Tag: ಹಣ ವಂಚನೆ

  • ಬೆಂಗಳೂರಲ್ಲಿ ಕಿಟ್ಟಿ ಪಾರ್ಟಿ ಆಯೋಜಿಸಿ 50 ಕೋಟಿ ವಂಚನೆ ಕೇಸ್ – ಲಾಯರ್ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದ ಮತ್ತೋರ್ವ ಅರೆಸ್ಟ್

    ಬೆಂಗಳೂರಲ್ಲಿ ಕಿಟ್ಟಿ ಪಾರ್ಟಿ ಆಯೋಜಿಸಿ 50 ಕೋಟಿ ವಂಚನೆ ಕೇಸ್ – ಲಾಯರ್ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದ ಮತ್ತೋರ್ವ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಕಿಟ್ಟಿ ಪಾರ್ಟಿ (Kitty Party) ಆಯೋಜಿಸಿ 50 ಕೋಟಿ ಹಣ ವಂಚನೆ ಪ್ರಕರಣ ಸಂಬಂಧ ಮತ್ತೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ವಂಚಕಿ ಸವಿತಾಳ ಪರ ಲಾಯರ್ ಎಂದು ಎಂಟ್ರಿ ಕೊಟ್ಟು ಎಸಿಪಿ, ಸಬ್ ಇನ್ಸ್ಪೆಕ್ಟರ್‌ಗೆ ಅವಾಜ್ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ನಕಲಿ ವಕೀಲ ಯೋಗಾನಂದನನ್ನು (52) ಬಂಧಿಸಲಾಗಿದೆ. ಈತ ವಂಚಕಿ ಸವಿತಾಳನ್ನು ಹೇಗೆ ಅರೆಸ್ಟ್ ಮಾಡಿದ್ರಿ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದ. ಅಲ್ಲದೇ ಆರೋಪಿ ಸವಿತಾ ಬಳಿಯಿದ್ದ ಮನೆ ಕೀ ಹೊರಗೆ ತೆಗೆದುಕೊಂಡು ಹೋಗ್ತಿದ್ದ ವೇಳೆ ಆರೋಪಿ ಕೀ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಅಡ್ಡ ಹಾಕಿದ್ದ ಪೊಲೀಸರಿಗೆ ಅದ್ಹೇಗೆ ಕೀ ಕಿತ್ತುಕೊಳ್ತೀರೋ ನೋಡ್ತೀನಿ ಎಂದು ನಕಲಿ ವಕೀಲ ಯೋಗಾನಂದ ಅವಾಜ್ ಹಾಕಿದ್ದ. ಇದನ್ನೂ ಓದಿ: ಸಿಎಂ, ಡಿಸಿಎಂ ಹೆಸ್ರಲ್ಲಿ ಕೋಟಿ ಕೋಟಿ ವಂಚನೆ – 20ಕ್ಕೂ ಹೆಚ್ಚು ಮಂದಿಗೆ ಪಂಗನಾಮ ಹಾಕಿದ್ದ ಮಹಿಳೆ ಅರೆಸ್ಟ್‌

    ಈತನ ರಂಪಾಟವನ್ನ ಗಮನಿಸಿದ್ದ ಕೆಪಿ ಅಗ್ರಹಾರ ಇನ್ಸ್ಪೆಕ್ಟರ್ ಗೋವಿಂದರಾಜ್ ಈತನ ಕೇಸ್ ಹಿಸ್ಟರಿ ತೆಗೆದಾಗ ಹಳೆ ಕೇಸ್‌ನಲ್ಲಿ ಮುದುಕಿಗೆ ಯೋಗಾನಂದ್ ಹೊಡೆದಿದ್ದರ ಮಾಹಿತಿ ಸಿಕ್ಕಿದೆ. ಆಗ ಬಸವೇಶ್ವರ ನಗರ ಎಸ್‌ಐ ಆಗಿದ್ದ ಗೋವಿಂದರಾಜ್ ಈತನನ್ನು ಬಂಧಿಸಿದ್ದರು. ಆಗ ನಾನು ಪ್ರೊಫೆಸರ್ ಎಂದು ಹೇಳಿಕೊಂಡಿದ್ದ ಯೋಗಾನಂದ್‌ನನ್ನು ಈಗ ಮತ್ತೆ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ‌ ಪ್ರಕರಣ | ಆರ್‌ಸಿಬಿ A1, ಡಿಎನ್‌ಎ A2 – ಮ್ಯಾಜಿಸ್ಟ್ರೇಟ್ ತನಿಖಾ ವರದಿ

