Tag: ಹಂಪಿ

  • ಕಲ್ಲಿನಲ್ಲೇ ಕೆತ್ತನೆಯಾಯ್ತು ಮತ್ತೊಂದು ಹಂಪಿಯ ಕಲ್ಲಿನ ರಥ!

    ಕಲ್ಲಿನಲ್ಲೇ ಕೆತ್ತನೆಯಾಯ್ತು ಮತ್ತೊಂದು ಹಂಪಿಯ ಕಲ್ಲಿನ ರಥ!

    ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥದ ಮಾದರಿಯ ಮತ್ತೊಂದು ಕಲ್ಲಿನ ರಥದ ಕಲಾಕೃತಿ ಮಾಡುವುದು ಕಷ್ಟಸಾಧ್ಯ. ಆದರೆ ಅಂತಹ ಮಾದರಿ ಕಲಾಕೃತಿಯನ್ನು ಬಳ್ಳಾರಿಯ ಶಿಲ್ಪಕಲಾ ಶಿಬಿರದಲ್ಲಿ ಕೆತ್ತನೆ ಮಾಡಲಾಗಿದೆ.

    ಹೌದು, ಜಿಲ್ಲೆಯ ಶಿಲ್ಪಕಲಾ ಅಕಾಡೆಮಿ ಹಾಗೂ ರಂಗಭಾರತಿ ವತಿಯಿಂದ ಹೂವಿನಹಡಗಲಿಯಲ್ಲಿ ನಡೆದ ಶಿಲ್ಪ ಕಲಾ ಶಿಬಿರದಲ್ಲಿ ಕೆತ್ತನೆ ಮಾಡಲಾಗಿದೆ. ದೇಶ ವಿದೇಶದಲ್ಲಿನ ಹಲವಾರು ಅಪರೂಪದ ಶಿಲ್ಪಕಲಾ ಕೃತಿಗಳ ಮಾದರಿ ಕಲಾಕೃತಿಗಳ ಕೆತ್ತನೆ ಮಾಡಿರುವುದು ಇದೀಗ ಎಲ್ಲರ ಕಣ್ಮನ ಸೆಳೆಯುತ್ತಿದೆ.

    13 ದಿನಗಳ ಕಾಲ ಹಗಲಿರುಳು ಎನ್ನದೇ ಕೆತ್ತನೆ ಮಾಡಿರುವ ಕಲಾಕೃತಿಗಳು ಇದೀಗ ಎಲ್ಲರ ಕಣ್ಮನ ಸೆಳೆಯುತ್ತಿದೆ. ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳು, ಬದಾಮಿ ಚಾಲುಕ್ಯರ ಕಾಲದ ಕಲ್ಲಿನ ಕಲಾಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ.

    ಹಾಸನ, ಉತ್ತರ ಕನ್ನಡ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗದ ಶಿಲ್ಪಕಲಾವಿದರು 13 ದಿನಗಳ ಶಿಬಿರದಲ್ಲಿ ಕೃಷ್ಣಶಿಲೆಯ ಕಲ್ಲಿನಲ್ಲಿ ಹಂಪಿಯ ಕಲ್ಲಿನ ರಥ, ಬದಾಮಿ ಚಾಲುಕ್ಯರ ಕಲಾಕೃತಿಗಳು. ಕಾಂಬೋಡಿಯಾದ ಬುದ್ದ, ಅಫ್ಘಾನಿಸ್ತಾನದ ಬುದ್ದ, ಪಾಸ್ಟಿಂಗ್ ಬುದ್ದ, ಗಾಂಧಾರ ಶೈಲಿಯ ಬುದ್ದ, ಜ್ಞಾನದ ಬೆಳವಣಿಗೆಗೆ ಪುಸ್ತಕಗಳೆ ಆಧಾರ ಎನ್ನುವಂತಹ ಸಮಕಾಲಿನ ಶಿಲ್ಪ ಕಲಾಕೃತಿಗಳನ್ನು ಕೆತ್ತನೆ ಮಾಡಿದ್ದಾರೆ. ಅಲ್ಲದೇ ಆಮೆ, ವಿಶ್ವ, ಪುಸ್ತಕ, ಮರ ಹೊಂದಿರುವ ಸಮಕಾಲಿನ ಶಿಲ್ಪಗಳ ಕಲಾಕೃತಿಗಳು ಸೇರಿದಂತೆ ವಿವಿಧ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

