Tag: ಹಕ್ಕುಪತ್ರ

  • ಚಿಕ್ಕಬಳ್ಳಾಪುರದಲ್ಲಿ ಯಾರ ಪ್ಲೆಕ್ಸ್ ಕೂಡ ಇರಬಾರದು; ನನ್ನ ಫೋಟೋ ಇರುವ ಫ್ಲೆಕ್ಸನ್ನೂ ಕಿತ್ತು ಹಾಕಿ: ಪ್ರದೀಪ್ ಈಶ್ವರ್

    ಚಿಕ್ಕಬಳ್ಳಾಪುರದಲ್ಲಿ ಯಾರ ಪ್ಲೆಕ್ಸ್ ಕೂಡ ಇರಬಾರದು; ನನ್ನ ಫೋಟೋ ಇರುವ ಫ್ಲೆಕ್ಸನ್ನೂ ಕಿತ್ತು ಹಾಕಿ: ಪ್ರದೀಪ್ ಈಶ್ವರ್

    ಒಂದು ಮಗು ಇದ್ದರೂ ಬಸ್ ಓಡಿಸಿ: ಕೆಎಸ್‍ಆರ್‌ಟಿಸಿಯವರಿಗೆ ಸೂಚನೆ

    ಚಿಕ್ಕಬಳ್ಳಾಪುರ: ಒಂದೇ ವೋಟ್ ಇದೆ ಎಂದು ನಾವು ಬೇಡಾ ಎನ್ನುತ್ತೇವಾ? ಹಾಗಿದ್ದಾಗ ಒಂದು ಮಗುಗೆ ಬಸ್ ಓಡಿಸಬಾರದಾ? ಶಾಲೆಗೆ ಹೋಗುವ ಒಂದು ಮಗು ಇದ್ದರೂ ಕೆಎಸ್‍ಆರ್‌ಟಿಸಿ (KSRTC) ಬಸ್ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಂಚರಿಸಬೇಕು ಎಂದು ಕಾಂಗ್ರೆಸ್ (Congress) ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ.

    ಸೋಮವಾರ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕ್ಷೇತ್ರದ ಪ್ರತಿ ಹಳ್ಳಿಗೂ ಕೆಎಸ್‍ಆರ್‌ಟಿಸಿ ಬಸ್ ಸಂಚರಿಸಬೇಕು. ಶಾಲಾ-ಕಾಲೇಜುಗಳ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೌಲಭ್ಯ ಕಲ್ಪಿಸಬೇಕು. ಒಂದು ತಿಂಗಳಲ್ಲೇ ಈ ಸೌಲಭ್ಯ ಜನರ ಕೈಗೆ ಸಿಗಬೇಕು. ಯಾವ ಜನ ಕೂಡ ನಮ್ಮ ಹಳ್ಳಿಗೆ ಬಸ್ ಬಂದಿಲ್ಲ ಎಂದು ಹೇಳಬಾರದು. ನಷ್ಟ ಎಂದು ಬಸ್ ಸಂಚಾರ ನಿಲ್ಲಿಸಬೇಡಿ. ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಕಾರು, ಲಾರಿ ಮುಖಾಮುಖಿ ಡಿಕ್ಕಿ – ಕಾಂಗ್ರೆಸ್ ಮುಖಂಡ ಸ್ಥಳದಲ್ಲೇ ಸಾವು

