Tag: ಸ್ವಾಮಿ ವಿವೇಕಾನಂದ

  • ಏ.25 ರಂದು ಬೆಂಗಳೂರಿನಲ್ಲಿ ವಿವೇಕಾನಂದರ ಜೀವನಾಧಾರಿತ ‘ವೀರ ಸಂನ್ಯಾಸಿಯ ಆತ್ಮ ಗೀತೆ’ ಪ್ರದರ್ಶನ

    ಏ.25 ರಂದು ಬೆಂಗಳೂರಿನಲ್ಲಿ ವಿವೇಕಾನಂದರ ಜೀವನಾಧಾರಿತ ‘ವೀರ ಸಂನ್ಯಾಸಿಯ ಆತ್ಮ ಗೀತೆ’ ಪ್ರದರ್ಶನ

    – ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಆಯೋಜನೆ.
    – ಪರಮ್ ಕಲ್ಚರ್ ವತಿಯಿಂದ ಮಲ್ಟಿಮೀಡಿಯಾ ಪ್ರದರ್ಶನ
    – ಪ್ರಸಿದ್ಧ ಸಂಗೀತ ಸಂಯೋಜಕ ಪಂ. ಪ್ರವೀಣ್ ಡಿ. ರಾವ್, ನಿರ್ದೇಶಕ ಕಾರ್ತಿಕ್ ಸರಗೂರು ಸಾರಥ್ಯ

    ಬೆಂಗಳೂರು: ಪರಮ್ ಕಲ್ಚರ್ ವತಿಯಿಂದ ‘ವೀರ ಸಂನ್ಯಾಸಿಯ ಆತ್ಮ ಗೀತೆ ಸ್ವಾಮಿ ‘ ವಿವೇಕಾನಂದರ ಜೀವನ, ಕೃತಿ ಆಧಾರಿತ ಅತ್ಯದ್ಭುತ ಮಲ್ಟಿಮೀಡಿಯಾ ಪ್ರದರ್ಶನವನ್ನು ಏಪ್ರಿಲ್‌ 25 ರಂದು ಬೆಂಗಳೂರಿನ (Bengaluru)  ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.

    ಒಟ್ಟು 2 ಗಂಟೆಗಳ ಕಾಲಾವಧಿಯ ಪ್ರದರ್ಶನವಾಗಿದ್ದು, ಸುಮಾರು 35ಕ್ಕೂ ಅಧಿಕ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಭಾಗಿಯಾಗಲಿದ್ದಾರೆ. ಪ್ರಖ್ಯಾತ ಸಂಗೀತ ಸಂಯೋಜಕರಾದ ಪಂ. ಪ್ರವೀಣ್ ಡಿ. ರಾವ್, ಹಾಗೂ ಚಲನಚಿತ್ರ ನಿರ್ದೇಶಕರಾದ ಕಾರ್ತಿಕ್ ಸರಗೂರು ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸಂಗೀತ, ನೃತ್ಯ, ನಾಟಕಗಳ ಮೂಲಕ ಸ್ವಾಮಿ ವಿವೇಕಾನಂದರ ಜೀವನ – ಚಿಂತನೆಗಳನ್ನು ವಿಜೃಂಭಣಾತ್ಮಕವಾಗಿ ತೋರಿಸುವ ಪ್ರಯತ್ನ ಇದಾಗಿದೆ.

    ಸ್ವಾಮಿ ವಿವೇಕಾನಂದರಿಂದಲೇ (Swami Vivekananda) ಇಂಗ್ಲಿಷ್, ಬಂಗಾಳಿ, ಸಂಸ್ಕೃತದಲ್ಲಿ ರಚಿಸಲ್ಪಟ್ಟ ಹಾಡುಗಳನ್ನು ಹಾಗೂ ಕನ್ನಡ ಸಾರಸ್ವತ ಲೋಕದ ರತ್ನಗಳಾದ, ಜಿ.ಎಸ್.ಶಿವರುದ್ರಪ್ಪ, ಕುವೆಂಪು ಸೇರಿದಂತೆ ಹಲವು ಪ್ರಖ್ಯಾತ ಕವಿಗಳು ವಿವೇಕಾನಂದರ ಬಗ್ಗೆ ಬರೆದ ಹಾಡುಗಳನ್ನು ಸಾದರಪಡಿಸಲಾಗುತ್ತದೆ. ಇದನ್ನೂ ಓದಿ: ಯುಎಸ್-ಚೀನಾ ಟಾರಿಫ್ ವಾರ್ ಮತ್ತಷ್ಟು ಜೋರು – ಚೀನಾ ಉತ್ಪನ್ನಗಳಿಗೆ 245% ಸುಂಕ ವಿಧಿಸಿದ ಅಮೆರಿಕ

    ಬೇಡಿಕೆ ಮೇರೆಗೆ ಮತ್ತೊಮ್ಮೆ ಆಯೋಜನೆ
    ಜನವರಿಯಲ್ಲಿ ಪ್ರದರ್ಶಿಸಲ್ಪಟ್ಟಿದ್ದ “ವೀರ ಸಂನ್ಯಾಸಿಯ ಆತ್ಮಗೀತೆ” ಯು, ಆಗ ಕಂಡ ಅಭೂತಪೂರ್ವ ಯಶಸ್ಸಿನಿಂದಾಗಿ, ಪ್ರೇಕ್ಷಕರ ಬೇಡಿಕೆಯ ಮೇರೆಗೆ ಈಗ ಮರುಪ್ರದರ್ಶನ ಕಾಣುತ್ತಿದೆ. ಸ್ವಾಮಿ ವಿವೇಕಾನಂದರ ತತ್ತ್ವ- ಆದರ್ಶಗಳನ್ನು ಮನೆ ಮನೆಗೂ ತಲುಪಿಸುವ ಸಲುವಾಗಿ “ಪರಮ್” ಇಂತಹದ್ದೊಂದು ಅದ್ಭುತ ಕಾರ್ಯಕ್ರಮವನ್ನು ಮತ್ತೆ ಆಯೋಜಿಸಿದೆ. ಬೇಸಿಗೆಯ ರಜೆಯಲ್ಲಿ ಮಕ್ಕಳಿಗೂ ತೋರಿಸಬಹುದಾದಂತಹ, ಕುಟುಂಬ ಸಮೇತ ಆಸ್ವಾದಿಸುವಂತಹ ಕಾರ್ಯಕ್ರಮ ಇದಾಗಿದೆ. ಇದನ್ನೂ ಓದಿ: 5 ವರ್ಷ 5 ತಿಂಗಳು ತುಂಬಿದ್ದರೆ 1ನೇ ತರಗತಿಗೆ ಅಡ್ಮಿಷನ್: ಮಧು ಬಂಗಾರಪ್ಪ

    ಏನಿದು ಪರಮ್‌ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರ?
    ಬೆಂಗಳೂರಿನ ಮಾಗಡಿರಸ್ತೆಯ ಚನ್ನೇನಹಳ್ಳಿಯಲ್ಲಿ ಸುಮಾರು 15 ಎಕರೆ ಜಾಗದಲ್ಲಿ ಪರಮ್ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರ ನಿರ್ಮಾಣಗೊಳ್ಳುತ್ತಿದೆ. ಈ ಕೇಂದ್ರವು, ಭಾರತದಲ್ಲಿ ರೂಪುಗೊಳ್ಳುತ್ತಿರುವ ಅತಿದೊಡ್ಡ ಮಲ್ಟಿ ಎಕ್ಸ್‌ಪೀರಿಯನ್ಸ್‌ ತಾಣವಾಗಿದೆ. ಇದು, ವಿಜ್ಞಾನ, ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ವೇದಿಕೆಯನ್ನು ಒದಗಿಸಿ ಕೊಡಲಿದೆ. ಇಲ್ಲಿ, ವೈಜ್ಞಾನಿಕ ಆವಿಷ್ಕಾರಗಳೂ, ಸಾಂಸ್ಕೃತಿಕ ಕಲಿಕಾ ಸೌಲಭ್ಯಗಳೂ ಇರಲಿವೆ.

