Tag: ಹಂತಕ

  • ಪಾಕ್‌ ಜೈಲಿನಲ್ಲಿ ಕೊಲೆಯಾಗಿದ್ದ ಸರಬ್ಜಿತ್ ಸಿಂಗ್ ಹಂತಕನ ಗುಂಡಿಕ್ಕಿ ಕೊಲೆ

    ಪಾಕ್‌ ಜೈಲಿನಲ್ಲಿ ಕೊಲೆಯಾಗಿದ್ದ ಸರಬ್ಜಿತ್ ಸಿಂಗ್ ಹಂತಕನ ಗುಂಡಿಕ್ಕಿ ಕೊಲೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಜೈಲು ಸೇರಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ (Sarabjit Singh) ಹಂತಕ ಅಮೀರ್ ಸರ್ಫರಾಜ್ (Amir Sarfaraz) ಅಲಿಯಾಸ್ ತಾಂಬಾನನ್ನು ಲಾಹೋರ್‌ನಲ್ಲಿ (Lahore) ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ.

    ಪಾಕಿಸ್ತಾನದ (Pakistan) ಲಾಹೋರ್‌ನ ಇಸ್ಲಾಂಪುರ ಪ್ರದೇಶದಲ್ಲಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತಾಂಬಾ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಇತ್ತ ಘಟನೆಯಿಂದ ಗಂಭೀರ ಗಾಯಗೊಂಡ ತಾಂಬಾನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಗ್ಗೆ ಡಿಸಿಪಿ ಪ್ರತಿಕ್ರಿಯೆ

    ಆಪಾದಿತ ಭಯೋತ್ಪಾದನೆ ಮತ್ತು ಬೇಹುಗಾರಿಕೆಯ ಆರೋಪದಲ್ಲಿ ಸರಬ್ಜಿತ್ ಸಿಂಗ್ (49) ಅವರನ್ನು ಪಾಕ್‌ ಕೋರ್ಟ್ 1991 ರಲ್ಲಿ ಮರಣದಂಡನೆಗೆ ಗುರಿಪಡಿಸಿತ್ತು. ಆದಾಗ್ಯೂ ಸರ್ಕಾರವು 2008 ರಲ್ಲಿ ಅನಿರ್ದಿಷ್ಟ ಅವಧಿಗೆ ಸಿಂಗ್‌ ಮರಣದಂಡನೆಯನ್ನು ತಡೆಹಿಡಿಯಿತು. ಬಳಿಕ ಏಪ್ರಿಲ್ 2013 ರಲ್ಲಿ ಲಾಹೋರ್ ಜೈಲಿನಲ್ಲಿ ಸಾವನ್ನಪ್ಪಿದ್ದರು. ಮರಣದ ನಂತರ ಸರಬ್ಜಿತ್ ಅವರ ಮೃತದೇಹವನ್ನು ಲಾಹೋರ್‌ನಿಂದ ಅಮೃತಸರಕ್ಕೆ ತರಲಾಯಿತು. ಅಲ್ಲಿ ಅವರ ಅಂತಿಮ ವಿಧಿಗಳನ್ನು ನಡೆಸಲಾಗಿತ್ತು.

  • ಎಲೆಕ್ಷನ್‍ನಲ್ಲಿ ಜಮೀರ್ ಎದುರಾಳಿ ಹತ್ಯೆಗೆ ಕಾರ್ಪೊರೇಟರ್ ಪತಿಯಿಂದ ಸುಪಾರಿ- ಜೆಡಿಎಸ್ ಆಕಾಂಕ್ಷಿ ಇಮ್ರಾನ್ ಕೊಲೆಗೆ ಸಂಚು

    ಎಲೆಕ್ಷನ್‍ನಲ್ಲಿ ಜಮೀರ್ ಎದುರಾಳಿ ಹತ್ಯೆಗೆ ಕಾರ್ಪೊರೇಟರ್ ಪತಿಯಿಂದ ಸುಪಾರಿ- ಜೆಡಿಎಸ್ ಆಕಾಂಕ್ಷಿ ಇಮ್ರಾನ್ ಕೊಲೆಗೆ ಸಂಚು

    ಬೆಂಗಳೂರು: ಮುಂದಿನ ಎಲೆಕ್ಷನ್‍ ನಲ್ಲಿ ಶಾಸಕ ಜಮೀರ್ ಎದುರಾಳಿಯಾಗಿ ಸ್ಪರ್ಧೆ ಮಾಡಲು ತಯಾರಾಗಿದ್ದ ವ್ಯಕ್ತಿಯ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.

