Tag: ಸ್ವಾಮಿ ಪ್ರಸಾದ್ ಮೌರ್ಯ

  • ಭಾರತ ಹಿಂದೂ ರಾಷ್ಟ್ರವಲ್ಲ, ಆಗಿರಲೂ ಇಲ್ಲ: RSS ವಿರುದ್ಧ ಎಸ್‌ಪಿ ನಾಯಕ ಕಿಡಿ

    ಭಾರತ ಹಿಂದೂ ರಾಷ್ಟ್ರವಲ್ಲ, ಆಗಿರಲೂ ಇಲ್ಲ: RSS ವಿರುದ್ಧ ಎಸ್‌ಪಿ ನಾಯಕ ಕಿಡಿ

    ನವದೆಹಲಿ: ಭಾರತ ಎಂದಿಗೂ ಹಿಂದೂ ರಾಷ್ಟ್ರವಲ್ಲ, ಹಿಂದೂ ರಾಷ್ಟ್ರ ಆಗಿರಲೂ ಇಲ್ಲ ಎಂದು ಸಮಾಜವಾದಿ ಪಕ್ಷದ (SP) ನಾಯಕ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya), ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಕಿಡಿ ಕಾರಿದ್ದಾರೆ.

    ಭಾರತವು ಹಿಂದೂ ರಾಷ್ಟ್ರ ಎಂದು ಹೇಳಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ವಿರುದ್ಧ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಟ್ವೀಟ್‌ ಮೂಲಕವೇ ತಿರುಗೇಟು ಕೊಟ್ಟಿದ್ದಾರೆ.

    ಭಾರತ ಹಿಂದೂ ರಾಷ್ಟ್ರ ಅಲ್ಲ, ಅದು ಎಂದಿಗೂ ಹಿಂದೂ ರಾಷ್ಟ್ರ ಆಗಿರಲಿಲ್ಲ. ಭಾರತವು ಅಂತರ್ಗತವಾಗಿ ಒಂದು ಬಹುತ್ವದ ದೇಶವಾಗಿದೆ. ನಮ್ಮ ಸಂವಿಧಾನವು ಜಾತ್ಯತೀತ ರಾಷ್ಟ್ರದ ಪರಿಕಲ್ಪನೆ ಆಧಾರದಲ್ಲಿ ರಚನೆಯಾಗಿದೆ. ಭಾರತದಲ್ಲಿ ಇರುವ ಎಲ್ಲಾ ಜನರೂ ಭಾರತೀಯರೇ. ನಮ್ಮ ಭಾರತೀಯ ಸಂವಿಧಾನವು ಎಲ್ಲಾ ಧರ್ಮ, ನಂಬಿಕೆಗಳು, ಪಂಥ ಹಾಗೂ ಸಂಸ್ಕೃತಿಗಳ ಪ್ರಾತಿನಿಧಿತ್ವ ಪ್ರತಿನಿಧಿಸುತ್ತದೆ ಎಂದು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ಮೋಹನ್‌ ಭಾಗವತ್ ಹೇಳಿದ್ದೇನು?
    ನಾಗಪುರದಲ್ಲಿ ಮಧುಕರ ಭವನ ಉದ್ಘಾಟಿಸಿ ಮಾತನಾಡಿದ್ದ ಮೋಹನ್ ಭಾಗವತ್, ಭಾರತವು ಒಂದು ಹಿಂದೂ ರಾಷ್ಟ್ರ. ಎಲ್ಲಾ ಭಾರತೀಯರೂ ಹಿಂದೂಗಳು ಮತ್ತು ಹಿಂದೂಗಳು ಎಲ್ಲಾ ಭಾರತೀಯರನ್ನ ಪ್ರತಿನಿಧಿಸುತ್ತಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಪೋರ್ಟ್‌ ಮಾಡ್ತಿದ್ದಾರೆ ʻಐರಾವತʼಬೆಡಗಿ – ಊರ್ವಶಿ ರೌಟೇಲಾ ಕಾಲೆಳೆದ ಟ್ರೋಲ್‌ ಗೆಳೆಯರು

