Tag: ಹಣ್ಣುಗಳು

  • ತರಕಾರಿ, ಹಣ್ಣುಗಳ ಬೆಲೆ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ತರಕಾರಿ, ಹಣ್ಣುಗಳ ಬೆಲೆ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಬೆಂಗಳೂರು: ಗ್ಯಾರಂಟಿಗಳ ಖುಷಿ ಬೆನ್ನಲ್ಲೇ ಜನಸಾಮಾನ್ಯನಿಗೆ ದರ ಏರಿಕೆ (Price hike  ಶಾಕ್ ಸಿಕ್ಕಿದೆ. ಒಂದೆಡೆ ವಿದ್ಯುತ್ ಶಾಕ್, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಶಾಕ್. ತರಕಾರಿ ಅಂಗಡಿಗೆ ಹೋದ್ರೂ ಶಾಕ್, ದಿನಸಿ ಅಂಗಡಿಗೆ ಹೋದ್ರೂ ಶಾಕ್ ಮೇಲೆ ಶಾಕ್. ನಿತ್ಯ ಸೇವಿಸುವ ಆಹಾರ ಸಾಮಾಗ್ರಿಗಳುವಸ್ತುಗಳ ದರ ಗಗನಕ್ಕೇರುತ್ತಿದೆ. ತರಕಾರಿ, ಹಣ್ಣುಗಳು (Fruits) ಜೇಬು ಸುಡುತ್ತಿವೆ.

    ಮುಂಗಾರು ಕೈ ಕೊಟ್ಟ ಪರಿಣಾಮ ತರಕಾರಿ (Vegetable) ಬೆಲೆ ಏರಿಕೆ ಮತ್ತೊಂದು ಕಾರಣವಾಗಿದ್ದು, ಇರುವ ಅಲ್ಪಸ್ವಲ್ಪ ತರಕಾರಿಗೆ ಭಾರೀ ಬೇಡಿಕೆ ಬಂದಿದೆ. ಇದರಿಂದಾಗಿ ತರಕಾರಿ ಪ್ರಿಯರು, ಹೋಟೆಲ್‌ ಮಾಲೀಕರು ಹಾಗೂ ಗ್ರಾಹಕರಿಗೆ ಬೆಲೆ ಬಿಸಿ ತಟ್ಟಿದ್ದು, ಜೇಬಿಗೆ ಕತ್ತರಿ ಬೀಳುತ್ತಿದೆ. ಇದನ್ನೂ ಓದಿ: ಮದ್ಯ ಪ್ರಿಯರಿಗೆ ಶಾಕ್ – ಬಿಯರ್ ದರ ಏರಿಕೆ

    ತರಕಾರಿ ದರ ಎಷ್ಟು ಏರಿಕೆಯಾಗಿದೆ?
    ಟೊಮೊಟೋ 30 – 65 ರೂ.
    ಬೀನ್ಸ್ 60 – 110 ರೂ.
    ಕ್ಯಾರೆಟ್ 50 – 90 ರೂ.
    ನವಿಲುಕೋಸು 35 – 70 ರೂ.
    ಮೂಲಂಗಿ 25 – 49 ರೂ.
    ನುಗ್ಗೆಕಾಯಿ 80 – 100 ರೂ.
    ಬೀಟ್‍ರೂಟ್ 35 – 50 ರೂ.
    ಹಸಿಮೆಣಸಿನಕಾಯಿ 95 – 115 ರೂ.
    ಬೆಂಡೆಕಾಯಿ 30 – 54 ರೂ.
    ಬೆಳ್ಳುಳ್ಳಿ 145 – 170 ರೂ.
    ಶುಂಠಿ 120 – 200 ರೂ.
    ಕರಿಬೇವು 50- 80 ರೂ.
    ಕೊತ್ತಂಬರಿ 10 – 45 ರೂ. (ಕಟ್ಟು)

     

    ಹಣ್ಣುಗಳು ಹಳೆಯ ದರ – ಹೊಸ ದರ
    ಸೇಬು 180 – 288 ರೂ.
    ಮೂಸಂಬಿ 70 – 114 ರೂ.
    ದಾಳಿಂಬೆ 180 – 278 ರೂ.
    ಅನಾನಸ್ 40 – 60 ರೂ.
    ಸಪೋಟ 80 – 107 ರೂ.
    ಏಲಕ್ಕಿ ಬಾಳೆಹಣ್ಣು 60 – 74 ರೂ.

