Tag: ಹಣಕಾಸು ಇಲಾಖೆ

  • ಹಣಕಾಸು ಇಲಾಖೆ ಅಧಿಕಾರಿಗಳು ಸಹಕಾರ ಕೊಡ್ತಿಲ್ಲ, ನಾನು ಹೇಗೆ ಜಾರಿ ಮಾಡಲಿ: ಮಂಕಾಳ್ ವೈದ್ಯ ಅಸಹಾಯಕತೆ

    ಹಣಕಾಸು ಇಲಾಖೆ ಅಧಿಕಾರಿಗಳು ಸಹಕಾರ ಕೊಡ್ತಿಲ್ಲ, ನಾನು ಹೇಗೆ ಜಾರಿ ಮಾಡಲಿ: ಮಂಕಾಳ್ ವೈದ್ಯ ಅಸಹಾಯಕತೆ

    ಬೆಂಗಳೂರು: ಹಣಕಾಸು ಇಲಾಖೆ (Finance Department) ಅಧಿಕಾರಿಗಳು ನನ್ನ ಇಲಾಖೆಗೆ ಸಹಕಾರ ಕೊಡುತ್ತಿಲ್ಲ. ಹಣಕಾಸು ಇಲಾಖೆಯವರು ದುಡ್ಡು ಕೊಡದೇ ನಾನು ಹೇಗೆ ಯೋಜನೆ ಅನುಷ್ಠಾನ ಮಾಡಲಿ ಎಂದು ಮೀನುಗಾರಿಕೆ ಸಚಿವ ಮಂಕಾಳ್ ವೈದ್ಯ (Mankala Vaidya) ಅಸಹಾಯಕತೆ ವ್ಯಕ್ತಪಡಿಸಿದ ಘಟನೆ ವಿಧಾನ ಪರಿಷತ್‌ನಲ್ಲಿ ನಡೆಯಿತು.

    ಪ್ರಶ್ನೋತ್ತರ ಅವಧಿ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2024-25ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ಘೋಷಣೆ ಮಾಡಿದ್ದ ಯೋಜನೆ ಅನುಷ್ಠಾನ ಮಾಡಲು ಎಫ್‌ಡಿ (ಹಣಕಾಸು ಇಲಾಖೆ) ಸಹಕಾರ ಕೊಡದ ಕಾರಣ ಕೆಲಸ ಆಗುತ್ತಿಲ್ಲ ಎಂದರು. ಮೀನುಗಾರಿಕೆ ಇಲಾಖೆಗೆ ಸಿಎಂ ಅವರು2024-25ನೇ ಸಾಲಿಗೆ 3 ಸಾವಿರ ಕೋಟಿ ಅನುದಾನ ಕೊಟ್ಟಿದ್ದರು. ನಮ್ಮ ಇಲಾಖೆಯಿಂದ ಯೋಜನೆಗಳಿಗೆ ಡಿಪಿಆರ್ ಸಿದ್ಧ ಮಾಡಿ ಆರ್ಥಿಕ ಇಲಾಖೆಗೆ ಕಳುಹಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆ ಒಪ್ಪಿಗೆ ಕೊಡದೇ ಕೇಂದ್ರ ಸರ್ಕಾರದ ಯೋಜನೆ ಅಡಿ ಕೆಲಸ ಪ್ರಾರಂಭ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ನಿಗದಿಯಾಗಿದ್ದ ಯೋಜನೆಗಳ ಡಿಪಿಆರ್ ಅನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ.ಕೇಂದ್ರ ಸರ್ಕಾರದ ಅನುದಾನ ಬಂದಿಲ್ಲ. ಹೀಗಾಗಿ ಯೋಜನೆ ಪ್ರಾರಂಭ ಮಾಡಲು ಆಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸರ್ಕಾರದ ವೇತನ; ಸಮಿತಿ ರದ್ದಿಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್‌ ಪ್ರತಿಭಟನೆ

    ಮಂಕಾಳ್ ವೈದ್ಯ ಮಾತಿಗೆ ಸದಸ್ಯ ನಾಗರಾಜ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದರು. 3 ಸಾವಿರ ಕೋಟಿ ಇದ್ದರೂ ಯಾಕೆ ಇಲಾಖೆ ಕೆಲಸ ಮಾಡುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಸಚಿವರ ಮೇಲೆ ಏರು ಧ್ವನಿಯಲ್ಲಿ ಮಾತನಾಡಿದರು. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ನನ್ನು ಪೊಲೀಸರ ವಶದಿಂದ ಬಿಡಿಸಲು ಯತ್ನ – ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಅಮನ್ ಸಾವೊ!

