Tag: ಹನುಮಂತನಗರ

  • ಕೊರೊನಾ ಭಯದಿಂದ ಬೀದಿನಾಯಿಗಳಿಗೆ ಹೊಡೆದ ಟೆಕ್ಕಿ

    ಕೊರೊನಾ ಭಯದಿಂದ ಬೀದಿನಾಯಿಗಳಿಗೆ ಹೊಡೆದ ಟೆಕ್ಕಿ

    ಬೆಂಗಳೂರು: ಕೊರೊನಾ ಭಯದಿಂದ ಬೀದಿ ನಾಯಿಗಳಿಗೆ ಯುವ ಟೆಕ್ಕಿಯೊಬ್ಬ ಹಿಗ್ಗಾಮುಗ್ಗ ಥಳಿಸಿದ ಪ್ರಸಂಗವೊಂದು ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದೆ.

    ಸೀಲ್‍ಡೌನ್ ಪೊಲೀಸ್ ಸ್ಟೇಷನ್ ಮುಂದೆ ಓಡಾಡಿದ ನಾಯಿ ಏರಿಯಾಗೆ ಬಂತು ಅಂತ ಟೆಕ್ಕಿ ಹಿಗ್ಗಾಮುಗ್ಗ ಹೊಡೆದಿದ್ದಾನೆ. ಕಂಟೈನ್ಮೆಂಟ್ ಝೋನ್ ಗೆಲ್ಲ ಓಡಾಡಿ ನಮ್ ರೋಡ್ ಗೆ ಬರುತ್ತೆ ಅಂತ ತಡರಾತ್ರಿ ಮೂರು ಬೀದಿನಾಯಿಗಳಿಗೆ ದೊಣ್ಣೆಯಲ್ಲಿ ಥಳಿಸಿದ್ದಾನೆ.

    ಹನುಮಂತ ನಗರ ಸ್ಟೇಷನ್ ರೋಡ್ ಸೀಲ್ ಡೌನ್ ಆಗಿದೆ. ಹೀಗಾಗಿ ಅಲ್ಲೆಲ್ಲ ಓಡಾಡಿ ನಾಯಿ ನಮ್ ಏರಿಯಾಗೆ ಬರುತ್ತೆ ಅಂತ ಅಕ್ಕ-ಪಕ್ಕದ ಮನೆಯವರಿಗೆ ಹೇಳಿ ನಾಯಿಗೆ ಚೆನ್ನಾಗಿ ಬಾರಿಸಿದ್ದಾನೆ. ನಾಯಿಗಳು ಕೊರೊನಾ ಕ್ಯಾರಿ ಮಾಡಲ್ಲ ಅಂತ ಗೊತ್ತಿದ್ದರೂ ನಾಯಿಗೆ ಹೊಡೆದಿರುವುದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.

    ಯುವಕನ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ- ಹೂಕೋಸು ರಸ್ತೆ ಪಾಲು

    ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ- ಹೂಕೋಸು ರಸ್ತೆ ಪಾಲು

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿ ಬಿದ್ದಿರುವ ಘಟನೆ ನಗರದ ಹನುಮಂತನಗರದ ಜಿಂಕೆ ಪಾರ್ಕ ಬಳಿ ನಡೆದಿದೆ.

    ಭಾನುವಾರ ರಾತ್ರಿ 12ಗಂಟೆ ಸುಮಾರಿಗೆ ಹೂಕೋಸು ತುಂಬಿದ ಲಾರಿಯೊಂದು ಹನುಮಂತನಗರದಿಂದ ಕೆಆರ್ ಮಾರ್ಕೆಟ್ ಕಡೆ ಸಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿ ಲಾರಿ ಪಲ್ಟಿ ಹೊಡೆದಿದೆ.

    ಲಾರಿ ಬಿದ್ದ ಪರಿಣಾಮ ಲೋಡ್ ಆಗಿದ್ದ ಹೂ ಕೋಸು ರಸ್ತೆಯಲ್ಲಿ ಬಿದ್ದಿದೆ. ಹೀಗಾಗಿ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಈ ಕುರಿತು ಬಸವನಗುಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ‘ನಮ್ಮ ಅಪ್ಪಾಜಿ ಕ್ಯಾಂಟೀನ್’ಗಿಂದು ದೇವೇಗೌಡ್ರಿಂದ ಚಾಲನೆ- 5 ರೂ.ಗೆ ತಟ್ಟೆ ಇಡ್ಲಿ-ವಡೆ, 10 ರೂ.ಗೆ ಮುದ್ದೆ-ಬಸ್ಸಾರು

