Tag: ಹಕ್ಕು ಪತ್ರ

  • ಯಾದಗಿರಿ, ಕಲಬುರಗಿಗೆ ಮೋದಿ – ಎಲ್ಲಿ, ಎಷ್ಟು ಗಂಟೆಗೆ ಏನು ಕಾರ್ಯಕ್ರಮ?

    ಯಾದಗಿರಿ, ಕಲಬುರಗಿಗೆ ಮೋದಿ – ಎಲ್ಲಿ, ಎಷ್ಟು ಗಂಟೆಗೆ ಏನು ಕಾರ್ಯಕ್ರಮ?

    ಬೆಂಗಳೂರು: ಹುಬ್ಬಳ್ಳಿಯಲ್ಲಿ ರೋಡ್ ಶೋ ಮೂಲಕ ಸಂಚಲನ ಮೂಡಿಸಿದ್ದ ಪ್ರಧಾನಿ ಮೋದಿ (PM Narendra Modi) ಇಂದು ಮತ್ತೊಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ. ಕಲಬುರಗಿ (Kalaburagi) ಮತ್ತು ಯಾದಗಿರಿ (Yadagiri) ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಪ್ರವಾಸ ಕೈಗೊಳ್ಳಲಿದ್ದು, ಅನೇಕ ಯೋಜನೆಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ಮೋದಿ ಆಗಮನ ಹಿನ್ನೆಲೆಯಲ್ಲಿ ಕಲಬುರಗಿ ಮತ್ತು ಯಾದಗಿರಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ. ಸಂಪೂರ್ಣ ಕೇಸರಿಮಯವಾಗಿವೆ. ಬೆಳಗ್ಗೆ 11 ಗಂಟೆಗೆ ವಾಯು ಪಡೆಯ ವಿಶೇಷ ವಿಮಾನದಲ್ಲಿ ಕಲಬುರಗಿಗೆ ಆಗಮಿಸಲಿದ್ದಾರೆ. ಅಲ್ಲಿಂದ ವಾಯುಪಡೆಯ ಎಂಐ 17 ಹೆಲಿಕಾಪ್ಟರ್‌ ಮೂಲಕ ಯಾದಗಿರಿಯ ಕೊಡೇಕಲ್‌ಗೆ ಬರಲಿದ್ದಾರೆ. ಇದನ್ನೂ ಓದಿ: ಸ್ಕೂಟರ್ ಹಿಂದೆ ಧರಧರನೇ ವೃದ್ದನನ್ನ ಎಳೆದೊಯ್ದ ಆರೋಪಿಗೆ ನ್ಯಾಯಾಂಗ ಬಂಧನ

    ಕೊಡೆಕಲ್‍ನಲ್ಲಿ ನಾರಾಯಣಪುರ ಎಡದಂಡೆ ಕಾಲುವೆಗೆ (Narayanapura Left Bank Canal project ) 2500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸ್ವಯಂಚಾಲಿತ ಸ್ಕಾಡಾ ಗೇಟ್ ಲೋಕಾರ್ಪಣೆ ಮಾಡಲಿದ್ದಾರೆ. ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ, ಸೂರತ್-ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ವೇಗೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ಮಧ್ಯಾಹ್ನ 1:15ಕ್ಕೆ ಕಲಬುರಗಿಯ ಮಳಖೇಡಾದಲ್ಲಿ ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು ಜಿಲ್ಲೆಗಳ ತಾಂಡಾ ಮತ್ತು ಹಟ್ಟಿಗಳಲ್ಲಿ ವಾಸವಾಗಿರುವ 51 ಸಾವಿರ ಕುಟುಂಬಸ್ಥರಿಗೆ ಏಕಕಾಲದಲ್ಲಿ ಮೋದಿ ಹಕ್ಕು ಪತ್ರ ವಿತರಿಸಲಿದ್ದಾರೆ.


