Tag: ಹತ್ತಿ ಬೆಳೆ

  • ರಾಯಚೂರಿನಲ್ಲಿ ಅತಿಯಾದ ಮಳೆ: ಸಾವಿರಾರು ಎಕರೆ ಹತ್ತಿ ಬೆಳೆ ನಷ್ಟ

    ರಾಯಚೂರಿನಲ್ಲಿ ಅತಿಯಾದ ಮಳೆ: ಸಾವಿರಾರು ಎಕರೆ ಹತ್ತಿ ಬೆಳೆ ನಷ್ಟ

    ರಾಯಚೂರು: ಜಿಲ್ಲೆಯಲ್ಲಿ ಕಳೆದ ಎರಡು, ಮೂರು ದಿನಗಳಿಂದ ಸುರಿದ ಮಳೆಯು ಹತ್ತಿ ಬೆಳೆಗಾರರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಅತೀವೃಷ್ಠಿ ಭಾರೀ ನಷ್ಟವನ್ನುಂಟು ಮಾಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಸ್ಥಿತಿಯನ್ನು ರೈತರು ಎದುರಿಸುತ್ತಿದ್ದಾರೆ.

    ಕಳೆದ ವರ್ಷ ಬರಗಾಲದಿಂದ ತತ್ತರಿಸಿ ಹೋಗಿದ್ದ ರಾಯಚೂರಿನ (Raichuru) ರೈತರು, ಈ ಬಾರಿ ಉತ್ತಮ ಮಳೆಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಉತ್ತಮ ಮಳೆಯಿಂದಾಗಿ ಉತ್ಕೃಷ್ಟ ಫಸಲನ್ನು ಕಂಡಿದ್ದರು. ಅದರಲ್ಲೂ ಹತ್ತಿ ಬೆಳೆಗಾರರಂತೂ (Cotton Crop) ಬಂಪರ್ ಬೆಳೆಯ ಆಸೆಯಲ್ಲಿದ್ದರು. ಆದರೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅತಿಯಾದ ಮಳೆ ರೈತರ ಎಲ್ಲಾ ಕನಸುಗಳನ್ನು ನುಚ್ಚುನೂರು ಮಾಡುತ್ತಿದೆ. ರೈತರ ಆಸೆಗೆ ತಣ್ಣೀರು ಎರಚಿದೆ. ಜಿಲ್ಲೆಯ ಮಮದಾಪುರ, ನೆಲಹಾಳ, ಕಲ್ಲೂರು ಸೇರಿ ಹಲವೆಡೆ ಅತಿಯಾದ ಮಳೆಯಿಂದ ಭಾರೀ ನಷ್ಟವಾಗಿದೆ.ಇದನ್ನೂ ಓದಿ:

    ರೈತರು ಇನ್ನೇನು ಕೆಲವೇ ದಿನಗಳಲ್ಲಿ ಹತ್ತಿಯನ್ನು ಬಿಡಿಸಿ, ಮಾರುಕಟ್ಟೆಗೆ ಸಾಗಿಸುವ ಸಿದ್ಧತೆಯಲ್ಲಿದ್ದರು. ಆದರೆ ಮಳೆಯಿಂದಾಗಿ ಹತ್ತಿ ಸಂಪೂರ್ಣ ಒದ್ದೆಯಾಗಿದೆ. ಗಿಡದಲ್ಲೇ ಹತ್ತಿ ಕಾಳುಗಳು ಸಸಿ ಒಡೆಯುತ್ತಿವೆ. ಹತ್ತಿ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದು, ನಷ್ಟದ ಹಾದಿ ಹಿಡಿದಿದೆ. ಹತ್ತಿಯ ಗುಣಮಟ್ಟ ಹಾಳಾಗಿದ್ದು, ಸಿಕ್ಕಷ್ಟು ಸಿಗಲಿ ಎಂದು ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಉತ್ತಮ ಬೆಲೆ ಸಿಗುವ ಯಾವ ಲಕ್ಷಣಗಳೂ ಇಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ.

