Tag: ಸ್ವೀವ್ ಸ್ಮಿತ್

  • ಸ್ಮಿತ್‌ಗೆ ಗೇಟ್‌ಪಾಸ್‌ ಸ್ಯಾಮನ್ಸ್‌ ಕ್ಯಾಪ್ಟನ್‌ – ಯಾವ ತಂಡದಿಂದ ಯಾರು ಔಟ್‌?

    ಸ್ಮಿತ್‌ಗೆ ಗೇಟ್‌ಪಾಸ್‌ ಸ್ಯಾಮನ್ಸ್‌ ಕ್ಯಾಪ್ಟನ್‌ – ಯಾವ ತಂಡದಿಂದ ಯಾರು ಔಟ್‌?

    – ಚೆನ್ನೈನಿಂದ ಹರ್ಭಜನ್‌, ಮುಂಬೈನಿಂದ ಮಾಲಿಂಗ ಔಟ್‌
    – ಫಿಂಚ್‌, ಮೋರಿಸ್‌ರನ್ನು ಕೈ ಬಿಟ್ಟ ಆರ್‌ಸಿಬಿ

    ಬೆಂಗಳೂರು: ಅಚ್ಚರಿಯ ಬೆಳವಣಿಗೆಯಲ್ಲಿ ಈ ವರ್ಷದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವನ್ನು ಸಂಜು ಸ್ಯಾಮ್ಸನ್‌ ಮುನ್ನಡೆಸಲಿದ್ದಾರೆ.

    ಭಾರತದ ವಿರುದ್ಧದ ಟೆಸ್ಟ್‌ ವೇಳೆ ಕಳ್ಳಾಟವಾಡಿ ಟೀಕೆಗೆ ಗುರಿಯಾಗಿದ್ದ ಸ್ವೀವ್‌ ಸ್ಮಿತ್‌ ಅವರನ್ನು ತಂಡದಿಂದಲೇ ಕೈಬಿಟ್ಟು ಸಂಜು ಸಾಮ್ಸನ್‌ಗೆ ರಾಜಸ್ಥಾನ ತಂಡ ಹೊಣೆಗಾರಿಕೆ ನೀಡಿದೆ. ತಂಡದ ನಿರ್ದೇಶಕರಾಗಿ ಶ್ರೀಲಂಕಾದ ಮಾಜಿ ನಾಯಕ ಸಂಗಕ್ಕಾರ ಅವರನ್ನು ನೇಮಿಸಲಾಗಿದೆ.

    ಐಪಿಎಲ್‌ನಲ್ಲಿ ಉಳಿಸಿಕೊಳ್ಳಲಿರುವ ಆಟಗಾರರ ವಿವರವನ್ನು ಇಂದು ತಂಡಗಳು ಪ್ರಕಟಿಸಿವೆ. ಈ ಪೈಕಿ ಮುಂಬೈ ತಂಡ ಲಸಿತ್‌ ಮಾಲಿಂಗ, ಚೆನ್ನೈ ತಂಡ ಹರ್ಭಜನ್‌ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.

    ಎಲ್ಲ 8 ತಂಡಗಳು ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಬೇಕಿದ್ದು, ತಂಡದಿಂದ ಕೈ ಬಿಟ್ಟ ಆಟಗಾರರ ಹರಾಜು ಪ್ರಕ್ರಿಯೆ ಫೆ.11 ರಂದು ನಡೆಯಲಿದೆ.

