Tag: ಸ್ವಾತಂತ್ರ್ಯ ದಿಚಾಚರಣೆ

  • ಲಡಾಖ್‍ನಲ್ಲಿ ಸೈನಿಕರೊಂದಿಗೆ ಧೋನಿ ಸ್ವಾತಂತ್ರ್ಯ ದಿನದ ಸಂಭ್ರಮ

    ಲಡಾಖ್‍ನಲ್ಲಿ ಸೈನಿಕರೊಂದಿಗೆ ಧೋನಿ ಸ್ವಾತಂತ್ರ್ಯ ದಿನದ ಸಂಭ್ರಮ

    ಲಡಾಖ್: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಈ ವರ್ಷದ ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಲಡಾಖ್‍ನಲ್ಲಿ ಸೈನಿಕರೊಂದಿಗೆ ಆಚರಿಸಿಕೊಂಡಿದ್ದಾರೆ. ಅಲ್ಲಿನ ಆರ್ಮಿ ಆಸ್ಪತೆಗೆ ಭೇಟಿ ನೀಡಿದ್ದ ಅವರು ಕೆಲ ಸಮಯವನ್ನು ಅವರೊಂದಿಗೆ ಕಳೆದಿದ್ದಾರೆ.

    ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನಲ್ಲಿ ಕರ್ನಲ್ ಹುದ್ದೆ ಪಡೆದಿರುವ ಧೋನಿ ಬುಧವಾರವೇ ಲಡಾಖ್‍ಗೆ ತಲುಪಿದ್ದರು. ಸ್ವಾತಂತ್ರ್ಯ ಸಂಭ್ರಮದ ದಿನ ಧೋನಿ ಸೈನಿಕರೊಂದಿಗೆ ಸಮಯ ಕಳೆಯುತ್ತಿದ್ದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಧೋನಿ ಲಡಾಖ್‍ನ ಸಿಯಾಚಿನ್ ಆರ್ಮಿ ಬೆಸ್‍ಗೂ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಇದ್ದು, ಈ ವೇಳೆ ಯುದ್ಧದಲ್ಲಿ ವೀರ ಮರಣ ಅಪ್ಪಿದ ಯೋಧರಿಗೆ ಗೌರವ ಸಲ್ಲಿಸಲ್ಲಿದ್ದಾರೆ. ಧೋನಿ ಭಾರತೀಯ ಸೇನೆಯ ಬ್ರಾಡ್ ಅಂಬಾಸಿಡರ್ ಆಗಿದ್ದು, ಸೈನಿಕರನ್ನು ಉತ್ತೇಜಿಸುವ ದೃಷ್ಟಿಯಿಂದ ಅವರೊಂದಿಗೆ ಸಮಯ ಕಳೆದಿದ್ದಾರೆ. ಅಲ್ಲದೇ ಅವರೊಂದಿಗೆ ಫುಟ್ಬಾಲ್ ಕೂಡ ಆಡಿದ್ದಾರೆ ಎಂದು ಸೈನ್ಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಂದಹಾಗೇ ಸೇನೆಯಲ್ಲಿ ಸೇವೆ ಸಲ್ಲಿಸಲು ಕಳೆದ 15 ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಧೋನಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನ ಟೆರಿಟೊರಿಯಲ್ ಅರ್ಮಿ ಯೂನಿಟ್‍ನಲ್ಲಿ 38 ವರ್ಷದ ಧೋನಿ ಅವರಿಗೆ 2011 ರಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿತ್ತು. ವಿಶೇಷ ಎಂದರೆ 2015 ರಲ್ಲಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದೊಂದಿಗೆ ಧೋನಿ ತರಬೇತಿ ಪಡೆದಿದ್ದರು.