    ಈ ಬಾರಿ ಜಿಲ್ಲೆಯಲ್ಲಿ 1 ಲಕ್ಷ 76 ಸಾವಿರದ 273 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಪ್ರತಿ ಎಕರೆಗೆ ರೈತರು 30 ರಿಂದ 40 ಸಾವಿರ ರೂ. ಖರ್ಚು ಮಾಡಿದ್ದಾರೆ. ಮಳೆಯಿಂದಾಗಿ ಖರ್ಚು ಮಾಡಿದ ಹಣವೂ ವಾಪಸ್ ಬರುವ ಲಕ್ಷಣಗಳು ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಸದ್ಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಹತ್ತಿಗೆ 7500 ರೂ. ಬೆಲೆಯಿದೆ. ಆದರೆ ಮಳೆಯಿಂದ ಹಾಳಾದ ಹತ್ತಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದೇ ರೈತರಿಗೆ ಸವಾಲಾಗಿದೆ. ಹತ್ತಿ ಬಿಡಿಸಲು ಕೂಲಿಯಾಳುಗಳಿಗೆ ಖರ್ಚು ಮಾಡಿದ ಹಣವಾದರೂ ವಾಪಸ್ ಬರಲಿ ಎನ್ನುವ ಪರಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಹಾಳಾದ ಬೆಳೆಯ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ಇದನ್ನೂ ಓದಿ:

  • ಹಳೇ ವೈಷಮ್ಯಕ್ಕೆ 9 ಎಕರೆ ಹತ್ತಿ ಬೆಳೆ ನಾಶ – ಲಕ್ಷಾಂತರ ರೂ. ಬೆಳೆ ಕಳೆದುಕೊಂಡ ರೈತರು

    ಹಳೇ ವೈಷಮ್ಯಕ್ಕೆ 9 ಎಕರೆ ಹತ್ತಿ ಬೆಳೆ ನಾಶ – ಲಕ್ಷಾಂತರ ರೂ. ಬೆಳೆ ಕಳೆದುಕೊಂಡ ರೈತರು

    ರಾಯಚೂರು: ಜಮೀನು ವಿವಾದ (Land Dispute) ಹಿನ್ನೆಲೆ ಹಳೇ ವೈಷಮ್ಯಕ್ಕೆ ದೂರದ ಸಂಬಂಧಿಕರೇ 9 ಎಕರೆಯಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು (Cotton Crop) ಟ್ರ‍್ಯಾಕ್ಟರ್‌ನಿಂದ (Tractor) ನಾಶ ಮಾಡಿರುವ ಘಟನೆ ರಾಯಚೂರಿನ (Raichur) ಮಾನ್ವಿ (Manvi) ತಾಲೂಕಿನ ಕುರಡಿ ಗ್ರಾಮದಲ್ಲಿ ನಡೆದಿದೆ.

    ನಾಲ್ಕು ತಿಂಗಳ ಬೆಳೆಯನ್ನು ಎಲ್ಲರೆದುರೆ ಸಂಪೂರ್ಣವಾಗಿ ನಾಶಮಾಡಲಾಗಿದೆ. ನರಸಿಂಹ ಹಾಗೂ ಹುಲಿಗೆಪ್ಪ ಕುಟುಂಬ ಉಳುಮೆ ಮಾಡುತ್ತಿದ್ದರು. ಜಮೀನಿನಲ್ಲಿದ್ದ ಹತ್ತಿ ಬೆಳೆಯನ್ನು ಅಬ್ರಾಹಂಪ್ಪ, ಮಾರೆಪ್ಪ, ಪ್ರಭಾಕರ್ ಸೇರಿ ಹಲವರು ನಾಶ ಮಾಡಿದ್ದಾರೆ ಅಂತ ರೈತರು (Farmers) ಆರೋಪಿಸಿದ್ದಾರೆ. ಮಳೆ ಕೊರತೆಯ ನಡುವೆಯೂ ಉತ್ತಮ ಫಸಲು ಬಂದಿತ್ತು. ಹತ್ತಿ ಗಿಡಗಳು ಕಾಯಿಕಟ್ಟಿದ್ದವು. ಆದರೆ ಹತ್ತಿ ಬೆಳೆ ಕೈಗೆ ಸಿಗುವ ಮೊದಲೇ ಸಂಪೂರ್ಣ ನಾಶಮಾಡಿದ್ದಾರೆ. ಇದನ್ನೂ ಓದಿ: ದೇವನಹಳ್ಳಿಯಲ್ಲಿ ಮರ್ಯಾದಾ ಹತ್ಯೆ – ಅನ್ಯಜಾತಿ ಯುವಕನನ್ನ ಪ್ರೀತಿಸುತ್ತಿದ್ದಳೆಂದು ತಂದೆಯಿಂದಲೇ ಮಗಳ ಕೊಲೆ

