ಬಳ್ಳಾರಿ: ವಿಶ್ವ ಪ್ರಸಿದ್ಧ ಹಂಪಿಗೆ (Hampi) ಬರುವ ಪ್ರವಾಸಿಗರು ಇನ್ನು ಮುಂದೆ ಸಂಗೀತದ (Music) ಸ್ವಾದವನ್ನು ಸವಿಯಬಹುದು.
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ವತಿಯಿಂದ ಹಂಪಿಯ ವಿಜಯ ವಿಠಲ ದೇವಸ್ಥಾನದ ಸಂಗೀತ ಮಂಟಪದಲ್ಲಿ ಸಂಗೀತದ ಕಂಬಗಳಿಗೆ ಪ್ರಯೋಗಿಕವಾಗಿ ಕ್ಯೂ ಆರ್ ಕೋಡನ್ನು ಅಳವಡಿಸಲಾಗಿದ್ದು, ಪ್ರವಾಸಿಗರು (Tourist) ಸ್ಕ್ಯಾನ್ ಮಾಡುವುದರ ಮೂಲಕ ಸಂಗೀತವನ್ನು ಕೇಳುವ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳಪೆ ಬೀಜಗಳ ಮಾರಾಟ ಹೆಚ್ಚಳ – ರೈತರಿಗೆ ಭಾರೀ ನಷ್ಟ
ಪ್ರವಾಸಿಗರ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಂಬಕ್ಕೆ ಕ್ಯೂ ಆರ್ ಕೋಡ್ (Q R Code) ಅಳವಡಿಸುವ ಪ್ಲಾನ್ ಮಾಡಲಾಗಿದೆ. ಆರಂಭಿಕವಾಗಿ ಪ್ರವಾಸಿಗರು ಹಾಗೂ ಸ್ಥಳೀಯರ ಸಲಹೆಯ ಮೇಲೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದ ಪ್ರವಾಸಿಗರಿಗೆ ಸಂಗೀತವನ್ನು ಕೇಳಲು ಅನುಕೂಲವಾಗುತ್ತದೆಯಲ್ಲದೇ ಪ್ರವಾಸಿಗರನ್ನ ಹೆಚ್ಚು ಆಕರ್ಷಿಸುತ್ತದೆ.
ಬಳ್ಳಾರಿ: ಮಲೆನಾಡು ಸೇರಿ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ತುಂಗಭದ್ರಾ ಜಲಾಶಯದಿಂದ (Tungabhadra Dam) ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಹಂಪಿಯಲ್ಲೂ (Hampi) ಪ್ರವಾಹದ ಪರಿಸ್ಥಿತಿ ಎದುರಾಗಿದೆ.
ಜಲಾಶಯದಿಂದ ಈಗಾಗಲೇ ನದಿಗೆ 90 ಸಾವಿರ ಕ್ಯುಸೆಕ್ ನೀರು ಹರಿಸುತ್ತಿರುವುದರಿಂದ ನದಿ ತೀರದಲ್ಲಿರುವ ಹಂಪಿಯ ಹಲವು ಐತಿಹಾಸಿಕ ಸ್ಮಾರಕಗಳು ಮುಳುಗಡೆಯಾಗಿವೆ. ಧಾರ್ಮಿಕ ವಿಧಿವಿಧಾನ ಮಂಟಪ, ಪುರಂದರದಾಸರ ಮಂಟಪ, ಜನಿವಾರ ಮಂಟಪ, ಸ್ನಾನ ಘಟ್ಟಗಳು ಮುಳುಗಡೆಯಾಗಿವೆ.
