Tag: ಸ್ವಿಮ್ಮಿಂಗ್

  • 13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ

    13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ

    ಚೆನ್ನೈ: ಕೇವಲ 13 ಗಂಟೆಗಳಲ್ಲಿ ಶ್ರೀಲಂಕಾದ ತಲೈಮನ್ನಾರ್‍ನಿಂದ ತಮಿಳುನಾಡಿನ ಧನುಷ್ಕೋಡಿಯ ಅರಿಚಲ್ಮುನೈವರೆಗೆ 28.5 ಕಿ.ಮೀ ಸ್ವಿಮ್ಮಿಂಗ್ ಮಾಡಿದ ಮುಂಬೈ ಮೂಲದ 13 ವರ್ಷದ ಬಾಲಕಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

    ಜಿಯಾ ರೈ ನೌಕಾಪಡೆಯ ಅಧಿಕಾರಿಯೊಬ್ಬರ ಮಗಳಾಗಿದ್ದು, ಶ್ರೀಲಂಕಾ ಮತ್ತು ಭಾರತೀಯ ಅಧಿಕಾರಿಗಳಿಂದ ಅನುಮತಿಯನ್ನು ಪಡೆದು ಮಾರ್ಚ್ 20ರ ಭಾನುವಾರ ಬೆಳಗ್ಗೆ 4.22ಕ್ಕೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿ ನಂತರ ಸಂಜೆ 5.32ರ ಹೊತ್ತಿಗೆ ಅರಿಚಲ್ಮುನೈ ತಲುಪಿದ್ದಾರೆ. ಇದನ್ನೂ ಓದಿ: ‘ಶಾಸಕನ ಮೊಮ್ಮಗ’ ಎನ್ನುವುದೇ ಬೈಕ್ ನಂಬರ್ ಪ್ಲೇಟ್!

    ಈ ವೇಳೆ ಹಾಜರಿದ್ದ ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸೈಲೇಂದ್ರ ಬಾಬು ಅವರು, ಈ ಸಮುದ್ರದಲ್ಲಿ ಹಾವುಗಳು, ಶಾರ್ಕ್‍ಗಳು ಮತ್ತು ಜೆಲ್ಲಿ ಮೀನುಗಳು ಹೆಚ್ಚಾಗಿದೆ. ಅಲ್ಲದೆ ಈ ನೀರಿನ ಪ್ರವಾಹವನ್ನು ನೀವು ಊಹಿಸಲು ಸಾಧ್ಯವಿಲ್ಲ. ಆದರೆ ಜಿಯಾ ರೈ ಈ ನೀರಿನಲ್ಲಿ ಸ್ವಿಮ್ಮಿಂಗ್ ಮಾಡಿದ್ದಾಳೆ ಎಂದರೆ ಖಂಡಿತವಾಗಿಯೂ ಪ್ರಶಂಶಿಸಬೇಕು ಎಂದು ಅವರ ತಂದೆ, ತಾಯಿಯ ಬಳಿ ಶ್ಲಾಘಿಸಿದ್ದಾರೆ.

    ಜಿಯಾ ರೈ ಸ್ವಿಮ್ಮಿಂಗ್ ಮಾಡುವ ವೇಳೆ ಶ್ರೀಲಂಕಾದ ನೌಕಾಪಡೆಯು ಭಾರತೀಯ ಕರಾವಳಿ ಭದ್ರತಾಪಡೆಯು ಸ್ವಾಧೀನಪಡಿಸಿಕೊಳ್ಳುವ ಅಂತರಾಷ್ಟ್ರೀಯ ಕಡಲ ಗಡಿಯವರೆಗೆ ರಕ್ಷಣೆ ನೀಡಿದೆ. ಇದನ್ನೂ ಓದಿ: 2.8 ಕೋಟಿ ಸಾಗಾಟ -ಸಿಕ್ಕಿ ಬಿದ್ದ ಮಾಜಿ ಸಂಸದನ ಪತ್ನಿ

  • ಗೆಳೆಯನನ್ನು ಕಾಪಾಡಲು ಹೋಗಿ ಸ್ನೇಹಿತರಿಬ್ಬರು ಪ್ರಾಣ ಬಿಟ್ಟರು

    ಗೆಳೆಯನನ್ನು ಕಾಪಾಡಲು ಹೋಗಿ ಸ್ನೇಹಿತರಿಬ್ಬರು ಪ್ರಾಣ ಬಿಟ್ಟರು

    ಕೊಪ್ಪಳ: ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದ ಕೆರೆಯಲ್ಲಿ ನಡೆದಿದೆ.

