Tag: ಸ್ವಿಜರ್ಲ್ಯಾಂಡ್

  • ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ 11% ಇಳಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ 11% ಇಳಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ನವದೆಹಲಿ/ಜ್ಯೂರಿಚ್: ಸ್ವಿಜರ್ಲೆಂಡ್‌ನಲ್ಲಿರುವ ಸ್ವಿಸ್‌ ಬ್ಯಾಂಕ್‌ನಲ್ಲಿ (Swiss Banks) ಭಾರತೀಯರ ಭಾರತೀಯರ ಹೂಡಿಕೆ, ಡಿಪಾಸಿಟ್ (Indians’ funds) ಪ್ರಮಾಣ ಇಳಿಕೆಯಾಗಿದೆ.

    2021ಕ್ಕೆ ಹೋಲಿಸಿದರೆ 11% ರಷ್ಟು ಕುಸಿತ ಕಂಡಿದ್ದು, ಪ್ರಸ್ತುತ 3.42 ಶತಕೋಟಿ ಫ್ರಾಂಕ್‌ (ಅಂದಾಜು 30 ಸಾವಿರ ಕೋಟಿ ರೂ.) ಇಳಿಕೆಯಾಗಿದೆ ಎಂದು ಸ್ವಿಸ್‌ ಕೇಂದ್ರೀಯ ಬ್ಯಾಂಕ್‌ನ (Switzerland’s Central Bank) ವಾರ್ಷಿಕ ದತ್ತಾಂಶ ವರದಿ ತಿಳಿಸಿದೆ.

    2021ರಲ್ಲಿ ಭಾರತೀಯರು, ಭಾರತ ಮೂಲದ ಬ್ಯಾಂಚ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಒಟ್ಟು ಬಂಡವಾಳ 35 ಸಾವಿರ ಕೋಟಿ ರೂ.ಗೆ ಏರಿಕೆಯಾಗಿತ್ತು. ಇದು 14 ವರ್ಷಗಳಲ್ಲೇ ಗರಿಷ್ಠ ಬಂಡವಾಳ ಸಂಗ್ರಹ ಎನಿಸಿಕೊಂಡಿತ್ತು. ಬಂಡವಾಳ ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ವರ್ಷ 44ನೇ ಸ್ಥಾನದಲ್ಲಿ ಭಾರತ ಈ ಬಾರಿ 46ನೇ ಸ್ಥಾನ ಪಡೆದಿದೆ.

    2006ರಲ್ಲಿ ಸಾರ್ವಕಾಲಿಕ ಗರಿಷ್ಟ 60 ಸಾವಿರ ಕೋಟಿ ರೂ. ಹೂಡಿಕೆಗೆ ಏರಿಕೆಯಾಗಿತ್ತು. 2011, 2013, 2017, 2020, 2021ರಲ್ಲಿ ಬಂಡವಾಳ ಏರಿಕೆಯಾಗಿತ್ತು. 2020ರಲ್ಲಿ ಸ್ವಿಸ್‍ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 20,700 ಕೋಟಿ ರೂ. ಗಳಷ್ಟಿತ್ತು. ಇದನ್ನೂ ಓದಿ: ಮೊದಲ ಬಾರಿಗೆ ಪ್ರಧಾನಿಯಾಗಿ ಬಂದಾಗ ಭಾರತ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಈಗ 5ನೇ ಸ್ಥಾನಕ್ಕೆ ಜಿಗಿದಿದೆ : ಅಮೆರಿಕದಲ್ಲಿ ಮೋದಿ

    ಅಘೋಷಿತ ವಿದೇಶಿ ಆಸ್ತಿಗಳನ್ನು ಘೋಷಿಸಲು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ (PM Narendra Modi Government) ವಿದೇಶದಲ್ಲಿ ಇಟ್ಟಿರುವ ಕಪ್ಪುಹಣದ (Black Money) ವಿರುದ್ಧ ಸಮರ ಸಾರಿತ್ತು. ಸ್ವಿಸ್ ಬ್ಯಾಂಕ್‍ಗಳಲ್ಲಿ ಇಟ್ಟಿರುವ ಕಪ್ಪು ಹಣದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.