    ಘಟನೆ ಹಿನ್ನೆಲೆ 28 ಜನರ ವಿರುದ್ಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಕರೆಗೆ 25 ರಿಂದ 30 ಸಾವಿರ ರೂ. ಖರ್ಚು ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ ಲಕ್ಷಾಂತರ ರೂ. ಬೆಳೆ ಕೈಗೆ ಸೇರುವುದಿತ್ತು. ಬೆಳೆ ನಷ್ಟವಾಗಿರುವುದರಿಂದ ನಮಗೆ ನ್ಯಾಯ ಸಿಗಬೇಕು ಅಂತ ಉಳುಮೆ ಮಾಡಿದ್ದ ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: Breaking: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 15 ಕಡೆ IT ದಾಳಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹತ್ತಿ ಬೆಳೆಗೆ ಕೀಟನಾಶಕ ಸಿಂಪಡಿಸಿದ ನಂತರ ನಾಲ್ವರು ರೈತರು ತೀವ್ರ ಅಸ್ವಸ್ಥ

    ಹತ್ತಿ ಬೆಳೆಗೆ ಕೀಟನಾಶಕ ಸಿಂಪಡಿಸಿದ ನಂತರ ನಾಲ್ವರು ರೈತರು ತೀವ್ರ ಅಸ್ವಸ್ಥ

    ಕಲಬುರಗಿ: ಹತ್ತಿ ಬೆಳೆಗೆ ಕೀಟನಾಶಕ (Insecticide) ಸಿಂಪಡಿಸಿದ ನಂತರ ನಾಲ್ವರು ರೈತರು (Farmers) ತೀವ್ರ ಅಸ್ವಸ್ಥಗೊಂಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.

    ಸುನಿಲ್ (34), ಅನಿಲ್ (22), ಕುಮಾರ್ (30) ಹಾಗೂ ಖೇಮು ರಾಠೋಡ್ ಅಸ್ವಸ್ಥಗೊಂಡ ರೈತರಾಗಿದ್ದು, ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಾಲ್ವರು ರೈತರು ಹತ್ತಿ ಬೆಳೆಗೆ ತಗುಲಿದ ರೋಗ ನಿಯಂತ್ರಣಕ್ಕಾಗಿ ಕೀಟ ನಾಶಕ ಸಿಂಪಡಿಸಿದ್ದರು. ನಂತರ ಮನೆಗೆ ಬಂದ ತಕ್ಷಣವೇ ತಲೆಸುತ್ತು, ಹಾಗೂ ವಾಂತಿ-ಭೇದಿ ಆರಂಭವಾಗಿದೆ. ಇದನ್ನೂ ಓದಿ: ಅರಣ್ಯ ಇಲಾಖೆ ಕಚೇರಿಯಲ್ಲಿದ್ದ 8 ಲಕ್ಷ ರೂ.ಮೌಲ್ಯದ ಶ್ರೀಗಂಧ ಕಟ್ಟಿಗೆ ಕಳ್ಳತನ!

    ತಕ್ಷಣ ಕುಟುಂಬಸ್ಥರು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ನಾಲ್ವರು ರೈತರ ಆರೋಗ್ಯದಲ್ಲಿ ನಿರಂತರ ಏರುಪೇರು ಉಂಟಾಗಿದ್ದು, ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗುತ್ತಿದೆ. ಇದನ್ನೂ ಓದಿ: ಡೆಂಗ್ಯೂ ಜ್ವರಕ್ಕೆ ನವವಿವಾಹಿತೆ ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸರಕು, ಸೇವೆಗಳ ಬೇಡಿಕೆ ಹೆಚ್ಚಿಸಲು ಗುಣಮಟ್ಟದ ರಫ್ತು ಅವಶ್ಯಕ – ವಸಂತ ಲದ್ವಾ

    ಸರಕು, ಸೇವೆಗಳ ಬೇಡಿಕೆ ಹೆಚ್ಚಿಸಲು ಗುಣಮಟ್ಟದ ರಫ್ತು ಅವಶ್ಯಕ – ವಸಂತ ಲದ್ವಾ

    ಹುಬ್ಬಳ್ಳಿ: ಕೇವಲ ರಾಜ್ಯ ಮತ್ತು ದೇಶದಲ್ಲಿ ವ್ಯಾಪಾರ ಮಾಡುವುದರಿಂದ ಅಭಿವೃದ್ಧಿಯಾಗುವುದು ಕಷ್ಟ. ಗುಣಮಟ್ಟದ ರಫ್ತು ಕೈಗೊಳ್ಳುವುದರ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಿಸಿಕೊಳ್ಳುವುದು ಇಂದಿನ ವ್ಯಾಪಾರದಲ್ಲಿ ಅವಶ್ಯಕವಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ವಸಂತ ಲದ್ವಾ ಹೇಳಿದರು.

    ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಸಹಯೋಗದಲ್ಲಿ ಆಜಾದಿಕಾ ಅಮೃತ ಮಹೋತ್ಸವ ವಾಣಿಜ್ಯ ಸಪ್ತಾಹದ ಅಂಗವಾಗಿ ಆಯೋಜಿಸಿದ ರಫ್ತುದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಪತ್ರ

    ರಫ್ತಿನ ಬಗ್ಗೆ ತರಬೇತಿ ನೀಡುಬೇಕು

    ಕೋವಿಡ್ ಪರಿಣಾಮದಿಂದ ಉದ್ದಿಮೆಗಳು ನೆಲಕಚ್ಚಿವೆ. ರಾಜ್ಯದಿಂದ ಹಲವಾರು ಸೇವೆಗಳನ್ನು ರಫ್ತು ಮಾಡಲು ಇಂದಿಗೂ ನಾವು ಮುಂಬೈಗೆ ತೆರಳುವ ಅನಿವಾರ್ಯತೆ ಇದೆ. ಅದರ ಬದಲಿಗೆ ನಮ್ಮ ರಾಜ್ಯದ ನೈಸರ್ಗಿಕ ಬಂದರು ಆದ ಕಾರವಾರವನ್ನು ಉಪಯೋಗಿಸಿಕೊಳ್ಳಬೇಕು. ರಫ್ತು ಸಾಗಣೆ ಕಾರ್ಯಕ್ಕಾಗಿ ಅಂಕೋಲಾ ರೈಲು ಮಾರ್ಗ ಅಗತ್ಯವಾಗಿರುವುದರಿಂದ ರಾಜ್ಯ ಸರ್ಕಾರದೊಂದಿಗೆ ಮಾತನಾಡಿ ಇದಕ್ಕೆ ಆದ್ಯತೆ ನೀಡಬೇಕು. ವಾಣಿಜ್ಯ ಮಂಡಳಿಯು ಪ್ರತಿ 6 ತಿಂಗಳಿಗೊಮ್ಮೆ ರಫ್ತಿನ ಬಗ್ಗೆ ತರಬೇತಿ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಉದ್ದಿಮೆದಾರರು ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸರಕುಗಳನ್ನು ರಫ್ತು ಮಾಡಬೇಕು ಎಂದು ತಿಳಿಸಿದರು.

    ರಾಜ್ಯದಲ್ಲಿ ಕೃಷಿ ಬೆಳೆಗೆ ಭೂಮಿ ಹಾಗೂ ಒಳ್ಳೆಯ ವಾತಾವರಣ

    ಕೆನ್ ಅಗ್ರಿಟೆಕ್ ವ್ಯವಸ್ಥಾಪಕ ನಿರ್ದೇಶಕ ವಿವೇಕ ಪಿ.ನಾಯಕ್ ಮಾತನಾಡಿದ್ದು, ರಫ್ತು ಅಧಿಕಗೊಳಿಸಲು ಕೃಷಿಯ ಮೇಲೆ ಹೆಚ್ಚು ಗಮನ ಹರಿಸಬೇಕು. ಕೃಷಿ ಮತ್ತು ಆಹಾರ ಸಂಸ್ಕರಣೆ ಭಾಗದಲ್ಲಿ ಜಿಲ್ಲೆ ಹೆಚ್ಚಿನ ರಫ್ತನ್ನು ಸಾಧಿಸಿದೆ. ರಾಜ್ಯದಲ್ಲಿ ಕೃಷಿ ಬೆಳೆಗೆ ಭೂಮಿ ಹಾಗೂ ಒಳ್ಳೆಯ ವಾತಾವರಣ ಇರುವುದರಿಂದ ರಫ್ತಿನಲ್ಲಿ ಮೇಲುಗೈ ಸಾಧಿಸಲು ಸಹಾಯಕವಾಗಿದೆ. ಎಲ್ಲಿ ಮತ್ತು ಹೇಗೆ ಸ್ಪರ್ಧೆ ಮಾಡಬೇಕು ಎಂಬುವುದನ್ನು ತಿಳಿದುಕೊಂಡು ಕೃಷಿಯಲ್ಲಿ ಗುಣಮಟ್ಟದ ಬೆಳೆಗಳಿಗೆ ಹೆಚ್ಚಿನ ಗಮನಹರಿಸಬೇಕು ಎಂದರು. ಇದನ್ನೂ ಓದಿ: ಕ್ಯಾತಿನಕೊಪ್ಪ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ಬಿತ್ತು

