Tag: ಸ್ವಿಮ್ಮಿಂಗ್ ಫೂಲ್

  • ರೋಹಿಣಿ ಸಿಂಧೂರಿ ಸ್ವಿಮ್ಮಿಂಗ್ ಪೂಲ್ ವಿವಾದ – ಟ್ವಿಟ್ಟರ್‌ನಲ್ಲಿ ತಿವಿದ ಐಜಿಪಿ ರೂಪಾ

    ರೋಹಿಣಿ ಸಿಂಧೂರಿ ಸ್ವಿಮ್ಮಿಂಗ್ ಪೂಲ್ ವಿವಾದ – ಟ್ವಿಟ್ಟರ್‌ನಲ್ಲಿ ತಿವಿದ ಐಜಿಪಿ ರೂಪಾ

    ಬೆಂಗಳೂರು: ರೋಹಿಣಿ ಸಿಂಧೂರಿ ಮೈಸೂರು ಡಿಸಿಯಾಗಿದ್ದಾಗ ಸರ್ಕಾರಿ ನಿವಾಸದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಸ್ವಿಮ್ಮಿಂಗ್ ಪೂಲ್ ಮಾಡಿಸಿದ ಕ್ರಮ ಸಾಕಷ್ಟು ಟೀಕೆಗೆ ಒಳಗಾಯ್ತು. ಈಗ ಐಜಿಪಿ ರೂಪಾ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿ  ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ತಿವಿದಿದ್ದಾರೆ.

    ಕೊರೊನಾ ಹಾಗೂ ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣವ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಪತನ ಎದ್ದು ತೋರಿಸುತ್ತದೆ. ಕಟ್ಟಲು ಪರವಾನಗಿ ತೆಗೆದುಕೊಂಡಿಲ್ಲ ಎನ್ನುವುದು ನಂತರದ ವಿಚಾರ. ಕಟ್ಟುವುದನ್ನು ಮುಂದೂಡಬಹುದಿತ್ತು ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ನಿಯಮಗಳನ್ನು ಗಾಳಿಗೆ ತೂರಿ ಈಜುಕೊಳ ನಿರ್ಮಿಸಿದ್ರು ರೋಹಿಣಿ ಸಿಂಧೂರಿ – ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

    ಟ್ವೀಟ್‍ನಲ್ಲಿ ರೋಹಿಣಿ ಫೋಟೋ ಹಾಕಿ ಡಿ ರೂಪ ಉಲ್ಲೇಖ ಮಾಡಿದ್ದಾರೆ. ರೂಪಾ ಅವರ ಟ್ವೀಟ್‍ಗೆ ಸಿಂಧೂರಿ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಮೂಡಿದೆ.

  • ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಹೋಗಿ ನೀರುಪಾಲಾದ ಐಎಎಸ್ ಅಧಿಕಾರಿ!

    ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಹೋಗಿ ನೀರುಪಾಲಾದ ಐಎಎಸ್ ಅಧಿಕಾರಿ!

    ನವದೆಹಲಿ: ನೀರಿಗೆ ಬಿದ್ದ ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಹೋದ ಐಎಎಸ್ ಅಧಿಕಾರಿಯೊಬ್ಬರು ನೀರು ಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ.

    ಬೆರ್ ಸರೈನಲ್ಲಿರೋ ಫಾರಿನ್ ಸರ್ವಿಸ್ ಇನ್ ಸ್ಟಿಟ್ಯೂಟ್‍ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಂಗಳವಾರದಂದು ಈ ಅವಘಡ ಸಂಭವಿಸಿದ್ದು, ಮೃತ ಐಎಎಸ್ ಅಧಿಕಾರಿಯನ್ನು ಆಶಿಶ್ ದಹಿಯಾ ಎಂಬುವುದಾಗಿ ಗುರುತಿಸಲಾಗಿದೆ. ಇವರು ಹರಿಯಾಣದ ಸೊನಿಪತ್ ನಿವಾಸಿಯಾಗಿದ್ದಾರೆ.

    ಆಶಿಶ್ ತನ್ನ ಇಂಡಿಯನ್ ಫಾರಿನ್ ಅಂಡ್ ರೆವೆನ್ಯೂ ಸರ್ವೀಸ್‍ನ ಗೆಳೆಯರೊಂದಿಗೆ ಪೂಲ್ ಪಾರ್ಟಿಗೆ ಹೋಗಿದ್ರು. ಈ ವೇಳೆ ಕ್ಲಬ್ ನಲ್ಲಿದ್ದ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಲು ನಿರ್ಧರಿಸಿದ್ದರು. ಪಾರ್ಟಿಗೆ ಬಂದವರು ಮದ್ಯಪಾನ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

    ಈ ವೇಳೆ ಮಹಿಳಾ ಸಹೋದ್ಯೋಗಿಯೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ರಕ್ಷಿಸಲೆಂದು ಆಶಿಶ್ ಸೇರಿದಂತೆ ಇತರೆ ಅಧಿಕಾರಿಗಳು ನೀರಿಗೆ ಹಾರಿದ್ದಾರೆ. ನಂತರ ಮಹಿಳೆಯನ್ನ ರಕ್ಷಣೆ ಮಾಡಿ ಹೊರಗೆಳೆದಿದ್ದಾರೆ. ಆದ್ರೆ ಈ ವೇಳೆ ಆಶಿಶ್ ಕಾಣಿಸುತ್ತಿರಲಿಲ್ಲ. ನಂತರ ನೋಡಿದಾಗ ಆಶಿಶ್ ನೀರಿನಲ್ಲಿ ತೇಲುತ್ತಿದ್ದರು.

    ಕೂಡಲೇ ಸ್ವಿಮ್ಮಿಂಗ್ ಪೂಲ್‍ನಿಂದ ಆಶಿಶ್‍ರನ್ನು ಮೇಲಕ್ಕೆತ್ತಿ ಸ್ಥಳೀಯ ಫೋರ್ಟಿಸ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಅದಾಗಲೇ ಆಶಿಶ್ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

    ಸದ್ಯ ಮೃತ ಆಶೀಶ್ ಕುಟುಂಬಸ್ಥರು ದೆಹಲಿ ತಲುಪಿದ್ದಾರೆ.