Tag: ಹಣೆ

  • 175 ಕೋಟೆ ಬೆಲೆ ಬಾಳುವ ವಜ್ರವನ್ನು ಹಣೆಯಲ್ಲಿ ಫಿಕ್ಸ್ ಮಾಡಿದ  ರ‍್ಯಾಪರ್

    175 ಕೋಟೆ ಬೆಲೆ ಬಾಳುವ ವಜ್ರವನ್ನು ಹಣೆಯಲ್ಲಿ ಫಿಕ್ಸ್ ಮಾಡಿದ ರ‍್ಯಾಪರ್

    ವಾಷಿಂಗ್ಟನ್: 175 ಕೋಟಿ ರೂಪಾಯಿ ಬೆಲೆಬಾಳುವ ವಜ್ರವನ್ನು ಅಮೆರಿಕ  ರ‍್ಯಾಪರ್ ಹಣೆಯಲ್ಲಿ ಫಿಕ್ಸ್ ಮಾಡಿಸಿಕೊಂಡಿದ್ದಾನೆ

    ಅಮೆರಿಕಾದ ಪ್ರಸಿದ್ಧ  ರ‍್ಯಾಪರ್ ಸೈಮರ್ ಬೇಸಿಲ್ ವುಡ್ಸ್ ಈ ರೀತಿಯ ವಿಚಿತ್ರ ಕೆಲಸವನ್ನು ಮಾಡಿದ್ದಾನೆ. ಮಹಿಳೆಯರು ಸಿಂಧೂರವನ್ನು ಹಾಕುವಂತೆ ಈತ ತನ್ನ ಹಣೆಯಲ್ಲಿ 175 ಕೋಟಿ ಬೆಲೆಬಾಳುವ ವಜ್ರವನ್ನು ಫಿಕ್ಸ್ ಮಾಡಿಕೊಂಡು ಎಲ್ಲರ ಗಮನವನ್ನು ಸೆಳೆಯುತ್ತಿದ್ದಾನೆ.

    ಹಣೆಯ ಮೇಲೆ ವಜ್ರವನ್ನು ಜೋಡಿಸಿಕೊಳ್ಳಬೇಕು ಎಂದು ಹಲವು ವರ್ಷಗಳ ಹಿಂದೆಯೇ ಅಂದುಕೊಂಡಿದ್ದೆ. ಇದಕ್ಕಾಗಿ ಮೂರು ವರ್ಷಗಳಿಂದ ಹಣವನ್ನು ಕೂಡಿಟ್ಟಿದ್ದೆ. ಒಂದು ವಜ್ರಕ್ಕೆ ಇಷ್ಟೊಂದು ಬೆಲೆ ಇರುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ದುಬಾರಿಯಾದ ಕಾರುಗಳಿಗೆ ಇಷ್ಟೊಂದು ಬೆಲೆ ತೆತ್ತಿರಲಿಲ್ಲ. ಇದೇ ಕೊನೆ ಮುಂದೆ ಇಂತಹ ಸಾಹಸಗಳಿಗೆ ಕೈ ಹಾಕುವುದಿಲ್ಲ ಎಂದು ಸ್ವತಃ ರ‍್ಯಾಪರ್ ಸೈಮರ್ ಬೇಸಿಲ್ ವುಡ್ಸ್ ಹೇಳಿದ್ದಾನೆ.

    ಹಣೆ ಮತ್ತು ಕೈಯಲ್ಲಿ ವಜ್ರದ ಆಭರಣಗಳನ್ನು ತೊಟ್ಟಿರುವ ರ‍್ಯಾಪರ್ ಸೈಮರ್ ಬೇಸಿಲ್ ವುಡ್ಸ್ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ಹರಿದಾಡುತ್ತಿದೆ.

  • ಹೆಲ್ಮೆಟ್ ಹಾಕಿಲ್ಲವೆಂದು ಸವಾರನ ಹಣೆಗೆ ಕೀಯಿಂದ ಇರಿದೇ ಬಿಟ್ಟ ಪೊಲೀಸ್!

    ಹೆಲ್ಮೆಟ್ ಹಾಕಿಲ್ಲವೆಂದು ಸವಾರನ ಹಣೆಗೆ ಕೀಯಿಂದ ಇರಿದೇ ಬಿಟ್ಟ ಪೊಲೀಸ್!

