Tag: ಹನಿ ಟ್ರ್ಯಾಪ್

  • ಸಚಿವರ ಮೇಲೆ 2 ಸಲ ಹನಿಟ್ರ್ಯಾಪ್ ಯತ್ನ – ಸತೀಶ್ ಜಾರಕಿಹೊಳಿ ಬಾಂಬ್

    ಸಚಿವರ ಮೇಲೆ 2 ಸಲ ಹನಿಟ್ರ್ಯಾಪ್ ಯತ್ನ – ಸತೀಶ್ ಜಾರಕಿಹೊಳಿ ಬಾಂಬ್

    ಬೆಂಗಳೂರು: ಪ್ರಭಾವಿ ಸಚಿವರ ಹನಿಟ್ರ್ಯಾಪ್‌ಗೆ ಯತ್ನ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಬಾಂಬ್ ಹಾಕಿದ್ದಾರೆ.

    ಹನಿಟ್ರ್ಯಾಪ್ (Honeytrap) ಪ್ರಯತ್ನದ ಬಗ್ಗೆ ಖಚಿತಪಡಿಸಿದ ಸತೀಶ್ ಜಾರಕಿಹೊಳಿ, ಸಚಿವರ ಮೇಲೆ ಎರಡು ಸಲ ಹನಿ ಟ್ರ್ಯಾಪ್ ಆಗಿದೆ. ಅದನ್ನ ಕೆಲವರು ಬಂಡವಾಳ ‌ಮಾಡಿಕೊಂಡಿದ್ದಾರೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪಬ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೂ ಅವಕಾಶ? – ಡಿಕೆಶಿ ಸುಳಿವು

    ಸಂಬಂಧಪಟ್ಟ ಸಚಿವರಿಗೆ ದೂರು ಕೊಡಲು ಹೇಳಿದ್ದೀನಿ. ಇದಕ್ಕೆ ‌ಕಡಿವಾಣ ಹಾಕಬೇಕು. ಇದರಲ್ಲಿ ‌ನಮ್ಮವರು ಅಷ್ಟೇ ಅಲ್ಲ, ಬೇರೆ ಪಕ್ಷದ ನಾಯಕರು ಹನಿ ಟ್ರ್ಯಾಪ್ ನಲ್ಲಿ ಸಿಲುಕಿದ್ದಾರೆ. ಇದು ಇಲ್ಲಿಗೆ ನಿಲ್ಲಬೇಕು, ಈ ವಿಚಾರವಾಗಿ ಸಿಎಂ ಮತ್ತು ಗೃಹ ಸಚಿವರ ಜೊತೆ ಮಾತನಾಡಿದ್ದೇನೆ ಅಂತೇಳಿದ್ರು. ಇದನ್ನೂ ಓದಿ: ಮಾರ್ಚ್ 22ರ ಕರ್ನಾಟಕ ಬಂದ್‌ಗೆ ಸರ್ಕಾರದ ಬೆಂಬಲ ಇಲ್ಲ: ಡಿಕೆಶಿ

    ಸಚಿವ ರಾಜಣ್ಣ ಬಾಂಬ್‌:
    ರಾಜ್ಯದ 48 ರಾಜಕೀಯ ಮುಖಂಡರ ಸಿ.ಡಿ, ಪೆನ್‌ಡ್ರೈವ್‌ ತಯಾರಾಗಿದೆ. ನನ್ನ ಮೇಲೂ ಹನಿಟ್ರ್ಯಾಪ್‌ (Honeytrap) ಯತ್ನ ನಡೆದಿದೆ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ (KN Rajanna) ಸ್ಫೋಟಕ ಮಾಹಿತಿ ನೀಡಿದರು. ಇದನ್ನೂ ಓದಿ: ನನ್ನ ಮೇಲೆ ಹನಿಟ್ರ್ಯಾಪ್‌ಗೆ ಯತ್ನ ಆಗಿದೆ – ಸದನದಲ್ಲೇ ಸಚಿವ ಕೆ.ಎನ್‌ ರಾಜಣ್ಣ ಬಾಂಬ್‌

    ವಿಧಾನಸಭೆಯಲ್ಲಿ (Vidhan Sabha) ಗುರುವಾರ ಮಾತನಾಡಿದ ಅವರು, ಇದರ ಬಗ್ಗೆ ದೂರು ಕೊಡುತ್ತೇನೆ. ಗೃಹ ಸಚಿವರು ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು. ಬಜೆಟ್ ಭಾಷಣದ (Budget Speech) ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಯತ್ನಾಳ್, ರಾಜ್ಯದಲ್ಲಿ ಸಹಕಾರಿ ಸಚಿವರ ಮೇಲೆ ಹನಿಟ್ರ್ಯಾಪ್ ಮಾಡುವ ಪ್ರಯತ್ನ ಮಾಡಲಾಗಿದೆ. ಇದೊಂದು ಕೆಟ್ಟ ಸಂಸ್ಕೃತಿ. ಜನ ಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪ್ರಸ್ತಾಪಿಸಿದರು. ಈ ಬೆನ್ನಲ್ಲೇ ಸತಿಶ್‌ ಜಾರಕಿಹೊಳಿ ಸಹ ಶಾಕಿಂಗ್‌ ಹೇಳಿಕೆ ನೀದರು.

  • ಖಾಸಗಿ ವೀಡಿಯೋ ಮಾಡಿ ಲಕ್ಷಾಂತರ ಹಣ ಪೀಕಿದ ಗ್ಯಾಂಗ್ ಅಂದರ್

    ಖಾಸಗಿ ವೀಡಿಯೋ ಮಾಡಿ ಲಕ್ಷಾಂತರ ಹಣ ಪೀಕಿದ ಗ್ಯಾಂಗ್ ಅಂದರ್

    ದಾವಣಗೆರೆ: ಮಹಿಳೆಯೊಂದಿಗೆ ಅಶ್ಲೀಲವಾಗಿ ವೀಡಿಯೋ ಮಾಡಿ ಬೆದರಿಸಿ (Honey trap) 1,50,000 ರೂ. ದೋಚಿದ್ದ ಆರೋಪಿಗಳನ್ನು ವಿದ್ಯಾನಗರ (Vidyanagar) ಪೊಲೀಸರು ಬಂಧಿಸಿದ್ದಾರೆ.