    ನಾಗರಾಜ್ ಯಾದವ್ ಮಾತಿಗೆ ಆಕ್ರೋಶಗೊಂಡ ಸಚಿವ ಮಂಕಾಳ್ ವೈದ್ಯ, ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟಿಲ್ಲ ಅಂದರೆ ನಾನೇನು ಮಾಡಲಿ. ನನ್ನ ಇಲಾಖೆ ತಪ್ಪೇನಿದೆ? ಹಣ ಕೊಡದೆ ಹೇಗೆ ಕೆಲಸ ಮಾಡೋದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: 4 ಸಾರಿಗೆ ನಿಗಮಗಳು ನಷ್ಟದಲ್ಲಿವೆ, ಶಕ್ತಿ ಯೋಜನೆಗೆ ಸರ್ಕಾರ 2,000 ಕೋಟಿ ಹಣ ಬಾಕಿ ಕೊಡಬೇಕು: ರಾಮಲಿಂಗಾ ರೆಡ್ಡಿ

  • ವಿಧಾನಸೌಧದಲ್ಲಿ ನಡೆದ ಸಭೆಯಿಂದ ಹಸಿರು ವಲಯದಲ್ಲಿ ಆರ್ಥಿಕ ಚಟುವಟಿಕೆಗೆ ಗ್ರೀನ್ ಸಿಗ್ನಲ್

    ವಿಧಾನಸೌಧದಲ್ಲಿ ನಡೆದ ಸಭೆಯಿಂದ ಹಸಿರು ವಲಯದಲ್ಲಿ ಆರ್ಥಿಕ ಚಟುವಟಿಕೆಗೆ ಗ್ರೀನ್ ಸಿಗ್ನಲ್

    ಬೆಂಗಳೂರು: ಲಾಕ್‍ಡೌನ್ ನಿಯಮ ಸಡಿಲಿಸಿ ಹಸಿರು ವಲಯದಲ್ಲಿರುವ ಜಿಲ್ಲೆಗಳಿಗೆ ಕರ್ನಾಟಕ ಸರ್ಕಾರ ವಿನಾಯಿತಿ ನೀಡಿದೆ. ಸರ್ಕಾರದ ಈ ಮಹತ್ವದ ಗ್ರೀನ್ ಸಿಗ್ನಲ್ ಹಿಂದೆ ಹಣಕಾಸು ಇಲಾಖೆ ಕೆಲಸ ಮಾಡಿದೆ.

    ಹೌದು, ಯಾವುದೇ ಯೋಜನೆ ಅಥವಾ ಪ್ರಸ್ತಾಪ ಚರ್ಚೆಗೆ ಬಂದಾಗ ಹಣಕಾಸು ಇಲಾಖೆ ಹಲವು ಪ್ರಸ್ತಾಪಕ್ಕೆ ಆರಂಭದಲ್ಲೇ ಕೊಕ್ಕೆ ಹಾಕಿ ಬಿಡುತ್ತದೆ. ಆದರೆ ಲಾಕ್‍ಡೌನ್ ವಿಚಾರದಲ್ಲಿ ಹಣಕಾಸು ಇಲಾಖೆ ಗಂಭೀರವಾದ ಸಲಹೆ ನೀಡಿದ ಪರಿಣಾಮ ಸರ್ಕಾರ ಹಸಿರು ವಲಯದಲ್ಲಿ ಆರ್ಥಿಕ ಚಟುವಟಿಕೆ ನಡೆಸಲು ಅನುಮತಿ ನೀಡಿದೆ.

    ವಿಧಾನಸೌಧದ ಸಿಎಂ ಕಚೇರಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಸಿಎಂ ಇಂದು ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಹಣಕಾಸು ಇಲಾಖೆ ಶಾಕಿಂಗ್ ವಿಚಾರಗಳನ್ನು ಪ್ರಸ್ತಾಪ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದಿಂದ ವಿನಾಯಿತಿ ನೀಡುವ ನಿರ್ಧಾರ ಪ್ರಕಟವಾಗಿದೆ.

    ಏಪ್ರಿಲ್ ತಿಂಗಳಿನಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ವ್ಯಾಪಾರ ವಹಿವಾಟು ನಡೆಯದ ಕಾರಣ ರಾಜ್ಯದ ಪಾಲಿನ ಜಿಎಸ್‍ಟಿ ಹಣ ಬರುವುದಿಲ್ಲ. ಇನ್ನೂ ನಿರ್ಬಂಧ ಮುಂದುವರಿದರೆ ಜುಲೈವರೆಗೂ ಸಂಕಷ್ಟ ಮುಂದುವರಿಯಲಿದೆ. ಹೀಗಾಗಿ ಗ್ರೀನ್ ಝೋನ್ ನಲ್ಲಿ ಚಟುವಟಿಕೆ ಶುರು ಮಾಡುವುದು ಉತ್ತಮ ಎಂದು ಸಲಹೆ ಬಂದಿದೆ.

