Tag: ಹಣ. ಕೋತಿ

  • 1 ಲಕ್ಷ ರೂಪಾಯಿ ಎಗರಿಸಿದ ಕೋತಿ- ಹಣ ಕಳೆದುಕೊಂಡವನಿಗೆ ಸಂಕಟ

    1 ಲಕ್ಷ ರೂಪಾಯಿ ಎಗರಿಸಿದ ಕೋತಿ- ಹಣ ಕಳೆದುಕೊಂಡವನಿಗೆ ಸಂಕಟ

    ಭೋಪಾಲ್: ಐನಾತಿ ಕೋತಿ, ಒಂದು ಲಕ್ಷ ರೂಪಾಯಿ ಹಣವನ್ನು ಎಗರಿಸಿಕೊಂಡು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಕಿರಿದಾದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಆಟೋದಲ್ಲಿ ಸಂಚರಿಸುತ್ತಿದ್ದ. ಸಿಗ್ನಲ್ ಇದ್ದ ಕಾರಣ ಆಟೋದಲ್ಲಿ ತನ್ನ ಪಕ್ಕದಲ್ಲಿ ಕೂತಿದ್ದವರ ಜೊತೆ ಆರಾಮಾಗಿ ಮಾತನಾಡುತ್ತಿದ್ದ. ಕೆಲ ಸಮಯ ಕಳೆದರೂ ಟ್ರಾಫಿಕ್ ಜಾಮ್ ಕ್ಲಿಯರ್ ಆಗಲಿಲ್ಲ. ಹೀಗಾಗಿ ಟ್ರಾಫಿಕ್ ಜಾಮ್‍ಗೆ ಕಾರಣವೇನೆಂದು ತಿಳಿದುಕೊಳ್ಳಲು ಆಟೋದಿಂದ ವ್ಯಕ್ತಿ ತನ್ನ ಇಬ್ಬರು ಸ್ನೇಹಿತರ ಜೊತೆ ಕೆಳಗೆ ಇಳಿದಿದ್ದ. ಅಷ್ಟರಲ್ಲಿ ಅಲ್ಲಿಗೆ ಕೋತಿಯೊಂದು ಎಂಟ್ರಿ ಆಗಿತ್ತು. ನೋಡನೋಡುತ್ತಲೇ ವ್ಯಕ್ತಿಯ ಟವಲ್ ಅನ್ನು ಕಸಿದುಕೊಂಡು ಹಾರಿದೆ. ಇದನ್ನೂ ಓದಿ:  ಹಳ್ಳದ ಕಂಟಕ – ಶಾಲೆಯನ್ನೇ ತೊರೆದ ವಿದ್ಯಾರ್ಥಿಗಳು!

    ಇತ್ತ ಟವೆಲ್‍ನಲ್ಲಿ ದುಡ್ಡು ಇಟ್ಟಿದ್ದ ವ್ಯಕ್ತಿ ಬಾಯಿ ಬಡಿದುಕೊಂಡಿದ್ದಾನೆ. ಕೋತಿಯನ್ನು ಹಿಡಿಯಲು ಮುಂದಾಗಿದ್ದಾನೆ, ಆದರೆ ಈತನ ಕೈ ಕೋತಿ ಸಿಗದೆ ಆಟ ಆಡಿಸಿದೆ. ಮನೆ ಕಾಂಪೌಂಡ್ ಹಾಗೂ ಮರಗಳ ಮೇಲೆ ಕೋತಿ ಕೈಯಲ್ಲಿ ಟವಲ್ ಹಿಡಿದುಕೊಂಡು ಓಡಾಡಿದೆ. ಕೋತಿ ಹೋದ ಕಡೆಯಲ್ಲೆಲ್ಲ ಹಣ ಕಳೆದುಕೊಂಡ ವ್ಯಕ್ತಿ ಹಾಗೂ ಆತನ ಸ್ನೇಹಿತರು ತಿರುಗಿದ್ದಾರೆ. ಇದನ್ನೂ ಓದಿ:  ಅತ್ಯಾಚಾರಕ್ಕೆ ನಿರಾಕರಿಸಿದ ಗೃಹಿಣಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ

    ಕೊನೆಗೆ ಒಂದು ಮರದ ಮೇಲೆ ಹೋಗಿ ಕುಳಿತ ಕೋತಿ ಟವಲ್ ತೆಗೆದು ಅಲ್ಲಾಡಿಸಿದೆ. ಟವೆಲ್ ನಲ್ಲಿದ್ದ ನೋಟುಗಳು ಕೆಳಗೆ ಬೀಳುತ್ತಿದ್ದಂತೆ ಹಣದ ಮಾಲೀಕ ಅವೆಲ್ಲವನ್ನ ಬಾಚಿಕೊಂಡಿದ್ದಾರೆ. ಒಟ್ಟು 56 ಸಾವಿರ ರೂಪಾಯಿಗಳನ್ನು ಮಾಲೀಕ ಹಿಂಪಡೆದಿದ್ದ, ಅಷ್ಟರಲ್ಲಿ ಮತ್ತೆ ಕೋತಿ ಮತ್ತೊಂದೆಡೆಗೆ ಹಾರಿಹೋಗಿದೆ. ಮೊದಲೇ ಕೋತಿ ಹಿಂದೆ ತಿರುಗಿ ತಿರುಗಿ ಸುಸ್ತಾಗಿದ್ದ ಮಾಲೀಕ, ಹಣ ಹೋದರೆ ಹೋಗಲಿ ಸಾಕು ಎಂದು ಸುಮ್ಮನಾಗಿದ್ದಾನೆ. ಒಟ್ಟು 44 ಸಾವಿರ ರೂಪಾಯಿಗಳ ಜೊತೆ ಕೋತಿ ಪರಾರಿಯಾಗಿದೆ. ಇದನ್ನೂ ಓದಿ:  ಶಾರೂಖ್‌ ಪುತ್ರನ ಜೊತೆ ಬಂಧಿತ ಆಕೆ ಯಾರು?