    ಅಲ್ಲದೆ ನಗರದಲ್ಲಿ ನನ್ನ ಫ್ಲೆಕ್ಸ್ ಸೇರಿದಂತೆ ಯಾರ ಫ್ಲೆಕ್ಸ್ ಕೂಡ ಇರಬಾರದು. ನಗರ ಸ್ವಚ್ಛವಾಗಿರಬೇಕು. ಯಾರಿಗೂ ಹೆದರದೆ ಫ್ಲೆಕ್ಸ್‍ಗಳನ್ನು ತೆಗೆದು ಹಾಕಿ. ನಗರದಲ್ಲಿ ಫ್ಲೆಕ್ಸ್ ಸಂಸ್ಕೃತಿ ಕೊನೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಜನರಿಗೆ ನಕಲಿ ಹಕ್ಕು ಪತ್ರ ನೀಡಿದವರ ವಿರುದ್ಧ ಎಫ್‍ಐಆರ್ ದಾಖಲಿಸಿ ಎಂದು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಅನುಕೂಲಕ್ಕೆ 22,000 ಜನ ನಿವೇಶನ ರಹಿತರಿಗೆ ಹಕ್ಕು ಪತ್ರ (Claim Letter) ನೀಡಲು ಮಾಜಿ ಸಚಿವ ಸುಧಾಕರ್ ಮುಂದಾಗಿದ್ದರು. ಸಾವಿರಾರು ಮಂದಿಗೆ ಈಗಾಗಲೆ ವಿತರಣೆಯಾಗಿದೆ. ನಕಲಿ ಹಕ್ಕುಪತ್ರ ನೀಡಿದವರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

    ನನ್ನ ಹೊರತುಪಡಿಸಿ ಯಾರೇ ಬಂದು ನನ್ನ ಹೆಸರು ಹೇಳಿದರೂ, ಯಾರ ಮಾತು ಕೇಳಬೇಡಿ. ಅಧಿಕಾರಿಗಳು ಧೈರ್ಯದಿಂದ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ನಾನು 20 ವರ್ಷ ಶಾಸಕನಾಗಬೇಕಿಲ್ಲ. ಒಮ್ಮೆ ಆಗಿದ್ದೇನೆ. ನನ್ನ ಪವರ್ ತೋರಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಎನ್‍ಐಎಯಿಂದ ಮರಣದಂಡನೆಗೆ ಮನವಿ- ಯಾಸಿನ್ ಮಲಿಕ್‍ಗೆ ಹೈಕೋರ್ಟ್ ನೋಟಿಸ್

  • ದಶಕದಿಂದ ಹಕ್ಕು ಪತ್ರಕ್ಕಾಗಿ ನೆರೆ ಪೀಡಿತರ ಹೋರಾಟ – ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ

    ದಶಕದಿಂದ ಹಕ್ಕು ಪತ್ರಕ್ಕಾಗಿ ನೆರೆ ಪೀಡಿತರ ಹೋರಾಟ – ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ

    ಕಲಬುರಗಿ: ಪ್ರತಿ ವರ್ಷ ಮಹಾರಾಷ್ಟ್ರದಲ್ಲಿ ಧಾರಕಾರ ಮಳೆಯಾದ್ರೆ ಕಲಬುರಗಿ ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಎದುರಾಗುತ್ತದೆ. ಈ ಸಂದರ್ಭದಲ್ಲಿ ಅಫಜಲಪುರದ ದುಧಣಗಿ ಗ್ರಾಮ ಇಡೀ ಜಲಾವೃತಗೊಂಡು ಜನ ಸಂಕಷ್ಟದಲ್ಲಿ ಜೀವನ ಕಳೆಯುತ್ತಿದ್ದರು. ಈ ಗ್ರಾಮದ ಜನರಿಗೆ ಸ್ಥಳಾಂತರಕ್ಕೆ ಗ್ರಾಮದ ಹೊರವಲಯದಲ್ಲಿ ಜಮೀನು ಗುರುತಿಸಿ 10 ವರ್ಷ ಕಳೆದಿದ್ದರೂ ಹಕ್ಕುಪತ್ರ ನೀಡಿರಲಿಲ್ಲ. ಈ ಕುರಿತು ಪಬ್ಲಿಕ್ ಟಿವಿಯ ನಿರಂತರ ವರದಿಯ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