    ರಾಜೇಶ್ ಕುಮಾರ್(26) ಮತ್ತು ಮಧುಕಿರಣ್ (25) ಮೃತರು. ಇವರು ಹೈದ್ರಾಬಾದ್ ಮೂಲದವರಾಗಿದ್ದು, ಗಂಗಾವತಿಯ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಂತರ ಮೃತ ದೇಹ ಪತ್ತೆಯಾಗಿವೆ. ಪ್ರವಾಸಕ್ಕೆ ಬಂದಿರುವ  ನಾಲ್ವರು ಯುವಕರು ಸಾಣಾಪುರ ಕೆರೆ ದಡದ ಮೇಲೆ ಸ್ನಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಇದನ್ನೂ ಓದಿ:  ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

    ನಾಲ್ವರ ಪೈಕಿ ಕೇವಲ ಒಬ್ಬರಿಗೆ ಮಾತ್ರ ಈಜು ಬರುತ್ತಿತ್ತು. ಅಲೋಕ್ ಕುಮಾರ್ ಮಾತ್ರ ಕೆರೆಯಲ್ಲಿ ಈಜಲು ಹೋಗಿದ್ದ ಇನ್ನೂಳಿದ ಮೂವರು ಕೆರೆ ದಡದ ಬಂಡೆಯ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದರು. ಇನ್ನೂ ಅಲೋಕ್ ಕುಮಾರ್ ಸ್ವೀಮೀಂಗ್ ಮುಗಿಸಿಕೊಂಡು ಮೇಲೆ ಬಂದಿದಾನೆ. ಈ ವೇಳೆ ಇನ್ನೂ ಬಂಡೆಯ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದ ಮೂವರಲ್ಲಿ ನರಸಿಂಹ ಎಂಬಾತ ಕಾಲು ಜಾರಿ ಕೆರಯಲ್ಲಿ ಬಿದ್ದಿದ್ದಾನೆ. ನರಸಿಂಹ ಕೆರೆಯಲ್ಲಿ ಬಿಳುತ್ತಿದ್ದಂತೆ ಆತನನ್ನು ಕಾಪಡಲು ಈಜು ಬಾರದ ರಾಜೇಶ್ ಮತ್ತು ಮಧು ಕಿರಣ ಕೆರೆಗೆ ಹಾರಿದ್ದಾರೆ. ಇದನ್ನು ನೋಡಿದ ಅಲೋಕ್ ಮೂವರನ್ನು ಕಾಪಾಡಲು ಆತನು ಕೆರೆಗೆ ಹಾರಿದ್ದಾನೆ ಆದರೆ ವಿಧಿಯಾಟ ಕಾಲು ಜಾರಿ ಬಿದ್ದ ನರಸಿಂಗ್ ನನ್ನು ಮಾತ್ರ ಅಲೋಕ್ ಕಾಪಾಡಲು ಸಾಧ್ಯವಾಯಿತು ನರಸಿಂಗ್‍ನನ್ನು ದಡೆಕ್ಕೆ ತಂದು ಬಿಡುವಷ್ಟರಲ್ಲಿ ತನ್ನ ಇನ್ನಿಬರು ಸ್ನೇಹಿತರು ನೀರುಪಾಲಾಗಿದ್ದರು. ಇನ್ನೂ ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:  ಯಡಿಯೂರಪ್ಪ ಅವರನ್ನು ಯಾವ ಸಮುದ್ರಕ್ಕೆ ಎಸೆದಿದ್ದೀರಿ: ಬಿಜೆಪಿಗೆ ಡಿಕೆಶಿ ಪ್ರಶ್ನೆ

  • ಸ್ವಿಮ್ ಸೂಟಿನಲ್ಲಿ ಪ್ರಿಯಾಂಕಾ ಹಾಟ್ ಲುಕ್

    ಸ್ವಿಮ್ ಸೂಟಿನಲ್ಲಿ ಪ್ರಿಯಾಂಕಾ ಹಾಟ್ ಲುಕ್

    ಫ್ಲೋರಿಡಾ: ಬಾಲಿವುಡ್ ದೇಸಿ ಗರ್ಲ್, ನಟಿ ಪ್ರಿಯಾಂಕಾ ಚೋಪ್ರಾ ಅವರು ತಾವು ಧರಿಸುವ ಉಡುಪು, ಫೋಟೋಶೂಟ್, ಪ್ರವಾಸ ಹೀಗೆ ತಮ್ಮ ಜೀವನ ಶೈಲಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಪ್ರಿಯಾಂಕಾ ಅವರು ಸ್ವಿಮ್ ಸೂಟಿನಲ್ಲಿ ಹಾಟಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

    ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿ ನಿಕ್ ಜೋನಸ್ ಜೊತೆ ಅಮೆರಿಕದಲ್ಲಿದ್ದು, ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಪ್ರಿಯಾಂಕಾ ಮಿಯಾಮಿ ಸಿಟಿಯಲ್ಲಿದ್ದು, ಪತಿ ನಿಕ್ ಜೋನಸ್ ಸಹೋದರನ ಪತ್ನಿಯಾದ ಸೋಫಿ ಟರ್ನರ್ ಹಾಗೂ ಆಕೆಯ ಗೆಳತಿಯರ ಜೊತೆಗೆ ಅಲ್ಲಿನ ಸ್ವಿಮ್ಮಿಂಗ್ ಪೂಲ್‍ಗೆ ಹೋಗಿದ್ದಾರೆ.

    https://www.instagram.com/p/B0uNY0JF-zo/

    ಪ್ರಿಯಾಂಕಾ ಅವರು ಮೆರೂನ್ ಸ್ವಿಮ್ ಸೂಟ್ ಹಾಕಿಕೊಂಡಿದ್ದು, ಹಾಟಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪ್ರಿಯಾಂಕಾ ಅವರ ಫೋಟೋಗಳನ್ನ ಕ್ಲಿಕ್ಕಿಸಿಕೊಂಡಿದ್ದು, ಇದೀಗ ಆ ಫೋಟೋಗಳನ್ನು ಪ್ರಿಯಾಂಕಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಕಿನಿ ತೊಟ್ಟ ಪ್ರಿಯಾಂಕಾ ಅವರ ಹಾಟ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಇತ್ತೀಚಿಗಷ್ಟೇ ಪ್ರಿಯಾಂಕಾ ಚೋಪ್ರಾ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಬರೋಬ್ಬರಿ 3.5 ಲಕ್ಷ ರೂ. ಬೆಲೆಯ ಕೇಕ್ ಕಟ್ ಮಾಡಿದ್ದರು. ಪ್ರೀತಿಯ ಪತ್ನಿಗಾಗಿ ಪತಿ ನಿಕ್ ಈ ಕೇಕ್ ಆರ್ಡರ್ ಮಾಡಿದ್ದು, ಅದನ್ನು ತಯಾರಿಸಲು ಸುಮಾರು 24 ಗಂಟೆಗಳು ತೆಗೆದುಕೊಳ್ಳಲಾಗಿತ್ತು. ಕೇಕನ್ನು ಕೆಂಪು ಮತ್ತು ಗೋಲ್ಡನ್ ಕಾಂಬಿನೇಷನ್‍ನ್ನಲ್ಲೇ ತಯಾರಿಸಲಾಗಿತ್ತು. ಯಾಕೆಂದರೆ ಹುಟ್ಟುಹಬ್ಬದ ದಿನ ಪ್ರಿಯಾಂಕಾ ಅವರು ಕೂಡ ಅದೇ ಬಣ್ಣದ ಡ್ರೆಸ್ ಧರಿಸಿದ್ದರು.

    https://www.instagram.com/p/B0trV8CDVPH/

  • ತೊಟ್ಟಿಯಲ್ಲಿ ಕೋತಿಗಳ ಸ್ವಿಮ್ಮಿಂಗ್ – ವಿಡಿಯೋ ವೈರಲ್

    ತೊಟ್ಟಿಯಲ್ಲಿ ಕೋತಿಗಳ ಸ್ವಿಮ್ಮಿಂಗ್ – ವಿಡಿಯೋ ವೈರಲ್

    ಮಂಡ್ಯ: ಮಳವಳ್ಳಿ ತಾಲೂಕಿನ ಬಸವನ ಬೆಟ್ಟದಲ್ಲಿ ಬಿಸಿಲಿನ ತಾಪ ತಾಳಲಾರದೆ ಕೋತಿಗಳು ನೀರಿನ ತೊಟ್ಟಿಗಿಳಿದು ಸ್ನಾನ ಮಾಡುತ್ತ ಆಟವಾಡುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

