Tag: ಹಂದಿ

  • ರಾಯಚೂರಿನ ರಿಮ್ಸ್‌ನಲ್ಲಿ ಹಂದಿಗಳ ಕಾಟ- ಬಾಣಂತಿಯರು, ಶಿಶುಗಳ ವಾರ್ಡ್‍ನಲ್ಲಿ ಆತಂಕ

    ರಾಯಚೂರಿನ ರಿಮ್ಸ್‌ನಲ್ಲಿ ಹಂದಿಗಳ ಕಾಟ- ಬಾಣಂತಿಯರು, ಶಿಶುಗಳ ವಾರ್ಡ್‍ನಲ್ಲಿ ಆತಂಕ

    ರಾಯಚೂರು: ಕೋವಿಡ್ (COVID 19) ನಾಲ್ಕನೇ ಅಲೆ ಆತಂಕ ಹಿನ್ನೆಲೆ ರಾಯಚೂರಿನಲ್ಲಿ ರಿಮ್ಸ್ ಆಸ್ಪತ್ರೆ ಅಗತ್ಯ ಸಿದ್ಧತೆಗಳನ್ನ ಮಾಡುಕೊಳ್ಳುತ್ತಿದೆ. ಆಡಳಿತ ಅಧಿಕಾರಿಗಳು ಈಗಾಗಲೇ ಮಾಕ್ ಡ್ರಿಲ್ ನಡೆಸಿ ಸಿಬ್ಬಂದಿಯನ್ನ ಚುರುಕುಗೊಳಿಸಿದ್ದಾರೆ. ಆದರೆ ಪ್ರತಿಷ್ಠಿತ ರಿಮ್ಸ್ (RIMS Hospital) ಹಾಗೂ ಓಪೆಕ್ ಆಸ್ಪತ್ರೆ (Opec Rajivgandhi Memorial Hospital) ಗೆ ಬರಲು ಸಾಮಾನ್ಯ ರೋಗಿಗಳು ಹೆದರುತ್ತಿದ್ದಾರೆ.

    ಇಡೀ ರಾಜ್ಯದಲ್ಲಿ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಗಳಲ್ಲಿ ಟಾಪ್ 10 ನಲ್ಲಿರೋ ರಾಯಚೂರಿನ ರಿಮ್ಸ್ ಆಸ್ಪತ್ರೆ ಅಂದ್ರೆ ಇತ್ತೀಚಿಗೆ ರೋಗಿಗಳಿಗೆ ಭಯ ಹುಟ್ಟುತ್ತಿದೆ. ನಮ್ಮಲ್ಲಿ ಎಲ್ಲಾ ಸೌಲಭ್ಯಗಳಿವೆ, ಕೋವಿಡ್ ನಾಲ್ಕನೇ ಅಲೆ ಎದುರಿಸಲು ಸಹ ಸನ್ನದ್ದರಾಗಿದ್ದೇವೆ ಅಂತ ಇಲ್ಲಿನ ಆಡಳಿತ ಮಂಡಳಿ ಹೇಳಿಕೊಳ್ಳುತ್ತಿದೆ. ಆದರೆ ಇಲ್ಲಿಗೆ ಬರುವ ರೋಗಿಗಳಿಗೆ ನಾಯಿ, ಕೋತಿ, ಹಂದಿಗಳ ಕಾಟ ವಿಪರೀತವಾಗಿದೆ. ಇಲ್ಲಿನ ಸಮಸ್ಯೆ ಕುರಿತು ನಿಮ್ಮ ಪಬ್ಲಿಕ್ ಟಿವಿ ಸಹ ಈಗಾಗಲೇ ವರದಿಯನ್ನೂ ಮಾಡಿತ್ತು. ಆದ್ರೆ ಓಪೆಕ್ ಹಾಗೂ ರಿಮ್ಸ್ ಆಡಳಿತ ಮಂಡಳಿ ಮಾತ್ರ ಎಚ್ಚೆತ್ತುಕೊಂಡಿಲ್ಲ. ಹಂದಿಗಳಂತೂ ರಿಮ್ಸ್ ಆಸ್ಪತ್ರೆ ಆವರಣವನ್ನೇ ಆವಾಸಸ್ಥಾನ ಮಾಡಿಕೊಂಡಿವೆ. ಆಗಾಗ ಆಸ್ಪತ್ರೆ ವಾರ್ಡ್‍ಗಳಿಗೆ ವಿಸಿಟ್ ನೀಡುತ್ತವೆ.

    ನಾಯಿ ಕೋತಿಗಳಂತು ನೇರವಾಗಿ ಆಸ್ಪತ್ರೆಗೆ ನುಗ್ಗಿ ರೋಗಿಗಳನ್ನ, ರೋಗಿಗಳ ಕಡೆಯವರನ್ನ ಹೆದರಿಸುತ್ತವೆ. ಇಲ್ಲಿ ನಾಯಿ ಕಚ್ಚಿದರೆ ಆರೋಗ್ಯವಾಗಿದ್ದವರೂ ಸಹ ಪುನಃ ಆಸ್ಪತ್ರೆಗೆ ದಾಖಲಾಗಬೇಕಾದ ಪರಸ್ಥಿತಿಯಿದೆ. ಚಿಕ್ಕಮಕ್ಕಳು, ನವಜಾತ ಶಿಶುಗಳ, ಬಾಣಂತಿಯರ ವಾರ್ಡ್‍ಗಳ ಬಳಿ ನಾಯಿ, ಕೋತಿಗಳು ಓಡಾಡುವುದರಿಂದ ಆತಂಕ ಹೆಚ್ಚಾಗಿದೆ. ಸಾರ್ವಜನಿಕರು ಎಷ್ಟೇ ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ಪತ್ನಿ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ!

