Tag: ಹನುಮಂತು

  • ಸಂಡೂರು ಉಪಚುನಾವಣೆ: ಬಂಗಾರು ಹನುಮಂತು ನಾಮಪತ್ರ ಸಲ್ಲಿಕೆ

    ಸಂಡೂರು ಉಪಚುನಾವಣೆ: ಬಂಗಾರು ಹನುಮಂತು ನಾಮಪತ್ರ ಸಲ್ಲಿಕೆ

    – ವಾಲ್ಮೀಕಿ ನಿಗಮದ ಹಣ ಬಳಸಿ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಗೆದ್ದಿದೆ
    – ಶ್ರೀರಾಮುಲುರನ್ನ ಕುತಂತ್ರದಿಂದ ಸೋಲಿಸಲಾಗಿದೆ
    – ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

    ಬಳ್ಳಾರಿ: ಸಂಡೂರು (Sandur By Election) ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು (Bangauru Hanumanthu) ಇಂದು ನಾಮಪತ್ರ (Nomination) ಸಲ್ಲಿಕೆ ಮಾಡಿದ್ದಾರೆ.

    ಸಂಡೂರು ತಾಲೂಕು ಕಛೇರಿಗೆ ಬಿಜೆಪಿ ನಾಯಕರು ಜೊತೆ ಆಗಮಿಸಿದ ಬಂಗಾರು ಹನುಮಂತು ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಜನಾರ್ದನ ರೆಡ್ಡಿ, ಭಗವಂತ ಖೂಬಾ, ಪತ್ನಿ ರೂಪಾಶ್ರೀ ಜೊತೆ ಸೇರಿ ನಾಮಪತ್ರ ಸಲ್ಲಿಕೆ ಮಾಡಿದರು.

    ನಾಮಪತ್ರ ಸಲ್ಲಿಕೆಯ ಮುನ್ನ ಬಿಜೆಪಿ ನಾಯಕರು ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದರು. ಈ ವೇಳೆ ಮಾತನಾಡಿದ ವಿಜಯೇಂದ್ರ, ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೂ ಬಂಗಾರು ಹನುಮಂತ ಗೆಲವು ಅಷ್ಟೇ ಸತ್ಯ. 20 ವರ್ಷದಿಂದ ಸಂಡೂರಿನಲ್ಲಿ (Sanduru) ಕಾಂಗ್ರೆಸ್ ಇದೆ. ಒಂದು ಬಸ್ ನಿಲ್ದಾಣ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು.

    ರಾಮುಲು ಅವರನ್ನ ಬಳ್ಳಾರಿ, ವಿಜಯನಗರ ಜಿಲ್ಲೆ ಜನ ಸೋಲಿಸಿಲ್ಲ. ಕಾಂಗ್ರೆಸ್‌ನವರು ಕುತಂತ್ರದಿಂದ ಸೋಲಿಸಿದ್ದಾರೆ. ವಾಲ್ಮೀಕಿ ನಿಗಮದ ಹಣ ಹಂಚಿ ರಾಮುಲು ಅವರನ್ನ ಸೋಲಿಸಿದ್ದಾರೆ. ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಎಸ್‌ಟಿ ನಿಗಮದ ಹಣ ಕಾಂಗ್ರೆಸ್ ದುರ್ಬಳಕೆ ಮಾಡಿದೆ. ಈ ಚುನಾವಣೆಯಲ್ಲಿ ನಮಗೆ ನ್ಯಾಯ ಸಿಗುವ ನಂಬಿಕೆ ಇದೆ. ರಾಜ್ಯದಲ್ಲಿ ಮೂರು ಕ್ಷೇತ್ರದ ಉಪ ಚುನಾವಣೆಗಳಲ್ಲೂ ಬಿಜೆಪಿ ಗೆಲವು ಖಚಿತ ಎಂದು ಹೇಳಿದರು.