    ಯಾವ ತಂಡದಿಂದ ಯಾರು ಔಟ್‌?
    ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು: ಕ್ರಿಸ್ ಮೋರಿಸ್, ಆರನ್ ಫಿಂಚ್, ಮೊಯೀನ್ ಅಲಿ, ಇಸುರು ಉದಾನಾ, ಡೇಲ್ ಸ್ಟೇನ್, ಶಿವಮ್ ದುಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಮನ್, ಪಾರ್ಥಿವ್ ಪಟೇಲ್

    ಡೆಲ್ಲಿ ಕ್ಯಾಪಿಟಲ್ಸ್‌: ಕೀಮೋ ಪಾಲ್, ಸಂದೀಪ್ ಲಮಿಚಾನೆ, ಅಲೆಕ್ಸ್ ಕ್ಯಾರಿ, ಜೇಸನ್ ರಾಯ್, ಮೋಹಿತ್ ಶರ್ಮಾ, ತುಷಾರ್ ದೇಶ್‌ಪಾಂಡೆ

    ಕಿಂಗ್ಸ್‌ ಇಲೆವನ್‌ ಪಂಜಾಬ್‌: ಗ್ಲೆನ್ ಮ್ಯಾಕ್ಸ್‌ವೆಲ್, ಕರುಣ್ ನಾಯರ್, ಹರ್ದಸ್ ವಿಲ್ಜೋಯೆನ್, ಜಗದೀಶ್‌ ಸುಚಿತ್, ಮುಜೀಬ್ ಉರ್ ರಹಮಾನ್, ಶೆಲ್ಡನ್ ಕಾಟ್ರೆಲ್, ಜಿಮ್ಮಿ ನೀಶಮ್, ಕೆ. ಗೌತಮ್, ತಜಿಂದರ್ ಸಿಂಗ್.

    ಸನ್‌ ರೈಸರ್ಸ್‌ ಹೈದರಾಬಾದ್‌: ಸಂಜಯ್ ಯಾದವ್, ಬಿ ಸಂದೀಪ್, ಬಿಲ್ಲಿ ಸ್ಟ್ಯಾನ್ಲೇಕ್, ಫ್ಯಾಬಿಯನ್ ಅಲೆನ್, ಯರ್ರಾ ಪೃಥ್ವಿರಾಜ್

    ಚೆನ್ನೈ ಸೂಪರ್‌ ಕಿಂಗ್ಸ್‌: ಹರ್ಭಜನ್‌ ಸಿಂಗ್‌, ಮುರಳಿ ವಿಜಯ್‌, ಕೇದಾರ್‌ ಜಾಧವ್‌, ಪಿಯೂಶ್‌ ಚಾವ್ಲಾ, ಶೇನ್‌ ವಾಟ್ಸನ್‌, ಮೋನು ಸಿಂಗ್‌

    ರಾಜಸ್ಥಾನ ರಾಯಲ್ಸ್‌: ಸ್ವೀವ್‌ ಸ್ಮಿತ್‌, ಅಂಕಿತ್‌ ರಜಪೂತ್‌, ಒಶಾನೆ ಥಾಮಸ್‌, ಆಕಾಶ್‌ ಸಿಂಗ್‌, ವರುಣ್‌ ಅರುಣ್‌, ಟಾಮ್‌ ಕರ್ರನ್‌, ಅನಿರುದ್ಧ ಜೋಶಿ, ಶಶಾಂಕ್‌ ಸಿಂಗ್‌

    ಕೋಲ್ಕತ್ತಾ ನೈಟ್‌ ರೈಡರ್ಸ್‌: ಎಂ ಸಿದ್ಧಿಕಿ, ನಿಖಿಲ್‌ ನಾಯ್ಕ್‌, ಸಿದ್ದೇಶ್‌ ಲಾಡ್‌, ಕ್ರೀಸ್‌ ಗ್ರೀನ್‌, ಟಾಮ್‌ ಬಾಂಟನ್‌

    ಮುಂಬೈ ಇಂಡಿಯನ್ಸ್‌: ಲಸಿತ್ ಮಾಲಿಂಗ, ಮಿಚ್ ಮೆಕ್‌ಕ್ಲೆನಾಘನ್, ಜೇಮ್ಸ್ ಪ್ಯಾಟಿನ್ಸನ್, ನಾಥನ್ ಕೌಲ್ಟರ್-ನೈಲ್, ಶೆರ್ಫೇನ್ ರುದರ್‌ಫೋರ್ಡ್, ಪ್ರಿನ್ಸ್ ಬಲ್ವಂತ್ ರೇ, ದಿಗ್ವಿಜಯ್‌ ದೇಶ್‌ಮುಖ್‌.