    ದಾವಣಗೆರೆ (Davanagere) ವಾಸಿಗಳಾದ ಹರೀಶ, ಚಂದ್ರು, ಗಂಗಾ ಹಾಗೂ ಗಿಡ್ಡ ಗಂಗಮ್ಮಳನ್ನು ಬಂಧಿಸಿ ಆರೋಪಿಗಳಿಂದ ಒಟ್ಟು 1,30,000 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಶಾಸಕ ಪ್ರೀಥಮ್ ಗೌಡರಿಂದ 100 ಕೋಟಿ ಗುಳುಂ- ಹೆಚ್.ಕೆ.ಮಹೇಶ್ ಆರೋಪ

    ಆರೋಪಿ ಗಂಗಾ ದೂರುದಾರನಿಗೆ ಕರೆ ಮಾಡಿ ಮಿಸ್ ಕಾಲ್ (Miss Call) ಆಗಿದೆ ಎಂದು ಪರಿಚಯಿಸಿಕೊಂಡಿದ್ದಳು. ನಂತರ ಪ್ರತಿನಿತ್ಯ ಫೋನ್‌ನಲ್ಲಿ ಮಾತನಾಡಿ ಹಣ ಪಡೆದಿದ್ದಾಳೆ. ಬಳಿಕ ಗಂಗಾ, ಹರೀಶ, ಚಂದ್ರು, ಗಿಡ್ಡ ಗಂಗಮ್ಮ ಹಾಗೂ ಇನ್ನೊಬ್ಬ ಮಹಿಳೆ ಮತ್ತು ವ್ಯಕ್ತಿಯೋರ್ವನ ಜೊತೆ ಸೇರಿ ಒಳಸಂಚು ಮಾಡಿ ಮಾ.26 ರಂದು ದಾವಣಗೆರೆಗೆ ಬಂದಿದ್ದ ದೂರುದಾರನ್ನು ಊಟಕ್ಕೆ ಬರಬೇಕೆಂದು ಒತ್ತಾಯ ಮಾಡಿ ಸಿದ್ದವೀರಪ್ಪ ಬಡಾವಣೆಯ ಗಂಗಮ್ಮನ ಮನೆಗೆ ಕರೆಯಿಸಿಕೊಂಡಿದ್ದಾಳೆ. ಊಟ ಮುಗಿಸಿ ರೂಮ್‍ಗೆ ಕರೆದೊಯ್ದಿದ್ದಾಳೆ. ನಂತರ ಬೇರೆ ಅಡಗಿದ್ದ ಗ್ಯಾಂಗ್‍ನ ಸದಸ್ಯರು ಅವರಿದ್ದ ರೂಮ್‍ಗೆ ಹೋಗಿ ವೀಡಿಯೋ ಮಾಡಿ ಹೆದರಿಸಿದ್ದಾರೆ.

    ಬಳಿಕ ಆರೋಪಿಗಳೆಲ್ಲ ಸೇರಿಕೊಂಡು ಹೆದರಿಸಿ 30 ಲಕ್ಷ ರೂ.ಗೆ ಬೇಡಿಕೆ ಇಟ್ಟು 1,50,000 ರೂ. ವಸೂಲಿ ಮಾಡಿದ್ದಾರೆ. ಅಲ್ಲದೆ ಗಂಗಮ್ಮ ಕೂಡ ಹೆದರಿಕೊಂಡಂತೆ ನಾಟಕವಾಡಿ ಹಣ ಕೊಟ್ಟುಬಿಡಿ ಎಂದು ಹೇಳಿದ್ದಾಳೆ. ಅಲ್ಲದೆ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ವಿದ್ಯಾನಗರ ಪೊಲೀಸರು ಪ್ರಕರಣದ ಬೆನ್ನು ಹತ್ತಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: 8 ಕ್ವಿಂಟಾಲ್ ಗೋಮಾಂಸವಿದ್ದ ಮೀನಿನ ವಾಹನ ಪಲ್ಟಿ

  • ಸೋದರನ ಕೊಲೆಯ ಸೇಡು – ಯುವತಿಯ ಸಂಚು ಯಾವ ಸಿನ್ಮಾಗೂ ಕಡಿಮೆ ಇಲ್ಲ

    ಸೋದರನ ಕೊಲೆಯ ಸೇಡು – ಯುವತಿಯ ಸಂಚು ಯಾವ ಸಿನ್ಮಾಗೂ ಕಡಿಮೆ ಇಲ್ಲ

    – ಎಲ್ಲ ಪ್ಲಾನ್ ಮಾಡಿದ್ರೂ ಜೈಲು ಸೇರಿದ್ದೇಗೆ ಲೇಡಿ ಆ್ಯಂಡ್ ಟೀಂ?
    – ಕೊಲೆಗೆ ಕೊಲೆ ಅಂತ ಹಠ ಹಿಡಿದಿದ್ದ ಲೇಡಿ

    ಮುಂಬೈ: ಸೋದರನನ್ನ ಕೊಂದಿದ್ದ ಹಂತಕನನ್ನ ಕೊಲೆ ಮಾಡಲು ಪಣ ತೊಟ್ಟಿದ್ದ ಯುವತಿ ಮತ್ತು ಆಕೆಯ ಗ್ಯಾಂಗ್ ಜೈಲು ಸೇರಿದೆ. ಸತತ ಒಂದು ವರ್ಷದಿಂದ ಕೊಲೆಗೆ ಯುವತಿಪ್ಲಾನ್ ಮಾಡಿಕೊಂಡಿದ್ದರೂ, ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ ಆರೋಪಿ ಪ್ರಾಣಾಪಾಯದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಸೇರಿದಂತೆ ಆರು ಜನರನ್ನ ಬಂಧಿಸಿದ್ದಾರೆ.

