Tag: ಹದ್ದು

  • ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ- ಡಿಕೆ ಶಿವಕುಮಾರ್‌ ಗ್ರೇಟ್‌ ಎಸ್ಕೇಪ್‌

    ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ- ಡಿಕೆ ಶಿವಕುಮಾರ್‌ ಗ್ರೇಟ್‌ ಎಸ್ಕೇಪ್‌

    ಬೆಂಗಳೂರು: ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಅವರು ಪ್ರಾಣಾಪಾಯದಿಂದ ಗ್ರೇಟ್‌ ಎಸ್ಕೇಪ್‌ ಆಗಿದ್ದಾರೆ.

    ಇಂದು ಬೆಳಗ್ಗೆ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಡಿಕೆ ಶಿವಕುಮಾರ್‌ ಮುಳಬಾಗಿಲಿಗೆ ತೆರಳಲು ಹೆಲಿಕಾಪ್ಟರ್‌ (Helicopter) ಏರಿದ್ದರು. ಜಕ್ಕೂರಿನಿಂದ ಹೆಲಿಕಾಪ್ಟರ್‌ ಟೇಕಾಫ್‌ ಆಗಿ ಹೊಸಕೋಟೆ ಬಳಿ ಹೋಗುತ್ತಿದ್ದಾಗ ಹದ್ದೊಂದು (Egale) ಡಿಕ್ಕಿ ಹೊಡೆದಿದೆ.

     

    ಹದ್ದು ಡಿಕ್ಕಿ ಹೊಡೆದ ರಭಸಕ್ಕೆ ಹೆಲಿಕಾಪ್ಟರ್‌ ಮುಂದಿನ ಗಾಜು ಪುಡಿ ಪುಡಿಯಾಗಿದೆ. ಕೂಡಲೇ ಎಚ್ಚೆತ್ತ ಪೈಲಟ್‌ ಎಚ್‌ಎಎಲ್‌ನಲ್ಲಿ ಹೆಲಿಕಾಪ್ಟರ್‌ ಅನ್ನು ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
    ಇದನ್ನೂ ಓದಿ: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ

    ಹೆಲಿಕಾಪ್ಟರ್‌ನಲ್ಲಿ 4 ಮಂದಿ ಪ್ರಯಣಿಸುತ್ತಿದ್ದರು. ಹೆಲಿಕಾಪ್ಟರ್‌ನಿಂದ ಇಳಿದ ಡಿಕೆ ಶಿವಕುಮಾರ್‌ ಕಾರು ಮೂಲಕ ಮುಳಬಾಗಿಲು ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ.

  • ಸಾವಿನ ದವಡೆಯಿಂದ ಹದ್ದುವನ್ನು ಕಾಪಾಡಿದ ಮೀನುಗಾರ

    ಸಾವಿನ ದವಡೆಯಿಂದ ಹದ್ದುವನ್ನು ಕಾಪಾಡಿದ ಮೀನುಗಾರ

    ಒಟ್ಟಾವಾ: ಯಾರಿಗಾದರೂ ಸಹಾಯ ಮಾಡಬೇಕು ಎಂದು ಅನಿಸಿದ್ರೆ ಮನುಷ್ಯ ನಾನಾ ರೀತಿಯ ಉಪಾಯಗಳನ್ನು ಮಾಡುತ್ತಾನೆ. ಅದಕ್ಕೆ ಸಾಮಾನ್ಯವಾಗಿ ನಾವು ಯಾರಾದರೂ ತುಂಬಾ ಅವಶ್ಯಕತೆ ಇದ್ದಾಗ ಸಹಾಯ ಮಾಡಿಲ್ಲವೆಂದರೆ ಆತನಿಗೆ ಮಾನವೀಯತೆಯಿಲ್ಲ ಎಂದು ಕರೆಯುತ್ತೇವೆ. ಅದೇ ರೀತಿ ಇಲ್ಲೊಬ್ಬ ಮೀನುಗಾರ ಆಕ್ಟೋಪಸ್‍ನ ಹಿಡಿತದಲ್ಲಿದ್ದ ಹದ್ದುವನ್ನು ಹೇಗೆ ಕಾಪಾಡುತ್ತಾನೆ ಎಂಬ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