    ಇತಂಹ ಶಿಬಿರವನ್ನು ಆಯೋಜನೆ ಮಾಡಿದ್ದು ನಮಗೆ ಹೆಮ್ಮೆಯ ಸಂಗತಿಯಾಗಿದೆ. 13 ದಿನಗಳ ಅಲ್ಪ ಅವಧಿಯಲ್ಲೇ ಅಪರೂಪದ ಶಿಲ್ಪ ಕಲಾಕೃತಿಗಳನ್ನು ರಚಿಸಿರುವುದು ನಿಜಕ್ಕೂ ಅದ್ಭುತ ಸಾಧನೆಯಾಗಿದೆ. ಇಂತಹ ಇನ್ನಷ್ಟೂ ಶಿಲ್ಪಕಲಾ ಶಿಬಿರಗಳು ನಡೆದಲ್ಲಿ ಮತ್ತಷ್ಟೂ ಅಪರೂಪದ ಶಿಲ್ಲಕಲಾಕೃತಿಗಳು ಹೊರಹೊಮ್ಮುವುದರಲ್ಲಿ ಎರಡು ಮಾತಿಲ್ಲ ಎಂದು ಶಿಬಿರದ ಆಯೋಜಕರು ಹರ್ಷ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಹಂಪಿಯ ಶ್ರೀ ಪುರಂದರದಾಸ ಮಂಟಪ ಮುಳುಗಡೆ

    ಹಂಪಿಯ ಶ್ರೀ ಪುರಂದರದಾಸ ಮಂಟಪ ಮುಳುಗಡೆ

    ಬಳ್ಳಾರಿ: ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲ್ಲೆಯಲ್ಲಿ ನೀರು ಬಿಡಲಾಗಿದೆ. ಇದರಿಂದ ಹಂಪಿಯ ಪುರಾತನ ಕಾಲದ ಮಂಟಪ ಮುಳುಗಡೆಯಾಗಿದೆ.

    ನದಿ ಪಾತ್ರದಲ್ಲಿರುವ ಹಂಪಿಯ ಶ್ರೀ ಪುರಂದರದಾಸ ಮಂಟಪ ಮುಳುಗಡೆಯಾಗಿದೆ. ಈ ಮಂಟಪ ವಿಜಯ ವಿಠ್ಠಲ ದೇವಸ್ಥಾನ ಹಿಂಭಾಗದಲ್ಲಿದೆ. ವಿಜಯನಗರ ಸಾಲು ಸೇತುವೆ ಮತ್ತು ನದಿ ಪಾತ್ರದ ಮಂಟಪಗಳು ಮುಳುಗಡೆಯಾಗಿದ್ದು, ಅಷ್ಟೇ ಅಲ್ಲದೇ ಹಂಪಿಯ ಕೆಲ ಸ್ಮಾರಕಗಳ ಬಳಿಯೂ ಕೂಡ ನದಿ ನೀರು ಆಗಮಿಸಿದೆ. ಇದನ್ನೂ ಓದಿ:ತುಂಗಭದ್ರಾ ನದಿ ಪಾತ್ರದ ಜನರಿಗೆ ಅಧಿಕಾರಿಗಳಿಂದ ಪ್ರವಾಹದ ಎಚ್ಚರಿಕೆ

    ತುಂಗಭದ್ರಾ ಜಲಾಶಯದ ಭರ್ತಿ ಸನಿಹ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನವೇ ಸುಮಾರು ಹತ್ತು ಸಾವಿರ ನೀರನ್ನು ಬಿಡಲಾಗಿತ್ತು. ಆದರೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಗುರುವಾರ 21 ಕ್ರಸ್ಟ್ ಗೇಟುಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದೆ. ಸುಮಾರು 20 ಸಾವಿರಕ್ಕೂ ಹೆಚ್ಚು ನೀರು ನದಿ ಮೂಲಕ ಬಿಡುಗಡೆಯಾಗಿದೆ. ಪರಿಣಾಮ ಪುರಂದರದಾಸ ಮಂಟಪ ಮುಳುಗಡೆಯಾಗಿದೆ.

