Tag: ಹನಿ ಚಿಲ್ಲಿ ಎಗ್

  • ಸಿಹಿ, ಖಾರ ಮಿಶ್ರಿತ ಹನಿ ಚಿಲ್ಲಿ ಎಗ್ ಮಾಡಿ ಬಾಯಿ ಚಪ್ಪರಿಸಿ

    ಸಿಹಿ, ಖಾರ ಮಿಶ್ರಿತ ಹನಿ ಚಿಲ್ಲಿ ಎಗ್ ಮಾಡಿ ಬಾಯಿ ಚಪ್ಪರಿಸಿ

    ಕ್ಕಳು ಯಾವಾಗಲೂ ಚೈನೀಸ್ ಅಡುಗೆಗಳಿಗಾಗಿಯೇ ಹಟ ಹಿಡಿಯುತ್ತಾರೆ. ಸಿಹಿ, ಖಾರ ಮಿಶ್ರಿತ ಸ್ಟ್ರೀಟ್ ಫುಡ್ ಬೇಕು ಎಂದಾಗ ನೀವು ಮನೆಯಲ್ಲೇ ಅಂತಹ ಅಡುಗೆಗಳನ್ನು ಮಾಡಲು ಟ್ರೈ ಮಾಡಿ. ನಾವಿಂದು ಇದೇ ರೀತಿಯ ಸಿಹಿ ಹಾಗೂ ಖಾರ ಮಿಶ್ರಿತ ಹನಿ ಚಿಲ್ಲಿ ಎಗ್ (Honey Chilli Egg) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಮಕ್ಕಳಿಗೆ ಹೊರಗಿನ ತಿಂಡಿಗಳನ್ನು ಕೊಡಿಸುವುದಕ್ಕಿಂತಲೂ ನೀವಿದನ್ನು ಮನೆಯಲ್ಲಿ ಮಾಡಿ ಸವಿಯಲು ನೀಡಿ.

    ಬೇಕಾಗುವ ಪದಾರ್ಥಗಳು:
    ಬೇಯಿಸಿದ ಮೊಟ್ಟೆ – 4
    ಕಾರ್ನ್‌ಫ್ಲೋರ್ – 2 ಟೀಸ್ಪೂನ್
    ಒಣಗಿದ ಕೆಂಪು ಮೆಣಸು – 2
    ಹಚ್ಚಿದ ಶುಂಠಿ – 1 ಇಂಚು
    ಹೆಚ್ಚಿದ ಬೆಳ್ಳುಳ್ಳಿ – 5
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಕಾಲು ಕಪ್
    ರೆಡ್ ಚಿಲ್ಲಿ ಸಾಸ್ – 2 ಟೀಸ್ಪೂನ್
    ಸೋಯಾ ಸಾಸ್ – ಅರ್ಧ ಟೀಸ್ಪೂನ್
    ನಿಂಬೆ ರಸ – 1 ಟೀಸ್ಪೂನ್
    ಜೇನು ತುಪ್ಪ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ಚಿಕನ್‌ನಂತೆಯೇ ರುಚಿ – ಸೋಯಾಬೀನ್ ನಗ್ಗೆಟ್ಸ್ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಸಣ್ಣ ಬೌಲ್‌ನಲ್ಲಿ ಕಾರ್ನ್ ಫ್ಲೋರ್ ಹಾಕಿ, ಅದಕ್ಕೆ 3 ಟೀಸ್ಪೂನ್ ನೀರು ಸೇರಿಸಿ, ಬಜ್ಜಿ ಹಿಟ್ಟಿನ ರೀತಿ ಮಿಶ್ರಣ ಮಾಡಿ.
    * ಈಗ ಬೇಯಿಸಿದ ಮೊಟ್ಟೆಗಳನ್ನು 4 ಭಾಗಗಳನ್ನಾಗಿ ಮಾಡಿ, ಕಾರ್ನ್ ಫ್ಲೋರ್ ಹಿಟ್ಟಿನಲ್ಲಿ ಅದ್ದಿ.
    * ಪ್ಯಾನ್‌ನಲ್ಲಿ ಹುರಿಯಲು ಬೇಕಾಗುವಷ್ಟು ಎಣ್ಣೆ ಹಾಕಿ, ಬಿಸಿಯಾದ ಬಳಿಕ ಮೊಟ್ಟೆಗಳನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
    * ಮೊಟ್ಟೆಗಳು ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅವುಗಳನ್ನು ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ಈಗ ಬಾಣಲೆಗೆ 2 ಟೀಸ್ಪೂನ್ ಎಣ್ಣೆ ಹಾಕಿ, ಕೆಂಪು ಮೆಣಸಿನಕಾಯಿ ಹಾಕಿ 1 ನಿಮಿಷ ಹುರಿಯಿರಿ.
    * ಬಳಿಕ ಬೆಳ್ಳುಳ್ಳಿ ಹಾಗೂ ಶುಂಠಿ ಸೇರಿಸಿ 1 ನಿಮಿಷ ಹುರಿಯಿರಿ.
    * ಈಗ ಸ್ಪ್ರಿಂಗ್ ಆನಿಯನ್, ರೆಡ್ ಚಿಲ್ಲಿ ಸಾಸ್, ಸೋಯಾ ಸಾಸ್, ಉಪ್ಪು, ಜೇನು ತುಪ್ಪ ಹಾಗೂ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ.
    * 3-4 ನಿಮಿಷ ಮಧ್ಯಮ ಉರಿಯಲ್ಲಿ ಫ್ರೈ ಮಾಡಿದ ಬಳಿಕ ಹುರಿದಿಟ್ಟಿದ್ದ ಮೊಟ್ಟೆಗಳನ್ನು ಹಾಕಿ ನಿಧಾನಕ್ಕೆ ಮಿಶ್ರಣ ಮಾಡಿ.
    * 2-3 ನಿಮಿಷ ಬೇಯಿಸಿ, ಉರಿಯನ್ನು ಆಫ್ ಮಾಡಿ.
    * ಇದೀಗ ರುಚಿಕರವಾದ ಹನಿ ಚಿಲ್ಲಿ ಎಗ್ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಉಳಿದ ಬ್ರೆಡ್‌ನಿಂದ ಫಟಾಫಟ್ ಅಂತ ಮಾಡಿ ಉಪ್ಪಿಟ್ಟು

    Live Tv
    [brid partner=56869869 player=32851 video=960834 autoplay=true]