    ಕೊಲೆ ಪ್ರತೀಕಾರಕ್ಕೆ ತಂಗಿಯ ಶಪಥ: ಜೂನ್ 2020ರಲ್ಲಿ ಮುಂಬೈನ ಮಲಾಡ್ ನಲ್ಲಿ ಪಾರ್ಕಿಂಗ್ ವಿಚಾರವಾಗಿ ಮೊಹ್ಮದ್ ಸಾದಿಕ್ ಮತ್ತು ಅಲ್ತಾಫ್ ಶೇಖ್ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಅಲ್ತಾಫ್ ಶೇಖ್ ನನ್ನು ಕೊಲೆಗೈದ ಸಿದ್ದಿಕಿ ಪರಾರಿಯಾಗಿ ದೆಹಲಿ ಸೇರಿಕೊಂಡಿದ್ದನು. ಸೋದರನ ಕೊಲೆಗೆ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ ಅಲ್ತಾಫ್ ಸೋದರಿ ಯಾಸ್ಮಿನ್ ಶೇಖ್ ಸಂಚು ರೂಪಿಸಿದ್ದಳು.

    ಸಿದ್ದಿಕಿಯ ಕೊಲೆಗಾಗಿ ಸೋದರನ ಗೆಳೆಯರಾದ ಫಾರೂಖ್ ಶೇಖ್ (20), ಓವೈಸ್ ಶೇಖ್ (18), ಮನೀಸ್ ಸೈಯದ್ (20), ಜಾಕೀರ್ ಖಾನ್ (32) ಮತ್ತು ಸತ್ಯಂ ಪಾಂಡೆ (23) ಎಲ್ಲರನ್ನ ಭೇಟಿಯಾಗಿ ಸೇಡು ತೀರಿಸಿಕೊಳ್ಳಲು ಸಹಾಯ ಕೇಳಿದ್ದಾಳೆ. ಎಲ್ಲರೂ ಸಹ ಯಾಸ್ಮೀನ್ ಪ್ಲಾನ್‍ಗೆ ಕೈ ಜೋಡಿಸಿದ್ದಾರೆ.

    ದೆಹಲಿಯಿಂದ ಬರುವಂತೆ ಮಾಡಿದ್ಳು: ಯೆಸ್, ಕೊಲೆಯ ಬಳಿಕ ದೆಹಲಿ ಸೇರಿಕೊಂಡಿದ್ದ ಸಿದ್ದಿಕಿಯನ್ನ ಮುಂಬೈಗೆ ಬರುವಂತೆ ಮಾಡಲು ನಕಲಿ ಇನ್‍ಸ್ಟಾಗ್ರಾಂ ಖಾತೆಯನ್ನ ಯಾಸ್ಮಿನ್ ತೆರೆದಿದ್ದಳು. ಇನ್‍ಸ್ಟಾಗ್ರಾಂ ಮೂಲಕ ಸಿದ್ದಿಕಿ ಜೊತೆ ಸ್ನೇಹ ಬೆಳೆಸಿದ ಯಾಸ್ಮಿನ್ ಪ್ರೀತಿಯ ನಾಟಕ ಆಡಿದ್ದಾಳೆ. ತನ್ನನ್ನು ಭೇಟಿಯಾಗಲು ಮುಂಬೈಗೆ ಬರುವಂತೆ ಸಿದ್ದಿಕಿಯನ್ನ ಆಹ್ವಾನಿಸಿದ್ದಾಳೆ. ಯಾಸ್ಮಿನ್ ಸೌಂದರ್ಯಕ್ಕೆ ಮಾರು ಹೋಗಿದ್ದ ಸಿದ್ದಿಕಿ ದೆಹಲಿಯಿಂದ ಮುಂಬೈಗೆ ಓಡೋಡಿ ಬಂದಿದ್ದನು. ಶನಿವಾರ ಸಿದ್ದಿಕಿ ಮುಂಬೈಗೆ ಬರೋದು ಖಚಿತವಾಗ್ತಿದ್ದಂತೆ ಮತ್ತೆ ತನ್ನ ಟೀಂ ಜೊತೆ ಯಾಸ್ಮಿನ್ ಕೊಲೆಯ ಪ್ಲಾನ್ ಮಾಡಿದ್ದಳು.

    ಬಾ ಅಂದವ್ಳು ಬರಲೇ ಇಲ್ಲ: ಸಿದ್ದಿಕಿಗೆ ಮುಂಬೈನಲ್ಲಿರುವ ಚೋಟಾ ಕಾಶ್ಮೀರದಲ್ಲಿ ಭೇಟಿಯಾಗೋದಾಗಿ ಯಾಸ್ಮಿನ್ ಹೇಳಿದ್ದಳು. ಆದ್ರೆ ಸಿದ್ದಿಕಿ ಬಂದಾಗ ಯಾಸ್ಮಿನ್ ಬದಲಾಗಿ ಆಕೆ ತಂಡದ ಐವರು ಅಂಬುಲೆನ್ಸ್ ಜೊತೆ ಬಂದಿದ್ದರು. ಸಿದ್ದಿಕಿಯನ್ನ ನೋಡಿದ ಐವರು ಆತನನ್ನ ಬಲವಂತವಾಗಿ ಅಂಬುಲೆನ್ಸ್ ಹತ್ತಿಸಿಕೊಂಡಿದ್ದಾರೆ. ಸಿದ್ದಿಕಿಯನ್ನ ವಸಾಯಿ ನಯಾಗಾಂವ್ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡುವ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದರು.