    ಬಸವನ ಬೆಟ್ಟದ ಬಳಿಯಿರುವ ಹೆಬ್ಬೆಟ್ಟೇ ಬಸವೇಶ್ವರಸ್ವಾಮಿ ದೇವಸ್ಥಾನದ ಬಳಿ ಕೋತಿಗಳು ಸ್ವಿಮ್ಮಿಂಗ್ ಕಂಡು ಬಂದಿದೆ. ಪ್ರವಾಸಿಗರೊಬ್ಬರು ಅದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸುಮಾರು 10-15 ಕೋತಿಗಳು ನೀರಿನ ತೊಟ್ಟಿ ಸುತ್ತಾ ಕುಳಿತಿದ್ದು, ಒಂದರಂದೆ ಒಂದು ತೊಟ್ಟಿಗೆ ಮುಳುಗಿ ಏಳುತ್ತಿವೆ. ಕೆಲವು ಕೋತಿಗಳು ತೊಟ್ಟಿಯಲ್ಲಿಯೇ ಸ್ವಿಮ್ಮಿಂಗ್ ಮಾಡುತ್ತಿವೆ. ಇನ್ನೂ ಜೋಡಿಯಾಗಿಯೂ ಮುಳುಗಿ-ಮುಳುಗಿ ಎದ್ದೇಳುತ್ತಿವೆ. ಬಿಸಿಲಿನ ತಾಪಕ್ಕೆ ಕೋತಿಗಳು ನೀರನ್ನು ಕಂಡ ಸಂತಸಕ್ಕೆ ತೊಟ್ಟಿಯಲ್ಲಿ ಮುಳುಗಿ ಎಂಜಾಯ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಮಳೆ ಇಲ್ಲದೆ ಕಾಡು ಒಣಗಿದ್ದು, ಹಲವಾರು ಮರಗಳು ಎಲೆಗಳು ಉದುರಿ ನಿಂತಿವೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮಂಗಗಳು ಮತ್ತು ಕಾಡು ಪ್ರಾಣಿಗಳು ಹಾಹಾಕಾರ ಪಡುತ್ತಿವೆ. ಈ ವೇಳೆ ದೇವಾಲಯದ ಸಮೀಪವಿರುವ ಕಾಡಿನಲ್ಲಿ ವಾಸವಿರುವ ಮಂಗಗಳು ನೀರಿನ ತೊಟ್ಟಿಗೆ ಜಿಗಿದು ದೇಹವನ್ನು ತಂಪು ಮಾಡಿಕೊಳ್ಳುತ್ತಿದ್ದಾವೆ ಎಂದು ಪ್ರವಾಸಿಗ ಲೋಕೇಶ್ ಹೇಳಿದ್ದಾರೆ.

  • ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರ ದುಸ್ಸಾಹಸ – ಕೊಚ್ಚಿ ಹೋದ ಯುವಕ

    ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರ ದುಸ್ಸಾಹಸ – ಕೊಚ್ಚಿ ಹೋದ ಯುವಕ

    ಮೈಸೂರು: ಜಿಲ್ಲೆಯ ನಂಜನಗೂಡಿನ ಹತ್ತಿರ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರು ಯುವಕರು ನದಿಯಲ್ಲಿ ಸ್ವಿಮ್ಮಿಂಗ್ ಮಾಡುವ ದುಸ್ಸಾಹಸಕ್ಕೆ ಇಳಿದಿದ್ದರು. ಆದರೆ ಅವರಲ್ಲಿ ಒಬ್ಬ ಯುವಕ ನಾಪತ್ತೆಯಾಗಿದ್ದಾನೆ.

    ಎಚ್.ಡಿ ಕೋಟೆ ತಾಲೋಕಿನ ಮಾದಾಪುರ ಸೇತುವೆ ಬಳಿ ಈ ಘಟನೆ ನಡೆದಿದೆ. ಸೇತುವೆ ಮೇಲೆ ಹರಿಯುತ್ತಿರುವ ನೀರಿಗೆ ಮೂವರು ಬಿದ್ದಿದ್ದರು. ಆದರೆ 24 ವರ್ಷದ ಉಮೇಶ್ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾನೆ. ಜೊತೆಯಲ್ಲಿದ್ದ ಚಿಕ್ಕನಾಯ್ಕ, ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಉಮೇಶ್‍ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರ ದುಸ್ಸಾಹಸ!