    ಹಲವು ಸುತ್ತಿನ ಮಾತುಕತೆಯ ಬಳಿಕ ಸ್ವಿಸ್‌ ಬ್ಯಾಂಕ್‍ನಲ್ಲಿ ಭಾರತೀಯರು ಹೊಂದಿರುವ ಖಾತೆಗಳ ವಿವರಗಳ ಮೊದಲ ಪಟ್ಟಿ 2018ರಲ್ಲಿ ಭಾರತದ ಕೈಸೇರಿತ್ತು. ಭಾರತ ಸರ್ಕಾರ ಹಾಗೂ ಸ್ವಿಜರ್ಲೆಂಡ್ ನಡುವೆ ನಡೆದ ಒಪ್ಪಂದದ ಅನ್ವಯ ಮಾಹಿತಿಯನ್ನು ಹಂಚಿಕೆ ಮಾಡಲಾಗಿತ್ತು. ಈ ಬೆಳವಣಿಗೆಯನ್ನು ಭಾರತದಲ್ಲಿ ತೆರಿಗೆ ವಂಚಿಸಿ ವಿದೇಶಿಗಳಲ್ಲಿ ಕಪ್ಪು ಹಣವಾಗಿಟ್ಟಿದ್ದ ಪತ್ತೆಯ ಕಾರ್ಯದಲ್ಲಿ ಹೊಸ ಮೈಲಿಗಲ್ಲು ಎಂದು ವಿಶ್ಲೇಷಿಸಲಾಗಿತ್ತು.

    ಸ್ವಯಂಚಾಲಿತ ಮಾಹಿತಿ ವಿನಿಮಯ ಚೌಕಟ್ಟಿನ ಅಡಿಯಲ್ಲಿ ಭಾರತವು ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳ ನಾಲ್ಕನೇ ಪಟ್ಟಿಯನ್ನು 2022ರ ಅಕ್ಟೋಬರ್‌ನಲ್ಲಿ ಪಡೆದಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಐದನೇ ಪಟ್ಟಿ ಕೇಂದ್ರ ಸರ್ಕಾರದ ಕೈ ಸೇರುವ ಸಾಧ್ಯತೆಯಿದೆ.

     

    ಕಪ್ಪುಹಣವೇ?
    ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‍ಗಳು ಇಡಲಾಗುತ್ತದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿ ಠೇವಣಿ ಇರಿಸಿದ್ದ ಹಣಗಳು ಎಲ್ಲವೂ ಕಪ್ಪು ಹಣ ಎಂದೇ ಗುರುತಿಸಲಾಗುತ್ತಿತ್ತು. ಆದರೆ ಈಗ ವ್ಯವಸ್ಥೆ ಬದಲಾಗಿದ್ದು ತನ್ನ ಬ್ಯಾಂಕ್‍ಗಳಲ್ಲಿ ಹಣ ಇಟ್ಟ ವಿವರವನ್ನು ಸ್ವಿಸ್‌ ಬ್ಯಾಂಕ್‌ ಸರ್ಕಾರಗಳಿಗೆ ನೀಡುತ್ತದೆ. ಹೀಗಾಗಿ ಇಲ್ಲಿ ಠೇವಣಿ ಇಟ್ಟ ಎಲ್ಲ ಹಣಗಳು ಕಪ್ಪು ಹಣ ಎಂದು ಕರೆಯಲು ಬರುವುದಿಲ್ಲ. ಈಗ ‘ಕಪ್ಪು ಕುಳಗಳು’ಸ್ವಿಸ್ ಬ್ಯಾಂಕುಗಳಲ್ಲಿ ಹೆಚ್ಚಿನ ಹಣವನ್ನು ಇಡುತ್ತಿಲ್ಲ.