    ತಗ್ಲಾಕೊಂಡಿದ್ದು ಎಲ್ಲಿ?: ಜನನಿಬಿಡ ಪ್ರದೇಶದಲ್ಲಿಯೇ ಐವರು ಸಿದ್ದಿಕಿಯನ್ ಎತ್ತಾಕೊಂಡು ಹೋಗುವುದನ್ನ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿ ಅನುಮಾನಾಸ್ಪದವಾಗಿ ಸಂಚರಿಸುತ್ತಿರುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.

    ಸಿದ್ದಿಕಿಯನ್ನ ಕರೆದೊಯ್ಯುವ ಮಾರ್ಗ ಮಧ್ಯೆಯೇ ಅಂಬುಲೆನ್ಸ್ ಇಂಧನ ಖಾಲಿಯಾಗಿ ನಿಂತಿದೆ. ಹಾಗಾಗಿ ಅಲ್ಲಿಯೇ ಇನ್ನೋವಾ ಕಾರ್ ಪಡೆದುಕೊಂಡಿದ್ದರು. ಅಲರ್ಟ್ ಆಗಿದ್ದ ಪೊಲೀಸರು ಪಶ್ಚಿಮ ಎಕ್ಸಪ್ರೆಸ್ ಹೆದ್ದಾರಿಯಲ್ಲಿ ವಾಹನ ಪರಿಶೀಲನೆ ನಡೆಸುವಾಗ ಎಲ್ಲರನ್ನ ಬಂಧಿಸಿದ್ದಾರೆ. ಐವರ ಬಂಧನದ ಬಳಿಕ ಪ್ರಕರಣದ ಮೂಲ ಸೂತ್ರಧಾರಿ ಯಾಸ್ಮಿಳನ್ನ ಸಹ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

  • ಯುವತಿ ಜೊತೆ ಅಶ್ಲೀಲ ಭಂಗಿಯಲ್ಲಿ ನಿಲ್ಲಿಸಿ ಯುವಕನ ಫೋಟೋ

    ಯುವತಿ ಜೊತೆ ಅಶ್ಲೀಲ ಭಂಗಿಯಲ್ಲಿ ನಿಲ್ಲಿಸಿ ಯುವಕನ ಫೋಟೋ

    – ಬ್ಲಾಕ್‍ಮೇಲ್ ಮಾಡಿ ಹಣ ದೋಚಿದ್ರು

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೆ ಹನಿಟ್ರ್ಯಾಪ್ ಸದ್ದು ಕೇಳಿ ಬಂದಿದೆ. ಬಲವಂತವಾಗಿ ಯವತಿ ಜೊತೆ ಫೋಟೋ ಕ್ಲಿಕ್ಕಿಸಿ ಹುಡುಗರನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಇದೇ ರೀತಿ ಸುಂದರವಾದ ಹುಡುಗಿಯರ ಆಸೆ ತೋರಿಸಿ ಖೆಡ್ಡಾಗೆ ಬೀಳಿಸಿರುವ ಘಟನೆ ಬೆಂಗಳೂರಿನ ಕಾಡುಗೊಂಡನಹಳ್ಳಿಯಲ್ಲಿ ನಡೆದಿದೆ.

    27 ವರ್ಷದ ಅಡುಗೆ ಕೆಲಸ ಮಾಡುತ್ತಿದ್ದವ ಹನಿಟ್ರಾಪ್ ಬಲೆಗೆ ಬಿದ್ದಿದ್ದಾನೆ. ಹನಿಟ್ರಾಪ್ ರೂವಾರಿ ಅಮ್ರಿನ್, ಪರಿಚಯಸ್ಥನಾಗಿದ್ದ ಸಂತ್ರಸ್ತ ಯುವಕನ ಜೊತೆ ಜ.22 ರಂದು ಮೂರ್ನಾಲ್ಕು ಸುಂದರ ಯುವತಿಯರ ಬಗ್ಗೆ ಮಾಹಿತಿಯನ್ನು ಕೇಳಿದ್ದಳಂತೆ. ಅಲ್ಲದೆ ಸುಂದರ ಯುವತಿಯರನ್ನು ಕಳುಹಿಸಿಕೊಡುತ್ತೇನೆಂದು ಕೂಡ ಹೇಳಿದ್ದಳು.

    ಸ್ವಲ್ಪ ಹೊತ್ತಲ್ಲೆ ಅದೇ ಮನೆಗೆ ಅಮ್ರಿನ್ ಸಹಚರರಾದ ಬೆಂಡ್ ಜಾವೇದ್, ಶಾಹಿದ್ ಹಾಗೂ ಸಮೀರ್ ಎಂಟ್ರಿ ಕೊಟ್ಟಿದ್ದಾರೆ. ಏಕಾಏಕಿ ಸಂತ್ರಸ್ತ ಯುವಕನ ತರಾಟೆಗೆ ತೆಗೆದುಕೊಂಡ ಅಮ್ರಿನ್ ಸಹಚರರು, ನೀನು ಅಮ್ರಿನ್ ಜೊತೆ ಸಂಬಂಧ ಇಟ್ಟುಕೊಂಡಿದ್ದಿಯಾ. ನೀನು ಅಮ್ರಿನ್ ಜೊತೆ ಮಾತನಾಡಿರುವ ಆಡಿಯೋ ರೆಕಾರ್ಡಿಂಗ್ ಇದೆ ಎಂದು ಸಂತ್ರಸ್ತ ಯವಕನಿಗೆ ಬೆದರಿಸಿದ್ದಾರೆ.