    ಒಟ್ಟು 520 ಬೆಡ್‍ಗಳ ರಿಮ್ಸ್ ಆಸ್ಪತ್ರೆಗೆ ಪ್ರತಿನಿತ್ಯ ಜಿಲ್ಲೆ ಹೊರಜಿಲ್ಲೆ, ತೆಲಂಗಾಣ ಆಂಧ್ರಪ್ರದೇಶದ ಗಡಿಭಾಗದಿಂದ ಸಾವಿರಾರು ರೋಗಿಗಳು ಬರುತ್ತಾರೆ. ಆದರೆ ಈ ಆಸ್ಪತ್ರೆ ಸಮಸ್ಯೆಯೇ ಬೇರೆಯಾಗಿದೆ. ಇಲ್ಲಿನ ಆಡಳಿತ ಮಂಡಳಿ ಮಾತ್ರ ನಗರಸಭೆ, ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೇವೆ, ಶಾಸಕರ ಗಮನಕ್ಕೂ ತಂದಿದ್ದೇವೆ ಅಂತಿದ್ದಾರೆ. ಆದ್ರೆ ಹಂದಿ, ನಾಯಿ, ಕೋತಿಗಳ ನಿಯಂತ್ರಣ ಮಾತ್ರ ಅಸಾಧ್ಯವಾಗಿದೆ.

    ಈ ಆಸ್ಪತ್ರೆಯಲ್ಲಿನ ವಾಸ್ತವ ಚಿತ್ರೀಕರಣ ಮಾಡಲು ಮಾಧ್ಯಮದವರು ಇಲ್ಲಿನ ಅಧಿಕಾರಿಗಳ ಅನುಮತಿ ಪಡೆದು ಒಳಗೆ ಹೋಗಬೇಕು. ಆದರೆ ಹಂದಿ, ನಾಯಿ, ಕೋತಿಗಳ ಪ್ರವೇಶಕ್ಕೆ ಮಾತ್ರ ಯಾವ ಅನುಮತಿಯೂ ಇಲ್ಲಾ, ನಿಯಂತ್ರಣವೂ ಇಲ್ಲಾ. ಇದು ಇಲ್ಲಿನ ಅವ್ಯವಸ್ಥೆ ಹಿಡಿದ ಕನ್ನಡಿಯಾಗಿದೆ. ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನಲ್ಲಿ ಕಾಣಿಸಿಕೊಂಡ ಆಫ್ರಿಕನ್ ವೈರಸ್ – ಹಂದಿಗಳ ಮಾರಣಹೋಮದಿಂದ ಟೆನ್ಷನ್

    ಕೊಡಗಿನಲ್ಲಿ ಕಾಣಿಸಿಕೊಂಡ ಆಫ್ರಿಕನ್ ವೈರಸ್ – ಹಂದಿಗಳ ಮಾರಣಹೋಮದಿಂದ ಟೆನ್ಷನ್

    ಮಡಿಕೇರಿ: ಭಾಗದಲ್ಲಿ ಅಕಾಲಿಕ ಮಳೆ ಕಾಫಿ, ಕರಿಮೆಣಸಿನ ಬೆಳೆಗೆ ಹೊಡೆತ ನೀಡಿತ್ತು. ಇದರ ಬೆನ್ನಲ್ಲೆ ರೈತರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹಂದಿಸಾಕಾಣಿಕೆಗೆ ಮುಂದಾಗಿದ್ದ ಯುವ ರೈತ ಉದ್ಯಮಿಗಳಿಗೆ ಆಫ್ರಿಕನ್ ಹಂದಿ ಜ್ವರ (African Swine Fever) ಬರಸಿಡಿಲಿನಂತೆ ಎರಗಿದ್ದು, ಹಂದಿಗಳ ಮಾರಣ ಹೋಮವೇ ನಡೆದು ಹೋಗಿದೆ.

    ಮಡಿಕೇರಿಯಲ್ಲಿ ಈಗ ಆಫ್ರಿಕನ್ ಹಂದಿಜ್ವರದ ಟೆನ್ಷನ್ ಶುರುವಾಗಿದೆ. ಕಳೆದ 2 ತಿಂಗಳ ಅವಧಿಯಲ್ಲೇ ಇಲ್ಲಿನ ಗಾಳಿಬೀಡು ಗ್ರಾಮದ ಪ್ರಶಾಂತ್ ಮತ್ತು ಗಣಪತಿ ಎಂಬವರ ಹಂದಿ ಸಾಕಾಣಿಕೆ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಹಂದಿಗಳು ಈ ಮಾರಕ ರೋಗಕ್ಕೆ ಬಲಿಯಾಗಿವೆ. ಇದರಿಂದ ಹಂದಿ ಸಾಗಾಣಿಕೆ ಕೇಂದ್ರಗಳು, ಸುತ್ತಮತ್ತಲ ರೈತರಲ್ಲಿ ಆತಂಕ ಎದುರಾಗಿದೆ.