  • 115 ವರ್ಷದ ಇತಿಹಾಸದಲ್ಲಿ ಸ್ವಿಸ್‌ ಬ್ಯಾಂಕ್‌ಗೆ ಭಾರೀ ನಷ್ಟ

    115 ವರ್ಷದ ಇತಿಹಾಸದಲ್ಲಿ ಸ್ವಿಸ್‌ ಬ್ಯಾಂಕ್‌ಗೆ ಭಾರೀ ನಷ್ಟ

    ಜ್ಯೂರಿಚ್‌: ಸ್ವಿಸ್ ನ್ಯಾಷನಲ್ ಬ್ಯಾಂಕ್ (Swiss National Bank) ವಾರ್ಷಿಕ 132.5 ಶತಕೋಟಿ ಸ್ವಿಸ್ ಫ್ರಾಂಕ್‌ (141.54 ಶತಕೋಟಿ ಡಾಲರ್‌) ನಷ್ಟ (Annual Loss) ಅನುಭವಿಸಿದೆ.

    ಕಳೆದ ವರ್ಷ ಬಾಂಡ್ ಮತ್ತು ಷೇರು ಮಾರುಕಟ್ಟೆ (Bond and Share Market) ಕುಸಿತದ ಪರಿಣಾಮ ಎಸ್‌ಎನ್‌ಬಿ ಮಾರುಕಟ್ಟೆ ಮೌಲ್ಯ ಇಳಿಕೆಯಾಗಿದ್ದು  115 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ ಐಫೋನ್‌ ಫ್ಯಾಕ್ಟರಿ, ಬೆಂಗಳೂರಿನಲ್ಲಿ ಪ್ರಾಜೆಕ್ಟ್‌ ಎಲಿಫೆಂಟ್‌: ಫಾಕ್ಸ್‌ಕಾನ್‌ ಅಧಿಕೃತ ಘೋಷಣೆ

    2021ರಲ್ಲಿ 26 ಶತಕೋಟಿ ಫ್ರಾಂಕ್‌ ಲಾಭ ಗಳಿಸಿತ್ತು. ನಷ್ಟದ ಹಿನ್ನೆಲೆಯಲ್ಲಿ ಸ್ವಿಸ್ ಬ್ಯಾಂಕ್‌ ಕೇಂದ್ರ ಅಥವಾ ಪ್ರಾದೇಶಿಕ ಸರ್ಕಾರಗಳಿಗೆ ಯಾವುದೇ ಪಾವತಿ ಅಥವಾ ಹೂಡಿಕೆದಾರರಿಗೆ ಲಾಭಾಂಶವನ್ನು ನೀಡುವುದಿಲ್ಲ. 1907 ರಲ್ಲಿ ಬ್ಯಾಂಕ್ ಸ್ಥಾಪನೆಯಾದ ನಂತರ ಎರಡನೇ ಬಾರಿ ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದೆ.

    ಮಾರ್ಚ್ 23 ರಂದು ತನ್ನ ಮುಂದಿನ ಹಣಕಾಸು ನೀತಿಯನ್ನು ಬ್ಯಾಂಕ್‌ ಪ್ರಕಟಿಸಲಿದೆ. ನಷ್ಟವು ಅದರ ಭವಿಷ್ಯದ ಹಣಕಾಸು ನೀತಿಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದೆ.

