Tag: ಹಣ ವರ್ಗಾವಣೆ

  • ಟೆರರ್ ಫಂಡಿಂಗ್‍ಗೆ ಕಡಿವಾಣ – ವಿದೇಶಿ ವ್ಯವಹಾರದ ಮೇಲೆ ಕೇಂದ್ರ ಕಣ್ಣು

    ಟೆರರ್ ಫಂಡಿಂಗ್‍ಗೆ ಕಡಿವಾಣ – ವಿದೇಶಿ ವ್ಯವಹಾರದ ಮೇಲೆ ಕೇಂದ್ರ ಕಣ್ಣು

    ನವದೆಹಲಿ: ವಿದೇಶದಿಂದ ಭಯೋತ್ಪಾದಕ ಸಂಘಟನೆಗಳಿಗೆ ಬರುವ ಹಣವನ್ನು (Terror Funding) ತಡೆಯಲು ಕೇಂದ್ರ ಸರ್ಕಾರ (Central Government) ದಿಟ್ಟ ಹೆಜ್ಜೆ ಇಟ್ಟಿದೆ. ವಿದೇಶದಿಂದ ರವಾನೆಯಾಗುವ 50,000 ರೂ. ಮೇಲ್ಪಟ್ಟ ವಹಿವಾಟಿನ ಮೇಲೆ ನಿಗಾವಹಿಸಲು ಕೇಂದ್ರ ಮುಂದಾಗಿದೆ. ಹಣ ಕಳಿಸಿದವರು ಹಾಗೂ ಸ್ವೀಕರಿಸಿದವರ ಮಾಹಿತಿ ಸಂಗ್ರಹಿಸಲು ನಿರ್ಧರಿಸಲಾಗಿದೆ.

    ಉಗ್ರ ಸಂಘಟನೆಗಳಿಗೆ ವಿದೇಶಗಳಿಂದ ಹಣ ರವಾನೆ (International Transactions) ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಸರ್ಕಾರ ಕ್ರಮಕ್ಕೆ ಮುಂದಾಗಿದೆ. 50 ಸಾವಿರ ರೂ.ಗಳಿಗೂ ಮೀರಿದ ಎಲ್ಲಾ ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರದ ಮೇಲೆ ಭಾರೀ ನಿಗಾ ವಹಿಸಲು ಸಂಬಂಧಪಟ್ಟ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಕುರಿತು ಈಗಾಗಲೇ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಇದನ್ನೂ ಓದಿ: ಡಿಕೆಶಿ ಹಸ್ತಕ್ಷೇಪಕ್ಕೆ ಸತೀಶ್ ಕಿಡಿ – ಕಾಂಗ್ರೆಸ್‌ಗೂ ಬೆಳಗಾವಿ ರಾಜಕೀಯ ಕಂಟಕನಾ?

    2005ರ ಹಣ ವರ್ಗವಾಣೆ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣಕಾಸು ವ್ಯವಹಾರಗಳಲ್ಲಿ ಕಳುಹಿಸಿದವರು ಮತ್ತು ಸ್ವೀಕರಿಸಿದವರ ಅಗತ್ಯ ಮಾಹಿತಿ ಸಂಗ್ರಹಿಸುವಂತೆ ತಿಳಿಸಲಾಗಿದೆ. ಇದನ್ನೂ ಓದಿ: ಮಂಗಳೂರಿನ ಲೇಡಿಹಿಲ್‌ನಲ್ಲಿ ಕಾರು ಹಿಟ್ & ರನ್ – ಓರ್ವ ಯುವತಿ ಸಾವು, ನಾಲ್ವರಿಗೆ ಗಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀಲಿಚಿತ್ರ ನಟಿಗೆ ಹಣ ವರ್ಗಾವಣೆ – ಡೊನಾಲ್ಡ್ ಟ್ರಂಪ್ ಬಂಧನ

    ನೀಲಿಚಿತ್ರ ನಟಿಗೆ ಹಣ ವರ್ಗಾವಣೆ – ಡೊನಾಲ್ಡ್ ಟ್ರಂಪ್ ಬಂಧನ

    – ಬಂಧನವಾದ ಕೆಲವೇ ಗಂಟೆಗಳಲ್ಲಿ ಟ್ರಂಪ್‌ ಮತ್ತೆ ಬಿಡುಗಡೆ

    ನ್ಯೂಯಾರ್ಕ್: ನೀಲಿಚಿತ್ರ ನಟಿಗೆ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ (America) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಿದ್ದಾರೆ.