ಕಂಪ್ಲಿಯ ಸೇತುವೆ ಬಂದ್:
ತುಂಗಭದ್ರಾ ಜಲಾಶಯದಿಂದ ನದಿಗೆ 90 ಸಾವಿರ ಕ್ಯುಸೆಕ್ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ (Bellary) ಜಿಲ್ಲೆಯ ಕಂಪ್ಲಿ ಪಟ್ಟಣಕ್ಕೆ ಪ್ರವಾಹದ ಭೀತಿ ಎದುರಾಗಿದೆ. ಕಂಪ್ಲಿಯ ಸೇತುವೆಯ ಮೇಲೆ ಸಾರ್ವಜನಿಕ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಕತ್ರಿನಾ, ದೀಪಿಕಾ ಪಡುಕೋಣೆ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ರಣ್‌ಬೀರ್ ಕಪೂರ್
ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯ ಸಂಪರ್ಕ ಬಂದ್ ಮಾಡಿರುವುದರಿಂದ ಬಳ್ಳಾರಿ – ಗಂಗಾವತಿ ಸಂಪರ್ಕ ಸೇತುವೆ ಸ್ಥಗಿತಗೊಂಡಿದೆ. ಮೀನುಗಾರರ ಮನೆಗಳು, ಕೋಟೆ ಪ್ರದೇಶಕ್ಕೆ ನದಿ ನೀರು ನುಗ್ಗುವ ಸಾಧ್ಯತೆ ಇದ್ದರೂ, ಅಪಾಯ ಲೆಕ್ಕಿಸದೇ ಕೆಲ ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿದ್ದಾರೆ.
ದೇವಸ್ಥಾನದ ಬಲಭಾಗದಲ್ಲಿ ಜನರ ಸುಗಮ ಸಂಚಾರಕ್ಕೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಸಿಬ್ಬಂದಿ ಶ್ರೀನಿವಾಸ ಅವರು ಡ್ರಿಲ್ ಯಂತ್ರದ ಮೂಲಕ ಕೊರೆದು ಸ್ಮಾರಕವನ್ನು ಹಾಳು ಮಾಡಿದ್ದರು.
ಹಂಪಿಯಲ್ಲಿ ಯಾವುದೇ ಒಂದು ಅಭಿವೃದ್ಧಿ ಕೆಲಸ ಮಾಡಲು ರಾಜ್ಯ ಪುರಾತತ್ವ ಇಲಾಖೆಯ ಅನುಮತಿ ಪಡೆಯಲೇ ಬೇಕು. ಆದರೆ ಯಾವುದೇ ಅನುಮತಿ ಪಡೆಯದೇ ಸ್ಮಾರಕಕ್ಕೆ ಹಾನಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಇಲಾಖೆ ಶ್ರೀನಿವಾಸ ಅವರನ್ನು ಅಮಾನತು ಮಾಡಿ ಆದೇಶಿಸಿದೆ.
ಬಳ್ಳಾರಿ: ರಾಜ್ಯ ಸರ್ಕಾರ ಜನರಿಗೆ ಒಂದರ ಹಿಂದೆ ಒಂದು ಗ್ಯಾರಂಟಿ ನೀಡುವ ಮೂಲಕ ಜನರಿಗೆ ಸಹಾಯ ಸಹಕಾರ ಮಾಡುತ್ತಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಈ ಗ್ಯಾರಂಟಿ ಹೊಡೆತದಿಂದಾಗಿ ಅದೆಷ್ಟೋ ಕಡೆ ಅಭಿವೃದ್ಧಿ ಕುಂಠಿತವಾಗುವುದರ ಜೊತೆ ವಿವಿಧ ಇಲಾಖೆಯ ಕಾರ್ಯಗಳು ಮತ್ತು ವಿಶ್ವವಿದ್ಯಾಲಯಗಳು ನಡೆಸುವುದೇ ಕಷ್ಟವಾಗಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಸಮರ್ಪಕ ಅನುದಾನ ಬಾರದ ಹಿನ್ನೆಲೆ ಕರೆಂಟ್ ಬಿಲ್, ಆಸ್ತಿ ತರಿಗೆ ಮತ್ತು ನೀರಿನ ಕರ ಕಟ್ಟಲಾಗದೇ ಹಂಪಿ ಕನ್ನಡ ವಿಶ್ವವಿದ್ಯಾಲಯ (Kannada University Hampi) ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ.