    ಜೆಡಿಎಸ್‍ನಿಂದ ಸ್ಪರ್ಧೆಗೆ ಸಿದ್ಧವಾಗಿದ್ದ ಕಾರ್ಪೊರೇಟರ್ ಇಮ್ರಾನ್ ಪಾಷಾ ರನ್ನು ಕೊಲೆ ಮಾಡಲು ಸುಪಾರಿ ನೀಡಲಾಗಿತ್ತು. ಸುಪಾರಿ ಪಡೆದಿದ್ದ ಹಂತಕನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಸುಪಾರಿ ಹಂತಕ ಅಸ್ಲಾಂ ಅಲಿಯಾಸ್ ಹಾವೇರಿ ಅಸ್ಲಾಂ ಬಂಧಿತ ಆರೋಪಿ.

    ಮತ್ತೊಂದು ವಾರ್ಡ್ ಕಾರ್ಪೋರೇಟರ್ ಪತಿ ಐವತ್ತು ಲಕ್ಷ ರೂಪಾಯಿಗೆ ಹತ್ಯೆಗೆ ಸುಪಾರಿ ನೀಡಿದ್ದ. ಆಗಸ್ಟ್‍ನಲ್ಲಿ ಕೊಲೆ ಮಾಡಲು ಹೋಗಿ ಪ್ಲಾನ್ ಪ್ಲಾಫ್ ಆಗಿ ಆರೋಪಿ ಓಡಿಹೋಗಿದ್ದ ಎಂದು ತಿಳಿದುಬಂದಿದೆ.

    ಒಂದು ವರ್ಷದಿಂದ ಮೋಸ್ಟ್ ವಾಟೆಂಡ್ ಆಗಿದ್ದ ಆರೋಪಿಯನ್ನ ಸದ್ಯ ಬಾಣಾಸವಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಒಂದು ರಿವಾಲ್ವರ್, ಆರು ಸಜೀವ ಗುಂಡುಗಳನ್ನ ವಶಕ್ಕೆ ಪಡೆದಿದ್ದಾರೆ.

  • ಭೀಮಾತೀರದಲ್ಲಿ ಮತ್ತೆ ಗುಂಡಿನ ಮೊರೆತ – ಪಿಎಸ್‍ಐ ಮೇಲೆ ಫೈರಿಂಗ್ ಮಾಡಿದ ಹಂತಕ ಸಾವು

    ಭೀಮಾತೀರದಲ್ಲಿ ಮತ್ತೆ ಗುಂಡಿನ ಮೊರೆತ – ಪಿಎಸ್‍ಐ ಮೇಲೆ ಫೈರಿಂಗ್ ಮಾಡಿದ ಹಂತಕ ಸಾವು

    ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದ್ದು, ಪೊಲೀಸರ ಗುಂಡೇಟಿಗೆ ಹಂತಕ ಬಲಿಯಾಗಿದ್ದಾನೆ.

    ಚಡಚಣ ಪಿಎಸ್‍ಐ ಗೋಪಾಲ್ ಹಳ್ಳೂರ್ ಅವರ ಮೇಲೆ ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣ ಫೈರಿಂಗ್ ಮಾಡಿದ್ದಾನೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೊಂಕಣಗಾಂವ್ ಗ್ರಾಮದ ಬಳಿ ಇಂದು ಬೆಳಗ್ಗೆ 5-30 ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ.