    ಕೆನಡಾದ ವ್ಯಾಂಕೋವರ್‌ನಲ್ಲಿ ಮೀನುಗಾರರ ಗುಂಪು ವೀಡಿಯೋವನ್ನು ಸೆರೆಹಿಡಿದಿದೆ. ಹದ್ದುವನ್ನು ಆಕ್ಟೋಪಸ್ ಪೂರ್ತಿಯಾಗಿ ಆಕ್ರಮಿಸಿಕೊಂಡಿದ್ದು, ತನ್ನನ್ನು ಬಿಡಿಸಿಕೊಳ್ಳಲು ಹದ್ದು ಹೆಣಗಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಮೀನುಗಾರರು ಮನೆಗೆ ಹೋಗುತ್ತಿದ್ದಾಗ ಹದ್ದಿನ ಕೂಗು ಕೇಳಿಸಿಕೊಂಡಿದ್ದು, ಸಹಾಯಕ್ಕೆ ಮುಂದಾಗಿದ್ದಾರೆ. ಈ ವೇಳೆ ತಮ್ಮ ಬಳಿ ಇದ್ದ ಕುಕ್ಕೆಯ ಸಹಾಯದಿಂದ ಮೀನುಗಾರರು ಹದ್ದುವನ್ನು ಬಚಾವ್ ಮಾಡಿದ್ದಾರೆ. ಇದನ್ನೂ ಓದಿ:  ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದ ಉಲ್ಲಂಘಿಸಿದೆ: ಆಂಟನಿ ಬ್ಲಿಂಕೆನ್

    ವೀಡಿಯೋ ಮುಗಿಯುತ್ತಿದ್ದಂತೆ, ಹದ್ದು ಮರದ ಬುಡದಲ್ಲಿ ಕುಳಿತಿರುವುದು ಕಂಡುಬರುತ್ತದೆ. ನಂತರ ಆಕ್ಟೋಪಸ್ ನೀರಿಗೆ ಬಿಡಲಾಗುತ್ತೆ. ವೀಡಿಯೋ ನೋಡಿದ ನೆಟ್ಟಿಗರು ಖುಷ್ ಆಗಿ ‘ಒಳ್ಳೆಯ ಕೆಲಸ’ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಇದೇ ರೀತಿ ಮುಂದುವರೆಯಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಹಲವು ವರ್ಷಗಳ ಹಿಂದೆ ಸೆರೆಯಿಡಿದಿದ್ದು, ಈಗ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ಸ್ಪರ್ಶದಿಂದ ನಿತ್ರಾಣಗೊಂಡಿದ್ದ ಹದ್ದುಗಳಿಗೆ ಚಿಕಿತ್ಸೆ ಕೊಡಿಸಿದ ಎಸ್‍ಪಿ ದಿವ್ಯ ಸಾರಾ ಥಾಮಸ್

    ವಿದ್ಯುತ್ ಸ್ಪರ್ಶದಿಂದ ನಿತ್ರಾಣಗೊಂಡಿದ್ದ ಹದ್ದುಗಳಿಗೆ ಚಿಕಿತ್ಸೆ ಕೊಡಿಸಿದ ಎಸ್‍ಪಿ ದಿವ್ಯ ಸಾರಾ ಥಾಮಸ್

    ಚಾಮರಾಜನಗರ: ವಿದ್ಯುತ್ ಸ್ಪರ್ಶದಿಂದ ನೆಲಕ್ಕುರುಳಿದ್ದ ಎರಡು ರಣ ಹದ್ದುಗಳಿಗೆ ಚಿಕಿತ್ಸೆ ಕೊಡಿಸಿ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಅವರು ಮಾನವೀಯತೆ ಮೆರೆದಿದ್ದಾರೆ.

    ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಅವರ ನಿವಾಸದ ಬಳಿ, ಮಂಗಳವಾರ ಸಂಜೆ ವಿದ್ಯುತ್ ತಂತಿಯ ಸ್ಪರ್ಶದಿಂದ ಎರಡು ಹದ್ದುಗಳು ನೆಲಕ್ಕೆ ಬಿದ್ದು ನಿತ್ರಾಣಗೊಂಡಿದ್ದವು. ತಮ್ಮ ನಿವಾಸದ ಪಕ್ಕದಲ್ಲೇ ಹದ್ದುಗಳು ನಿತ್ರಾಣಗೊಂಡಿದ್ದನ್ನು ಕಂಡ ಎಸ್‍ಪಿ ದಿವ್ಯ ಸಾರಾ ಥಾಮಸ್ ಅವರು ತಕ್ಷಣ ತಮ್ಮ ವಾಹನದಲ್ಲಿದ್ದ ಗನ್ ಮ್ಯಾನ್ ಸಹಾಯದೊಂದಿಗೆ ಹದ್ದುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಸಮೀಪದಲ್ಲೇ ಇದ್ದ ಶ್ವಾನ ವೈದ್ಯ ಡಾ.ಮನೋಹರ್ ಅವರ ಕ್ಲಿನಿಕ್ ನಲ್ಲಿ ಹದ್ದುಗಳಿಗೆ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಯ ಬಳಿಕ ಹದ್ದುಗಳು ಚೇತರಿಸಿಕೊಂಡಿವೆ.