    ಭೋರ್ಗರೆದು ಹರಿಯುತ್ತಿರುವ ನೀರಿನಲ್ಲಿ ಯುವಕರು ಸ್ವಿಮ್ಮಿಂಗ್ ಮಾಡಲು ಪ್ರಾಣಾಪಾಯವನ್ನು ಲೆಕ್ಕಿಸದೇ ಇಂತಹ ದುಸ್ಸಾಹಸಕ್ಕೆ ಇಳಿದಿದ್ದರು. ಜಲಾಶಯ ತುಂಬಿದ್ದ ಪರಿಣಾಮ ಕಪಿಲಾ ನದಿಗೆ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿತ್ತು.

    ಎಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಸಿಲಿಕಾನ್ ಸಿಟಿಯಲ್ಲಿ ಸ್ವಿಮ್ಮಿಂಗ್ ಪೂಲ್ ಗೆ ಹೋಗುವ ಜನರೇ ಎಚ್ಚರ!

    ಸಿಲಿಕಾನ್ ಸಿಟಿಯಲ್ಲಿ ಸ್ವಿಮ್ಮಿಂಗ್ ಪೂಲ್ ಗೆ ಹೋಗುವ ಜನರೇ ಎಚ್ಚರ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸ್ವಿಮ್ಮಿಂಗ್ ಪೂಲ್ ಗೆ ಹೋಗುವ ಜನರೇ ಎಚ್ಚರವಾಗಿರಿ. ಸ್ವಿಮ್ಮಿಂಗ್ ಮಾಡುತ್ತಿರುವಾಗಲೇ ಮೊಬೈಲ್ ಮತ್ತು ಪರ್ಸ್ ಕಳ್ಳತನ ಮಾಡುತ್ತಿದ್ದಾರೆ.

    ವಿಜಯನಗರದ ಈಜುಕೊಳದಲ್ಲಿ ಕಳೆದ ಕೆಲ ದಿನಗಳಿಂದ ಮೊಬೈಲ್ ಮತ್ತು ಹಣವನ್ನು ಕಳ್ಳತನ ಮಾಡುತ್ತಿದ್ದಾರೆ. ಎಷ್ಟು ಜನ ಸ್ವಿಮ್ಮಿಂಗ್ ಪೂಲ್ ಹೋಗುತ್ತಾರೆ. ಯಾರು ಕಾರಿನಲ್ಲಿ ಬಂದಿದ್ದಾರೆ. ಯಾರ್ ಯಾರ್ ಮೊಬೈಲ್ ತಂದಿದ್ದಾರೆ ಎಂದು ಕಳ್ಳರು ಮೊದಲೇ ಗಮನಿಸುತ್ತಾರೆ. ಬಳಿಕ ಟಿಕೆಟ್ ಪಡೆದು ಸ್ವಿಮ್ಮಿಂಗ್ ಪೂಲ್ ಒಳಗೆ ಕಳ್ಳರ ಗ್ಯಾಂಗ್ ಹೋಗುತ್ತದೆ.

    ಸ್ವಿಮ್ಮಿಂಗ್ ಮಾಡಲು ಬಂದವರು ತಮ್ಮ ಉಡುಪುಗಳನ್ನು ಕಳಚಿ ಸ್ವಿಮ್ಮಿಂಗ್ ಮಾಡಲು ಹೋಗುತ್ತಾರೆ. ಆದರೆ ಅವರು ಸ್ವಿಮ್ಮಿಂಗ್ ಮುಗಿಸಿ ವಾಪಸ್ ಬರುವಷ್ಟರಲ್ಲಿ ಕಳ್ಳರು ಮೊಬೈಲ್ ಮತ್ತು ಹಣವನ್ನು ಎಗರಿಸಿ ಪರಾರಿಯಾಗುತ್ತಿದ್ದರು. ಹಣ, ಮೊಬೈಲೆ ಕಳೆದುಕೊಂಡವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಮಪ್ತಿಯಲ್ಲಿ ಪೊಲೀಸರು ಸ್ವಿಮ್ಮಿಂಗ್ ಪೂಲ್ ಗೆ ಬಂದು ಕಾರ್ಯಾಚರಣೆ ನಡೆಸಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

    ಗ್ಯಾಂಗ್ ಲಿಡರ್ ಅಬ್ಬರ್. ಈತ ತನ್ನ ಮಗನನ್ನು ನೋಡಲು ಮನೆ ಬಳಿ ಬರುತ್ತಿದ್ದ ಮಗನ ಸ್ನೇಹಿತರನ್ನು ಕಳ್ಳತನಕ್ಕೆ ಕರೆದುಕೊಂಡು ಹೋಗಿ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

    ಈ ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.