ನವದೆಹಲಿ: ಮೋದಿ ಸರ್ಕಾರದ ಕೊನೆಯ ಬಜೆಟ್ ಇಂದು ಮಂಡನೆಯಾಗುತ್ತಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅನುಪಸ್ಥಿತಿಯಲ್ಲಿ ಪಿಯೂಷ್ ಗೋಯಲ್ ಬಜೆಟ್ ಮಂಡಿಸುತ್ತಿದ್ದಾರೆ.
ಬಜೆಟ್ ಮುಖ್ಯಾಂಶಗಳು:
> ಇದು ಮಧ್ಯಂತರ ಬಜೆಟ್ ಅಲ್ಲ. ದೇಶದ ವಿಕಾಸದ ಬಜೆಟ್.
> ಬಾಡಿಗೆ ಮನೆಯ ಸೆಸ್ ಇಳಿಕೆ
> ಗೃಹ ಸಾಲ 2.5 ಲಕ್ಷ ರೂ. ವಿನಾಯಿತಿ
> ಹೂಡಿಕೆ ಮಾಡಿದರೆ 6.5 ಲಕ್ಷ ವಿನಾಯಿತಿ
> ಶೈಕ್ಷಣಿಕ ಸಾಲ ಪಡೆದುಕೊಂಡಿದ್ದರೆ ತೆರಿಗೆ ವಿನಾಯಿತಿ
> ಆದಾಯ ತೆರಿಗೆ ಮಿತಿ 2.5 ಲಕ್ಷ ದಿಂದ 5 ಲಕ್ಷಕ್ಕೆ ಏರಿಕೆ
> ಮತ್ತೆ ಅಧಿಕಾರಕ್ಕೆ ಏರುವ ವಿಶ್ವಾಸಲ್ಲಿ 10 ವರ್ಷದ ಪ್ಲಾನ್ ವಿವರಿಸಿದ ಪಿಯೂಷ್ ಗೋಯಲ್
> 2022ಕ್ಕೆ ಭಾರತದ ವ್ಯಕ್ತಿಯೊಬ್ಬರು ಗಗನಕ್ಕೆ ಹಾರಲಿದ್ದಾರೆ.
ಎಲ್ಲರಿಗೂ ಶುದ್ಧ ನೀರು ವಿತರಣೆ ಗುರಿ. ನದಿ ಸ್ವಚ್ಛತೆಗೆ ಒತ್ತು
> ಮಾಲಿನ್ಯ ನಿಯಂತ್ರಣಕ್ಕೆ ಕ್ರಮ. ಎಲೆಕ್ಟ್ರಿಕ್ ವಾಹನವನ್ನು ತರಲು ಪ್ರೋತ್ಸಾಹ
> ಡಿಜಿಟಲ್ ಇಂಡಿಯಾ ಎಲ್ಲ ಕ್ಷೇತ್ರಗಳಿಗೆ ವಿಸ್ತರಣೆಯ ಗುರಿ
> ಮುಂದಿನ 30 ವರ್ಷದ ಅಧಿವೃದ್ಧಿಗೆ ಪ್ಲಾನ್, ರಸ್ತೆ, ರೈಲ್ವೇ, ವಿಮಾನ,
> 5 ವರ್ಷದಲ್ಲಿ 5 ಟ್ರಿಲಿಯನ್ ಆರ್ಥಿಕತೆಯಾಗಿ ಬೆಳೆಯಲಿದೆ ಭಾರತ.
> ಕಪ್ಪು ಹಣ ಮುಕ್ತ ದೇಶವನ್ನಾಗಿ ಮಾಡಲು ಸರ್ಕಾರ ಕ್ರಮ. ನಕಲಿ ಕಂಪನಿಗಳ ಬಿಸಿ ಮುಟ್ಟಿಸಿದ್ದೇವೆ. ಕಪ್ಪು ಹಣ ನಿಯಂತ್ರಣಕ್ಕೆ ಕಾನೂನು ತಂದಿದ್ದೇವೆ.