    ಮೋದಿ ಕಾರ್ಯಕ್ರಮಕ್ಕಾಗಿ 60 ಎಕರೆ ಪ್ರದೇಶದಲ್ಲಿ ಸಿದ್ಧತೆಗಳು ನಡೆದಿವೆ. ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.  ಮೋದಿಯವರ ಎರಡು ಕಾರ್ಯಕ್ರಮಗಳಿವೆ. ಇದರಿಂದ ರಾಜ್ಯಕ್ಕೆ ಒಳಿತಾಗಲಿದೆ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಬರುತ್ತಿರುವುದನ್ನು ಕಾಂಗ್ರೆಸ್ಸಿಗರು ಟೀಕೆ ಮಾಡಿರೋದಕ್ಕೆ ಸಚಿವ ಅಶೋಕ್ ತಿರುಗೇಟು ನೀಡಿದ್ದಾರೆ. ಮೋದಿಯನ್ನು ಸಿಂಹಕ್ಕೆ ಹೋಲಿಸಿದ್ದಾರೆ. ಈ ಮಧ್ಯೆ, ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ ಎಂದು ಮೋದಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೀವು ನನಗೆ ವೋಟು ಹಾಕಲ್ಲ, ಆದ್ರೂ ಕೆಲಸ ಮಾಡಿ ಕೊಡುತ್ತೇನೆ: ಪ್ರೀತಂಗೌಡ

    ನೀವು ನನಗೆ ವೋಟು ಹಾಕಲ್ಲ, ಆದ್ರೂ ಕೆಲಸ ಮಾಡಿ ಕೊಡುತ್ತೇನೆ: ಪ್ರೀತಂಗೌಡ

    ಹಾಸನ: ನೀವು ನನಗೆ ಚುನಾವಣೆಯಲ್ಲಿ ಮತ ಹಾಕುವುದಿಲ್ಲ, ಆದರೂ ನಿಮಗೆ ನಾನು ಕೆಲಸ ಮಾಡಿ ಕೊಡುತ್ತೇನೆ ಎಂದು ಶಾಸಕ ಪ್ರೀತಂಗೌಡ ಹೇಳಿದರು.

    ನಗರದ 30-31 ನೇ ವಾರ್ಡ್‍ಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 40 ವರ್ಷಗಳಿಂದ ನೆಲೆಸಿರುವ ಜನರಿಗೆ ಹಕ್ಕುಪತ್ರ ಸಂಬಂಧ ಹಾಗೂ ಅವರ ಸಮಸ್ಯೆ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆ ಇದಾಗಿತ್ತು. ಕಳೆದ ಬಾರಿ ಚುನಾವಣೆಯಲ್ಲಿ ನೀವು ನನಗೆ ಮತ ಹಾಕಿಲ್ಲ. ಮುಂದಿನ ಚುನಾವಣೆಯಲ್ಲೂ ಮತ ಹಾಕುತ್ತೀರಿ ಎಂಬ ನಂಬಿಕೆ ನನಗಿಲ್ಲ. ಆದರೂ ನಾನು ನಿಮಗೆ ಕೆಲಸ ಮಾಡಿಕೊಡುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: 40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ- ಸಿಧು ಜೊತೆಗಿನ ಮೊದಲ ಭೇಟಿ ನೆನೆದ ರಾಗಾ

    ನೀವು 2023ರ ಚುನಾವಣೆಯಲ್ಲಿ ಮತ ಹಾಕದಿದ್ದರೂ 2028ಕ್ಕೆ ಆದರೂ ಮತ ಹಾಕುತ್ತೀರಿ. ನನಗೇನು ತುರ್ತು ಮತ ಹಾಕೋದು ಏನೂ ಬೇಡ. ನನಗೆ ಅಥವಾ ಬಿಜೆಪಿಗೆ ಮತ ಹಾಕುವುದಿಲ್ಲವೇ ಬೇಡ. ಆದರೆ ಪ್ರೀತಂಗೌಡ ಅಥವಾ ಬಿಜೆಪಿ ಹೆಸರು ತೋರಿಸಿ ಅವರಿಗೆ ವಿರುದ್ಧವಾಗಿ ಮತ ಕೇಳುವವರಿಗೆ ಮಾತ್ರ ಮತ ಹಾಕಬೇಡಿ. ನಿಮ್ಮ ಕಷ್ಟಕ್ಕೆ ಆದವರಿಗೆ ನೀವು ಮತ ಹಾಕಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಿಜೆಪಿ ಶಾಸಕನಿಗೆ ಮಹಿಳೆಯಿಂದ ಬ್ಲ್ಯಾಕ್‍ಮೇಲ್ – ತಮಿಳುನಾಡಿನಲ್ಲಿ ನಾಲ್ವರು ವಶ