  • ವಿಶ್ವ ವಿಖ್ಯಾತ ಹಂಪಿಯಲ್ಲಿ ಪುಷ್ಕರಣಿ ಪತ್ತೆ

    ವಿಶ್ವ ವಿಖ್ಯಾತ ಹಂಪಿಯಲ್ಲಿ ಪುಷ್ಕರಣಿ ಪತ್ತೆ

    ಬಳ್ಳಾರಿ: ಐತಿಹಾಸಿಕ ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಪಕ್ಕದ ಆವರಣದಲ್ಲಿ ಹೊಸದಾಗಿ ಪುಷ್ಕರಣಿಯೊಂದು ಪತ್ತೆಯಾಗಿದೆ.

    ಮಧ್ಯಮ ಗಾತ್ರದ ಸುಂದರ ಕೆತ್ತನೆ ಹೊಂದಿರುವ ಈ ಪುಷ್ಕರಣಿ ಒಳಗೆ ಇಳಿಯಲು ಒಂದು ಭಾಗದಲ್ಲಿ ಮೆಟ್ಟಿಲುಗಳಿವೆ. ಈ ಪುಷ್ಕರಣಿಯ ಮಧ್ಯದಲ್ಲಿ ಒಂದು ನಂದಿ ವಿಗ್ರಹವಿದೆ.

    ವಿರೂಪಾಕ್ಷೇಶ್ವರ ದೇಗುಲದ ಪ್ರವೇಶ ದ್ವಾರದ ಎಡಬದಿಯಲ್ಲಿ ನಿರ್ಮಿಸಿದ್ದ ಯಾತ್ರಾರ್ಥಿಗಳ ಕೊಠಡಿಗಳನ್ನು ಇತ್ತೀಚಿಗೆ ತೆರವುಗೊಳಿಸಲಾಗಿತ್ತು. ಅಲ್ಲಿ ಹಾಸುಗಲ್ಲುಗಳನ್ನು ಜೋಡಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೆತ್ತನೆಯ ಕಲ್ಲುಗಳು ಕಂಡು ಬಂದಿದ್ದರಿಂದ ಈ ನೆಲವನ್ನು ಇತ್ತೀಚಿಗೆ ಅಗೆದಿದ್ದರು. ಈ ವೇಳೆ ಕಲ್ಯಾಣಿ ಪತ್ತೆಯಾಗಿದೆ.

    ಪತ್ತೆಯಾದ ಪುಷ್ಕರಣಿಯ ಬಗ್ಗೆ ಸಿಬ್ಬಂದಿಗಳು ಪರೀಶಿಲನೆ ನಡೆಸುತ್ತಿದ್ದಾರೆ.

  • ತುಂಗಭದ್ರಾ ನದಿ ಪ್ರವಾಹಕ್ಕೆ ಸಿಲುಕಿದ್ದ ಮಹಾರಾಷ್ಟ್ರ ಪೊಲೀಸರು ಬಚಾವ್!

    ತುಂಗಭದ್ರಾ ನದಿ ಪ್ರವಾಹಕ್ಕೆ ಸಿಲುಕಿದ್ದ ಮಹಾರಾಷ್ಟ್ರ ಪೊಲೀಸರು ಬಚಾವ್!

    ಬಳ್ಳಾರಿ: ನದಿಗೆ ಸ್ನಾನಕ್ಕೆ ತೆರಳಿ, ನೀರುಪಾಲಾಗಿದ್ದ ಮಹಾರಾಷ್ಟ್ರ ಪೊಲೀಸರು ಅದೃಷ್ಟವಶಾತ್ ಬದುಕುಳಿದ ಘಟನೆ ಹಂಪಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ.

    ಐವರು ಮಹಾರಾಷ್ಟ್ರ ಪೊಲೀಸರು ವಿರೂಪಾಕ್ಷ ದೇವರ ದರ್ಶನಕ್ಕಾಗಿ ಹಂಪಿಗೆ ಬಂದಿದ್ದರು. ಈ ವೇಳೆ ಎಲ್ಲರೂ ಸ್ನಾನ ಮಾಡಲು ತುಂಗಭದ್ರಾ ನದಿಗೆ ಇಳಿದಿದ್ದು, ಈಜಲು ಮುಂದಾಗಿದ್ದ ವೇಳೆ ಪ್ರವಾಹಕ್ಕೆ ಸಿಲುಕಿದ್ದರು. ಇದನ್ನು ಕಂಡ ಸ್ಥಳೀಯರು ಹಾಗೂ ಮೀನುಗಾರರು ತಕ್ಷಣವೇ ನದಿಯಲ್ಲಿ ದೋಣಿ ಮೂಲಕ ತೆರಳಿ ಅವರನ್ನು ರಕ್ಷಿಸಿದ್ದಾರೆ.

