Tag: ಸ್ವರ ಭಾಸ್ಕರ್

  • ರಾಜಕಾರಣಿಗಳು ನಟಿಯರ ಬಟ್ಟೆ ಬಗ್ಗೆ ಕಾಮೆಂಟ್ ಮಾಡೋದು ಬಿಡಲಿ: ಸ್ವರಾ ಭಾಸ್ಕರ್

    ರಾಜಕಾರಣಿಗಳು ನಟಿಯರ ಬಟ್ಟೆ ಬಗ್ಗೆ ಕಾಮೆಂಟ್ ಮಾಡೋದು ಬಿಡಲಿ: ಸ್ವರಾ ಭಾಸ್ಕರ್

    ತ್ತೀಚಿನ ದಿನಗಳಲ್ಲಿ ನಟಿಯರ ಕಾಸ್ಟ್ಯೂಮ್ (Costume) ಬಗ್ಗೆ ರಾಜಕಾರಣಿಗಳು ವಿಪರೀತವಾಗಿ ಮಾತನಾಡುತ್ತಿದ್ದಾರೆ. ಅದರಲ್ಲೂ ಪಠಾಣ್ (Pathan) ಸಿನಿಮಾದಲ್ಲಿ ದೀಪಿಕಾ ಪಡುಕೋಣೆ (Deepika Padukone) ಹಾಕಿರುವ ಬಟ್ಟೆಯ ಬಗ್ಗೆ ವಾರಗಟ್ಟಲೆ ರಾಜಕಾರಣಿಗಳು (Politician) ಮಾತನಾಡಿದ್ದಾರೆ. ಆಕೆ ಹೆಣ್ಣು ಅನ್ನುವುದನ್ನೂ ಮರೆತು ಬಾಯಿಗೆ ಬಂದಂತೆ ಕಾಮೆಂಟ್ ಮಾಡಿದರು. ಈ ರೀತಿಯ ಮನಸ್ಥಿತಿಯನ್ನು ರಾಜಕಾರಣಿಗಳು ಬಿಡಬೇಕು ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhaskar) ಹೇಳಿಕೆ ನೀಡಿದ್ದಾರೆ.

    ರಾಜಕಾರಣಿಗಳಿಗೆ ಈ ರೀತಿ ಟಾಂಗ್ ಕೊಡುವ ಮೂಲಕ ಪರೋಕ್ಷವಾಗಿ ಪಠಾಣ್ ಸಿನಿಮಾಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ ಸ್ವರಾ. ಅವರವರ ಕೆಲಸ ಅವರು ಮಾಡಿದರೆ ಯಾವುದೇ ವಿವಾದ ಆಗುವುದಿಲ್ಲ. ಒಬ್ಬರ ವೃತ್ತಿಗೆ ಮತ್ತೊಬ್ಬರು ಮೂಗು ತೂರಿಸುವುದು ಬೇಡ ಎಂದು ಪಠಾಣ್ ಸಿನಿಮಾದ ಹಾಡು ವಿರೋಧಿಸಿದ್ದ ಅನೇಕ ರಾಜಕಾರಣಿಗಳಿಗೆ ಚಳಿ ಬಿಡಿಸಿದ್ದಾರೆ ಸ್ವರಾ ಭಾಸ್ಕರ್. ಇದನ್ನೂ ಓದಿ: ಗೆಳೆಯ ವಸಿಷ್ಠ ಸಿಂಹಗೆ ವಿಭಿನ್ನವಾಗಿ ವಿಶ್ ಮಾಡಿದ ಡಾಲಿ ಧನಂಜಯ್

    ಪಠಾಣ್ ಸಿನಿಮಾದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದರ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ ಕೇಸರಿ ಬಣ್ಣಕ್ಕೆ ಅವಮಾನಿಸಲಾಗಿದೆ ಎಂದು ಹೋರಾಟ ಕೂಡ ಮಾಡಲಾಗಿತ್ತು. ಈ ವಿವಾದ ದೊಡ್ಡದಾಗುತ್ತಿದ್ದಂತೆಯೇ ಸೆನ್ಸಾರ್ ಮಂಡಳಿ ಕೂಡ ಅಶ್ಲೀಲ ಅನಿಸುವಂತಹ ಚಿತ್ರಿಕೆಗಳಿಗೆ ಕತ್ತರಿ ಹಾಕುವಂತೆ ಹೇಳಲಾಗಿತ್ತು. ಇನ್ನೆರಡು ವಾರದಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದರೂ ವಿವಾದ ಮಾತ್ರ ಇನ್ನೂ ತಣ್ಣಗಾಗಿಲ್ಲ. ಇನ್ನು ಬಾಯ್ಕಾಟ್ ರೀತಿಯ ಮಾತುಗಳು ಕೇಳುತ್ತಲೇ ಇವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿ ಕಾಶ್ಮೀರ್ ಫೈಲ್ಸ್ ಸುಳ್ಳು ಸಿನಿಮಾ ಎಂದು ಸಾಬೀತು ಪಡಿಸಿದರೆ ಚಿತ್ರರಂಗ ಬಿಡುತ್ತೇನೆ: ಅಗ್ನಿಹೋತ್ರಿ