    ಪ್ರಕರಣ ಏನು?
    20ಕ್ಕೂ ಹೆಚ್ಚು ಮಹಿಳೆಯರಿಗೆ 50 ಕೋಟಿ ರೂ.ಗಿಂತಲೂ ಹೆಚ್ಚು ವಂಚನೆ ಮಾಡಿದ್ದ ಆರೋಪದಡಿ ಬಸವೇಶ್ವರನಗರ ಪೊಲೀಸರು ಸವಿತಾ ಎಂಬಾಕೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಭೂಕಂಪನ ಅನುಭವ – ಬೆಚ್ಚಿಬಿದ್ದ ಜನ

    ಕಿಟ್ಟಿ ಪಾರ್ಟಿ ಹೆಸರಲ್ಲಿ ಶ್ರೀಮಂತ ಮಹಿಳೆಯರನ್ನ ಪರಿಚಯ ಮಾಡಿಕೊಂಡಿದ್ದ ಸವಿತಾ ತನಗೆ ಹಲವು ರಾಜಕಾರಣಿಗಳು ಗೊತ್ತೆಂದು ಹೇಳಿಕೊಳ್ಳುತ್ತಿದ್ದಳು. ಸಿಎಂ, ಡಿಸಿಎಂ, ಎಂಬಿ ಪಾಟಿಲ್ ಹೆಸರೇಳಿ ಗಾಳ ಹಾಕ್ತಿದ್ದ ಸವಿತಾ, ನಿಧಾನವಾಗಿ ಹೂಡಿಕೆ ನೆಪದಲ್ಲಿ ಹಣ ಪಡೆದುಕೊಳ್ತಿದ್ದಳು. ಇದನ್ನೂ ಓದಿ: ಮೋದಿ ನಿವೃತ್ತಿಗೆ‌ ಮೋಹನ್ ಭಾಗವತ್ ಸೂಚನೆ? – ವಿಪಕ್ಷಗಳಿಂದ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆ

    ಅಮೆರಿಕದಿಂದ ಕಮ್ಮಿ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವಂಚನೆ ಮಾಡಿದ್ದಾಳೆ. ಒಬ್ಬರಿಂದ ತಲಾ 50 ಲಕ್ಷದಿಂದ ಎರಡೂವರೆ ಕೋಟಿ ಹಣ ಪಡೆದು ವಾಪಸ್ ಹಣ ನೀಡದೇ ನೆಪ ಹೇಳಿ ತಪ್ಪಿಸಿಕೊಳ್ತಿದ್ದಳು. ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ ಕೇಸ್ ದಾಖಲಾಗಿ ಬಂಧನವಾಗಿ ಬೇಲ್ ಮೇಲೆ ಹೊರಗಿದ್ದ ಸವಿತಾ ಮತ್ತದೇ ಚಾಳಿ ಮುಂದುವರೆಸಿ ಈಗ ಬಸವೇಶ್ವರ ನಗರ ಪೊಲೀಸರ ಅತಿಥಿ ಆಗಿದ್ದಾಳೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ತನಿಖಾ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿ ಕುನ್ಹಾ