  • ರೈಸಿಂಗ್ ಪುಣೆ ಸೂಪರ್‍ಜೈಂಟ್ಸ್ ತಂಡದ ಮಾಲೀಕರಿಗೂ ಧೋನಿಗೂ ಸಂಬಂಧ ಸರಿ ಇಲ್ವೇ?

    ರೈಸಿಂಗ್ ಪುಣೆ ಸೂಪರ್‍ಜೈಂಟ್ಸ್ ತಂಡದ ಮಾಲೀಕರಿಗೂ ಧೋನಿಗೂ ಸಂಬಂಧ ಸರಿ ಇಲ್ವೇ?

    ಪುಣೆ: ರೈಸಿಂಗ್ ಪುಣೆ ಸೂಪರ್‍ಜೈಂಟ್ಸ್ ತಂಡದ ಮಾಲೀಕರಿಗೂ ಮಾಜಿ ನಾಯಕ ಧೋನಿಗೂ ಸಂಬಂಧ ಸರಿ ಇಲ್ಲವೇ ಹಿಗೊಂದು ಪ್ರಶ್ನೆ ಈಗ ಎದ್ದಿದೆ.

    ಪುಣೆ ತಂಡದ ಮಾಲೀಕರಾಗಿರುವ ಸಂಜಯ್ ಗೋಯಂಕಾ ಅವರ ಸಹೋದರ ಹರ್ಷ ಗೋಯಂಕಾ ಅವರು ಧೋನಿ ಕುರಿತಾಗಿ ಮಾಡಿರುವ ಟ್ವೀಟ್‍ನಿಂದಾಗಿ ಈ ಪ್ರಶ್ನೆ ಎದ್ದಿದೆ.

    ಗುರುವಾರ ಮುಂಬೈ ಇಂಡಿಯನ್ಸ್ ಜೊತೆಗಿನ ಪಂದ್ಯದಲ್ಲಿ ಪುಣೆ 7 ವಿಕೆಟ್‍ಗಳಿಂದ ಗೆದ್ದುಕೊಂಡಿತ್ತು, ಈ ಪಂದ್ಯದಲ್ಲಿ ನಾಯಕ ಆಸ್ಟ್ರೇಲಿಯಾದ ಸ್ಮಿತ್ 84 ರನ್(54 ಎಸೆತ, 7 ಬೌಂಡರಿ, 3 ಸಿಕ್ಸರ್) ಸಿಡಿಸಿ ಜಯಕ್ಕೆ ಕಾರಣವಾಗಿದ್ದರು. ಈ ಜಯದ ಬಳಿಕ ಟ್ವೀಟ್ ಮಾಡಿರುವ ಹರ್ಷ ಗೋಯಂಕಾ, ಕಾಡಿನ ರಾಜ ಯಾರು ಎನ್ನುವುದನ್ನು ಸ್ಮಿತ್ ನಿರೂಪಿಸಿದ್ದಾರೆ. ನಾಯಕನಾಗಿ ಉತ್ತಮವಾಗಿ ಆಡಿದ್ದಾರೆ. ಅವರನ್ನು ನಾಯಕರನ್ನಾಗಿ ನೇಮಿಸಿದ್ದು ಉತ್ತಮ ಬೆಳವಣಿಗೆ ಎಂದು ಬರೆದುಕೊಂಡಿದ್ದಾರೆ.