    ಹೌದು. ಮೊದಲಿಗೆ ಹಂದಿಗಳ ಸರಣಿ ಸಾವು ಕಂಡ ಪಶು ವೈದ್ಯಕೀಯ ಇಲಾಖೆ ಅವುಗಳ ಸ್ಯಾಂಪಲ್ ಸಂಗ್ರಹಿಸಿ ಹೈದರಾಬಾದಿಗೆ ಕಳುಹಿಸಿತ್ತು. ಬಳಿಕ ಹೈದರಾಬಾದ್ ಲ್ಯಾಬಿನಲ್ಲಿ ಅದನ್ನ ಪರೀಕ್ಷೆಗೆ ಒಳಪಡಿಸಿದಾಗ ಸಾವನ್ನಪ್ಪಿದ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಆದ್ರೆ ಲ್ಯಾಬ್ ರಿಪೋರ್ಟ್ (Lab Report) ಬರುವಷ್ಟರಲ್ಲಿ ಗಣಪತಿ ಅವರ ಎಲ್ಲಾ 21 ಹಂದಿಗಳು ಮೃತಪಟ್ಟಿದ್ವು. ಇನ್ನು ಪ್ರಶಾಂತ್ ಅವರು ತಮ್ಮ ಹಂದಿಗಳಿಗೆ ವ್ಯಾಕ್ಸಿನ್ ಕೊಡಿಸಿದ್ರು 9ಕ್ಕೂ ಹೆಚ್ಚು ಹಂದಿಗಳು ಮೃತಪಟ್ಟಿವೆ. ಇದರಿಂದ ಲಕ್ಷಾಂತರ ರೂಪಾಯಿ ಲಾಸ್ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಎಷ್ಟು ದಿನ ಪ್ರಧಾನಿ ಹುದ್ದೆಯಲ್ಲಿರ್ತಾರೆ? – ಸುನಾಕ್ ಬಗ್ಗೆ ಬ್ರಿಟನ್‌ ಪತ್ರಿಕೆಗಳ ಅಸಮಾಧಾನ

    ಇನ್ನು ಈ ಗ್ರಾಮದಲ್ಲಿ ಐದಾರು ವರ್ಷಗಳಲ್ಲಿ ಹಂದಿ ಸಾಕಾಣಿಕೆ ಮಾಡುತ್ತಿದ್ದ ರೈತರು ಮಾರಾಟಕ್ಕೆ ಸಿದ್ಧವಾಗಿದ್ದ ಹಂದಿಗಳ ಸಾವಿನಿಂದ ಕಂಗಾಲಾಗಿದ್ದಾರೆ. ಅತ್ತ ಆಪ್ರಿಕನ್ ಹಂದಿ ಜ್ವರ ಪತ್ತೆಯಾದ ಹಿನ್ನೆಲೆ ಮತ್ತಷ್ಟು ರೋಗ ಹರಡದಂತೆ ತಡೆಯಲು ಕೊಡಗು ಜಿಲ್ಲಾಡಳಿತ ಮುಂದಾಗಿದೆ. ಹಂದಿ ಸಾಕಾಣಿಕಾ ಕೇಂದ್ರದ 1 ಕಿಲೋ ಮೀಟರ್ ವ್ಯಾಪ್ತಿ ರೋಗ ಪೀಡಿತ ವಲಯವೆಂದು ಘೋಷಣೆ ಮಾಡಿದ್ದು, ಸೋಂಕಿಗೆ ತುತ್ತಾದ ಹಂದಿಗಳ ವೈಜ್ಞಾನಿಕ ವಧೆ, ಸಂಸ್ಕಾರಕ್ಕೆ ಸೂಚನೆ ನೀಡಿದೆ.

    ಒಟ್ನಲ್ಲಿ ಮೊದಲೇ ಅಕಾಲಿಕ ಮಳೆಯಿಂದ ಕಾಫಿ, ಕರಿಮೆಣಸು ಬೆಳೆ ಕಳೆದುಕೊಂಡು ಸಮಸ್ಯೆಗೆ ಸಿಲುಕಿದ್ದ ಮಂದಿ, ಪರ್ಯಾಯವಾಗಿ ಹಂದಿ ಸಾಕಾಣಿಕೆ ಮಾಡಲು ಮುಂದಾಗಿದ್ರು. ಆದ್ರೆ ಈಗ ಇದಕ್ಕೂ ಸಂಕಷ್ಟ ಶುರುವಾಗಿರೋದು ಆತಂಕಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಸ್ಸಾಂನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ – ಹಂದಿ ಮಾಂಸ ಸೇವಿಸದಂತೆ ಸರ್ಕಾರ ಸೂಚನೆ

    ಅಸ್ಸಾಂನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ – ಹಂದಿ ಮಾಂಸ ಸೇವಿಸದಂತೆ ಸರ್ಕಾರ ಸೂಚನೆ

    ದಿಸ್ಪುರ್: ಅಸ್ಸಾಂನ ದಿಬ್ರುಗಢ್‌ನ ಭೋಗಾಲಿ ಪಥ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ (ASF) ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಹಂದಿ ಮಾಂಸ ಸೇವಿಸದಂತೆ ಸೂಚಿಸಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ದಿಬ್ರುಗಢ್ ಪಶುಸಂಗೋಪನೆ ಮತ್ತು ಪಶುವೈದ್ಯಾಧಿಕಾರಿ ಡಾ.ಹಿಮಂದು ಬಿಕಾಶ್ ಬರುವಾ, ಇಲ್ಲಿನ ಹಂದಿಯೊಂದರಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಆ ಪ್ರದೇಶದ 1 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿದೆ. ಜೊತೆಗೆ ವ್ಯಾಪ್ತಿ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಿದ್ದು ಕೊಂದ ಹಂದಿಗಳನ್ನು ಹೂಳಲಾಗಿದೆ. ಅದೇ ಸಮಯದಲ್ಲಿ, ನಾವು ಇಡೀ ಪ್ರದೇಶವನ್ನು ಸ್ಯಾನಿಟೈಸ್ ಮಾಡಿ, ಏಕಕಾಲದಲ್ಲಿ ಶುಚಿಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

    ಆಫ್ರಿಕನ್ ಹಂದಿ ಜ್ವರವು ಹಂದಿಗಳಿಗೆ ಮಾರಣಾಂತಿಕ ಅಷ್ಟೇ, ಹೆಚ್ಚು ಸಾಂಕ್ರಾಮಿಕವಾಗಿದ್ದರೂ ಮನುಷ್ಯರಿಗೆ ಸೋಂಕು ಹರಡುವುದಿಲ್ಲ. ಹೀಗಾಗಿ ಆತಂಕಕೊಳ್ಳಕಾಗಬಾರದೆಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಇಲಿ ಪಾಷಾಣ ಸೇವಿಸಿ ಗೃಹಿಣಿ ಆತ್ಮಹತ್ಯೆ

    ಸರ್ಕಾರದ ಅಂಕಿ-ಅಂಶಗಳ ಪ್ರಕಾರ 2020 ರಿಂದ 2022ರ ಜುಲೈ 11ರ ವರೆಗೆ ರಾಜ್ಯದಲ್ಲಿ ಸುಮಾರು 40,159 ಹಂದಿಗಳು ಜ್ವರದಿಂದ ಸಾವನ್ನಪ್ಪಿವೆ. 1,181 ಹಂದಿಗಳನ್ನು ಕೊಲ್ಲಲಾಗಿದೆ ಎಂದಿದ್ದಾರೆ.