    ಹಿಂದೂಸ್ತಾನವು ಒಂದು ಹಿಂದೂ ದೇಶ ಮತ್ತು ಇದು ವಾಸ್ತವ. ಸೈದ್ಧಾಂತಿಕವಾಗಿ, ಎಲ್ಲಾ ಭಾರತೀಯರೂ ಹಿಂದೂಗಳು ಮತ್ತು ಹಿಂದೂಗಳು ಎಂದರೆ ಭಾರತೀಯರು. ಭಾರತದಲ್ಲಿ ಇಂದು ಇರುವವರೆಲ್ಲರೂ ಹಿಂದೂ ಸಂಸ್ಕೃತಿಗೆ, ಹಿಂದೂ ಪೂರ್ವಜರಿಗೆ ಮತ್ತು ಹಿಂದೂ ಭೂಮಿಗೆ ಸಂಬಂಧಿಸಿದವರು. ಇದಕ್ಕಿಂತ ಬೇರೇನೂ ಅಲ್ಲ ಎಂದು ತಿಳಿಸಿದ್ದರು.

    ಅಸ್ಸಾಂನ ಗುವಾಹಟಿಯಲ್ಲಿನ ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದ ಭಾಗವತ್, ಇಂಡಿಯಾ ಹೆಸರಿನ ಬದಲು ದೇಶವನ್ನ ಭಾರತ ಎಂಬ ಹೆಸರಿನಿಂದ ಕರೆಯಬೇಕು. ಏಕೆಂದರೆ ಭಾರತ ಎನ್ನುವುದು ಬಹಳ ಪುರಾತನ ಕಾಲದಿಂದ ಇದೆ ಅಂತ ಹೇಳಿದ್ದರು. ಇದನ್ನೂ ಓದಿ: Asia Cup 2023: ಕೈಕೊಟ್ಟ ಕೊಹ್ಲಿ, ರೋಹಿತ್‌, ಗಿಲ್‌ – ಪಾಕಿಸ್ತಾನಕ್ಕೆ 267 ರನ್‌ ಗುರಿ ನೀಡಿದ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುಪಿ 3ನೇ ಸಚಿವ ರಾಜೀನಾಮೆ – ರಾಜೀನಾಮೆ ನೀಡಿದ ಶಾಸಕರ ಸಂಖ್ಯೆ 9ಕ್ಕೆ ಏರಿಕೆ

    ಯುಪಿ 3ನೇ ಸಚಿವ ರಾಜೀನಾಮೆ – ರಾಜೀನಾಮೆ ನೀಡಿದ ಶಾಸಕರ ಸಂಖ್ಯೆ 9ಕ್ಕೆ ಏರಿಕೆ

    ಲಕ್ನೋ: ಪ್ರಭಾವಿ ಒಬಿಸಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ರಾಜೀನಾಮೆ ಬಳಿಕ ಉತ್ತರ ಪ್ರದೇಶ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ. ಈ ಬೆಳವಣಿಗೆ ಬೆನ್ನಲ್ಲೆ ಬಿಜೆಪಿಯ ಮತ್ತೋರ್ವ ಸಚಿವ ಡಾ. ಧರಮ್ ಸಿಂಗ್ ಸೈನಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಹೊರ ಬಂದಿದ್ದಾರೆ.