    ಹಂತಕ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿದ್ದಾನೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಇಂದು ಬೆಳಗ್ಗೆ ದಾಳಿ ನಡೆಸಿದ್ದರು. ಈ ವೇಳೆ ಹಂತಕನೇ ಪೊಲೀಸರಿಗೆ ಗುಂಡು ಹಾರಿಸಿ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದಾನೆ. ಪೊಲೀಸ್ ಹಾಗೂ ಹಂತಕನ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.

    ಧರ್ಮರಾಜ್ ಗುಂಡಿನ ದಾಳಿ ನಡೆಸುತ್ತಿದ್ದಂತೆಯೇ ಇದಕ್ಕೆ ಪ್ರತ್ಯುತ್ತರವಾಗಿ ಪಿಎಸ್‍ಐ ಗೋಪಾಲ್ ಹಳ್ಳೂರ್ ಕೂಡ ಧರ್ಮರಾಜ್ ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ಗುಂಡೇಟಿನಿಂದ ಗಾಯಗೊಂಡ ಪಿಎಸ್‍ಐ ಗೋಪಾಲ್ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಪತ್ರಕರ್ತೆ ಗೌರಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು

    ಪತ್ರಕರ್ತೆ ಗೌರಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣಕ್ಕೆ ದಿನಕ್ಕೊಂದು ಸುಳಿವು ಸಿಗುತ್ತಿದ್ದು, ಎಸ್‍ಐಟಿ ತಂಡ ಚುರುಕಾಗಿ ಕಾರ್ಯನಿವಹಿಸುತ್ತಿದೆ. ಹಂತಕರ ಹಿಂದೆ ಬಿದ್ದಿರುವ ಎಸ್‍ಐಟಿಗೆ ಒಂದು ಸ್ಫೋಟಕ ಸುಳಿವು ಸಿಕ್ಕಿದೆ.

    ಗೌರಿ ಲಂಕೇಶ್ ಹತ್ಯೆಯ ಸಂದರ್ಭದಲ್ಲಿ ಹಂತಕರು ಬಳಸಿದ್ದ ಬೈಕ್ ಖರೀದಿಯ ಬಗ್ಗೆ ಸುಳಿವು ಸಿಕ್ಕಿದ್ದು, ಮಹಾರಾಷ್ಟ್ರದ ಪುಣೆಯ ಸಣ್ಣ ಹಳ್ಳಿಯೊಂದರಲ್ಲಿ ಸೆಕೆಂಡ್ ಹ್ಯಾಂಡ್ ಪಲ್ಸರ್ ಬೈಕ್ ಅನ್ನು ಖರೀದಿ ಮಾಡಿರುವ ಬಗ್ಗೆ ಮಾಹಿತಿ ದೊರೆತಿದೆ.

    ಹಂತಕ ಬಂದಿದ್ದ ಬೈಕ್ 150 ಸಿಸಿ ಕಪ್ಪು ಮತ್ತು ಕೆಂಪು ಬಣ್ಣದಾಗಿದೆ. ಖರೀದಿ ಮಾಡಿ ಶಿವಮೊಗ್ಗ ಮೂಲದಿಂದ ಬೈಕ್ ತಂದಿರುವ ಬಗ್ಗೆ ಎಸ್‍ಐಟಿಗೆ ಮಾಹಿತಿ ಲಭ್ಯವಾಗಿದ್ದು, ಎಸ್‍ಐಟಿಯಿಂದ ತೀವ್ರ ಹುಡುಕಾಟ ಶುರುವಾಗಿದೆ.

    ಇತ್ತೀಚೆಗೆ ಎಸ್‍ಐಟಿ ಗೌರಿ ಹಂತಕರ ರೇಖಾಚಿತ್ರ ಮತ್ತು ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಹಂತಕರ ಬಗ್ಗೆ ಸುಳಿವು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಮೂವರು ಆರೋಪಿಗಳಲ್ಲಿ ಇಬ್ಬರು ನೋಡುವುದಕ್ಕೆ ಒಂದೇ ತರಹನಾಗಿ ಕಾಣುತ್ತಿದ್ದು, ಆರೋಪಿಗಳು ನಗರದಲ್ಲಿ ಮೂರು ವಾರಗಳ ಕಾಲ ಉಳಿದುಕೊಂಡಿದ್ದರು ಎಂದು ಎಸ್‍ಐಟಿ ತಿಳಿಸಿತ್ತು.  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ಸುಮಾರು ಒಂದು ತಿಂಗಳು 20 ದಿನಗಳಾಗಿದೆ.