ಹೌದು, ಕನ್ನಡ ನಾಡು ನುಡಿ ಸಾಹಿತ್ಯವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೇರಿಸಬೇಕೆಂದು ಹಂಪಿ ಕನ್ನಡ ವಿವಿಯನ್ನು ಕಳೆದ ಮೂವತ್ತು ವರ್ಷಗಳ ಹಿಂದೆ ಸ್ಥಾಪನೆ ಮಾಡಲಾಯಿತು. ನೂರಾರು ಎಕರೆ ವಿಸ್ತೀರ್ಣದಲ್ಲಿರೋ ಈ ವಿವಿ ಸಂಶೋಧನಾ ವಿದ್ಯಾರ್ಥಿಗಳಿಗೆ, ಬರಹಗಾರರಿಗೆ ಮತ್ತು ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವುದಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಆದರೆ ಇದೀಗ ಹಂಪಿ ವಿವಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಇದನ್ನೂ ಓದಿ: ರಾಜ್ಯದಲ್ಲಿಲ್ಲ ಕನ್ನಡ ಶಾಲೆಗಳಿಗೆ ಬೇಡಿಕೆ- ಕಾಫಿನಾಡಲ್ಲಿ ಒಂದೇ ವರ್ಷಕ್ಕೆ 21 ಶಾಲೆಗಳು ಬಂದ್
ಪ್ರಸಕ್ತ ಸಾಲಿನಲ್ಲಿ 5 ಕೋಟಿ ಅನುದಾನದಲ್ಲಿ ಕೇವಲ 1.5 ಕೊಟಿ ಅನುದಾನ ಬಂದಿದೆ. ಇದರಿಂದಾಗಿ ಹಣಕಾಸಿನ ಮುಗ್ಗಟ್ಟು ತೀವ್ರವಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕರೆಂಟ್ ಬಿಲ್, ಆಸ್ತಿ ತೆರಿಗೆ ಹಾಗೂ ನೀರಿನ ಕರ ಪಾವತಿಸಲು ಹಣವಿಲ್ಲ. ಕರ ಬಾಕಿ ತುಂಬುವಂತೆ ಕಮಲಾಪುರದ ಪುರಸಭೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. 90 ಲಕ್ಷ ಕರೆಂಟ್ ಬಿಲ್, 50 ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಿವಿ ಬಿಲ್ ಕಟ್ಟಲಾಗದೇ ಪರದಾಡುತ್ತಿದೆ.
ಕರ್ನಾಟಕದ 50ನೇ ವರ್ಷಾಚರಣೆ ಸಂಭ್ರಮಾಚರಣೆಯಲ್ಲಿ ಕನ್ನಡದ ಅಭಿವೃದ್ಧಿಗಾಗಿರುವ ಏಕೈಕ ವಿವಿ ಸಂಕಷ್ಟದಲ್ಲಿರೋದು ಕನ್ನಡಾಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಕರೆಂಟ್ ಬಿಲ್ ಪಾವತಿ ಮಾಡಲೇಬೇಕೆಂದು ಜೆಸ್ಕಾಂ ಇಲಾಖೆ ದುಂಬಾಲು ಬಿದ್ದ ಹಿನ್ನಲೆ 90 ಲಕ್ಷ ಬಾಕಿ ಹಣವನ್ನು ಪ್ರತಿ ತಿಂಗಳು 10 ಲಕ್ಷದಂತೆ ಕಟ್ಟಲು ವಿವಿ ಪ್ಲ್ಯಾನ್ ಮಾಡಿಕೊಂಡಿದೆ. ಈ ಮಧ್ಯೆ ಕನ್ನಡ ವಿವಿಗೆ 9.21 ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಪತ್ರ ಬರೆದಿದ್ದಾರೆ. ಈ ಮಧ್ಯೆ ನಾಡಿದ್ದು ಸಿಎಂ ಸಿದ್ದರಾಮಯ್ಯನವರು ಹಂಪಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮುಖ್ಯಮಂತ್ರಿಗಳಿಗೆ ಕನ್ನಡ ವಿಶ್ವವಿದ್ಯಾಲಯ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ವಿವರಿಸಲು ಆಡಳಿತ ಮಂಡಳಿ ಚಿಂತನೆ ನಡೆಸಿದೆ.
ಕನ್ನಡನಾಡು ನುಡಿ ಜಲದ ವಿಚಾರದಲ್ಲಿ ರಾಜಿ ಆಗೋ ಪ್ರಶ್ನೆಯೇ ಇಲ್ಲ. ಕನ್ನಡವನ್ನು ಉಳಿಸಿ ಬೆಳೆದೋದು ನಮ್ಮೆಲ್ಲರ ಕತ್ರ್ಯವ್ಯ ಎನ್ನುತ್ತಿರೋ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಇದೀಗ ಕನ್ನಡಕ್ಕಾಗಿಯೇ ಇರುವ ಏಕೈಕ ವಿವಿಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕಿದೆ ಎನ್ನುವುದು ನಾಡಿನ ಎಲ್ಲ ಕನ್ನಡಾಭಿಮಾನಿಗಳ ಆಗ್ರಹವಾಗಿದೆ.