    ಶ್ರೀರಾಮುಲು ಮಾತನಾಡಿ, ವಾಲ್ಮೀಕಿ ನಿಗಮದ ಹಣದಿಂದ ತುಕಾರಾಂ ಸಂಸದರಾಗಿದ್ದಾರೆ. ಬಿಜೆಪಿ ಕುತಂತ್ರ ಮಾಡಿ ಜೈಲಿಗೆ ಹಾಕಿದ್ದಾರೆ ಎಂದು ನಾಗೇಂದ್ರ ಹೇಳುತ್ತಾರೆ. 187 ಕೋಟಿ ಹಣ ನಾಗೇಂದ್ರ ಆದಿಯಾಗಿ ಕಾಂಗ್ರೆಸ್ ನುಂಗಿದೆ. ಬಳ್ಳಾರಿ ಲೋಕಸಭಾ ಚುನಾವಣೆಗೆ 21.19 ಕೋಟಿ ರೂ. ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ. ಹೀಗಾಗಿ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ ಎಂದುಕ ರೆ ನೀಡಿದರು. ಇದನ್ನೂ ಓದಿ: ಸಂಡೂರು ಉಪಚುನಾವಣೆ| ಬಿಜೆಪಿ ಟೆಕೆಟ್‌ ಪಡೆದ ಬಂಗಾರು ಹನುಮಂತು ಯಾರು?

    ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಬಡವರಲ್ಲಿ ದೇವರನ್ನ ಕಾಣುವ ವ್ಯಕ್ತಿ ಶ್ರೀರಾಮುಲು. ಕಾಂಗ್ರೆಸ್ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಬಳಸಿ ಶ್ರೀರಾಮುಲು ಅವರನ್ನು ಸೋಲಿಸಿದೆ. ಬಡ ಜನರ ಅಭಿವೃದ್ಧಿ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಭ್ರಷ್ಟ ಕಾಂಗ್ರೆಸ್‌ಗೆ ವೋಟ್ ಹಾಕಬೇಡಿ ಎಂದು ಮನವಿ ಮಾಡಿದರು.

     

  • ‘ಸರಿಗಮಪ’ ಹನುಮಂತುಗೆ ಪ್ರಪೋಸ್ ಮಾಡಿದ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು

    ‘ಸರಿಗಮಪ’ ಹನುಮಂತುಗೆ ಪ್ರಪೋಸ್ ಮಾಡಿದ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು

    ರಿಗಮಪ (Sarigamapa) ಖ್ಯಾತಿಯ ಹನುಮಂತುಗೆ (Hanumantu) ಮದುವೆ ಯಾವಾಗ ಎನ್ನುವ ಪ್ರಶ್ನೆ ಅನೇಕ ಸಲ ಕೇಳಿ ಬಂದಿದೆ. ಹಲವು ಬಾರಿ ಗಾಸಿಪ್ ಮೂಲಕ ಈ ದೇಸಿ ಗಾಯಕನ ಮದುವೆಯನ್ನು ಕೂಡ ಮಾಡಿದ್ದಾರೆ. ಇಂಥದ್ದೊಂದು ಸುದ್ದಿ ಆದಾಗ ನಾಚೂತ್ತಲೇ ಹನುಮಂತು ನಿರಾಕರಿಸಿದ್ದಾರೆ. ಈ ಹುಡುಗನ ಮದುವೆ ಆಗುವ ಹುಡುಗಿ ಹೇಗಿರಬಹುದು? ಯಾರೆಲ್ಲ ಪ್ರಪೋಸ್ ಮಾಡಬಹುದು ಎನ್ನುವ ಕುತೂಹಲವಂತೂ ಇದ್ದೇ ಇದೆ. ಜೀ ಕನ್ನಡದ ವೇದಿಕೆಯ ಮೇಲೆ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು ಪ್ರಪೋಸ್ ಮಾಡಿದ್ದಾರೆ.