    ಹದ್ದುಗಳ ಜೀವ ಉಳಿಸಿ ಮಹಿಳಾ ಅಧಿಕಾರಿ ಮಾನವೀಯತೆ ಮೆರೆದಿದ್ದಾರೆ. ಹದ್ದುಗಳ ಚಿಕಿತ್ಸಾ ವೆಚ್ಚವನ್ನು ಸ್ವತಃ ಎಸ್‍ಪಿ ದಿವ್ಯ ಸಾರಾ ಥಾಮಸ್ ಅವರೇ ಭರಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿ ಮಾನವೀಯ ಕಾರ್ಯಕ್ಕೆ ಡಾ.ಮನೋಹರ್ ಅವರು ಮೆಚ್ಚುಗೆ ಸೂಚಿಸಿದರು. ಇದನ್ನೂ ಓದಿ: ಕಂಟೈನ್ಮೆಂಟ್‍ ವಲಯದಲ್ಲಿರುವ ಜಾನುವಾರುಗಳಿಗೆ ಮೇವು ವಿತರಿಸಿದ ಪೊಲೀಸರು

    ಮಹಿಳಾ ಪೊಲೀಸ್ ಅಧಿಕಾರಿಯ ಮಾನವೀಯತೆಗೆ ಸ್ಥಳೀಯ ಜನರಿಂದಲೂ ಪ್ರಶಂಸೆ ವ್ಯಕ್ತವಾಗಿದ್ದು, ಸದ್ಯ ಎಸ್‍ಪಿ ನಿವಾಸದಲ್ಲೇ ಎರಡು ಹದ್ದುಗಳು ಆಶ್ರಯ ಪಡೆದಿವೆ. ಅಲ್ಲದೇ ಕೆಲವು ತಿಂಗಳ ಹಿಂದೆ ಸಂತೇಮರಹಳ್ಳಿ ಗ್ರಾಮದಲ್ಲಿ ಕೋವಿಡ್ ರೋಗಿಯೊಬ್ಬ ಆಸ್ಪತ್ರೆಯಲ್ಲಿದ್ದ ವೇಳೆ ಎಸ್‍ಪಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ತಮ್ಮ ಹಸುಗಳಿಗೆ ಮೇವಿಲ್ಲ, ಮೇವು ಒದಗಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ್ದ ಎಸ್‍ಪಿ ಹಸುಗಳಿಗೆ ಪೊಲೀಸರ ಮೂಲಕ ಮೇವು ಒದಗಿಸಿ ಮೆಚ್ಚುಗೆ ಗಳಿಸಿದ್ದರು. ಇದನ್ನೂ ಓದಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ರಾಜಮೌಳಿ ಭೇಟಿ

  • ಬಂಡೀಪುರ ಅರಣ್ಯದಲ್ಲಿ ಆನೆ ಮೃತಪಟ್ಟಿದ್ದನ್ನು ತಿಳಿಸಿದ ಹದ್ದುಗಳು

    ಬಂಡೀಪುರ ಅರಣ್ಯದಲ್ಲಿ ಆನೆ ಮೃತಪಟ್ಟಿದ್ದನ್ನು ತಿಳಿಸಿದ ಹದ್ದುಗಳು

    ಚಾಮರಾಜನಗರ: ಹದ್ದುಗಳ ಹಾರಾಟದಿಂದಾಗಿ ಆನೆಯೊಂದು ಮೃತಪಟ್ಟಿರುವುದು ತಿಳಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದಲ್ಲಿ ನಡೆದಿದೆ.

    ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಕಾಡಿನೊಳಗೆ ಗಂಡು ಆನೆಯೊಂದು ಮೃತಪಟ್ಟಿದೆ. 50 ವರ್ಷದ ಆನೆಯ ಕಳೇಬರವು ಕಲಿಗೌಡನಹಳ್ಳಿ ಬೀಟಿನ ತಾರೆಮರದ ಕೊಳಚಿಯಲ್ಲಿ ಪತ್ತೆಯಾಗಿದೆ. ವಯೋಸಹಜವಾಗಿ ಮೃತಪಟ್ಟಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದ್ದು, ಆನೆ ಮೃತಪಟ್ಟು 3-4 ದಿನಗಳು ಕಳೆದಿರಬಹುದು ಎಂದು ಮೂಲಗಳು ತಿಳಿಸಿವೆ.

    ಹದ್ದುಗಳು ಹಾರಾಡುತ್ತಿದ್ದಿದ್ದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ ವೇಳೆ ಆನೆ ಮೃತಪಟ್ಟಿರುವುದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ನಡೆಯಬೇಕಿದ್ದು, ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕಾಫಿನಾಡಿನ ರಣಬಿಸಿಲಿಗೆ ನಿತ್ರಾಣಗೊಂಡಿದ್ದ ಹದ್ದು ರಕ್ಷಣೆ

    ಕಾಫಿನಾಡಿನ ರಣಬಿಸಿಲಿಗೆ ನಿತ್ರಾಣಗೊಂಡಿದ್ದ ಹದ್ದು ರಕ್ಷಣೆ

    ಚಿಕ್ಕಮಗಳೂರು: ರಣಬಿಸಿಲಿಗೆ ನಿತ್ರಾಣಗೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ರಣಹದ್ದಿಗೆ 16 ರೂಪಾಯಿಯ ಔಷಧಿ ನೀಡುತ್ತಿದ್ದಂತೆ ಮುಗಿಲೆತ್ತರಕ್ಕೆ ಹಾರಿರುವಂತ ಘಟನೆ ನಗರದ ಭೋಳರಾಮೇಶ್ವರ ದೇವಾಲಯದ ಆವರಣದಲ್ಲಿ ನಡೆದಿದೆ.

    ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರೋ ಬೆಸುಗೆ ಮೂರ್ತಿ ಭವನದ ಮುಂಭಾಗವಿರೋ ಮರದಲ್ಲಿದ್ದ ರಣಹದ್ದು ಆಹಾರದ ವ್ಯತ್ಯಯದಿಂದ ನೀರಿಲ್ಲದೇ ನಿತ್ರಾಣಗೊಂಡು ಭವನದ ಮುಂದೆ ಬಿದ್ದಿತ್ತು. ಇದನ್ನ ಗಮನಿಸಿದ ಸ್ಥಳೀಯರು ಹದ್ದನ್ನ ನೆರಳಿನಲ್ಲಿ ಬಿಟ್ಟು ನೀರು ಕುಡಿಸಿ ಸುಮಾರು ಅರ್ಧ ಗಂಟೆಗಳ ಕಾಲ ಆರೈಕೆ ಮಾಡಿದ್ದಾರೆ. ಆದರೆ ಇದರಿಂದ ಪ್ರಯೋಜನವಾಗದ ಕಾರಣ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

    ಚಿಕಿತ್ಸೆಗಾಗಿ ಹದ್ದನ್ನು ಕರೆದೊಯ್ಯುತ್ತಿದ್ದನ್ನು ಗಮನಿಸಿದ ಅರಣ್ಯ ಇಲಾಖೆ ಜೀಪ್ ಚಾಲಕ ಪ್ರಾಣಿ, ಪಕ್ಷಿಗಳಿಗೆ ನಿತ್ರಾಣವನ್ನು ಕಡಿಮೆ ಮಾಡುವ ಡ್ರಾಪ್ಸ್ ತಂದು ನೀಡಿದ್ದಾರೆ. ಡ್ರಾಪ್ಸ್ ಹಾಕಿದ ಅರ್ಧಗಂಟೆಯಲ್ಲಿ ಹದ್ದು ಸುಧಾರಿಸಿಕೊಂಡು ರೆಕ್ಕೆ ಅಗಲಿಸಿ ಮುಗಿಲಿನತ್ತ ಹಾರಿ ಹೋಗಿದೆ. ಕೂಲ್ ಸಿಟಿ ಕಾಫಿನಾಡಿನ ಹಾಟ್ ಸ್ಥಿತಿಗೆ ಜನಸಾಮಾನ್ಯರೇ ತತ್ತರಿಸಿ ಹೋಗುತ್ತಿದ್ದು, ನೀರಿಗಾಗಿ ಮೂಕಪ್ರಾಣಿಗಳು ಕೂಡ ಸಮಸ್ಯೆಗಳನ್ನು ಎದುರಿಸುತ್ತಿವೆ. ಸದ್ಯ ಘಟನೆಯಿಂದ ಪ್ರೇರಣೆ ಪಡೆದ ಸ್ಥಳೀಯರು ಮನೆ ಮೇಲೆ ಹಕ್ಕಿಗಳಿಗೆ ನೀರಿಡುವ ನಿರ್ಧಾರ ಮಾಡಿದ್ದಾರೆ.