    ಧೋನಿ ನಾಯಕತ್ವವನ್ನು ತೆಗಳಿದ್ದಕ್ಕೆ ಧೋನಿ ಅಭಿಮಾನಿಗಳು ಹರ್ಷ ಅವರನ್ನ ಟ್ರಾಲ್‍ಮಾಡಿದ್ದಾರೆ. ಇದಕ್ಕೆ ಹರ್ಷ ಧೋನಿ ಅತ್ಯುತ್ತಮ ಬ್ಯಾಟ್ಸ್ ಮನ್ ಹೌದು. ಆದರೆ ಇಂದು ಸ್ಮಿತ್ ಅವರ ದಿನ ಎಂದು ಹೇಳುವ ಮೂಲಕ ತಮ್ಮ ಟ್ವೀಟನ್ನು ಸಮರ್ಥಿಸಿಕೊಂಡಿದ್ದಾರೆ.

    ಈ ಟ್ವೀಟ್‍ಗೆ ಧೋನಿ ಅಭಿಮಾನಿಗಳು, ಇವತ್ತು ಸ್ಮಿತ್ ಅವರ ದಿನ ಆಗಿರಬಹುದು. ಆದರೆ ಬೇರೆ ವ್ಯಕ್ತಿಗಳಿಗೆ ಹೋಲಿಸುವ ಮುನ್ನ ಕ್ರಿಕೆಟ್ ದಂತಕಥೆಗೆ ಗೌರವ ನೀಡುವುದನ್ನು ಕಲಿತುಕೊಳ್ಳಿ. ದೇಶಕ್ಕಾಗಿ ಧೋನಿ ಎಲ್ಲ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಪ್ರತಿಯಾಗಿ ಹರ್ಷ ಅವರು ಪುಣೆ ತಂಡದ ಬ್ಯಾಟ್ಸ್ ಮನ್‍ಗಳ ಸರಾಸರಿ ಪಟ್ಟಿಯನ್ನು ಪ್ರಕಟಿಸಿದ್ದಾರೆ.

    ಮುನ್ನಾ ದಿನ ನಾಯಕ ಪಟ್ಟ: ಐಪಿಎಲ್ 2017ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಮುನ್ನಾ ದಿನ ನಾಯಕ ಸ್ಥಾನದಿಂದ ಧೋನಿ ಅವರನ್ನು ಕಿತ್ತುಹಾಕಿ, ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್‍ಗೆ ಪಟ್ಟ ಕಟ್ಟಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪುಣೆ ಸೂಪರ್ ಜೈಂಟ್ಸ್ ಮಾಲೀಕ ಸಂಜಯ್ ಗೋಯಂಕಾ, ಧೋನಿ ನಾಯಕತ್ವದಿಂದ ಕೆಳಗಡೆ ಇಳಿಯಲಿಲ್ಲ. ಕಳೆದ ಆವೃತ್ತಿಯಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಕಿರಿಯ ಆಟಗಾರನ ನೇತೃತ್ವದಲ್ಲಿ ತಂಡವನ್ನು ಮುನ್ನಡೆಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

    ಐಪಿಎಲ್ 9ರ ಆವೃತ್ತಿಯ 14 ಪಂದ್ಯದಲ್ಲಿ ಪುಣೆ 5 ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿತ್ತು. ಧೋನಿ 12 ಇನ್ನಿಂಗ್ಸ್ ಒಂದು ಅರ್ಧಶತಕ ಸಹಿತ 284 ರನ್‍ಗಳಿಸಿದ್ದರು.

    ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾ. ಲೋಧಾ ನೇತೃತ್ವದ ಸಮಿತಿ ಶಿಫಾರಸಿನಂತೆ ಐಪಿಎಲ್‍ನಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು 2 ವರ್ಷಗಳ ಅಮಾನತುಗೊಂಡಿತ್ತು. ಈ ಹಿನ್ನೆಲೆಯಲ್ಲಿ 2015ರವರೆಗೆ ಚೆನ್ನೈ ತಂಡವನ್ನು ಮುನ್ನಡೆಸಿದ್ದ ಧೋನಿ 2016ರ ಆವೃತ್ತಿಯಲ್ಲಿ ಪುಣೆ ತಂಡವನ್ನು ಮುನ್ನಡೆಸಿದ್ದರು.