    ರಿಯಾಲಿಟಿ ಶೋ ನಲ್ಲಿ ನಿಶ್ವಿಕಾ ನಾಯ್ಡು (Nishvika Naidu) ಅತಿಥಿಯಾಗಿ ಬಂದಿದ್ದರು. ಅದೇ ವೇದಿಕೆಯಲ್ಲಿ ಹನುಮಂತು ಕೂಡ ರಾಕಿಭಾಯ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆಯಲ್ಲಿ ನಿರೂಪಕಿ ಶ್ವೇತಾ ಚಂಗಪ್ಪ ಗೆಸ್ಟ್ ಚೇರ್ ಮೇಲೆ ಕೂತಿದ್ದ ನಿಶ್ವಿಕಾನ ತೋರಿಸುತ್ತಾ, ಇಂತಹ ಸುಂದರ  ಹುಡುಗಿ ಕಂಡರೆ ಏನನಿಸುತ್ತದೆ ಎಂದು ಕೇಳಿದರು. ಆಗ ನಿಶ್ವಿಕಾ ಹಾರ್ಟ್ ಸಿಂಬಲ್ ತೋರಿಸುತ್ತಾ, ಪ್ರಪೋಸ್ (Propose) ಮಾಡಿದರು. ಅಲ್ಲದೇ, ನನಗಾಗಿ ಒಂದು ರೋಮ್ಯಾಂಟಿಕ್ ಸಾಂಗ್ ಹಾಡು ಎಂದು ನಿವೇದನೆ ಮಾಡಿದರು. ಅದಕ್ಕೆ ಹನುಮಂತು ನಾಚುತ್ತಲೇ ರಿಯ್ಯಾಕ್ಟ್ ಮಾಡಿದರು.

    ನಿಶ್ವಿಕಾ ನಾಯ್ಡು ರೋಮ್ಯಾಂಟಿಕ್ ಗೀತೆ (Singer) ಹೇಳಲು ಹೇಳಿದರೆ, ಭಜನಿ ಪದ ಹಾಡುತ್ತೇನೆ ಎಂದು ಉತ್ತರಿಸಿದರು ಹನುಮಂತು. ರೋಮ್ಯಾಂಟಿಕ್ ಆಗಿ ಮಾತನಾಡುವುದು ಹೇಗೆ ಗೊತ್ತಾ? ಎಂದು ನಿಶ್ವಿಕಾ ನಾಯ್ಡು ಕೇಳಿದರು. ಹನುಮಂತು ಇಲ್ಲವೆಂದರು. ಹಾಗಾದರೆ, ನಾನು ಹೇಳಿ ಕೊಡಲಾ? ಎಂದು ಮತ್ತೆ ಪ್ರಶ್ನೆ ಮಾಡಿದರು ನಿಶ್ವಿಕಾ. ಹೇಳಿಕೊಡು ‘ಅಕ್ಕಾ’ ಎನ್ನುತ್ತಾ ನಿಶ್ವಿಕಾ ಅವರ ರೋಮ್ಯಾಂಟಿಕ್ ಮೂಡ್ ಅನ್ನೇ ಹಾಳು ಮಾಡಿದರು.

    ಆದರೂ, ನಿಶ್ವಿಕಾಗಾಗಿ ಹನುಮಂತು ಹಾಡುತ್ತಾ, ‘ಸಂಸಾರ’ ಅಷ್ಟೊಂದು ಸಲೀಸಲ್ಲ. ಕೇಳು ಅಕ್ಕ ಎನ್ನುವ ಅರ್ಥದಲ್ಲಿ ಭಜನೆ ಪದವೊಂದನ್ನು ಹೇಳಿದರು. ಈ ಹಾಡು ಕೇಳುತ್ತಲೇ ಕೂತಲ್ಲಿಯೇ ನಿದ್ದೆಗೆ ಜಾರಿದರು ನಿಶ್ವಿಕಾ. ಇದೊಂದು ರೀತಿಯಲ್ಲಿ ಫನ್ನಿ ಫನ್ನಿಯಾಗಿಯೇ ವೇದಿಕೆಯ ಮೇಲೆ ನಡೆಯಿತು. ಆದರೆ, ಅದೇ ಮುಗ್ಧತೆಯಲ್ಲೇ ಹನುಮಂತು ವೇದಿಕೆಯ ಮೇಲಿದ್ದರು.