ಬಳ್ಳಾರಿ: ಪ್ರವಾಸಿಗರು (Tourist) ಸೇರಿದಂತೆ ಸ್ವತಃ ಹಂಪಿಯ (Hampi) ಗೈಡ್ ಬೇಕಾಬಿಟ್ಟಿ ಸ್ಮಾರಕಗಳ ಮೇಲೆ ರೀಲ್ಸ್ (Reels) ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಗೈಡ್ ಹಾಗೂ ಪ್ರವಾಸಿಗರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಹಂಪಿಯ ನಿವಾಸಿ, ಗೈಡ್ ಆಗಿರುವ ಹೇಮಂತ್ ಸ್ಮಾರಕಗಳ ಬಳಿ ರೀಲ್ಸ್ ಮಾಡಿದ್ದಾರೆ. ಹಂಪಿ ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ಸಂರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ಸ್ಮಾರಕಗಳ ರಕ್ಷಣೆಗೆ ಪುರಾತತ್ವ ಇಲಾಖೆ ಕೋಟ್ಯಂತರ ರೂ. ಹಣ ಖರ್ಚು ಮಾಡುತ್ತದೆ. ಹಂಪಿಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದು ಸ್ಮಾರಕಗಳ ಮೇಲೆ ಹತ್ತಿ ಎಲ್ಲೆಂದರಲ್ಲಿ ಪ್ರವಾಸಿಗರು ಕುಣಿಯುತ್ತಿದ್ದಾರೆ. ಇದನ್ನೂ ಓದಿ: ದರ್ಶನ್ ಜೊತೆಗಿನ ಮನಸ್ತಾಪ: ಅವರಿಗೆ ಒಂದಷ್ಟು ಪ್ರಶ್ನೆ ಕೇಳಬೇಕಿದೆ ಎಂದ ಧ್ರುವ
ರೀಲ್ಸ್ ಮಾಡುವ ಪ್ರವಾಸಿಗರಿಗೆ ಹೇಳುವವರು ಕೇಳುವವರು ಇಲ್ಲದಾಗಿದೆ. ಹೆಜ್ಜೆ ಹೆಜ್ಜೆಗೂ ಸೆಕ್ಯುರಿಟಿ ನೇಮಕ ಮಾಡಿರುವ ಪುರಾತತ್ವ ಇಲಾಖೆ ಸುಮ್ಮನೆ ಕುಳಿತಿದೆ. ಐತಿಹಾಸಿಕ ಕಲ್ಲಿನ ರಥ, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲದಲ್ಲಿ ಬೇಕಾಬಿಟ್ಟಿ ರೀಲ್ಸ್ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಸ್ಥಳೀಯರು ಆಗ್ರಹ ಮಾಡಿದ್ದಾರೆ.
ಬಳ್ಳಾರಿ: ವಿಜಯನಗರ (Vijayanagara) ಸಾಮ್ರಾಜ್ಯದ ಅರಸರು ಸಾವಿರಾರು ವರ್ಷ ಹಂಪಿಯನ್ನೇ (Hampi) ರಾಜಧಾನಿಯನ್ನಾಗಿಸಿಕೊಂಡು ಆಡಳಿತ ಮಾಡಿದ್ದಾರೆ. ರಾಜ ಮಹಾರಾಜರು ಆಡಳಿತ ನಡೆಸಿದ್ದಕ್ಕೆ ಅನೇಕ ಕುರುಹುಗಳನ್ನು ಬಿಟ್ಟು ಹೋಗಿದ್ದಾರೆ.