    ಮ್ಯಾನ್ ಹಾಟನ್ ಜಿಲ್ಲಾ ಅಟಾರ್ನಿಯ ಕೋರ್ಟ್ ಸಭಾಂಗಣದಲ್ಲಿ ಟ್ರಂಪ್ ಶರಣಾದರು. ಬಳಿಕ ಅವರನ್ನು ಬಂಧಿಸಿದ ಪೊಲೀಸರು ಬಿಗಿ ಭದ್ರತೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು.

    ಈ ವೇಳೆ ಟ್ರಂಪ್ ವಿರುದ್ಧ ಲೈಂಗಿಕ ಪ್ರಕರಣ ಮುಚ್ಚಿಡಲು ಹಣ ನೀಡಿದ್ದು, ಸೇರಿದಂತೆ ಹಣ ವಂಚನೆಯ 34 ದೋಷಾರೋಪಗಳನ್ನು ಹೊರಿಸಲಾಯಿತು. ಕಾನೂನು ಸಲಹಾ ಸಿಬ್ಬಂದಿ ಜೊತೆ ಬಂದಿದ್ದ ಟ್ರಂಪ್, ನಾನು ತಪ್ಪು ಮಾಡಿಲ್ಲ. 34 ಆರೋಪಗಳಲ್ಲಿ ನಾನು ನಿರಪರಾಧಿ ಎಂದಿದ್ದಾರೆ.

    ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಯಿತು. ವಿಚಾರಣೆಯ ನಂತರ ಟ್ರಂಪ್, ತಮ್ಮ ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಈ ಮೂಲಕ ಅಮೆರಿಕದ ಇತಿಹಾಸದಲ್ಲೇ ಕ್ರಿಮಿನಲ್ ಆರೋಪ ಪ್ರಕರಣದ ವಿಚಾರಣೆ ಎದುರಿಸಿ ಬಂಧನಕ್ಕೆ ಒಳಗಾದ ಮೊದಲ ಅಮೆರಿಕದ ಮಾಜಿ ಅಧ್ಯಕ್ಷರಾಗಿದ್ದಾರೆ. ಇದನ್ನೂ ಓದಿ: Swiggy, Zomatoಗೆ ಕೌಂಟರ್ – ಹೋಟೆಲ್ ಅಸೋಸಿಯೇಷನ್‍ನಿಂದ ಹೊಸ ಆ್ಯಪ್‌ಗೆ ಸಿದ್ಧತೆ

    ಕೋರ್ಟ್ ಹಾಲ್‍ಗೆ ಕರೆದೊಯ್ಯುವ ಮೊದಲು ಟ್ರಂಪ್ ಅವರ ಬೆರಳಚ್ಚುಗಳ ಮಾದರಿಯನ್ನು ಪೊಲೀಸರು ಪಡೆದರು. ಹೆಸರು, ವಯಸ್ಸು, ಎತ್ತರ, ತೂಕ ಒಳಗೊಂಡಂತೆ ವ್ಯಕ್ತಿಗತ ಮಾಹಿತಿ ಪಡೆದರು. ಅವರ ವಿರುದ್ಧ ಯಾವುದಾದರೂ ವಾರೆಂಟ್ ಬಾಕಿ ಇದೆಯೇ ಎಂದು ಪರಿಶೀಲಿಸಿದರು. ಇದನ್ನೂ ಓದಿ: ಹತ್ತು ವರ್ಷದಿಂದ ನಾಪತ್ತೆಯಾಗಿದ್ದ ನಟೋರಿಯಸ್ ರೌಡಿಶೀಟರ್‌ಗಳ ಬಂಧನ

    ಏನಿದು ಕೇಸ್‌: ಟ್ರಂಪ್ ಅವರು ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ (ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್) ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ (ಸುಮಾರು 1,07,00,000 ರೂ.) ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

