ಬೆಳಗಾವಿ: ಮರಕ್ಕೆ (Tree) ಕಾರು (Car) ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ ನಡೆದಿದೆ.
ಮಹರಾಷ್ಟ್ರ (Maharashtra) ಪಾಸಿಂಗ್ ಇರುವ ಸ್ವಿಫ್ಟ್ (Swift) ಕಾರು ಮದುವೆ ಮುಗಿಸಿ ಮರಳುತ್ತಿದ್ದ ವೇಳೆ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಿರಂತರ ಅತ್ಯಾಚಾರದಿಂದ ಅಪ್ರಾಪ್ತೆ ಪ್ರೆಗ್ನೆಂಟ್- ವೃದ್ಧ ಅರೆಸ್ಟ್
ಕೀವ್: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿರುವ ಮಧ್ಯೆ, ಅಮೆರಿಕಾ, ಕೆನಡಾ, ಬ್ರಿಟನ್ ಮತ್ತು ಪಶ್ಚಿಮ ದೇಶಗಳು ಮತ್ತೊಂದು ಪ್ರಮುಖ ನಿರ್ಣಯ ಕೈಗೊಳ್ಳುವ ಮೂಲಕ ರಷ್ಯಾಗೆ ಭಾರೀ ಶಾಕ್ ನೀಡಿವೆ. ಹಣಕಾಸು ವ್ಯವಹಾರ ವಿನಿಮಯ ಸಂಸ್ಥೆ ಸ್ವಿಫ್ಟ್ (Society For Worldwide Interbank Financial Telecommunications) ನಿಂದ ರಷ್ಯಾವನ್ನು ದೂರವಿಡಲು ತೀರ್ಮಾನಿಸಿವೆ.
ರಷ್ಯಾದ ಶ್ರೀಮಂತರ ಗುಂಪು – ಒಲಿಗಾರ್ಕ್‍ಗಳ ಆಸ್ತಿ ಬೇಟೆಗೆ ಪ್ರತ್ಯೇಕ ಫೋರ್ಸ್ ರಚಿಸಲು ಅಮೆರಿಕಾ ನಿರ್ಧರಿಸಿದೆ. ಕಳೆದ ನಾಲ್ಕು ದಿನಗಳಿಂದ ರಷ್ಯಾ, ಉಕ್ರೇನ್‍ನಲ್ಲಿ ರಕ್ತಪಾತ ನಡೆಸುತ್ತಿದೆ. ಬಾಂಬ್, ಕ್ಷಿಪಣಿಗಳ ಮೂಲಕ ಉಕ್ರೇನ್‍ಗೆ ನಡುಕ ಹುಟ್ಟಿಸಿದೆ. ಈ ನಡೆಯನ್ನು ಅಮೆರಿಕಾ ಸಹಿತ ಪ್ರಮುಖ ದೇಶಗಳು ಭಾರೀ ವಿರೋಧ ವ್ಯಕ್ತಪಡಿಸಿಸುತ್ತಿದೆ. ಇದರ ಭಾಗವಾಗಿ ರಷ್ಯಾವನ್ನು ಸ್ವಿಫ್ಟ್‌ನಿಂದ ಹೊರಗಿಡಲು ತೀರ್ಮಾನಿಸಿದೆ. ಇದನ್ನೂ ಓದಿ: ರಷ್ಯಾ ಸಂಧಾನ ಆಹ್ವಾನ ತಿರಸ್ಕರಿಸಿದ ಉಕ್ರೇನ್ – ಕೀವ್, ಖಾರ್ಕಿವ್ ಪ್ರದೇಶದಲ್ಲಿ ಗುಂಡಿನ ಸುರಿಮಳೆ
ಏನಿದು ಸ್ವಿಫ್ಟ್ ?
SWIFT ಇದು ಅಂತರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆಯಾಗಿದ್ದು, ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರ ನಡೆಯಲು ನೆರವಾಗುವಂತಹ ವ್ಯವಸ್ಥೆ ಸ್ವಿಫ್ಟ್‌ನಲ್ಲಿದೆ. 1973ರಲ್ಲಿ ಬೆಲ್ಜಿಯಂನಲ್ಲಿ ಆರಂಭವಾದ ಸ್ವಿಫ್ಟ್ ನೆಟ್‍ವರ್ಕ್‍ನಲ್ಲಿ 200 ದೇಶಗಳ 11 ಸಾವಿರ ಬ್ಯಾಂಕ್‍ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಗಳು, ಸಂಸ್ಥೆಗಳ ಮಧ್ಯೆ ಲಕ್ಷ ಕೋಟಿ ಡಾಲರ್‌ಗಳ ವ್ಯವಹಾರ ನಡೆಯುತ್ತದೆ. ಇದೀಗ ಸ್ವಿಫ್ಟ್‌ನಿಂದ ರಷ್ಯಾವನ್ನು ದೂರ ಇಡಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!