> 24 ಗಂಟೆಯಲ್ಲಿ ಟಿಡಿಎಸ್ ಪಾವತಿ ಕ್ರಮ
> ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ
> ಸ್ವಾತಂತ್ರ್ಯ ನಂತರ ಅತಿ ದೊಡ್ಡ ತೆರಿಗೆ ಸುಧಾರಣೆಯಾದ ಜಿಎಸ್‍ಟಿ ನಮ್ಮ ಅವಧಿಯಲ್ಲಿ ಬಂದಿದೆ.
> ಆನ್ ಲೈನ್ ಮೂಲಕ ತೆರಿಗೆ ಸಮಸ್ಯೆಗೆ ಪರಿಹಾರ
> 34 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ.
> ನಮ್ಮ ಅವಧಿಯಲ್ಲಿ ಮಾಸಿಕ ಮೊಬೈಲ್ ಡೇಟಾ ಬಳಕೆ ಶೇ.50 ರಷ್ಟು ಹೆಚ್ಚಳ
> ವಿಶ್ವದಲ್ಲಿ ಮೊಬೈಲ್ ಕರೆ ಮತ್ತು ಡೇಟಾಗೆ ಅತಿ ಕಡಿಮೆ ದರ ಭಾರತದಲ್ಲಿದೆ.
> ಮೇಘಾಲಯ, ತ್ರಿಪುರಾಗಳಿಗೆ ರೈಲು ಸಂಪರ್ಕ ಕಲ್ಪಿಸಿದ್ದೇವೆ.
> ಸೋಲಾರ್ ಪವರ್ ಉತ್ಪಾದನೆಯಲ್ಲಿ ಹೆಚ್ಚಳ.
> ಸ್ವದೇಶಿ ನಿರ್ಮಿತ ಮೇಕ್ ಇನ್ ಇಂಡಿಯಾ ಅಡಿಯಲ್ಲಿ `ವಂದೇ ಮಾತರಂ’ ಸೆಮಿ ಹೈ ಸ್ಪೀಡ್ ರೈಲನ್ನು ನಿರ್ಮಿಸಲಾಗಿದೆ. ಭಾರತದ ಪ್ರಯಾಣಿಕರಿಗೆ ವಿಶ್ವದರ್ಜೆಯ ಗುಣಮಟ್ಟವನ್ನು ಈ ರೈಲು ನೀಡಲಿದೆ.
> ದಶಕಗಳ ಕಾಲ ಬಾಕಿ ಉಳಿದಿದ್ದ ರಸ್ತೆ ಯೋಜನೆಗಳು ನಮ್ಮ ಅವಧಿಯಲ್ಲಿ ಪೂರ್ಣಗೊಂಡಿದೆ.
> ಇಡಿ ವಿಶ್ವದಲ್ಲೇ ಅತಿ ಹೆಚ್ಚು ವೇಗದಲ್ಲಿ ಹೈವೇ ನಿರ್ಮಾಣ ಭಾರತದಲ್ಲಿ ಆಗುತ್ತಿದೆ. ಪ್ರತಿ ದಿನ 26 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ.
> ಸ್ವದೇಶಿ ವಿಮಾನ ಪ್ರಯಾಣಕರ ಸಂಖ್ಯೆ ಹೆಚ್ಚಳವಾಗಿದೆ.
> ದೇಶದ ಭದ್ರತೆಗೆ ಒತ್ತು. ರಕ್ಷಣಾ ವಲಯಕ್ಕೆ 3 ಲಕ್ಷ ಕೋಟಿ ಮೀಸಲು
> ಕಳೆದ 40 ವರ್ಷಗಳಿಂದ ಆಗದೇ ಇದ್ದ ಒನ್ ರ‍್ಯಾಂಕ್, ಒನ್ ಪೇನ್ಶನ್ ನಮ್ಮ ಸರ್ಕಾರ ಜಾರಿಗೆ ತಂದಿದೆ. ಸೈನಿಕರ ವೇತನವನ್ನು ಹೆಚ್ಚಳ ಮಾಡಿದ್ದೇವೆ.