    ಪ್ರೀತಂ ಗೌಡ ವಿರುದ್ಧ ಮತ ಹಾಕಿ ಅನ್ನುವವರನ್ನು ನಿಮ್ಮ ಹತ್ತಿರ ಸೇರಿಸಬೇಡಿ. ಇದನ್ನೇ 3 ಸಾರಿ ಹೇಳುತ್ತಿದ್ದೇನೆ ಎಲ್ಲರಿಗೂ ತಲೆಗೆ ಹೋಗಲಿ ಅಂತ ತಾಕೀತು ಮಾಡುತ್ತಿದ್ದೇನೆ. ಹಕ್ಕು ಪತ್ರ ನೀಡಿ ಪರೋಕ್ಷವಾಗಿ ಬೇರೆಯವರಿಗೆ ಮತ ಹಾಕಬಾರದು ಅಂತ ತಾಕೀತು ಮಾಡುತ್ತಿದ್ದೇನೆ ಎಂದರು.

  • ಮನೆಗಳ ಹಕ್ಕು ಪತ್ರ ಕೊಡಿಸಲು ಒತ್ತಾಯ – ರೈತ ಸಂಘದಿಂದ ಹಾಸನದಲ್ಲಿ ಪ್ರತಿಭಟನೆ

    ಮನೆಗಳ ಹಕ್ಕು ಪತ್ರ ಕೊಡಿಸಲು ಒತ್ತಾಯ – ರೈತ ಸಂಘದಿಂದ ಹಾಸನದಲ್ಲಿ ಪ್ರತಿಭಟನೆ

    ಹಾಸನ: ಕೃಷಿ ಕೂಲಿಗಾರ 25 ಕುಟುಂಬದವರಿಗೆ ಮನೆಗಳ ಹಕ್ಕುಪತ್ರ ಕೊಡಿಸುವಂತೆ ಒತ್ತಾಯಿಸಿ, ಜಿಲ್ಲಾಧಿಕಾರಿ ಕಛೇರಿ ಮುಂದೆ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಮಾಡಲಾಯಿತು.

    ಬೇಲೂರು ತಾಲೂಕು, ಕಸಬಾ ಹೋಬಳಿ, ಹೆಗ್ಗಡಿಹಳ್ಳಿ ಗ್ರಾಮದ ಸರ್ವೆ.ನಂ.46ರಲ್ಲಿ, ಗ್ರಾಮದ ಸುಮಾರು 25 ಕೃಷಿ ಕೂಲಿಗಾರ ಕುಟುಂಬಗಳು ಕಳೆದ 40 ವರ್ಷಗಳಿಂದಲೂ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ ಅಲ್ಲಿರುವ ಬಡ ಕೂಲಿಗಾರ ಕುಟುಂಬದವರಿಗೆ ಇದುವರೆಗೂ ಹಕ್ಕು ಪತ್ರ ನೀಡಿಲ್ಲ. ಕೂಡಲೇ ಈ ಕಡೆ ಗಮನಹರಿಸಿ ಬಡ ಜನರಿಗೆ ಮನೆಗಳ ಹಕ್ಕುಪತ್ರವನ್ನು ಹಾಗೂ ಸರ್ಕಾರದ ಇನ್ನಿತರೆ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಇದನ್ನೂ ಓದಿ:  ಬೆಂಗಳೂರು ಹೋಟೆಲಿನಲ್ಲಿ ಅಗ್ನಿ ಅವಘಡಕ್ಕೆ ಬೊಲೇರೋ ವಾಹನ ಕಾರಣ?

    ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಳ್ಳೂರು ಸ್ವಾಮೀಗೌಡ, ವಿಕ್ಟರ್, ಬೋಗಳೇಶ್, ಬಸವರಾಜು, ಸಚೀನ್, ಕೃಷ್ಣ, ಅಣ್ಣಪ್ಪ, ಸಂತೋಷ್, ಪ್ರಕಾಶ್ ಇತರರು ಪಾಲ್ಗೊಂಡಿದ್ದರು. ಇದನ್ನೂ ಓದಿ:  ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿನಿಗೆ ಕೀ ಆನ್ಸರ್- 8 ಜನರು ಅರೆಸ್ಟ್

  • ಮೂಲ ನಿವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ, ಏಸು ಪ್ರತಿಮೆ ನಿರ್ಮಾಣಕ್ಕೆ ಜಾಗ ಯಾವ ನ್ಯಾಯ: ಸತೀಶ್

    ಮೂಲ ನಿವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ, ಏಸು ಪ್ರತಿಮೆ ನಿರ್ಮಾಣಕ್ಕೆ ಜಾಗ ಯಾವ ನ್ಯಾಯ: ಸತೀಶ್

    ರಾಮನಗರ: ಅರಣ್ಯದಲ್ಲೇ ವಾಸ ಮಾಡುತ್ತಿದ್ದ ಆದಿವಾಸಿ ಇರುಳಿಗರನ್ನು ಒಕ್ಕಲೆಬ್ಬಿಸಿ ಹಕ್ಕುಪತ್ರಗಳನ್ನು ನೀಡದೇ ಸತಾಯಿಸುತ್ತಿರುವ ಜಿಲ್ಲಾಡಳಿತ ಇದೀಗ ಯೇಸು ಪ್ರತಿಮೆಗೆ ಜಮೀನು ಮಂಜೂರು ಮಾಡಿರುವುದು ಯಾವ ನ್ಯಾಯ ಸ್ವಾಮೀ. ಪ್ರತಿಮೆ ನಿರ್ಮಾಣ ಮಾಡುವ ಬದಲು, ಅಲ್ಲಿನ ಮೂಲ ನಿವಾಸಿಗಳಾದ ವನವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಬಹುದಾಗಿತ್ತು ಎಂದು ವನವಾಸಿ ಕಲ್ಯಾಣ ಸಮಿತಿಯ ಮುಖಂಡರು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವನವಾಸಿ ಕಲ್ಯಾಣ ಸಮಿತಿಯ ಮುಖಂಡ ಸತೀಶ್, ಮೂಲ ನಿವಾಸಿಗಳು ನಿವೇಶನ ಸೇರಿದಂತೆ ಹಕ್ಕು ಪತ್ರಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೂ ಈ ತನಕ ಅವರ ಕೂಗಿಗೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಆದರೆ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದಿಂದಲೇ ಡಿಕೆಶಿ ಭೂಮಿ ಮಂಜೂರು ಮಾಡಿಸಿರುವುದು ಯಾವ ನ್ಯಾಯ. ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ರೀತಿ ನಡೆದುಕೊಂಡಿದ್ದಾರೆ ಎಂದು ಹೇಳಿದರು.

    ಕಳೆದ 12 ದಿನಗಳಿಂದ ಕನಕಪುರ ತಾಲೂಕಿನ ಮರಳವಾಡಿಯ ಸಮೀಪದಲ್ಲಿ ಹಕ್ಕುಪತ್ರಕ್ಕಾಗಿ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ವನವಾಸಿ ಇರುಳಿಗರು ಹಗಲಿರುಳು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಸಕ ಶಿವಕುಮಾರ್ ಅವರಾಗಲೀ, ಸಂಸದ ಡಿ.ಕೆ.ಸುರೇಶ್ ಅವರಾಗಲಿ ಒಂದು ದಿನವೂ ಸ್ಥಳಕ್ಕೆ ಧಾವಿಸಿಲ್ಲ. ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ, ಆದರೆ ಪ್ರಯೋಜನವಾಗಿಲ್ಲ. ಯೇಸು ಪ್ರತಿಮೆ ನಿರ್ಮಾಣಕ್ಕಾಗಿ ಕಪಾಲ ಟ್ರಸ್ಟ್‍ಗೆ 10 ಎಕರೆ ಭೂಮಿ ನೀಡುವ ಜನಪ್ರತಿನಿಧಿಗಳು ಆದಿವಾಸಿಗಳು ಧರಣಿ ನಡೆಸುತ್ತಿದ್ದರು ಸ್ಥಳಕ್ಕೆ ಧಾವಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನತೆಗೆ ಹಕ್ಕು ಪತ್ರ ವಿತರಣೆ ಮಾಡಬೇಕಾಗಿದೆ. ಅದರಲ್ಲೂ ಕನಕಪುರ ತಾಲೂಕಿನಲ್ಲೇ 600ಕ್ಕೂ ಹೆಚ್ಚು ಮಂದಿ ಪಲಾನುಭವಿಗಳಿದ್ದಾರೆ. ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಬೇಕು. ಮೂಲ ನಿವಾಸಿಗಳ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