    ಜಿಲ್ಲೆಯಲ್ಲಿ ಮಳೆಗಾಲದ ಸಮಯದಲ್ಲಿ ಪ್ರವಾಹ ಬಂದು ಉಂಟಾಗಿದ್ದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರು. ಈ ಕುರಿತು ಪಬ್ಲಿಕ್ ಟಿವಿ ನೆರೆ ಪೀಡಿತ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಿ, ಗ್ರಾಮದ 546 ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಕಲಬುರಗಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದನ್ನೂ ಓದಿ: ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯ

    ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ಇದೀಗ ನೆರೆ ಪೀಡಿತ ದುಧಣಗಿ ಗ್ರಾಮದ 546 ಕುಟುಂಬಗಳಿಗೆ ಹಕ್ಕು ಪತ್ರ ನೀಡಿದೆ. ಈ ಮೂಲಕ ಇನ್ನೇನು ಕೆಲ ದಿನಗಳಲ್ಲಿ ಪ್ರವಾಹ ಬರುತ್ತೆ ಅಂತಾ ಗ್ರಾಮದ ಜನ ಆತಂಕದಲ್ಲಿರುವಾಗಲೇ ಜಿಲ್ಲಾಡಳಿತ ಗ್ರಾಮದ ಪುನರ್‍ವಸತಿಗೆ ಬೇಕಾದ ಸಿದ್ಧತೆ ಮಾಡಿಕೊಂಡಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

  • ಮನೆಗಳ ಹಕ್ಕುಪತ್ರ ನೋಂದಣಿ ಶುಲ್ಕ ಇಳಿಕೆ: ಸೋಮಣ್ಣ

    ಮನೆಗಳ ಹಕ್ಕುಪತ್ರ ನೋಂದಣಿ ಶುಲ್ಕ ಇಳಿಕೆ: ಸೋಮಣ್ಣ

    ಬೆಂಗಳೂರು: ಮನೆಗಳ ಹಕ್ಕುಪತ್ರ ನೋಂದಣಿ ಶುಲ್ಕವನ್ನು ಕಡಿಮೆ ಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

    ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಹಕ್ಕುಪತ್ರ ವಿತರಣೆ ಮತ್ತು ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ಪ್ರಧಾನಿ ಮಂತ್ರಿ ಅವಾಸ್ ಯೋಜನೆಯ ಅಡಿಯಲ್ಲಿ ಮನೆ ಕಟ್ಟಲು ಅನುದಾನ ಬಿಡುಗಡೆಯ ಚಕ್ಕುಗಳನ್ನು ವಿ.ಸೋಮಣ್ಣ ಅರ್ಹ ಫಲಾನುಭವಿಗಳಿಗೆ ವಿತರಿಸಿ, ಬಳಿಕ ಮಾತನಾಡಿದರು.

    ಫಲಾನುಭವಿಗಳಿಗೆ ಹಕ್ಕುಪತ್ರ ನೋಂದಣಿ ಶುಲ್ಕವನ್ನು ಸಾಮಾನ್ಯ ವರ್ಗದವರಿಗೆ 10ರಿಂದ 4 ಸಾವಿರ ಮತ್ತು ಎಸ್‍ಸಿ, ಎಸ್‍ಟಿ ಸಮುದಾಯದವರಿಗೆ 4 ಸಾವಿರದಿಂದ 2ಸಾವಿರಕ್ಕೆ ಇಳಿಸಲಾಗಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಬೆಂಗಳೂರಿನ ಹೃದಯಭಾಗದಲ್ಲಿದೆ. ಫಲಾನುಭವಿಗಳು ಮನೆ ಮಾರಟ ಮಾಡಬೇಡಿ, ನಿಮಗೆ ಮನೆ ಮಾಲಿಕತ್ವದ ಪತ್ರ ನೀಡಲಾಗಿದೆ. ಸುಖ ಜೀವನ ಮಾಡಲು ಸ್ವಂತ ಮನೆ ಇದ್ದರೆ ಸಾಕು ಎಂದು ಹೇಳಿದರು.