  • ಆರ್‌ಟಿಜಿಎಸ್‌, ನೆಫ್ಟ್ ಮೂಲಕ ಹಣ ವರ್ಗಾವಣೆ ಮೇಲೆ ಯಾವುದೇ ಶುಲ್ಕವಿಲ್ಲ

    ಆರ್‌ಟಿಜಿಎಸ್‌, ನೆಫ್ಟ್ ಮೂಲಕ ಹಣ ವರ್ಗಾವಣೆ ಮೇಲೆ ಯಾವುದೇ ಶುಲ್ಕವಿಲ್ಲ

    – ಆರ್‌ಬಿಐ ಹೊಸ ನಿಯಮ ಇಂದಿನಿಂದ ಜಾರಿ

    ಮುಂಬೈ: ಆನ್‍ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ಬ್ಯಾಂಕುಗಳು ವಿಧಿಸುವ ಶುಲ್ಕ ಇಂದಿನಿಂದ ಅಗ್ಗ ವಾಗಲಿದೆ. ರಿಯಲ್-ಟೈಮ್ ಗ್ರೋಸ್ ಸೆಟಲ್ಮೆಂಟ್(ಆರ್‌ಟಿಜಿಎಸ್‌) ಹಾಗೂ ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್ (ನೆಫ್ಟ್) ಮೂಲಕ ಹಣ ವರ್ಗಾವಣೆಗೆ ಯಾವುದೇ ಶುಲ್ಕವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.

    ಈ ಕ್ರಮ ಇಂದಿನಿಂದ ಜಾರಿಗೆ ಬರುತ್ತಿದ್ದು, ಇಂದಿನಿಂದಲೇ ಆರ್‍ಬಿಐ ಅಡಿಯಲ್ಲಿ ಬರುವಾ ಎಲ್ಲಾ ಬ್ಯಾಂಕ್‍ಗಳು ಇದನ್ನು ಅನುಸರಿಸಬೇಕೆಂದು ಸೂಚಿಸಲಾಗಿದೆ. 2 ಲಕ್ಷ ರೂ. ವರೆಗಿನ ಹಣ ವರ್ಗಾವಣೆಗೆ ನೆಫ್ಟ್ ಬಳಸಲಾಗುತ್ತದೆ.

    ಅಲ್ಲದೆ ಭಾರಿ ಮೊತ್ತದ ಹಣವನ್ನು ವರ್ಗಾವಣೆ ಮಾಡಲು ಆರ್‌ಟಿಜಿಎಸ್‌ ಅನ್ನು ಗ್ರಾಹಕರು ಬಳಸುತ್ತಾರೆ. ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‍ಬಿಐ, ನೆಫ್ಟ್ ಗೆ 1 ರಿಂದ 5 ರೂ. ಹಾಗೂ ಆರ್‌ಟಿಜಿಎಸ್‌ ಗೆ 5ರಿಂದ 50 ರೂಪಾಯಿವರೆಗೆ ಶುಲ್ಕ ವಿಧಿಸುತ್ತಿತ್ತು.

    ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು, ಆರ್‌ಟಿಜಿಎಸ್‌ ಮೂಲಕ ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಬ್ಯಾಂಕುಗಳಿಗೆ ವಿಧಿಸುವ ಸಂಸ್ಕರಣಾ ಶುಲ್ಕಗಳು ಮತ್ತು ಸಮಯ-ಬದಲಾಗುವ ಶುಲ್ಕಗಳನ್ನು ತೆಗೆದುಹಾಕಲು ನಿರ್ಧರಿಸಿದೆ.

    ಆನ್‍ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ಆರ್‌ಬಿಐ ಇಂತಿಷ್ಟು ಶುಲ್ಕ ಎಂದು ವಿಧಿಸುತ್ತಿತ್ತು. ಆ ಶುಲ್ಕ ಹಾಗೂ ಅದರ ಮೇಲೆ ಒಂದಿಷ್ಟು ಲೆವಿ ವಿಧಿಸಿ ಬಳಿಕ ಬ್ಯಾಂಕುಗಳು ಗ್ರಾಹಕರಿಗೆ ಹಣವನ್ನು ವರ್ಗಾಯಿಸುತ್ತಿದ್ದವು.