  • ನಿಮಗೆ ಇಷ್ಟವಾದ ಹಣ್ಣುಗಳಿಂದ ಮಾಡಿ ಸವಿಯಿರಿ ‘ಫ್ರೂಟ್ ಕಸ್ಟರ್ಡ್’

    ನಿಮಗೆ ಇಷ್ಟವಾದ ಹಣ್ಣುಗಳಿಂದ ಮಾಡಿ ಸವಿಯಿರಿ ‘ಫ್ರೂಟ್ ಕಸ್ಟರ್ಡ್’

    ಹಾಲಿನಿಂದ ಮಾಡಿದ ಯಾವುದೇ ರೆಸಿಪಿ ಎಲ್ಲ ವೆಜ್ ಮತ್ತು ನಾನ್‍ವೆಜ್ ಪ್ರಿಯರಿಗೂ ತುಂಬಾ ಇಷ್ಟ. ಹಾಲಿನಿಂದ ಮಾಡಿದ ಪ್ರತಿಯೊಂದು ಸಿಹಿ ಪದಾರ್ಥಾಗಳು ಸವಿಯಲು ಚೆನ್ನಾಗಿ ಇರುತ್ತೆ. ಅದಕ್ಕೆ ಇಂದು ನಿಮಗಾಗಿ ‘ಫ್ರೂಟ್ ಕಸ್ಟರ್ಡ್’ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಇದು ಆರೋಗ್ಯಕ್ಕೆ ತುಂಬ ಒಳ್ಳೆಯದು ಸವಿಯಲು ತುಂಬಾ ಚೆನ್ನಾಗಿರುತ್ತೆ.

    ಬೇಕಾಗಿರುವ ಪದಾರ್ಥಗಳು:
    * ಹಾಲು – ಅರ್ಧ ಲೀಟರ್
    * ಕಸ್ಟರ್ಡ್ ಪೌಡರ್ – 2 ಟೀಸ್ಪೂನ್
    * ಸಕ್ಕರೆ – 5 ಟೀಸ್ಪೂನ್
    * ಕಟ್ ಮಾಡಿದ ಕಲ್ಲಂಗಡಿ ಹಣ್ಣು – ಅರ್ಧ ಕಪ್


    * ಕಟ್ ಮಾಡಿದ ಪಪ್ಪಾಯ ಸ್ವಲ್ಪ – ಅರ್ಧ ಕಪ್
    * ಕಟ್ ಮಾಡಿದ ಕಪ್ಪು ದ್ರಾಕ್ಷಿ – ಅರ್ಧ ಕಪ್
    * ಸ್ವಲ್ಪ ದಾಳಿಂಬೆ – ಅರ್ಧ ಕಪ್
    * ಕಟ್ ಮಾಡಿದ ಬಾಳೆಹಣ್ಣು – ಅರ್ಧ ಕಪ್
    * ಕಟ್ ಮಾಡಿದ ಸೇಬು – ಅರ್ಧ ಕಪ್

    ಮಾಡುವ ವಿಧಾನ:
    * 1 ಕಪ್ ಹಾಲಿಗೆ ಎರಡು ಸ್ಪೂನ್ ಕಸ್ಟರ್ಡ್ ಪೌಡರ್ ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿಕೊಳ್ಳಬೇಕು.
    * ಉಳಿದ ಹಾಲನ್ನು ಕಾಯಿಸಿ, ಕಾದ ಹಾಲಿಗೆ 5 ಸ್ಪೂನ್ ಸಕ್ಕರೆ ಹಾಕಬೇಕು. ಕೆನೆ ಬರದಂತೆ ಕೈ ಆಡಿಸುತ್ತಲೇ ಇರಿ.
    * ನಂತರ ತಯಾರಿಸಿಕೊಂಡ ಹಾಲು ಮತ್ತು ಕಸ್ಟರ್ಡ್ ಮಿಶ್ರಣವನ್ನು ಮಿಕ್ಸ್ ಮಾಡಿ ಉಕ್ಕಿದ ನಂತರ ಗ್ಯಾಸ್ ಆಫ್ ಮಾಡಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು.


    * ತಣ್ಣಗಾದ ಮಿಶ್ರಣವನ್ನು ಬೇರೆ ಬೌಲ್‍ಗೆ ಸುರಿದು ಕಟ್ ಮಾಡಿದ ಕಲ್ಲಂಗಡಿ, ಬಾಳೆಹಣ್ಣು, ಸೇಬು, ಪಪ್ಪಾಯಿ ಹಾಗೂ ಕಪ್ಪು ದ್ರಾಕ್ಷಿ, ದಾಳಿಂಬೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 2 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು ಟೇಸ್ಟ್ ನೋಡಿ.