    https://www.youtube.com/watch?v=gMCRfdWRT8w

    https://www.youtube.com/watch?v=Wm2_FgKUvtA

    https://www.youtube.com/watch?v=E47pvUQ887A

    https://www.youtube.com/watch?v=h54A6zdpI3A

    https://www.youtube.com/watch?v=d5V8Pu3eGnM

    https://www.youtube.com/watch?v=CZ76KMF2i74

  • ಜೈಲಿನಲ್ಲೇ ಲವ್ವಿ-ಡವ್ವಿ ಶುರು ಮಾಡ್ದ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಹಂತಕ!

    ಜೈಲಿನಲ್ಲೇ ಲವ್ವಿ-ಡವ್ವಿ ಶುರು ಮಾಡ್ದ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಹಂತಕ!

    ಬೆಂಗಳೂರು: ಕಾಲ್ ಸೆಂಟರ್ ಮಹಿಳಾ ಉದ್ಯೋಗಿ ಪ್ರತಿಭಾ ಕೊಲೆಗೈದ ಹಂತಕ ಜೈಲಿನಲ್ಲೇ ಲವ್ವಿಡವ್ವಿ ಶುರುಮಾಡಿದ್ದಾನೆ.

    ಪ್ರತಿಭಾ ಮರ್ಡರ್ ಕೇಸ್‍ನಲ್ಲಿ ಜೀವವಾಧಿ ಶಿಕ್ಷೆಗೆ ಒಳಗಾಗಿರುವ ಅಪರಾಧಿ ಶಿವಕುಮಾರ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಆದರೆ ಜೈಲಿನಲ್ಲಿ ಕೊಳೆಯಬೇಕಿದ್ದ ಇವನು ಜೈಲಿನ ಹೋಂ ಗಾರ್ಡ್ ಕೆಲಸ ಮಾಡುವ ಮಹಿಳೆಯ ಜೊತೆ ಲವ್ ಶುರುಮಾಡಿದ್ದಾನೆ.

    ಅಪರಾಧಿ ಶಿವಕುಮಾರ್ ಹುಷಾರಿಲ್ಲ ಅಂತಾ ಸುಳ್ಳು ಹೇಳಿ ತನ್ನ ಪ್ರೇಮಿ ಜೊತೆ ಐಷಾರಾಮಿ ಹೋಟೆಲ್‍ಗಳಿಗೆ ಹೋಗುತ್ತಿದ್ದಾನೆ. ಹೋಂಗಾರ್ಡ್ ಹುಡುಗಿಗೂ ಮದುವೆಯಾಗೋದಾಗಿ ನಂಬಿಸಿ ಆಕೆಯ ಜೊತೆ ಫೊಟೋಗಳನ್ನು ತೆಗೆದುಕೊಂಡಿದ್ದಾನಂತೆ. ಈಗ ಆ ಫೋಟೋಗಳು ವೈರಲ್ ಆಗಿದ್ದು, ಇವರ ಲವ್ ಬಗ್ಗೆ ಜೈಲಾಧಿಕಾರಿಗಳಿಗೆ ತಿಳಿದಿಲ್ಲ ಎಂಬುದು ಒಂದು ಯಕ್ಷ ಪ್ರಶ್ನೆಯಾಗಿದೆ.

    2005 ರಲ್ಲಿ ಕಾಲ್ ಸೆಂಟರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಪ್ರತಿಭಾ ಅವರನ್ನ ಅದೇ ಸೆಂಟರ್‍ನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದ ಶಿವಕುಮಾರ್ ಮಧ್ಯರಾತ್ರಿ ಪಿಕ್‍ಅಪ್ ಮಾಡಿದ್ದು, ನಂತರ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ನಂತರ ಕೋರ್ಟ್ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

    https://www.youtube.com/watch?v=zs6fZ7MlNLg