Tag: ಹಂಪಿನಗರ

  • 2 ಸಾವಿರ ಬೇಡ 10 ಸಾವಿರ ಕೊಡಿ – ಹೊಸ ಬಟ್ಟೆ ಅಂಗಡಿ ಮುಂದೆ ಮಂಗಳಮುಖಿಯರ ಕಿರಿಕ್‌

    2 ಸಾವಿರ ಬೇಡ 10 ಸಾವಿರ ಕೊಡಿ – ಹೊಸ ಬಟ್ಟೆ ಅಂಗಡಿ ಮುಂದೆ ಮಂಗಳಮುಖಿಯರ ಕಿರಿಕ್‌

    ಬೆಂಗಳೂರು: ಬಟ್ಟೆ ಅಂಗಡಿಯ ಉದ್ಘಾಟನಾ ಕಾರ್ಯಕ್ರಮದ ಸಮಯದಲ್ಲಿ ಮಂಗಳಮುಖಿಯರು (Transgenders) ಬಂದು ಗಲಾಟೆ ಮಾಡಿದ ಘಟನೆ ವಿಜಯನಗರ ಹಂಪಿನಗರದಲ್ಲಿ (Hampinagar) ನಡೆದಿದೆ.

    ಬಟ್ಟೆ ಅಂಗಡಿ ಉದ್ಘಾಟನೆ ಮುನ್ನ ಹೋಮ ಹವನ ಆಯೋಜನೆಗೊಂಡಿತ್ತು. ಸರಿಯಾಗಿ ಪೂಜೆ ಸಮಯಕ್ಕೆ ನಾಲ್ವರ ಮಂಗಳಮುಖಿರ ಗುಂಪು ಆಗಮಿಸಿದೆ.

     

    ಮಂಗಳಮುಖಿಯರಿಗೆ ಮಾಲೀಕ 2 ಸಾವಿರ ರೂ. ನೀಡಿದ್ದಾರೆ. ಆದರೆ 2 ಸಾವಿರ ರೂ.ಗೆ ಒಪ್ಪದ ಇವರು 10 ಸಾವಿರ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. 10 ಸಾವಿರ ರೂ. ಕೊಡದೇ ಇದ್ದದ್ದಕ್ಕೆ  ಹಲ್ಲೆಗೆ ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಬಟ್ಟೆ ಅಂಗಡಿ ಮಾಲೀಕ ರಾಘವೇಂದ್ರ ಅವರ ಕುಟುಂಬ ಸದಸ್ಯರಿಗೆ ಆವಾಜ್ ಹಾಕಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ ಅನ್ಯಮತೀಯ ಯುವಕನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ – ಸಹಾಯಕ್ಕೆ ಬಂದು ಪ್ರಜ್ಞೆ ತಪ್ಪಿಸಿ ಕೃತ್ಯ

    ಈ ಸಂಬಂಧ ವಿಡಿಯೋ ಮಾಡಿ ನೋವು ತೋಡಿಕೊಂಡ ರಾಘವೇಂದ್ರ ಅವರು, ಶುಭ ಕಾರ್ಯ ಬಂದ್ರೆ ಸಾಕು ಮಂಗಳಮುಖಿಯರು ಬರುತ್ತಾರೆ. ಅವರು ಬಂದರು ಅಂತ ನಮಗೆ ತಿಳಿದಷ್ಟು ಹಣ ನೀಡಿದರೆ ಒಪ್ಪುವುದಿಲ್ಲ. ಇಷ್ಟೇ ಕೊಡಿ ಎಂದು ದಬ್ಬಾಳಿಕೆ ಮಾಡುತ್ತಾರೆ. ಅವಾಚ್ಯ ಪದಗಳಿಂದ ನಿಂದಿಸುತ್ತಾರೆ. ಹಲ್ಲೆಗೆ ಯತ್ನಿಸಿದವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

  • ಬೆಂಗಳೂರಿನ ಹಂಪಿನಗರ ಮನೆಯಲ್ಲಿ ನಿಗೂಢ ಸ್ಫೋಟ

    ಬೆಂಗಳೂರಿನ ಹಂಪಿನಗರ ಮನೆಯಲ್ಲಿ ನಿಗೂಢ ಸ್ಫೋಟ

    ಬೆಂಗಳೂರು: ವಿಜಯನಗರದ ಹಂಪಿನನಗರ ಮನೆಯಲ್ಲಿ ನಿಗೂಢ ಸ್ಫೋಟವೊಂದು ಸಂಭವಿಸಿದೆ.

    ಎರಡಂತಸ್ತಿನ ಕಟ್ಟಡದ ಮೊದಲನೇ ಮಹಡಿ ಮನೆಯಲ್ಲಿ ಬ್ಲಾಸ್ಟ್ ಸಂಭವಿಸಿದ್ದು, ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಮನೆಯಲ್ಲಿದ್ದ ಸೂರ್ಯನಾರಾಯಣ ಶೆಟ್ಟಿ (74), ಪುಷ್ಪಾವಮ್ಮ (70) ಗಾಯಗೊಂಡಿದ್ದಾರೆ. ಗಾಯಾಳು ಪುಷ್ಪಾವತಮ್ಮಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ ಸೂರ್ಯನಾರಾಯಣ ಶೆಟ್ಟಿ ವಿಜಯನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಧ್ಯರಾತ್ರಿ 12:45 ಸುಮಾರಿಗೆ ಸ್ಫೋಟ ಸಂಭವಿಸಿದೆ. ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ನಿಂದ  ಸ್ಫೋಟ ಸಂಭವಿಸರಬಹುದು ಎಂಬ ಶಂಕೆ ಮೂಡಿತ್ತು. ಆದರೆ ಗ್ಯಾಸ್ ಸಿಲಿಂಡರ್ ನಿಂದ ಸ್ಫೋಟ ಸಂಭವಿಸಿಲ್ಲ. ಸ್ಫೋಟಕ್ಕೆ ನಿಜವಾದ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಮುನಿಸು ಶಮನವಾದರೂ ಜಮೀರ್ ಆಹ್ವಾನ ಒಪ್ಪದ ಸಿದ್ದರಾಮಯ್ಯ