    ಎಲ್ಲೆಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ?
    ಅಸ್ಸಾಂ, ಮಿಜೋರಾಂ, ಸಿಕ್ಕಿಂ, ನಾಗಾಲ್ಯಾಂಡ್, ತ್ರಿಪುರಾ, ಉತ್ತರಾಖಂಡ ಹಾಗೂ ಬಿಹಾರ ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್‌ಎಫ್) ಪ್ರಕರಣಗಳು ವರದಿಯಾಗಿವೆ.

    ಈ ಜ್ವರವು ಸಾಂಕ್ರಾಮಿಕವಾಗಿದ್ದು, ಮನುಷ್ಯರಿಗೆ ಹರಡುವುದಿಲ್ಲ. ಆದರೆ ಇದಕ್ಕೆ ಸೂಕ್ತ ಲಸಿಕೆಯೂ ಇಲ್ಲದಿರುವುದರಿಂದ ಹಂದಿ ಮಾಂಸ ತಿನ್ನುವುದನ್ನು ತಪ್ಪಿಸುವಂತೆ ಸರ್ಕಾರವು ನಿವಾಸಿಗಳನ್ನು ಒತ್ತಾಯಿಸಿದೆ. ಇದನ್ನೂ ಓದಿ: ಟ್ವಿಟ್ಟರ್ ಡೀಲ್ ರದ್ದು ಮಾಡುವ ಮೊದಲೇ ಪರಾಗ್‍ಗೆ ಮೆಸೇಜ್ ಮಾಡಿದ್ದ ಮಸ್ಕ್

    ಕೇಂದ್ರ ಸರ್ಕಾರವು ಆಫ್ರಿಕನ್ ಹಂದಿ ಜ್ವರದ ಕ್ರಿಯಾ ಯೋಜನೆ ರೂಪಿಸಿದ್ದು, ಇದನ್ನು ಎಲ್ಲಾ ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ಅನುಸರಿಸಬೇಕು, ಆರೋಗ್ಯ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸಬೇಕು. ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ ಜ್ವರ ಅಥವಾ ಜ್ವರದಿಂದ ಸಾವನ್ನಪ್ಪಿದ ಪ್ರಕರಣಗಳ ಬಗ್ಗೆ ನಿಗಾ ವಹಿಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಕಸ ಎಸೆಯಲು ಹೋದ ಮಹಿಳೆ ಮೇಲೆ ಹಂದಿ ದಾಳಿ

    ಕಸ ಎಸೆಯಲು ಹೋದ ಮಹಿಳೆ ಮೇಲೆ ಹಂದಿ ದಾಳಿ

    ಧಾರವಾಡ: ಕಸ ಎಸೆಯಲೆಂದು ಹೋದಾಗ ಮಹಿಳೆಯೊಬ್ಬರ ಮೇಲೆ ಹಂದಿ ದಾಳಿ ನಡೆಸಿದ ಪರಿಣಾಮ ಕಾಲಿಗೆ ತೀವ್ರ ಗಾಯವಾಗಿರುವ ಘಟನೆ ಧಾರವಾಡ ನಗರದ ಗೌಳಿ ಗಲ್ಲಿಯಲ್ಲಿ ಸಂಭವಿಸಿದೆ.

    ಸಾಂದರ್ಭಿಕ ಚಿತ್ರ

    ಅನಿತಾ ಜಮಾದಾರ ಎಂಬವರು ಕಸ ಎಸೆಯಲೆಂದು ಹೋದಾಗ ಹಂದಿ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಅವರ ಕೈ ಹಾಗೂ ಕಾಲಿಗೆ ತೀವ್ರ ಪರಿಚಿದ ಗಾಯಗಳಾಗಿವೆ. ಅವರಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಹಾರಾಡಿದ ಮಾನವರಹಿತ ಯುದ್ಧ ವಿಮಾನ – DRDO ಪರೀಕ್ಷೆ ಯಶಸ್ವಿ

    ಗೌಳಿ ಗಲ್ಲಿಯಲ್ಲಿ ಹಂದಿಗಳ ಕಾಟ ಜೋರಾಗಿದ್ದು, ಸದ್ಯ ಅನಿತಾ ಅವರ ಮೇಲೆ ಹಂದಿ ದಾಳಿ ನಡೆಸಿದ್ದರಿಂದ ಅಲ್ಲಿನ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಮಹಾನಗರ ಪಾಲಿಕೆ ಹಂದಿ ಕಾಟಕ್ಕೆ ಮುಕ್ತಿ ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೇವೇಗೌಡ್ರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೆ… ನಾಲ್ವರ ಮೇಲೆ ಹೋಗೋದು ಹತ್ತಿರದಲ್ಲೇ ಇದೆ: KN ರಾಜಣ್ಣ

    Live Tv

  • ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

    ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

    ಚಿಕಾಗೋ: ಇದೇ ಮೊದಲ ಬಾರಿ ಮನುಷ್ಯನಿಗೆ ಹಂದಿ ಹೃದಯದ ಕಸಿ ಮಾಡಿದ್ದು, ಈಗ ಆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.

    ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅಮೆರಿಕ ವ್ಯಕ್ತಿಗೆ ಹಂದಿ ಹೃದಯವನ್ನು ಅಳವಡಿಸಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಪ್ರಸುತ್ತ ಈ ಚಿಕಿತ್ಸೆ ಯಶಸ್ವಿಯಾಗಿದ್ದು, ಚಿಕಿತ್ಸೆಯಾದ ಮೂರು ದಿನಗಳ ನಂತರ ರೋಗಿಯು ಚೇತರಿಸಿಕೊಂಡಿದ್ದಾರೆ. ಅವರಿಗೆ ಅಳವಡಿಸಲಾದ ಹೃದಯ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ – ಫೋಟೋ ವೈರಲ್

    ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಸಿನ್ ತಂಡವು ನಡೆಸಿದ ಶಸ್ತ್ರಚಿಕಿತ್ಸೆಯು ಹಂದಿಯಿಂದ ಮನುಷ್ಯನಿಗೆ ಮೊದಲ ಬಾರಿಗೆ ಹೃದಯ ಕಸಿ ಮಾಡಿದ್ದು, ಯಶಸ್ವಿಯಾಗಿದೆ. ಹೊಸ ಜೀನ್ ಎಡಿಟಿಂಗ್ ಉಪಕರಣಗಳಿಂದ ಶಸ್ತ್ರ ಚಿಕಿತ್ಸೆ ಸಾಧ್ಯವಾಯಿತು.

    ಮೇರಿಲ್ಯಾಂಡ್‍ನ 57 ವರ್ಷದ ಡೇವಿಡ್ ಬೆನೆಟ್‍ಗೆ, ಹೃದಯ ಕಸಿ ಮಾಡಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಾಯುವುದು ಅಥವಾ ಈ ಕಸಿ ಮಾಡಿಸಿಕೊಳ್ಳುವುದು ನನ್ನ ಕೊನೆಯ ಆಯ್ಕೆಯಾಗಿತ್ತು. ಆದರೆ ನಾನು ಬದುಕಲು ಬಯಸುತ್ತೇನೆ. ಬದುಕಲು ನನಗೆ ಇದು ಒಂದೇ ಆಯ್ಕೆಯಾಗಿತ್ತು ಎಂದು ವಿವರಿಸಿದರು.

    Surgeon Muhammad M. Mohiuddin, MD leads a team placing a genetically-modified pig heart into a storage device at the Xenotransplant lab before its transplant on David Bennett, a 57-year-old patient with terminal heart disease, at University of Maryland Medical Center in Baltimore, Maryland, U.S. January 7, 2022. Picture taken January 7, 2022. University of Maryland School of Medicine (UMSOM)/Handout via REUTERS.

    ಹಂದಿ ಹೃದಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ರೋಗಿಗೆ ಕಸಿ ಮಾಡಿದ ಡಾ.ಬಾಟ್ರ್ಲಿ ಗ್ರಿಫಿತ್ ಈ ಕುರಿತು ಮಾತನಾಡಿದ್ದು, ಇದು ಒಂದು ಮಹತ್ವದ ಶಸ್ತ್ರಚಿಕಿತ್ಸೆಯಾಗಿದೆ. ಅಂಗಗ ದಾನ ಮಾಡುವ ಹಲವು ದಾನಿಗಳಿದ್ದರೂ, ಹೃದಯ ದಾನ ಮಾಡುವವರು ತುಂಬಾ ಕಡಿಮೆ. ಈಗ ಈ ರೀತಿಯ ಹೊಸ ಪ್ರಯೋಗದಿಂದ ಅಂಗಗಳ ಕೊರತೆಯ ಬಿಕ್ಕಟ್ಟನ್ನು ಪರಿಹರಿಸಲು ಸಹಾಯವಾಗಲಿದೆ ಎಂದು ವಿವರಿಸಿದರು.

    ಈ ರೀತಿ ಪ್ರಯೋಗ ಮಾಡಬೇಕಾದರೆ ನಾವು ಜಾಗರೂಕತೆಯಿಂದ ಮುಂದುವರಿಯಬೇಕು. ಆದರೆ ಈ ಶಸ್ತ್ರಚಿಕಿತ್ಸೆ ಪ್ರಪಂಚದಲ್ಲಿ ಮೊದಲ ಬಾರಿಗೆ ಮಾಡಲಾಗಿದೆ. ಇದು ಯಶಸ್ವಿಯಾಗಿರುವುದರಿಂದ ಇನ್ನೂ ಹೊಸ ರೀತಿಯ ಪ್ರಯೋಗ ಮಾಡುವುದಕ್ಕೆ ನಾವು ಆಶಾವಾದಿಯಾಗಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಹಂದಿಗಳು ಬಹಳ ಹಿಂದಿನಿಂದಲೂ ಮನುಷ್ಯನಿಗೆ ಕಸಿ ಮಾಡುವ ಮೂಲವಾಗಿದೆ. ಏಕೆಂದರೆ ಅವುಗಳ ಅಂಗಗಳು ಮನುಷ್ಯರಿಗೆ ಹೋಲುತ್ತವೆ. ಅದರಲ್ಲಿಯೂ ಮನುಷ್ಯನ ಹೃದಯ ಮತ್ತು ಹಂದಿ ಹೃದಯ ಒಂದೇ ಗಾತ್ರವನ್ನು ಹೊಂದಿರುತ್ತೆ. ಪ್ರಸ್ತುತ ಹಂದಿಗಳಿಂದ ಮಾನವರಿಗೆ ಮೂತ್ರಪಿಂಡಗಳು, ಯಕೃತ್ತು ಮತ್ತು ಶ್ವಾಸಕೋಶಗಳನ್ನು ಕಸಿ ಮಾಡಲು ಸಂಶೋಧನೆ ನಡೆಸುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ:  : Mekedatu Padyatra: ಮಕ್ಕಳನ್ನು ಭೇಟಿ ಮಾಡಿದ್ದ ಡಿಕೆ ಶಿವಕುಮಾರ್‌ ವಿರುದ್ಧ ಕೇಸ್‌