ಕ್ರಿ.ಪೂ. 3,000 ವರ್ಷಗಳ ಹಿಂದೆ ಆದಿಮಾನವರು ಇದ್ದರು ಎಂದು ನಮ್ಮ ಇತಿಹಾಸ, ಪುರಾಣಗಳಲ್ಲಿ ಉಲ್ಲೇಖಗಳು ಇವೆ. ಅದಕ್ಕೆ ಪುಷ್ಟಿ ನೀಡುವಂತಹ ಜೊತೆಗೆ ಆದಿಮಾನವರೇ ಕೆತ್ತಿದ್ದಾರೆ ಎನ್ನುವುದಕ್ಕೆ ನೂರಾರು ಕುರುಹುಗಳು ವಿಜಯನಗರ ಜಿಲ್ಲೆಯಲ್ಲಿ ಪತ್ತೆಯಾಗಿವೆ.
ಗ್ರಾಮದ ಅಂಕಾಲಮ್ಮ ದೇಗುಲದ ಹಿಂಭಾಗದಲ್ಲಿ ಈ ಕರಿಕಲ್ಲು ಗುಡ್ಡ ಇದ್ದು, ಶಿಲಾಯುಗದ ಕುರುಹುಗಳ ಕುರಿತು ಅಧ್ಯಯನ ನಡೆಸುತ್ತಿರುವ ‘ವಿಜಯನಗರ ತಿರುಗಾಟ ಸಂಶೋಧನಾ ತಂಡ’ ಈ ಮಹತ್ವದ ಶೋಧನೆ ನಡೆಸಿದೆ. ಈ ಗುಡ್ಡದ ಬುಡದಿಂದ ತುದಿಯವರೆಗೆ 150ಕ್ಕೂ ಅಧಿಕ ಕುಟ್ಟು ರೇಖಾಚಿತ್ರಗಳನ್ನು ಪತ್ತೆಹಚ್ಚಿದೆ.
ಹಸು, ಜಿಂಕೆ, ಗೂಳಿ, ನಾಯಿ, ಹಂದಿ ಚಿತ್ರಗಳಲ್ಲದೆ, ಪ್ರಾಣಿಗಳ ಮೇಲೆ ಕುಳಿತುಕೊಂಡು, ಕೈಯಲ್ಲಿ ಬಿಲ್ಲು ಹಿಡಿದ ಮನುಷ್ಯ ಬೇಟೆಯಾಡುವ ಚಿತ್ರ, ಇಬ್ಬರು ಮನುಷ್ಯರು ನೃತ್ಯ ಮಾಡುವ ಚಿತ್ರ, ದೀರ್ಘ ಕೊಂಬಿನ ಹಸುವಿನ ಕುಟ್ಟು ಚಿತ್ರಗಳು ಪತ್ತೆಯಾಗಿವೆ. ಇದನ್ನೂ ಓದಿ: ಬಾಲ್ಯ ವಿವಾಹದ ವಿರುದ್ಧ ಸಮರ – ಮತ್ತೆ 800ಕ್ಕೂ ಅಧಿಕ ಮಂದಿಯ ಬಂಧನ
ಬೀದರ್: ಚಿಟಗುಪ್ಪ ತಾಲೂಕಿನ ಬನ್ನಳ್ಳಿ ಗ್ರಾಮದ (Bannalli Village) ಪುರಾತನ ಮಂದಿರಕ್ಕೆ ಹಂಪಿಯ (Hampi) ರಾಜ್ಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (Department of Archaeology) ಅಧಿಕ್ಷಕ ಡಾ. ನಿಹಿಲ್ ದಾಸ್, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ (Dr Shailendra Beldale) ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲ್ಯಾಣ ಕರ್ನಾಟಕ (Kalyana Karnataka) ಭಾಗಗಳಲ್ಲಿ ತುಂಬಾ ಸ್ಮಾರಕಗಳು ಇವೆ. ತಾಲೂಕಿನ ಬನ್ನಳ್ಳಿ ಗ್ರಾಮದ ರಾಮಲಿಂಗೇಶ್ವರ ಮಂದಿರವೂ ಕೂಡಾ ಸಾವಿರಾರು ವರ್ಷಗಳ ಪುರಾತನ ಮಂದಿರವಾಗಿದೆ. ಅದರ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕಾಗಿ ಕ್ಷೇತ್ರದ ಶಾಸಕರು ಆಸಕ್ತಿ ತೋರಿಸಿ ನಮಗೆ ಇಲ್ಲಿಗೆ ಭೇಟಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರು. ಅವರು ಕೂಡಾ ಸ್ಮಾರಕದ ಸಂರಕ್ಷಣೆಗೆ ಸಹಕಾರ ನೀಡುತ್ತೇನೆ ಎಂದಿದ್ದಾರೆ. ಈ ಸಂಬಂಧ ನಮ್ಮ ತಂಡ ಕಾರ್ಯಪ್ರವೃತ್ತವಾಗಿದೆ ಎಂದು ಡಾ. ನಿಹಿಲ್ ದಾಸ್ ಹೇಳಿದರು. ಇದನ್ನೂ ಓದಿ: ಸಾಲು ಸಾಲು ರಜೆ – ಬಸ್ ಟಿಕೆಟ್ ದರ ದುಪ್ಪಟ್ಟು!