    ಆರ್‌ಬಿಐ ಐಬಿಎ ಮುಖ್ಯ ಕಾರ್ಯನಿರ್ವಾಹಕ ವಿ.ಜಿ ಕಣ್ಣನ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ತೆರಿಗೆಗಳನ್ನು ಪರಿಶೀಲಿಸುವ ಬೇಡಿಕೆಗಳ ಮಧ್ಯೆ ಬ್ಯಾಂಕುಗಳು ಎಟಿಎಂ ಶುಲ್ಕಗಳ ಬಗ್ಗೆ ಪರಿಶೀಲಿಸಲು ಸೂಚಿಸಲಾಗಿದೆ.

    ಎಟಿಎಂ ಬಳಕೆ ಗಮನಾರ್ಹವಾಗಿ ಬೆಳೆಯುತ್ತಿದ್ದು, ಈಗಾಗಲೇ ಎಟಿಎಂ ಚಾರ್ಜ್ ಮತ್ತು ಶುಲ್ಕಗಳನ್ನು ಬದಲಾಯಿಸುವಂತೆ ಗ್ರಾಹಕರು ಆಗ್ರಹಿಸುತ್ತಿದ್ದಾರೆ.

  • ಫಲಾನುಭವಿಗಳ ಹಣವನ್ನು ತಂದೆ-ಸಹೋದರನ ಖಾತೆಗೆ ಹಾಕಿದ ಡಾಟಾ ಎಂಟ್ರಿ ಆಪರೇಟರ್!

    ಫಲಾನುಭವಿಗಳ ಹಣವನ್ನು ತಂದೆ-ಸಹೋದರನ ಖಾತೆಗೆ ಹಾಕಿದ ಡಾಟಾ ಎಂಟ್ರಿ ಆಪರೇಟರ್!

    ಮೈಸೂರು: ಜನರಿಗೆ ನೀಡಬೇಕಿದ್ದ ಸ್ವಚ್ಛಭಾರತ್ ಮಿಷನ್ ಯೋಜನೆಯ ಹಣವನ್ನು ಡಾಟಾ ಎಂಟ್ರಿ ಆಪರೇಟರ್, ತನ್ನ ತಂದೆ ಹಾಗೂ ಸಹೋದರನ ಖಾತೆಗೆ ಜಮಾ ಮಾಡಿರುವ ಪ್ರಕರಣ ಮೈಸೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ನಂಜನಗೂಡು ತಾಲೂಕಿನ ವರುಣಾ ಕ್ಷೇತ್ರ ವ್ಯಾಪ್ತಿಯ ಹೊರಳವಾಡಿ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ನಡೆದಿದೆ. ಗ್ರಾಮ ಪಂಚಾಯಿತಿಯ ಡಾಟಾ ಎಂಟ್ರಿ ಆಪರೇಟರ್ ಚಾಂದಿನಿ, ಫಲಾನುಭವಿಗಳಿಗೆ ತಲುಪಬೇಕಾದ ಪ್ರೋತ್ಸಾಹ ಧನವನ್ನು ತನ್ನ ತಂದೆ ಹಾಗೂ ಸಹೋದರನ ಖಾತೆಗೆ ವರ್ಗಾಯಿಸಿದ್ದಾರೆ. ಚಾಂದಿನಿ ಇದುವರೆಗೂ ತನ್ನ ತಂದೆ ಖಾತೆಗೆ 27 ಸಾವಿರ ಹಾಗೂ ಸಹೋದರನ ಖಾತೆಗೆ 36 ಸಾವಿರ ಹಣ ವರ್ಗಾವಣೆ ಮಾಡಿದ್ದಾರೆ.

    ಈ ಸಂಬಂಧ ಡಾಟಾ ಆಪರೇಟರ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಟ್ಟು 63 ಸಾವಿರ ಹಣ ದುರುಪಯೋಗ ಆಗಿರುವುದು ಬೆಳಕಿಗೆ ಬಂದಿದೆ.