Tag: ಹಂಪಿ ವಿವಿ

  • ರಾಜಕಾರಣಿಗಳು ಆಡುತ್ತಿರುವ ಭಾಷೆ ಭಯೋತ್ಪಾದನೆಯನ್ನು ಬಿತ್ತುವಂತಿದೆ: ಮಲ್ಲಿಕಾ ಘಂಟಿ

    ರಾಜಕಾರಣಿಗಳು ಆಡುತ್ತಿರುವ ಭಾಷೆ ಭಯೋತ್ಪಾದನೆಯನ್ನು ಬಿತ್ತುವಂತಿದೆ: ಮಲ್ಲಿಕಾ ಘಂಟಿ

    ಬಳ್ಳಾರಿ: ರಾಜಕಾರಣಿಗಳು ಆಡುತ್ತಿರುವ ಭಾಷೆ ಭಯೋತ್ಪಾದನೆಯನ್ನು ಬಿತ್ತುವಂತಿದೆ ಎಂದು ಹೇಳುವ ಮೂಲಕ ಹಂಪಿ ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿ ವಿವಾದದ ಕಿಡಿ ಹೊತ್ತಿಸಿದ್ದಾರೆ.

    ವಿವಿಯ 26ನೇ ನುಡಿಹಬ್ಬದ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ರಾಜಕಾರಣಿಗಳು ದೇಶದುದ್ದಕ್ಕೂ ಆಡುತ್ತಿರುವ ಭಾಷೆ ಭಯೋತ್ಪಾದನೆಯನ್ನು ಬಿತ್ತುವಂತಿದೆ. ಈ ಭಾಷೆಯನ್ನು ಹೇಗೆ ಸರಿಪಡಿಸಬೇಕು. ದೇಶ, ಭಾಷೆ, ಬದುಕು ಬಿಕ್ಕಟ್ಟಿನಲ್ಲಿದೆ. ಇದನ್ನ ಸರಿಪಡಿಸುವವರು ಯಾರು ಅಂತಾ ಪರೋಕ್ಷವಾಗಿ ರಾಜಕೀಯ ನಾಯಕರ ವಿರುದ್ಧ ಹರಿಹಾಯ್ದರು.

    ರಾಜಕಾರಣಿಗಳು ಆಡುವ ಭಾಷೆಯನ್ನು ಹೇಗೆ ಸರಿಪಡಿಸಬೇಕಿದೆ ಮತ್ತು ಯಾರು ಸರಿಪಡಿಸಬೇಕೆಂಬ ಪ್ರಶ್ನೆ ನಮ್ಮ ಮುಂದಿದೆ. ದೇಶ, ಭಾಷೆ ಬಿಕ್ಕಟ್ಟಿನಲ್ಲಿರುವಾಗ ಸಾಮಾನ್ಯ ಜನರು ಎಚ್ಚೆತ್ತುಕೊಳ್ಳಬೇಕಿದೆ. ಈ ಭಾಷೆಯನ್ನು ನಿಯಂತ್ರಿಸುವ ಶಕ್ತಿ ಸಾಹಿತ್ಯಕ್ಕಿದೆ. ರಾಜಕಾರಣಿಗಳು ಆಡುವ ಭಾಷೆ ಹಿತ ಮಿತವಾಗಿರಬೇಕು ಎಂಬ ಸಲಹೆಯನ್ನು ನೀಡಿದ್ರು.

  • ಸಚಿವೆ ಉಮಾಶ್ರೀ, ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್- ಹಂಪಿ ವಿವಿ ಅಧೀಕ್ಷಕ ಪೊಲೀಸರ ವಶಕ್ಕೆ

    ಸಚಿವೆ ಉಮಾಶ್ರೀ, ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್- ಹಂಪಿ ವಿವಿ ಅಧೀಕ್ಷಕ ಪೊಲೀಸರ ವಶಕ್ಕೆ

    ಬಳ್ಳಾರಿ: ಫೇಸ್‍ಬುಕ್ ಹಾಗು ವಾಟ್ಸಪ್‍ನಲ್ಲಿ ಮಹಿಳೆಯರ ಬಗ್ಗೆ ಅವಹೇಳಕಾರಿಯಾಗಿ ಬರೆದು ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಅಧೀಕ್ಷಕ ಎಚ್.ಎಂ.ಸೋಮನಾಥ್ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಫೇಸ್‍ಬುಕ್ ಅಕೌಂಟ್‍ನಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಅಕ್ಕಮಹಾದೇವಿ ಮತ್ತು ಸಚಿವೆ ಉಮಾಶ್ರೀ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿತ್ತು. ಸಚಿವೆ ಉಮಾಶ್ರೀ ಅವರಿಗೆ ಉಪಮಾಶ್ರೀ, ಕಿತ್ತೂರ ಚೆನ್ನಮ್ಮರಿಗೆ ಕಿರಾಣಿ ಚೆನ್ನಮ್ಮ ಎಂದು ಹಾಗೂ ಶರಣೆ ಅಕ್ಕಮಹಾದೇವಿ ಅವರನ್ನು ಅಕ್ರಮದೇವಿ ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಅವಮಾನ ಮಾಡಿದ್ದರು.

    ಇತ್ತೀಚಿಗೆ ಹಂಪಿ ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿಯವರಿಗೆ ಅಕ್ಕಮಹದೇವಿ ಪ್ರಶಸ್ತಿಯನ್ನು ಸಚಿವೆ ಉಮಾಶ್ರೀ ಅವರು ಪ್ರಧಾನ ಮಾಡಿದ್ದರು. ಹೀಗಾಗಿ ಮಲ್ಲಿಕಾ ಘಂಟಿಯವರಿಗೆ ಪ್ರಶಸ್ತಿ ಸ್ವೀಕರಿಸುವ ನೈತಿಕತೆಯಿಲ್ಲ ಎನ್ನುವ ರೀತಿಯಲ್ಲಿ ಸೋಮನಾಥ್ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಬರೆದುಕೊಂಡಿದ್ದರು.

    ಈ ಫೇಸ್‍ಬುಕ್ ಪೋಸ್ಟ್ ನೋಡಿದ್ದ ಕಮಲಾಪುರ ಠಾಣಾ ಪೊಲೀಸರು ಯಾವ ದೂರು ದಾಖಲಾಗದಿದ್ದರೂ ಸೋಮನಾಥ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.