    ಸದ್ಯ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಂಪಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮೋಡಗಳ ಮರೆಯಲ್ಲಿ ಹಂಪಿ ಕಂಡು ಬಂದಿದ್ದು ಹೀಗೆ

    ಮೋಡಗಳ ಮರೆಯಲ್ಲಿ ಹಂಪಿ ಕಂಡು ಬಂದಿದ್ದು ಹೀಗೆ

    ಬಳ್ಳಾರಿ: ಕಣ್ಣು ಇದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು ಅನ್ನೋ ನಾಣ್ಣುಡಿಯಿದೆ. ವಿಶ್ವ ವಿಖ್ಯಾತ ಹಂಪಿಯನ್ನು ನೋಡುವುದೇ ಒಂದು ವೈಶಿಷ್ಟ್ಯ.

    ವಿಶ್ವ ವಿಖ್ಯಾತ ಹಂಪಿಯನ್ನು ನೋಡಲು ಎರಡು ಕಣ್ಣು ಸಾಲದೂ ಅಂತಾರೆ. ಆದರೆ ಮೋಡಗಳ ಮರೆಯಲ್ಲಿ ನಿಮಿಷ ನಿಮಿಷಕ್ಕೂ ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ನೋಡುವುದೇ ಒಂದು ಹಬ್ಬವಾಗಿದೆ. ಛಾಯಾ ಚಿತ್ರಗ್ರಾಹಕ ಮತ್ತು ಪತ್ರಕರ್ತ ಅವರು ತಮ್ಮ ಕ್ಯಾಮೆರಾದಲ್ಲಿ ಮೋಡಗಳ ಚೆಲ್ಲಾಟಗಳ ಮಧ್ಯೆ ಹಂಪಿಯ ಕೆಲವು ಸ್ಥಳಗಳನ್ನು ಸೆರೆ ಹಿಡಿದಿದ್ದಾರೆ.

    ಕಮಲಾಪುರದ ನಿವಾಸಿ ರಾಚಯ್ಯ ತಮ್ಮ ಕ್ಯಾಮೆರಾಗಳಲ್ಲಿ ಮೋಡಗಳ ಚೆಲ್ಲಾಟಗಳ ಮಧ್ಯೆ ಹಂಪಿ ಹೇಗೆ ಬಿಂಬಿಸುತ್ತವೆ ಅನ್ನೋ ವಿಶೇಷವಾದ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

    ವಿಜಯ ವಿಠ್ಠಲ ದೇವಾಲಯ ಹಾಗೂ ಹಂಪಿಯ ಕಲ್ಲಿನ ರಥದ ಮೇಲೆ ಮೋಡಗಳು ಹಾಯ್ದು ಹೋಗುವ ವೇಳೆ ಈ ಚಿತ್ರಗಳನ್ನು ರಾಚಯ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ಮನೋಜ್ಞವಾಗಿ ಮೂಡಿಬಂದಿದೆ.

  • ಹಂಪಿ ದೇಗುಲದ ಹುಂಡಿಯಲ್ಲಿ ಹಳೆನೋಟುಗಳ ಜೊತೆ ಕೆನಡಾ, ಕೊರಿಯಾ ಕರೆನ್ಸಿ ಪತ್ತೆ

    ಹಂಪಿ ದೇಗುಲದ ಹುಂಡಿಯಲ್ಲಿ ಹಳೆನೋಟುಗಳ ಜೊತೆ ಕೆನಡಾ, ಕೊರಿಯಾ ಕರೆನ್ಸಿ ಪತ್ತೆ

    ಬಳ್ಳಾರಿ: 500, 1 ಸಾವಿರ ರೂ. ನೋಟು ನಿಷೇಧವಾಗಿ ಒಂದು ವರ್ಷ ಕಳೆದ್ರೂ ಮತ್ತೆ ಮತ್ತೆ ಹಳೆಯ ನೋಟುಗಳು ಪತ್ತೆಯಾಗುತ್ತಲೇ ಇವೆ.