    ಪರಮ್‌ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರದಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಭವನ, ಪ್ರದರ್ಶನ ಭವನ, ವಿಜ್ಞಾನ ಕೇಂದ್ರ ಹಾಗೂ ಅತ್ಯುತ್ತಮ ಸೌಲಭ್ಯಗಳುಳ್ಳ ಅತಿಥಿ ಗೃಹಗಳು ನಿರ್ಮಾಣಗೊಳ್ಳುತ್ತಿವೆ. ಈ ಕೇಂದ್ರದ ಮೂಲಕ ಸೇವಾ ಸಂಸ್ಥೆಯು ಯುವ ಮನಸ್ಸುಗಳಿಗೆ ಆಧುನಿಕ ವಿಜ್ಞಾನ ಮತ್ತು ಭಾರತೀಯ ಪ್ರಾಚೀನ ವಿಜ್ಞಾನ, ಇತಿಹಾಸ, ಸಂಸ್ಕೃತಿ, ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶ ಹೊಂದಿದೆ ಎನ್ನುತ್ತಾರೆ ಆಯೋಜನಕರು.

    ಎಲ್ಲಿ ಯಾವಾಗ?
    ದಿನಾಂಕ – ಏಪ್ರಿಲ್‌ 25
    ಸಮಯ – ಸಂಜೆ 6.30 ರಿಂದ 8.30
    ಸ್ಥಳ – ಚೌಡಯ್ಯ ಮೆಮೋರಿಯಲ್ ಹಾಲ್, ಮಲ್ಲೇಶ್ವರಂ, ಬೆಂಗಳೂರು
    ಸಂಪರ್ಕ ಸಂಖ್ಯೆ – 903503 4725, 83174 31009

  • ಚುನಾವಣೆ ಮುಗಿಯುತ್ತಿದ್ದಂತೆ 2 ದಿನ ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲಿದ್ದಾರೆ ಮೋದಿ

    ಚುನಾವಣೆ ಮುಗಿಯುತ್ತಿದ್ದಂತೆ 2 ದಿನ ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲಿದ್ದಾರೆ ಮೋದಿ

    ನವದೆಹಲಿ: ಲೋಕಸಭಾ ಚುನಾವಣಾ (Lok Sabha Election) ಪ್ರಚಾರ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಎರಡು ದಿನ ಧ್ಯಾನ (Meditation) ಮಾಡಲಿದ್ದಾರೆ.

    ಸ್ವಾಮಿ ವಿವೇಕಾನಂದರು (Swami Vivekanand) ಧ್ಯಾನ ಮಾಡಿದ್ದ ಕನ್ಯಾಕುಮಾರಿಯ ಧ್ಯಾನ ಮಂದಿರದಲ್ಲಿ ಮೋದಿ ಮೇ‌ 30ರ ಸಂಜೆಯಿಂದ ಜೂನ್ 1ರ ಸಂಜೆವರೆಗೆ ಧ್ಯಾನ ಮಾಡಲಿದ್ದಾರೆ.

    ತಿರುನಲ್ವೇಲಿ ಡಿಐಜಿಗೆ ಭದ್ರತೆಯ ಉಸ್ತುವಾರಿ ನೀಡಲಾಗಿದ್ದು ಈಗಾಗಲೇ ಸ್ಥಳದಲ್ಲಿ ಮೋದಿಗೆ ಭದ್ರತೆ  ನೀಡುವ ಎಸ್‌ಪಿಜಿ ತಂಡ ಬಿಡುಬಿಟ್ಟಿದೆ. ಈ ಸ್ಥಳದ ಭದ್ರತೆಗೆ 2000 ಪೊಲೀಸರನ್ನು ನಿಯೋಜಿಸಲಾಗುತ್ತದೆ.

    ಜೂನ್ 30ರ ಸಂಜೆ 4.45ಕ್ಕೆ ಪ್ರಧಾನಿ ಮೋದಿ ಧ್ಯಾನ ಕೇಂದ್ರಕ್ಕೆ ಆಗಮಿಸಲಿದ್ದಾರೆ. 2019ರಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ಮೋದಿ ಕೇದಾರನಾಥದಲ್ಲಿ ಧ್ಯಾನ ಮಾಡಿದ್ದರು. ಇದನ್ನೂ ಓದಿ: ಹಣ ಕದಿಯುವುದರಲ್ಲಿ ಯಾರ ಪಾಲು ಇದೆಯೋ ಅವರು ಸಿಕ್ಕಿಬೀಳುತ್ತಾರೆ: ವಿಪಕ್ಷಗಳಿಗೆ ಮೋದಿ ಟಾಂಗ್‌

    1892ರ ಡಿಸೆಂಬರ್ 23, 24, 25 ಸ್ವಾಮಿ ವಿವೇಕಾನಂದರು ಇದೇ ಜಾಗದಲ್ಲಿ ಧ್ಯಾನಕ್ಕೆ ಕೂತಿದ್ದರು. ಈ ಕಾರಣಕ್ಕೆ 1970ರಲ್ಲಿ ಇದೇ ಜಾಗದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿತ್ತು.

     

  • ವಿವೇಕಾನಂದರ ಬಗ್ಗೆ ಅವಹೇಳನ – ಅಮೋಘ ಲೀಲಾ ದಾಸ್‌ಗೆ ನಿಷೇಧ ಹೇರಿದ ಇಸ್ಕಾನ್‌

    ವಿವೇಕಾನಂದರ ಬಗ್ಗೆ ಅವಹೇಳನ – ಅಮೋಘ ಲೀಲಾ ದಾಸ್‌ಗೆ ನಿಷೇಧ ಹೇರಿದ ಇಸ್ಕಾನ್‌

    ನವದೆಹಲಿ: ಪ್ರವಚನದಲ್ಲಿ ಸ್ವಾಮಿ ವಿವೇಕಾನಂದ (Swami Vivekananda) ಮತ್ತು ರಾಮಕೃಷ್ಣ ಪರಮಹಂಸ (Ramakrishna Paramahamsa) ಅವರನ್ನು ಅವಹೇಳನ ಮಾಡಿದ್ದಕ್ಕೆ ಆಧ್ಯಾತ್ಮಿಕ ಭಾಷಣಕಾರ ಅಮೋಘ ಲೀಲಾ ದಾಸ್ (Monk Amogh Lila Das) ಅವರಿಗೆ ಇಸ್ಕಾನ್‌ (ISKCON) 1 ತಿಂಗಳ ನಿಷೇಧವನ್ನು ಹೇರಿದೆ.

    ಇತ್ತೀಚಿಗೆ ನೀಡಿದ ಪ್ರವಚನದಲ್ಲಿ ಸ್ವಾಮಿ ವಿವೇಕಾನಂದ ಅವರು ಮೀನು ಆಹಾರ ಸೇವಿಸಿದ್ದನ್ನು ಪ್ರಶ್ನಿಸಿದ್ದರು. ದೈವಿಕ ವ್ಯಕ್ತಿಯು ಪ್ರಾಣಿಯನ್ನು ಕೊಂದು ಅದನ್ನು ತಿನ್ನುತ್ತಾನೆಯೇ? ಅವನು ಮೀನು ತಿನ್ನುತ್ತಾನೆಯೇ? ಮೀನು ಕೂಡ ನೋವು ಅನುಭವಿಸುತ್ತದೆ. ಮತ್ತು ವಿವೇಕಾನಂದರು ಮೀನು ತಿಂದರೆ, ದೈವಿಕ ವ್ಯಕ್ತಿ ಮೀನು ತಿನ್ನಬಹುದೇ ಎಂದು ಪ್ರಶ್ನಿಸಿದ್ದರು.