    ದಿ ಕಾಶ್ಮೀರ್ ಫೈಲ್ಸ್ ಸುಳ್ಳು ಸಿನಿಮಾ ಎಂದು ಸಾಬೀತು ಪಡಿಸಿದರೆ ಚಿತ್ರರಂಗ ಬಿಡುತ್ತೇನೆ: ಅಗ್ನಿಹೋತ್ರಿ

    ಸಿನಿಮಾ ರಿಲೀಸ್ ಆದ ದಿನದಿಂದ ಈವರೆಗೂ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಒಂದಿಲ್ಲೊಂದು ವಿವಾದ ಕೇಳಿ ಬರುತ್ತಲೇ ಇದೆ. ಅದರಲ್ಲಿ ಈ ಬಾರಿ ಗಂಭೀರವಾದ ಆರೋಪಗಳನ್ನು ಈ ಚಿತ್ರದ ಮೇಲೆ ಹೊರೆಸಲಾಗಿದೆ. ಅದರಲ್ಲೂ ಗೋವಾದಲ್ಲಿ ನಡೆದ ಪ್ರತಿಷ್ಠಿತ ಭಾರತೀಯ ಚಲನಚಿತ್ರ ಚಿತ್ರೋತ್ಸವದಲ್ಲಿ ಮಾಡಿದ ಆರೋಪವೊಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರೋತ್ಸವದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಸಿನಿಮಾ ನೋಡಿದ್ದ ವಿದೇಶಿ, ಚಿತ್ರ ನಿರ್ದೇಶಕ ನದಾಲ್ ಈ ಸಿನಿಮಾದ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದಾರೆ.

    ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ವಿಭಾಗದ ಜ್ಯೂರಿಯಾಗಿದ್ದ ಇಸ್ರೇಲಿ ನಿರ್ದೇಶಕ ನದಾಲ್, ಭಾರತದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದು, ಇಂತಹ  ಅಶ್ಲೀಲ, ಕೆಟ್ಟ ಸಿನಿಮಾವನ್ನು ನಾನು ಯಾವತ್ತೂ ಜ್ಯೂರಿಯಾಗಿ ನೋಡಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅವರ ಈ ಮಾತಿಗೆ ಪರ ವಿರೋಧ ಕೂಡ ವ್ಯಕ್ತವಾಗಿದೆ. ನದಾಲ್ ಮಾತಿಗೆ ಕೆಲವರು ಆಕ್ಷೇಪನೆ ವ್ಯಕ್ತ ಪಡಿಸಿದ್ದರೆ, ಬಾಲಿವುಡ್ ನಟಿ ಸ್ವರ ಭಾಸ್ಕರ್ ಇಸ್ರೇಲಿ ನಿರ್ದೇಶಕನ ಪರವಾಗಿ ನಿಂತಿದ್ದಾರೆ. ಇದನ್ನೂ ಓದಿ: ಸಿನಿಮಾ ಸೋಲಿನ ಬೆನ್ನಲ್ಲೇ ಐಟಂ ಡ್ಯಾನ್ಸ್‌ಗೆ ಓಕೆ ಎಂದ ರಶ್ಮಿಕಾ ಮಂದಣ್ಣ

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸ್ವರ, ‘ಸತ್ಯ ಏನು ಅನ್ನುವುದು ಸ್ಪಷ್ಟವಾಗಿ ಜಗತ್ತಿಗೆ ಅರ್ಥವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಸ್ವರ ಭಾಸ್ಕರ್ ಮಾತಿಗೂ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ಸ್ವರ ಪರವಾಗಿಯೇ ಮಾತನಾಡಿದ್ದಾರೆ. ಹಾಗಾಗಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮತ್ತೊಂದು ರೌಂಡಿನ ಚರ್ಚೆಗೆ ಕಾರಣವಾಗಿದೆ.