    ಚಲಾವಣೆಗೆ ಬಾರದ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ದೇವಸ್ಥಾನದ ಹುಂಡಿಗೆ ಹಾಕಿ ಭಕ್ತರು ಕಾಣಿಕೆ ಒಪ್ಪಿಸಿದ್ದಾರೆ. ಐತಿಹಾಸಿಕ ಪ್ರಸಿದ್ಧ ದೇವಸ್ಥಾನ ಹಂಪಿಯ ವಿರೂಪಕ್ಷೇಶ್ವರ ದೇವಾಲಯದ ಗರ್ಭಗುಡಿಯ ಹುಂಡಿ ಎಣಿಕೆ ಕಾರ್ಯ ವೇಳೆಯಲ್ಲಿ ಸುಮಾರು 18 ಸಾವಿರ ರೂ. ಮೌಲ್ಯದ ನಿಷೇಧಿತ ನೋಟು ಪತ್ತೆಯಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

    ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಭೇಟಿ ನೀಡುವುದರಿಂದ ಕೆನಡಾ, ಕೊರಿಯಾ ದೇಶದ ವಿವಿಧ ಕರೆನ್ಸಿ ನೋಟುಗಳು ಸಹ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ದೇವರಿಗೆ ತಮ್ಮನ್ನು ಪರೀಕ್ಷೆಯಲ್ಲಿ ಪಾಸು ಮಾಡುವ ಕುರಿತು ಮನವಿ ಪತ್ರವನ್ನು ಕೂಡ ಹುಂಡಿಯೊಳಗೆ ಹಾಕಿದ್ದಾರೆ.

    ಈ ಬಾರಿ ಕಾಣಿಕೆ ಹುಂಡಿಯಲ್ಲಿ 18 ಲಕ್ಷ ರೂ. ನಗದು ಸಂಗ್ರಹಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

  • ಯಾರಿಗೂ ತಿಳಿಯದಂತೆ ಸಾಮಾನ್ಯರಂತೆ ಹಂಪಿ ವೀಕ್ಷಣೆ ಮಾಡಿದ ಇಮ್ರಾನ್ ಖಾನ್!

    ಯಾರಿಗೂ ತಿಳಿಯದಂತೆ ಸಾಮಾನ್ಯರಂತೆ ಹಂಪಿ ವೀಕ್ಷಣೆ ಮಾಡಿದ ಇಮ್ರಾನ್ ಖಾನ್!

    ಬೆಂಗಳೂರು: ಬಾಲಿವುಡ್ ಕ್ಯೂಟ್ ಆ್ಯಂಡ್ ಯಂಗ್ ಸ್ಟಾರ್ ಇಮ್ರಾನ್ ಖಾನ್ ಪತ್ನಿ ಜೊತೆ ವಿಶ್ವ ವಿಖ್ಯಾತ ಹಂಪಿ ವೀಕ್ಷಣೆ ಮಾಡಿದ್ದಾರೆ. ತಲೆಗೊಂದು ಟೋಪಿ ಧರಿಸಿ ಸಾಮಾನ್ಯರಂತೆ ಹಂಪಿಯ ಎಲ್ಲ ಪ್ರವಾಸಿ ತಾಣಗಳ ವೀಕ್ಷಣೆ ಮಾಡಿದ್ದಾರೆ.

    ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷ ಸ್ವಾಮಿ ದೇವಸ್ಥಾನ, ಕಡಲೆಕಾಳು ಗಣೇಶ, ಸಾಸಿವೆ ಕಾಳು ಗಣೇಶ, ಕೃಷ್ಣ ದೇವಸ್ಥಾನ, ಬಡವಿಲಿಂಗ, ಉಗ್ರ ನರಸಿಂಹ, ನೆಲಸ್ಥರ ಶಿವಾಲಯ, ಅರಮನೆ ಆವರಣ, ಕಮಲ್ ಮಹಲ್, ಗಜಶಾಲೆ, ಹಜಾರ ರಾಮ ದೇವಸ್ಥಾನ, ಮಹಾನವಮಿ ದಿಬ್ಬ, ಕಪ್ಪುಕಲ್ಲಿನ ಪುಷ್ಕರಣಿ, ರಾಣಿಸ್ನಾನ ಗೃಹ, ವಿಜಯವಿಠ್ಠಲ ದೇವಸ್ಥಾನ ಹಾಗೂ ಹೇಮಕೂಟವನ್ನು ಪತ್ನಿ ಅವಂತಿಕ ಮಲ್ಲಿಕ್ ಜೊತೆ ವೀಕ್ಷಣೆ ಮಾಡಿದ್ದಾರೆ.