  • ರಾಜ್ಯದ ಅತ್ಯಂತ ಕಲುಷಿತ ಗಾಳಿ ಹೊಂದಿರುವ ನಗರದ ಪೈಕಿ ಹುಬ್ಬಳ್ಳಿಯೇ ಫಸ್ಟ್‌

    ರಾಜ್ಯದ ಅತ್ಯಂತ ಕಲುಷಿತ ಗಾಳಿ ಹೊಂದಿರುವ ನಗರದ ಪೈಕಿ ಹುಬ್ಬಳ್ಳಿಯೇ ಫಸ್ಟ್‌

    ಹುಬ್ಬಳ್ಳಿ: ಸ್ವಿಜರ್ಲ್ಯಾಂಡ್ ಮೂಲದ ಐಕ್ಯೂ ಏರ್ ಸಂಸ್ಥೆ ವಿಶ್ವದ ವಿವಿಧ ದೇಶಗಳ ಮತ್ತು ಪ್ರಮುಖ ನಗರಗಳ ವಾಯುಗುಣಮಟ್ಟದ ವರದಿ ತಯಾರಿಸಿದ್ದು, ಈ ವರದಿಯಲ್ಲಿ ರಾಜಧಾನಿ ಬೆಂಗಳೂರನ್ನು ಹಿಂದೆಯಿಟ್ಟು ಹುಬ್ಬಳ್ಳಿ ಪ್ರಥಮ ಸ್ಥಾನವೇರಿ ಕುಖ್ಯಾತಿಯನ್ನು ಪಡೆದುಕೊಂಡಿದೆ.

    ದೇಶದ ಮಹಾನಗರಗಳಿಗೆ ಪೈಪೋಟಿ ನೀಡುವಷ್ಟು ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಹುಬ್ಬಳ್ಳಿ ಕೂಡ ಒಂದು. ರಾಜ್ಯದಲ್ಲಿ ಅತೀ ಹೆಚ್ಚು ವ್ಯಾಪಾರ ವಹಿವಾಟು ಇಲ್ಲಿಯೇ ನಡೆಯುತ್ತದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯನ್ನು ವಾಣಿಜ್ಯ ನಗರಿ ಎಂದು ಕರೆಯಲಾಗುತ್ತದೆ. ಈ ನಿಟ್ಟಿನಲ್ಲಿ ನಗರವನ್ನು ವಿಶ್ವದರ್ಜೆಯ ಮಟ್ಟಕ್ಕೆರಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಯಾಗಿಸಲು ನೂರಾರು ಅಭಿವೃದ್ಧಿ ಕಾಮಗಾರಿಗಳನ್ನು ಆರಂಭ ಮಾಡಲಾಗಿದೆ. ಆದರೆ ಈ ಅಂಶ ಈಗ ಹುಬ್ಬಳ್ಳಿ ಜನರ ಆರೋಗ್ಯಕ್ಕೆ ಕುತ್ತು ತರುವ ಹಂತಕ್ಕೆ ತಲುಪಿದೆ.

    ಸ್ವಿಜರ್ಲ್ಯಾಂಡ್ ಮೂಲದ ಐಕ್ಯೂ ಏರ್ ಸಂಸ್ಥೆ ವಿಶ್ವದ ವಿವಿಧ ದೇಶಗಳ ಮತ್ತು ಪ್ರಮುಖ ನಗರಗಳ ವಾಯುಗುಣಮಟ್ಟದ ವರದಿ ತಯಾರಿಸಿದೆ. ಈ ವರದಿಯಲ್ಲಿ ರಾಜ್ಯದ 14 ನಗರಗಳು ವಾಯುಮಾಲಿನ್ಯದಿಂದ ಬಳಲುತ್ತಿರುವ ಅಂಶ ಬಹಿರಂಗಗೊಂಡಿದೆ. ವಿಪರ್ಯಾಸವೆಂದರೆ ರಾಜಧಾನಿ ಬೆಂಗಳೂರನ್ನು ಹಿಂದೆಯಿಟ್ಟು ಹುಬ್ಬಳ್ಳಿ ಪ್ರಥಮ ಸ್ಥಾನವನ್ನು ಪಡೆದಿದೆ. ಇನ್ನೂ ಗಡಿ ಜಿಲ್ಲೆಯ ಯಾದಗಿರಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ -ಬಜೆಟ್‍ನಲ್ಲಿ ರಾಜ್ಯಕ್ಕೆ 832 ಕೋಟಿ ಮೀಸಲು