    ಇಷ್ಟೆಲ್ಲ ರಾದ್ಧಾಂತ ಆದ ಬೆನ್ನಲ್ಲೇ ಈ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿಯ ಅಂಶಗಳು ಸುಳ್ಳು ಎಂದು ಯಾರಾದರೂ ಸಾಬೀತು ಪಡಿಸಿದರೆ ನಾನು ಸಿನಿಮಾ ರಂಗದಲ್ಲೇ ಇರುವುದಿಲ್ಲ ಎಂದು ಹೇಳಿದ್ದಾರೆ. ಹಾಗಂತ ಬಹಿರಂಗವಾಗಿಯೇ ಅವರು ಆಹ್ವಾನ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ದಿ ಕಾಶ್ಮೀರ್ ಫೈಲ್ಸ್’ ಅಶ್ಲೀಲ ಸಿನಿಮಾ ಹೇಳಿಕೆ: ಇಸ್ರೇಲಿ ನಿರ್ದೇಶಕನ ಪರ ಪ್ರಕಾಶ್ ರಾಜ್

    ‘ದಿ ಕಾಶ್ಮೀರ್ ಫೈಲ್ಸ್’ ಅಶ್ಲೀಲ ಸಿನಿಮಾ ಹೇಳಿಕೆ: ಇಸ್ರೇಲಿ ನಿರ್ದೇಶಕನ ಪರ ಪ್ರಕಾಶ್ ರಾಜ್

    ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ವಿಭಾಗದ ಜ್ಯೂರಿಯಾಗಿದ್ದ ಇಸ್ರೇಲಿ ನಿರ್ದೇಶಕ ನದಾಲ್, ಭಾರತದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಇಂತಹ  ಅಶ್ಲೀಲ, ಕೆಟ್ಟ ಸಿನಿಮಾವನ್ನು ನಾನು ಯಾವತ್ತೂ ಜ್ಯೂರಿಯಾಗಿ ನೋಡಿಲ್ಲ ಎಂದು ಕಾಮೆಂಟ್ ಮಾಡಿದ್ದರು. ಅವರ ಈ ಮಾತಿಗೆ ಪರ ವಿರೋಧ ಕೂಡ ವ್ಯಕ್ತವಾಗಿತ್ತು. ನಿನ್ನೆಯಷ್ಟೇ ಬಾಲಿವುಡ್ ನಟಿ ಸ್ವರ ಭಾಸ್ಕರ್ ಇಸ್ರೇಲಿ ನಿರ್ದೇಶಕನ ಪರವಾಗಿ ನಿಂತಿದ್ದಾರೆ. ಈ ಬೆನ್ನಲ್ಲೇ ಖ್ಯಾತ ನಟ ಪ್ರಕಾಶ್ ರಾಜ್ ಕೂಡ ನಿರ್ದೇಶಕನ ಪರವಾಗಿ ಬ್ಯಾಟ್ ಬೀಸಿದ್ದಾರೆ.

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸ್ವರ ಭಾಸ್ಕರ್, ‘ಸತ್ಯ ಏನು ಅನ್ನುವುದು ಸ್ಪಷ್ಟವಾಗಿ ಜಗತ್ತಿಗೆ ಅರ್ಥವಾಗಿದೆ’ ಎಂದು ಬರೆದುಕೊಂಡಿದ್ದರು. ಸ್ವರ ಭಾಸ್ಕರ್ ಮಾತಿಗೂ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ಸ್ವರ ಪರವಾಗಿಯೇ ಮಾತನಾಡಿದ್ದರು. ಪ್ರಕಾಶ್ ರಾಜ್ ಕೂಡ ಕೊನೆಗೂ ಸತ್ಯ ಅಧಿಕೃತವಾಗಿದೆ ಎಂದು ಟ್ವಿಟ್ ಮಾಡಿದ್ದಾರೆ. ಈ ಮೂಲಕ ಇಸ್ರೇಲಿ ನಿರ್ದೇಶಕನ ಪರವಾಗಿ ನಿಂತಿದ್ದಾರೆ. ಇದನ್ನೂ ಓದಿ: ಜಪಾನ್ ನಲ್ಲಿ ಕುತ್ಕೊಂಡು ತನಗೀಗ 40 ವರ್ಷ ಎಂದು ಘೋಷಿಸಿಕೊಂಡ ರಮ್ಯಾ