    ಒಬ್ಬ ದೈವಿಕ ಮಾನವನ ಹೃದಯದಲ್ಲಿ ದಯೆ ಇರುತ್ತದೆ. ಬದನೆಕಾಯಿ ನಮ್ಮ ಹಸಿವನ್ನು ನೀಗಿಸುತ್ತದೆ. ಹಾಗೆಂದ ಮಾತ್ರಕ್ಕೆ ತುಳಸಿಗಿಂತ ಬದನೆ ಉತ್ತಮ ಎಂದು ಹೇಳಬಹುದೇ? ಅಥವಾ ಭಗವದ್ಗೀತೆ ಅಧ್ಯಯನಕ್ಕಿಂತ ಫುಟ್ಬಾಲ್ ಆಡುವುದು ಮುಖ್ಯ ಎಂದು ಹೇಳುವುದು ಸರಿಯೇ?. ಸ್ವಾಮಿ ವಿವೇಕಾನಂದರ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಅವರು ಇಲ್ಲೇ ಇದ್ದಿದ್ದರೆ ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದೆ. ಆದರೆ ಅವರು ಹೇಳುವ ಎಲ್ಲವನ್ನೂ ನಾವು ಕುರುಡಾಗಿ ನಂಬಬಾರದು ಎಂದು ತಿಳಿಸಿದ್ದರು.  ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?

    ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಅಮೋಘ ಲೀಲಾ ದಾಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ನೆಟ್ಟಿಗರಿಂದ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಇಸ್ಕಾನ್‌ ಅಮೋಘ ಲೀಲಾ ದಾಸ್ ಅವರ ಪ್ರವಚನಗಳಿಗೆ 1 ತಿಂಗಳ ಮಟ್ಟಿಗೆ ನಿಷೇಧ ಹೇರಿದೆ. ಅಷ್ಟೇ ಅಲ್ಲದೇ ಈ ಹೇಳಿಗೆ ವಿಷಾದ ವ್ಯಕ್ತಪಡಿಸಿದೆ.

    ಅಮೋಘ ಲೀಲಾ ದಾಸ್ ಯಾರು?
    43 ವರ್ಷದ ಅಮೋಘ ಲೀಲಾ ದಾಸ್ ಸನ್ಯಾಸಿಯಾಗಿದ್ದು 12 ವರ್ಷಗಳಿಂದ ಇಸ್ಕಾನ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಪ್ರಸ್ತುತ ಇಸ್ಕಾನ್‌ನ ದ್ವಾರಕಾ ಚಾಪ್ಟರ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಲಕ್ನೋದ ಪಂಜಾಬಿ ಕುಟುಂಬದಲ್ಲಿ ಜನಿಸಿದ ಇವರ ನಿಜವಾದ ಹೆಸರು ಆಶಿಶ್‌ ಅರೋರಾ. ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ 2004 ರಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದ ಇವರು ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2010 ರಲ್ಲಿ ಕಾರ್ಪೊರೇಟ್ ಕೆಲಸವನ್ನು ತೊರೆದು 29ನೇ ವಯಸ್ಸಿನಲ್ಲಿ ಇಸ್ಕಾನ್‌ ಸೇರಿದರು. ಧಾರ್ಮಿಕ ಪ್ರವಚನ ನೀಡುವ ಮೂಲಕ ಸಾಮಾಜಿಕ ಜಾಲಾತಣದಲ್ಲಿ ಅಪಾರ ಅಭಿಮಾನಿಗಳನ್ನು ಅಮೋಘ ಲೀಲಾ ದಾಸ್ ಹೊಂದಿದ್ದಾರೆ.

     

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 7,600 ಶಾಲಾ ಕೊಠಡಿಗಳ ಮುಂದೆ ವಿವೇಕಾನಂದ ಭಾವಚಿತ್ರ ಮುದ್ರಿಸಲು ಸರ್ಕಾರ ಪ್ಲ್ಯಾನ್‌

    7,600 ಶಾಲಾ ಕೊಠಡಿಗಳ ಮುಂದೆ ವಿವೇಕಾನಂದ ಭಾವಚಿತ್ರ ಮುದ್ರಿಸಲು ಸರ್ಕಾರ ಪ್ಲ್ಯಾನ್‌

    ಬೆಂಗಳೂರು: ಶಾಲಾ ಕೊಠಡಿಗಳಿಗೆ ಕೇಸರಿ (Saffron) ಬಣ್ಣ ಹೊಡೆಯುವ ವಿವಾದ ಬೆನ್ನಲ್ಲೇ ರಾಜ್ಯ ಸರ್ಕಾರ (Government Of Karnataka) ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

    ಸೋಮವಾರ ವಿವೇಕ ಯೋಜನೆ ಅಡಿ ಶಂಕು ಸ್ಥಾಪನೆ ಮಾಡಿರುವ 7,600 ಶಾಲಾ ಕೊಠಡಿಗಳ ಮುಂದೆ ವಿವೇಕಾನಂದರ (Swamy Vivekananda) ಫೋಟೋ ಮುದ್ರಣ ಮಾಡಲು ಶಿಕ್ಷಣ ಇಲಾಖೆ (Education Department) ತೀರ್ಮಾನ ಮಾಡಿದೆ. ಇದನ್ನೂ ಓದಿ: ಮುಸ್ಲಿಮರ ವೋಟು ಪಡೆಯೋಕೆ ಕಾಂಗ್ರೆಸ್‌ ಕೇಸರಿ ವಿರೋಧ ಮಾಡ್ತಿದೆ – ಬಿ.ಸಿ.ನಾಗೇಶ್‌ ಕಿಡಿ

    ಈ ಕುರಿತು `ಪಬ್ಲಿಕ್ ಟಿವಿ’ (Public TV) ಜೊತೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh), ವಿವೇಕಾನಂದರು ಜ್ಞಾನದ ಸಂಕೇತ. ಅವರ ಹೆಸರಿನಲ್ಲಿ ನಾವು ವಿವೇಕ ಯೋಜನೆ ಪ್ರಾರಂಭ ಮಾಡಿದ್ದೇವೆ. ಅವರ ಚಿಂತನೆಗಳು ಮಕ್ಕಳಲ್ಲಿ ಬರಬೇಕು. ಅದಕ್ಕಾಗಿ ನೂತನವಾಗಿ ನಿರ್ಮಾಣ ಆಗುತ್ತಿರುವ ಕೊಠಡಿಗಳ ಮುಂದೆ ವಿವೇಕಾನಂದರ ಭಾವಚಿತ್ರ ಮುದ್ರಣ ಮಾಡುವ ಚಿಂತನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಾಮಿಯ ವಿವಾದ- ನಾಳೆ ಹೈಕೋರ್ಟ್‍ನಲ್ಲಿ PIL ಸಲ್ಲಿಕೆ