    ವಾರದ ಹಿಂದೆ ಹೊಸ ಫ್ರಿಡ್ಜ್ ಅನ್ನು ಮನೆಗೆ ತರಲಾಗಿತ್ತು. ಮನೆಯ ಮುಖ್ಯ ದ್ವಾರದ ಬಳಿ ನಿಲ್ಲಿಸಲಾಗಿದ್ದ ಫ್ರಿಡ್ಜ್ ಸಂಪೂರ್ಣ ಬ್ಲಾಸ್ಟ್ ಆಗಿದೆ. ಸ್ಫೋಟದ ರಭಸಕ್ಕೆ ಮನೆಯ ಬಾಗಿಲು ಛಿದ್ರಗೊಂಡಿದೆ. ಬಾಗಿಲು ಹಾರಿ ಹೋಗಿ ಬೀಳುವಾಗ ಮುಂದೆ ಇದ್ದ ತಂತಿಗೆ ತಗುಲಿದೆ. ಈ ವೇಳೆ ವಿದ್ಯುತ್ ತಂತಿಯಲ್ಲಿ ಸ್ಪಾರ್ಕ್ ಆಗಿ ತಕ್ಷಣ ಹಂಪಿ ನಗರ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಕತ್ತಲೆ ಆವರಿಸಿತ್ತು.

  • ಹಂಪಿನಗರದಲ್ಲಿ ಬೈಕಲ್ಲಿ ಬಂದ ಕಾಮುಕರಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

    ಹಂಪಿನಗರದಲ್ಲಿ ಬೈಕಲ್ಲಿ ಬಂದ ಕಾಮುಕರಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

    ಬೆಂಗಳೂರು: ನಗರದಲ್ಲಿ ಪೊಲೀಸರು ಎಷ್ಟೇ ಕಟ್ಟೇಚ್ಚರ ವಹಿಸಿದ್ರೂ, ಬೀಟ್ ಹೋದ್ರೂ ದುಷ್ಕರ್ಮಿಗಳು ಮಾತ್ರ ಅಟ್ಟಹಾಸ ಮುಂದುವರೆಸಿದ್ದಾರೆ. ಸೋಮವಾರದಂದು ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಮಾಡೆಲಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಬಯಲಾಗಿತ್ತು. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಬಯಲಾಗಿದೆ.

    ವಿಜಯನಗರ ಸಮೀಪದ ಹಂಪಿನಗರದಲ್ಲಿರುವ ಸ್ವಿಮ್ಮಿಂಗ್ ಪೂಲ್ ಬಳಿಯ ರಸ್ತೆಯಲ್ಲಿ ಭಾನುವಾರ ರಾತ್ರಿ 9 ಗಂಟೆಗೆ ಇಬ್ಬರು ಯುವತಿಯರು ವಾಕಿಂಗ್ ಹೋಗ್ತಿದ್ದರು. ಈ ವೇಳೆ ಬೈಕಲ್ಲಿ ಬಂದ ಇಬ್ಬರು ಕಾಮುಕರು ಯುವತಿಯ ಹಿಂಬದಿಗೆ ಹೊಡೆದು ಬಂದಷ್ಟೇ ವೇಗದಲ್ಲಿ ಪರಾರಿಯಾಗಿದ್ದಾರೆ.

    ಇದರಿಂದ ತೀವ್ರ ಭಯ, ಆತಂಕಕ್ಕೆ ಒಳಗಾದ ಆ ಯುವತಿಯರು ಮತ್ತೆ ಆ ಕಾಮುಕರು ವಾಪಸ್ ಬಂದು ಎಲ್ಲಿ ದೌರ್ಜನ್ಯ ನೀಡ್ತಾರೋ ಎಂಬ ಭಯದಿಂದ ಮನೆಗೆ ವಾಪಸ್ ಆಗಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಎದುರಿಗಿದ್ದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ ಕೂಡಲೇ ಕೆಲ ಪ್ರತ್ಯಕ್ಷದರ್ಶಿಗಳು ಕಾಮುಕರ ಬೆನ್ನತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

    ಹಂಪಿ ನಗರದಲ್ಲಿ ಪುಂಡರ ಹಾವಳಿ ಹೆಚ್ಚಿರೋ ಬಗ್ಗೆ ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಆಗಾಗ ಇಂತಹ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ ಅಂತಾರೆ ಸ್ಥಳೀಯರು.

    ಕಳೆದ ವಾರವಷ್ಟೇ ಇದೇ ರಸ್ತೆಯಲ್ಲಿ ನಡೆದು ಹೋಗ್ತಿದ್ದ ಯುವತಿಯ ಕೈಯಿಂದ ಮೊಬೈಲ್ ಕಸಿದು ಕಳ್ಳರು ಬೈಕಲ್ಲಿ ಪರಾರಿಯಾಗಿದ್ರು. ಹೀಗಾಗಿ ವಿಜಯನಗರ ಪೊಲೀಸರ ಕಾರ್ಯವೈಖರಿ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=kC8SySPmets