    ಡೆಹ್ರಾಡೂನ್: ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದ್ದು, ಹಾಕದವರಿಗೆ ದಂಡ ವಿಧಿಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ ಹಾಗೆ ದಂಡ ಕಟ್ಟಿಯೂ ಇದ್ದೇವೆ. ಆದರೆ ಉತ್ತರಾಖಂಡ್ ನಲ್ಲಿ ಹೆಲ್ಮೆಟ್ ಹಾಕದ ಯುವಕನೊಬ್ಬನಿಗೆ ವಿಚಿತ್ರ ಶಿಕ್ಷೆ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

    ಹೌದು. ಉತ್ತರಾಖಂಡ್‍ನ ಉಧಮ್ ಸಿಂಗ್ ಜಿಲ್ಲೆಯ ರುದ್ರಾಪುರದಲ್ಲಿ ಪೊಲೀಸರು ಯುವಕನ ಹಣೆಗೆ ಕೀಯಿಂದ ತಿವಿದಿದ್ದಾರೆ. ಪರಿಣಾಮ ಯುವಕನ ಹಣೆಗೆ ಗಂಭೀರ ಗಾಯಗಳಾಗಿದ್ದು, ಘಟನೆ ಸಂಬಂಧ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

    ರುದ್ರಾಪುರ ಪ್ರದೇಶದಲ್ಲಿ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಟ್ರಾಫಿಕ್ ನಿಯಮ ಪಾಲಿಸದ ಯುವಕನನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸ್ ಹಾಗೂ ಯುವಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದ ತಾರಕ್ಕೇರುತ್ತಿದ್ದಂತೆಯೇ ಮತ್ತೊಬ್ಬ ಪೊಲೀಸ್ ಯುವಕನ ಕೈಯಿಂದ ಬೈಕ್ ಕೀ ಎಳೆದುಕೊಂಡು ಆತನ ಹಣೆಗೆ ಜೋರಾಗಿ ತಿವಿದಿದ್ದಾನೆ.

    ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯುವಕನಿಗೆ ತಿವಿದ ಪರಿಣಾಮ ಹಣೆಯಿಂದ ರಕ್ತ ಸುರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡು ರುದ್ರಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೆ ಕಲ್ಲುತೂರಾಟ ಕೂಡ ನಡೆಸಿದ್ದಾರೆ.

    ಪರಿಸ್ಥಿತಿ ಬಿಗಾಡಾಯಿಸುತ್ತಿದ್ದಂತೆಯೇ ರುದ್ರಾಪುರ ಕ್ಷೇತ್ರದ ಶಾಸಕ ರಾಜ್‍ಕುಮಾರ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಪಟ್ಟವರನ್ನು ಕೆಲಸದಿಂದ ವಜಾ ಮಾಡುವಂತೆ ಸೂಚಿಸಿದ್ದು, ಸದ್ಯ ಮೂವರನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ವೈರಲ್ ಆಯ್ತು ಮುಖದ್ಮೇಲೆ ಬಾಲ ಇರುವ ಕ್ಯೂಟ್ ನಾಯಿಮರಿ

    ವೈರಲ್ ಆಯ್ತು ಮುಖದ್ಮೇಲೆ ಬಾಲ ಇರುವ ಕ್ಯೂಟ್ ನಾಯಿಮರಿ

    ವಾಷಿಂಗ್ಟನ್: ಸಾಮಾಜಿಕ ಜಾಲತಾಣಗಳಲ್ಲಿ ಈಗ ಮುಖದ ಮೇಲೆ ಬಾಲವಿರುವ ಕ್ಯೂಟ್ ನಾಯಿ ಮರಿ ಸಖತ್ ವೈರಲ್ ಆಗಿದ್ದು. ಈ ನಾಯಿ ಮರಿಯನ್ನು ಕಂಡು ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

    ಒಂದು ಬಾಲವಿರುವ ನಾಯಿಯನ್ನು ನೋಡಿರುತ್ತೇವೆ. ಆದರೆ ಅಮೆರಿಕದ ಮಿಸ್ಸೌರಿಯಲ್ಲಿ ಬೀದಿ ನಾಯಿ ಮರಿಯೊಂದಕ್ಕೆ ಎರಡೆರಡು ಬಾಲವಿದೆ. ಅದರಲ್ಲೂ ವಿಚಿತ್ರವೆಂದರೆ ನಾಯಿ ಮರಿಗೆ ಮುಖದ ಮೇಲೆ ಬಾಲವಿದೆ. ಈ ನಾಯಿ ಮರಿ ಹುಟ್ಟಿದಾಗಿಂದಲೇ ಮುಖದ ಮೇಲೆ ಬಾಲವಿತ್ತೆಂದು ಹೇಳಲಾಗುತ್ತಿದ್ದು, ಸದ್ಯ ಎಲ್ಲೆಡೆ ಈ ನಾಯಿ ಮರಿಯದ್ದೇ ಚರ್ಚೆ ಶುರುವಾಗಿದೆ.