    ಹಿಂದೆಯೂ ಈ ರೀತಿ ಕೆಲವು ಪ್ರಯೋಗಗಳನ್ನು ಮಾಡಲಾಗಿದ್ದು, ಹಂದಿಯ ಸೋಂಕಿನ ಅಪಾಯದಿಂದ ಮನುಷ್ಯನಿಗೆ ಕಸಿ ಮಾಡಿದ ಹಿಂದಿನ ಪ್ರಯತ್ನಗಳು ವಿಫಲವಾಗಿತ್ತು. ಆದರೆ ಈ ಪ್ರಯೋಗದಲ್ಲಿ ದಾನಿ ಹಂದಿಯ ಹೃದಯ ಅತಿಯಾದ ಬೆಳವಣಿಗೆಯನ್ನು ತಡೆಯಲು ನಾವು ಹಂದಿ ಜೀನ್ ಅನ್ನು ತೆಗೆದಿದ್ದೇವೆ. ನಮ್ಮ ಎಲ್ಲ ಪ್ರಯತ್ನಗಳಿಗೆ ಇಂದು ಯಶಸ್ಸು ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

  • ಮಂಡ್ಯದಲ್ಲಿ 150 ಹಂದಿಗಳ ಸಜೀವ ದಹನ ಮಾಡಿದ ದುಷ್ಕರ್ಮಿಗಳು!

    ಮಂಡ್ಯದಲ್ಲಿ 150 ಹಂದಿಗಳ ಸಜೀವ ದಹನ ಮಾಡಿದ ದುಷ್ಕರ್ಮಿಗಳು!

    ಮಂಡ್ಯ: ಹಂದಿ ಸಾಕಾಣಿಕೆ ಗೂಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ 150 ಹಂದಿಗಳು ಸಜೀವ ದಹನವಾಗಿರುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಹೊರವಲಯದಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಪಾಂಡವಪುರದ ಮಹಾತ್ಮಗಾಂಧಿ ನಗರ ಬಡಾವಣೆಯ ಶಿವರಾಜು ಎಂಬವರಿಗೆ ಸೇರಿದ ಹಂದಿ ಗೂಡು ಇದಾಗಿದೆ. ಇದನ್ನೂ ಓದಿ: ಭೀಕರ ಅಪಘಾತ – ಬೈಕಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

    ಶಿವರಾಜು ಅವರು ಹೊರವಲಯದಲ್ಲಿ ಗೂಡು ನಿರ್ಮಿಸಿಕೊಂಡು ಹಂದಿ ಸಾಕಾಣಿಕೆ ಮಾಡುತ್ತಿದ್ದರು. ಯಾರು ಇಲ್ಲದಿದ್ದನ್ನ ಗಮನಿಸಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಿಂದ ಶಿವರಾಜು ಅವರು ಸುಮಾರು 15 ಲಕ್ಷ ರೂ. ನಷ್ಟ ಅನುಭವಿಸಿದ್ದಾರೆ.

    ದುಷ್ಕರ್ಮಿಗಳ ವಿರುದ್ಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೊದಲ ಬಾರಿಗೆ ಮಾನವನಿಗೆ ಹಂದಿ ಕಿಡ್ನಿ ಅಳವಡಿಕೆ

    ಮೊದಲ ಬಾರಿಗೆ ಮಾನವನಿಗೆ ಹಂದಿ ಕಿಡ್ನಿ ಅಳವಡಿಕೆ

    ವಾಷಿಂಗ್ಟನ್: ಇದೇ ಮೊದಲ ಬಾರಿಗೆ ಹಂದಿಯ ಮೂತ್ರಪಿಂಡ(ಕಿಡ್ನಿ)ಯನ್ನು ಮಾನವನಿಗೆ ಕಸಿ ಮಾಡಲಾಗಿದೆ. ಕಿಡ್ನಿ ಅಳವಡಿಸಿದ ರೋಗಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಆಗಿಲ್ಲ ಎಂದು ನ್ಯೂಯಾರ್ಕ್ ವೈದ್ಯರು ಹೇಳಿದ್ದಾರೆ.

    ನ್ಯೂಯಾರ್ಕ್ ಲಾಂಗ್‍ಒನ್ ಹೆಲ್ತ್(ಎನ್‍ವೈಎಲ್) ಸಂಸ್ಥೆಯಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಿದುಳು ನಿಷ್ಕ್ರಿಯವಾಗಿ ಜೀವರಕ್ಷಕ ಸಾಧನದ ಮೇಲೆ ಜೀವಂತವಿರುವ ಮಹಿಳೆಗೆ ವಂಶವಾಹಿ ಪರಿವರ್ತಿಸಲಾದ ಹಂದಿ ಕಿಡ್ನಿ ಕಸಿ ಮಾಡಲಾಗಿದೆ. ಇದರಿಂದ ಹಂದಿಯ ಕಿಡ್ನಿಯನ್ನು ಮಾನವ ದೇಹ ತಕ್ಷಣಕ್ಕೆ ತಿರಸ್ಕರಿಸುವುದಿಲ್ಲ ಎಂಬುದು ಗೊತ್ತಾಗಿದೆ ಎಂದು ಎನ್‍ವೈಎಲ್ ಸಂಸ್ಥೆ ತಿಳಿಸಿವೆ.