SWIFTನಿಂದ ರಷ್ಯಾ ಹೊರಗೆ ನಷ್ಟವೇನು?
ಸ್ವಿಫ್ಟ್‌ನ ಒಟ್ಟು ವ್ಯವಹಾರದಲ್ಲಿ ರಷ್ಯಾ ಪಾಲು ಶೇಕಡಾ 1 ರಷ್ಟಿದ್ದು, ಸ್ವಿಫ್ಟ್ ನೆರವಿಲ್ಲದೇ ಅಂತರಾಷ್ಟ್ರೀಯ ಆರ್ಥಿಕ ವ್ಯವಹಾರ ಕಷ್ಟವಾಗಬಹುದಾಗಿದೆ. ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಲ್ಲಿ ರಷ್ಯಾ ಒಬ್ಬಂಟಿಯಾಗಲಿದೆ. ದಿಗ್ಬಂಧನ ತಡೆದುಕೊಳ್ಳಲು ರಷ್ಯಾ ಬಳಿ 600 ಬಿಲಿಯನ್ ಡಾಲರಗಳಷ್ಟು ಅಂತರಾಷ್ಟ್ರೀಯ ಮೀಸಲು ನಿಧಿ ಇದೆ. ಈ ಮೀಸಲು ನಿಧಿಯನ್ನು ರಷ್ಯಾದ ಸೆಂಟ್ರಲ್ ಬ್ಯಾಂಕ್ ಬಳಸಿಕೊಳ್ಳದಂತೆ ಬ್ಯಾನ್ ಆಗಲಿದೆ. ಅಲ್ಲದೇ ಸ್ಥಳೀಯ ಕರೆನ್ಸಿಗಾಗಿ ಸೆಂಟ್ರಲ್ ಬ್ಯಾಂಕ್ ಬಳಿಯ ವಿದೇಶಿ ಆಸ್ತಿ ಮಾರಲಾಗುವುದಿಲ್ಲ. ವಿದೇಶಗಳಲ್ಲಿರುವ ರಷ್ಯಾದ ಮೀಸಲು ನಿಧಿ ಫ್ರೀಜ್ ಆಗಲಿದ್ದು, ರೂಬುಲ್ ಕರೆನ್ಸಿ ಮೌಲ್ಯ ಪತನಗೊಳ್ಳಲಿದೆ. ಆಗ ಇದರ ಬಳಕೆ ಕಷ್ಟವಾಗಬಹುದು. ಇದೆಲ್ಲದರ ಜೊತೆಗೆ ತೈಲ, ಅನಿಲ ಮಾರಾಟದಿಂದ ಬರುವ ಆದಾಯ ಗಣನೀಯವಾಗಿ ಕುಸಿಯಲಿದೆ. ರಷ್ಯಾದ ಆದಾಯದಲ್ಲಿ ತೈಲ, ಅನಿಲ ಮಾರಾಟದ ಪಾಲು ಶೇಕಡಾ 40 ರಷ್ಟಿದೆ. 2012ರಲ್ಲಿ ಸ್ವಿಫ್ಟ್‌ನಿಂದ ಇರಾನ್ ದೇಶವನ್ನು ಹೊರಗಿಡಲಾಗಿತ್ತು. ಇದರಿಂದ ಇರಾನ್ ಆರ್ಥಿಕವಾಗಿ ತುಂಬಾ ನಷ್ಟ ಅನುಭವಿಸಿತ್ತು. ಶೇಕಡಾ 50 ರಷ್ಟು ತೈಲಾದಾಯ, ಶೇಕಡಾ 30 ರಷ್ಟು ವಿದೇಶಿ ವ್ಯಾಪಾರ ಕಳೆದುಕೊಂಡಿತ್ತು. ಇದನ್ನೂ ಓದಿ: ರಷ್ಯಾ ಸೈನಿಕರನ್ನು ಸೆರೆ ಹಿಡಿದು ಅರೆಬೆತ್ತಲೆಗೊಳಿಸಿ ಸಿಗರೇಟ್ ಸೇದಿಸಿದ ಉಕ್ರೇನ್ ಸೇನೆ
ಚಿಕ್ಕಬಳ್ಳಾಪುರ: ಸರ್ಕಾರಿ ಟಾಟಾ ಸುಮೋ ಹಾಗೂ ಖಾಸಗಿ ಸ್ವಿಫ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸರ್ಕಾರಿ ಮಹಿಳಾ ಆಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ತೀಲಕುಂಟಹಳ್ಳಿ ಕ್ರಾಸ್ ಬಳಿ ನಡೆದಿದೆ.
