Tag: ಹಂಪಿ

  • ಹಂಪಿ ಉತ್ಸವದಲ್ಲಿ ಮಹಿಳೆಯ ಪಕ್ಕ ಮಲಗಿದ್ದ ಕಾಮುಕನಿಗೆ ಸ್ಥಳೀಯರಿಂದ ಥಳಿತ

    ಹಂಪಿ ಉತ್ಸವದಲ್ಲಿ ಮಹಿಳೆಯ ಪಕ್ಕ ಮಲಗಿದ್ದ ಕಾಮುಕನಿಗೆ ಸ್ಥಳೀಯರಿಂದ ಥಳಿತ

    ಬಳ್ಳಾರಿ: ಹಂಪಿಯ ಸಾಂಸ್ಕೃತಿಕ ಉತ್ಸವದಲ್ಲಿ ದಿನಕ್ಕೊಂದು ಅವಘಡ ಸಂಭವಿಸುತ್ತಿದೆ. ಕಳೆದಿನ ಅಷ್ಟೇ ಪೂಜಾರಿ ವಿದೇಶಿ ಹೊಡುಗಿಯ ಜೊತೆ ಸೆಕ್ಸ್ ಮಾಡುತ್ತಿದ್ದಾಗ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದ. ಈಗ ಮತ್ತೆ ಕಾಮುಕನೊಬ್ಬ ಮಹಿಳೆಯ ಪಕ್ಕ ಮಲಗಿ ಕಾಮಚೇಷ್ಟೆ ಮಾಡಿದ್ದು, ಸ್ಥಳೀಯರಿಂದ ಹಿಗ್ಗಾಮುಗ್ಗಾ ಏಟು ತಿಂದಿರುವ ಘಟನೆ ನಡೆದಿದೆ.

    ಮೂಲತಃ ಬೆಳಗಾವಿಯ ಸಚಿನ್ ಎಂಬಾತ ಸ್ಥಳೀಯರಿಂದ ಏಟು ತಿಂದ ಕಾಮುಕ. ಹಂಪಿಯ ಸಾಂಸ್ಕøತಿಕ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದ ಮಹಿಳೆಯು ಪ್ರದರ್ಶನ ಮುಗಿದ ಮೇಲೆ ರಾತ್ರಿ ಅಲ್ಲಿಯೇ ಮಲಗಿ ಕೊಂಡಿದ್ದಾರೆ. ಈ ವೇಳೆ ಮಧ್ಯರಾತ್ರಿ ಮಹಿಳೆಯು ಮಲಗಿದ್ದ ಸ್ಥಳಕ್ಕೆ ಬಂದ ಸಚಿನ್ ತನ್ನ ಕಾಮಚೇಷ್ಟೆಗಳನ್ನು ಪ್ರದರ್ಶಿಸಿದ್ದಾನೆ. ಇದನ್ನು ಕಂಡು ಆತಂಕಗೊಂಡ ಮಹಿಳೆಯು ಕೂಗಿಕೊಂಡಿದ್ದಾರೆ. ತಕ್ಷಣ ಸಮೀಪದಲ್ಲಿದ್ದ ಸ್ಥಳೀಯ ವ್ಯಾಪಾರಿಗಳು ಸಚಿನ್‍ನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿ ಸಚಿನ್ ಶನಿವಾರ ಉತ್ಸವದಲ್ಲಿ ವಿದೇಶಿ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತನೆ ಮಾಡಿದ್ದ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಲ್ಲದೇ ಹಂಪಿ ಉತ್ಸವದಲ್ಲಿ ಕಾಮುಕರ ಉಪಟಳ ಹೆಚ್ಚಳವಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಪೊಲೀಸರು ಗಸ್ತು ತಿರುಗಬೇಕು ಎಂದು ಆಗ್ರಹಿಸಿದ್ದಾರೆ.

  • ಹಂಪಿ ಉತ್ಸವದಲ್ಲಿ ವಾರ್ತಾ ಇಲಾಖೆ ಸಿಬ್ಬಂದಿ ಸಾವು

    ಹಂಪಿ ಉತ್ಸವದಲ್ಲಿ ವಾರ್ತಾ ಇಲಾಖೆ ಸಿಬ್ಬಂದಿ ಸಾವು

    ಬಳ್ಳಾರಿ: ಹಂಪಿ ಉತ್ಸವದಲ್ಲಿ ಎರಡನೇ ದಿನವೂ ಮತ್ತೊಂದು ಅವಘಡ ಸಂಭವಿಸಿದೆ. ಹೃದಯಾಘಾತದಿಂದ ವಾರ್ತಾ ಇಲಾಖೆ ಚಾಲಕರೊಬ್ಬರು ಸಾವನಪ್ಪಿದ ದುರ್ಘಟನೆ ನಡೆದಿದೆ.