    Live Tv
    [brid partner=56869869 player=32851 video=960834 autoplay=true]

  • ವಿವಿಧ ಬಗೆಯ ಹಣ್ಣುಗಳನ್ನು ಬೆಳೆದು ವರ್ಷಕ್ಕೆ 6 ಲಕ್ಷ ಸಂಪಾದಿಸಿ ಇತರರಿಗೆ ಮಾದರಿಯಾದ ಶಿಕ್ಷಕ

    ವಿವಿಧ ಬಗೆಯ ಹಣ್ಣುಗಳನ್ನು ಬೆಳೆದು ವರ್ಷಕ್ಕೆ 6 ಲಕ್ಷ ಸಂಪಾದಿಸಿ ಇತರರಿಗೆ ಮಾದರಿಯಾದ ಶಿಕ್ಷಕ

    ಬೀದರ್: ಬರಡು ಭೂಮಿಯಲ್ಲಿ ಮಿಶ್ರ ಬಂಪರ್ ಹಣ್ಣು ಗಿಡಗಳನ್ನು ಬೆಳೆದು ಬರಗಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಇತರ ರೈತರಿಗೆ ಶಿಕ್ಷಕ ಕಮ್ ರೈತ ಮಾದರಿಯಾಗಿದ್ದಾರೆ. ನಾಲ್ಕು ಎಕರೆ ಭೂಮಿಯಲ್ಲಿ ಹತ್ತಾರು ವಿವಿಧ ಹಣ್ಣುಗಳನ್ನು ಬೆಳೆದು ಪ್ರತಿ ವರ್ಷ 5 ರಿಂದ 6 ಲಕ್ಷ ಸಂಪಾದನೆ ಮಾಡುವ ಮೂಲಕ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.

    ಜಿಲ್ಲೆಯ ಭಾಲ್ಕಿ ತಾಲೂಕಿನ ಅಂಬೆಸಾಂಗವಿ ಗ್ರಾಮದ ಬಳಿಯ ಬರಡು ಭೂಮಿಯನ್ನು ಕೃಷಿ ಭೂಮಿಯಾಗಿ ಮಾಡಿ ಶಿಕ್ಷಕ ಕಮ್ ಮಾದರಿ ರೈತ ಸಾಧನೆ ಮಾಡಿದ್ದಾರೆ. ಭಾಲ್ಕಿ ಪಟ್ಟಣ್ಣದ ಖಾಸಗಿ ಶಾಲೆಯಲ್ಲಿ ಆಂಗ್ಲ ಭಾಷೆಯ ಶಿಕ್ಷಕರಾಗಿರುವ ಗಣಪತಿ ಬೋಚ್ರೆ ಸತತ ಪರಿಶ್ರಮದಿಂದ ಇಂದು ಮಾದರಿ ರೈತರಾಗಿದ್ದಾರೆ. ನಾಲ್ಕು ಎಕರೆ ಬರಡು ಭೂಮಿಯನ್ನು 5 ವರ್ಷಗಳಲ್ಲಿ ಸತತ ಪರಿಶ್ರಮ ಹಾಕಿ ಕೃಷಿ ಭೂಮಿಯನ್ನಾಗಿ ಮಾಡಿಕೊಂಡು ಇಂದು ಪ್ರತಿವರ್ಷ 5 ರಿಂದ 6 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವರ ಈ ಪರಿಶ್ರಮ ನೋಡಿದ ಜಿಲ್ಲೆಯ ರೈತರು ಅವರನ್ನೇ ಅನುಸರಿಸುತ್ತಿದ್ದಾರೆ. ರೈತರು ಸರಿಯಾಗಿ ಪ್ಲಾನ್ ಮಾಡಿ ಕೃಷಿ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಶ್ನೆಯೇ ಬರಲ್ಲ ಎಂದು ಮಾದರಿ ರೈತ ತಿಳಿಸಿದ್ದಾರೆ.