    ಐಕ್ಯೂ ಏರ್ ಸಂಸ್ಥೆ ವರದಿ ಪ್ರಕಾರ ಕಲುಷಿತ ಗಾಳಿ ಹೊಂದಿರುವ ಪ್ರಮುಖ ಐದು ನಗರಗಳಾದ ಹುಬ್ಬಳ್ಳಿ-29.7%, ಯಾದಗಿರಿ-29.2%, ಬೆಂಗಳೂರು- 29%, ಬೆಳಗಾವಿ-28.1%, ಚಿಕ್ಕಬಳ್ಳಾಪುರ-26.1%ಗಳಾಗಿದೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಪ್ರಾಣವನ್ನೂ ಕೊಡಬಲ್ಲೆ: ಬಿಜೆಪಿಗೆ ಕೇಜ್ರಿವಾಲ್‌ ಟಾಂಗ್‌

  • ದಟ್ಟ ಮಂಜಿನಿಂದ ಆವರಿಸಿರೋ ಹಿಮವದ್ ಗೋಪಾಲಸ್ವಾಮಿ ಬೆಟ್ಟ

    ದಟ್ಟ ಮಂಜಿನಿಂದ ಆವರಿಸಿರೋ ಹಿಮವದ್ ಗೋಪಾಲಸ್ವಾಮಿ ಬೆಟ್ಟ

    ಚಾಮರಾಜನಗರ: ವರ್ಷದ 365 ದಿನಗಳಲ್ಲೂ ದಟ್ಟ ಮಂಜಿನಿಂದ ಕೂಡಿದ ರಾಜ್ಯದ ಏಕೈಕ ಪ್ರವಾಸಿ ತಾಣ ಅಂದರೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಸದ್ಯ ಗೋಪಾಲಸ್ವಾಮಿ ಬೆಟ್ಟ ಸಂಪೂರ್ಣವಾಗಿ ದಟ್ಟ ಮಂಜಿನಿಂದ ಆವರಿಸಿದ್ದು, ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಇದೆ. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಬರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸಮುದ್ರ ಮಟ್ಟದಿಂದ 4,769 ಅಡಿ ಎತ್ತರದಲ್ಲಿದೆ. ಜೋಳರ ಕಾಲದ ಇತಿಹಾಸವಿರುವ ಗೋಪಾಲ ಸ್ವಾಮಿ ದೇವಾಲಯವನ್ನು 1315ರಲ್ಲಿ ನಿರ್ಮಿಸಲಾಗಿದೆ. ಋತುಮಾನಗಳ ಬೆರಗಿಗೆ ಬೆರಗಾಗುವ ಈ ಪ್ರಕೃತಿ ಸೊಬಗಿನ ಈ ಪುಣ್ಯ ಕ್ಷೇತ್ರದ ವಾತಾವರಣ ಕ್ಷಣಕ್ಷಣಕ್ಕೂ ಬದಲಾಗುತ್ತದೆ.

    ವಿಶಾಲ ಹುಲ್ಲುಗಾವಲು, ಸುಂದರ ಶೋಲಾ ಅರಣ್ಯ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಆಕಾಶವನ್ನೇ ಹೊದ್ದು ನಿಂತಿರುವ ಹಾಗೆ ಕಾಣುತ್ತದೆ. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಜಿಎಸ್ ಬೆಟ್ಟದ ವ್ಯಾಪ್ತಿಗೆ ಬರುವ ಗೋಪಾಲಸ್ವಾಮಿ ಬೆಟ್ಟ ಪ್ರೇಮಿಗಳ ಅಚ್ಚು ಮೆಚ್ಚಿನ ತಾಣ. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾಕಷ್ಟು ಪ್ರವಾಸಿಗರು ಬರುತ್ತಾರೆ.