    ‘ನಮ್ಮ ಅಪ್ಪಾಜಿ ಕ್ಯಾಂಟೀನ್’ಗಿಂದು ದೇವೇಗೌಡ್ರಿಂದ ಚಾಲನೆ- 5 ರೂ.ಗೆ ತಟ್ಟೆ ಇಡ್ಲಿ-ವಡೆ, 10 ರೂ.ಗೆ ಮುದ್ದೆ-ಬಸ್ಸಾರು

    ಬೆಂಗಳೂರು: ರಿಯಾಯಿತಿ ದರದಲ್ಲಿ ಸಿಲಿಕಾನ್ ಸಿಟಿ ಜನರ ಹಸಿವು ನೀಗಿಸಲು ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ತೆರೆಯಲು ಮುಂದಾಗಿದ್ರೆ, ಇತ್ತ ಜೆಡಿಎಸ್ ಎಂಎಲ್‍ಸಿ ಶರವಣ ನೇತೃತ್ವದಲ್ಲಿ ‘ನಮ್ಮ ಅಪ್ಪಾಜಿ ಕ್ಯಾಂಟೀನ್’ ತೆರೆಯುತ್ತಿದೆ.

    ಇಂದಿರಾ ಕ್ಯಾಂಟೀನ್‍ಗೂ ಮುನ್ನವೇ ಅಪ್ಪಾಜಿ ಕ್ಯಾಂಟೀನ್ ಸಿದ್ಧಗೊಂಡಿದ್ದು, ಇಂದಿನಿಂದ ಜನರಿಗೆ ರುಚಿಯಾದ ತಿಂಡಿ-ಊಟ ನೀಡಲು ಮುಂದಾಗಿದೆ. ಶ್ರೀಸಾಯಿ ಸಮರ್ಪಣ ಚಾರಿಟೆಬಲ್ ವತಿಯಿಂದ ನಮ್ಮ ಅಪ್ಪಾಜಿ ಕ್ಯಾಂಟೀನ್ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಪ್ರಾರಂಭದಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತನಗರದಲ್ಲಿ ಕ್ಯಾಂಟೀನ್ ಆರಂಭವಾಗುತ್ತಿದ್ದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಇಂದು ಬೆಳಗ್ಗೆ 11 ಗಂಟೆಗೆ ಕ್ಯಾಂಟೀನ್‍ಗೆ ಚಾಲನೆ ನೀಡುತ್ತಿದ್ದಾರೆ.

    5 ರೂ.ಗೆ ತಟ್ಟೆ ಇಡ್ಲಿ-ವಡೆ, ಖಾರಾಬಾತ್, ಕೇಸರಿಬಾತ್ ಹಾಗೆ 10 ರೂ.ಗೆ ಪೊಂಗಲ್, ಮುದ್ದೆ-ಬಸ್ಸಾರು, ಅನ್ನ ಸಾಂಬಾರ್, ರೈಸ್ ಬಾತ್. 3 ರೂಪಾಯಿಗೆ ಬಿಸಿಬಿಸಿ ಕಾಫಿ-ಟೀ ಈ ಕ್ಯಾಂಟೀನ್‍ನಲ್ಲಿ ಸಿಗಲಿದೆ. ಬೆಳಗ್ಗೆ 7.30 ರಿಂದ ಮಧ್ಯಾಹ್ನ 2.30ರ ತನಕ ಕ್ಯಾಂಟೀನ್ ಓಪನ್ ಇರುತ್ತದೆ. ನಮ್ಮ ಅಪ್ಪಾಜಿ ಕ್ಯಾಂಟೀನ್‍ನಲ್ಲಿಯೇ ಅಡುಗೆ ತಯಾರಿ ಮಾಡಲಾಗುತ್ತದೆ. 10 ಲಕ್ಷ ರೂ. ವೆಚ್ಚದಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ನಿರ್ಮಾಣಗೊಂಡಿದೆ. ಆರಂಭದಲ್ಲಿ ಸಾವಿರ ಮಂದಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

    ಉದ್ಘಾಟನಾ ಕಾರ್ಯಕ್ರಮದಲ್ಲಿ ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಚೆನ್ನಮ್ಮ ದೇವೇಗೌಡರು ಉಪಸ್ಥಿತರಿರಲಿದ್ದಾರೆ. ಒಂದು ವೇಳೆ ಈ ಕ್ಯಾಂಟೀನ್ ಯಶಸ್ವಿಯಾದ್ರೆ ನಗರದ 27 ವಿಧಾನಸಭಾ ಕ್ಷೇತ್ರದಲ್ಲೂ ವಿಸ್ತರಿಸಲು ಟಿ.ಎ.ಶರವಣ ನಿರ್ಧರಿಸಿದ್ದಾರೆ.