  • ಮುಂಬೈ ಪೊಲೀಸರ ಹೆಸರಲ್ಲಿ ಚಿತ್ರದುರ್ಗದ ವೈದ್ಯನಿಗೆ ಕೋಟ್ಯಂತರ ರೂಪಾಯಿ ವಂಚನೆ: ಇಬ್ಬರ ಬಂಧನ

    ಮುಂಬೈ ಪೊಲೀಸರ ಹೆಸರಲ್ಲಿ ಚಿತ್ರದುರ್ಗದ ವೈದ್ಯನಿಗೆ ಕೋಟ್ಯಂತರ ರೂಪಾಯಿ ವಂಚನೆ: ಇಬ್ಬರ ಬಂಧನ

    ಚಿತ್ರದುರ್ಗ: ಮುಂಬೈ ಪೊಲೀಸರೆಂದು ನಂಬಿಸಿ ಹಿರಿಯ ವೈದ್ಯರೊಬ್ಬರಿಂದ 1.27 ಕೋಟಿ ರೂ. ದೋಚಿದ್ದ ಸೈಬರ್ ವಂಚಕರನ್ನು ಬಂಧಿಸುವಲ್ಲಿ ಚಿತ್ರದುರ್ಗದ (Chitradurga) ಸೆನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಚಿತ್ರದುರ್ಗದ ಹಿರಿಯ ವೈದ್ಯ ಶ್ರೀನಿವಾಸ್ ಶೆಟ್ಟಿಗೆ ಆಗಸ್ಟ್ 23 ರಂದು ವಾಟ್ಸಪ್ ಹಾಗೂ ನಾರ್ಮಲ್ ಕರೆ ಮಾಡಿದ್ದ ವಂಚಕರು, ನಾವು ಟಿಆರ್‌ಎಐ & ಮುಂಬೈ(Mumbai) ಪೊಲೀಸರೆಂದು ಹೇಳಿದ್ದು, ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ಅಲ್ಲದೇ ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ನಂಬಿಸಿ ತಮ್ಮ ಖಾತೆಗೆ 1.27 ಕೋಟಿ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ – ಟ್ರಾಫಿಕ್ ಸಿಗ್ನಲ್‌ಗಳ ಸಂಖ್ಯೆಯಲ್ಲಿ ಏರಿಕೆ

    ಇದರಿಂದಾಗಿ ಕಂಗಾಲಾದ ವೈದ್ಯ ಶ್ರೀನಿವಾಸ್ ಶೆಟ್ಟಿಯವರು ಆಗಸ್ಟ್ 26 ರಂದು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ವಂಚಕರ ಜಾಡನ್ನು ಬೆನ್ನತ್ತಿದ್ದ ಪೊಲೀಸರು, ಅಸ್ಸಾಂ ಮೂಲದ ಆರೋಪಿ ಪವನ್ ಕುಮಾರ್, ಜಾಕೀರ್ ಬೋರಾ ಎಂಬ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ವಂಚಿತರಿಂದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದ 16.89 ಲಕ್ಷ ರೂ. ಫ್ರೀಜ್ ಮಾಡಲಾಗಿದೆ. ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಈ ಸಂಬಂಧ ಚಿತ್ರದುರ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು – ಪ್ರಕರಣ ಭೇದಿಸಿದ ಪೊಲೀಸರಿಗೆ ಹಿರಿಯ ಅಧಿಕಾರಿಗಳ ಮೆಚ್ಚುಗೆ

  • ತಪ್ಪು ಮಾಡಿದವ್ರಿಗೆ ಶಿಕ್ಷೆನೇ ಅಂತ್ಯ ಅಲ್ಲ: ಎಸ್ ನಾರಾಯಣ್

    ತಪ್ಪು ಮಾಡಿದವ್ರಿಗೆ ಶಿಕ್ಷೆನೇ ಅಂತ್ಯ ಅಲ್ಲ: ಎಸ್ ನಾರಾಯಣ್

    ಬೆಂಗಳೂರು: ತಪ್ಪು ಮಾಡಿದವರಿಗೆ ಶಿಕ್ಷೆನೇ ಅಂತ್ಯವಲ್ಲ ಎಂದು ಕನ್ನಡದ ಖ್ಯಾತ ನಟ ನಿರ್ದೇಶಕ ಎಸ್ ನಾರಾಯಣ್ ಹೇಳಿದರು.

    ಹಣ ವಂಚನೆ ಪ್ರಕರಣದ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ವಂಚನೆ ಸಂಬಂಧ ಕಳೆದ ಎರಡು ವರ್ಷಗಳ ಹಿಂದೆ ದೂರು ಕೊಡಲಾಗಿತ್ತು. ಆರೋಪಿತರು ನ್ಯಾಯಾಲಯದಿಂದ ಜಾಮೀನು ಪಡೆದು ಓಡಾಟ ಆರಂಭಿಸಿದರು. ಮೋಸ ಮಾಡಿದವರ ಜೊತೆ ಕೂತು ಮಾತನಾಡಿದಾಗ ಮೋಸ ಮಾಡಿದ ಹಣ ಕೊಡಲು ಒಪ್ಪಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ

    BRIBE

    ಈಗಾಗಲೇ ಶೇಕಡಾ 25 ಲಕ್ಷ ರೂ. ಹಣವನ್ನು ಕೊಟ್ಟಿದ್ದಾರೆ. ಉಳಿದ ಹಣ ಕೊಡುತ್ತಿದ್ದಾರೆ. ವಂಚಕರು ಇನ್ನುಳಿದ ಹಣವನ್ನು ಕೂಡ ಕೊಡುವ ವಿಶ್ವಾಸವಿದೆ. ಅವರೆಲ್ಲರೂ ನಿರಂತರ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆನೇ ಅಂತ್ಯ ಅಲ್ಲ. ತಪ್ಪು ಆಗಿರುವುದನ್ನು ತಿದ್ದಿಕೊಂಡಾಗ ಅವರಿಗೆ ಒಂದು ಅವಕಾಶ ಕೊಡಬೇಕು. ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

    ಏನಿದು ಪ್ರಕರಣ..?
    ಎಸ್. ನಾರಾಯಣ್ ಸೇರಿದಂತೆ ಅಶೋಕ್ ಸೇಠ್, ಫಾರೂಕ್ ಪಾಷಾ, ಅನಂತ್ ಅಯ್ಯಸ್ವಾಮಿ, ರಾಜೇಂದ್ರ ಪ್ರಸಾದ್ ಸೇರಿ ಐವರು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ಸಿನಿಮಾದಲ್ಲಿ ಹಿರಿಯ ನಟ ಅಭಿಜಿತ್ ಕೂಡ ನಟಿಸಿದ್ದು, ಉಳಿದ ನಿರ್ಮಾಪಕರನ್ನು ನಾರಾಯಣ್ ಅವರಿಗೆ ಪರಿಚಯ ಮಾಡಿಸಿದ್ದರು. ಹಣವಿಲ್ಲದೆ ಸಿನಿಮಾ ನಿಂತ ಸಮಯದಲ್ಲಿ ನಾರಾಯಣ್ ಅವರು ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ ಒಂದು ಸೈಟ್ ಮೇಲೆ ಫಾರೂಕ್‍ಗೆ ಸಾಲ ಕೊಡಿಸಿದ್ದರು. ಇದನ್ನೂ ಓದಿ: 18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

    ನಾರಾಯಣ್ ಅವರು ಮಗನ ಹೆಸರಲ್ಲಿ 1ಕೋಟಿ 56 ಲಕ್ಷ ಲೋನ್‍ಗೆ ದಾಖಲೆ ನೀಡಿ ಬಂದ ಹಣವನ್ನು ಸಿನಿಮಾಗೆ ಹಾಕಿದ್ದರು. ಆದರೆ ಫಾರೂಕ್, ನಾರಾಯಣ್ ಅವರಿಗೆ ತಿಳಿಯದಂತೆ ಎರಡು ಕೋಟಿ ಐದು ಲಕ್ಷ ಲೋನ್ ಮಂಜೂರು ಮಾಡಿಸಿ ವಂಚನೆ ಮಾಡಿದ್ದನು. ಜೊತೆಗೆ ಬಿಡಿಎಗೆ ಸಂಬಂಧಿಸಿದ ಸೈಟ್ ಅನ್ನು ನಕಲಿ ದಾಖಲೆ ಸೃಷ್ಟಿಸಿ ಹೆಚ್ಚಿನ ಲೋನ್ ಪಡೆದು ನಿವೇಶನ ಮಾಲೀಕ ಬೈಯ್ಯಣ್ಣ ಎಂಬವರ ಅಕೌಂಟಿಗೆ ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿತ್ತು.