    ಕಿಡ್ನಿ ಕಸಿಯಾದ ಮೇಲೆ ಮೂರು ದಿನ ಅದನ್ನು ಆಕೆಯ ದೇಹದ ಹೊರಗೆ ನಿರ್ವಹಿಸಲಾಯಿತು. ಆಕೆಗೆ ಮೂತ್ರ ಮಾಡಲು ಯಾವುದೇ ಕಷ್ಟವಾಗಿಲ್ಲ ಎಂಬುದನ್ನು ನಾವು ಖಚಿತ ಮಾಡಿಕೊಂಡೆವು. ಈ ಪ್ರಯೋಗಾತ್ಮಕ ಚಿಕಿತ್ಸೆ ನಡೆಸುವುದಕ್ಕೂ ಮುದಲು ಮಿದುಳು ನಿಷ್ಕ್ರಿಯವಾದ ಮಹಿಳೆಯ ಕುಟುಂಬಸ್ಥರಿಂದ ಒಪ್ಪಿಗೆ ಪಡೆದುಕೊಂಡಿದ್ದೇವೆ ಎಂದು ಎನ್‍ವೈಎಲ್ ವಿವರಿಸಿದೆ. ಇದನ್ನೂ ಓದಿ: 100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ

    ಪ್ರಯೋಗ: ಮುದುಳು ನಿಷ್ಕ್ರಿಯವಾದ ಮಹಿಳೆಯ ಮೂತ್ರಪಿಂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹಂದಿ ಕಿಡ್ನಿ ಅಳವಡಿಸಿದ ನಂತರ ಕಾರ್ಯ ಸಹಜವಾಗಿ ನಡೆಸಲು ಆರಂಭವಾಯಿತ್ತು ಎಂದು ನ್ಯೂಯಾರ್ಕ್ ಲಾಂಗ್‍ಒನ್ ಹೆಲ್ತ್ ಸಂಶೋಧನಾ ತಂಡದ ಮುಖ್ಯಸ್ಥ ಡಾ. ರಾಬರ್ಟ್ ಮಾಂಟ್ಗೊಮೆರಿ ಹೇಳಿದ್ದಾರೆ. ದನ್ನೂ ಓದಿ: 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದ : ಸಿದ್ದರಾಮಯ್ಯ

    ಮಾನವರಿಗೆ ಪ್ರಾಣಿಗಳ ಅಂಗಗಳನ್ನು ಜೋಡಿಸುವ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಆದರೆ ಕಸಿ ಮಾಡಿದ ತಕ್ಷಣ ಮಾನವ ದೇಹ ಸ್ಪಂದನೆ ನೀಡುತ್ತಿದೆ. ರಾಬರ್ಟ್ ಅವರ ತಂಡ ಈ ನಿಟ್ಟಿನಲ್ಲಿ ಮೊದಲ ಹಂತದ ಯಶಸ್ಸುಗಳಿಸಿದೆ. ಈ ಪ್ರಯೋಗವನ್ನು ಥೇರಪ್ಯೂಟಿಕ್ಸ್ ಕಾಪ್ರ್ಸ್ ರಿವಿವಿಕಾರ್ ಯುನಿಟ್ ಮಾಡಿದೆ.

  • ಯಾದಗಿರಿ ನಗರದಲ್ಲಿ ಆಪರೇಶನ್ ಪಿಗ್ ಆರಂಭ

    ಯಾದಗಿರಿ ನಗರದಲ್ಲಿ ಆಪರೇಶನ್ ಪಿಗ್ ಆರಂಭ

    – ಚೆನ್ನೈ ಮೂಲದ ಪರಿಣಿತರಿಂದ ಹಂದಿ ಹಿಡಿಯುವ ಕಾರ್ಯಾಚರಣೆ

    ಯಾದಗಿರಿ: ಹಂದಿಗಳ ಹಾವಳಿಗೆ ಯಾದಗಿರಿ ನಗರದ ಜನರು ಇಷ್ಟು ದಿನ ತತ್ತರಿಸಿ ಹೋಗಿದ್ದರು. ನಗರದ ಜನರು ಹಂದಿಗಳ ಸ್ಥಳಾಂತರ ಮಾಡುವಂತೆ ಒತ್ತಾಯ ಮಾಡಿದ ಹಿನ್ನೆಲೆ ಇಂದು ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಹಂದಿಗಳನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡುವ ಕೆಲಸ ನಡೆಯುತ್ತಿದೆ.

    ಗಾಂಧಿನಗರ, ತಾಂಡಾ, ಮದನಪುರ ಸೇರಿದಂತೆ ಹಲವು ಕಡೆ ಹಂದಿಗಳ ಹಾವಳಿ ಹೆಚ್ಚಾಗಿತ್ತು. ಕೆಲದಿನಗಳ ಹಿಂದೆ ಹಂದಿಗಳು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ್ದವು. ಪರಿಣಾಮ ಯಾದಗಿರಿ ನಗರದ ಜನರು ಹಂದಿಗಳನ್ನು ಸ್ಥಳಾಂತರ ಮಾಡುವಂತೆ ನಗರಸಭೆಗೆ ಒತ್ತಾಯ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳು ಹಂದಿಗಳ ಸಾಕಾಣಿಕೆ ಮಾಡುವ ಮಾಲಿಕರಿಗೆ ನೊಟೀಸ್ ನೀಡಿ ಎಚ್ಚರಿಕೆ ನೀಡಿದ್ದರು. ಆದರೂ ಹಂದಿಗಳು ತಮ್ಮ ಉಪಟಳ ಮುಂದುವರಿಸಿದ್ದವು.