    ಸ್ವರ ಭಾಸ್ಕರ್ ಮತ್ತು ಪ್ರಕಾಶ್ ರಾಜ್ ನಿಲುವನ್ನು ಅನೇಕರು ಪ್ರಶ್ನಿಸಿದ್ದಾರೆ. ನೀವು ಕಾಶ್ಮೀರಿ ಪಂಡಿತರಿಗೆ ಅವಮಾನ ಮಾಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಇಸ್ರೇಲಿ ನಿರ್ದೇಶಕರ ನಿಲುವನ್ನು ಖಂಡಿಸಬೇಕಿತ್ತು ಎಂದೂ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ಪ್ರಕಾಶ್ ರಾಜ್ ಮತ್ತು ಸ್ವರ ಪರವಾಗಿಯೂ ಅನೇಕರು ಧ್ವನಿ ಎತ್ತಿರುವುದರಿಂದ ರಾಷ್ಟ್ರೀಯ ಮಟ್ಟದಲ್ಲೂ ಈ ಸಿನಿಮಾ ಬಗ್ಗೆ ಚರ್ಚೆ ಆಗುತ್ತಿದೆ.

    ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸೋಮವಾರ (ನವೆಂಬರ್ 28) ಅದ್ದೂರಿಯಾಗಿ ನಡೆದಿತ್ತು. ಮುಕ್ತಾಯ ಸಮಾರಂಭದಲ್ಲಿ ತೀರ್ಪುಗಾರರ ಮುಖ್ಯಸ್ಥರಾಗಿದ್ದ ಇಸ್ರೇಲ್‌ನ ಖ್ಯಾತ ನಿರ್ದೇಶಕ ನದಾವ್ ಲಾಪಿಡ್ ದಿ ಕಾಶ್ಮಿರ್ ಫೈಲ್ಸ್ ಸಿನಿಮಾ ವಿರುದ್ಧ ಅಸಮಾಧಾನ ಹೊರಹಾಕಿದರು. `ಕಾಶ್ಮೀರ ಫೈಲ್ಸ್’ ಸಿನಿಮಾ ವೀಕ್ಷಿಸಿ ತುಂಬಾ ಡಿಸ್ಟರ್ಬ್ ಆಗಿದ್ದೀವಿ. ಇದೊಂದು ಅಶ್ಲೀಲ ಪ್ರಚಾರದ ಸಿನಿಮಾ. ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು ಎಂದು ಹೇಳುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ದಿ ಕಾಶ್ಮೀರ್ ಫೈಲ್ಸ್’ ಅಶ್ಲೀಲ ಚಿತ್ರ ಎಂದ ನಿರ್ದೇಶಕನ ಬೆನ್ನಿಗೆ ನಿಂತ ನಟಿ ಸ್ವರ ಭಾಸ್ಕರ್

    ‘ದಿ ಕಾಶ್ಮೀರ್ ಫೈಲ್ಸ್’ ಅಶ್ಲೀಲ ಚಿತ್ರ ಎಂದ ನಿರ್ದೇಶಕನ ಬೆನ್ನಿಗೆ ನಿಂತ ನಟಿ ಸ್ವರ ಭಾಸ್ಕರ್

    ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ವಿಭಾಗದ ಜ್ಯೂರಿಯಾಗಿದ್ದ ಇಸ್ರೇಲಿ ನಿರ್ದೇಶಕ ನದಾಲ್, ಭಾರತದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಇಂತಹ  ಅಶ್ಲೀಲ, ಕೆಟ್ಟ ಸಿನಿಮಾವನ್ನು ನಾನು ಯಾವತ್ತೂ ಜ್ಯೂರಿಯಾಗಿ ನೋಡಿಲ್ಲ ಎಂದು ಕಾಮೆಂಟ್ ಮಾಡಿದ್ದರು. ಅವರ ಈ ಮಾತಿಗೆ ಪರ ವಿರೋಧ ಕೂಡ ವ್ಯಕ್ತವಾಗಿತ್ತು. ನದಾಲ್ ಮಾತಿಗೆ ಕೆಲವರು ಆಕ್ಷೇಪನೆ ವ್ಯಕ್ತ ಪಡಿಸಿದ್ದರೆ, ಬಾಲಿವುಡ್ ನಟಿ ಸ್ವರ ಭಾಸ್ಕರ್ ಇಸ್ರೇಲಿ ನಿರ್ದೇಶಕನ ಪರವಾಗಿ ನಿಂತಿದ್ದಾರೆ.