    ಲಾಕ್‍ಡೌನ್ ಸಡಿಲಿಕೆ ಮಾಡದಿದ್ದರೆ ಮುಂದಿನ ತಿಂಗಳಿನಿಂದ ಸರ್ಕಾರ ನಡೆಸುವುದೇ ಕಷ್ಟ. ಲಾಕ್‍ಡೌನ್ ಸಮಯದಲ್ಲಿ ಆದಾಯವಿಲ್ಲದಿದ್ದರೂ ಸರ್ಕಾರದಿಂದ ಉದ್ಯೋಗಿಗಳಿಗೆ ಸಂಬಳ ಸೇರಿದಂತೆ ಇತ್ಯಾದಿಗಳಿಗೆ ಹಣ ಖರ್ಚಾಗುತ್ತಿದ್ದು ಅಂದಾಜು 14 ಸಾವಿರ ಕೋಟಿ ರೂ. ನಷ್ಟವಾಗಿದೆ. ಅಬಕಾರಿ ಇಲಾಖೆ ಒಂದರಿಂದಲೇ 2 ಸಾವಿರ ಕೋಟಿ ರೂ. ನಷ್ಟವಾಗಿದೆ. ಈ ತಿಂಗಳು ನಿಭಾಯಿಸಿದ್ದೇ ದೊಡ್ಡ ಸಾಧನೆ. ಮಾರ್ಚ್ ಅಂತ್ಯದಲ್ಲಿ ವರ್ಷಾಂತ್ಯದ ಪಾವತಿ ಆಗಬೇಕಿದ್ದ ಬಿಲ್ಲುಗಳನ್ನ ಪೆಂಡಿಂಗ್ ಇಟ್ಟು ಹಣಕಾಸಿನ ಸಮಸ್ಯೆ ಸರಿದೂಗಿಸಲಾಗಿದೆ. ಆದ್ದರಿಂದ ವ್ಯಾಪಾರ ವಹಿವಾಟು ಆರಂಭಿಸಿದರಷ್ಟೇ ಅನುಕೂಲ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಹಸಿರು ವಲಯದಲ್ಲಿ ಆರ್ಥಿಕ ಚಟುವಟಿಕೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

  • ಬಿಬಿಎಂಪಿ ಬಜೆಟ್ ತಿರಸ್ಕರಿಸಿದ ಮೈತ್ರಿ ಸರ್ಕಾರ

    ಬಿಬಿಎಂಪಿ ಬಜೆಟ್ ತಿರಸ್ಕರಿಸಿದ ಮೈತ್ರಿ ಸರ್ಕಾರ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಅನ್ನು ಮೈತ್ರಿ ಸರ್ಕಾರ ತಿರಸ್ಕರಿಸಿದೆ. ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರ ಬಜೆಟ್ ತಿರಸ್ಕರಿಸಿದೆ.

    2019-20ನೇ ಸಾಲಿನ ಬಜೆಟ್ ಅನ್ನು ಫೆ.19 ರಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಮಂಡಿಸಿದ್ದರು. ಆರಂಭದಲ್ಲಿ 10,688 ಕೋಟಿ ರೂ. ಇದ್ದ ಬಜೆಟ್‍ಗೆ ಕೆಲ ಮಾರ್ಪಾಡುಗಳನ್ನು ಮಾಡಿದ್ದರಿಂದ ಮೊತ್ತ 12,74.77 ಕೋಟಿ ರೂ.ಗೆ ಹಿಗ್ಗಿತ್ತು. ಈ ಪರಿಷ್ಕ್ರತ ಬಜೆಟ್‍ಗೆ ಪಾಲಿಕೆಯ ಕೌನ್ಸಿಲ್ ಒಪ್ಪಿಗೆ ನೀಡಿತ್ತು.

    ಬಿಬಿಎಂಪಿ ಇತಿಹಾಸದಲ್ಲಿ 12,574 ಕೋಟಿ ರೂ. ವೆಚ್ಚದ ಬೃಹತ್ ಬಜೆಟ್ ಮಂಡಿಸಿರುವುದು ಇದೇ ಮೊದಲು ಆಗಿತ್ತು. ಈಗ 4 ಸಾವಿರ ಕೋಟಿ ಇಳಿಸಿ ಎಂದು ಆರ್ಥಿಕ ಇಲಾಖೆ ಸೂಚಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಬಜೆಟ್ ಗಾತ್ರ 9,0574 ಕೋಟಿ ರೂ.ಗೆ ಇಳಿಕೆಯಾಗಲಿದೆ.

    ಬಜೆಟ್ ತಿರಸ್ಕರಿಸಿದ್ದಕ್ಕೆ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಪ್ರತಿಕ್ರಿಯಿಸಿ, ಮೈತ್ರಿ ಸರ್ಕಾರಕ್ಕೆ ಬೆಂಗಳೂರು ಅಭಿವೃದ್ಧಿ ಬೇಕಿಲ್ಲ. ನಾವು ನೀಡಿದ ಸಲಹೆಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿ ಆಕ್ರೋಶ ಹೊರಹಾಕಿದ್ದಾರೆ.