    ಅರಣ್ಯದಲ್ಲೇ ಹುಟ್ಟಿ ಬೆಳೆದ ಅರಣ್ಯವಾಸಿ, ಆದಿವಾಸಿ, ವನವಾಸಿಗಳು ಪ್ರತಿಭಟನೆ ನಡೆಸುತ್ತಿದ್ರು ಜಿಲ್ಲಾಡಳಿತ ಹಕ್ಕುಪತ್ರ ನೀಡುವ ಕೆಲಸ ಮಾಡಿಲ್ಲ. ಮಾಜಿ ಸಚಿವ ಡಿಕೆಶಿ ಆದಿವಾಸಿಗಳ ಕಡೆಗೆ ಗಮನ ಹರಿಸಿಲ್ಲ. ಆದರೆ ಅವರು ಯೇಸು ಪ್ರತಿಮೆ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿ ಪ್ರತಿಮೆ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಮೊದಲು ಆದಿವಾದಿಗಳಿಗೆ ಹಕ್ಕಪತ್ರ ನೀಡುವಂತೆ ಒತ್ತಾಯಿಸಿದರು.

  • ಹಕ್ಕು ಪತ್ರಗಳಿಗಾಗಿ ಹಗಲು, ರಾತ್ರಿ ಹೋರಾಟ – ಅರಣ್ಯದಲ್ಲೇ 10 ದಿನಗಳಿಂದ ಪ್ರತಿಭಟನೆ

    ಹಕ್ಕು ಪತ್ರಗಳಿಗಾಗಿ ಹಗಲು, ರಾತ್ರಿ ಹೋರಾಟ – ಅರಣ್ಯದಲ್ಲೇ 10 ದಿನಗಳಿಂದ ಪ್ರತಿಭಟನೆ

    ರಾಮನಗರ: 2006ರ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರಗಳಿಗಾಗಿ ಆಗ್ರಹಿಸಿ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಬುಡಗಯ್ಯನ ದೊಡ್ಡಿ ಗ್ರಾಮದ ಇರುಳಿಗ ಸಮುದಾಯದ ಆದಿವಾಸಿಗಳು ಕಳೆದ 10 ದಿನಗಳಿಂದ ಅರಣ್ಯದಲ್ಲೇ ಹಗಲು- ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಕಳೆದ ಡಿಸೆಂಬರ್ 19ರಂದು 93 ಕುಟುಂಬಗಳಿಗೆ ಹಕ್ಕು ಪತ್ರಕ್ಕಾಗಿ ಆಗ್ರಹಿಸಿ ಆದಿವಾಸಿಗಳು ಪ್ರತಿಭಟನೆ ಶುರು ಮಾಡಿದರು. ಅಂದಿನಿಂದ ಇಲ್ಲಿಯ ತನಕ ಅರಣ್ಯದಲ್ಲೇ ಶೆಡ್‍ಗಳನ್ನು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವಾಗ ಹಕ್ಕುಪತ್ರಗಳನ್ನು ವಿತರಣೆ ಮಾಡುತ್ತೀರೋ ಆ ಕ್ಷಣ ಪ್ರತಿಭಟನೆ ಕೈ ಬಿಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