    Live Tv
    [brid partner=56869869 player=32851 video=960834 autoplay=true]

  • ಹನುಮಂತು ಕುಟುಂಬಕ್ಕೆ ಪಬ್ಲಿಕ್ ಟಿವಿಯಿಂದ 14.25 ಲಕ್ಷ ರೂ. ಪರಿಹಾರ

    ಹನುಮಂತು ಕುಟುಂಬಕ್ಕೆ ಪಬ್ಲಿಕ್ ಟಿವಿಯಿಂದ 14.25 ಲಕ್ಷ ರೂ. ಪರಿಹಾರ

    ರಾಮನಗರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ನಮ್ಮ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಕುಟುಂಬಕ್ಕೆ ಪಬ್ಲಿಕ್ ಟಿವಿ ವತಿಯಿಂದ ಪರಿಹಾರ ಚೆಕ್ ನೀಡಲಾಯ್ತು. 14 ಲಕ್ಷದ 25 ಸಾವಿರ ರೂಪಾಯಿಯ ಪರಿಹಾರ ಚೆಕ್ ಹನುಮಂತು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

    ಪಬ್ಲಿಕ್ ಟಿವಿ ಆಡಳಿತ ಮಂಡಳಿಯು ಈ ಹಿಂದೆ ಘೋಷಿಸಿದಂತೆ 10 ಲಕ್ಷ ರೂಪಾಯಿ ಹಾಗೂ ಪಬ್ಲಿಕ್ ಟಿವಿ ಸಿಬ್ಬಂದಿಯ ಒಂದು ದಿನದ ಸಂಬಳ ರೂಪದಲ್ಲಿ ಸಂಗ್ರಹವಾಗಿದ್ದ 4 ಲಕ್ಷದ 25 ಸಾವಿರ ರೂಪಾಯಿ ಸೇರಿ ಒಟ್ಟು 14 ಲಕ್ಷದ 25 ಸಾವಿರ ರೂಪಾಯಿ ಆಗಿತ್ತು.

    ಹನುಮಂತು ಅವರ ಪತ್ನಿಗೆ 11 ಲಕ್ಷದ 25 ಸಾವಿರ ರೂಪಾಯಿ ಚೆಕ್ ಹಾಗೂ ಹನುಮಂತು ಅವರ ತಾಯಿಗೆ 3 ಲಕ್ಷ ರೂಪಾಯಿ ಮೌಲ್ಯದ ಚೆಕ್ ಹಸ್ತಾಂತರಿಸಲಾಯ್ತು. ಪಬ್ಲಿಕ್ ಟಿವಿ ಸಿಇಓ ಅರುಣ್ ಕುಮಾರ್, ಸಿಒಒ ಹರೀಶ್, ಕಾರ್ಯಕಾರಿ ಸಂಪಾದಕ ದಿವಾಕರ್ ಹಾಗೂ ಹೆಚ್.ಆರ್. ವಿಭಾಗದ ಮುಖ್ಯಸ್ಥರಾದ ಶಂಕರ್ ಈ ಸಂದರ್ಭದಲ್ಲಿ ಹಾಜರಿದ್ದರು.

    ಏಪ್ರಿಲ್ 21 ರಂದು ರಾಮನಗರ ಜಿಲ್ಲಾ ಕಾರಾಗೃಹದ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಹನುಮಂತು ವಿಧಿವಶರಾಗಿದ್ದರು.