    ಸ್ವಾಮಿ ಪ್ರಸಾದ್ ಬಳಿಕ ಒಂಬತ್ತು ಮಂದಿ ಶಾಸಕರು ಹಾಗೂ ಸಚಿವರು ರಾಜೀನಾಮೆ ನೀಡಿದ್ದರು. ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿ ತೊರೆದ ನಂತರ ಧರಂ ಸಿಂಗ್ ಸೈನಿ, ಮುಖೇಶ್ ವರ್ಮಾ, ವಿನಯ್ ಶಾಕ್ಯಾ, ರೋಷನ್ ಲಾಲ್ ವರ್ಮಾ, ಬ್ರಜೇಶ್ ಪ್ರಜಾಪತಿ, ಭಗವತಿ ಸಾಗರ್, ದಾರಾ ಸಿಂಗ್ ಚೌಹಾಣ್, ಅವತಾರ್ ಸಿಂಗ್ ಭದಾನ ಅವರು ರಾಜೀನಾಮೆ ನೀಡಿದ್ದಾರೆ.

    ಧರಮ್ ಸಿಂಗ್ ಸೈನಿ ರಾಜೀನಾಮೆ ನೀಡಿದ ಬಳಿಕ ಎಸ್‍ಪಿ ನಾಯಕ ಅಖಿಲೇಶ್ ಸಿಂಗ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೆ ಮತ್ತೋರ್ವ ಶಾಸಕ ರಾಜೀನಾಮೆ ನೀಡಿ ಬಿಜೆಪಿಯಿಂದ ಹೊರಬಂದಿದ್ದಾರೆ. ಫಿರೋಜಾಬಾದ್ ಜಿಲ್ಲೆಯ ಶಿಕೋಹಬ್ದ್‍ನ ಶಾಸಕ ಮುಖೇಶ್ ವರ್ಮಾ ಈಗ ರಾಜೀನಾಮೆ ನೀಡಿದ ಏಳನೇ ಶಾಸಕ ಆಗಿದ್ದು, ಅವರು ಸ್ವಾಮಿ ಪ್ರಸಾದ್ ಮೌರ್ಯ ಹಾದಿಯನ್ನು ಹಿಡಿದಿದ್ದು ಸಮಾಜವಾದಿ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು: ಯೋಗಿ ಆದಿತ್ಯನಾಥ್

    ರಾಜೀನಾಮೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಸ್ವಾಮಿ ಪ್ರಸಾದ್ ಮೌರ್ಯ ನಮ್ಮ ನಾಯಕ, ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಬೆಂಬಲಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ನಾಯಕರು ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

    ಯೋಗಿ ಆದಿತ್ಯನಾಥ್ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ದುರ್ಬಲ ವರ್ಗಗಳು, ಯುವಕರು, ರೈತರು, ದಲಿತರು ಮತ್ತು ಒಬಿಸಿಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ವರ್ಮಾ ಆರೋಪಿಸಿದ್ದಾರೆ. ಆಡಳಿತದಲ್ಲಿ ಸಣ್ಣ ವ್ಯಾಪಾರಿಗಳು, ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಅಸಮಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕಳೆದ 24 ಗಂಟೆಯ ಅವಧಿಯಲ್ಲಿ ಯೋಗಿ ಸರ್ಕಾರದ ಎರಡು ಮಂತ್ರಿಗಳು ರಾಜೀನಾಮೆ

  • ಯೋಗಿ, ಬಿಜೆಪಿಗೆ ಬಿಗ್‌ ಶಾಕ್‌ – ಸಚಿವ ಸೇರಿ 4 ಶಾಸಕರು ರಾಜೀನಾಮೆ, ಇಂದು ಎಸ್‌ಪಿ ಸೇರ್ಪಡೆ

    ಯೋಗಿ, ಬಿಜೆಪಿಗೆ ಬಿಗ್‌ ಶಾಕ್‌ – ಸಚಿವ ಸೇರಿ 4 ಶಾಸಕರು ರಾಜೀನಾಮೆ, ಇಂದು ಎಸ್‌ಪಿ ಸೇರ್ಪಡೆ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಚುನಾವಣೆಗೂ ಮುನ್ನ ಯೋಗಿ ಆದಿತ್ಯನಾಥ್‌ ಮತ್ತು ಬಿಜೆಪಿಗೆ ಆಘಾತ ಎದುರಾಗಿದೆ. ಬಿಜೆಪಿಯ ಸಚಿವರೊಬ್ಬರು ಹಾಗೂ ನಾಲ್ವರು ಶಾಸಕರು ಪಕ್ಷವನ್ನು ತೊರೆದು ಇಂದು ಸಮಾಜವಾದಿ ಪಕ್ಷ (ಎಸ್‌ಪಿ) ಸೇರಲಿದ್ದಾರೆ.

    ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸ್ವಾಮಿ ಪ್ರಸಾದ್‌ ಮೌರ್ಯ ಅವರು ರಾಜೀನಾಮೆ ಪತ್ರವನ್ನು ಪೋಸ್ಟ್‌ ಮಾಡಿದ್ದಾರೆ. ಈ ಕುರಿತು ಸ್ವತಃ ಅವರೇ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇವರ ಆಪ್ತರೆಂದೇ ಗುರುತಿಸಿಕೊಂಡಿರುವ ರೋಷನ್‌ ಲಾ ವರ್ಮಾ, ಬ್ರಿಜೇಶ್‌ ಪ್ರಜಾಪತಿ, ಭಾಗ್ವತಿ ಸಾಗರ್‌, ವಿನಯ್‌ ಶಂಕ್ಯಾ ಅವರು ಸಹ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊರೊನಾ ಪಾಸಿಟಿವ್

    ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯದ ಪ್ರಭಾವಿ ನಾಯಕನಾಗಿರುವ ಸ್ವಾಮಿ ಪ್ರಸಾದ್‌ ಮೌರ್ಯ ಅವರು ಮಾಯಾವತಿ ನಾಯಕತ್ವದ ಬಿಎಸ್‌ಪಿ ತೊರೆದು 2016ರಲ್ಲಿ ಬಿಜೆಪಿ ಸೇರಿದ್ದರು. ಒಬಿಸಿ ಮತದಾರರನ್ನು ಸೆಳೆಯಲು ಹಾಗೂ ಅಖಿಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷದ ವಿರುದ್ಧ ಪ್ರಬಲ ಪೈಪೋಟಿ ನೀಡುವ ಬಿಜೆಪಿ ಯೋಜನೆಗಳಿಗೆ ಮೌರ್ಯ ಪ್ರಮುಖ ವ್ಯಕ್ತಿಯಾಗಿದ್ದರು.

    ಇತರೆ ಮೂವರು ನಾಯಕರು ಸಹ ಮೌರ್ಯ ಅವರ ಹಾದಿಯಲ್ಲೇ ನಡೆದಿದ್ದಾರೆ. ಬಿಎಸ್‌ಪಿಯಿಂದ ಬಿಜೆಪಿಗೆ ಈಗ ಸಮಾಜವಾದಿ ಪಕ್ಷಕ್ಕೆ ಸೇರಲಿದ್ದಾರೆ. ಇದನ್ನೂ ಓದಿ: ಕೊರೊನಾ ಸೋಂಕು ಏರಿಕೆ ಮಧ್ಯೆ ಸಿಹಿ ಸುದ್ದಿ – ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ

    ಭಿನ್ನ ಸಿದ್ಧಾಂತರದ ಹೊರತಾಗಿಯೂ ಯೋಗಿ ಆದಿತ್ಯನಾಥ್‌ ಸಂಪುಟದಲ್ಲಿ ನಾನು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ್ದೇನೆ. ಆದರೆ ದಲಿತರು, ಒಬಿಸಿಗಳು, ರೈತರು, ನಿರುದ್ಯೋಗಿಗಳು ಮತ್ತು ಸಣ್ಣ ಉದ್ಯಮಿಗಳ ಮೇಲೆ ಆಗುತ್ತಿರುವ ತೀವ್ರ ದಬ್ಬಾಳಿಕೆಯಿಂದಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಚಿವ ಮೌರ್ಯ ಸ್ಪಷ್ಟಪಡಿಸಿದ್ದಾರೆ.