  • ಹದ್ದು ರಕ್ಷಿಸಲು ಹೋಗಿ 25 ಅಡಿ ಎತ್ತರದಿಂದ ಬಿದ್ದು ಯುವಕ ಅಸ್ವಸ್ಥ!

    ಹದ್ದು ರಕ್ಷಿಸಲು ಹೋಗಿ 25 ಅಡಿ ಎತ್ತರದಿಂದ ಬಿದ್ದು ಯುವಕ ಅಸ್ವಸ್ಥ!

    ಬೆಂಗಳೂರು: ಪಕ್ಷಿಯೊಂದನ್ನು ರಕ್ಷಿಸಲು ಹೋಗಿ ಯುವಕ ಮರದಿಂದ ಕೆಳಗೆ ಬಿದ್ದು ಅಸ್ವಸ್ಥಗೊಂಡ ಘಟನೆ ನಗರದ ಲಾಲ್ ಬಾಗ್ ಬಳಿ ನಡೆದಿದೆ.

    ಸದ್ಯ ಘಟನೆಯಲ್ಲಿ ಗಾಯಗೊಂಡ ಯುವಕನನ್ನು ಅಗ್ನಿಶಾಮಕ ದಳದ ವಾಹನದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಏನಿದು ಘಟನೆ?: ಲಾಲ್ ಬಾಗ್ ಸಮೀಪದ ಮರವೊಂದರಲ್ಲಿ ಗಾಳಿಪಟದ ದಾರಕ್ಕೆ ಹದ್ದೊಂದು ಸಿಲುಕಿ ಒದ್ದಾಡುತ್ತಿತ್ತು. ಈ ಪಕ್ಷಿಯನ್ನ ಉಳಿಸಲು ಪಕ್ಷಿ ಪ್ರೇಮಿಗಳು ಶತಪ್ರಯತ್ನ ಮಾಡಿದ್ದರು. ಅಂತೆಯೇ ಇದನ್ನು ಗಮನಿಸಿದ ಯುವಕ ಆ ಹದ್ದನ್ನು ರಕ್ಷಿಸಲೆಂದು ಮರ ಏರಿದ್ದಾನೆ. ಆದ್ರೆ ಸುಮಾರು 25 ಅಡಿ ಎತ್ತರದಿಂದ ಆಯತಪ್ಪಿ ಕೆಳಗೆಬಿದ್ದು ಅಸ್ವಸ್ಥಗೊಂಡಿದ್ದಾನೆ.

    ಸದ್ಯ ಹದ್ದನ್ನು ರಕ್ಷಿಸಲಾಗಿದ್ದು, ಯುವಕ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  • 250 ವರ್ಷ ಹಳೆಯ ಮರ ಕುಸಿದು ಬಿದ್ದು 40ಕ್ಕೂ ಹೆಚ್ಚು ಹದ್ದುಗಳ ಸಾವು

    250 ವರ್ಷ ಹಳೆಯ ಮರ ಕುಸಿದು ಬಿದ್ದು 40ಕ್ಕೂ ಹೆಚ್ಚು ಹದ್ದುಗಳ ಸಾವು

    ಬೆಂಗಳೂರು: ಭಾರೀ ಮಳೆಯಿಂದಾಗಿ ಮರವೊಂದು ಬುಡ ಸಮೇತ ಮನೆ ಮೇಲೆ ಕುಸಿದು ಬಿದ್ದ ಪರಿಣಾಮ 40ಕ್ಕೂ ಹೆಚ್ಚು ಹದ್ದುಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಡೆದಿದೆ.