  • ಹನುಮಂತು ಕುಟುಂಬಕ್ಕೆ ಪಬ್ಲಿಕ್ ಟಿವಿಯಿಂದ 10 ಲಕ್ಷ ರೂ. ನೆರವು

    ಹನುಮಂತು ಕುಟುಂಬಕ್ಕೆ ಪಬ್ಲಿಕ್ ಟಿವಿಯಿಂದ 10 ಲಕ್ಷ ರೂ. ನೆರವು

    ಬೆಂಗಳೂರು: ರಾಮನಗರದ ವರದಿಗಾರ ಹನುಮಂತು ಅವರ ನಿಧನಕ್ಕೆ ಪಬ್ಲಿಕ್ ಟಿವಿಯಲ್ಲಿ ಇಂದು ಸಂತಾಪ ಸೂಚಕ ಸಭೆ ನಡೆಯಿತು.

    ಯಶವಂತಪುರದಲ್ಲಿರುವ ಕಚೇರಿಯಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಕಚೇರಿಯಲ್ಲಿ ದೀರ್ಘಕಾಲ ಒಡನಾಟ ಹೊಂದಿದ್ದ ವ್ಯಕ್ತಿ ಹನುಮಂತು ಕೆಲಸದಲ್ಲಿ ಶ್ರದ್ಧೆಯನ್ನು ಇಟ್ಟುಕೊಂಡಿದ್ದರು. ಕುಟುಂಬ ಹನುಮಂತು ಅವರನ್ನೇ ನೆಚ್ಚಿಕೊಂಡಿದೆ. ಕಚೇರಿಯಿಂದ ಅವರ ಕುಟುಂಬಕ್ಕೆ 10 ಲಕ್ಷ ರೂ. ಹಣವನ್ನು ನೀಡಲಾಗುವುದು ಎಂದು ತಿಳಿಸಿದರು. ಇದರ ಜೊತೆಗೆ ಪಬ್ಲಿಕ್ ಟಿವಿ ಸಿಬ್ಬಂದಿಯ ಒಂದು ದಿನದ ವೇತನವನ್ನು ಹನುಮಂತು ಕುಟುಂಬಕ್ಕೆ ನೀಡಲು ನಿರ್ಧರಿಸಲಾಗಿದೆ.

    ಈ ವೇಳೆ ಹನುಮಂತು ಅವರ ಕರ್ತವ್ಯವನ್ನು ಸಿಒಒ ಹರೀಶ್ ಕುಮಾರ್, ಸಂಪಾದಕ ದಿವಾಕರ್, ಔಟ್ ಪುಟ್ ಮುಖ್ಯಸ್ಥ ಆನಂದ್, ಜಿಲ್ಲಾ ವಿಭಾಗದ ಮುಖ್ಯಸ್ಥ ಮನೋಹರ್ ನೆನೆದರು. ಸಂತಾಪ ಸೂಚಕ ಸಭೆಯಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿ ಹನುಮಂತು ಅವರಿಗೆ ಗೌರವ ಸಲ್ಲಿಸಲಾಯಿತು.

    ರಸ್ತೆ ಅಪಘಾತದಲ್ಲಿ ಮಂಗಳವಾರ ಸಾವನ್ನಪ್ಪಿದ ರಾಮನಗರ ಜಿಲ್ಲೆ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಮನೆಗೆ ಭೇಟಿ ನೀಡಿ ಎಚ್‍ಡಿ ಕುಮಾರಸ್ವಾಮಿ ಸಾಂತ್ವನ ತಿಳಿಸಿದ್ದಾರೆ. ಮೃತ ಪತ್ರಕರ್ತ ಹನುಮಂತು ಅವರ ಪತ್ನಿ ಶಶಿಕಲಾ ಅವರಿಗೆ ಐದು ಲಕ್ಷ ರೂಪಾಯಿಗಳ ಚೆಕ್ ನೀಡಿ ಅವರ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿರುವುದಾಗಿ ಎಚ್‍ಡಿಕೆ ಹೇಳಿದ್ದಾರೆ.

    ಹನುಮಂತು ಆತ್ಮಕ್ಕೆ ಶಾಂತಿ ಕೋರಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಕರ್ತರು, ಛಾಯಾಗ್ರಾಹಕರು ಭಾಗಿಯಾಗಿ ಒಂದು ನಿಮಿಷ ಮೌನಾಚರಣೆ ಮಾಡಿ ಅಗಲಿದ ವರದಿಗಾರನಿಗೆ ಸಂತಾಪ ಸೂಚಿಸಿದರು. ಹನುಮಂತು ಕುಟುಂಬಕ್ಕೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ 10 ಸಾವಿರ ರೂ. ಧನ ಸಹಾಯ ನೀಡುವುದಾಗಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

  • ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನಕ್ಕೆ ಸಿಎಂ ಸಂತಾಪ

    ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನಕ್ಕೆ ಸಿಎಂ ಸಂತಾಪ

    – ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಡಿಕೆಶಿ, ಅಶ್ವತ್ಥನಾರಾಯಣ, ಎಚ್‌ಡಿಕೆ

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಇಂದು ಮೃತಪಟ್ಟ ಪಬ್ಲಿಕ್ ಟಿವಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

    ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ ಅವರು, ಭಗವಂತನು ಹನುಮಂತು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಕಾಲಿಕ ನಿಧನದ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಸಂಸದ ಡಿ.ಕೆ.ಸುರೇಶ್ ಟ್ವೀಟ್ ಮಾಡಿ, ಪಬ್ಲಿಕ್ ಟಿವಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಅವರ ನಿಧನಕ್ಕೆ ಎಲ್ಲೆಡೆಯಿಂದ ತೀವ್ರ ಸಂತಾಪ ವ್ಯಕ್ತವಾಗಿದೆ. ಅದರಂತೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಹನುಮಂತು ಅವರ ನಿಧನಕ್ಕೆ ಸಂತಾಪ ಸೂಚಿಸಿ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.

    ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಟ್ವೀಟ್ ಮಾಡಿ, ಹನುಮಂತು ಅವರ ಅಕಾಲಿಕ ಮರಣ ದುಃಖ ತಂದಿದೆ. ಸದಾ ಕ್ರಿಯಾಶೀಲ, ಉತ್ಸಾಹಿ, ದಿಟ್ಟ ಪತ್ರಕರ್ತರಾಗಿದ್ದ ಅವರು ಪ್ರಾಮಾಣಿತೆಯನ್ನು ನಂಬಿದ್ದರು. ಅಗಲಿಕೆಯ ದುಃಖ ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ. ಕುಟುಂಬಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುತ್ತೇನೆ ಎಂದು ತಿಳಿಸಿದ್ದಾರೆ.

    ತಮ್ಮ ಪ್ರಾಮಾಣಿಕತೆಯಿಂದಲೇ ಗುರುತಿಸಿಕೊಂಡಿದ್ದ ಹನುಮಂತು, ರಾಮನಗರದಲ್ಲಿ ಚಿರಪರಿಚಿತರು. ತಮ್ಮ ವರದಿಗಳಿಂದಲೇ ಮಾಧ್ಯಮ ಲೋಕದಲ್ಲಿ ಹನುಮಂತು ಗುರುತಿಸಿಕೊಂಡಿದ್ದರು. ಹನುಮಂತು ಕಳೆದುಕೊಂಡು ಪಬ್ಲಿಕ್ ಟಿವಿ ಕುಟುಂಬ ಬಡವಾಗಿದೆ. ಇನ್ನು ಹನುಮಂತು ನಿಧನಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಹ ಸಂತಾಪ ಸೂಚಿಸಿ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.