    ಅಮ್ರಿನ್ ಸಹಚರರು ಅಮ್ರಿನ್ ಜೊತೆ ಸಂತ್ರಸ್ತ ಯುವಕನನ್ನು ಅಶ್ಲೀಲ ಭಂಗಿಯಲ್ಲಿ ನಿಲ್ಲಿಸಿ ಫೊಟೋ ಕ್ಲಿಕ್ಕಿಸಿಕೊಂಡ ಆರೋಪಿಗಳು ಬಲವಂತವಾಗಿ ಫೋಟೋ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ. ಹಣ ಕೊಡದೇ ಇದ್ದರೆ ಅಮ್ರಿನ್ ಜೊತೆಗಿನ ಫೋಟೊಗಳು ವೈರಲ್ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ. ಕೊನೆಗೆ ಮನೆಯಲ್ಲಿದ್ದ 2.25 ಲಕ್ಷ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.

    ಪ್ರಕರಣ ಸಂಬಂಧ ಆರೋಪಿಗಳನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

  • ಮದ್ವೆಯಾಗದ್ದರಿಂದ ಆರ್‌ಎಸ್‌ಎಸ್ ನಾಯಕರೇ ಹನಿ ಟ್ರ್ಯಾಪ್‍ಗೆ ಹೆಚ್ಚು ಬಲಿಯಾಗಿದ್ದಾರೆ – ಕಾಂಗ್ರೆಸ್ ನಾಯಕ

    ಮದ್ವೆಯಾಗದ್ದರಿಂದ ಆರ್‌ಎಸ್‌ಎಸ್ ನಾಯಕರೇ ಹನಿ ಟ್ರ್ಯಾಪ್‍ಗೆ ಹೆಚ್ಚು ಬಲಿಯಾಗಿದ್ದಾರೆ – ಕಾಂಗ್ರೆಸ್ ನಾಯಕ

    ಭೋಪಾಲ್: ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸುತ್ತಿರುವ ಮಧ್ಯಪ್ರದೇಶದ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಹನಿ ಟ್ರ್ಯಾಪ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದೆ.

    ಕಾಂಗ್ರೆಸ್ ನಾಯಕ ಮನಕ್ ಅಗರ್‍ವಾಲ್ ಅವರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಇದರಲ್ಲಿ ಹೆಚ್ಚು ಆರ್‌ಎಸ್‌ಎಸ್ ನಾಯಕರೇ ತೊಡಗಿದ್ದಾರೆ. ಏಕೆಂದರೆ ಅವರಿಗೆ ಮದುವೆಯಾಗಿರುವುದಿಲ್ಲ. ಹೀಗಾಗಿ ಇಂತಹ ಕಾರ್ಯಕ್ಕೆ ಇಳಿಯುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಎಂಪಿ ಹನಿ ಟ್ರ್ಯಾಪ್ – ರಾಜಕಾರಣಿಗಳು, ಅಧಿಕಾರಿಗಳ ಸಾವಿರಕ್ಕೂ ಅಧಿಕ ವಿಡಿಯೋಗಳು ಪತ್ತೆ

    ಆರ್‌ಎಸ್‌ಎಸ್ ನಾಯಕರೇ ಈ ರೀತಿ ಮಾಡುತ್ತಾರೆ ಎನ್ನವುದಕ್ಕೆ ಪ್ರಮುಖ ಕಾರಣ ಅವರು ಮದುವೆಯಾಗಿರುವುದಿಲ್ಲ ಎನ್ನುವುದು. ಆರ್‌ಎಸ್‌ಎಸ್ ಮುಖಂಡರು ಮದುವೆಯಾಗಬೇಕು, ಮೋಹನ್ ಭಾಗವತ್ ಸಹ ಮದುವೆಯಾಗಬೇಕು ಎಂದು ಅಗರ್‍ವಾಲ್ ಹೇಳಿದ್ದಾರೆ ಎಂಬುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಈ ಕುರಿತು ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಕಾಲದಿಂದಲೂ ಇದು ಪ್ರಾರಂಭವಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ. ಇದೀಗ ಈ ಗ್ಯಾಂಗ್ 5 ರಿಂದ 6 ರಾಜ್ಯಗಳಲ್ಲಿ ಹರಡಿದೆ ಎಂದು ಅಗರ್‍ವಾಲ್ ಆರೋಪಿಸಿದರು. ಇದನ್ನೂ ಓದಿ: ಬಾಲಿವುಡ್ ನಟಿಯರು ಬೇಡ, ಕಾಲೇಜ್‍ ಹುಡುಗಿಯರು ಬೇಕು – ಬಯಲಾಯ್ತು ರಾಜಕಾರಣಿಗಳ ಮುಖ 

    ಹನಿಟ್ರ್ಯಾಪ್ ಪ್ರಕರಣದಲ್ಲಿ ಎಸ್‍ಐಟಿ ಪೊಲೀಸರು ಹಲವು ಮಂದಿಯನ್ನು ಬಂದಿಸಿದ್ದಾರೆ. ಬಂಧನಕ್ಕೆ ಒಳಗಾದವರ ಪೈಕಿ ಕಾಂಗ್ರೆಸ್ ಐಟಿ ಸೆಲ್ ಮಾಜಿ ಮುಖ್ಯಸ್ಥ ಅಮಿತ್ ಸೋನಿ ಅವರ ಪತ್ನಿ ಬರ್ಕಾ ಸೋನಿ ಸಹ ಇರುವುದು ವಿಶೇಷ.