    ಇಲ್ಲಿನ ಜಲಕಂಠೇಶ್ವರ ದೇಗುಲದಲ್ಲಿ ಈ ಘಟನೆ ನಡೆದಿದೆ. ಸುಮಾರು 250 ವರ್ಷಗಳ ಇತಿಹಾಸವಿರುವ ಮರ ಬುಡಸಮೇತ ಕುದಿದು ಬಿದ್ದಿದೆ. ಪರಿಣಾಮ ಮರದಲ್ಲಿದ್ದ ಪಕ್ಷಿಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಹದ್ದುಗಳು ಸಾವನ್ನಪ್ಪಿವೆ. ಮನೆಯ ಮೇಲೆ ಮರ ಬಿದ್ದಿರುವುದರಿಂದ ಗೋಡೆಯೊಳಗೆ ಹದ್ದುಗಳು ಸಿಲುಕಿವೆ. ಜೀವ ಭಯದಿಂದ ಕೆಲವು ಹದ್ದುಗಳು ಒದ್ದಾಡುತ್ತಿವೆ. ಮರ ಬಿದ್ದ ಪರಿಣಾಮ ಇಡೀ ಮನೆ ಕುಸಿದು ಬಿದ್ದಿದೆ. ಮನೆಯವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಅವಶೇಷದಡಿ ಇನ್ನಷ್ಟು ಪಕ್ಷಿಗಳು ಸಿಲುಕಿರುವ ಶಂಕೆ ಇದೆ.

    ಸ್ಥಳಕ್ಕೆ ಶಾಸಕ ಆರ್‍ವಿ ದೇವರಾಜ್ ಭೇಟಿ ನೀಡಿ ಪರಿಸರ ಪ್ರೇಮಿಗಳ ವಿರುದ್ಧ ಕಿಡಿ ಕಾರಿದ್ರು. ಮರ ಕಡಿಯೋಕೆ ಮುಂದಾದ್ರೆ ಬಂದು ಮರವನ್ನ ತಬ್ಕೋತಾರೆ. ಈಗ ನಾವು ಹೊಣೆ ಹೊತ್ತು ಕೊಳ್ಳಬೇಕು. ಮರ ಟ್ರಿಮ್ ಮಾಡೋದಕ್ಕೆ ಕೂಡ ಅವಕಾಶ ನೀಡಿಲ್ಲ. ಹೀಗಾದ್ರೆ ನಾವು ಕೆಲಸ ಮಾಡೋದು ಹೇಗೆ? ನಾನು ಸಿಎಂಗೆ ಹೇಳ್ತೀನಿ. ಮರ ಬಿದ್ರೂ ಪರವಾಗಿಲ್ಲ ಕಡಿಬೇಡಿ ಅಂತ ನಂಗೆ ಹೇಳ್ತಾರೆ ಈ ಬುದ್ಧಿ ಜೀವಿಗಳು ಅಂದ್ರು.

    ನಾವೆಲ್ಲ ಪೂಜೆ ಮಾಡುತ್ತಿದ್ವಿ. ಸುಮಾರು ಐನೂರಕ್ಕೂ ಹೆಚ್ಚು ಪಕ್ಷಿಗಳು ಈ ಮರದಲ್ಲಿ ಇದ್ವು. ಈಗ ಆಶ್ರಯ ಕಳೆದುಕೊಂಡಿದ್ದಾವೆ. ಎಷ್ಟೋ ಪಕ್ಷಿಗಳು ಸಾವನ್ನಪ್ಪಿದ್ದಾವೆ ಅಂತ ಆರ್‍ವಿ ದೇವರಾಜ್ ಹೇಳಿದ್ರು.

    ಹದ್ದುಗಳ ಸಾವಿನ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ನೋಡಿದ ಬಳಿಕ ಬಿಬಿಎಂಪಿ ಅನಿಮಲ್ ರೆಸ್ಕ್ಯೂ ಟೀಮ್ ಸದಸ್ಯ ರಾಜೇಶ್ ರಕ್ಷಣೆಗೆ ಧಾವಿಸಿದ್ದಾರೆ. ಹದ್ದುಗಳನ್ನು ಮರದ ಅವಶೇಷದಡಿಯಿಂದ ಎತ್ತಿ ರಕ್ಷಣೆ ಮಾಡಿದ್ದಾರೆ.

    https://www.youtube.com/watch?v=g3oGXYYSpaM