    ವೀಕೆಂಡ್‍ನಲ್ಲಂತೂ ಪ್ರವಾಸಿಗರಿಂದ ಗೋಪಾಲಸ್ವಾಮಿ ಬೆಟ್ಟ ಫುಲ್ ರಶ್ ಆಗಿರುತ್ತದೆ. ಪ್ರವಾಸಿಗರು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸೊಬಗನ್ನ ವರ್ಣಿಸುತ್ತಾರೆ. ತಂಪಾದ ವಾತಾವರಣದಿಂದ ಕೂಡಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಲ್ಲರನ್ನೂ ತನ್ನತ್ತ ಆಕರ್ಷಣೆ ಮಾಡಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಬೆಟ್ಟದ ಮೇಲೆ ಪ್ರವಾಸಿಗರಿಗೆ ಮೂಲಭೂತ ಇನ್ನಷ್ಟು ಮೂಲಸೌಕರ್ಯ ಒದಗಿಸಬೇಕು ಎಂದು ಪ್ರವಾಸಿಗರು ಕೇಳಿಕೊಂಡಿದ್ದಾರೆ.

  • ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಇನ್ನಿಲ್ಲ

    ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಇನ್ನಿಲ್ಲ

    ಸ್ವಿಜರ್ಲ್ಯಾಂಡ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಹಾಗೂ ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ (80) ಶನಿವಾರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಕೋಫಿ ಅನ್ನಾನ್ ಫೌಂಡೇಶನ್ ತಿಳಿಸಿದೆ.

    ಇಂದು ಸ್ವಿಜರ್ಲ್ಯಾಂಡ್​ನ ಬರ್ನ್ ಆಸ್ಪತ್ರೆಯಲ್ಲಿ ಕೋಫಿ ಅನ್ನಾನ್ ನಿಧನರಾಗಿದ್ದಾರೆ. ಈ ವೇಳೆ ಅವರ ಪತ್ನಿ ನಾನೆ, ಮಕ್ಕಳಾದ ಅಮಾ, ಕಾಜೋ ಮತ್ತು ನಿನಾ ಇದ್ದರು. ಮೂಲತಃ ಘಾನಾ ದೇಶದವರಾದ ಕೋಫಿ ಅನ್ನಾನ್, ಆಫ್ರಿಕಾದ ಖಂಡದ ಅನೇಕ ದೇಶಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದರು.

    ಕೋಫಿ ಅನ್ನಾನ್ ಜನವರಿ 1997 ರಿಂದ ಡಿಸೆಂಬರ್ 2006ರವರೆಗೆ ವಿಶ್ವಸಂಸ್ಥೆಯ 7ನೇ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದರು. ಈ ಮೂಲಕ ಮೊದಲ ಕಪ್ಪು ವರ್ಣೀಯ ವ್ಯಕ್ತಿ ಈ ಪಟ್ಟವನ್ನು ಅಲಂಕರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ಅಧ್ಯಕ್ಷತೆ ಅವಧಿ ಬಳಿಕ ಕೋಫಿ ಅನ್ನಾನ್ ಫೌಂಡೇಶನ್ ತೆರೆದು, ಅದರ ಮೂಲಕ ಶಾಂತಿ ಸ್ಥಾಪನೆಗಾಗಿ ದುಡಿದಿದ್ದರು. ಹೀಗಾಗಿ ಅವರಿಗೆ 2001ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತ್ತು.

    ಆಫ್ರಿಕಾ ಪ್ರೋಗ್ರೆಸ್ ಪ್ಯಾನಲ್‍ನಲ್ಲಿ ಅಧ್ಯಕ್ಷರಾಗಿ ಮತ್ತು ಗ್ರೀನ್ ರೆವಲ್ಯೂಷನ್ ಇನ್ ಆಫ್ರಿಕಾದಲ್ಲಿ ನಾಯಕತ್ವ ವಹಿಸಿ ದುಡಿದಿದ್ದರು. ಕೋಫಿ ಅನ್ನಾನ್ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

  • 3 ವರ್ಷದಿಂದ ತ್ರಿಚಕ್ರ ವಾಹನದಲ್ಲೇ ವಿಶ್ವಪರ್ಯಟನೆ ಮಾಡುತ್ತಿದೆ ಈ ಜೋಡಿ!