    ಇದರಿಂದ ಬೇಸರಗೊಂಡ ನಗರಸಭೆ ಅಧಿಕಾರಿಗಳು ಹಂದಿಗಳ ಸ್ಥಳಾಂತರ ಮಾಡಲು ಟೆಂಡರ್ ಕರೆದಿದ್ದರು. ಚೆನ್ನೈ ಮೂಲದ ಗುತ್ತಿಗೆದಾರನಿಗೆ ಹಂದಿ ಹಿಡಿಯುವ ಟೆಂಡರ್ ಆಗಿದ್ದು, ಇಂದು ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ, ಹಂದಿಗಳನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡುವ ಕೆಲಸವನ್ನು ಮಾಡಲಾಗಿದೆ. ಚೆನ್ನೈ ಮೂಲದ 20 ನುರಿತ ವ್ಯಕ್ತಿಗಳು ಈ ಹಂದಿ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

  • 60 ಹಂದಿಗಳನ್ನ ಕದ್ದಿದ್ದ 7 ಮಂದಿ ಕಳ್ಳರ ಬಂಧನ

    60 ಹಂದಿಗಳನ್ನ ಕದ್ದಿದ್ದ 7 ಮಂದಿ ಕಳ್ಳರ ಬಂಧನ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ ಎಚ್ ಕ್ಯಾಂಪ್-3 ರಲ್ಲಿ ಸುಮಾರು 4 ಲಕ್ಷ 50 ಸಾವಿರ ರೂ. ಬೆಲೆಬಾಳುವ ಹಂದಿ ಕಳ್ಳತನ ಮಾಡಿದ್ದ ಖದೀಮರು ಕೊನೆಗೂ ಸೆರೆಸಿಕ್ಕಿದ್ದಾರೆ.

    ಸಿಂಧನೂರು ಪೋಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರ್ ಎಚ್ ಕ್ಯಾಂಪ್ 3 ರಲ್ಲಿ 2020 ಡಿಸೆಂಬರ್ 19 ರಂದು ಬಿಜನ್ ಮಂಡಲ್ ಎಂಬವರ ಜಮೀನಿನಲ್ಲಿ ಇದ್ದ 60 ಹಂದಿಗಳನ್ನ ಎರಡು ಬುಲೆರೋ ವಾಹನಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು.

    ದೂರು ದಾಖಲಿಸಿಕೊಂಡು ಪ್ರಕರಣ ಕೈಗೆತ್ತಿಕೊಂಡ ಸಿಂಧನೂರು ಗ್ರಾಮೀಣ ಠಾಣೆ ಪೋಲೀಸರು, ಇದೀಗ ಏಳು ಜನ ಕಳ್ಳರನ್ನ ಬಂಧಿಸಿದ್ದಾರೆ. ಅಂಬಣ್ಣ, ಮಂಜ, ಯಲ್ಲಪ್ಪ, ಹನುಮಂತ, ಹನುಮೇಶ, ದುರಗಪ್ಪ ಹಾಗೂ ವೆಂಕಟೇಶ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಹಂದಿ ಹಿಡಿಯುವ ಬಲೆಗಳು, ಟಾರ್ಚ್, ಬಡಿಗೆಗಳು ಸೇರಿದಂತೆ ಒಟ್ಟು 14 ಲಕ್ಷದ 52 ಸಾವಿರ ಬೆಲೆ ಬಾಳುವ ಸ್ವತ್ತನ್ನ ವಶಪಡಿಸಿಕೊಳ್ಳಲಾಗಿದೆ.

  • ಹಂದಿ ಮಾರಾಟದಿಂದ 90 ಸಾವಿರ ರೂ. ಗಳಿಸಿದ ಬಿಬಿಎಂಪಿ

    ಹಂದಿ ಮಾರಾಟದಿಂದ 90 ಸಾವಿರ ರೂ. ಗಳಿಸಿದ ಬಿಬಿಎಂಪಿ

    ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಬೀಡುಬಿಟ್ಟ ಹಂದಿಗಳನ್ನು ಮಾರಾಟ ಮಾಡುವ ಮೂಲಕ ಬಿಬಿಎಂಪಿ ಪಶುಪಾಲನ ವಿಭಾಗವು ಸುಮಾರು 90 ಸಾವಿರ ರೂಪಾಯಿ ಹಣ ಗಳಿಸಿದೆ.

    ಬೀಡಾಡಿ ಹಂದಿಗಳನ್ನು ಹಂದಿ ಮಾರಾಟಗಾರರೇ ಹಿಡಿದು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನ ಪಾಲಿಕೆಗೆ ನೀಡುವ ಯೋಜನೆ ಇದಾಗಿದೆ. ಈ ಪ್ರಕ್ರಿಯೆ ಕಳೆದ 3 ತಿಂಗಳಿಂದ ನಡೆಯುತ್ತಿದೆ. ಸದ್ಯ ಬೊಮ್ಮನಹಳ್ಳಿ ಸುತ್ತಮುತ್ತ ಇದ್ದ ಬೀಡಾಡಿ ಹಂದಿಗಳನ್ನು ಹಿಡಿದು ಮಾರಾಟ ಮಾಡಿ, ಹಣ ಗಳಿಕೆ ಮಾಡಲಾಗಿದೆ.

    ಈ ಹಂದಿಗಳನ್ನು ಹಿಡಿಯಲು ಟೆಂಡರ್ ಮಾಡಿ ಅನುಮತಿ ಪಡೆದಿರಬೇಕು ಎಂದು ಬಿಬಿಎಂಪಿ ತಿಳಿಸಿದೆ. ಅಷ್ಟೇ ಅಲ್ಲದೆ ಅನಧಿಕೃತ ಹಂದಿ ಸಾಕಾಣಿಕೆ ಜಾಲದ ಮೇಲೆ ಪಾಲಿಕೆ ಕಣ್ಣು ಇಟ್ಟಿದ್ದು, ನಗರದಲ್ಲಿ ಬೀಡಾಡಿ ಹಂದಿ ಮಾರಾಟ ಮಾಡಲು ಅವಕಾಶ ಇಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಹೇಳಿದ್ದಾರೆ.