    ದಿನ ದಿನಕ್ಕೂ ಪ್ರಕರಣ ಭಾರೀ ತಿರುವು ಪಡೆದುಕೊಳ್ಳುತ್ತಿದ್ದು, ಅಚ್ಚರಿಯ ಮಾಹಿತಿ ಬಹಿರಂಗವಾಗುತ್ತಿದೆ. ಇನ್ನೂ ಭಯಾನಕ ವಿಷಯವೆಂದರೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಒಟ್ಟು 1,000 ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

    ಒಟ್ಟು ಮೂರು ರಾಜ್ಯಗಳಲ್ಲಿರುವ ಈ ಗ್ಯಾಂಗ್‍ನ ಸದಸ್ಯರ ಬಳಿ ಈ ಒಂದು ಸಾವಿರಕ್ಕೂ ಅಧಿಕ ವಿಡಿಯೋಗಳಿದ್ದು, ಮಧ್ಯಪ್ರದೇಶ, ಛತ್ತಿಸ್‍ಗಡ ಹಾಗೂ ಮಹಾರಾಷ್ಟ್ರಗಳಲ್ಲಿನ ಸದಸ್ಯರ ಬಳಿ ಇವೆ ಎಂದು ಎಸ್‍ಐಟಿ ತನಿಖೆ ವೇಳೆ ಬಹಿರಂಗವಾಗಿದೆ. ಈ ಹನಿ ಟ್ರ್ಯಾಪ್ ಗ್ಯಾಂಗ್ ಸುಲಿಗೆ ಮಾಡಿದ್ದಲ್ಲದೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಹಾಯದಿಂದ ಸರ್ಕಾರದ ಪ್ರಮುಖ ಗುತ್ತಿಗೆಗಳನ್ನು ಪಡೆದುಕೊಂಡಿದೆ ಎಂದು ಪೊಲೀಸರು ಮಾಹಿತಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಮಾಜಿ ರಾಜ್ಯಪಾಲರು, ಮಾಜಿ ಸಿಎಂ, ಅಧಿಕಾರಿಗಳ ಸ್ಕ್ಯಾಂಡಲ್ – 40 ಕಾಲ್ ಗರ್ಲ್ಸ್‌ಗಳಿಂದ ಹನಿಟ್ರ್ಯಾಪ್

    ಮಾಜಿ ಮುಖ್ಯಮಂತ್ರಿ, ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಜನ ಹನಿ ಟ್ರ್ಯಾಪ್‍ಗೆ ಬಲಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ 6 ಜನರನ್ನು ಎಸ್‍ಐಟಿ ಬಂಧಿಸಿದೆ.

    ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳೊಂದಿಗೆ ಸೇರಿ ಹಲವಾರು ಭೋಪಾಲ್ ಮೂಲದ ಪತ್ರಕರ್ತರು ಸಹ ಭಾಗಿಯಾಗಿದ್ದಾರೆ ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಹಿಂದಿ ಪತ್ರಿಕೆಯೊಂದರ ಸ್ಥಾನಿಕ ಸಂಪಾದಕ, ಸುದ್ದಿ ವಾಹಿನಿಯ ಕ್ಯಾಮೆರಾಮೆನ್ ಹಾಗೂ ಸ್ಥಳೀಯ ವಾಹಿನಿಯ ಮಾಲೀಕ ಸಹ ಭಾಗಿಯಾಗಿದ್ದಾರೆ ಎಂದು ಎಸ್‍ಐಟಿ ಪತ್ತೆ ಹಚ್ಚಿದೆ. ಪತ್ರಕರ್ತರು ಹನಿ ಟ್ರ್ಯಾಪ್‍ನ ಕಿಂಗ್ ಪಿನ್ ಶ್ವೇತಾ ಜೈನ್, ರಾಜಕಾರಣಿಗಳು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

  • ಎಂಪಿ ಹನಿ ಟ್ರ್ಯಾಪ್ – ರಾಜಕಾರಣಿಗಳು, ಅಧಿಕಾರಿಗಳ ಸಾವಿರಕ್ಕೂ ಅಧಿಕ ವಿಡಿಯೋಗಳು ಪತ್ತೆ

    ಎಂಪಿ ಹನಿ ಟ್ರ್ಯಾಪ್ – ರಾಜಕಾರಣಿಗಳು, ಅಧಿಕಾರಿಗಳ ಸಾವಿರಕ್ಕೂ ಅಧಿಕ ವಿಡಿಯೋಗಳು ಪತ್ತೆ

    ಭೋಪಾಲ್: ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸುತ್ತಿರುವ ಮಧ್ಯಪ್ರದೇಶದ ಹನಿ ಟ್ರ್ಯಾಪ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಅಚ್ಚರಿಯ ಮಾಹಿತಿ ಬಹಿರಂಗವಾಗುತ್ತಿದೆ. ಇನ್ನೂ ಭಯಾನಕ ವಿಷಯವೆಂದರೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಒಟ್ಟು 1,000 ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

    ಒಟ್ಟು ಮೂರು ರಾಜ್ಯಗಳಲ್ಲಿರುವ ಈ ಗ್ಯಾಂಗ್‍ನ ಸದಸ್ಯರ ಬಳಿ ಈ ಒಂದು ಸಾವಿರಕ್ಕೂ ಅಧಿಕ ವಿಡಿಯೋಗಳಿದ್ದು, ಮಧ್ಯಪ್ರದೇಶ, ಛತ್ತಿಸ್‍ಗಡ ಹಾಗೂ ಮಹಾರಾಷ್ಟ್ರಗಳಲ್ಲಿನ ಸದಸ್ಯರ ಬಳಿ ಇವೆ ಎಂದು ಎಸ್‍ಐಟಿ ತನಿಖೆ ವೇಳೆ ಬಹಿರಂಗವಾಗಿದೆ. ಈ ಹನಿ ಟ್ರ್ಯಾಪ್ ಗ್ಯಾಂಗ್ ಸುಲಿಗೆ ಮಾಡಿದ್ದಲ್ಲದೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಹಾಯದಿಂದ ಸರ್ಕಾರದ ಪ್ರಮುಖ ಗುತ್ತಿಗೆಗಳನ್ನು ಪಡೆದುಕೊಂಡಿದೆ ಎಂದು ಪೊಲೀಸರು ಮಾಹಿತಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟಿಯರು ಬೇಡ, ಕಾಲೇಜ್‍ ಹುಡುಗಿಯರು ಬೇಕು – ಬಯಲಾಯ್ತು ರಾಜಕಾರಣಿಗಳ ಮುಖ 

    ಮಾಜಿ ಮುಖ್ಯಮಂತ್ರಿ, ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಜನ ಹನಿ ಟ್ರ್ಯಾಪ್‍ಗೆ ಬಲಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ 6 ಜನರನ್ನು ಎಸ್‍ಐಟಿ ಬಂಧಿಸಿದೆ.

    ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳೊಂದಿಗೆ ಸೇರಿ ಹಲವಾರು ಭೋಪಾಲ್ ಮೂಲದ ಪತ್ರಕರ್ತರು ಸಹ ಭಾಗಿಯಾಗಿದ್ದಾರೆ ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಹಿಂದಿ ಪತ್ರಿಕೆಯೊಂದರ ಸ್ಥಾನಿಕ ಸಂಪಾದಕ, ಸುದ್ದಿ ವಾಹಿನಿಯ ಕ್ಯಾಮೆರಾಮೆನ್ ಹಾಗೂ ಸ್ಥಳೀಯ ವಾಹಿನಿಯ ಮಾಲೀಕ ಸಹ ಭಾಗಿಯಾಗಿದ್ದಾರೆ ಎಂದು ಎಸ್‍ಐಟಿ ಪತ್ತೆ ಹಚ್ಚಿದೆ. ಪತ್ರಕರ್ತರು ಹನಿ ಟ್ರ್ಯಾಪ್‍ನ ಕಿಂಗ್ ಪಿನ್ ಶ್ವೇತಾ ಜೈನ್, ರಾಜಕಾರಣಿಗಳು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

    ಪ್ರಕರಣದಲ್ಲಿ ಪತ್ರಕರ್ತರೂ ಬಾಗಿಯಾಗಿರುವ ಕುರಿತು ಆಡಳಿತಾರೂಢ ಕಾಂಗ್ರೆಸ್‍ನ ವಕ್ತಾರ ಕೆ.ಕೆ.ಮಿಶ್ರಾ ಪ್ರತಿಕ್ರಿಯಿಸಿದ್ದು, ಎಸ್‍ಐಟಿ ಸಾಕ್ಷ್ಯಗಳನ್ನು ಸಂಗ್ರಹಿಸಿದ ಕೂಡಲೇ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಎಸ್‍ಐಟಿ ಇಲ್ಲಿಯವರೆಗೆ ಯಾವುದೇ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಪ್ರಕರಣದ ಕಿಂಗ್ ಪಿನ್‍ಗಳಾದ ಶ್ವೇತಾ ಜೈನ್ ಹಾಗೂ ಅವಳ ಸಹವರ್ತಿ ಆರತಿ ದಯಾಳ್ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಕೆಲವು ಪತ್ರಕರ್ತರನ್ನು ಬಳಸಿಕೊಂಡಿರುವ ಕುರಿತು ಎಸ್‍ಐಟಿ ಮಾಹಿತಿ ನೀಡಿದೆ ಎಂದು ಹೇಮಂತ್ ಶರ್ಮಾ ತಿಳಿಸಿದ್ದಾರೆ.

    ಎಸ್‍ಐಟಿ ಮೂಲಗಳು ಈ ಕುರಿತು ಮಾಹಿತಿ ನೀಡಿದ್ದು, ಪ್ರಸ್ತುತ ತನಿಖೆಯನ್ನು ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಪಾತ್ರ ಕಂಡುಹಿಡಿಯುವಲ್ಲಿ ಕೇಂದ್ರೀಕರಿಸಲಾಗಿದೆ. ಈಗಾಗಲೇ ದಂಧೆಯ ಮಾಸ್ಟರ್ ಮೈಂಡ್ ಶ್ವೇತಾ ಜೈನ್, ಅವಳ ಪತಿ ಸ್ವಪ್ನಿಲ್ ಜೈನ್ ಹಾಗೂ ಶ್ವೇತಾ ಸಹವರ್ತಿ ಆರತಿ ದಯಾಳ್ ಇವರನ್ನು ಬಂಧಿಸಲಾಗಿದೆ. ಇವರನ್ನು ವಿಚಾರಣೆ ನಡೆಸಿದಾಗ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳು ಹನಿ ಟ್ರ್ಯಾಪ್‍ಗೆ ಬಲಿಪಶು ಆಗಿದ್ದಾರೆ. ಅಲ್ಲದೆ, ಅವರ ಎನ್‍ಜಿಓ ಮೂಲಕ ಹಣ ಹಾಗೂ ಸರ್ಕಾರದ ಗುತ್ತಿಗೆ ಪಡೆದಿರುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

    ಈ ಕುರಿತು ಎಸ್‍ಐಟಿ ಮುಖ್ಯಸ್ಥ ಸಂಜೀವ್ ಶಮಿ ಮಾಹಿತಿ ನೀಡಿ, ಶ್ವೇತಾ ಜೈನ್ ಹನಿ ಟ್ರ್ಯಾಪ್‍ಗೆ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಪಲಿಪಶುಗಳನ್ನಾಗಿ ಮಾಡುವ ಮೂಲಕ ಕೋಟ್ಯಂತರ ರೂ. ಸರ್ಕಾರಿ ಗುತ್ತಿಗೆಗಳನ್ನು ತಮ್ಮ ಎನ್‍ಜಿಓ ಮೂಲಕ ಬೇರೆ ಕಂಪನಿಗಳಿಗೆ ಕೊಡಿಸಿದ್ದಾಳೆ ಎಂದು ತಿಳಿದುಬಂದಿದೆ. ಇಂತಹ ಒಪ್ಪಂದಗಳ ದಾಖಲೆ ದಾಖಲೆ ಪತ್ತೆಹಚ್ಚಿದಲ್ಲಿ ಖಂಡಿತವಾಗಿಯೂ ಅಂತಹ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ, ಭೋಪಾಲ್‍ನಲ್ಲಿ ಕಳೆದ 7-8 ವರ್ಷಗಳೂ ಹಿಂದಿನಿಂದಲೂ ಲೈಂಗಿಕ ಅಪರಾಧಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

