ಸಿಟ್ಟು ತರಿಸಿದೆ. ನೇರವಾಗಿ ಶೋಭಾ ಶೆಟ್ಟಿಗೆ ನಿಮ್ಮ ಕ್ಯಾಪ್ಟನ್ಸಿ ನನಗೆ ಇಷ್ಟ ಆಗಿಲ್ಲ ಎಂದಿದ್ದಾರೆ. ನಿಮ್ಮ ಬುದ್ದಿವಂತಿಕೆಯಿಂದ ನಾವು ಯಾರು ಆಟ ಆಡಲಿಲ್ಲ. ಎಲ್ಲಾ ರಜತ್ ಮತ್ತು ಮಂಜು ಪ್ಲ್ಯಾನ್ ಮಾಡಿದಂತೆ, ಆಟ ಆಡಿದ್ದೇವೆ ಎಂದು ಹನುಮಂತ (Hanumantha) ಹೇಳಿದ್ದಾರೆ. ಹಾಗಾದ್ರೆ ನಿಮ್ಮ ಬುದ್ಧಿವಂತಿಕೆ ಎಲ್ಲಿ ಹೋಗಿತ್ತು ಎಂದು ಹನುಮಂತಗೆ ಶೋಭಾ ತಿರುಗೇಟು ನೀಡಿದ್ದಾರೆ.

    ಸದ್ಯ ಬಿಗ್ ಬಾಸ್ ಸಾಮ್ರಾಜ್ಯದ ರಾಜನಾಗಿರುವ ಉಗ್ರಂ ಮಂಜು ಅವರು ಹನುಮಂತ ಕೊಟ್ಟ ಕಾರಣವನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಶೋಭಾ ರಾಂಗ್ ಆಗಿದ್ದಾರೆ. ಆ ಕಾರಣ ಸೂಕ್ತ ಅನ್ನೋದಾಗಿದ್ರೆ ನಾನು ವಾದನೇ ಮಾಡುತ್ತಿರಲಿಲ್ಲ ಎಂದಿದ್ದಾರೆ. ನಟಿಗೆ ಇದು ‘ಬಿಗ್ ಬಾಸ್’ ಮಹಾಪ್ರಭುಗಳ ಆಜ್ಞೆ ಎಂದು ಮಂಜು ಸಿಟ್ಟಿನಿಂದ ಹೋಗಿ ಕುಳಿತುಕೊಳ್ಳಿ ಎಂದಿದ್ದಾರೆ. ಇಲ್ಲ ನಾನು ಕೂರಲ್ಲ ಮಹಾಪ್ರಭು ಎಂದು ಶೋಭಾ ಕೂಡ ಖಡಕ್ ಆಗಿ ಉತ್ತರಿಸಿದ್ದಾರೆ. ಇಬ್ಬರ ವಾಗ್ವಾದಕ್ಕೆ ಮನೆ ಮಂದಿ ಸೈಲೆಂಟ್ ಆಗಿದ್ದಾರೆ.