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸ್ವರ, ‘ಸತ್ಯ ಏನು ಅನ್ನುವುದು ಸ್ಪಷ್ಟವಾಗಿ ಜಗತ್ತಿಗೆ ಅರ್ಥವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಸ್ವರ ಭಾಸ್ಕರ್ ಮಾತಿಗೂ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ಸ್ವರ ಪರವಾಗಿಯೇ ಮಾತನಾಡಿದ್ದಾರೆ. ಹಾಗಾಗಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮತ್ತೊಂದು ರೌಂಡಿನ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್‌ನಲ್ಲಿ ತಮಿಳು ನಟ ವಿಜಯ್ ಸೇತುಪತಿ

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಇಸ್ರೇಲ್ ರಾಯಭಾರಿ ನಾರ್ ಗಿಲೋನ್ (naor gilon ನದಾವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸೋಮವಾರ (ನವೆಂಬರ್ 28) ಅದ್ದೂರಿಯಾಗಿ ನಡೆದಿತ್ತು. ಮುಕ್ತಾಯ ಸಮಾರಂಭದಲ್ಲಿ ತೀರ್ಪುಗಾರರ ಮುಖ್ಯಸ್ಥರಾಗಿದ್ದ ಇಸ್ರೇಲ್‌ನ ಖ್ಯಾತ ನಿರ್ದೇಶಕ ನದಾವ್ ಲಾಪಿಡ್ ದಿ ಕಾಶ್ಮಿರ್ ಫೈಲ್ಸ್ ಸಿನಿಮಾ ವಿರುದ್ಧ ಅಸಮಾಧಾನ ಹೊರಹಾಕಿದರು. `ಕಾಶ್ಮೀರ ಫೈಲ್ಸ್’ ಸಿನಿಮಾ ವೀಕ್ಷಿಸಿ ತುಂಬಾ ಡಿಸ್ಟರ್ಬ್ ಆಗಿದ್ದೀವಿ. ಇದೊಂದು ಅಶ್ಲೀಲ ಪ್ರಚಾರದ ಸಿನಿಮಾ. ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು ಎಂದು ಹೇಳುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ಅನ್ನು ರಾಹುಲ್ ಗಾಂಧಿಗೆ ಹೋಲಿಸಿದ ವಿವಾದಿತ ನಟಿ ಸ್ವರ ಭಾಸ್ಕರ್

    ಬಾಲಿವುಡ್ ಅನ್ನು ರಾಹುಲ್ ಗಾಂಧಿಗೆ ಹೋಲಿಸಿದ ವಿವಾದಿತ ನಟಿ ಸ್ವರ ಭಾಸ್ಕರ್

    ಡಕ್ ಹಾಗೂ ನಿಷ್ಠುರ ಮಾತುಗಳಿಂದಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ನಟಿ ಸ್ವರ ಭಾಸ್ಕರ್, ಯಾವತ್ತೂ ತಮ್ಮ ಮಾತಿನಿಂದ ಹಿಂದೆ ಸರಿದವರು ಅಲ್ಲ. ಎಷ್ಟೇ ಕಷ್ಟಗಳು ಎದುರಾದರು ಮಾತಿಗೆ ಬದ್ಧರಾಗಿಯೇ ನಿಲ್ಲುವಂತವರು. ಹಾಗಾಗಿ ಬಾಲಿವುಡ್ ನಲ್ಲಿ ಸ್ವರ ಭಾಸ್ಕರ್ ಅಂದರೆ, ಅಲ್ಲೊಂದು ವಿವಾದ ಇದ್ದೇ ಇರುತ್ತದೆ ಎನ್ನುವಂತಾಗಿದೆ. ಮೀಟೂ ನಿಂದ ಹಿಡಿದು, ಬಾಲಿವುಡ್ ನಲ್ಲಿ ನಡೆಯುತ್ತಿರುವ ಪ್ರತಿಯೊಂದು ಅನ್ಯಾಯವನ್ನೂ ಎದುರಿಸುತ್ತಾ ಬಂದಿರುವ ಈ ನಟಿ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದಾರೆ.