    ಸತತ 8 ಆವೃತ್ತಿಯಲ್ಲಿ ಚೆನ್ನೈ ತಂಡವನ್ನು ಧೋನಿ ಮುನ್ನಡೆಸಿದ್ದರು. 2010 ಮತ್ತು 2011ರಲ್ಲಿ ಚೆನ್ನೈ ತಂಡ ಚಾಂಪಿಯನ್ ಆಗಿತ್ತು. 2008, 2012, 2013, 2015 ರಲ್ಲಿ ರನ್ನರ್ ಅಪ್ ಆಗಿತ್ತು.

    https://twitter.com/hvgoenka/status/850688162615656448?

  • ವೃದ್ಧಿಮಾನ್ ಸಹಾ, ಸ್ಮಿತ್ ಬಾಲ್ ಆಟ ನೋಡಿ ಅಂಪೈರ್, ಆಟಗಾರರು ನಕ್ಕಿದ್ದೆ ನಕ್ಕಿದ್ದು! ವಿಡಿಯೋ

    ವೃದ್ಧಿಮಾನ್ ಸಹಾ, ಸ್ಮಿತ್ ಬಾಲ್ ಆಟ ನೋಡಿ ಅಂಪೈರ್, ಆಟಗಾರರು ನಕ್ಕಿದ್ದೆ ನಕ್ಕಿದ್ದು! ವಿಡಿಯೋ

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಕೆಟ್ ಉಳಿಸಿಕೊಂಡು ಮೇಲುಗೈ ಸಾಧಿಸಿದರೂ ಮೊದಲ ದಿನ ಕ್ರೀಡಾಂಗಣದಲ್ಲಿ ಒಂದು ಪ್ರಸಂಗದಿಂದಾಗಿ ಆಟಗಾರರು ಮತ್ತು ಅಂಪೈರ್ ಬಿದ್ದು ಬಿದ್ದು ನಕ್ಕಿದ್ದಾರೆ.

    ಆಗಿದ್ದು ಇಷ್ಟು 79.2 ನೇ ಓವರ್‍ನಲ್ಲಿ ಸ್ಟ್ರೈಕ್‍ನಲ್ಲಿ ನಾಯಕ ಸ್ಮಿತ್ 97 ರನ್ ಗಳಿಸಿ ಆಡುತ್ತಿದ್ದರು. ಜಡೇಜಾ ಎಸೆದ ಒಂದು ಎಸೆತ ಸ್ಮಿತ್ ಬ್ಯಾಟ್‍ನ ಬಳಿ ಬಂದು ಮೇಲಕ್ಕೆ ಚಿಮ್ಮಿತು. ಮೇಲಕ್ಕೆ ಚಿಮ್ಮಿದ ಕೂಡಲೇ ಮುಂದಕ್ಕೆ ಬಂದ ಕೀಪರ್ ವೃದ್ಧಿಮಾನ್ ಸಹಾ ಬಾಲನ್ನು ಎಲ್ಲಿದೆ ಎಂದು ನೋಡಿದ್ರು.