    ಮಾವು, ನೇರಳೆ, ದಾಳಿಂಬೆ, ಮೊಂಸಬಿ, ಕಿತ್ತಳೆ, ಜಾಪಳ್, ಸಪೋಟಾ ಗಿಡಗಳು ಸೇರಿದಂತೆ ಹಲವಾರು ಹಣ್ಣಿನ ಗಡಿಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಇದರಲ್ಲಿ ವಿಶೇಷವಾಗಿ ಮಾವಿನ ಹಣ್ಣನಲ್ಲಿ ನಾಲ್ಕು ವಿಧಗಳ ಗಿಡಗಳನ್ನು ವಿದೇಶದಿಂದ ತಂದು ಹಾಕಿದ್ದಾರೆ. ಸಂರ್ಪೂಣವಾಗಿ ಸಾವಯವ ಗೊಬ್ಬರವನ್ನು ಹಾಕಿ ಹಣ್ಣಿನ ಗಿಡಗಳನ್ನು ಬೆಳೆಸಿದ್ದು ಜಿಲ್ಲೆ, ರಾಜ್ಯ ಸೇರಿದಂತೆ ರಾಷ್ಟ್ರದಲ್ಲೂ ಇವುಗಳಿಗೆ ಬೇಡಿಕೆ ಇದೆ. ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಆತಂಕದಲ್ಲಿ ಕಾಲ ಕಳೆಯುತ್ತಿದ್ದು ಈ ರೀತಿ ಮಾದರಿ ರೈತನ ಸಾಧನೆ ನೋಡಿ ಸ್ಫೂರ್ತಿಯಾಗಿದ್ದಾರೆ. ಸರ್ಕಾರಗಳು ರೈತರಿಗೆ ಯಾವುದೇ ಸಹಕಾರ ನೀಡದೆ ರೈತರಿಗೆ ಶಾಪವಾಗಿದ್ದು, ಈ ರೀತಿಯ ಸಾಧನೆ ಮೂಲಕ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡಿದ್ದಾರೆ.

  • ಪೊಲೀಸರು, ಹಣ್ಣಿನ ವ್ಯಾಪಾರಿಗಳ ನಡುವೆ ಬೀದಿಕಾಳಗ- ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ಹಣ್ಣುಗಳು

    ಪೊಲೀಸರು, ಹಣ್ಣಿನ ವ್ಯಾಪಾರಿಗಳ ನಡುವೆ ಬೀದಿಕಾಳಗ- ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ಹಣ್ಣುಗಳು

    ಶಿವಮೊಗ್ಗ: ರಸ್ತೆ ಬದಿಗಳಲ್ಲಿ ಹಣ್ಣಿನ ಗಾಡಿ ಹಾಕಿಕೊಂಡ ವ್ಯಾಪಾರಿಗಳು ಹಾಗೂ ಪೊಲೀಸರು ನಡುವೆ ನಡೆದ ಬೀದಿಕಾಳಗಕ್ಕೆ ಸಾವಿರಾರು ರೂ.ಗಳ ಹಣ್ಣುಗಳು ಮಣ್ಣುಪಾಲಾಗಿದೆ.

    ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಈ ಘಟನೆ ನಡೆದಿದೆ. ರಸ್ತೆ ಬದಿಗಳಲ್ಲಿ ಹಣ್ಣಿನ ಗಾಡಿ ಹಾಕಿದ್ದಕ್ಕೆ ಅದನ್ನು ತೆರವುಗೊಳಿಸಲು ಸಂಚಾರಿ ಪೊಲೀಸರು ಮುಂದಾಗಿದ್ದರು. ಈ ವೇಳೆ ಪೊಲೀಸರು ಮತ್ತು ಹಣ್ಣು ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದು, ಗಲಾಟೆಯಾಗಿದೆ. ಆದರೆ ಪೊಲೀಸರು ಹಾಗೂ ವ್ಯಾಪಾರಿಗಳ ನೂಕಾಟ ತಳ್ಳಾಟದಲ್ಲಿ ಹಣ್ಣುಗಳು ಮಣ್ಣುಪಾಲಾಗಿದ್ದು, ವ್ಯಾಪಾರಿಗಳು ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.

    ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಹಣ್ಣುಗಳು ವ್ಯರ್ಥವಾಯ್ತಲ್ಲ ಎಂದು ವ್ಯಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಅಮೀರ್ ಅಹ್ಮದ್ ವೃತ್ತದಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವಂತಾಯಿತು.

    ಮಾತಿನ ಚಕಮಕಿಯಿಂದ ಶುರುವಾದ ಗಲಾಟೆ ಪ್ರತಿಭಟನೆ ನಡೆಸುವ ಮಟ್ಟಿಗೆ ಬಂದಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ದೊಡ್ಡಪೇಟೆ ಪೊಲೀಸರು ಗಲಾಟೆಯನ್ನು ನಿಯಂತ್ರಿಸಿದರು.