    ಸಾಂದರ್ಭಿಕ ಚಿತ್ರ

    ವಿವೇಕಾನಂದರ ಫೋಟೋ ಮುದ್ರಿಸುವ ಬಗ್ಗೆ ಚರ್ಚೆಯಾಗಿದೆ. ಮಕ್ಕಳಿಗೆ ವಿವೇಕಾನಂದ ಅದರ್ಶಗಳು ತಿಳಿಯುವುದು ಮುಖ್ಯ. ಮಕ್ಕಳಿಗೆ ನೀವು ಏನು ಆಗಬೇಕು ಎಂದರೆ ವಿವೇಕಾನಂದ ಆಗಬೇಕು ಎನ್ನಬೇಕು. ಹೀಗಾಗಿ ಶಾಲಾ ಕೊಠಡಿಗಳ ಮುಂದೆ ವಿವೇಕಾನಂದರ ಚಿತ್ರ ಮುದ್ರಣ ಮಾಡ್ತೀವಿ ಅಂತ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಕೇಸರಿ ಕಂಡರೆ ಕಾಂಗ್ರೆಸ್‌ಗೆ ಅಲರ್ಜಿ ಯಾಕೆ?- ವಿವೇಕ ಯೋಜನೆ ಸಮರ್ಥನೆ ಮಾಡಿಕೊಂಡ ಸಿಎಂ ಬೊಮ್ಮಾಯಿ

    ಕೇಸರಿ ಕಂಡರೆ ಕಾಂಗ್ರೆಸ್‌ಗೆ ಅಲರ್ಜಿ ಯಾಕೆ?- ವಿವೇಕ ಯೋಜನೆ ಸಮರ್ಥನೆ ಮಾಡಿಕೊಂಡ ಸಿಎಂ ಬೊಮ್ಮಾಯಿ

    ಬೆಂಗಳೂರು: ಶಾಲಾ ಕೊಠಡಿಗಳಿಗೆ ಕೇಸರಿ (Saffron) ಬಣ್ಣ ಹೊಡೆಯುವ ಸರ್ಕಾರದ ನಿರ್ಧಾರವನ್ನು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸಮರ್ಥನೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ಗೆ (Congress) ಕೇಸರಿ ಬಣ್ಣ ಕಂಡರೆ ಯಾಕೆ ಅಲರ್ಜಿ ಎಂದು ಕಿಡಿಕಾರಿದ್ದಾರೆ.

    ವಿವೇಕ ಯೋಜನೆಯಡಿ (Viveka Yojana) ನಿರ್ಮಾಣವಾಗುತ್ತಿರುವ ಶಾಲೆಗಳ ಕೊಠಡಿಗಳಿಗೆ ಕೇಸರಿ ಬಣ್ಣ ಹೊಡೆಯಲು ಸರ್ಕಾರ ಮುಂದಾಗಿದೆ. ಇದಕ್ಕೆ ಕಾಂಗ್ರೆಸ್ ಮತ್ತು ಮುಸ್ಲಿಂ ಸಂಘಟನೆಗಳು ವಿರೋಧ ಮಾಡಿವೆ. ವಿರೋಧ ಮಾಡಿದ ಕಾಂಗ್ರೆಸ್ ಮತ್ತು ಮುಸ್ಲಿಂ ಸಂಘಟನೆ ವಿರುದ್ಧ ಮುಖ್ಯಮಂತ್ರಿಗಳು ಕಿಡಿಕಾರಿದರು.

    ಎಲ್ಲದರಲ್ಲೂ ರಾಜಕಾರಣ ಮಾಡುವುದು ಇಂದು ಬಹಳ ಕೆಳಹಂತಕ್ಕೆ ಹೋಗುತ್ತಿದೆ. ಕೇಸರಿ ಬಣ್ಣ ನಮ್ಮ ಭಾರತದ ಬಾವುಟದಲ್ಲೇ ಇದೆ. ಕೇಸರಿ ಕಂಡರೆ ಅವರಿಗೆ ಯಾಕೆ ಅಷ್ಟೊಂದು ಅಲರ್ಜಿ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಇನ್ಮುಂದೆ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತಿಲ್ಲ: ಪ್ರತಾಪ್ ಸಿಂಹ

    ಈ ಯೋಜನೆಯನ್ನು ಸ್ವಾಮಿ ವಿವೇಕಾನಂದ (Swami Vivekananda) ಅವರ ಹೆಸರಿನಲ್ಲಿ ಮಾಡುತ್ತಿದ್ದೇವೆ. ಸ್ವಾಮಿ ವಿವೇಕಾನಂದ ಒಬ್ಬ ಸನ್ಯಾಸಿ. ಅವರು ತೊಡುತ್ತಿದ್ದ ಎಲ್ಲಾ ವಸ್ತ್ರಗಳೂ ಕೇಸರಿ. ಹೀಗಾಗಿ ಅವರ ಹೆಸರಿನಲ್ಲಿ ಮಾಡುತ್ತಿರುವ ಯೋಜನೆಯಾದ್ದರಿಂದ ಶಾಲೆಗಳ ಕೊಠಡಿಗೆ ಕೇಸರಿ ಬಣ್ಣ ಹಚ್ಚಲಾಗುತ್ತಿದೆ. ಅದರಲ್ಲಿ ಬೇರೆ ಯಾವುದೇ ಅರ್ಥವಿಲ್ಲ. ವಿವೇಕ ಎಂದರೆ ಎಲ್ಲರಿಗೂ ಜ್ಞಾನ. ಇದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಬೊಮ್ಮಾಯಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಮುಂದಿನ ವಾರದಿಂದ ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ: ಹೆಚ್‌.ಡಿ ದೇವೇಗೌಡ

    Live Tv
    [brid partner=56869869 player=32851 video=960834 autoplay=true]

  • ವಿವೇಕಾನಂದರ ಬಗ್ಗೆ ಅವಹೇಳನಕಾರಿ ಲೇಖನ – ಶಿಕ್ಷಣ ಇಲಾಖೆ ಅಧಿಕಾರಿ ಅಮಾನತು

    ವಿವೇಕಾನಂದರ ಬಗ್ಗೆ ಅವಹೇಳನಕಾರಿ ಲೇಖನ – ಶಿಕ್ಷಣ ಇಲಾಖೆ ಅಧಿಕಾರಿ ಅಮಾನತು

    ರಾಯಚೂರು: ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಸ್ವಾಮಿ ವಿವೇಕಾನಂದರ 150ನೇ ಜಯಂತಿಯಂದು ಅವಹೇಳನಕಾರಿ ಲೇಖನ ಬರೆದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟ ಹಿನ್ನೆಲೆ ಅಮಾನತುಗೊಂಡಿದ್ದಾರೆ.

    ಸನಾವುಲ್ಲಾ ಅಮಾನತಾಗಿರುವ ಅಧಿಕಾರಿ. ಅವರು ಲಿಂಗಸುಗೂರು ತಾಲೂಕಿನಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ(ಸಿಆರ್ ಪಿ) ಆಗಿ ಕೆಲಸ ಮಾಡುತ್ತಿದ್ದರು.

    ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವ್ಯಾಟ್ಸಾಪ್ ಗ್ರೂಪ್‍ನಲ್ಲಿ ವಿವೇಕಾನಂದರ ಬಗ್ಗೆ ಅವಹೇಳನಕಾರಿ ಲೇಖನ ಬರೆದು ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಆರ್ ಪಿ ಸನಾವುಲ್ಲಾನನ್ನು ಅಮಾನತುಗೊಳಿಸಲಾಗಿದೆ ಎಂದು ಡಿಡಿಪಿಐ ಜಿ.ಎಂ. ವೃಷಬೇಂದ್ರಯ್ಯ ತಿಳಿಸಿದ್ದಾರೆ. ಜಿಪಂ ಸಿಇಓ ಆದೇಶದ ಮೇರೆಗೆ ಸನಾವುಲ್ಲಾ ಅವರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಬೆಳಗ್ಗೆ 3-4 ಗಂಟೆಯವರೆಗೆ ನನ್ನ ಮಕ್ಕಳ ಹೋಮ್ ವರ್ಕ್ ಮಾಡಿಸುತ್ತಿದ್ದೆ: ಪ್ರಿಯಾಂಕಾ ಗಾಂಧಿ

    ಸರ್ಕಾರಿ ನೌಕರನಾಗಿ ರಾಷ್ಟ್ರನಾಯಕನ ಬಗ್ಗೆ ಅವಹೇಳನ ಮಾಡಿದ್ದಾರೆ. ಸ್ವಾಮಿ ವಿವೇಕಾನಂದರ ಬಾಲ್ಯ ಜೀವನ, ಬದುಕಿನ ಬಗ್ಗೆ ಅವಹೇಳನ ಮಾಡುವ ಲೇಖನ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದನ್ನೂ ಓದಿ: ಅಕ್ರಮವಾಗಿ ಒತ್ತುವರಿಯಾಗಿದ್ದ ಜಾಗ ಶಾಲೆಗೆ ವಾಪಸ್ – ತಹಶೀಲ್ದಾರ್‌ಗೆ ಗ್ರಾಮಸ್ಥರಿಂದ ಅಭಿನಂದನೆ

  • ಯುವಕರಿಗೆ ಮಾರ್ಗದರ್ಶನ ನೀಡಲು ನೂತನ ಯುವನೀತಿ: ಬೊಮ್ಮಾಯಿ

    ಯುವಕರಿಗೆ ಮಾರ್ಗದರ್ಶನ ನೀಡಲು ನೂತನ ಯುವನೀತಿ: ಬೊಮ್ಮಾಯಿ

    ಬೆಂಗಳೂರು: ಸರ್ಕಾರ ಹೊಸ ಯುವ ನೀತಿಯನ್ನು ತರಲು ಉದ್ದೇಶಿಸಿದ್ದು, ಮುಂಬರುವ ವರ್ಷಗಳಲ್ಲಿ ಈ ನೀತಿ ಯುವಕರಿಗೆ ಮಾದರಿ ರೀತಿಯಲ್ಲಿ ಮಾರ್ಗದರ್ಶನ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಇಂದು ಸ್ವಾಮಿ ವಿವೇಕಾನಂದರ 159 ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವರ್ಚುಯಲ್ ಆಗಿ ಭಾಗವಹಿಸಿ ಮಾತನಾಡಿದ ಅವರು, ಯುವಕರಿಗಾಗಿ ತತ್ವಾಧಾರಿತವಾದಂತಹ ವೈಚಾರಿಕೆ ನೆಲೆಯಲ್ಲಿ ಹೆಚ್ಚಿನ ಬೆಂಬಲ, ಪ್ರೋತ್ಸಾಹ ನೀಡಲು ಸರ್ಕಾರ ಸಿದ್ಧವಿದೆ. ಈ ದಿಸೆಯಲ್ಲಿ ವಿಶೇಷ ಯೋಜನೆಯೊಂದನ್ನು ಮುಂದಿನ ಆಯವ್ಯಯದಲ್ಲಿ ತರಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ನಮ್ಮ ಜೀವನದಲ್ಲಿ ಸ್ವಾಮಿ ವಿವೇಕಾನಂದರು ಸದಾ ಪ್ರಸ್ತುತವಾಗಿರುತ್ತಾರೆ. ಸಾರ್ಥಕತೆಯ ಹಾಗೂ ಸಾಧನೆಯ ಬದುಕನ್ನು ನಡೆಸಿ ಹಾಗೂ ಸಾವಿನ ನಂತರವೂ ಬದುಕುವ ರೀತಿಯನ್ನು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ

    ಸಾಧಕನಿಗೆ ಸಾವು ಅಂತ್ಯವಲ್ಲ:
    ಸ್ವಾಮಿ ವಿವೇಕಾನಂದರ ಲೈಫ್ ಆಫ್ಟರ್ ಡೆತ್ ಎಂಬ ಪುಸ್ತಕವನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ವಿವೇಕಾನಂದರ ಸಾವಿನ ನಂತರದ ಬದುಕು ಎನ್ನುವ ಕಲ್ಪನೆ ಅದ್ಬುತವಾದದ್ದು. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವುದು ಸಾಧನೆ ಎಂಬುದನ್ನು ಪ್ರತಿಪಾದಿಸಿದ್ದರು. ಚೈತನ್ಯಮಯ ಬದುಕಿನ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಸ್ವಾಮಿ ವಿವೇಕಾನಂದರ ಬದುಕಿನ ರೀತಿ ನೀತಿಗಳನ್ನು ಯುವಜನತೆಗೆ ಮನದಟ್ಟು ಮಾಡುವ ಕೆಲಸ ಮಾಡಬೇಕಿದೆ. ಸರ್ಕಾರ ಹಾಗೂ ಸಮಾಜ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ರಾಮಕೃಷ್ಣ ಪರಮಹಂಸ, ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಸಮಾಜಕ್ಕೆ ಪ್ರಚಾರ ಪಡಿಸುವ ಕೆಲಸವನ್ನು ರಾಮಕೃಷ್ಣ ಮಿಷನ್ ಸಂಸ್ಥೆ ಪರಿಣಾಮಕಾರಿಯಾಗಿ ಮಾಡುತ್ತಿದೆ ಎಂದರು.

    ಯುಗಪುರುಷ:
    ಸ್ವಾಮಿ ವಿವೇಕಾನಂದರು ಯುಗಪುರುಷರು. ಯುಗದಲ್ಲಿ ಒಬ್ಬರು ಅತ್ಯಂತ ತೇಜ್ವಸಿಯಾಗಿ ವಿಭಿನ್ನವಾಗಿ ಹುಟ್ಟುತ್ತಾರೆ. ಅವರ ಅರ್ಥಪೂರ್ಣವಾಗಿ ಪುನರ್ ನಾಮಕರಣವನ್ನು ರಾಮಕೃಷ್ಣ ಪರಮಹಂಸರು ಮಾಡಿದ್ದಾರೆ. ಎಲ್ಲಿ ವಿವೇಕ ಇದೆಯೋ ಅಲ್ಲಿ ಆನಂದ ಇದೆ ಎಂದು. ವಿವೇಕ ಎನ್ನುವುದು ಪ್ರತಿ ಮನುಷ್ಯನ ಅಂತರ್ಗತವಾದ ಗುಣಧರ್ಮ. ವಿವೇಕ ಎನ್ನುವುದು ಪ್ರಾಣಿಗಳಿಂದ ಮನುಷ್ಯನನ್ನು ಪ್ರತ್ಯೇಕ ಮಾಡುವುದು. ಈ ವಿವೇಕವನ್ನು ನಾವು ಯಾವ ರೀತಿ, ಯಾವ ದಿಕ್ಕಿನಲ್ಲಿ ಯಾವುದಕ್ಕೆ ಬಳಕೆ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ. ಸ್ವಾಮಿ ವಿವೇಕಾನಂದರು ನಮಗೆ ದಾರಿ ತೋರಿದ್ದಾರೆ. ವಿವೇಕವನ್ನು ಯಾವ ರೀತಿ, ಯಾವುದಕ್ಕೆ ಬಳಸಬೇಕು. ಬದುಕನ್ನು ತನಗಾಗಿ ಬದುಕುವುದು ಸಹಜ. ಪರರಿಗಾಗಿ ಬದುಕುವುದು ಧರ್ಮ ಎಂದು ಸ್ವಾಮಿ ವಿವೇಕಾನಂದರು ತೋರಿಸಿಕೊಟ್ಟಿದ್ದಾರೆ ಎಂದರು.