    ಕೊಪ್ಪಳದ ವಾರ್ತಾ ಇಲಾಖೆಯ ಚಾಲಕ 50 ವರ್ಷದ ವೆಂಕಟೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪ್ರಿಯದರ್ಶನಿ ಹೋಟೆಲ್ ನಲ್ಲಿ ತಂಗಿದ್ದ ಸಂದರ್ಭದಲ್ಲಿ ಹೃದಯಾಘಾತಗೊಂಡು ಹೋಟೆಲ್‍ನಲ್ಲಿಯೇ ಸಾವಿಗೆ ಶರಣಾಗಿದ್ದಾರೆ.

    ಶನಿವಾರ ತಡರಾತ್ರಿ ಹಂಪಿ ಉತ್ಸವ ಮುಕ್ತಾಯಗೊಳಿಸಿ ವಾಹನದಲ್ಲಿದ್ದ ಪತ್ರಕರ್ತರು ನಿಗದಿತ ಸ್ಥಳಕ್ಕೆ ತಲುಪಿದ್ದಾರೆ. ಆದರೆ ಮರುಕ್ಷಣವೇ ವೆಂಕಟೇಶ್‍ಗೆ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತಕ್ಕೆ ಒಳಗಾಗಿದ್ದು, ಮೃತಪಟ್ಟಿದ್ದಾರೆ. ಆದರೂ ಪರೀಕ್ಷೆ ಮಾಡಿಸಲು ಪತ್ರಕರ್ತರು ಅವರನ್ನು ಹೊಸಪೇಟೆಯ ಆಸ್ಪತ್ರೆಗೆ ಕರೆದೊಯ್ಯಿದಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷೆ ಮಾಡಿ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದ್ದಾರೆ.

    ವೆಂಕಟೇಶ್ ಅಕಾಲಿಕ ಮರಣಕ್ಕೆ ಎರಡೂ ಜಿಲ್ಲೆಗಳ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ. ವೆಂಕಟೇಶರನ್ನು ಹಂಪಿ ಉತ್ಸವದ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

     

  • ಬಳ್ಳಾರಿಗೆ ಹೋದ್ರೂ ಹಂಪಿ ವಿರೂಪಾಕ್ಷನ ದರ್ಶನ ಮಾಡ್ಲಿಲ್ಲ- ಮೂಢನಂಬಿಕೆ ವಿರುದ್ಧ ಗುಡುಗೋ ಸಿಎಂಗೆ ಭಯ ಶುರುವಾಯ್ತಾ?

    ಬಳ್ಳಾರಿಗೆ ಹೋದ್ರೂ ಹಂಪಿ ವಿರೂಪಾಕ್ಷನ ದರ್ಶನ ಮಾಡ್ಲಿಲ್ಲ- ಮೂಢನಂಬಿಕೆ ವಿರುದ್ಧ ಗುಡುಗೋ ಸಿಎಂಗೆ ಭಯ ಶುರುವಾಯ್ತಾ?

    ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯನವರು ವಿರುಪಾಕ್ಷೇಶ್ವರ ದೇವಾಲಯಕ್ಕೆ ಹೋಗದೆ ವಾಪಸ್ಸು ಬಂದಿರುವುದರಿಂದ ಜನರಲ್ಲಿ ಹಲವಾರು ಪ್ರೆಶ್ನೆಗಳು ಹುಟ್ಟಿಸಿದ್ದು, ಚರ್ಚೆಗೀಡಾಗಿದೆ.

    ಮೂಢ ನಂಬಿಕೆ, ಮೌಢ್ಯತೆ ವಿರುದ್ಧ ಗುಡುಗುವ ಸಿಎಂ ಅವರಿಗೆ ಮೌಢ್ಯತೆ ಕಾಡುತ್ತಿದೆಯಾ? ಮೂಢನಂಬಿಕೆ ವಿರುದ್ಧ ಕಾಯ್ದೆ ತರುವ ಸಿಎಂ ಅವರಿಗೆ ಭಯ ಶುರುವಾಯ್ತಾ? ಹಂಪಿ ಉತ್ಸವಕ್ಕೆ ಚಾಲನೆ ಕೊಟ್ಟ ಸಿಎಂ ವಿರೂಪಾಕ್ಷ ದೇವಾಲಯಕ್ಕೆ ಹೋಗಲಿಲ್ಲ ಯಾಕೆ? ಅಂತ ಹಲವಾರು ಪ್ರೆಶ್ನೆಗಳು ಇದೀಗ ಹುಟ್ಟಿಕೊಂಡಿವೆ.