    ನಾಯಿ ಮರಿಯನ್ನು ಕಂಡ ಜನರು ಇದಕ್ಕೆ ಕ್ಯೂಟ್ ಯೂನಿಕಾರ್ನ್ ಎಂದು ಕರೆಯುತ್ತಿದ್ದಾರೆ. ಯೂನಿಕಾರ್ನ್ ಎಂದರೆ ಹಣೆಯ ಮೇಲೆ ಕೊಂಬು ಇರುವ ಕುದುರೆ. ಮಕ್ಕಳ ಕಥೆಗಳಲ್ಲಿ ಬರುವ ಯೂನಿಕಾರ್ನ್‍ಗೆ ಕೊಡಿರುವಂತೆ ಈ ನಾಯಿ ಮರಿಗೆ ಹಣೆಯ ಮೇಲೆ ಬಾಲವಿದೆ. ಆದರೆ ಈ ನಾಯಿ ಮರಿಯ ಅಸಲಿ ಹೆಸರು ನಾರ್ವಲ್. ನಾಯಿ ಮರಿಯನ್ನು ಬೀದಿಯಲ್ಲಿ ಕಂಡು ಎನ್‍ಜಿಓವೊಂದು ಇದನ್ನು ರಕ್ಷಿಸಿದೆ.

    https://twitter.com/dog_rates/status/1194660457451159552

    ಈ ನಾಯಿ ಮರಿ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಇದನ್ನು ಮ್ಯಾಕ್ ಮಿಷನ್ಸ್ ಚಾರಿಟಿ ರಕ್ಷಣೆ ಮಾಡಿತ್ತು. ಈ ವೇಳೆ ಈ ಪುಟ್ಟ ನಾಯಿ ಮರಿಯ ಹಣೆಯ ಭಾಗದಲ್ಲಿ ಪುಟ್ಟ ಬಾಲವಿರುವುದನ್ನು ಗಮನಿಸಿದ ಸದಸ್ಯರು ಪಶು ವೈದ್ಯರ ಬಳಿ ಕರೆದೊಯ್ದಿದ್ದಾರೆ.

    ಅಲ್ಲಿ ವೈದ್ಯರು ನಾರ್ವಲ್‍ನನ್ನು ತಪಾಸಣೆ ನಡೆಸಿದ ಬಳಿಕ ನಾಯಿ ಮರಿಯ ಮುಖದ ಮೇಲಿರುವ ಬಾಲ ದೇಹಕ್ಕೆ ಜೋಡಣೆಯಾಗಿಲ್ಲ ಎಂಬುದು ತಿಳಿದು ಬಂದಿದೆ. ಇದರಿಂದ ಅದಕ್ಕೆ ಯಾವುದೇ ಅಪಾಯವಿಲ್ಲ ಎಂದು ಬಾಲವನ್ನು ಕತ್ತರಿಸದೇ ಸುಮ್ಮನೆ ಬಿಟ್ಟಿದ್ದಾರೆ.

    ಈ ಮುದ್ದಾದ ನಾಯಿ ಮರಿಯ ಫೋಟೋಗಳನ್ನು ‘ವಿ ರೇಟ್ ಡಾಗ್ಸ್’ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಅಪರೂಪದ ನಾಯಿ ಮರಿಗೆ ಕ್ಯೂಟ್‍ನೆಸ್‍ಗೆ ಪ್ರಾಣಿ ಪ್ರೀಯರು ಫಿದಾ ಆಗಿದ್ದಾರೆ. ಯೂನಿಕಾರ್ನ್ ತರಹ ಈ ನಾಯಿ ಮರಿಗೆ ಪಪ್ಪಿಕಾರ್ನ್ ಎಂದು ಪ್ರೀತಿಯಿಂದ ಕರೆದಿದ್ದಾರೆ.