Tag: ಹಂದಿ ಹೃದಯ

  • ಹಂದಿ ಹೃದಯ ಕಸಿಗೊಳಗಾಗಿದ್ದ ವಿಶ್ವದ 2ನೇ ವ್ಯಕ್ತಿ 40 ದಿನಗಳ ನಂತರ ಸಾವು

    ಹಂದಿ ಹೃದಯ ಕಸಿಗೊಳಗಾಗಿದ್ದ ವಿಶ್ವದ 2ನೇ ವ್ಯಕ್ತಿ 40 ದಿನಗಳ ನಂತರ ಸಾವು

    ವಾಷಿಂಗ್ಟನ್: ವಿಶ್ವದಲ್ಲೇ 2ನೇ ಬಾರಿಗೆ ಪ್ರಾಯೋಗಿಕವಾಗಿ ಹಂದಿಯ ಹೃದಯದ ಕಸಿಗೊಳಗಾಗಿದ್ದ (Heart Transplant) ಅಮೆರಿಕದ ವ್ಯಕ್ತಿ 40 ದಿನಗಳ ಬಳಿಕ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

    ಲಾರೆನ್ಸ್ ಫೌಸೆಟ್ (58) ಹಂದಿಯ ಹೃದಯವನ್ನು (Pig Heart) ಕಸಿಯಾಗಿ ಪಡೆದಿದ್ದ ವಿಶ್ವದ 2ನೇ ವ್ಯಕ್ತಿಯಾಗಿದ್ದಾರೆ. ಸೆಪ್ಟೆಂಬರ್ 20 ರಂದು ಹೃದಯಾಘಾತದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಫೌಸೆಟ್‌ಗೆ ಕೊನೆಯ ಆಯ್ಕೆಯಾಗಿ ಹಂದಿಯ ಹೃದಯವನ್ನು ಕಸಿ ಮಾಡಲಾಗಿತ್ತು.

    ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಪ್ರಕಾರ, ಫೌಸೆಟ್‌ಗೆ ಹೃದಯ ಕಸಿ ಮಾಡಿದ ಬಳಿಕ 1 ತಿಂಗಳು ಆರೋಗ್ಯವಾಗಿದ್ದರು. ಆದರೆ ನಂತರದ ದಿನಗಳಲ್ಲಿ ಹೃದಯ ಸರಿಯಾಗಿ ಸ್ಪಂದಿಸದ ಲಕ್ಷಣಗಳು ತೋರಿಸಲಾರಂಭಿಸಿದೆ. ಶಸ್ತ್ರಚಿಕಿತ್ಸೆಯ ನಂತರ ಅವರು ಸುಮಾರು 6 ವಾರಗಳ ಕಾಲ ಬದುಕಿದ್ದರು. ಫೌಸೆಟ್ ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

    ಫೌಸೆಟ್ ತನ್ನ ಶಸ್ತ್ರಚಿಕಿತ್ಸೆಯ ಬಳಿಕ ಅವರ ಆರೋಗ್ಯದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿತ್ತು. ಅವರು ಎದ್ದು ಕುಳಿತುಕೊಳ್ಳುತ್ತಿದ್ದರು. ಆರಾಮಾಗಿ ಓಡಾಡುತ್ತಿದ್ದರು ಮಾತ್ರವಲ್ಲದೇ ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದರು. ಅವರಿಗೆ ಮಾಡಲಾಗಿದ್ದ ಶಸ್ತ್ರಚಿಕಿತ್ಸೆಯೇನೋ ಯಶಸ್ವಿಯಾಗಿತ್ತು. ಆದರೆ ಬಳಿಕ ಮನುಷ್ಯನ ದೇಹಕ್ಕೆ ಹಂದಿಯ ಹೃದಯ ಹೊಂದಿಕೊಳ್ಳುವುದು ಕಷ್ಟವಾಗತೊಡಗಿತು. ವೈದ್ಯಕೀಯ ತಂಡದ ಸತತ ಪ್ರಯತ್ನಗಳ ಹೊರತಾಗಿಯೂ, ಫೌಸೆಟ್ ಅಂತಿಮವಾಗಿ ಅಕ್ಟೋಬರ್ 30 ರಂದು ಸಾವನ್ನಪ್ಪಿದರು ಎಂದು ಆಸ್ಪತ್ರೆ ತಿಳಿಸಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ಜೆಟ್ ಏರ್‌ವೇಸ್‌ನ 538 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