    ಸಾಮಾನ್ಯರ ಹಾಗೆಯೇ ಹಂಪಿಯ ಪ್ರತಿಯೊಂದು ಸ್ಥಳವನ್ನು ತಿರುಗಾಡಿ ನೋಡಿದ್ದಾರೆ. ಹಂಪಿ ಆಗಮಿಸಿದ್ದ ಇಮ್ರಾನ್ ಸ್ಥಳೀಯ ಕಮಲಾಪುರದ ಖಾಸಗಿ ಹೋಟೆಲ್ ನಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿದ್ದರು.

    ಬಾಲಿವುಡ್‍ನ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಸೋದರನಾಗಿರುವ ಇಮ್ರಾನ್ ಖಾನ್ 2008ರಲ್ಲಿ `ಜಾನೇ ತು, ಯಾ ಜಾನೇ ನಾ’ ಸಿನಿಮಾದ ಮೂಲಕ ಸಿನಿ ಅಂಗಳಕ್ಕೆ ಹೀರೋ ಆಗಿ ಎಂಟ್ರಿ ನೀಡಿದ್ದಾರೆ. ಕಿಡ್ನಾಪ್, ಲಕ್, ಐ ಹೇಟ್ ಲವ್ ಸ್ಟೋರಿ, ಡೆಲ್ಲಿ ಬೆಲ್ಲಿ, ಬ್ರೇಕ್ ಕೆ ಬಾದ್, ಮೇರೆ ಬ್ರದರ್ ಕೀ ದುಲ್ಹನ್, ಏಕ್ ಮೇ ಔರ್ ಏಕ್ ಥು, ಗೋರಿ ತೇರೆ ಪ್ಯಾರ್ ಮೇ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ನಡು ರಸ್ತೆಯಲ್ಲೇ ಹೊತ್ತಿ ಉರಿದ ಹಂಪಿ ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್

    ನಡು ರಸ್ತೆಯಲ್ಲೇ ಹೊತ್ತಿ ಉರಿದ ಹಂಪಿ ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್

    ಬಳ್ಳಾರಿ: ಹಂಪಿ ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್ ಬೆಂಕಿ ತಗುಲಿ ನಡು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಹೊಸಪೇಟೆ ಬೈಪಾಸ್ ನಲ್ಲಿ ನಡೆದಿದೆ.

    ಹುನಗುಂದ ತಾಲೂಕಿನ ವಜ್ಜಲ ಗ್ರಾಮದ ಸರ್ಕಾರಿ ಶಾಲೆಯಿಂದ 16 ಮಕ್ಕಳು ಮತ್ತು ಮೂವರು ಶಿಕ್ಷಕರು ಗುರುವಾರ ಮುಂಜಾನೆ ಶಾಲಾ ಮಕ್ಕಳು ಹಂಪಿಗೆ ಪ್ರವಾಸಕ್ಕೆ ಆಗಮಿಸಿದ್ದರು. ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಹಂಪಿ ಪ್ರವಾಸಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳ ಬಸ್ ಗೆ ಶಾರ್ಟ್ ಸರ್ಕ್ಯೂಟ್‍ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಬಸ್ ನಲ್ಲಿದ್ದ 16 ಮಕ್ಕಳನ್ನು ಬಸ್ ಸಿಬ್ಬಂದಿ ಹಾಗೂ ಸ್ಥಳೀಯರು ಬಸ್ ಗಾಜುಗಳನ್ನು ಒಡೆದು ರಕ್ಷಣೆ ಮಾಡಿದ್ದಾರೆ.

    ಘಟನೆ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅದೃಷ್ಟವಶಾತ್ ಬಹುದೊಡ್ಡ ಅನಾಹುತ ತಪ್ಪಿದಂತಾಗಿದೆ. ಬಸ್ ನಿಂದ ರಕ್ಷಣೆ ಮಾಡಿದ ಶಾಲಾ ಮಕ್ಕಳನ್ನು ಬೇರೆ ವಾಹನದ ವ್ಯವಸ್ಥೆ ಮಾಡಿ ಮಾಜಿ ಶಾಸಕ ಆನಂದಸಿಂಗ್ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಘಟನೆ ಸಂಬಂಧ ಹೊಸಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೂರು ದಿನಗಳ ಹಂಪಿ ಉತ್ಸವಕ್ಕೆ ಅದ್ಧೂರಿ ತೆರೆ -ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಸಚಿವ ಸಂತೋಷ್ ಲಾಡ್