    ಇದನ್ನೂ ಓದಿ:ಅಶ್ವಿನ್ ಬೌಲಿಂಗ್‍ನಲ್ಲಿ ಸಹಾ ಸೂಪರ್ ಡೈವಿಂಗ್ ಕ್ಯಾಚ್- ಸೊನ್ನೆ ಸುತ್ತಿದ ವೇಡ್

    ಅಷ್ಟರಲ್ಲೇ ಸ್ಮಿತ್ ಎರಡು ಕಾಲಿನ ಮಧ್ಯದಲ್ಲಿ ಬಾಲ್ ಇರುವುದನ್ನು ನೋಡಿದ ಸಹಾ ಅದನ್ನು ಹಿಡಿಯಲು ಮುಂದಾದರು. ಸಹಾ ಹಿಡಿಯಲು ಮುಂದಾಗುತ್ತಿದ್ದಂತೆ ಸ್ಮಿತ್ ಬಾಲ್ ಸಿಗದಂತೆ ತಡೆಯಲು ನೆಲಕ್ಕೆ ಬಿದ್ದರು. ಸ್ಮಿತ್ ಬೀಳುವುದನ್ನು ನೋಡಿ ಸಹಾ ಬಾಲ್ ಹಿಡಿಯಲು ಅವರ ಮೇಲೆಯೇ ಬಿದ್ದರು. ಬಿದ್ದ ಬಳಿಕ ಬಾಲನ್ನು ಹಿಡಿದು ನಗುತ್ತಲೇ ಔಟ್ ಗೆ ಮನವಿ ಸಲ್ಲಿಸದರು.

    ಸ್ಮಿತ್ ಮತ್ತು ವೃದ್ಧಿಮಾನ್ ಸಹಾ ಅವರ ಈ ಆಟವನ್ನು ನೋಡಿದ ಇಂಗ್ಲೆಂಡಿನ ಅಂಪೈರ್ ಇಯಾನ್ ಗೌಲ್ಡ್ ಬಿದ್ದು ಬಿದ್ದು ನಕ್ಕರು. ಅಂಪೈರ್ ಜೊತೆಗೆ ಆಟಗಾರರು ನಗಾಡಿದರು.

    ಇದನ್ನೂ ಓದಿ: ಭರ್ಜರಿ ಶತಕ ಹೊಡೆದು ತಂಡವನ್ನು ಪಾರು ಮಾಡಿದ ಸ್ಮಿತ್



     

  • ಭರ್ಜರಿ ಶತಕ ಹೊಡೆದು ತಂಡವನ್ನು ಪಾರು ಮಾಡಿದ ಸ್ಮಿತ್

    ಭರ್ಜರಿ ಶತಕ ಹೊಡೆದು ತಂಡವನ್ನು ಪಾರು ಮಾಡಿದ ಸ್ಮಿತ್

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ವೀವ್ ಸ್ಮಿತ್ ಭರ್ಜರಿ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾ ಭಾರೀ ಮೊತ್ತವನ್ನು ಪೇರಿಸುವ ಸೂಚನೆ ನೀಡಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಆಸ್ಟ್ರೇಲಿಯಾ ಮೊದಲ ದಿನದ ಆಟಕ್ಕೆ4 ವಿಕೆಟ್ ನಷ್ಟಕ್ಕೆ  90 ಓವರ್‍ಗಳಲ್ಲಿ 299 ರನ್ ಗಳಿಸಿದೆ.

    ಸ್ಮಿತ್ ಅಜೇಯ 117 ರನ್(244 ಎಸೆತ, 13 ಬೌಂಡರಿ) ಗ್ಲೇನ್ ಮ್ಯಾಕ್ಸ್ ವೆಲ್ ಅಜೇಯ 82 ರನ್( 147 ಎಸೆತ, 5 ಬೌಂಡರಿ, 2 ಸಿಕ್ಸರ್)ಗಳಿಂದಾಗಿ ಆಸ್ಟ್ರೇಲಿಯಾ ರನ್ 300ರ ಗಡಿಯ ಹತ್ತಿರ ಬಂದು ನಿಂತಿದೆ.

    227 ಎಸೆತದಲ್ಲಿ ಸ್ಮಿತ್ ತಮ್ಮ ಟೆಸ್ಟ್ ಬಾಳ್ವೆಯ 19ನೇ ಶತಕವನ್ನು ಹೊಡೆದರು. ಮ್ಯಾಟ್ ರೇನ್‍ಷಾ 44 ರನ್(69 ಎಸೆತ, 7 ಬೌಂಡರಿ), ಡೇವಿಡ್ ವಾರ್ನರ್ 19 , ಮಾರ್ಷ್ 2, ಹ್ಯಾಂಡ್ಸ್ ಕಾಂಬ್ ಕಾಂಬ್ 19 ರನ್‍ಗಳಿಸಿ ಔಟಾದರು.