    ಪ್ರಧಾನಿ ನರೇಂದ್ರಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಬಡವರು ಸೂರು ಇಲ್ಲದೇ ಜೀವನ ಸಾಗಿಸಬಾರದು, ಶಾಶ್ವತ ಸೂರು ಪ್ರತಿಯೊಬ್ಬ ನಾಗರಿಕರಿಗೆ ಕಲ್ಪಿಸಿಬೇಕು ಎಂಬ ಆಶಯವನ್ನು ಈಡೇರಿಸಲಾಗುತ್ತಿದೆ. ಎಲ್ಲ ಧರ್ಮ, ವರ್ಗದ ಜನರಿಗೆ ವಸತಿ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ವಸತಿ ಇಲಾಖೆ ಶರವೇಗದಲ್ಲಿ ವಸತಿ ನಿರ್ಮಾಣ ಹಂಚಿಕೆ ಮಾಡುತ್ತಿದೆ. ಕಳೆದ 40 ವರ್ಷಗಳಿಂದ ನೆನಗುದಿಗೆ ಬಿದ್ದಿದ ಹಕ್ಕುಪತ್ರ ನೀಡವ ಕಾರ್ಯವನ್ನು ಇಂದು ಬಡವರಿಗೆ ಕೊಡಮಾಡಲಾಗುತ್ತಿದೆ ಎಂದರು.

    ಕೆ.ಉಮೇಶ್ ಶೆಟ್ಟಿ, ಗಂಗಭೈರಯ್ಯ, ರೂಪಲಿಂಗೇಶ್ವರ್, ಗೋವಿಂದರಾಜನಗರ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥಗೌಡ ಮತ್ತು ಸ್ಥಳೀಯ ಬಿಜೆಪಿ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು. ಗೋವಿಂದರಾಜನಗರ ವಾರ್ಡ್, ದಾಸರಹಳ್ಳಿ ಮತ್ತು ಡಾ.ರಾಜ್ ಕುಮಾರ್ ವಾರ್ಡ್ ನ ನೂರಾರು ಬಡವರಿಗೆ ಹಕ್ಕುಪತ್ರ ಮತ್ತು ಮನೆ ಕಟ್ಟಲು ಚೆಕ್ ವಿತರಿಸಲಾಯಿತು.

  • ಹಕ್ಕುಪತ್ರಕ್ಕಾಗಿ ಆದಿವಾಸಿಗಳ ಅನಿರ್ಧಿಷ್ಟಾವಧಿ ಪ್ರತಿಭಟನೆ- ಕಾಡಿನಲ್ಲೇ ವಾಸ್ತವ್ಯ

    ಹಕ್ಕುಪತ್ರಕ್ಕಾಗಿ ಆದಿವಾಸಿಗಳ ಅನಿರ್ಧಿಷ್ಟಾವಧಿ ಪ್ರತಿಭಟನೆ- ಕಾಡಿನಲ್ಲೇ ವಾಸ್ತವ್ಯ

    ರಾಮನಗರ: ಆದಿವಾಸಿ ಇರುಳಿಗ ಜನಾಂಗದವರು ಅರಣ್ಯ ಹಕ್ಕು ಕಾಯಿದೆ ಪ್ರಕಾರ ಭೂಮಿಯ ಹಕ್ಕು ಪತ್ರಕ್ಕಾಗಿ ನಡೆಸಿಸುತ್ತಿರುವ ಅನಿರ್ಧಿಷ್ಟಾವಧಿ ಹಾಗೂ ಆಹೋರಾತ್ರಿ ಪ್ರತಿಭಟನೆ ಎರಡೇ ದಿನಕ್ಕೆ ಕಾಲಿಟ್ಟಿದೆ.

    ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಬುಡಗಯ್ಯನದೊಡ್ಡಿ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯ ಪ್ರದೇಶದಲ್ಲಿ ಆದಿವಾಸಿ ಇರುಳಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನಗರ ಉಪ ವಿಭಾಗಧಿಕಾರಿ ದಾಕ್ಷಾಯಿಣಿ ಸ್ಥಳಕ್ಕೆ ಭೇಟಿ ನೀಡಿ, ಹೋರಾಟಗಾರರ ಮನವೊಲಿಕೆಗೆ ಪ್ರಯತ್ನಿಸಿದರೂ ಸಫಲವಾಗಿಲ್ಲ. ಹೀಗಾಗಿ ಪ್ರತಿಭಟನಾಕಾರರು ಅರಣ್ಯದಲ್ಲೇ ಪ್ರತಿಭಟನೆ ಮುಂದುವರಿಸಿದ್ದಾರೆ.

    ರಾಮನಗರ ಜಿಲ್ಲಾಡಳಿತ ಅರಣ್ಯ ಹಕ್ಕು ಕಾಯಿದೆ ಪ್ರಕಾರ ಭೂಮಿಯ ಹಕ್ಕು ಪತ್ರ ನೀಡದೆ ಪದೇ ಪದೇ ಮರುಪರಿಶೀಲನೆ ಮಾಡುತ್ತೇವೆ ಎಂದು ದಿಕ್ಕು ತಪ್ಪಿಸುತ್ತಿದೆ. ನಮಗೆ ಕೂಡಲೇ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ಇರುಳಿಗ ಸಮುದಾಯದ ಜನರು ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

    ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ವಿಫಲವಾದ ಬಳಿಕ ಮಾತನಾಡಿದ ಉಪವಿಭಾಗಧಿಕಾರಿ ದಾಕ್ಷಾಯಿಣಿ ಅವರು, ಹಕ್ಕುಪತ್ರಕ್ಕೆ ಆಗ್ರಹಿಸಿ ಇರುಳಿಗ ಜನಾಂಗದವರು ಧರಣಿ ಕುಳಿತುಕೊಂಡಿದ್ದಾರೆ. ಸರ್ವೇ ಮಾಡಿಸಿ ಹಕ್ಕು ಪತ್ರ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಸರ್ವೇ ಕಾರ್ಯ ಮಾಡಲಾಗಿದೆ ಅಂತ ತಾಲೂಕು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹೇಳುತ್ತಿದ್ದಾರೆ. ಈ ಕುರಿತು ದೂರವಾಣಿ ಕರೆಯ ಮೂಲಕ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಓ) ಮನ್ಸೂರ್ ಅವರನ್ನು ವಿಚಾರಿಸಿ ಮಾಹಿತಿ ಪಡೆದಿದ್ದೇನೆ. ಹಂತ ಹಂತವಾಗಿ ಹಕ್ಕು ಪತ್ರ ವಿತರಣೆಗೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಅರಣ್ಯದಲ್ಲಿ ಜನತೆ ಇರುವುದು ಕಷ್ಟವಾಗುತ್ತದೆ. ಪ್ರತಿಭಟನೆ ಕೈಬಿಡಬೇಕು ಎಂದು ಉಪವಿಭಾಗಧಿಕಾರಿ ಮನವಿ ಮಾಡಿಕೊಂಡರು. ಸರ್ವೇ ನೀಲ ನಕ್ಷೆ ಬಂದ ಕೂಡಲೇ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಪ್ರತಿಭಟನಾ ನಿರತರಿಗೆ ತಿಳಿಸಿದರು. ಆದರೆ ಅಧಿಕಾರಿಗಳ ಮನವಿಗೆ ಸೊಪ್ಪು ಹಾಕದ ಇರುಳಿಗರು ಅರಣ್ಯದಲ್ಲೇ ಮಕ್ಕಳು, ಮನೆಯವರ ಜೊತೆ ಟೆಂಟ್‍ಗಳನ್ನು ಹಾಕಿಕೊಂಡು ಪ್ರತಿಭಟನೆ ಮುಂದುವರಿಸಿದ್ದಾರೆ.