    ನೂರಾರು ಕೋಟಿ ರೂ.ಗಳ ಸರ್ಕಾರಿ ಗುತ್ತಿಗೆಗಳನ್ನು ಪಡೆಯುವುದೇ ಈ ಗ್ಯಾಂಗ್‍ನ ಪ್ರಮುಖ ಉದ್ದೇಶವಾಗಿತ್ತು. ತಮ್ಮ ಎನ್‍ಜಿಓಗಳಿಂದ ಇದನ್ನು ನಿರ್ವಹಿಸುತ್ತಿದ್ದರು. ಇದಕ್ಕಾಗಿ ಪ್ರಮುಖ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ. ಈ ಕುರಿತು ಸಾಕ್ಷ್ಯಾಧಾರಗಳು ಸಿಕ್ಕಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

  • ಸುಂದರಿಯನ್ನು ಮುಂದೆ ಬಿಟ್ಟು ಹಣ ಕೇಳ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್

    ಸುಂದರಿಯನ್ನು ಮುಂದೆ ಬಿಟ್ಟು ಹಣ ಕೇಳ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್

    ಯಾದಗಿರಿ: ಹನಿ ಟ್ರ್ಯಾಪ್ ತಂಡವನ್ನು ಯಾದಗಿರಿ ಜಿಲ್ಲೆಯ ಶಹಾಪೂರ ಪೊಲೀಸರು ಬಂಧಿಸಿದ್ದಾರೆ. ಸುಂದರಿಯರನ್ನು ಮುಂದೆ ಬಿಟ್ಟು ಶ್ರೀಮಂತರನ್ನ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಶ್ರೀಮಂತ ವ್ಯಕ್ತಿ ಇವರ ಮೋಸದ ಬಲೆಗೆ ಬಿದ್ದ ಕೂಡಲೇ ಆತನಿಂದ ಹಣ ಪಡೆಯಲು ಈ ಖತರ್ನಾಕ್ ಗ್ಯಾಂಗ್ ಮುಂದಾಗುತ್ತಿತ್ತು.

    ಖಾಸಗಿ ಶಾಲೆಯ ಶಿಕ್ಷಕ ರಮೇಶ್ ರಾಠೋಡ, ಸಿದ್ದನಗೌಡ ಪಾಟೀಲ, ಮಂಜುಳಾ ರಾಠೋಡ ಮತ್ತು ಮೇಘಾ ಬಂಧಿತರು. ಕಳೆದ ಕೆಲ ದಿನಗಳ ಹಿಂದೆ ಶಹಾಪುರ ಮೂಲದ ವ್ಯಕ್ತಿಯೊಬ್ಬನಿಗೆ ಫೋನ್ ಮೂಲಕ ಪರಿಚಯವಾಗಿದ್ದ ಮಂಜುಳಾ, ಪ್ರೀತಿ ಪ್ರಣಯದ ಮಾತನಾಡಿ ಖೆಡ್ಡಾಗೆ ಹಾಕಿಕೊಂಡಿದ್ದಳು. ಒಮ್ಮೆ ನಗರದ ಹೊರವಲಯದದಲ್ಲಿ ಭೇಟಿಯಾಗೋದಾಗಿ ಹೇಳಿ ವ್ಯಕ್ತಿಯನ್ನು ಮಂಜುಳಾ ಕರೆಸಿಕೊಂಡಿದ್ದಾಳೆ.

    ಹುಡುಗಿ ಕರೆದಿದ್ದಕ್ಕೆ ಹೋಗಿದ್ದ ವ್ಯಕ್ತಿಯನ್ನು ಹಿಡಿದು ಸಿದ್ದನಗೌಡ ಮತ್ತು ಮೇಘಾ ಇಬ್ಬರು ವಿಡಿಯೋ ಮಾಡಿದ್ದಾರೆ. ನಂತರ ವಿಡಿಯೋವನ್ನು ತೋರಿಸಿ ಸಂತ್ರಸ್ತನಿಗೆ ಬೆದರಿಸಿ 8 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹೆದರಿದ ಸಂತ್ರಸ್ತ ಮೊದಲ ಕಂತಿನಲ್ಲಿ 1 ಲಕ್ಷ ರೂಪಾಯಿ ನೀಡಿದ್ದಾನೆ. ನಂತರ ವಿಷಯವನ್ನು ತನ್ನ ಪೊಲೀಸ್ ಸ್ನೇಹಿತನೊಬ್ಬನ ಜೊತೆ ಹೇಳಿಕೊಂಡಿದ್ದಾನೆ.

    ಈ ವಿಚಾರವು ಶಹಾಪುರ ಡಿವೈಎಸ್‍ಪಿ ಶಿವನಗೌಡ ಪಾಟೀಲ ಕಿವಿಗೆ ಬಿದ್ದಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರ ತಂಡ ನಾಲ್ವರನ್ನು ಬಂಧಿಸಿದೆ. ಇನ್ನೂ ಈ ಕಿಲಾಡಿ ಹನಿ ಟ್ರ್ಯಾಪ್ ಗ್ಯಾಂಗ್ ನಗರದ ಅನೇಕರಿಂದ ಹಣ ವಸೂಲಿ ಮಾಡಿರುವ ಬಗ್ಗೆ ಸಂಶಯವಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.