    ಧರಣಿ ನಿರತ ಆದಿವಾಸಿಗಳ ಮನವೊಲಿಕೆಗೆ ಜಿಲ್ಲಾಡಳಿತದಿಂದ ಸಾಕಷ್ಟು ಪ್ರಯತ್ನ ನಡೆಸಿದರು ವಿಫಲವಾಗಿದೆ. ಪ್ರತಿಭಟನೆ ಸ್ಥಳಕ್ಕೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಉಪನಿರ್ದೇಶಕರು, ಸೇರಿದಂತೆ ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ, ಅರಣ್ಯ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಮತ್ತೆ ಸರ್ವೇ ಮಾಡಿ ವರದಿ ಬಂದ ಬಳಿಕ ಜಾಗಗಳನ್ನು ಗುರುತಿಸಿ ಹಕ್ಕು ಪತ್ರಗಳನ್ನು ನೀಡುವ ಭರವಸೆ ನೀಡಿದರೂ ಪ್ರತಿಭಟನಾ ನಿರತರು ಮಾತ್ರ ಹಕ್ಕು ಪತ್ರ ನೀಡುವವರೆಗೂ ಸ್ಥಳದಿಂದ ಹೊರಗೆ ಬರಲ್ಲ ಎಂದು ಅರಣ್ಯದಲ್ಲೇ ಕುಳಿತಿದ್ದಾರೆ.

    ಅಧಿಕಾರಿಗಳ ಮನವೊಲಿಕೆಗೂ ಬಗ್ಗದ ಆದಿವಾಸಿಗಳು ಅರಣ್ಯದಲ್ಲೇ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಅರಣ್ಯದಲ್ಲೇ ಒಲೆಯೊಡ್ಡಿ ಅಡುಗೆ ಮಾಡಿ ಊಟ, ತಿಂಡಿ ಮಾಡ್ತಿದ್ದಾರೆ. ಅಲ್ಲದೇ ಎಲೆ, ತಟ್ಟೆ ಇಲ್ಲದಿದ್ದರೆ ಬಂಡೆಯ ಮೇಲೆಯೇ ನೀರು ಸುರಿದು ತೊಳೆದು ಊಟ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಟೆಂಟ್‍ಗಳನ್ನು ಹಾಕಿಕೊಂಡು ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿಯೇ ಹಗಲು – ರಾತ್ರಿ ನೂಕ್ತಿದ್ದಾರೆ. ಇನ್ನೂ ರಾತ್ರಿ ವೇಳೆ ಚಳಿ ಜೋರಾಗಿದ್ದು ಪ್ರತಿಭಟನಾಕಾರರು ಚಳಿಗೂ ಕೂಡ ಬೆದರದೆ ಅರಣ್ಯದಲ್ಲೇ ಠಿಕಾಣಿ ಹೂಡಿದ್ದಾರೆ.

    ಸುಮಾರು 65 ಶೆಡ್ ನಿರ್ಮಾಣ ಮಾಡಿ ಇರುಳಿಗ ಜನಾಂಗ ತಮ್ಮ ಮೂಲ ಸ್ಥಳದಲ್ಲಿಯೇ ವಾಸವಿದ್ದೇವೆ. ಅರಣ್ಯ ಹಕ್ಕು ಕಾಯ್ದೆ 3(1)ಎಂ ಪ್ರಕಾರ ಅರಣ್ಯ ಭೂಮಿಯ ಹಕ್ಕು ಪತ್ರ ನೀಡುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಪದೇಪದೇ ಜಿಲ್ಲಾಡಳಿತ ಆದಿವಾಸಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ಈ ಬಾರಿ ಹಕ್ಕು ಪತ್ರ ಕೊಟ್ಟರೆ ಮಾತ್ರವೇ ಪ್ರತಿಭಟನೆ ಕೈ ಬಿಡುವುದು ಎಂದು ಕುಳಿತಿದ್ದಾರೆ.

  • ಹಂಚಿನಾಳ ಗ್ರಾಮದ ಅಲೆಮಾರಿಗಳಿಗೆ ಸೂರು ಸಿಗುವುದು ಯಾವಾಗ?