    ಹಲವು ಆಯಾಮಗಳ ವ್ಯಕ್ತಿತ್ವ:
    ಸ್ವಾಮಿ ವಿವೇಕಾನಂದ ವ್ಯಕ್ತಿತ್ವ ಹಲವು ಆಯಾಮಗಳಿಂದ ಕೂಡಿದೆ. ಕೇವಲ ತತ್ವಜ್ಞಾನ ಧರ್ಮ ಮಾತ್ರವಲ್ಲದೆ, ವಾಸ್ತವಿಕ ಬದುಕಿನ ಮೇಲೆ ಕೂಡ ಬೆಳಕನ್ನು ಚೆಲ್ಲುವ ಕೆಲಸವನ್ನು ಮಾಡಿದ್ದಾರೆ. ಸವಾಲುಗಳನ್ನು ಯಾವ ತತ್ವದ ಆಧಾರದ ಮೇಲೆ ನಾವು ಎದುರಿಸಬೇಕೆನ್ನುವುದನ್ನು ಅವರ ಬದುಕು ಮತ್ತು ವಿಚಾರಧಾರೆಯಲ್ಲಿ ಕಂಡುಕೊಳ್ಳುತ್ತೇವೆ. ಯಾವುದೇ ಒಂದು ವಿಚಾರಕ್ಕೆ ಅವರು ಸೀಮಿತರಾಗಿರಲಿಲ್ಲ. ಸೃಷ್ಟಿಕರ್ತನ ಮೂಲಕ್ಕೆ ಹೋಗಬಹುದೆಂದು ತೋರಿಸಿದ್ದಾರೆ. ಅವರ ಆಲೋಚನೆ ಹಾಗೂ ವಿಚಾರಗಳು ದೇಶ, ಗಡಿಗಳನ್ನು ದಾಟಿ ಅನಂತವಾಗಿತ್ತು. ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ: ಕೇಜ್ರಿವಾಲ್

    ಯುವಶಕ್ತಿಯಲ್ಲಿ ನಂಬಿಕೆ:
    ಯುವಶಕ್ತಿಯಲ್ಲಿ ವಿವೇಕಾನಂದರಿಗೆ ಅಪಾರವಾದ ನಂಬಿಕೆ ಇತ್ತು. ಏನನ್ನಾದರೂ ಸಾಧಿಸಬಹುದಾದರೆ ದೊಡ್ಡ ಬದಲಾವಣೆಯನ್ನು ತಮ್ಮ ಹಾಗೂ ಇತರರ ಬದುಕಿನಲ್ಲಿ ತರಬೇಕಾದರೆ ಅದು ಯೌವ್ವನದಲ್ಲಿ ಮಾತ್ರ ಸಾಧ್ಯ ಎನ್ನುವುದು ಅವರ ಪ್ರಬಲವಾದ ನಂಬಿಕೆ. ಆ ನಂಬಿಕೆಗೆ ಅನುಗುಣವಾಗಿ ಅವರ ಬದುಕನ್ನು ನಡೆಸಿದ್ದರು. ತಮ್ಮ ವಿಭಿನ್ನ ಚಿಂತನೆಯಿಂದ ವೈಚಾರಿಕ ಕ್ರಾಂತಿಯನ್ನು ತರುವ ನಿರ್ಣಯಗಳನ್ನು ಸ್ವಾಮಿ ವಿವೇಕಾನಂದರು ಜೀವನದುದ್ದಕ್ಕೂ ಕೈಗೊಂಡಿದ್ದಾರೆ. ಸಾವಿನ ನಂತರವೂ ಬದುಕಿದ ಮಹಾತ್ಮರಾಗಿದ್ದರು. ಬದುಕಿನ ಯಶಸ್ಸು ಹಾಗೂ ಸಾಧನೆಗಳನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದವರು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಡಾ. ಅಶ್ವತ್ಥ್ ನಾರಾಯಣ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ರಾಮಕೃಷ್ಣ ಮಠದ ಸ್ವಾಮೀಜಿಗಳು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಉಪಸ್ಥಿತರಿದ್ದರು. ಇದನ್ನೂ ಓದಿ: ಕಳೆದ 24 ಗಂಟೆಯ ಅವಧಿಯಲ್ಲಿ ಯೋಗಿ ಸರ್ಕಾರದ ಎರಡು ಮಂತ್ರಿಗಳು ರಾಜೀನಾಮೆ

     

  • ಕಾಫಿನಾಡಿನಲ್ಲಿ ಚರ್ಚೆಗೆ ಗ್ರಾಸವಾಗಿದ್ದ ವಿವೇಕಾನಂದ ಮೂರ್ತಿಗೆ ಮುಕ್ತಿ

    ಕಾಫಿನಾಡಿನಲ್ಲಿ ಚರ್ಚೆಗೆ ಗ್ರಾಸವಾಗಿದ್ದ ವಿವೇಕಾನಂದ ಮೂರ್ತಿಗೆ ಮುಕ್ತಿ

    ಚಿಕ್ಕಮಗಳೂರು: ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನಗರದ ದಂಟರಮಕ್ಕಿ ಕೆರೆ ಮಧ್ಯೆಯಲ್ಲಿದ್ದ ಸ್ವಾಮಿ ವಿವೇಕಾನಂದರ ಮೂರ್ತಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.

    ಸ್ವಾಮಿ ವಿವೇಕಾನಂದ ಮೂರ್ತಿ ನಿರ್ಮಾಣಗೊಂಡು ವರ್ಷಗಳೇ ಕಳೆದಿದ್ದರೂ ವಿರೂಪಗೊಂಡಿದ್ದ ಮೂರ್ತಿಯನ್ನು ಬದಲಿಸಲು ಯಾರೂ ಮುಂದಾಗಿರಲಿಲ್ಲ. ಅಲ್ಲಲ್ಲೇ ಪ್ಯಾಚ್ ವರ್ಕ್ ಮೂಲಕ ಅದೇ ಮೂರ್ತಿಯನ್ನು ಪುನಃ ಸರಿ ಮಾಡಿದ್ದರು. ಆದರೆ ಆ ಮೂರ್ತಿಯ ಬಣ್ಣ, ನಿಂತ ಭಂಗಿ ನೋಡಿ ವಿವೇಕಾನಂದರದ್ದು ಎಂದಷ್ಟೇ ಹೇಳಬಹುದಿತ್ತೋ ವಿನಃ. ಅದನ್ನು ಯಾರೂ ಕೂಡ ವಿವೇಕಾನಂದರು ಎಂದು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.

    ಈ ಮೂರ್ತಿಯನ್ನು ಕಂಡ ಸ್ಥಳೀಯರು ಹಾಗೂ ಪ್ರವಾಸಿಗರು ವಿವೇಕಾನಂದರ ಮೂರ್ತಿಗೆ ಮನಬಂದತೆ ವಿಶ್ಲೇಷಿಸಿದ್ದರು. ಕಳೆದೊಂದು ವಾರದಿಂದಂತೂ ಸಾಮಾಜಿಕ ಜಾಲತಾಣದಲ್ಲಿ ಯುವಸಮೂಹ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಹಾಗಾಗಿ ಇಂದು ಆ ಮೂರ್ತಿಯನ್ನು ನೆಲಸಮಗೊಳಿಸಿದ್ದು ಫೈಬರ್ ನಿಂದ ಸಿದ್ಧಗೊಂಡಿರೋ ಹೊಸ ಮೂರ್ತಿಯನ್ನು ಅದೇ ಜಾಗದಲ್ಲಿ ಪ್ರತಿಷ್ಠಾಪಿಸುವುದಾಗಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ವಿವೇಕಾನಂದರ ಮೂರ್ತಿ ನಿರ್ಮಾಣದಲ್ಲಿ ಮುಂದಾಳತ್ವ ವಹಿಸಿದ್ದ ಮುತ್ತಯ್ಯ ಸ್ಪಷ್ಟಪಡಿಸಿದ್ದಾರೆ.