ಚಿಟಗುಪ್ಪ ತಾಲ್ಲೂಕಿನ ಬನ್ನಳ್ಳಿ ಗ್ರಾಮದ ರಾಮಲಿಂಗೇಶ್ವರ ಗ್ರಾಮದಲ್ಲಿನ ಶಿಲ್ಪಕಲೆಯ ದೇಗುಲದ ಸಮಗ್ರ ಪ್ರಗತಿಗೆ ಸೂಕ್ತ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಮ್ಮ ಪುರಾತತ್ವ ಇಲಾಖೆ ವತಿಯಿಂದ ಈ ದೇಗುಲದ ಕುರಿತು ಸಮಗ್ರವಾಗಿ ತಜ್ಞರಿಂದ ಸಂಶೋಧನೆ ನಡೆಸಲಾಗುವುದು. ಇಲ್ಲಿ ಹಳೆಗನ್ನಡ ಲಿಪಿಗಳು ಹಲವು ಸುಂದರ ಶಿಲಾಮೂರ್ತಿಗಳು ಕಂಡು ಬಂದಿದ್ದು, ಈ ಮಂದಿರ ಯಾರಿಂದ ನಿರ್ಮಿಸಲಾಯಿತು? ಮಂದಿರ ನಿರ್ಮಿಸಿದ ಶಿಲ್ಪಾಚಾರ್ಯರು ಯಾರು ಹೀಗೆ ನಾನಾ ವಿಧಗಳಿಂದ ನಮ್ಮ ತಂಡ ಸಂಶೋಧನೆ ನಡೆಸಿ ಇತಿಹಾಸವನ್ನು ಬೆಳಕಿಗೆ ತರಲು ಪ್ರಯತ್ನ ಮಾಡುತ್ತೇವೆ ಎಂದರು.
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಬೀದರ್ ದಕ್ಷಿಣ ಕ್ಷೇತ್ರದ ಏಕೈಕ ಪುರಾತನ ಶಿಲ್ಪಕಲಾ ದೇಗುಲ ಇದಾಗಿದ್ದು ಪುರಾತತ್ವ ಇಲಾಖೆಯ ಮೂಲಕ ಆಗಬೇಕಾದ ಪ್ರಗತಿ ಕಾರ್ಯಗಳು ಕೈಗೊಂಡು ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ (Pavitra Lokesh) ಇತ್ತೀಚೆಗಷ್ಟೇ ಪಿಎಚ್‌ಡಿ (Ph.D)ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದರು. ಕೊನೆಗೂ ಅದನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಪ್ರವೇಶ ಪರೀಕ್ಷೆಯನ್ನು ಅವರು ಬರೆದದ್ದು ಅದರಲ್ಲಿ ಪಾಸ್ ಕೂಡ ಆಗಿದ್ದಾರೆ.