    ಹಂಚಿನಾಳ ಗ್ರಾಮದ ಅಲೆಮಾರಿಗಳಿಗೆ ಸೂರು ಸಿಗುವುದು ಯಾವಾಗ?

    ಯಾದಗಿರಿ: ನಿರ್ದಿಷ್ಟ ಸೂರಿಲ್ಲದೇ ಊರೂರು ಸುತ್ತಾಡುತ್ತ, ಯಾರಾದ್ದೋ ಜಾಗದಲ್ಲಿ ಶೆಡ್ ಗಳನ್ನು ನಿರ್ಮಿಸಿ, ಚಾಪೆ ಬುಟ್ಟಿಗಳನ್ನು ಹೆಣೆಯುವ ಮೂಲಕ ವಡಗೇರಾ ತಾಲೂಕಿನ ಹಂಚಿನಾಳ ಗ್ರಾಮದ ಕೆಲವು ಕುಟುಂಬಗಳು ಜೀವನ ನಡೆಸುತ್ತಿವೆ.

    ಹಂಚಿನಾಳ ಗ್ರಾಮದಲ್ಲಿ ಸುಮಾರು 66 ಕುಟುಂಬಗಳು ವಾಸ ಮಾಡುತ್ತಿದ್ದು, ಅವರ ಮೂಲ ವೃತ್ತಿ ಈಚಲು ಮರದ ಗರಿಗಳಿಂದ ಬುಟ್ಟಿ ಚಾಪೆಗಳನ್ನು ಹೆಣೆಯುವುದು. ಹೀಗಾಗಿ ಅಲೆಮಾರಿ ಜೀವನ ನಡೆಸುತ್ತಿರುವ ಅವರು ಮಳೆ ಗಾಳಿ ಬಿಸಿಲನ್ನು ಲೆಕ್ಕಿಸದೇ ಬೇರೆ ಬೇರೆ ಗ್ರಾಮಗಳಿಗೆ ಹೋಗುತ್ತಾರೆ. ಅಲ್ಲಿ ಅಭ್ಯವಿರುವ ಖಾಲಿ ಜಾಗದಲ್ಲಿ ಒಂದಷ್ಟು ದಿನ ಶೇಡ್ ಹಾಕಿಕೊಂಡು ಚಾಪೆ, ಬುಟ್ಟಿ ತಯಾರಿಸುತ್ತಾರೆ.

    ಅಲೆಮಾರಿ ಜನಾಂಗದವರು ಸತತ ಮೂರು ವರ್ಷಗಳಿಂದ ಒಂದು ನಿರ್ದಿಷ್ಟ ಸೂರು ಕಂಡುಕೊಳ್ಳಲು ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ಯಾದಗಿರಿ ಜಿಲ್ಲಾಧಿಕಾರಿಗಳು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಹಂಚಿನಾಳ ಗ್ರಾಮದಲ್ಲಿ ಸರ್ವೆ ನಂಬರ್ 59ರಲ್ಲಿ 2 ಎಕರೆ ಭೂಮಿ ಮಂಜೂರು ಮಾಡಿದ್ದರು. ಆದರೆ ಈಗ ಅಧಿಕಾರಿಗಳು ಕಾಯ್ದಿರಿಸಿದ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ಹಕ್ಕು ಪತ್ರ ವಿತರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

     

    ಹಂಚಿನಾಳ ಗ್ರಾಮದ ಅಲೆಮಾರಿ ಜನಾಂಗದವರು ನಿರ್ದಿಷ್ಟ ಸೂರಿನಲ್ಲಿ ವಾಸ ಮಾಡಲು ಹಪಪಿಸುತ್ತಿದ್ದಾರೆ. ನಿವೇಶನ ನಿರ್ಮಿಸಿ, ಹಕ್ಕು ಪತ್ರ ಹಂಚಿಕೆ ಮಾಡುವ ನಿಟ್ಟಿನಲ್ಲಿ ಸಹಾಯ ಮಾಡುವಂತೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಸರ್ಕರಕ್ಕೆ ಮನವಿ ಮಾಡಿದರು.

    https://youtu.be/nuAI9tfSQSQ