    3 ವರ್ಷದಿಂದ ತ್ರಿಚಕ್ರ ವಾಹನದಲ್ಲೇ ವಿಶ್ವಪರ್ಯಟನೆ ಮಾಡುತ್ತಿದೆ ಈ ಜೋಡಿ!

    ಬಳ್ಳಾರಿ: ಬೈಕ್‍ನಲ್ಲಿ ದೇಶ ಸುತ್ತೋರನ್ನ ನೀವೂ ನೋಡಿರಬಹುದು. ಆದ್ರೆ ಇಲ್ಲೊಬ್ಬರು  ತ್ರಿಚಕ್ರ ವಾಹನದಲ್ಲಿ ಇಡೀ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ.

    ಸ್ವಿಜರ್ಲ್ಯಾಂಡ್ ಪಾಸ್ಕಲ್ ಎಂಬವರು ತನ್ನ  ತ್ರಿಚಕ್ರ ವಾಹನದಲ್ಲೆ ವಿಶ್ವದ ಎಲ್ಲ ದೇಶಗಳನ್ನು ಸುತ್ತುತ್ತಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಬೈಕ್ ಟೂರ್ ಆರಂಭಿಸಿರುವ ಇವರು ಇದೀಗ ವಿಶ್ವ ವಿಖ್ಯಾತ ಹಂಪಿಗೆ ಆಗಮಿಸಿದ್ದಾರೆ.

    ವೃತ್ತಿಯಲ್ಲಿ ತೋಟಗಾರಿಕೆ ಕೆಲಸಗಾರರಾಗಿರುವ ಪಾಸ್ಕಲ್ ತನ್ನೊಂದಿಗೆ ಜರ್ಮನಿಯ ಪಾಯ್ ಹೈಡನ್ ಎನ್ನುವ ಸ್ನೇಹಿತೆಯನ್ನು ಕರೆದುಕೊಂಡು ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ. ಇವರ ಸ್ನೇಹಿತೆ ಕೂಡ ಜೊತೆಯಲ್ಲಿ ಬೈಕ್‍ನಲ್ಲೆ ವಿಶ್ವ ಪರ್ಯಟನೆ ಹೊರಟಿರುವುದು ನಿಜಕ್ಕೂ ವಿಶೇಷವಾಗಿದೆ. ಈ ಜೋಡಿ ಇದೀಗ ಪಾಸ್ಕಲ್ ಜೆ ರಾಬಿನ್‍ಸನ್ ದಿ ಲೆಕ್ನೋ, ಪಾಯ ಹೈಡನ್ ದಿ ಕ್ಷೀಣ್ ಅಂತಾ ಎಲ್ಲರಿಗೂ ಪರಿಚಯ ಮಾಡಿಕೊಳ್ಳುತ್ತಿದ್ದಾರೆ.

    ದೇಶದಿಂದ ದೇಶಕ್ಕೆ ಪ್ರಯಾಣ ಬೆಳೆಸುತ್ತಿರುವ ಈ ಜೋಡಿ ತಾವು ಭೇಟಿ ನೀಡಿದ ಎಲ್ಲ ದೇಶಗಳ ರಾಷ್ಟ್ರಧ್ವಜಗಳ ಸ್ಟಿಕರ್‍ಗಳನ್ನು ತಮ್ಮ ಬೈಕ್‍ಗೆ ಅಂಟಿಸಿಕೊಂಡು ಪ್ರಯಾಣ ಮಾಡುತ್ತಿದ್ದಾರೆ.