    ಶುಕ್ರವಾರದಿಂದ ಶುರುವಾಗಿರುವ ಐತಿಹಾಸಿಕ ಬಳ್ಳಾರಿಯ ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯನವರು ಬಂದು ಕಾರ್ಯಕ್ರಮ ಉದ್ಘಾಟನೆ ಮಾಡಿದ್ರು. ಆದರೆ ಉದ್ಘಾಟನೆಯಾದ ಜಾಗದಿಂದ ಕೂಗಳತೆ ದೂರದಲ್ಲಿರೋ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಸಿಎಂ ಭೇಟಿ ನೀಡಿ ದೇವರ ದರ್ಶನವನ್ನ ಪಡೆಯಲಿಲ್ಲ.

    ಕಳೆದ ನಾಲ್ಕು ವರ್ಷದಿಂದಲೂ ಹಂಪಿ ಉತ್ಸವ ಉದ್ಘಾಟನೆಗೆ ಆಗಮಿಸಿದ್ರೂ ಸಿಎಂ ಸಿದ್ದರಾಮಯ್ಯ ವಿರುಪಾಕ್ಷೇಶ್ವರನ ದರ್ಶನ ಪಡೆದಿಲ್ಲ. ಹಿಂದೆ ಹಣಕಾಸು ಸಚಿವರಾಗಿದ್ದ ವೇಳೆಯಲ್ಲೂ ಸಹ ಎರಡು ಬಾರಿ ಬಂದಿದ್ದಾಗಲೂ ದೇವರ ದರ್ಶನ ಪಡೆದಿರಲಿಲ್ಲ.

    ವಿಜಯನಗರ ಸಾಮ್ರಾಜ್ಯ ಪತನಗೊಂಡಿದ್ದಕ್ಕೆ ವಿಜಯನಗರ ಅರಸರ ಆರಾಧ್ಯದೈವ ವಿರುಪಾಕ್ಷನ ಶಾಪವೂ ಇತ್ತಂತೆ. ಜೊತೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಸಹ ಶ್ರೀಕೃಷ್ಣದೇವರಾಯನ 500ನೇ ಪಟ್ಟಾಭಿಷೇಕ ಮಾಡಿಸಿದ್ರು. ಆಮೇಲೆ ರೆಡ್ಡಿ ಅಧಿಕಾರ ಕಳೆದುಕೊಂಡು ಜೈಲು ಸೇರಿದ್ರು. ವಿರೂಪಾಕ್ಷೇಶ್ವರನ ದರ್ಶನ ಮಾಡಿದ್ರೆ ಅಧಿಕಾರ ಹೊಗುತ್ತೆ ಅನ್ನೋ ನಂಬಿಕೆ ಹಲವರಲ್ಲಿದ್ದು, ಸಿಎಂ ಕೂಡ ಅದೇ ಹಾದಿಯಲ್ಲಿ ಸಾಗ್ತಿದ್ದಾರೆ ಅಂತ ಜನ ಮಾತನಾಡಿಕೊಳ್ತಿದ್ದಾರೆ.

     

  • ಹಂಪಿಯ ಬಂಡೆಗಳ ಹಿಂದೆಯೇ ವಿದೇಶಿ ಹುಡುಗಿ ಜೊತೆ ಸ್ಥಳೀಯ ಹುಡುಗನ ರೊಮ್ಯಾನ್ಸ್!

    ಹಂಪಿಯ ಬಂಡೆಗಳ ಹಿಂದೆಯೇ ವಿದೇಶಿ ಹುಡುಗಿ ಜೊತೆ ಸ್ಥಳೀಯ ಹುಡುಗನ ರೊಮ್ಯಾನ್ಸ್!

    ಬಳ್ಳಾರಿ: ವಿಶ್ವವಿಖ್ಯಾತ ಐತಿಹಾಸಿಕ ಸ್ಥಳವಾದ ಹಂಪಿ ಬರಬರುತ್ತಾ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ವಿದೇಶಿ ಹುಡುಗಿ ಸ್ಥಳೀಯ ಹುಡುಗನ ಜೊತೆ ಸೇರಿ ಅನೈತಿಕ ಕ್ರಿಯೆಯಲ್ಲಿ ತೊಡಗಿದ್ದು, ಇದು ಸ್ಥಳೀಯರು ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.