    ದೇಶದಲ್ಲಿ ಶೇ.80 ರಷ್ಟು ಕೃಷಿಕರು ಸಣ್ಣ ಮತ್ತು ಮಧ್ಯಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭೂರಹಿತ ರೈತರು ಕೃಷಿ ಕೆಲಸಗಳಲ್ಲಿ ಪರಿಣಿತಿ ಹೊಂದಿದ್ದು, ಅಂತಹ ರೈತರ ಕೌಶಲ್ಯಗಳನ್ನು ರಫ್ತಿಗಾಗಿ ಬಳಸಿಕೊಳ್ಳಬೇಕು. ಸುಸ್ಥಿರ ಆಹಾರ ಬೆಳೆಯ ಅಭಿವೃದ್ಧಿ ಪ್ರಾಮುಖ್ಯತೆ ನೀಡಬೇಕು. ಬೀಜದಿಂದ ರಫ್ತಿ ಮಾಡುವವರಿಗೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.

    ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಳ್ಳೆಯ ಗುಣಮಟ್ಟದ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತಿದೆ. ಹೀಗೆ ರಫ್ತಿನ ಬೆಳೆಗಳ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿ ವ್ಯವಸಾಯ ಮಾಡಬೇಕು. ಕೃಷಿಯು ಎಲ್ಲ ಅಭಿವೃದ್ಧಿಗಳ ಕೀಲಿ ಇದ್ದಂತೆ, ಅದರ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸಬೇಕು. ಕೃಷಿಕರಿಂದ ರಫ್ತುದಾರರವರೆಗೆ ಎಲ್ಲರೂ ಅವರ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುವುದರಿಂದ ರಫ್ತಿನ ಮಟ್ಟದಲ್ಲಿ ಒಳ್ಳೆಯ ಫಲಿತಾಂಶ ಪಡೆಯಲು ಸಹಾಯವಾಗುತ್ತೆ ಎಂದರು.

    ವಾಣಿಜ್ಯೋದ್ಯಮ ಮಂಡಳಿ ಅಧ್ಯಕ್ಷ ಮಹೇಂದ್ರ ಲದ್ದಡ ಮಾತನಾಡಿದ್ದು, 2006 ರಲ್ಲಿ ರಾಜ್ಯದಲ್ಲಿ 8 ಲಕ್ಷ ಟನ್‍ಗಳಷ್ಟು ಹತ್ತಿ ಬೆಳೆಯಲಾಗುತ್ತಿತ್ತು. ಈ ಬೆಳೆ ಹೆಚ್ಚಿಸಲು ತೀರ್ಮಾನಿಸಿ ಸಭೆ ನಡೆಸಿ ರೈತರಿಗೆ ಸಲಹೆ ಸೂಚನೆಗಳನ್ನು ನೀಡಲಾಗುತ್ತಿತ್ತು. 10 ವರ್ಷದ ಅಂತರದಲ್ಲಿ 2016ರ ಹೊತ್ತಿಗೆ 1 ಕೋಟಿ ಟನ್ ಹತ್ತಿ ಬೆಳೆಯುವಲ್ಲಿ ರಾಜ್ಯ ಯಶಸ್ಸು ಕಂಡಿದೆ. 2012 ರಿಂದ 14 ರವರೆಗೆ ಹಲವು ಬಗೆಯ ಹತ್ತಿಯನ್ನು ದೇಶದಲ್ಲಿ ಬೆಳೆಯಲಾಗಿದೆ. ಇಂದು ದೇಶದಿಂದ ಅತೀ ಹೆಚ್ಚು ಹತ್ತಿಯನ್ನು ರಫ್ತು ಮಾಡಲಾಗುತ್ತಿದೆ. ಇಂಡೋನೇಷ್ಯಾ ಮತ್ತು ಪಶ್ಚಿಮ ಬಂಗಾಳಗಳಿಗೆ 25ಕ್ಕೂ ಹೆಚ್ಚು ವರ್ಷಗಳಿಂದ ಅವಿಭಜಿತ ಧಾರವಾಡ ಜಿಲ್ಲೆಯಿಂದ ಹತ್ತಿ ರಫ್ತಾಗುತ್ತಿತ್ತು. ಉತ್ತರ ಕರ್ನಾಟಕದ ಹವಾಮಾನವು ಆಹಾರ ಪದಾರ್ಥಗಳ ಬೆಳೆಗೆ ಉತ್ತಮವಾಗಿದೆ ಎಂದು ಪ್ರಶಂಸಿದರು. ಇದನ್ನೂ ಓದಿ: ನೀರು ಮಿಕ್ಸ್ ಮಾಡಿ ಪೆಟ್ರೋಲ್, ಡೀಸೆಲ್ ಮಾರಾಟ – ರೊಚ್ಚಿಗೆದ್ದ ಜನ

