Tag: ಹಂದಿ ಮಾಂಸದ ಗ್ರೇವಿ

  • ಹಂದಿ ಮಾಂಸದ ಗ್ರೇವಿ ಮಾಡುವ ಸರಳ ವಿಧಾನ ನಿಮಗಾಗಿ

    ಹಂದಿ ಮಾಂಸದ ಗ್ರೇವಿ ಮಾಡುವ ಸರಳ ವಿಧಾನ ನಿಮಗಾಗಿ

    ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಟನ್, ಚಿಕನ್, ಫಿಶ್, ಮೊಟ್ಟೆ ತಿಂದು ಬೇಜಾರಾಗಿದ್ಯಾ? ಹಾಗಿದ್ದರೆ ನಾವು ಇಂದು ಹೇಳಿರುವ ಹಂದಿ ಮಾಂಸದ ಗ್ರೇವಿಯನ್ನು ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಹಂದಿ ಮಾಂಸ – 1ಕೆಜಿ
    * ಒಣ ಮೆಣಸಿನಕಾಯಿಗಳು – 12
    * ಬಿಸಿ ನೀರು – 2 ಕಪ್
    * ಹುಣಸೆ ಹಣ್ಣಿನ ರಸ – 1ಚಮಚ
    * ಅರಿಶಿಣ ಪುಡಿ – 1ಚಮಚ
    * ಈರುಳ್ಳಿ – 1
    * ಬೆಳ್ಳುಳ್ಳಿ – 2
    * ಶುಂಠಿ- ಸ್ವಲ್ಪ
    * ದಾಲ್ಚಿನಿ – 2
    * ಕರಿ ಬೇವು – ಸ್ವಲ್ಪ
    * ಮೆಂತ್ಯೆಕಾಳುಗಳು- ಸ್ವಲ್ಪ
    * ತೆಂಗಿನ ಹಾಲು – ಅರ್ಧ ಕಪ್
    * ತುಪ್ಪ- ಅರ್ಧ ಕಪ್
    *ನಿಂಬೆ ರಸ – 2 ಟೀ ಸ್ಪೂನ್ ಇದನ್ನೂ ಓದಿ: ಖಾರ ಖಾರವಾದ ಕೊಡಗು ಶೈಲಿಯ ಹಂದಿ ಕರಿ ಮಾಡಿ

    ಮಾಡುವ ವಿಧಾನ:
    * ಒಣ ಮೆಣಸಿನಕಾಯಿಂದ ಬೀಜಗಳನ್ನು ಬೇರ್ಪಡಿಸಿ 10 ನಿಮಿಷ ಅರ್ಧ ಬಟ್ಟಲು ಬಿಸಿ ನೀರಿನಲ್ಲಿ ನೆನೆಸಿ.
    * ಹುಣಸೆ ಹಣ್ಣನ್ನ  ಉಳಿದಿರುವ ಬಿಸಿ ನೀರಿನಲ್ಲಿ ನೆನಸಿಟ್ಟಿರಬೇಕು.

    * ನಂತರ ಒಣಮೆಣಸಿನಕಾಯಿ, ಅರಿಶಿಣ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

    * ನಂತರ ಒಂದು ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿ ಹಂದಿ ಮಾಂಸ, ದಾಲ್ಚಿನ್ನಿ ಹಾಗೂ ಹುಣಸೆ ಹಣ್ಣಿನ ನೀರನ್ನು ಸೇರಿಸಿ. ಅಲ್ಲದೇ ರುಚಿಗೆ ತಕ್ಕಷ್ಟು ಉಪ್ಪು, ಲಿಂಬೆ ರಸ, ತೆಂಗಿನ ಹಾಲು, ಕರಿಬೇವು, ಹಾಗೂ ಮೆಂತ್ಯೆಕಾಳುಗಳನ್ನು ಸೇರಿಸಿ ಬೇಯಿಸಿಕೊಳ್ಳಿ.

    * ನಂತರ ಈ ಮೊದಲು ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ ಚೆನ್ನಾಗಿ ಬೇಯಲು ಬಿಡಿ.
    * ನಂತರ ಇನ್ನೊಂದು ಬಾಣೆಲೆಯಲ್ಲಿ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ತುಪ್ಪ ಹಾಕಿ ಚೆನ್ನಾಗಿ ಬೇಯಿಸಿ ಹಂದಿ ಮಾಂಸ ಮಸಾಲೆಗೆ ಒಗ್ಗರಣೆ ಮಾಡಿದರೆ ರುಚಿಯಾದ ಹಂದಿ ಮಾಂಸದ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.