    ಇತ್ತೀಚೆಗಷ್ಟೇ ವಿದೇಶಿಗರು ಮದ್ಯ ಬಾಟಲ್‍ಗಳನ್ನು ದೇವಾಲಯದ ಒಳಗೆ ತಂದು ಕುಡಿಯುತ್ತಿದ್ದರು. ಅಷ್ಟೇ ಅಲ್ಲದೇ ಚಪ್ಪಲಿಯನ್ನು ಕೂಡ ಹಾಕಿಕೊಂಡು ದೇವಾಲಯದ ಒಳಗಡೆಲ್ಲಾ ಓಡಾಡಿದ್ದರು. ಆದರೆ ಈಗ ಈ ವಿದೇಶಿಯರಿಂದ ಮತ್ತೆ ಅನೈತಿಕ ಚಟುವಟಿಕೆ ನಡೆದಿದೆ.

    ಹಂಪಿಯ ವಿರುಪಾಕ್ಷೇಶ್ವರ ದೇವಾಲಯದ ಹಿಂಭಾಗದಲ್ಲಿನ ವಾಟರ್ ಫಾಲ್ಸ್ ಬಳಿಯ ನಿರ್ಜನ ಪ್ರದೇಶದಲ್ಲಿ ವಿದೇಶಿ ಮಹಿಳೆಯೊಬ್ಬಳು ಸ್ಥಳೀಯ ಯುವಕನೊಂದಿಗೆ ರಾಜಾರೋಷವಾಗಿ ಕಾಮಕೇಳಿಯಲ್ಲಿ ತೊಡಗಿದ್ದಾಳೆ. ದೇವಾಲಯದ ಹಿಂದೆ ಹೋಗಿ ಯಾರು ಇಲ್ಲದ್ದನ್ನು ನೋಡಿ ಸ್ಥಳೀಯ ಹುಡುಗ ಬಟ್ಟೆ ಬಿಚ್ಚಿ ವಿದೇಶಿ ಹುಡುಗಿಯ ತೊಡೆ ಮೇಲೆ ಮಲಗಿಕೊಂಡು ಅಸಭ್ಯವಾಗಿ ಕಾಮಕೇಳಿಯಲ್ಲಿ ತೊಡಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಇಂಗ್ಲೆಂಡ್ ದೇಶದ ಮಹಿಳೆಯೆಂದು ಗುರುತಿಸಿದ್ದು, ಕಾಮಕೇಳಿಯಲ್ಲಿ ತೊಡಗಿರುವ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಂತೆ ಕ್ಯಾಮೆರಾ ಕಂಡು ಓಡಿ ಹೋಗಿದ್ದಾರೆ. ಆದರೆ ಅಲ್ಲಿನ ಸುತ್ತಮುತ್ತಲಿನ ಸ್ಥಳೀಯರು ಇದನ್ನು ನೋಡಿ ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.

  • ಮೈಸೂರು ಅರಮನೆ ಆಯ್ತು, ಈಗ ಹಂಪಿಯಲ್ಲಿ ನವಜೋಡಿಯ ಮದುವೆ ಫೋಟೋಶೂಟ್

    ಮೈಸೂರು ಅರಮನೆ ಆಯ್ತು, ಈಗ ಹಂಪಿಯಲ್ಲಿ ನವಜೋಡಿಯ ಮದುವೆ ಫೋಟೋಶೂಟ್

    ಬಳ್ಳಾರಿ: ಮೈಸೂರು ಅರಮನೆಯಲ್ಲಿ ಅನುಮತಿ ಪಡೆಯದೇ ಫೋಟೋಶೂಟ್ ಮಾಡಿದ್ದ ಛಾಯಾಚಿತ್ರಗಾರ ವೆಂಕಿ ಈಗ ಅಂತದ್ದೆ ಕಿತಾಪತಿ ಮಾಡಿದ್ದಾರೆ.