    ಮೂರು ದಿನಗಳ ಹಂಪಿ ಉತ್ಸವಕ್ಕೆ ಅದ್ಧೂರಿ ತೆರೆ -ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಸಚಿವ ಸಂತೋಷ್ ಲಾಡ್

    ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ ಉತ್ಸವ ಭಾನುವಾರ ಮುಕ್ತಾಯಗೊಂಡಿತು. ಕೊನೆಯ ದಿನದ ಕಾರ್ಯಕ್ರಮಗಳು ನಡೆಯುವ ವೇಳೆಯೇ ಧಾರಾಕಾರವಾಗಿ ಮಳೆ ಸುರಿಯಿತು.

    ಕಳೆದ ಮೂರು ದಿನಗಳಿಂದ ಸಂಭ್ರಮ ಸಡಗರದಿಂದ ನಡೆದ ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ತೆರೆ ಬಿದ್ದಿದೆ. ಲಕ್ಷಾಂತರ ಪ್ರೇಕ್ಷಕರ ಸಮ್ಮುಖದಲ್ಲಿ ಕೊನೆಯ ದಿನ ಅದ್ಧೂರಿಯಾಗಿ ಕಾರ್ಯಕ್ರಮಗಳು ಜರುಗಿದವು. ಮೈಸೂರಿನ ಕಾರಂಜಿ ಪೌಂಡೇಷನ್ ವಿಕಲಚೇತನ ಮಕ್ಕಳೊಂದಿಗೆ ಹೆಜ್ಜೆಹಾಕಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಕ್ಕಳ ನೃತ್ಯ ನೋಡಿ ಭಾವುಕರಾಗಿ ಕಣ್ಣೀರಿಟ್ಟರು.

    ಗಾಯತ್ರಿ ವಿದ್ಯಾಪೀಠ ವೇದಿಕೆ ಮುಂಭಾಗದ ವಿವಿಐಪಿ ಗ್ಯಾಲರಿಯಲ್ಲಿ ಕುಳಿತಿದ್ದ ಹಂಪಿ ಕನ್ನಡ ವಿವಿ ಕುಲಪತಿ ಅವರನ್ನು ಪೊಲೀಸರು ಎಬ್ಬಿಸಿ ಹೊರಗೆ ಕಳುಹಿಸಿದ್ರು. ಇದರಿಂದ ರೊಚ್ಚಿಗೆದ್ದ ವಿವಿ ಕುಲಪತಿ ಮಲ್ಲಿಕಾ ಘಂಟಿ ಇದೂ ಜನೋತ್ಸವವಲ್ಲ ಅಧಿಕಾರಿಗಳ ಉತ್ಸವವೆಂದು ಕಿಡಿಕಾರಿದರು.

    ರಾತ್ರಿ 10:30ಕ್ಕೆ ಆರಂಭವಾದ ಧಾರಾಕಾರ ಮಳೆಯಿಂದ ಗಾಯತ್ರಿ ವಿದ್ಯಾಪೀಠ, ಎಂಪಿ ಪ್ರಕಾಶ ವೇದಿಕೆ ಸೇರಿದಂತೆ 11 ವೇದಿಕೆಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳು ಅರ್ಧಕ್ಕೆ ಸ್ಥಗಿತಗೊಂಡವು. ಧಾರಕಾರವಾಗಿ ಮಳೆ ಸುರಿದ ಪರಿಣಾಮ ಮಳೆಯಿಂದ ರಕ್ಷಿಸಿಕೊಳ್ಳಲು ಪ್ರೇಕ್ಷಕರು ಕುರ್ಚಿಗಳನ್ನೇ ಛತ್ರಿಗಳನ್ನಾಗಿ ಬಳಸಿಕೊಂಡರು. ಎಂಪಿ ಪ್ರಕಾಶ್ ವೇದಿಕೆಯಲ್ಲಿ ಮನೋಮೂರ್ತಿ ಹಾಗೂ ಸಂಗಡಿಗರು ನೀಡಿದ ರಸಮಂಜರಿ ಕಾರ್ಯಕ್ರಮ ಹಾಗೂ ಗಾಯತ್ರಿ ವಿದ್ಯಾಪೀಠ ವೇದಿಕೆಯಲ್ಲಿ ನೀತಿ ಮೋಹನ್ ನೀಡಿದ ಕಾರ್ಯಕ್ರಮದಲ್ಲಿ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.

    ಕೊನೆಯ ದಿನ ನಡೆದ ಮಾಡಲ್‍ಗಳ ರ್ಯಾಂಪ ವಾಕ್ ಹಾಗೂ ಸಾಂಪ್ರದಾಯಿಕ ಉಡುಪು ಪ್ರದರ್ಶನ ಎಲ್ಲರ ಗಮನ ಸೆಳೆಯುವಲ್ಲಿ ಯಶ್ವಸಿಯಾಯ್ತು. ಮೂರು ದಿನಗಳ ಉತ್ಸವದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಭಾಗವಹಿಸಿರುವುದರಿಂದ ಈ ಬಾರಿ ದಾಖಲೆ ನಿರ್ಮಾಣವಾಗಿದೆ.

  • ಹಂಪಿ ಉತ್ಸವಕ್ಕೆ ಮೆರಗು ನೀಡಿದ ಡಾಗ್ ಶೋ-27 ತಳಿಯ 200 ಕ್ಕೂ ಹೆಚ್ಚು ಶ್ವಾನಗಳ ಪ್ರದರ್ಶನ

    ಹಂಪಿ ಉತ್ಸವಕ್ಕೆ ಮೆರಗು ನೀಡಿದ ಡಾಗ್ ಶೋ-27 ತಳಿಯ 200 ಕ್ಕೂ ಹೆಚ್ಚು ಶ್ವಾನಗಳ ಪ್ರದರ್ಶನ

    ಬಳ್ಳಾರಿ: ವಿಶ್ವವಿಖ್ಯಾತ ಹಂಪಿ ಉತ್ಸವ ದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಡಾಗ್ ಶೋ ಎಲ್ಲರ ಕಣ್ಮನ ಸೆಳೆಯಿತು.

    ಉತ್ಸವದ ಭಾಗವಾಗಿ ಹೊಸಪೇಟೆ ನಗರದ ಮುನ್ಸಿಪಲ್ ಮೈದಾನದಲ್ಲಿ ಡಾಗ್ ಶೋ ಏರ್ಪಡಿಸಲಾಗಿತ್ತು. ಈ ಶೋನಲ್ಲಿ ಸುಮಾರು 27 ವಿವಿಧ ತಳಿಯ 200ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುವ ಮೂಲಕ ನೋಡುಗರನ್ನು ಬೆರಗುಗೊಳಿಸಿದವು.

    ಪ್ರದರ್ಶನದಲ್ಲಿ ಪ್ರಮುಖವಾಗಿ ಬರ್ನಾಡ್, ಬಾಕ್ ಸ್ಟೇಬೇರಿಯನ್, ಮುಧೋಳ್, ಡಾಲ್ಮೇಶಿಯನ್, ಅಕಿತಾ, ಪಾಕಿಸ್ತಾನ ಬುಲ್ಲಿ, ಪಮೆರೇಯಿನ್ ಸೇರಿದಂತೆ ದೇಶ ವಿದೇಶಗಳ ತಳಿಗಳು ಭಾಗವಹಿಸಿದ್ದವು. ಅದರಲ್ಲೂ ಪೊಲೀಸ್ ಇಲಾಖೆಯ ಶ್ವಾನಗಳು ತಮ್ಮ ಕಮಾಂಡರ್ ಹೇಳಿದಂತೆ ಲೆಫ್ಟ್, ರೈಟ್ ಹಾಗೂ ಸೂಟ್‍ಕೇಸ್‍ನಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಅಚ್ಚರಿ ಮೂಡಿಸಿದವು.

    ಡಾಗ್ ಶೋವನ್ನು ನೋಡಲು ಮೈದಾನ ತುಂಬ ಕಿಕ್ಕಿರಿದು ತುಂಬಿದ ಜನರನ್ನು ನೋಡಿದ ಕೆಲವು ಶ್ವಾನಗಳು ಗಾಬರಿಗೊಂಡವು. ನಂತರ ಶ್ವಾನ ಪೋಷಕರು ಅವುಗಳ ಮೈದಡವಿ ಪ್ರೀತಿಯನ್ನು ತೊರಿಸುತಿದ್ದಿದ್ದು ಸಾಮಾನ್ಯವಾಗಿತ್ತು.