    ಈ ಸಂದರ್ಭದಲ್ಲಿ ಡಿ.ಜಿ.ಎಫ್.ಟಿ ಸಹಾಯಕ ನಿರ್ದೇಶಕಿ ಗೀತಾ.ಕೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಗೌರವ ಕಾರ್ಯದರ್ಶಿ ಅಶೋಕ ಗಡಾದ, ವಾಣಿಜ್ಯೋದ್ಯಮ ಮಂಡಳಿ ಮಾಜಿ ಅಧ್ಯಕ್ಷ ರಮೇಶ್ ಪಾಟೀಲ್, ಮಂಡಳಿ ಉಪಾಧ್ಯಕ್ಷ ವಿನಯ್ ಜವಳಿ, ವಾಣಿಜ್ಯೋದ್ಯಮ ಸಂಸ್ಥೆ ಜಂಟಿ ನಿರ್ದೇಶಕ ಉಮೇಶ್ ಗಡಾದ, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಅಣ್ಣಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

  • ಹಳೆ ದ್ವೇಷಕ್ಕೆ ಒಂದೂವರೆ ಎಕ್ರೆ ಹತ್ತಿ ಬೆಳೆ ನಾಶ

    ಹಳೆ ದ್ವೇಷಕ್ಕೆ ಒಂದೂವರೆ ಎಕ್ರೆ ಹತ್ತಿ ಬೆಳೆ ನಾಶ

    ರಾಯಚೂರು: ಹಳೇ ದ್ವೇಷ ಹಾಗೂ ಅಸೂಯೆ ಹಿನ್ನೆಲೆ ಜಮೀನಿನಲ್ಲಿನ ಬೆಳೆಯನ್ನು ಕಡಿದು ಹಾಕಿ ದುಷ್ಕೃತ್ಯ ಎಸಗಿರುವ ಘಟನೆ ರಾಯಚೂರಿನ ಎಲೆಬಿಚ್ಚಾಲಿಯಲ್ಲಿ ನಡೆದಿದೆ.

    ಮಹಾಂತಮ್ಮ ಎಂಬುವವರಿಗೆ ಸೇರಿದ ಒಂದೂವರೆ ಎಕರೆ ಜಮೀನಿನಲ್ಲಿ ಬೀಜಕ್ಕಾಗಿ ಬೆಳೆದ ಹತ್ತಿ ಬೆಳೆಯನ್ನು ನಾಶಮಾಡಲಾಗಿದೆ. ಕಾಯಿ ಕಟ್ಟುವ ಹಂತದಲ್ಲಿದ್ದ ಹತ್ತಿ ಗಿಡಗಳನ್ನು ಸಂಪೂರ್ಣವಾಗಿ ಕಿಡಿಗೇಡಿಗಳು ಕಡಿದು ಹಾಕಿದ್ದಾರೆ.

    ಸಾಲ ಮಾಡಿ ಸುಮಾರು 1 ಲಕ್ಷ ರೂಪಾಯಿವರೆಗೆ ಖರ್ಚು ಮಾಡಿ ಬೆಳೆದಿದ್ದ ಬೆಳೆ 2.5 ಲಕ್ಷ ಆದಾಯ ತರುವ ನಿರೀಕ್ಷೆ ಇತ್ತು. ಆದರೆ ದುಷ್ಕರ್ಮಿಗಳು ತಡ ರಾತ್ರಿ ಹೊಲದಲ್ಲಿದ್ದ ಹತ್ತಿಯನ್ನು ಕತ್ತರಿಸಿ ಹೋಗಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಯರಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಲವರ ಮೇಲೆ ಅನುಮಾನವಿದ್ದರೂ ಹೆಸರು ಹೇಳಲು ರೈತ ಮಹಿಳೆ ಹಿಂಜರಿದಿದ್ದು, ದುಷ್ಕರ್ಮಿಗಳನ್ನು ನೀವೇ ಪತ್ತೆ ಹಚ್ಚಿ ನ್ಯಾಯ ಕೊಡಿಸಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.