    ಹೈದ್ರಾಬಾದ್ ಮೂಲದ ಫೋಟೋಗ್ರಾಫರ್ ವೆಂಕಿ ಹಂಪಿಯಲ್ಲಿ ನವಜೋಡಿಯ ಮದುವೆ ಫೋಟೋಶೂಟ್ ಮಾಡಿದ್ದಾರೆ. ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ಬಳಿ ನವ ಜೋಡಿಯ ಫೋಟೋಶೂಟ್ ಮಾಡಲಾಗಿದೆ. ಹಂಪಿಯ ಅರಮನೆ, ಮಹನವಮಿ ದಿಬ್ಬ, ಮಾತಂಗ ಪರ್ವತ ಸೇರಿದಂತೆ ಹಲವು ಸ್ಮಾರಕಗಳ ಸುತ್ತ ಫೋಟೋಶೂಟ್ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

    ಹಂಪಿ ಸ್ಮಾರಕಗಳು, ಹಂಪಿಯ ಸುತ್ತಮುತ್ತ ಫೋಟೋಗ್ರಫಿ ಮಾಡಲು ಪ್ರಾಚ್ಯವಸ್ತು ಇಲಾಖೆಯ ಅನುಮತಿ ಪಡೆಯಲೇಬೇಕು. ಸ್ಥಳೀಯರಿಗೆ ಫೋಟೋ ತೆಗೆಯಲು ಬಿಡದ ಪ್ರಾಚ್ಯವಸ್ತು ಅಧಿಕಾರಿಗಳು ವೆಂಕಿಗೆ ಹೇಗೆ ಫೋಟೋಶೂಟ್ ಮಾಡಲು ಅವಕಾಶ ಕಲ್ಪಿಸಿದ್ರು ಅನ್ನೋ ಪ್ರಶ್ನೆ ಈಗ ಕಾಡುತ್ತಿದೆ.

    ಮೈಸೂರು ಅರಮನೆಯಲ್ಲಿ ಇದೇ ವೆಂಕಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಡೆಸಿದ್ದು ಸಾಕಷ್ಟು ಸುದ್ದಿಯಾಗಿತ್ತು.

  • ವಿಶ್ವವಿಖ್ಯಾತ ಹಂಪಿಗೆ ತೆಲುಗು ನಟ ಅಲ್ಲು ಅರ್ಜುನ್ ಭೇಟಿ

    ವಿಶ್ವವಿಖ್ಯಾತ ಹಂಪಿಗೆ ತೆಲುಗು ನಟ ಅಲ್ಲು ಅರ್ಜುನ್ ಭೇಟಿ

    ಬಳ್ಳಾರಿ: ವಿಶ್ವವಿಖ್ಯಾತ ಹಂಪಿಗೆ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಭೇಟಿ ನೀಡಿ ಕುಟುಂಬ ಸಮೇತವಾಗಿ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ರು.

    ಹಂಪಿಯ ವಿರೂಪಾಕ್ಷೇಶ್ವರನ ದರ್ಶನ ಪಡೆದು ದೇವಸ್ಥಾನದಲ್ಲಿನ ವಾಸ್ತು ಶಿಲ್ಪ ವೀಕ್ಷಣೆ ಮಾಡಿದ್ರು. ನಂತರ ಹಂಪಿಯ ಜನತಾ ಪ್ಲಾಟ್ ನಲ್ಲಿರುವ ಖಾಸಗಿ ಹೊಟೆಲ್ ನಲ್ಲಿ ಊಟ ಮಾಡಿದ್ರು. ಈ ವಿಷಯ ತಿಳಿದು ಅಲ್ಲು ಅರ್ಜುನ್ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ರು.

    ಇದೇ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನೊಂದಿಗೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ರು. ಇದರಿಂದಾಗಿ ಅಭಿಮಾನಿಗಳ ಮಧ್ಯೆ ಸಿಕ್ಕ ಅಲ್ಲು ಅರ್ಜುನ್ ಫಜೀತಿ ಪಡಬೇಕಾಯಿತು. ಪೊಲೀಸರು ಹರಸಾಸಹಸಪಟ್ಟು ಅಭಿಮಾನಿಗಳನ್ನ ನಿಯಂತ್ರಿಸಿದ್ರು.

  • ಹಂಪಿ: ಸ್ಮಾರಕ ವಿರೂಪಗೊಳಿಸಿದ್ದ ಪ್ರವಾಸಿಗ ಅರೆಸ್ಟ್

    ಹಂಪಿ: ಸ್ಮಾರಕ ವಿರೂಪಗೊಳಿಸಿದ್ದ ಪ್ರವಾಸಿಗ ಅರೆಸ್ಟ್

    ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯಲ್ಲಿ ಒಂದಲ್ಲ ಒಂದು ರೀತಿಯ ಎಡವಟ್ಟು ಆಗುತ್ತಲೇ ಇವೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಶಿವಲಿಂಗ ಧ್ವಂಸ ಮಾಡಿದ್ದ ದುಷ್ಕರ್ಮಿಗಳ ಬಗ್ಗೆ ಸುದ್ದಿಯಾಗಿತ್ತು. ಇದೀಗ ಮತ್ತೊಂದು ಸ್ಮಾರಕವನ್ನು ವಿರೂಪ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಅರೆಸ್ಟ್ ಮಾಡಲಾಗಿದೆ.