ಅಪಘಾತದಲ್ಲಿ ಗುಡಿಬಂಡೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಜಯಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಜಯಲಕ್ಷ್ಮಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಸ್ವಿಫ್ಟ್ ಕಾರಿನ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ಟಾಟಾ ಸುಮೋಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಿಂದಾಗಿ ಟಾಟಾ ಸುಮೋ ಪಲ್ಟಿಯಾಗಿದ್ದು, ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿದೆ.
ಈ ಸಂಬಂಧ ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನವದೆಹಲಿ: ದೇಶದ ನಂಬರ್ ಒನ್ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ತನ್ನ ನೂತನ ಮಾದರಿಯ ಸ್ವಿಫ್ಟ್ ಹಾಗೂ ಡಿಸೈರ್ ನ ಒಟ್ಟು 1,279 ಕಾರುಗಳನ್ನು ಹಿಂಪಡೆದುಕೊಂಡಿದೆ.
ನೂತನ ಸ್ವಿಫ್ಟ್ ಹಾಗೂ ಡಿಸೈರ್ ಕಾರುಗಳಲ್ಲಿ ಏರ್ ಬ್ಯಾಗ್ ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಅವುಗಳನ್ನು ಹಿಂಪಡೆದುಕೊಳ್ಳುತ್ತಿರುವುದಾಗಿ ಕಂಪೆನಿ ತನ್ನ ವೆಬ್‍ಸೈಟ್ ನಲ್ಲಿ ತಿಳಿಸಿದೆ.
ನೂತನ ಮಾದರಿಯ ಸ್ವಿಫ್ಟ್ ಮಾದರಿಯ 566 ಹಾಗೂ ಡಿಸೈರ್ ಮಾದರಿಯ 713 ವಾಹನಗಳನ್ನು ಹಿಂಪಡೆದುಕೊಂಡಿದೆ. ಅಲ್ಲದೇ ಇದೇ ವರ್ಷ ಮೇ ತಿಂಗಳ 7 ರಿಂದ ಜುಲೈ ತಿಂಗಳ 5 ನೇ ತಾರೀಖಿನವರೆಗೂ ಮಾರಾಟವಾದ ನೂತನ ಸ್ವಿಫ್ಟ್ ಹಾಗೂ ಡಿಸೈರ್ ಮಾದರಿಯ ವಾಹನಗಳನ್ನು ಸಹ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದನ್ನೂ ಓದಿ: ಜೂನ್ ತಿಂಗಳಿನಲ್ಲಿ ಮಾರುತಿ ಕಾರು ಮಾರಾಟ ಹೆಚ್ಚಳ: ಯಾವ ಕಾರು ಎಷ್ಟು ಮಾರಾಟವಾಗಿದೆ?
ಇಂದಿನಿಂದ ನೂತನ ಸ್ವಿಫ್ಟ್ ಹಾಗೂ ಡಿಸೈರ್ ಮಾದರಿಯ ಗ್ರಾಹಕರು ಮಾರುತಿ ಸುಜುಕಿಯ ಎಲ್ಲಾ ಡೀಲರ್ ಗಳ ಬಳಿ ತಮ್ಮ ವಾಹನಗಳನ್ನು ನೀಡಿ ತಾಂತ್ರಿಕ ದೋಷಗಳನ್ನು ಉಚಿತವಾಗಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
ಈ ಹಿಂದೆ ಮಾರುತಿ ಕಂಪೆನಿ ತನ್ನ ನೂತನ ಸ್ವಿಫ್ಟ್ ಹಾಗೂ ಬಲೆನೊ ಮಾದರಿಗಳಲ್ಲಿ ಬ್ರೇಕ್ ಗೆ ಸಂಬಂಧಿತ ತಾಂತ್ರಿಕ ದೋಷದಿಂದಾಗಿ ಸುಮಾರು 52,686 ವಾಹನಗಳನ್ನು ಹಿಂಪಡೆದು ಉಚಿತವಾಗಿ ಸರಿಪಡಿಸಿ ಕೊಟ್ಟಿತ್ತು. ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಮಾರುತಿ ಕಂಪೆನಿಯು ಉತ್ಪಾದನಾ ವೇಳೆ ಉಂಟಾದ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ಯೋಜನೆಯನ್ನು 2012ರ ಜುಲೈ ತಿಂಗಳಿನಿಂದ ಜಾರಿಗೊಳಿಸಿತ್ತು. ಈ ಯೋಜನೆಯಲ್ಲಿ ಕಂಪೆನಿಯು ವಾಹನಗಳನ್ನು ಹಿಂಪಡೆದು ಉಚಿತವಾಗಿ ಸರಿಪಡಿಸಿಕೊಡುತ್ತಾ ಬಂದಿದೆ.