> ಸಣ್ಣ ಕೈಗಾರಿಕೆಗಳಿಗೆ ಶೇ.2 ರಷ್ಟು ಬಡ್ಡಿ ವಿನಾಯಿತಿ. ಸ್ವದೇಶಿ ವಸ್ತುಗಳ ವ್ಯಾಪಾರಕ್ಕೆ ಒತ್ತು.
> ವಿಶ್ವದಲ್ಲೇ ಭಾರತ ಎರಡನೇ ಬೆಸ್ಟ್ ಸ್ಟಾರ್ಟಪ್ ದೇಶವಾಗಿದೆ. ಕೆಲಸ ಹುಡುಕುವವರು ಕೆಲಸ ಸೃಷ್ಟಿಸುತ್ತಿದ್ದಾರೆ.
> 15 ಸಾವಿರ ಕೋಟಿ ಹಣವನ್ನು ಸಾಲ ರೂಪವಾಗಿ ಮುದ್ರ ಯೋಜನೆಯ ಅಡಿ 7 ಲಕ್ಷ ಜನರಿಗೆ ನೀಡಲಾಗಿದೆ.
> ಮುದ್ರಾ ಯೋಜನೆ ಮಹಿಳೆಯರಿಗೆ ಸಾಲ ಸೌಲಭ್ಯ. ಗ್ರಾಮೀಣ ಅಭಿವೃದ್ಧಿಗೆ ಒತ್ತು
> ಉಜ್ವಲ ಅಡಿ 8 ಕೋಟಿ ಜನರಿಗೆ ಗ್ಯಾಸ್ ವಿತರಣೆ
> ಕೆಲಸದ ಅವಧಿಯಲ್ಲಿ ಕಾರ್ಮಿಕ ಮೃತಪಟ್ಟರೆ 6 ಲಕ್ಷ ಪಿಂಚಣಿ- ಕಾರ್ಮಿಕರ ಪಿಂಚಣಿ ಹೆಚ್ಚಳ.
> ಜಿಡಿಪಿ ಬೆಳವಣಿಗೆಯ ಜೊತೆ ಉದ್ಯೋಗ ಸಂಖ್ಯೆಯೂ ಹೆಚ್ಚಾಗಿದೆ.
> ಸರಿಯಾದ ಸಮಯಕ್ಕೆ ಸಾಲ ಪಾವತಿಸಿದ ರೈತರಿಗೆ ಶೇ.3 ರಷ್ಟು ಬಡ್ಡಿ ವಿನಾಯಿತಿ.
> ಗೋವುಗಳ ರಕ್ಷಣೆ, ಹಾಲಿನ ಉತ್ಪಾದನೆ ಹೆಚ್ಚಿಸಲು ರಾಷ್ಟ್ರೀಯ ಕಾಮದೇನು ಆಯೋಗ ಸ್ಥಾಪನೆ. 750 ಕೋಟಿ ಮೀಸಲು
> ರೈತರ ಖಾತೆಗೆ ಜಮೆಯಾಗುವ ಹಣವನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ.
> ವರ್ಷಕ್ಕೆ ರೈತರ ಖಾತೆಗೆ ನೇರವಾಗಿ 6 ಸಾವಿರ ರೂ. ಜಮೆ. 3 ಕಂತುಗಳಲ್ಲಿ 2 ಸಾವಿರ ರೂ. ಜಮೆ. 2 ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ರೈತರ ಖಾತೆಗೆ ಜಮೆಯಾಗಲಿದೆ. 2018ರ ಡಿಸೆಂಬರ್ ಪೂರ್ವಾನ್ವಯವಾಗುಂತೆ ಘೋಷಣೆ
> ಆಯುಷ್ಮಾನ್ ಭಾರತದ ಮೂಲಕ 50 ಕೋಟಿ ಜನರಿಗೆ ಸಹಕಾರ
> ಕಡಿಮೆ ದರದಲ್ಲಿ ಔಷಧಿಗಾಗಿ ಜನ ಔಷಧಿ ಕೇಂದ್ರಗಳನ್ನು ತೆರೆಯಲಾಗಿದ್ದು 4 ಕೋಟಿ ಜನರಿಗೆ ಸಹಾಯವಾಗಿದೆ.