  • ಆನ್‍ಲೈನ್‍ನಲ್ಲಿ ವಂಚನೆ- ನೈಜೀರಿಯಾ ಪ್ರಜೆಯ ಬಂಧನ

    ಆನ್‍ಲೈನ್‍ನಲ್ಲಿ ವಂಚನೆ- ನೈಜೀರಿಯಾ ಪ್ರಜೆಯ ಬಂಧನ

    ವಿಜಯಪುರ: ಆನ್‍ಲೈನ್ ಮೂಲಕ ಲಕ್ಷಾಂತರ ರೂ. ವಂಚನೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿಜಯಪುರದ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ನೈಜೀರಿಯಾ ದೇಶದ ಆಪ್ರೋಚ್ಚಿ ಆಂಥೋನಿ ಬಂಧಿತ ಆರೋಪಿ. ಬಂಧಿತ ಆರೋಪಿ ಆಂಥೋನಿ ಕೋಲ್ಹಾರ ಪಟ್ಟಣದ ನಿವಾಸಿ ಕಿರಣ್ ಕಲ್ಲಪ್ಪ ದೇಸಾಯಿಗೆ ಆನ್‍ಲೈನ್ ಮುಖಾಂತರ ವಂಚಿಸಿದ್ದ. ಆರೋಪಿಯು ಕಿರಣ್‍ಗೆ ಆನ್‍ಲೈನ್ ಮೂಲಕ ಬರೋಬ್ಬರಿ 16 ಲಕ್ಷ ರೂ. ಮೋಸ ಮಾಡಿದ್ದನು. ಇದನ್ನೂ ಓದಿ:  ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಈತ ನಕಲಿ ಔಷಧ ಹೆಸರಿನಲ್ಲಿ ವಂಚಿಸಿದ್ದನು. ಈ ಸಂಬಂಧ ಕಿರಣ್ ದೂರು ದಾಖಲಿಸಿದ್ದಾನೆ. ದೂರಿನ ಅನ್ವಯ ಆರೋಪಿ ಆಂಥೋನಿಯನ್ನು ವಿಜಯಪುರ ನಗರದಲ್ಲಿ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು: ಗೋಪಾಲ್ ರೈ

  • ಸಹಾಯ ಕೇಳಿದ ಮಹಿಳೆಯ ಎಟಿಎಂ ಬದಲಿಸಿ 1.90ಲಕ್ಷ ರೂ. ವಂಚನೆ!

    ಸಹಾಯ ಕೇಳಿದ ಮಹಿಳೆಯ ಎಟಿಎಂ ಬದಲಿಸಿ 1.90ಲಕ್ಷ ರೂ. ವಂಚನೆ!

    ಮಡಿಕೇರಿ: ಎಟಿಎಂನಲ್ಲಿ ಹಣ ತಗೆದುಕೊಡುವಂತೆ ಸಹಾಯ ಕೇಳಿದ ಮಹಿಳೆಯ ಎಟಿಎಂ ಕಾರ್ಡ್ ಬದಲಿಸಿ 1.90 ಲಕ್ಷ ರೂ. ವಂಚನೆ ಮಾಡಿದ ಘಟನೆ ಮಡಿಕೇರಿ ತಾಲೂಕು ಬಿಳಿಗೇರಿಯಲ್ಲಿ ನಡೆದಿದೆ.

    ಲೋಕೇಶ್ ಹಣ ದೋಚಿ ಪರಾರಿಯಾದ ಆರೋಪಿ. ಈತ ಮಡಿಕೇರಿ ತಾಲೂಕಿನ ಬಿಳಿಗೇರಿ ನಿವಾಸಿಯಾಗಿದ್ದು, ಕಾರ್ಡ್ ಬದಲಿಸಿ ಹಣ ಡ್ರಾಮಾಡಿದ ತಕ್ಷಣ ಲೋಕೇಶ್ ಪರಾರಿಯಾಗಿದ್ದಾರೆ.

    ಮಹಿಳೆಯೊಬ್ಬರು ತಮ್ಮ ಎಟಿಎಂನಿಂದ 10 ಸಾವಿರ ಹಣ ತೆಗೆದುಕೊಡುವಂತೆ ಲೋಕೇಶ್ ಬಳಿ ಸಹಾಯ ಕೋರಿದ್ದಾರೆ. ಸಹಾಯ ಮಾಡಲು ಒಪ್ಪಿಕೊಂಡ ಲೋಕೇಶ್ 10 ಸಾವಿರ ಹಣ ತೆಗೆದುಕೊಟ್ಟು, ತನ್ನ ಬಳಿ ಇದ್ದ ಎಟಿಎಂ ಅನ್ನು ಸಂತ್ರಸ್ತ ಮಹಿಳೆಗೆ ನೀಡಿ, ಅವರ ಎಟಿಎಂ ತನ್ನ ಬಳಿ ಇಟ್ಟುಕೊಂಡಿದ್ದಾನೆ. ಖಾತೆಯ ಹಣ ಪರಿಶೀಲನೆ ವೇಳೆ 1.90 ಲಕ್ಷ ರೂ. ವಂಚನೆ ಮಾಡಿರುವುದು ಗೊತ್ತಾಗಿದೆ.

    1.90 ಲಕ್ಷ ರೂ. ವಂಚನೆ ಆರೋಪದ ಕುರಿತು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ವಂಚಕ ಲೋಕೇಶ್ ಪತ್ತೆಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.