    ನನ್ನ ನಿರ್ಗಮನದಿಂದ ಬಿಜೆಪಿ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು 2022ರ ವಿಧಾನಸಭಾ ಚುನಾವಣೆಯ ನಂತರ ಸ್ಪಷ್ಟವಾಗುತ್ತದೆ ಎಂದು ಸಹ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಓಮಿಕ್ರಾನ್‌ ಹರಡುತ್ತೆ, ಬೂಸ್ಟರ್‌ನಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ: ICMR ವೈದ್ಯ

    ಮೌರ್ಯ ಅವರೊಂದಿಗೆ ಇರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಚಿಕೊಂಡಿರುವ ಅಖಿಲೇಶ್‌ ಯಾದವ್‌, ಮೌರ್ಯ ಅವರಿಗೆ ಹಾಗೂ ಅವರ ಬೆಂಬಲಿಗರಿಗೆ ಸಮಾಜವಾದಿ ಪಕ್ಷಕ್ಕೆ ಆತ್ಮೀಯ ಸ್ವಾಗತ ಎಂದು ಪೋಸ್ಟ್‌ ಮಾಡಿದ್ದಾರೆ.

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧದ ಅಸಮಾಧಾನವು ಬಿಜೆಪಿಗೆ ಬಗೆಹರಿಸಲಾಗದ ಸಮಸ್ಯೆ ಎಂಬ ಅಭಿಪ್ರಾಯವನ್ನು ನಿರ್ಗಮನಗಳು ಬಲಪಡಿಸುತ್ತಿವೆ. ಎರಡು ತಿಂಗಳ ಹಿಂದೆ ಯೋಗಿ ಆದಿತ್ಯನಾಥ್‌ ವಿರುದ್ಧ ಅಮಿತ್‌ ಶಾಗೆ ಮೌರ್ಯ ದೂರು ನೀಡಿದ್ದರು. ಆದರೆ ಅದರಿಂದ ಏನೂ ಆಗಿಲ್ಲ ಎಂದು ವರದಿಯಾಗಿದೆ.

  • ಯುಪಿ ಬಿಜೆಪಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

    ಯುಪಿ ಬಿಜೆಪಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

    ಲಕ್ನೋ: ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನವೇ ಉತ್ತರ ಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಬಿಜೆಪಿ ಪಕ್ಷ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

    ಯೋಗಿ ಆದಿತ್ಯನಾಥ್ ಸರ್ಕಾರವು ದಲಿತರು, ರೈತರು, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳು ಮತ್ತು ನಿರುದ್ಯೋಗಿ ಯುವಕರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ವಾಮಿ ಪ್ರಸಾದ್ ಮೌರ್ಯ ಆರೋಪಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಕ್ವಾರಂಟೈನ್‍ನಲ್ಲಿದ್ದವರಿಗೆ ಆನ್‍ಲೈನ್ ಯೋಗ ಕ್ಲಾಸ್: ಕೇಜ್ರಿವಾಲ್

    ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿದ್ದು, ಮೌರ್ಯ ಅವರು ಯಾವಾಗಲೂ ಸಮಾಜದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಾರೆ ಮತ್ತು ಜನಸಾಮಾನ್ಯರಲ್ಲಿ ಚಿರಪರಿಚಿತರಾಗಿದ್ದಾರೆ. ನಾನು ಅವರನ್ನು ಮತ್ತು ಇತರ ನಾಯಕರು, ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಸಮಾಜವಾದಿ ಪಕ್ಷಕ್ಕೆ ಸ್ವಾಗತ ಕೋರುತ್ತೇನೆ ಎಂದು ಹೇಳಿದ್ದಾರೆ.

    ಉತ್ತರ ಪ್ರದೇಶದಲ್ಲಿ ಫೆಬ್ರವರಿ 7 ರಿಂದ ಏಳು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ:  ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