    ಬಂಧಿತನನ್ನು ಬಳ್ಳಾರಿ ಜಿಲ್ಲೆ ಸಿರಗುಪ್ಪ ಮೂಲದ ಮಧು ಎಂದು ಗುರುತಿಸಲಾಗಿದೆ. ಈತ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ಬಳ್ಳಾರಿ ಮೂಲದ ವ್ಯಕ್ತಿ ಹಜಾರ ರಾಮ ದೇವಸ್ಥಾನದ ಮುಂಭಾಗದ ಪಾನ್ ಸುಪಾರಿ ಬಜಾರ್ ಬಳಿಯ ಕಂಬವೊಂದನ್ನ ನೆಲಕ್ಕುರುಳಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಹಂಪಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಉದ್ದೇಶ ಪೂರ್ವಕವಾಗಿ ಕಂಬವನ್ನ ನೆಲಕ್ಕೆ ಉರುಳಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ ಹೊರಿಸಲಾಗಿದೆ. ಜೊತೆಗೆ ಪುರಾತನ ಸ್ಮಾರಕಗಳನ್ನ ಹಾನಿಗೊಳಿಸಿದ ಆರೋಪದ ಮೇಲೂ ಪ್ರಕರಣ ದಾಖಲಿಸಿದ್ದಾರೆ.

  • ಪ್ರವಾಸಿಗರಿಂದ ನೀರಿನ ಬಾಟಲ್ ಕಸಿದು ದಾಹ ತೀರಿಸಿಕೊಳ್ಳೋಕೆ ಪರದಾಡೋ ಕೋತಿಗಳು- ಮನಕಲಕುವ ವಿಡಿಯೋ ನೋಡಿ

    ಪ್ರವಾಸಿಗರಿಂದ ನೀರಿನ ಬಾಟಲ್ ಕಸಿದು ದಾಹ ತೀರಿಸಿಕೊಳ್ಳೋಕೆ ಪರದಾಡೋ ಕೋತಿಗಳು- ಮನಕಲಕುವ ವಿಡಿಯೋ ನೋಡಿ

    ಬಳ್ಳಾರಿ: ಮಂಗಗಳು ಅಂದ್ರೆ ಬರೀ ಕಪಿಚೇಷ್ಟೆ ಮಾಡ್ತವೆ, ಕೈಯಲ್ಲಿನ ವಸ್ತುಗಳನ್ನು ಕಸಿದುಕೊಂಡು ಕಪಿಗಳು ಕಾಟ ಕೊಡ್ತವೆ ಎಂದು ಎಲ್ಲರೂ ಹೇಳ್ತಾರೆ. ದೇವಸ್ಥಾನಕ್ಕೆ ಬರೋ ಭಕ್ತರು, ಪ್ರವಾಸಿಗರ ಕೈಯಲ್ಲಿನ ಹಣ್ಣು ಕಾಯಿಗಳನ್ನು ಕಸಿದುಕೊಳ್ಳೋದನ್ನು ನೀವೂ ನೋಡಿರಬಹುದು. ಆದ್ರೆ ಹಂಪಿಗೆ ಬರುವ ಪ್ರವಾಸಿಗರ ಕೈಯಲ್ಲಿನ ನೀರಿನ ಬಾಟಲಿಗಳನ್ನು ಮಂಗಗಳು ಕಸಿದುಕೊಂಡು ತಮ್ಮ ದಾಹವನ್ನು ನೀಗಿಸಿಕೊಳ್ಳುತ್ತಿವೆ.