ಹಂಪಿಯ (Hampi) ಕನ್ನಡ ವಿಶ್ವವಿದ್ಯಾಲಯದ ಪಿಎಚ್‌ಡಿ ಸಾಮಾನ್ಯ ಪ್ರವೇಶ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಸೇರಿದಂತೆ 259 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಕನ್ನಡ ವಿವಿಯಲ್ಲಿ 981 ಜನರು ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಿದ್ದರು. ಆ ಪೈಕಿ ಒಟ್ಟು 259 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ವಿವಿ ಪ್ರಕಟಿಸಿದೆ. ಇದನ್ನೂ ಓದಿ:ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ನಟಿ ಶ್ರುತಿ
ಕನ್ನಡ ವಿವಿ (Kannada University) ಕುಲಸಚಿವ ಡಾ.ಸುಬ್ಬಣ್ಣ ರೈ ಈ ಕುರಿತು ಮಾಹಿತಿ ನೀಡಿದ್ದು, ಪವಿತ್ರಾ ಲೋಕೇಶ್ ಭಾಷಾ ನಿಕಾಯದಡಿ ಪ್ರವೇಶ ಪರೀಕ್ಷೆ ಬರೆದಿದ್ದರು. ಬೆಳಗಾವಿ(Belgaum) ವಿಸ್ತರಣಾ ಕೇಂದ್ರದಲ್ಲಿ ಸಂಶೋಧನೆ ಕೈಗೊಳ್ಳಲು ಪರೀಕ್ಷೆ ಬರೆದಿದ್ದರು ಪವಿತ್ರ ಲೋಕೇಶ್. ಕಳೆದ ಮೇ 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿತ್ತು.
ಕನ್ನಡ ವಿವಿ ವ್ಯಾಪ್ತಿಯ ಅಧ್ಯಯನ ವಿಭಾಗ, ಮಾನ್ಯತ ಕೇಂದ್ರ, ಹಾಗೂ ವಿಸ್ತರಣಾ ಕೇಂದ್ರಗಳಲ್ಲಿ ಲಭ್ಯವಿರುವ ಸ್ಥಾನ ಮತ್ತು ಮಾರ್ಗದರ್ಶಕರ ಸಂಖ್ಯೆಗೆ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.
ವಿಜಯನಗರ: ಹಂಪಿಯಲ್ಲಿ ನಡೆದ ಜಿ20 ಶೆರ್ಪಾ ಸಭೆ (G20 Summit) ಯಶಸ್ವಿಯಾಗಿದೆ. ಈ ಸಭೆಯಲ್ಲಿ ಭಾಗವಹಿಸಿದ ಶೆರ್ಪಾಗಳಿಗೆ ಅಭೂತಪೂರ್ವ ಅನುಭವವಾಗಿದೆ ಎಂದು ಭಾರತದ ಶೆರ್ಪಾ ಅಮಿತಾಬ್ ಕಾಂತ್ (Amitabh Kant) ತಿಳಿಸಿದ್ದಾರೆ.
ಹಂಪಿಯ (Hampi) ಎವಾಲ್ವ್ ಬ್ಯಾಕ್ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಂಪಿಯನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿ ಕಾಣುವಂತೆ ಮಾಡಿದ ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಗಳ ಅಧಿಕಾರಿಗಳು ಅಭಿನಂದನಾರ್ಹರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರು ಹಾಗೂ ಮಕ್ಕಳ ಪ್ರದರ್ಶನ ಚೆನ್ನಾಗಿತ್ತು. ಹಂಪಿ ಬೈ ನೈಟ್ ಬಹಳ ಒಳ್ಳೆಯ ಅನುಭವ ನೀಡಿದೆ. ಹಂಪಿ ಭಿನ್ನವಾಗಿ ಸುಂದರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ರಾಜೀನಾಮೆ
ಮೂರನೇ ಜಿ20 ಶೃಂಗಸಭೆಗೆ ಹಂಪಿ ಸಾಕ್ಷಿಯಾಗಿದೆ. ಈ ಸಭೆಯಲ್ಲಿ ಯಾವುದಕ್ಕೆ ಭಾರತದ ಪ್ರಾಮುಖ್ಯತೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಗಿದೆ. ಸಭೆಯಲ್ಲಿ ಜಿ20 ರಾಷ್ಟ್ರಗಳು ಯಶಸ್ವಿಯಾಗಿ ಭಾಗವಹಿಸಿವೆ. ಅಲ್ಲದೇ ಪ್ರಾಪಂಚಿಕ ಅಭಿವೃದ್ಧಿಪರ ವಿಚಾರಗಳು ಚರ್ಚೆಯಾಗಿದ್ದು, ತಾಂತ್ರಿಕತೆಯ ಕೊಂಡುಕೊಳ್ಳುವಿಕೆ ಮತ್ತು ವಿನಿಮಯ ಮಾಡಿಕೊಳ್ಳಲು ಒಪ್ಪಂದವಾಗಿದೆ. ಪ್ರಮುಖವಾಗಿ ಆಫ್ರಿಕನ್ ಒಕ್ಕೂಟಗಳಿಗೆ ಜಿ20 ಸದಸ್ಯತ್ವ ನೀಡಲು ಒತ್ತಾಯಿಸಲಾಗಿದೆ. ಇದಕ್ಕೆ ಉಳಿದ ದೇಶಗಳು ಸಹಮತ ಸೂಚಿಸಿವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕಾವೇರಿ ನೀರಿಗೆ ತಮಿಳುನಾಡು ಬೇಡಿಕೆ – ಯಾವ ತಿಂಗಳು ಎಷ್ಟು ನೀರು ಬಿಡಬೇಕು?