    ಫೌಸೆಟ್ ಅವರು ನೌಕಾಪಡೆಯ ಅನುಭವಿ ಮತ್ತು ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ ನಿವೃತ್ತ ಲ್ಯಾಬ್ ತಂತ್ರಜ್ಞರಾಗಿದ್ದರು. ಈ ಬಗ್ಗೆ ಮಾತನಾಡಿರುವ ಫೌಸೆಟ್ ಅವರ ಪತ್ನಿ ಆನ್, ಅವರು ನಮ್ಮೊಂದಿಗೆ ಕಳೆಯಲು ಇದ್ದ ಸಮಯ ಕಡಿಮೆಯಿತ್ತು ಎಂಬುದನ್ನು ತಿಳಿದಿದ್ದರು. ಅವರು ನಮ್ಮೊಂದಿಗಿರಲು ಇದು ಕೊನೆಯ ಅವಕಾಶವಾಗಿತ್ತು. ಅವರು ಇಷ್ಟು ದಿನ ಬದುಕಿ ಉಳಿಯುತ್ತಾರೆ ಎಂದು ಊಹಿಸಿರಲಿಲ್ಲ ಎಂದು ತಿಳಿಸಿದ್ದಾರೆ.

    ಕಳೆದ ವರ್ಷ ಮೇರಿಲ್ಯಾಂಡ್ ತಂಡ ವಿಶ್ವದಲ್ಲೇ ಮೊದಲ ಬಾರಿಗೆ ಡೇವಿಡ್ ಬೆನೆಟ್ ಎಂಬವರಿಗೆ ಹಂದಿಯ ಹೃದಯವನ್ನು ಕಸಿ ಮಾಡಿತ್ತು. ಆದರೆ ಕಸಿ ಮಾಡಿದ 2 ತಿಂಗಳ ನಂತರ ಅವರು ನಿಧನರಾದರು. 57 ವರ್ಷದ ಬೆನೆಟ್ 2022ರ ಜನವರಿ 7 ರಂದು ಕಸಿ ಮಾಡಿಸಿಕೊಂಡಿದ್ದರು. ನಂತರ ಅದೇ ವರ್ಷ ಮಾರ್ಚ್ 8 ರಂದು ಸಾವನ್ನಪ್ಪಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ 3 ದಿನ ಆತಂಕ ಮೂಡಿಸಿ ಕೊನೆಗೂ ಸೆರೆ ಸಿಕ್ಕ ಚಿರತೆ ಸಾವು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮೆರಿಕದಲ್ಲಿ ಮನುಷ್ಯನಿಗೆ ಹಂದಿ ಹೃದಯ ಜೋಡಣೆ

    ಅಮೆರಿಕದಲ್ಲಿ ಮನುಷ್ಯನಿಗೆ ಹಂದಿ ಹೃದಯ ಜೋಡಣೆ

    ನ್ಯೂಯಾರ್ಕ್: ಅಮೆರಿಕದ (America) ಮೇರಿಲ್ಯಾಂಡ್ ವಿವಿ ತಜ್ಞರು ವೈದ್ಯ ಲೋಕದಲ್ಲಿ ಹೊಸ ಸಾಹಸ ಮಾಡಿದ್ದಾರೆ. ಸಾವಿನಂಚಿನಲ್ಲಿದ್ದ 58 ವರ್ಷದ ವ್ಯಕ್ತಿಯನ್ನು ಉಳಿಸಿಕೊಳ್ಳಲು ಅಂತಿಮ ಪ್ರಯತ್ನವಾಗಿ ಹಂದಿಯ ಹೃದಯವನ್ನು ಆತನಿಗೆ ಅಳವಡಿಸಿದ್ದಾರೆ.