> ದೇಶದ ರಸ್ತೆಗಳಿಗೆ ಟಾರ್ ಬಂದಿದೆ. ಈ ಮಾರ್ಚ್ ಒಳಗಡೆ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ
> ನಮ್ಮ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಿದೆ
> ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನೀಡಿದ್ದೇವೆ. ರಿಯಲ್ ಎಸ್ಟೇಟ್ ನಿಯಂತ್ರಣಕ್ಕೆ ರೇರಾ ತಂದಿದ್ದೇವೆ.
> ಸಣ್ಣ ವ್ಯಾಪಾರಸ್ಥರ ನೆರವಿಗೆ ನಿಂತಿದ್ದೇವೆ. ಡಿಸೆಂಬರ್‍ನಲ್ಲಿ ಹಣದುಬ್ಬರ ದರ ಕೇವಲ ಶೇ 2.1ರಷ್ಟಿತ್ತು. ನಮ್ಮ ಸರಕಾರ ಬೆಲೆಯೇರಿಕೆಗೆ ಕಡಿವಾಣ ಹಾಕಿದೆ
> ವಿದೇಶಿ ಹೂಡಿಕೆ ಹೆಚ್ಚಳವಾಗಿದೆ. ಎನ್‍ಪಿಎ ಕಡಿಮೆ ಮಾಡುತ್ತಿದ್ದೇವೆ.
> ಹಣದುಬ್ಬರ ನಿಯಂತ್ರಿಸಿ ದೇಶವನ್ನು ಸರ್ಕಾರ ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತಿದೆ.
> ವಿಶ್ವದಲ್ಲೇ ಅತಿ ವೇಗವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ.
> ಕಳೆದ 5 ವರ್ಷದಲ್ಲಿ ಜಿಡಿಪಿ ಏರಿಕೆ ಕಂಡಿದೆ.
> ನರೇಂದ್ರ ಮೋದಿ ಸರ್ಕಾರಲ್ಲಿ ನಾವು ಉತ್ತಮ ಆಡಳಿತ ನೀಡಿದ್ದೇವೆ.
> ಬಜೆಟ್ ಪ್ರತಿ ಸೋರಿಕೆಯಾಗಿದೆ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳಿಂದ ಟೀಕೆ
“ಮೋದಿ ಸರ್ಕಾರ ಉದ್ದೇಶ ಪೂರ್ವಕವಾಗಿ ಮಾಹಿತಿ ಸೋರಿಕೆ ಮಾಡಿದೆ. ಸಂವಿಧಾನ ಮತ್ತು ಸಂಪ್ರದಾಯಕ್ಕೆ ಕೇಂದ್ರ ಸರ್ಕಾರ ಅಪಚಾರ ಮಾಡಿದೆ. ನೈತಿಕ ಹೊಣೆ ಹೊತ್ತು ಹಣಕಾಸು ಸಚಿವರು ರಾಜೀನಾಮೆ ನೀಡಬೇಕು” ನವದೆಹಲಿಯಲ್ಲಿ ಸಂಸದ ವಿ.ಎಸ್ ಉಗ್ರಪ್ಪ ಪ್ರತಿಕ್ರಿಯೆ.
ಬಜೆಟ್ ಪ್ರತಿಗಳು ಈಗಾಗಲೇ ಸಂಸತ್ ಭವನ ತಲುಪಿದೆ. ಬಜೆಟ್ ಮಂಡನೆಗೂ ಮುನ್ನವೇ ಬಿಎಸ್‍ಇ ಸಂವೇದಿ ಸೂಚ್ಯಂಕದಲ್ಲಿ 100 ಅಂಶಗಳ ಏರಿಕೆ ಕಂಡು ಬಂದಿದೆ.
ಕೃಷಿಗೆ ಏನು ಸಿಗಬಹುದು?