    ಭಾರತದ ಪರವಾಗಿ ಉಮೇಶ್ ಯಾದವ್ 2, ಆರ್ ಅಶ್ವಿನ್ ಮತ್ತು ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು. 140 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಸ್ಮಿತ್ ಮತ್ತು ಮ್ಯಾಕ್ಸ್‍ವೆಲ್ 47.4 ಓವರ್‍ಗಳಲ್ಲಿ ಮುರಿಯದ 5ನೇ ವಿಕೆಟ್‍ಗೆ 159 ರನ್‍ಗಳ ಜೊತೆಯಾಟವಾಡಿದ ಕಾರಣ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ವಿಕೆಟ್ ಉಳಿಸಿಕೊಂಡು ಮೇಲುಗೈ ಸಾಧಿಸಿದೆ.

    ಬೈ 4, ಲೆಗ್‍ಬೈ 11, ನೋಬಾಲ್ 1 ರನ್ ನೀಡುವ ಮೂಲಕ ಇತರೇ ರೂಪದಲ್ಲಿ ಭಾರತ 16 ರನ್‍ಗಳನ್ನು ನೀಡಿದೆ.

  • ಆಸೀಸ್ ತಂಡದ ಸ್ಮಿತ್, ರೆನ್ಶೊರನ್ನ ಅಣಕಿಸಿದ ಇಶಾಂತ್ ಶರ್ಮಾ – ವೀಡಿಯೋ ವೈರಲ್

    ಆಸೀಸ್ ತಂಡದ ಸ್ಮಿತ್, ರೆನ್ಶೊರನ್ನ ಅಣಕಿಸಿದ ಇಶಾಂತ್ ಶರ್ಮಾ – ವೀಡಿಯೋ ವೈರಲ್

    ಬೆಂಗಳೂರು: ಭಾರತ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಇಶಾಂತ್ ಶರ್ಮಾ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಓಪನರ್ ಮ್ಯಾಟ್ ರೆನ್ಶೊರನ್ನು ಅಣಕಿಸಿದ ಘಟನೆ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಂದ್ಯದ ಆರಂಭದಲ್ಲಿ ಮೊದಲು ಇಶಾಂತ್ ಶರ್ಮಾ ಆಸೀಸ್ ಆಟಗಾರ ರೆನ್ಶೊ ಅವರನ್ನು ರೇಗಿಸಿದ್ರು. ಆಗ ರೆನ್ಶೊ ಕೇವಲ ನಕ್ಕು ಸುಮ್ಮನಾದ್ರು.

    ಬಳಿಕ ಮತ್ತೊಂದು ಓವರ್‍ನಲ್ಲಿ ಸ್ಟೀವ್ ಸ್ಮಿತ್‍ಗೆ ಅಣಕಿಸಿದ್ರು. ಅದರ ಮರು ಎಸೆತದಲ್ಲಿ ಸ್ಟೀವ್ ಸ್ಮಿತ್ ಕೂಡಾ ಇಶಾಂತ್ ಶರ್ಮಾಗೆ ಅಣಕಿಸಿದ್ರು. ಆದ್ರೆ ನಾಯಕ ವಿರಾಟ್ ಕೊಹ್ಲಿ ಮಾತ್ರ ಇವೆಲ್ಲವನ್ನೂ ನೋಡುತ್ತಾ ನಗುತ್ತಿದ್ರು.

    https://twitter.com/cricketchamber/status/838258250814484480

    48 ರನ್‍ಗಳ ಲೀಡ್ ಪಡೆದಿರೋ ಕಾಂಗರೂ ಪಡೆ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 237 ರನ್ ಪೇರಿಸಿದೆ.