    ವಿಶ್ವವಿಖ್ಯಾತ ಹಂಪಿಯ ವಿರುಪಾಕ್ಷ ದೇವರ ಸನ್ನಿಧಾನದಲ್ಲಿ ಮಂಗಗಳು ಕುಡಿಯುವ ನೀರಿಗಾಗಿ ಪರದಾಡುತ್ತಿರುವ ದೃಶ್ಯ ಕಾಣಸಿಗುತ್ತದೆ. ವಿರೂಪಾಕ್ಷೇಶ್ವರ ದೇವಾಲಯದ ಸಮೀಪ ಇರೋ ನೂರಾರು ಮಂಗಗಳು ನಿತ್ಯ ಪ್ರವಾಸಿಗರು ಕೈಯ್ಯಲ್ಲಿ ಹಿಡಿದು ಬರೋ ಬಾಟಲ್ ನೀರಿಗಾಗಿ ಕಾದು ಕುಳಿತಿರುತ್ತವೆ. ಬಾಟಲಿ ಕಂಡ ಕೂಡಲೇ ಕಸಿದುಕೊಂಡು ಬಾಯಾರಿಕೆ ತೀರಿಸಿಕೊಳ್ಳುತ್ತವೆ.

    ಮಂಗಗಳು ಕುಡಿಯುವ ನೀರಿಗೆ ಪರದಾಡೋದನ್ನು ನೋಡೋ ಪ್ರವಾಸಿಗರು ಸಹ ತಾವು ಕುಡಿಯಲು ತಂದ ನೀರನ್ನು ಮಂಗಗಳಿಗೆ ಕುಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

    https://youtu.be/Vfx7lMJP7jA

     

  • ದೇವರಿಗೂ ಬಿಸಿಲಿನ ಶಾಖ- ಹಂಪಿ ವಿರೂಪಾಕ್ಷೇಶ್ವರ ದೇವರ ಶಿರದ ಮೇಲೆ ಶೀತ ಕುಂಭದ ವ್ಯವಸ್ಥೆ

    ದೇವರಿಗೂ ಬಿಸಿಲಿನ ಶಾಖ- ಹಂಪಿ ವಿರೂಪಾಕ್ಷೇಶ್ವರ ದೇವರ ಶಿರದ ಮೇಲೆ ಶೀತ ಕುಂಭದ ವ್ಯವಸ್ಥೆ

    ಬಳ್ಳಾರಿ: ದೇವರಿಗೂ ಬಿಸಿಲಿನ ತಾಪ ತಟ್ಟುತ್ತಾ ಅಂದ್ರೆ ನಂಬ್ತೀರಾ? ನಂಬಲೇಬೇಕು. ಯಾಕಂದ್ರೆ ಬಿಸಿಲಿನ ಧಗೆಯಿಂದ ರಕ್ಷಿಸಲು ಹಂಪಿ ವಿರುಪಾಕ್ಷೇಶ್ವರ ದೇವರಿಗೆ ಇದೀಗ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಸಿಗೆ ಕಾಲದಲ್ಲಿ ಬೆಳ್ಳಿ ಕವಚ ಹೊರತಗೆದು ಶೀತ ಕುಂಭದ ವ್ಯವಸ್ಥೆ ಮಾಡುವ ಮೂಲಕ ತಂಪಾದ ವಾತಾವರಣ ಕಲ್ಪಿಸಲಾಗಿದೆ.

    ಬೇಸಿಗೆಯ ವೈಶಾಖ ಶುದ್ಧ ಪಂಚಮಿಯಿಂದ-ಜೇಷ್ಠ ಶುದ್ಧ ಪಂಚಮಿವರೆಗೆ ವಿರೂಪಾಕ್ಷೇಶ್ವರ ಶಿರದ ಮೇಲೆ ಶೀತ ಕುಂಭದ ವ್ಯವಸ್ಥೆ ಮಾಡುವ ಮೂಲಕ ದೇವರಿಗೆ 24 ಗಂಟೆಗಳ ಕಾಲ ತಂಪಾದ ನೀರು ನೆತ್ತಿಯ ಮೇಲೆ ಬಿಳುವಂತೆ ವ್ಯವಸ್ಥೆ ಕಲ್ಪಿಸುತ್ತಿರುವುದು ವಿಶೇಷವಾಗಿದೆ.

    ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಸಿಲಿನ ತಾಪಮಾನವಿರುತ್ತೆ. ಹೀಗಾಗಿ ಅತಿ ಉಷ್ಣಾಂಶದಿಂದ ಹಂಪಿ ವಿರೂಪಾಕ್ಷೇಶ್ವರ ಮೂರನೇ ಕಣ್ಣು ತೆರದು ಭಸ್ಮ ಮಾಡಬಾರದೆಂದು ಶಿವನಿಗೆ ತಂಪಾದ ನೀರಿನ ವ್ಯವಸ್ಥೆ ಮಾಡಲಾಗುತ್ತೆ. ಅಲ್ಲದೇ ದೇವರಿಗೆ ಪ್ರತಿ ನಿತ್ಯ ಹಾಕುವ ಬೆಳ್ಳಿ ಮುಖವಾಡದ ಕವಚವನ್ನು ಸಹ ಬೇಸಿಗೆಯಲ್ಲಿ ವಿರೂಪಾಕೇಶ್ವರನಿಗೆ ಧರಿಸುವುದಿಲ್ಲ. ಹೀಗಾಗಿ ಶಿವನಿಗೆ ಉಷ್ಣವಾಗದಂತೆ ಅನಾದಿ ಕಾಲದಿಂದಲೂ ದೇವರಿಗೆ ಕುಂಭದ ನೀರಿನ ಧಾರೆ ನಿರಂತರವಾಗಿ ಇರುವಂತೆ ಮಾಡಲಾಗುತ್ತದೆ ಎಂದು ಮುಖ್ಯ ಅರ್ಚಕ ಶ್ರೀನಾಥ್ ಶರ್ಮಾ ಹೇಳುತ್ತಾರೆ.

  • ಬಳ್ಳಾರಿಯಲ್ಲಿ ವಿದೇಶಿಗರ ದರ್ಬಾರ್ – ಹಂಪಿ ದೇಗುಲದಲ್ಲೇ ಮದ್ಯಾರಾಧನೆ

    ಬಳ್ಳಾರಿಯಲ್ಲಿ ವಿದೇಶಿಗರ ದರ್ಬಾರ್ – ಹಂಪಿ ದೇಗುಲದಲ್ಲೇ ಮದ್ಯಾರಾಧನೆ

    – ಚಪ್ಪಲಿ ಹಾಕಿ ಭಾರತೀಯ ಸಂಸ್ಕೃತಿಗೆ ಅಪಮಾನ

    ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ ಬರಬರುತ್ತಾ ಅನೈತಿಕ ತಾಣವಾಗುತ್ತಿದೆಯಾ ಎಂಬ ಅನುಮಾನಗಳು ಇದೀಗ ಮೂಡಿವೆ. ಯಾಕಂದ್ರೆ ಮಂಗಳವಾರ ಸಂಜೆ ವಿದೇಶಿ ಪ್ರವಾಸಿಗರು ವಿಶ್ವ ಪ್ರಸಿದ್ದಿ ವಿರೂಪಾಕ್ಷೇಶ್ವರ ದೇವಾಲಯದಲ್ಲೇ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡು ದೇವಸ್ಥಾನದ ಆವರಣದಲ್ಲೆಲ್ಲಾ ಮದ್ಯಸೇವನೆ ಮಾಡುತ್ತಾ ಓಡಾಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಅಲ್ಲದೇ ದೇವಸ್ಥಾನದ ಪ್ರಾಗಂಣದಲ್ಲಿ ಚಪ್ಪಲಿ ಧರಿಸಿಕೊಂಡು ನಡೆದಾಡಿದ್ದು ಸಹ ವಿದೇಶಿ ಪ್ರವಾಸಿಗರ ಸ್ವೇಚ್ಛಾಚಾರವನ್ನು ಎತ್ತಿತೋರಿಸುತ್ತಿತ್ತು. ದೇವಸ್ಥಾನದಲ್ಲಿ ಹತ್ತಾರು ಕಾವಲುಗಾರರು, ಹಾಗೂ ಧಾರ್ಮಿಕ ದತ್ತಿ ಇಲಾಖೆ ಕಚೇರಿಯಿದ್ದರೂ ಸಹ ಯಾರೊಬ್ಬರು ಸಹ ವಿದೇಶಿ ಪ್ರವಾಸಿಗರ ಈ ವರ್ತನೆಯನ್ನು ವಿರೋಧಿಸದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ದೇವಸ್ಥಾನದ ಆವರಣದಲ್ಲಿ ಮದ್ಯಪಾನ-ಚಪ್ಪಲಿಯನ್ನು ನಿಷೇಧಿಸಿದ್ರೂ ವಿದೇಶಿ ಪ್ರವಾಸಿಗರು ಕ್ಯಾರೆ ಎನ್ನದೇ ದುರ್ವವರ್ತನೆ ತೋರಿದ್ದಾರೆ. ವಿದೇಶಿ ಪ್ರವಾಸಿಗರು ಪ್ರವಾಸದ ನೆಪದಲ್ಲಿ ಹಂಪಿಯಲ್ಲಿ ಸ್ವೇಚ್ಛಾಚಾರದಿಂದ ವರ್ತನೆ ಮಾಡುತ್ತಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.