    ಸರ್ಕಾರದ ಹಣ ಬಳಸಿಲ್ಲ ಸಿ.ಟಿ.ರವಿ: ಯಾವಾಗ ಸಾಮಾಜಿಕ ಜಾಲತಾಣದಲ್ಲಿ ವಿವೇಕಾನಂದರ ಮೂರ್ತಿ ಬಗ್ಗೆ ಯುವಸಮೂಹ ತೀವ್ರ ಆಕ್ರೋಶ ವ್ಯಕ್ತಪಡಿಸಲು ಮುಂದಾದರೋ ಸಚಿವ ಸಿ.ಟಿ.ರವಿ ಕೂಡ ಫೇಸ್‍ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದರು. ಈ ಪ್ರತಿಮೆ ಖಾಸಗಿ ಸಹಭಾಗಿತ್ವ ಹಾಗೂ ಸ್ಥಳೀಯ ದಾನಿಗಳಿಂದ ನಿರ್ಮಾಣಗೊಂಡಿದ್ದು. ಇದಕ್ಕೆ ಸರ್ಕಾರದ ಒಂದೇ ಒಂದು ರೂಪಾಯಿ ಕೂಡ ಬಳಸಿಲ್ಲ. ಕಳಪೆ ಕಾಮಗಾರಿ ಹಾಗೂ ಮೂರ್ತಿಯ ರೂಪದ ಬಗ್ಗೆ ಎಲ್ಲರಲ್ಲೂ ಅಸಮಾಧಾನವಿದೆ. ಆದರೆ ಕೆಲಸ ಮಾಡಲು ಬಂದ ಗುತ್ತಿಗೆದಾರ ಹಣ ಪಡೆದು ಪರಾರಿಯಾಗಿದ್ದಾನೆ. ಕಂಟ್ರಾಕ್ಟರ್, ಸಬ್ ಕಂಟ್ರಾಕ್ಟರ್ ಗಳು ಕೆಲಸ ಮಾಡಿಲ್ಲ. ಹಾಗಾಗಿ ಇಂದು ಮೂರ್ತಿ ಈ ಹಂತ ತಲುಪಿದೆ. ಇದರಲ್ಲಿ ಸರ್ಕಾರದ ಹಣ ನಯಾ ಪೈಸೆಯೂ ಖರ್ಚಾಗಿಲ್ಲ. ಅಷ್ಟೆ ಅಲ್ಲದೆ ಮೂರ್ತಿಯ ಬಗೆಗಿನಿ ನಿಮ್ಮ ಮನದಾಳದ ಸೂಕ್ಷ್ಮತೆ ನನಗೂ ಗೊತ್ತು ಎಂದಿದ್ದರು.

    ಮೂರ್ತಿ ನಿರ್ಮಾಣದಲ್ಲಿ ಸಿ.ಟಿ.ರವಿ ಪಾತ್ರವಿಲ್ಲ: ಪ್ರವಾಸೋದ್ಯಮ ಸಚಿವರ ತವರಲ್ಲಿ ಊರ ಮಧ್ಯೆ ಇರೋ ಕೆರೆಯಲ್ಲಿನ ಮೂರ್ತಿಗೆ ಬಗ್ಗೆ ಸ್ಥಳಿಯರು ಹಾಗೂ ಪ್ರವಾಸಿಗರು ಸರ್ಕಾರ ಹಾಗೂ ಸಚಿವ ಸಿ.ಟಿ.ರವಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯೂಥ್ ಐಕಾನ್ ವಿವೇಕಾನಂದರ ವಿರೂಪ ನಿರ್ಮಾಣದ ವಿರುದ್ಧ ಸಚಿವರ ವಿರುದ್ಧವೂ ಜನ ಆಕ್ರೋಶ ಹೊರಹಾಕಿದ್ದರು. ಆದರೆ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ಈ ಮೂರ್ತಿ ನಿರ್ಮಾಣದಲ್ಲಿ ಸಚಿವರ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಊರಿಗೆ ಒಳ್ಳೆಯದಾಗಿ ಎಂದು ನಾನೇ ಈ ಮೂರ್ತಿ ನಿರ್ಮಾಣಕ್ಕೆ ಮುಂದಾಗಿದ್ದು. ಮೂರ್ತಿಯ ಸ್ಥಿತಿ ಕಂಡು ನನಗೂ ನೋವಾಗಿದೆ. ಇದರಿಂದ ನಾನು ವೈಯಕ್ತಿಕವಾಗಿಯೂ ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ಶೀಘ್ರದಲ್ಲೇ ಆ ಜಾಗದಲ್ಲಿ ಹೊಸ ಮೂರ್ತಿ ಪ್ರತಿಷ್ಠಾಪಿಸುದುವುದಾಗಿ ಸ್ಪಷ್ಟನೆ ನೀಡಿದ್ದಾರೆ.

  • ವಿಶ್ವದ ಅತೀ ಎತ್ತರದ ಸ್ವಾಮಿ ವಿವೇಕಾನಂದ ಮೂರ್ತಿ ಲೋಕಾರ್ಪಣೆ – ಧ್ಯಾನದ ಜೊತೆ ಚಿಕಿತ್ಸೆಯೂ ಲಭ್ಯ

    ವಿಶ್ವದ ಅತೀ ಎತ್ತರದ ಸ್ವಾಮಿ ವಿವೇಕಾನಂದ ಮೂರ್ತಿ ಲೋಕಾರ್ಪಣೆ – ಧ್ಯಾನದ ಜೊತೆ ಚಿಕಿತ್ಸೆಯೂ ಲಭ್ಯ

    ಉಡುಪಿ: ವಿಶ್ವದ ಅತೀ ಎತ್ತರದ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಉಡುಪಿ ಜಿಲ್ಲೆ ಕೋಟದ ಮೂಡುಗಿಳಿಯಾರಿನಲ್ಲಿ ಸ್ಥಾಪಿಸಲಾಗಿದೆ. ಪ್ರತಿಮೆ 35 ಅಡಿ ಎತ್ತರವಿದ್ದು ಕನ್ಯಾಕುಮಾರಿಯಲ್ಲಿ ಇರುವ ವಿವೇಕಾನಂದ ಮೂರ್ತಿಯ ಎತ್ತರದ ದಾಖಲೆಯನ್ನು ಮೀರಿದೆ.

    ಉಡುಪಿಯ ಕೋಟದಲ್ಲಿರುವ ಡಿವೈನ್ ಪಾರ್ಕ್ ಟ್ರಸ್ಟ್ ಸರ್ವ ಕ್ಷೇಮ ಆಸ್ಪತ್ರೆ ನಿರ್ಮಿಸಿದೆ. ಚಿಕಿತ್ಸಾಕೇಂದ್ರ- ಧ್ಯಾನಕೇಂದ್ರದ ಆವರಣದಲ್ಲಿ ಅತೀ ಎತ್ತರದ ವಿವೇಕಾನಂದ ಮೂರ್ತಿ ನಿರ್ಮಾಣ ಮಾಡಲಾಗಿದೆ. ಆಸ್ಪತ್ರೆ ಪ್ರಾಚೀನ ದೇಗುಲದ ವಾಸ್ತು ವಿನ್ಯಾಸವನ್ನು ಹೊಂದಿದ್ದು, ಆಯುಷ್ ವಿಭಾಗ ಕೂಡ ಬಹಳ ವಿಶಿಷ್ಟವಾಗಿದೆ.

    ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು ಕರಾವಳಿಯ ಪ್ರಾಚೀನ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಪ್ರಕೃತಿ, ಯೋಗ, ಆಹಾರ, ಆಧ್ಯಾತ್ಮಿಕ, ಸಂಗೀತ, ಹಸಿರು, ಹಾಸ್ಯ, ಮೌನ ಚಿಕಿತ್ಸೆ ಹೀಗೆ ಬೇರೆ ಬೇರೆ ವಿಭಾಗಗಳನ್ನು ಮಾಡಿ ಎಲ್ಲಾ ಚಿಕಿತ್ಸೆಯನ್ನು ಒದಗಿಸುವ ಉದ್ದೇಶವನ್ನು ಆಸ್ಪತ್ರೆ ಇಟ್ಟುಕೊಂಡಿದೆ. ಪರಿಸರ ಸ್ನೇಹಿ ಆಸ್ಪತ್ರೆ ಇದಾಗಿದ್ದು, ಸೋಲಾರ್ ವ್ಯವಸ್ಥೆ ಇದೆ. ಸೈಕಲ್ ಟ್ರ್ಯಾಕ್ ಕೂಡ ನಿರ್ಮಾಣಗೊಂಡಿದೆ.

    ವ್ಯಕ್ತಿತ್ವ ನಿರ್ಮಾಣ ಹಾಗೂ ರಾಷ್ಟ್ರೋತ್ಥಾನದ ಬೇರೆ ಬೇರೆ ಯೋಜನೆಗಳಲ್ಲಿ ಆಧ್ಯಾತ್ಮ, ಆರೋಗ್ಯ, ಯೋಗದ ಮಹಿಮೆಯನ್ನು ತಿಳಿಸಿಕೊಡುವ ಕಾರ್ಯಕ್ರಮಗಳನ್ನು ಇವರೆಗೆ ಡಿವೈನ್ ಪಾರ್ಕ್ ಹಮ್ಮಿಕೊಳ್ಳಲಾಗುತ್ತಿತ್ತು. ಇದೀಗ ಈ ವಿಭಾಗ ಸೇರಿಕೊಂಡಿದೆ.

    ಜಗತ್ತಿನಲ್ಲೇ ಅತಿ ಎತ್ತರದ ಸ್ವಾಮಿ ವಿವೇಕಾನಂದ ಪ್ರತಿಮೆಯಾಗಿದ್ದು, 35 ಅಡಿ ಎತ್ತರ ಇದೆ. ಪ್ರತಿಮೆಗೆ ವಿಶೇಷವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಹಸಿರು ಹುಲ್ಲು ಹಾಸಿನ ನಡುವೆ ಹೂವಿನ ದಳವಿರುವ ಡಿಸೈನ್ ಕೊಳದ ನಡುವೆ ಮೂರ್ತಿ ಇರಿಸಲಾಗಿದೆ. ವಿವೇಕಾನಂದರ ಮೂರ್ತಿ ಸುತ್ತ ವಿಶಾಲವಾದ ಜಾಗವಿದ್ದು, ಅಲ್ಲಿ ಸಂಗೀತ, ಧ್ಯಾನ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಸಂಸ್ಥೆಯ ಮುಖ್ಯಸ್ಥ ವಿವೇಕ್ ಉಡುಪ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

  • ವಿವೇಕಾನಂದರ ಆದರ್ಶಗಳನ್ನು ನಾವೆಲ್ಲ ಅನುಸರಿಸೋಣ: ಗೋವಿಂದ ಕಾರಜೋಳ

    ವಿವೇಕಾನಂದರ ಆದರ್ಶಗಳನ್ನು ನಾವೆಲ್ಲ ಅನುಸರಿಸೋಣ: ಗೋವಿಂದ ಕಾರಜೋಳ

    ಬಾಗಲಕೋಟೆ: ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಅಂಗವಾಗಿ ಬಾಗಲಕೋಟೆ ಜಿಲ್ಲಾಡಳಿತ ಆಯೋಜಿಸಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿಸಿಎಂ ಕಾರಜೋಳ, ವಿವೇಕಾನಂದ ಅವರು ಯುವಜನತೆಯ ಆಶಾಕಿರಣ ಎಂದು ಹೇಳಿದ್ದಾರೆ.

    ಯುವ ಶಕ್ತಿಯ ಪ್ರಾಮುಖ್ಯತೆ ಬಹಳಷ್ಟಿದೆ. ಸದಾ ಪರಿಶ್ರಮ, ಶ್ರದ್ಧೆ, ನಿರಂತರ ಪ್ರಯತ್ನದಿಂದ ಸಾಧನೆ ಮಾಡಬಹುದು, ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರೀ ಎನ್ನುವ ಸಂದೇಶದೊಂದಿಗೆ ಯುವ ಸಮೂಹಕ್ಕೆ ಪ್ರೇರೆಪಿಸಿದ್ದಾರೆ. ಇಡೀ ಪ್ರಪಂಚವನ್ನೆಲ್ಲಾ ಪರ್ಯಟನೆ ಮಾಡಿ, ವಿದೇಶಗಳು ಶಿಕ್ಷಣದಿಂದ ಅಭಿವೃದ್ಧಿಯಾಗುತ್ತಿವೆ. ಅದೇ ಮಾದರಿಯಲ್ಲಿ ನಮ್ಮ ದೇಶವು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು ಎನ್ನುವುದು ವಿವೇಕಾನಂದ ಅವರ ಆಶಯವಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

    ಶೇ.35 ರಷ್ಟು ಯುವ ಶಕ್ತಿಯನ್ನು ಹೊಂದಿರುವ ಭಾರತವು ಸಬಲೀಕರಣವಾಗಲು ಎಲ್ಲರೂ ಉನ್ನತ ಶಿಕ್ಷಣ ಪಡೆಯಬೇಕು. ಯಾವುದೇ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೆ ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಭಾರತವು ವಿಶ್ವಗುರುವಾಗುವಷ್ಟು ಯುವ ಶಕ್ತಿಯನ್ನು ಹೊಂದಿದೆ. ವಿವೇಕಾನಂದ ಅವರ ಆಯಶದಂತೆ ಯುವಕರು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಯುವಜನೆತೆಗೆ ಕರೆಕೊಟ್ಟರು.

    ರಾಜ್ಯದಲ್ಲಿ 2.5 ಲಕ್ಷ ರೂ. ಗಿಂತ ಕಡಿಮೆ ಆದಾಯವಿರುವ 430 ಸರ್ಕಾರಿ ಪದವಿ ಕಾಲೇಜುಗಳ 2.48 ಲಕ್ಷ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಗುವುದು ಎಂದು ತಿಳಿಸಿ, ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿದರು. ಸಮಾರಂಭದಲ್ಲಿ ಸಂಸದರಾದ ಶ್ರೀ ಪಿ.ಸಿ. ಗದ್ದಿಗೌಡರ್, ಶಾಸಕರಾದ ಶ್ರೀ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ಎಸ್.ಪಿ ಲೋಕೇಶ್, ಸಿಇಓ ಗಂಗೂಬಾಯಿ ಮಾನಕರ್ ಮತ್ತಿತರರು ಉಪಸ್ಥಿತರಿದ್ದರು.