    ಈ ಆಪರೇಷನ್ ನಡೆದ ಎರಡು ದಿನಗಳಿಗೇ ರೋಗಿ ಚೇತರಿಸಿಕೊಂಡಿದ್ದು, ಖುಷಿ ಖುಷಿ ಕಾಮಿಡಿ ಮಾಡ್ಕೊಂಡು ಇದ್ದಾರೆ. ಕುರ್ಚಿಯಲ್ಲಿ ಆರಾಮಾಗಿ ಕುಳಿತುಕೊಂಡಿದ್ದಾರೆ. ಮುಂದಿನ ದಿನಗಳು ಕಠಿಣ ಎಂದೇ ಹೇಳಬಹುದು. ಆದರೆ ಸದ್ಯದ ಸ್ಪಂದನೆ ನಮ್ಮನ್ನೇ ಅಚ್ಚರಿಯ ಮಡುವಿನಲ್ಲಿ ಕೆಡವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಪ್ರಯಾಣಿಕರಿದ್ದ ರೈಲು ಡಿಕ್ಕಿ – 30 ಮಂದಿಗೆ ಗಾಯ

    ಲಾರೆನ್ಸ್ ಫೌಸೆಟ್ ವ್ಯಕ್ತಿಯು ಹಂದಿ ಹೃದಯದ (Pig Heart) ಕಸಿ ಪಡೆದ ವಿಶ್ವದ ಎರಡನೇ ರೋಗಿಯಾಗಿದ್ದಾರೆ. ಇದು ವೈದ್ಯಕೀಯ ಸಂಶೋಧನೆಯ ಬೆಳವಣಿಗೆಯ ಕ್ಷೇತ್ರದಲ್ಲಿ ಮೈಲಿಗಲ್ಲು. ಪ್ರಾಣಿಗಳ ಅಂಗಗಳನ್ನು ಮನುಷ್ಯರಿಗೆ ಕಸಿ ಮಾಡುವುದರಿಂದ ಮಾನವ ಅಂಗಾಂಗ ದಾನಗಳ ದೀರ್ಘಕಾಲದ ಕೊರತೆಗೆ ಪರಿಹಾರ ನೀಡಬಹುದು. 1,00,000 ಕ್ಕೂ ಹೆಚ್ಚು ಅಮೆರಿಕನ್ನರು ಪ್ರಸ್ತುತ ಅಂಗಾಂಗ ಕಸಿಗಾಗಿ ಕಾಯುವವರ ಪಟ್ಟಿಯಲ್ಲಿದ್ದಾರೆ.

    ಕಳೆದ ವರ್ಷ ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ರೋಗಿಯು, ಆರೋಗ್ಯದ ಕಳಪೆ ಸ್ಥಿತಿ ಸೇರಿದಂತೆ ಹಲವಾರು ಅಂಶಗಳ ಕಾರಣದಿಂದಾಗಿ ಹೃದಯ ಕಸಿಯಾದ 2 ತಿಂಗಳಿಗೆ ಮೃತಪಟ್ಟಿದ್ದ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಸಿಗರೇಟ್ ಬ್ಯಾನ್ ಮಾಡಲಿದ್ದಾರಾ ರಿಷಿ ಸುನಾಕ್?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ನಂತರ ಸಾವು

    ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ನಂತರ ಸಾವು

    ವಾಷಿಂಗ್ಟನ್‌: ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಎರಡು ತಿಂಗಳ ನಂತರ ಮೃತಪಟ್ಟಿದ್ದಾರೆ ಎಂದು ಚಿಕಿತ್ಸೆ ನೀಡಿದ ಆಸ್ಪತ್ರೆ ತಿಳಿಸಿದೆ.

    ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅಮೆರಿಕ ಮೇರಿಲ್ಯಾಂಡ್‍ನ 57 ವರ್ಷದ ಡೇವಿಡ್ ಬೆನೆಟ್‍ಗೆ ಜ.7ರಂದು ಹಂದಿ ಹೃದಯವನ್ನು ಅಳವಡಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಚಿಕಿತ್ಸೆಯಾದ ಮೂರು ದಿನಗಳ ನಂತರ ರೋಗಿಯು ಚೇತರಿಸಿಕೊಂಡಿದ್ದರು. ಅವರಿಗೆ ಅಳವಡಿಸಲಾದ ಹೃದಯ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಮಾ.8 ರಂದು ವ್ಯಕ್ತಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

    ಕೆಲವು ದಿನಗಳ ಹಿಂದೆ ಅವರ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ವೈದ್ಯರು ಹೆಚ್ಚು ನಿಗಾವಹಿಸಿ ಚಿಕಿತ್ಸೆ ಮುಂದುವರಿಸಿದರಾದರೂ, ಅವರು ಚೇತರಿಸಿಕೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ನಂತರ ಅವರು ಮೃತಪಟ್ಟಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ, ಕಸಿ ಮಾಡಲಾದ ಹೃದಯವು ಯಾವುದೇ ತೊಂದರೆಯ ಲಕ್ಷಣಗಳಿಲ್ಲದೆ ಹಲವಾರು ವಾರಗಳವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಸಿನ್ ತಂಡವು ಮನುಷ್ಯನಿಗೆ ಮೊದಲ ಬಾರಿಗೆ ಹಂದಿಯ ಹೃದಯ ಕಸಿ ಮಾಡಿತ್ತು. ಹೊಸ ಜೀನ್ ಎಡಿಟಿಂಗ್ ಉಪಕರಣಗಳಿಂದ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಇದನ್ನೂ ಓದಿ: ಗೆಳತಿಗೆ ಪ್ರಪೋಸ್ ಮಾಡಿದ ಉಕ್ರೇನ್ ಯೋಧನ ಮನಕರಗುವ ವೀಡಿಯೋ

    ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ಬೆನೆಟ್‌ ಆ ಸಂದರ್ಭದಲ್ಲಿ, ಸಾಯುವುದು ಅಥವಾ ಈ ಕಸಿ ಮಾಡಿಸಿಕೊಳ್ಳುವುದು ನನ್ನ ಕೊನೆಯ ಆಯ್ಕೆಯಾಗಿತ್ತು. ಆದರೆ ನಾನು ಬದುಕಲು ಬಯಸುತ್ತೇನೆ. ಬದುಕಲು ನನಗೆ ಇದು ಒಂದೇ ಆಯ್ಕೆಯಾಗಿತ್ತು ಎಂದು ಪ್ರತಿಕ್ರಿಯಿಸಿದ್ದರು.

    ಹಂದಿಯ ಕೆಲವು ಅಂಗಗಳಲ್ಲಿ ಮನುಷ್ಯನ ಅಂಗಗಳಿಗೆ ಹೋಲುವ ರಚನೆಗಳಿವೆ. ಅದರಲ್ಲಿಯೂ ಮನುಷ್ಯನ ಹೃದಯ ಮತ್ತು ಹಂದಿ ಹೃದಯ ಒಂದೇ ಗಾತ್ರವನ್ನು ಹೊಂದಿರುತ್ತೆ. ಪ್ರಸ್ತುತ ಹಂದಿಗಳಿಂದ ಮಾನವರಿಗೆ ಮೂತ್ರಪಿಂಡಗಳು, ಯಕೃತ್ತು ಮತ್ತು ಶ್ವಾಸಕೋಶಗಳನ್ನು ಕಸಿ ಮಾಡಲು ಸಂಶೋಧನೆ ನಡೆಸಲಾಗುತ್ತಿದೆ. ಹಿಂದೆಯೂ ಈ ರೀತಿ ಕೆಲವು ಪ್ರಯೋಗಗಳನ್ನು ಮಾಡಲಾಗಿತ್ತು. ಇದನ್ನೂ ಓದಿ: ರಷ್ಯಾ ತೈಲ ನಿಷೇಧ- ಅಮೆರಿಕ ಅಧ್ಯಕ್ಷರ ಫೋನ್‌ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