* ಬಜೆಟ್‍ನಲ್ಲಿ ಕೃಷಿ ವಲಯಕ್ಕೆ ಬಂಪರ್ ಕೊಡುಗೆ ಸಾಧ್ಯತೆ
* ಕೃಷಿ ಉಪಕರಣ, ರಸಗೊಬ್ಬರ ಖರೀದಿಗೆ ರೈತರ ಖಾತೆಗೆ ವಾರ್ಷಿಕ 10 ಸಾವಿರ ರೂ. ಜಮೆ ಸಾಧ್ಯತೆ
* ಸಕಾಲಕ್ಕೆ ಕೃಷಿ ಸಾಲ ಮರು ಪಾವತಿಸುವ ರೈತರಿಗೆ ಗಿಫ್ಟ್ ನಿರೀಕ್ಷೆ
* ಪೂರ್ಣ ಬಡ್ಡಿ ಮನ್ನಾ ಸಾಧ್ಯತೆ
* ತೆಲಂಗಾಣ ಮಾದರಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ?
* ಕೃಷಿ ವಿಮೆ ಪ್ರೀಮಿಯಂ ಪೂರ್ಣವಾಗಿ ಸರ್ಕಾರದಿಂದಲೇ ಪಾವತಿ
* ಸಾಮಾನ್ಯ ಕನಿಷ್ಠ ಬೆಂಬಲ ಬೆಲೆ ಘೋಷಣೆ ಸಾಧ್ಯತೆ
* ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಗೆ ಹೆಚ್ಚಿನ ಅನುದಾನ
* ನರೇಗಾದ ಮೂಲಕ ಗ್ರಾಮೀಣ ಭಾಗದ ನೌಕರರ ಕೂಲಿ ಹೆಚ್ಚಿಸಬಹುದು
ತೆರಿಗೆ ಪಾವತಿದಾರರಿಗೆ ಏನು ಸಿಗಬಹುದು?
* ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ ಏರಿಕೆ
* ಆದಾಯ ತೆರಿಗೆ ಸಲ್ಲಿಕೆ ನಿಯಮಗಳನ್ನು ಕೊಂಚ ಸಡಿಸಬಹುದು
* ಟಿಡಿಎಸ್ ಸಲ್ಲಿಕೆ ದಿನವೇ ಮರು ಪಾವತಿಗೆ ನಿಯಮ ಜಾರಿಗೊಳಿಸಬಹುದು
* ಶೇ.30ರಷ್ಟಿರುವ ಕಾರ್ಪೋರೇಟ್ ತೆರಿಗೆಯನ್ನು ಶೇ.25ಕ್ಕೆ ಇಳಿಕೆ ಮಾಡಬಹುದು
ಶ್ರೀಸಾಮಾನ್ಯರಿಗೆ ಏನು ಸಿಗಬಹುದು?
* ಮೆಡಿಕಲ್ ವಿಮೆ ಕಡಿಮೆ ಮಾಡುವ ನಿರೀಕ್ಷೆ
* ಪ್ರತಿ ವ್ಯಕ್ತಿಗೂ 5 ಲಕ್ಷದ ವರೆಗಿನ ಏಕರೂಪದ ವಿಮೆ ಭಾಗ್ಯ ಕಲ್ಪಿಸಬಹುದು
* ಸಣ್ಣ ಉದ್ದಿಮೆದಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಾಧ್ಯತೆ (ಉದ್ದಿಮೆದಾರರಿಗೆ ವಿಮೆಯೂ ಘೋಷಣೆ ಮಾಡಬಹುದು)
* ಬಡವರಿಗೆ ಕನಿಷ್ಠ ವರಮಾನ ಯೋಜನೆ ಪ್ರಕಟಣೆ ಸಾಧ್ಯತೆ
* ಜಿಎಸ್‍ಟಿ ವ್ಯಾಪ್ತಿಯಿಂದ ಮತ್ತಷ್ಟು ವಸ್ತುಗಳನ್ನು ಕೈ ಬಿಡುವ ಸಾಧ್ಯತೆ
* ಐಟಿ ಕಾನೂನುಗಳಿಗೆ ಬದಲಾವಣೆ ತಂದು ಉದ್ಯೋಗ ಸೃಷ್ಟಿಸಬಹುದು
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv