Tag: ಹಂಪಿ

  • ಆಟೋರಾಜನ ಕೈಹಿಡಿದ ಬೆಲ್ಜಿಯಂ ಕನ್ಯೆ – ಹಿಂದೂ ಸಂಪ್ರದಾಯದಂತೆ ಅದ್ದೂರಿ ಮದುವೆ

    ಆಟೋರಾಜನ ಕೈಹಿಡಿದ ಬೆಲ್ಜಿಯಂ ಕನ್ಯೆ – ಹಿಂದೂ ಸಂಪ್ರದಾಯದಂತೆ ಅದ್ದೂರಿ ಮದುವೆ

    ಬಳ್ಳಾರಿ: ಎತ್ತಣ ಮಾಮರ ಎತ್ತಣ ಕೋಗಿಲೆ? ಎತ್ತಣಿಂದೆತ್ತ ಸಂಬಂಧವಯ್ಯ ಎಂಬ ಅಲ್ಲಮ ಪ್ರಭು ಅವರ ವಚನ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಲ್ಜಿಯಂ (Belgium) ಕನ್ಯೆ, ವಿಶ್ವವಿಖ್ಯಾತ ಹಂಪಿಯ (Hampi) ಯುವಕ ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ.

    ಹೌದು, ಹಂಪಿಯ ನಿವಾಸಿ ಅನಂತರಾಜು ಹಾಗೂ ಬೆಲ್ಜಿಯಂ ದೇಶದ ಕೆಮಿಲ್ ಇಬ್ಬರು ಪರಸ್ಪರ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಸಪ್ತಪದಿ ತುಳಿದಿದ್ದಾರೆ. ಬುಧವಾರ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಈ ಜೋಡಿ, ಇಂದು ಮುಂಜಾನೆ 8:30 ರಿಂದ 9:30ರ ಕುಂಭ ಶುಭ ಮುಹೂರ್ತದಲ್ಲಿ ಹಂಪಿಯ ವಿರೂಪಾಕ್ಷೇಶ್ವರನ ಸನ್ನಧಿಯಲ್ಲಿ ಉಭಯ ಕುಟುಂಬಸ್ಥರ ಸಮಕ್ಷಮದಲ್ಲಿ ಪ್ರೇಮಿಗಳು ಮದುವೆಯಾಗಿದ್ದಾರೆ. ಇದನ್ನೂ ಓದಿ: ಪದವಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಧ್ಯಾನ – ಯುಜಿಸಿಯಿಂದ ಪತ್ರ

    ಅನಂತರಾಜು ಆಟೋ ಚಾಲಕ ಹಾಗೂ ಹಂಪಿ ಮಾರ್ಗದರ್ಶಿಯಾಗಿ ವಿಜಯನಗರದ ಗತವೈಭವವನ್ನು ಪ್ರವಾಸಿಗರಿಗೆ ವಿವರಿಸುತ್ತಾರೆ. ಕೆಮಿಲ್ ಬೆಲ್ಜಿಯಂನಲ್ಲಿ ಸೋಷಿಯಲ್ ವರ್ಕರ್ ಆಗಿದ್ದಾರೆ. ಕಳೆದ ನಾಲ್ಕೈದು ವರ್ಷದ ಹಿಂದೆ ಜೀಪ್ ಫಿಲಿಪ್ಪೆ ಕುಟುಂಬ ಸಮೇತ ಹಂಪಿ ಗತವೈಭವ ಅರಿಯಲು ಬಂದಿದ್ದರು. ಜೀಪ್ ಫಿಲಿಪ್ಪೆ ಪರಿವಾರಕ್ಕೆ ಹಂಪಿಯಲ್ಲಿ ಆಟೋ ಚಾಲಕ ಅನಂತರಾಜುವಿನ ಪರಿಚಯ ಆಗುತ್ತದೆ. ಅನಂತರಾಜು ಪ್ರಾಮಾಣಿಕ ಆಟೋ ಚಾಲಕ ಎನ್ನುವುದರೊಂದಿಗೆ ಉತ್ತಮ ಮಾರ್ಗದರ್ಶಕರಾಗಿಯೂ ಅವರ ಮನಗೆದ್ದಿದ್ದಾನೆ. ಜೀಪ್ ಫಿಲಿಪ್ಪೆ ಅವರ ತೃತೀಯ ಸುಪುತ್ರಿ ಕೆಮಿಲ್ ಹಂಪಿಯ ನಿಸರ್ಗದ ಸೊಬಗಿಗೆ ಮನಸೋತಿದ್ದಾರೆ. ದಿನ ಕಳೆದಂತೆ ಕೆಮಿಲ್ ಅವರ ಪರಿವಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಾರ್ಗದರ್ಶಕ ಅನಂತರಾಜುವಿನ ಮೇಲೆ ಯುವತಿ ಕೆಮಿಲ್‍ಗೆ ಪ್ರೇಮ ಅರಳಿದೆ. ಈ ಮಧ್ಯೆ ಇಬ್ಬರೂ ಬೇರೆ ಬೇರೆ ದೇಶದಲ್ಲಿದ್ದರೂ ಪ್ರೀತಿ ಮಾತ್ರ ಕಡಿಮೆ ಆಗಿರಲಿಲ್ಲ. ಇದೀಗ ಇಂದು ಮದುವೆ ಆಗಿ ಎಲ್ಲರ ಗಮನ ಸೆಳೆದಿದ್ದಾರೆ.

    ಮೂರು ವರ್ಷದ ಹಿಂದೆಯೇ ಪ್ರೇಮ ವಿವಾಹವಾಗಬೇಕಿದ್ದ ಜೋಡಿಗೆ ಕೊರೊನಾ ಮಹಾಮಾರಿ ತಡೆಯೊಡ್ಡಿತ್ತು. ಕೆಮಿಲ್ ಕುಟುಂಬದವರಿಗೆ ಮಗಳ ವಿವಾಹವನ್ನು ಬೆಲ್ಜಿಯಂ ದೇಶದಲ್ಲಿ ಅದ್ದೂರಿ ವೈಭವದೊಂದಿಗೆ ಮಾಡಬೇಕೆಂಬ ಮನಸ್ಸಿದ್ದರೂ, ಹಿಂದೂ ಸಂಪ್ರದಾಯದಂತೆ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳಬೇಕೆಂಬ ಯುವಕನ ಆಸೆಗೆ ಸಹಮತ ಸೂಚಿಸಿ, ಕೆಮಿಲ್ ಕುಟುಂಬಸ್ಥರು 50ಕ್ಕೂ ಅಧಿಕ ಜನ ಬೆಲ್ಜಿಯಂ ದೇಶದಿಂದ ಆಗಮಿಸಿ ಅಳಿಯ ಅನಂತರಾಜು, ಪುತ್ರಿ ಕೆಮಿಲ್‍ಗೆ ಆಶೀರ್ವದಿಸಿದ್ದಾರೆ. ಇದನ್ನೂ ಓದಿ: ಆಟೋ ಚಾಲಕನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ: ಸುನೀಲ್ ಕುಮಾರ್

    ಒಟ್ಟಾರೆ ಹಣೆ ಬರಹ ಕೂಡಿ ಬಂದರೆ ಹಡೆದ ತಾಯಿಗೂ ಕೇಳಬೇಕಿಲ್ಲ ಎಂಬ ಹಾಗೇ, ವಿದೇಶದಿಂದ ಬಂದು ಹಂಪಿಯ ಯುವಕನಿಗೆ ಮಗಳ ಇಚ್ಚೆಯಂತೆ ಕೆಮಿಲ್‍ಳನ್ನು ಪೋಷಕರು ಧಾರೆ ಎರೆದು ಕೊಟ್ಟಿದ್ದಾರೆ. ಪ್ರೇಮಿಗಳ ಮದುವೆಗೆ ಆಗಮಿಸಿದ್ದ ನೂರಾರು ಜನ ಗ್ರಾಮಸ್ಥರು ಅಕ್ಷತೆ ಹಾಕಿ ನವ ಜೋಡಿಗೆ ಹರಸಿದ್ದಾರೆ. ವಿಶೇಷವೆಂದರೆ ಕೆಮಿಲ್ ಕುಟುಂಬಸ್ಥರು ಭಾರತೀಯ ಸಂಪ್ರದಾಯದಂತೆ ಸೀರೆ ಉಟ್ಟು, ಹಣೆಗೆ ಕುಂಕುಮ ಇಟ್ಟು, ಕೈಗೆ ಬಳೆ ತೊಟ್ಟು ಎಲ್ಲರ ಗಮನ ಸೆಳೆದರು.

    Live Tv
    [brid partner=56869869 player=32851 video=960834 autoplay=true]

  • ಹಂಪಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ : ಅಜಯ್ ರಾವ್, ಮಂಜಮ್ಮ ಜೋಗತಿ ಗೆಸ್ಟ್

    ಹಂಪಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ : ಅಜಯ್ ರಾವ್, ಮಂಜಮ್ಮ ಜೋಗತಿ ಗೆಸ್ಟ್

    ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲು ಭಾರತವೇ ಸಿದ್ಧತೆ ನಡೆಸಿದೆ. ಅದರಲ್ಲೂ ಕರ್ನಾಟಕದಲ್ಲಿ ಈ ಬಾರಿ ಮೈಸೂರು, ಬೆಂಗಳೂರು, ಹಂಪಿ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲೂ ಯೋಗ ದಿನವನ್ನು ಆಚರಿಸಲು ನಿರ್ಧಾರಿಸಲಾಗಿದೆ. ಮೈಸೂರಿನಲ್ಲಿ ನಡೆಯಲಿರುವ ಯೋಗ ದಿನಾಚರಣೆಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಆಗಮಿಸುತ್ತಿದ್ದಾರೆ. ಹಾಗೆಯೇ ದೊಡ್ಡ ಪ್ರಮಾಣದಲ್ಲಿ ವಿಶ್ವಪಾರಂಪರಿಕ ತಾಣ ಹಂಪಿಯಲ್ಲೂ ಬೃಹತ್ ಯೋಗ ದಿನ ಆಚರಣೆಗೆ ಜಿಲ್ಲಾಡಳಿ ಸಿದ್ಧತೆ ನಡೆಸಿದೆ.

    ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂದಿರುವ ವಿಶಾಲವಾದ ಆವರಣದಲ್ಲಿ ಈ ಯೋಗ ದಿನಾಚರಣೆ ಆಚರಿಸಲು ಸಿದ್ಧತೆ ನಡೆದಿದ್ದು, ಐದು ಸಾವಿರಕ್ಕೂ ಹೆಚ್ಚು ಜನರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ನಟ ಅಜಯ್ ರಾವ್ ಮುಖ್ಯ ಆಕರ್ಷಣೆಯಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪದ್ಮಶ್ರೀ ಮಂಜಮ್ಮ ಜೋಗತಿ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ: ಸ್ವಯಂ ಪ್ರೇರಿತನಾಗಿ ಡ್ರಗ್ಸ್ ಸೇವಿಸಿಲ್ಲ, ಬೆಂಗಳೂರು ಪೊಲೀಸ್ ಒಳ್ಳೆಯವರು : ಬಾಲಿವುಡ್ ನಟ ಸಿದ್ಧಾಂತ್ ಕಪೂರ್

    ಜೂ.21 ರಂದು ಬೆಳಗ್ಗೆ 6 ಗಂಟೆಗೆ ಯೋಗ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ನಲವತ್ತು ನಿಮಿಷಗಳ ಕಾಲ ಯೋಗ ಕಾರ್ಯಕ್ರಮ ನಡೆಯುತ್ತವೆ. ಆನಂತರ ಮೈಸೂರಿನಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಯೋಗ ದಿನದ ನೇರ ಪ್ರಸಾರಕ್ಕೂ ವ್ಯವಸ್ಥೆ ಕಲ್ಪಿಸಿದ್ದಾರೆ. ಅಂದು ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಲವು ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಹೀಗೆ ಸಾವಿರಾರು ಜನರು ಇದಕ್ಕೆ ಸಾಕ್ಷಿಯಾಗಲಿದ್ದಾರೆ.

  • ಮಣ್ಣಿನಲ್ಲಿ ಹಂಪಿ ಕಲಾಕೃತಿ ರಚಿಸಿದ ವಿದ್ಯಾರ್ಥಿ

    ಮಣ್ಣಿನಲ್ಲಿ ಹಂಪಿ ಕಲಾಕೃತಿ ರಚಿಸಿದ ವಿದ್ಯಾರ್ಥಿ

    ಧಾರವಾಡ: ವಿಶ್ವವಿಖ್ಯಾತ ಹಂಪಿಯ ರಥದ ಮಾದರಿಯನ್ನು ವಿದ್ಯಾರ್ಥಿಯೋರ್ವ ಮಣ್ಣಿನಲ್ಲಿ ಕಲಾಕೃತಿಯನ್ನಾಗಿ ಸೃಷ್ಟಿಸಿದ್ದಾನೆ.

    Dharawada

    ಧಾರವಾಡ ಕೆಲಗೇರಿ ನಿವಾಸಿಯಾದ ವಿನಾಯಕ ಹಿರೇಮಠ ಈ ಕಲಾ ನೈಪುಣ್ಯತೆ ಮೆರೆದಿದ್ದು, ಇವನ ಈ ಕಾಲಕೃತಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಆಗಿದೆ. ಈ ಹಿನ್ನೆಲೆ ಈತನ ಕಲಾ ಪ್ರತಿಭೆಯನ್ನು ಶ್ಲಾಘಿಸಿ ಡಿಡಿ ಕಟ್ಟೆ ಎಂಬ ಸಾಹಿತ್ಯ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಇದನ್ನೂ ಓದಿ:  ಡ್ರೋನ್ ಮುಖಾಂತರ ಶಸ್ತ್ರಾಸ್ತ್ರಗಳನ್ನು ಪಡೆದ 4 ಖಲಿಸ್ತಾನಿ ಭಯೋತ್ಪಾದಕರ ಬಂಧನ

    Dharawada

    ಧಾರವಾಡದ ಕೆಲಗೇರಿಯಲ್ಲಿನ ಡಿಡಿ ಕಟ್ಟೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ಹ.ವೆಂ. ಕಾಖಂಡಿಕಿ, ಹರ್ಷ ಡಂಬಳ ಹಾಗೂ ರಾಧಿಕಾ ಕಾಖಂಡಿಕಿ ಅವರು ವಿನಾಯಕರನ್ನು ಬಳಗದ ವತಿಯಿಂದ ಸನ್ಮಾನಿಸಿ ಆಶೀರ್ವಾದಿಸಿದರು. ಇದನ್ನೂ ಓದಿ: ಮಡಿಲಲ್ಲಿ ತಂಗಿಯನ್ನುಟ್ಟುಕೊಂಡು ತರಗತಿಗೆ ಹಾಜರಾಗಿದ್ದ ಬಾಲಕಿಗೆ ಬೋರ್ಡಿಂಗ್ ಸ್ಕೂಲ್‍ನಲ್ಲಿ ಫ್ರೀ ಸೀಟ್

  • ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಿಂತನೆ: ವಚನಾನಂದ ಮಹಾಸ್ವಾಮೀಜಿ

    ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಿಂತನೆ: ವಚನಾನಂದ ಮಹಾಸ್ವಾಮೀಜಿ

    ವಿಜಯನಗರ: ಈ ಬಾರಿಯ ರಾಜ್ಯ ಮಟ್ಟದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವವಿಖ್ಯಾತ ಹಂಪಿಯಲ್ಲಿ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಹರಿಹರ ವೀರಶೈವ ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷರು ಹಾಗೂ ಶ್ವಾಸಕೇಂದ್ರದ ಸಂಸ್ಥಾಪಕರಾದ ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮೀಜಿಗಳು ತಿಳಿಸಿದರು.

    ಇಂದು ವಚನಾನಂದ ಮಹಾಸ್ವಾಮೀಜಿಗಳು, ಪ್ರವಾಸೋದ್ಯಮ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರೊಂದಿಗೆ ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೊಪ್ಪಳದ ಹನುಮನ ಜನ್ಮಸ್ಥಳ ಅಂಜನಾದ್ರಿಯಲ್ಲಿ, ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆಯಲ್ಲಿ ಯೋಗ ಉತ್ಸವಗಳನ್ನು ಯಶಸ್ವಿಯಾಗಿ ಆಚರಿಸಲಾಗಿದೆ. ಮುಂಬರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯವಂತೆ ಆಯೋಜಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಸಿನಿ ಶುಕ್ರವಾರ ‘ವೆಡ್ಡಿಂಗ್ ಗಿಫ್ಟ್’ ಚಿತ್ರದಿಂದ ಪ್ರೇಕ್ಷಕರಿಗೆ ಡ್ಯುಯೆಟ್ ಸಾಂಗ್ ಗಿಫ್ಟ್ 

    ಈ ನಿಟ್ಟಿನಲ್ಲಿ ಇಂದು ಹಂಪಿಯ ಸ್ಮಾರಕಗಳಾದ ವಿಠ್ಠಲ ದೇವಾಲಯದ ಆವರಣದಲ್ಲಿರುವ ಕಲ್ಲಿನ ರಥ, ಲೋಟಸ್ ಮಹಲ್, ವಿರುಪಾಕ್ಷೇಶ್ವರ ದೇವಾಲಯ, ಆನೆ ಮತ್ತು ಕುದುರೆ ಲಾಯಗಳು, ಸಾಸುವೇ ಕಾಳು ಗಣೇಶ, ಬಡವಿ ಲಿಂಗ ಸೇರಿದಂತೆ ಹಲವಾರು ಸ್ಮಾರಕಗಳ ಮುಂದೆ ಯೋಗ ಉತ್ಸವ ಆಯೋಜಿಸುವ ನಿಟ್ಟಿನಲ್ಲಿ ಸಚಿವರೊಂದಿಗೆ ಪರಿಶೀಲನೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಸ್ಮಾರಕದ ಮುಂದೆಯೂ ಕೌಂಟ್ ಡೌನ್ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ದಿನದಂದು ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸುವ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದರು.

    ಈ ವೇಳೆ ಆನಂದ್ ಸಿಂಗ್ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ವಿಶ್ವವಿಖ್ಯಾತ ಹಂಪಿಯಲ್ಲಿ ಯೋಗ ಉತ್ಸವಗಳನ್ನು ನಡೆಸುವ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ಯೋಗ ಪ್ರಚಾರಕರು ಹಾಗೂ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ವಚನಾನಂದ ಮಹಾಸ್ವಾಮೀಜಿಗಳ ಜೊತೆಯಲ್ಲಿ ವಿಸ್ತ್ರುತ ಚರ್ಚೆಗಳನ್ನು ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ದಿನಾಂಕವನ್ನು ತಿಳಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಹೆಚ್ಚು ಗಮನಹರಿಸಬೇಕು: ರಾಹುಲ್ ಸಲಹೆ 

    ಈ ಸಂದರ್ಭದಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರುಗಳು ಹಾಗೂ ಪಂಚಮಸಾಲಿ ಸಮುದಾಯದ ಪ್ರಮುಖರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

  • ಹಂಪಿಯಲ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ಪ್ರಚಾರ ಆರಂಭಿಸಿದ ಜೆಪಿ ನಡ್ಡಾ

    ಹಂಪಿಯಲ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ಪ್ರಚಾರ ಆರಂಭಿಸಿದ ಜೆಪಿ ನಡ್ಡಾ

    ಬಳ್ಳಾರಿ: ರಾಜ್ಯದಲ್ಲಿ ಚುನಾವಣಾ ಪರ್ವ ಆರಂಭಗೊಂಡಿದ್ದು, ಹಂಪಿಯಲ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಚಾರ ಆರಂಭಿಸಿದ್ದಾರೆ.

    ನಿನ್ನೆ ಬಿಜೆಪಿ ರಾಜ್ಯಕಾರ್ಯಕಾರಿಣಿ ಹಿನ್ನೆಲೆ ಹೊಸಪೇಟೆಗೆ ಕುಟುಂಬ ಸಮೇತರಾಗಿ ನಡ್ಡಾ ಆಗಮಿಸಿದ್ದರು. ಇಂದು ನಡ್ಡಾ ಐತಿಹಾಸಿಕ ಹಂಪಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಮೊದಲು ಹಂಪಿ ಶ್ರೀವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: 35 ನಿಮಿಷ ನಡ್ಡಾ ಜತೆ ಸಿಎಂ ಮಹತ್ವದ ಮಾತುಕತೆ

    ಶ್ರೀವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿದ ಜೆಪಿ ನಡ್ಡಾ ಸೇರಿದಂತೆ ಕುಟುಂಬ ಸದಸ್ಯರಿಗೆ ದೇಗುಲದ ಆನೆಯಿಂದ ಪುಷ್ಪ ಮಾಲೆ ಹಾಕಿ ಸ್ವಾಗತ ಕೋರಲಾಯಿತು. ಬಳಿಕ ಸಾಸಿವೆ ಕಾಳು ಗಣಪ, ಕಡಲೇ ಕಾಳು ಗಣಪ, ಉಗ್ರ ನರಸಿಂಹ, ಕಲ್ಲಿನ ತೇರು ಸೇರಿದಂತೆ ಹಲವು ಸ್ಮಾರಕ ವೀಕ್ಷಣೆ ಮಾಡಿದರು. ಜೊತೆಗೆ ಹಂಪಿ ಇತಿಹಾಸ ಕುರಿತು ನಡ್ಡಾ ಮಾಹಿತಿ ಪಡೆದುಕೊಂಡರು. ನಡ್ಡಾಗೆ ಸಿ.ಟಿ ರವಿ, ನಳಿನ್ ಕುಮಾರ್ ಕಟೀಲ್ ಮತ್ತು ಆನಂದ್ ಸಿಂಗ್ ಅವರ ಕುಟುಂಬ ಸಾಥ್ ನೀಡಿತು. ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್‌ ಆಡಿಯೋ

    ಇದೇ ಸಂದರ್ಭ ಜೆಪಿ ನಡ್ಡಾ ಅವರಿಗೆ ಸಿಟಿ ರವಿ ಕನ್ನಡ ಕಲಿಸಿದರು. ಕನ್ನಡದಲ್ಲಿ ಮಾತನಾಡುವ ಮೂಲಕ ಜೆಪಿ ನಡ್ಡಾ ಅಧಿಕೃತವಾಗಿ ಕನ್ನಡದಲ್ಲಿ ಮಾತನಾಡಿ ಮತ ಬೇಟೆ ಆರಂಭಿಸಿದರು. ಕನ್ನಡದಲ್ಲಿ ಹೋಗಿ ಬರುವೆ ಎಂದು ಸಿಟಿ ರವಿ ಹೇಳಿಕೊಟ್ಟರು. ಸಿಟಿ ರವಿ ಹೇಳಿದ ಹಾಗೆ ಕನ್ನಡದಲ್ಲಿ ಹೋಗಿ ಬರುವೆ ಎಂದು ನಡ್ಡಾ ಹೇಳಿದರು. ಬಳಿಕ ನಿಮ್ಮ ವೋಟು ಯಾರಿಗೆ ಎಂದು ಸಿಟಿ ರವಿ ಕೇಳಿದರು ನಮ್ಮ ವೋಟ್ ಮೋದಿಗೆ ಎಂದು ಸ್ಥಳೀಯರು ಕೂಗಿದಾಗ ನಡ್ಡಾ ಫುಲ್ ಖುಷ್ ಆದರು.

  • ಹಂಪಿಗೆ ಭೇಟಿ ನೀಡಿದ ಕೇಂದ್ರ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್

    ಹಂಪಿಗೆ ಭೇಟಿ ನೀಡಿದ ಕೇಂದ್ರ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್

    ವಿಜಯನಗರ: ಶ್ರೀ ವಿರೂಪಾಕ್ಷೇಶ್ವರನ ದರ್ಶನವನ್ನು ಕೇಂದ್ರ ಸರ್ಕಾರದ ಉಕ್ಕು ಖಾತೆ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ಪಡೆದಿದ್ದಾರೆ.

    ರಾಮಚಂದ್ರ ಅವರು ಬುಧವಾರ ಹಂಪಿಗೆ ಭೇಟಿ ನೀಡಿದ್ದು, ಹಂಪಿಯ ಶ್ರೀ ವಿರೂಪಾಕ್ಷ, ಪಂಪಾಂಬಿಕೆ, ತಾಯಿ ಭುವನೇಶ್ವರಿ ದರ್ಶನ ಪಡೆದಿದ್ದಾರೆ. ರಾಮಚಂದ್ರ ಅವರು ಮೂರು ದಿನಗಳ ಕಾಲ ವಿಜಯನಗರ, ಬಳ್ಳಾರಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ. ಗುರುವಾರ ಹಂಪಿಯ ಸ್ಮಾರಕಗಳ ವೀಕ್ಷಣೆ ಮಾಡಲಿದ್ದಾರೆ. ಇದನ್ನೂ ಓದಿ:  11 ಬಾರಿ ಕೋವಿಡ್ -19 ಲಸಿಕೆ ಪಡೆದ 84 ವರ್ಷದ ವೃದ್ಧ

    ಶ್ರೀ ವಿರೂಪಾಕ್ಷ ದೇವಾಲಯದಲ್ಲಿರೋ ಆನೆ ಲಕ್ಷ್ಮೀಗೆ ಬಾಳೆಹಣ್ಣು ನೀಡಿ, ಆಶೀರ್ವಾದ ಪಡೆದುಕೊಂಡಿದ್ದಾರೆ. ನಾಡಿದ್ದು ಬಳ್ಳಾರಿಯ ಗಣಿ ಮತ್ತು ಗಣಿ ಕೈಗಾರಿಕಾ ಪ್ರದೇಶದಲ್ಲಿ ಪ್ರವಾಸ ಮಾಡಲಿದ್ದಾರೆ.

  • ಅನಧಿಕೃತ ರೆಸಾರ್ಟ್ ತೆರವುಗೊಳಿಸದಿದ್ದರೆ ನೀವೇ ಹೊಣೆ- 4 ಅಧಿಕಾರಿಗಳಿಗೆ ಕೊಪ್ಪಳ ಡಿಸಿ ನೋಟಿಸ್

    ಅನಧಿಕೃತ ರೆಸಾರ್ಟ್ ತೆರವುಗೊಳಿಸದಿದ್ದರೆ ನೀವೇ ಹೊಣೆ- 4 ಅಧಿಕಾರಿಗಳಿಗೆ ಕೊಪ್ಪಳ ಡಿಸಿ ನೋಟಿಸ್

    ಕೊಪ್ಪಳ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಂಪಿ ಪಕ್ಕದ ವಿರೂಪಾಪೂರ ಗಡ್ಡಿಯ ಅಕ್ರಮ ರೆಸಾರ್ಟ್ ಗಳನ್ನು ಕೊಪ್ಪಳ ಜಿಲ್ಲಾಡಳಿತ ನೆಲಸಮ ಮಾಡಿತ್ತು. ಈ ಬೆನ್ನಲ್ಲೇ ರೆಸಾರ್ಟ್ ಮಾಲೀಕರು ಪಟ್ಟಾ ಭೂಮಿಯಲ್ಲಿ ಅನಧಿಕೃತವಾಗಿ ರೆಸಾರ್ಟ್ ನಿರ್ಮಾಣ ಮಾಡಿರುವ ಆರೋಪ ಈಗ ಮತ್ತೆ ಕೇಳಿ ಬಂದಿದೆ. ಇದಕ್ಕೂ ಕೊಪ್ಪಳ ಜಿಲ್ಲಾಡಳಿತ ಬ್ರೇಕ್ ಹಾಕಲು ಮುಂದಾಗಿದೆ.

    ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯ ಹಂಪಿ ಪ್ರದೇಶ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ರೆಸಾರ್ಟ್ ಗಳನ್ನು ತೆರವು ಮಾಡಿ. ಇಲ್ಲವೇ ಅದಕ್ಕೆ ನೀವೇ ಹೊಣೆಗಾರರಾಗಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಅವರು ನೋಟಿಸ್ ನೀಡಿದ್ದಾರೆ. ಹಂಪಿ ಪರಂಪರೆ ಪ್ರದೇಶ ವ್ಯಾಪ್ತಿಗೆ ಒಳಪಡುವ ಕೊಪ್ಪಳದ ಗಂಗಾವತಿ ತಾಲೂಕಿನ ವಿರೂಪಾಪೂರ ಗಡ್ಡಿಯಲ್ಲಿದ್ದ ಅಕ್ರಮ ರೆಸಾರ್ಟ್ ಗಳು ಕಳೆದ 2 ವರ್ಷದ ಹಿಂದೆ ನೆಲಸಮ ಆಗಿದ್ದವು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಇಲ್ಲಿನ ರೆಸಾರ್ಟ್ ಗಳನ್ನು ತೆರವು ಮಾಡಿತ್ತು. ಇದನ್ನೂ ಓದಿ: ಪಡಿತರ ಅಕ್ಕಿ ಅಕ್ರಮವಾಗಿ ಗುಜರಾತ್‍ಗೆ ಸಾಗಣೆ- 8.10 ಲಕ್ಷದ ಅಕ್ಕಿ ವಶಕ್ಕೆ

    ವಿರೂಪಾಪೂರ ಗಡ್ಡಿಯಲ್ಲಿನ ರೆಸಾರ್ಟ್ ನೆಲಸಮ ಆದ ನಂತರ ಗಂಗಾವತಿ ತಾಲೂಕಿನ ಆನೇಗೊಂದಿ, ಹನುಮನಹಳ್ಳಿ, ಜಂಗ್ಲಿ, ಸಣಾಪೂರ, ರಂಗಾಪೂರ, ಗಡ್ಡಿ, ಪಂಪಾ ಸರೋವರ ಸುತ್ತಮುತ್ತ ಪಟ್ಟಾ ಭೂಮಿಯಲ್ಲಿ ಮತ್ತೆ ಅಕ್ರಮವಾಗಿ ರೆಸಾರ್ಟ್ ಗಳು ತಲೆ ಎತ್ತುತ್ತಿವೆ. ಈ ಕಾರಣಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಅವರು ಹೊಸಪೇಟೆಯ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಕೊಪ್ಪಳ ಉಪ ವಿಭಾಗಾಧಿಕಾರಿ, ಗಂಗಾವತಿಯ ತಹಸೀಲ್ದಾರ್ ಮತ್ತು ತಾಲೂಕು ಪಂಚಾಯತ್ ಇಒಗೆ ನೊಟೀಸ್ ನೀಡಿದ್ದಾರೆ.

    ಕೋರ್ಟ್ ನಿರ್ದೇಶನದಂತೆ ಹಂಪಿ ಪ್ರದೇಶ ವ್ಯಾಪ್ತಿಗೆ ಒಳಪಡುವ 15 ಗ್ರಾಮಗಳಲ್ಲಿ ಮಾಸ್ಟರ್ ಪ್ಲ್ಯಾನ್ ರೆಡಿ ಆಗುತ್ತಿದೆ. ಯಾವ ಜಾಗದಲ್ಲಿ, ಎಂಥ ಕಟ್ಟಡ ನಿರ್ಮಿಸಬಹುದು ಎಂಬುದರ ಬಗ್ಗೆ ಸ್ಪಷ್ಟಪಡುಸುವುದೇ ಈ ಮಾಸ್ಟರ್ ಪ್ಲಾನ್. ಆದರೆ ಕೆಲ ಪ್ರಭಾವಿಗಳು ಈಗಾಗಲೇ ಪಟ್ಟಾ ಭೂಮಿಯಲ್ಲಿ ಅನಧಿಕೃತವಾಗಿ ರೆಸಾರ್ಟ್ ನಿರ್ಮಿಸಿದ್ದಾರೆ. ಭೂಮಿ ಎನ್ ಎ ಮಾಡಿಲ್ಲ. ಜೊತೆಗೆ ಸ್ಥಳೀಯ ಸಂಸ್ಥೆಗಳ ಪರವಾನಗಿ ಇಲ್ಲದೇ ರೆಸಾರ್ಟ್ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು

    ವಿರೂಪಾಪುರ ಗಡ್ಡಿಯಲ್ಲಿದ್ದ ರೆಸಾರ್ಟ್ ತೆರವಿನ ನಂತರ ಎಲ್ಲಂದರಲ್ಲಿ ರೆಸಾರ್ಟ್ ತಲೆ ಎತ್ತುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂಬ ದೂರು ಕೇಳಿ ಬಂದಿದೆ. ಹೀಗಾಗಿ ಕೊಪ್ಪಳ ಡಿಸಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನೆರೆ ರಾಜ್ಯ ಮತ್ತು ವಿದೇಶಿ ಪ್ರವಾಸಿಗರಿಗಾಗಿಯೇ ತಲೆ ಎತ್ತುವ ರೆಸಾರ್ಟ್ ಗಳು ಅಕ್ರಮ ಚಟುವಟಿಕೆ ತಾಣವಾಗಿವೆ ಎಂಬ ಆರೋಪ ಕೂಡ ಮೊದಲಿಂದಲೂ ಕೇಳಿ ಬಂದಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.

  • ವಿಶ್ವ ವಿಖ್ಯಾತ ಹಂಪಿ ವೀಕ್ಷಣೆಗೆ ಮುಕ್ತ ಅವಕಾಶ

    ವಿಶ್ವ ವಿಖ್ಯಾತ ಹಂಪಿ ವೀಕ್ಷಣೆಗೆ ಮುಕ್ತ ಅವಕಾಶ

    ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.

    ಕೊರೊನಾ ಹೆಚ್ಚಳವಾಗುವ ಸಂಭವದ ಹಿನ್ನೆಲೆಯಲ್ಲಿ ಕಳೆದ ತಿಂಗಳ 14ರಿಂದ ಹೇರಿದ್ದ ವೀಕೆಂಡ್ ಕರ್ಫ್ಯೂ ತೆರವುಗೊಳಿಸಲಾಗಿದೆ. ಈ ಹಿಂದೆ ಪ್ರತಿ ಶನಿವಾರ, ಭಾನುವಾರ ಹಾಗೂ ಸೋಮವಾರಗಳಂದು ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿತ್ತು. ಆದರೀಗ ಸ್ಮಾರಕಗಳ ವೀಕ್ಷಣೆಗೆ ಹೇರಲಾಗಿದ್ದ ನಿರ್ಬಂಧ ತೆರವು ಮಾಡಲಾಗಿದ್ದು, ಪ್ರವಾಸಿಗರಿಗೆ ಹಾಗೂ ಯಾತ್ರಾರ್ಥಿಗಳಿಗೆ ಸ್ಮಾರಕಗಳ, ದೇವಸ್ಥಾನಗಳ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನೂ ಓದಿ: ಇನ್ನೂ ಮಳೆಯಾಗಲಿದೆ, ಭೂಮಿ ನಡುಗುತ್ತೆ, ಆಪತ್ತುಗಳು ಕಳೆದಿಲ್ಲ: ಕೋಡಿಶ್ರೀ

    ಮಹಾಮಾರಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರವಾಸೋದ್ಯಮ ಬಹುತೇಕ ನೆಲ ಕಚ್ವಿದೆ. ಸದ್ಯ ಹಂಪಿ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳವ ಸಾಧ್ಯತೆ ಇದೆ.

  • 2 ದಿನ ಹಂಪಿ ವೀಕ್ಷಣೆ ಮಾಡಲಿದ್ದಾರೆ ವೆಂಕಯ್ಯ ನಾಯ್ಡು

    2 ದಿನ ಹಂಪಿ ವೀಕ್ಷಣೆ ಮಾಡಲಿದ್ದಾರೆ ವೆಂಕಯ್ಯ ನಾಯ್ಡು

    ಬಳ್ಳಾರಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಕುಟುಂಬ ಸಮೇತವಾಗಿ ಎರಡು ದಿನ ವಿಶ್ವವಿಖ್ಯಾತ ಹಂಪಿ ವೀಕ್ಷಣೆ ಮಾಡಲಿದ್ದಾರೆ.

    ಆ.20 ಮತ್ತು 21 ರಂದು ತುಂಗಭದ್ರಾ ಡ್ಯಾಂ ಮತ್ತು ಐತಿಹಾಸಿಕ ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುತ್ತಿದ್ದು ವೆಂಕಯ್ಯ ನಾಯ್ಡು ಅವರ ಜೊತೆಯಲ್ಲಿ ಅವರ ಧರ್ಮ ಪತ್ನಿ ಎಂ ಉಷಾ ಸಹ ಬರಲಿದ್ದಾರೆ. ಇದನ್ನೂ ಓದಿ: 1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ

    ಸುಗಮ ಪ್ರವಾಸಕ್ಕಾಗಿ ಹಂಪಿಯಲ್ಲಿ ಹಲವು ರೀತಿ ಸಿದ್ಧತೆಗಳು ನಡೆಯುತ್ತಿದ್ದು, ಅ.20 ರಂದು ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಹೊಸಪೇಟೆಯ ತಾಲೂಕು ಕ್ರೀಡಾಂಗಣಕ್ಕೆ ಸಂಜೆ 5:20 ಕ್ಕೆ ಆಗಮಿಸುವ ಅವರು ನಂತರ ತುಂಗಭದ್ರಾ ಡ್ಯಾಂ ವೀಕ್ಷಣೆ ಮಾಡಲಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್‌ರನ್ನು ಕಾಂಗ್ರೆಸ್ ಎರಡು ಬಾರಿ ಸೋಲಿಸಿತು: ಎ ನಾರಾಯಣ ಸ್ವಾಮಿ

    ಭೇಟಿಯ ಬಳಿಕ  ಕಮಲಾಪುರದ ಮಯೂರ ಭುವನೇಶ್ವರಿ ಹೊಟೇಲ್ ನಲ್ಲಿ ತಂಗಲಿದ್ದಾರೆ.  ಆ.21 ರಂದು ಬೆಳಿಗ್ಗೆಯಿಂದ ಸಂಜೆವರಗೆ ಹಂಪಿಯ ಶ್ರೀವಿರೂಪಾಕ್ಷ ದೇವಸ್ಥಾನ, ಸಾಸುವೆಕಾಳು, ಕಡಲೇಕಾಳು ಗಣೇಶ, ಕೃಷ್ಣ ದೇವಸ್ಥಾನ, ಕಮಲ ಮಹಲ್, ಗಜಶಾಲೆ, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇವಸ್ಥಾನ ಮೊದಲಾದ ಸ್ಮಾರಕಗಳನ್ನು ವೀಕ್ಷಣೆ ಮಾಡಲಿದ್ದಾರೆ.

  • ಹಂಪಿ ವೀಕ್ಷಣೆಗೆ ಆಫ್‍ಲೈನ್ ಟಿಕೆಟ್ ಪುನರಾರಂಭ

    ಹಂಪಿ ವೀಕ್ಷಣೆಗೆ ಆಫ್‍ಲೈನ್ ಟಿಕೆಟ್ ಪುನರಾರಂಭ

    – ಆನ್‍ಲೈನ್, ಎಫ್‍ಲೈನ್ ಎರಡರಲ್ಲೂ ಟಿಕೇಟ್

    ಬಳ್ಳಾರಿ: ಕೊರೊನಾ ಹಿನ್ನೆಲೆ ಬಂದ್ ಮಾಡಲಾಗಿದ್ದ ಆಫ್‍ಲೈನ್ ಟಿಕೆಟ್‍ನ್ನು ಭಾರತೀಯ ಪುರಾತತ್ವ ಇಲಾಖೆ ಪುನರಾರಂಭಿಸಿದೆ. ಈ ಮೂಲಕ ಪ್ರವಾಸಿಗರು ಆಫ್‍ಲೈನ್ ಹಾಗೂ ಆನ್‍ಲೈನ್ ಎರಡೂ ವಿಧಾನಗಳಿಂದ ಟಿಕೆಟ್ ಪಡೆಯಬಹುದಾಗಿದೆ.

    ಕರೊನಾ ಹಿನ್ನಲೆ ತನ್ನ ವ್ಯಾಪ್ತಿಯ ಸ್ಮಾರಕಗಳ ವೀಕ್ಷಣೆಗೆ ಆಫ್‍ಲೈನ್ ಟಿಕೆಟ್ ಬಂದ್ ಮಾಡಿ, ಆನ್‍ಲೈನ್ ನಲ್ಲಿ ಮಾತ್ರ ಟಿಕೆಟ್ ಪಡೆಯಲು ಭಾರತೀಯ ಪುರಾತತ್ವ ಇಲಾಖೆ ಅವಕಾಶ ಕಲ್ಪಿಸಿತ್ತು. ಆದರೆ ಡಿ.19 ರಿಂದ ಆಫ್‍ಲೈನ್‍ನಲ್ಲೂ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸಿದೆ. ಇದರಿಂದ ಸ್ಥಳೀಯ ಹಾಗೂ ಮಾಹಿತಿ ಇಲ್ಲದೆ ಬಂದ ಪ್ರವಾಸಿಗರು ಹಾಗೂ ಜಿಲ್ಲೆಯ ಹಂಪಿ ಸ್ಮಾರಕಗಳ ವೀಕ್ಷಕರಿಗೆ ಇದ್ದ ಸಮಸ್ಯೆ ಬಗೆಹರಿದಂತಾಗಿದೆ.

    ಹಂಪಿಯ ವಿಜಯ ವಿಠಲ ದೇವಸ್ಥಾನ ಹಾಗೂ ಕಮಲ ಮಹಲ್, ಕಮಲಾಪುರದ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯದ ಬಳಿಯ ಕೌಂಟರ್‍ನಲ್ಲಿ ಪ್ರವಾಸಿಗರು ಟಿಕೆಟ್ ಖರೀದಿಸಬಹುದಾಗಿದೆ. ಇದೇ ವೇಳೆ ಇಲಾಖೆಯು ಪ್ರತಿ ದಿನ ಟಿಕೆಟ್ ಖರೀದಿ ಮೇಲೆ ಹೇರಿದ್ದ ಮಿತಿ ಕೂಡ ತೆಗೆದು ಹಾಕಿದೆ ಎಂದು ಎಎಸ್‍ಐ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ.ಕಾಳಿಮುತ್ತು ತಿಳಿಸಿದ್ದಾರೆ.

    ಲಾಕ್‍ಡೌನ್ ಸಡಿಲಗೊಂಡ ನಂತರ ಜುಲೈನಲ್ಲಿ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರಿಗೆ ಬಾಗಿಲು ತೆರೆದಿತ್ತು. ಆದರೆ ಕೊರೊನಾ ಸೋಂಕು ಹರಡುತ್ತಿದ್ದರಿಂದ ಆನ್‍ಲೈನ್ ನಲ್ಲಿಮಾತ್ರ ದಿನಕ್ಕೆ ಎರೆಡು ಸಾವಿರ ಪ್ರವಾಸಿಗರಿಗೆ ಮಾತ್ರ ಟಿಕೆಟ್ ನೀಡುವ ವ್ಯವಸ್ಥೆ ಇತ್ತು. ಸ್ಮಾರಕ ನೋಡಲು ಬಯಸುವವರು ಆನ್‍ಲೈನ್‍ನಲ್ಲಿ ಟಿಕೆಟ್ ಖರೀದಿಸಿ, ಅದನ್ನು ಡೌನ್‍ಲೋಡ್ ಮಾಡಿಕೊಂಡು ಸ್ಮಾರಕಗಳ ಪ್ರವೇಶ ದ್ವಾರದಲ್ಲಿನ ಭದ್ರತಾ ಸಿಬ್ಬಂದಿಗೆ ತೋರಿಸಬೇಕಿತ್ತು. ಹಂಪಿಯಲ್ಲಿ ಮೊಬೈಲ್ ನೆಟ್‍ವರ್ಕ್ ಸಿಗದ ಕಾರಣ ಪ್ರವಾಸಿಗರು ಆನ್‍ಲೈನ್‍ನಲ್ಲಿ ಟಿಕೆಟ್ ಖರೀದಿಸಲಾಗದೆ ಅನೇಕರು ಹಿಂತಿರುಗುವ ಪರಿಸ್ಥಿತಿ ಸಹ ಇತ್ತು. ಆದರೆ ನಾಳೆಯಿಂದ ಈ ಸಮಸ್ಯೆ ದೂರವಾಗಲಿದೆ.