ಈ ಬಾರಿಯ ಜಿ20 ಶೃಂಗಸಭೆಯು ಜುಲೈ 9ರಿಂದ 16ರವರೆಗೆ ಹಂಪಿಯಲ್ಲಿ ನಡೆದಿದ್ದು, ಭಾರತ ಅಧ್ಯಕ್ಷೀಯ ರಾಷ್ಟ್ರವಾಗಿತ್ತು. ಶೃಂಗಸಭೆಗೆ 20 ದೇಶಗಳ ಪೈಕಿ 19 ದೇಶಗಳ 30 ಪ್ರತಿನಿಧಿಗಳು, 9 ಆಹ್ವಾನಿತ ದೇಶಗಳ 16 ಪ್ರತಿನಿಧಿಗಳು ಸೇರಿದಂತೆ ಒಟ್ಟು 52 ಗಣ್ಯರು ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಆಯುಷ್ಮಾನ್, ಆರೋಗ್ಯ ಕರ್ನಾಟಕಕ್ಕೆ ಕೇಂದ್ರ 60% ನೆರವು ನೀಡಲಿ – ದಿನೇಶ್ ಗುಂಡೂರಾವ್ ಮನವಿ
ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯಲ್ಲಿ (Hampi) ಇದೇ ಮೊದಲ ಬಾರಿಗೆ ಜಿ-20 ಶೃಂಗಸಭೆ (G-20 Summit) ನಡೆಯುತ್ತಿದೆ. ಜುಲೈ 9ರಿಂದ 16 ರವರೆಗೆ ನಡೆಯಲಿರುವ ಜಿ-20 ಶೃಂಗಸಭೆಗೆ ಹಂಪಿ ನವವಧುವಿನಂತೆ ಶೃಂಗಾರಗೊಂಡಿದೆ. ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯಗಳನ್ನು ಜಿ-20 ಸಲುವಾಗಿ ಹಂಪಿಯಲ್ಲಿ ಕೈಗೊಳ್ಳಲಾಗಿದೆ.
ಜಿ-20 ಶೃಂಗಸಭೆಗೆ ಈ ಬಾರಿಯ ಅಧ್ಯಕ್ಷೀಯ ರಾಷ್ಟ್ರ ಭಾರತವಾಗಿದೆ. ಅದಕ್ಕಾಗಿಯೇ ಅತಿ ಮುಖ್ಯವಾದ ಜಿ-20 ಶೃಂಗಸಭೆಯ 3ನೇ ಪ್ರಮುಖ ಸಭೆ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಇಂದಿನಿಂದ 16 ರವರೆಗೆ ನಡೆಯಲಿದೆ. 3 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 3 ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ಹಂಪಿಯಲ್ಲಿ ನಡೆಯಲಿದೆ.
A @UNESCO World Heritage Site that symbolises India’s rich history & architectural beauty, this majestic city is ready to welcome #G20India delegates for the 3⃣rd Culture Working Group Meeting.
ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ಹಂಪಿ ಪ್ರದೇಶದ ಸುತ್ತಮುತ್ತಲಿನ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ. ಸ್ಮಾರಕಗಳ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ. 43 ರಾಷ್ಟ್ರಗಳ 20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿರುವುದರಿಂದ ಹಂಪಿಯ ಸುತ್ತಮುತ್ತ ಎಲ್ಲೆಡೆ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಮೇಘಸ್ಫೋಟ – ಸಂಕಷ್ಟದಲ್ಲಿ ರಾಜ್ಯದ 83 ಅಮರನಾಥ ಯಾತ್ರಿಕರು