    ವಾಹಿನಿಯೊಂದರ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸ್ವರ ಭಾಸ್ಕರ್, ಸುಖಾಸುಮ್ಮನೆ ರಾಹುಲ್ ಗಾಂಧಿಯನ್ನು ಉತ್ತರವಾಗಿ ಎಳೆದು ತಂದಿದ್ದಾರೆ. ಸದ್ಯ ಆ ವಿಡಿಯೋ ವೈರಲ್ ಆಗಿದೆ. ಬಾಲಿವುಡ್ ಸಿನಿಮಾಗಳು ಸೋಲುತ್ತಿವೆಯಲ್ಲ, ಅದಕ್ಕೆ ಕಾರಣ ಏನಿರಬಹುದು ಎಂದು ಕೇಳಲಾದ ಪ್ರಶ್ನೆಗೆ ಮಾರ್ಮಿಕವಾಗಿಯೇ ಉತ್ತರ ನೀಡಿರುವ ಸ್ವರಾ, ಈ ಹಿಂದೆ ಆರ್ಥಿಕ ಹಿಂಜರಿತವೇ ಬಾಕ್ಸ್ ಆಫೀಸ್ ತುಂಬದೇ ಇರಲಿ ಕಾರಣ ಎನ್ನುತ್ತಿದ್ದರು. ಈಗ ಮತ್ತೊಂದು ರೂಪ ಪಡೆದುಕೊಂಡಿದೆ ಎಂದಿದ್ದಾರೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಬಾಲಿವುಡ್ ಸಿನಿಮಾಗಳು ಸೋಲಿಗೆ ಕಾರಣವನ್ನು ಹೇಳಿದ ಅವರು, ಓಟಿಟಿಯು ಜನರನ್ನು ಥಿಯೇಟರ್ ಗೆ ಬಾರದಂತೆ ಮಾಡುತ್ತಿದೆ ಎಂದು ನೇರವಾಗಿಯೇ ಆರೋಪಿಸಿದರು. ಅಲ್ಲದೇ, ಬಾಲಿವುಡ್ ಅನ್ನು ರಾಹುಲ್ ಗಾಂಧಿಗೆ ಹೋಲಿಸಿದ ಸ್ವರ, ‘ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಕರೆಯುತ್ತಿದ್ದಾರೆ. ನಾನು ಅವರನ್ನು ನೇರವಾಗಿ ಭೇಟಿ ಮಾಡಿದ್ದೇನೆ. ಅವರಷ್ಟು ಬುದ್ಧಿವಂಥರು, ಸ್ಪಷತೆ ಇರುವಂಥವರು ಇಲ್ಲ. ಆದರೂ, ಪಪ್ಪು ಪಪ್ಪು ಎಂದು ಗೇಲಿ ಮಾಡಲಾಗುತ್ತಿದೆ. ಹಾಗೆಯೇ ಬಿಟೌನ್ ಪಪ್ಪುಫಿಕೇಶನ್ ನಲ್ಲಿ ನರಳುತ್ತಿದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್ ಅವಹೇಳನ : ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹತ್ಯೆ ಮಾಡುವುದಾಗಿ ಪತ್ರ

    ಸಾವರ್ಕರ್ ಅವಹೇಳನ : ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹತ್ಯೆ ಮಾಡುವುದಾಗಿ ಪತ್ರ

    ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಒಂದಿಲ್ಲೊಂದು ವಿವಾದದಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನಿರ್ಮಾಪಕರ ಮೇಲೆ ದೂರು, ನಿರ್ದೇಶಕರ ವಿರುದ್ದ ಆಪಾದನೆ ಹೀಗೆ ಒಂದಿಲ್ಲೊಂದು ಕಾರಣಕ್ಕಾಗಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಅವರು ಸಾವರ್ಕರ್ ವಿರುದ್ಧ ಅವಹೇಳನಕಾರಿಯಾಗಿ ಬರೆದಿದ್ದಾರೆ ಎನ್ನುವ ಕಾರಣಕ್ಕಾಗಿ ವಿವಾದಕ್ಕೆ ಸಿಲುಕಿದ್ದಾರೆ.

    ವೀರ ಸಾವರ್ಕರ್ ಬಗ್ಗೆ ಸ್ವರಾ ಭಾಸ್ಕರ್ ಅವಹೇಳನಕಾರಿಯಾಗಿ ಬರೆದಿದ್ದಕ್ಕೆ ಅನಾಮಧೇಯ ವ್ಯಕ್ತಿಯೊಬ್ಬ ಸ್ವರಾ ಮನೆಗೆ ಪತ್ರ ಬರೆದಿದ್ದು, ಜೀವ ತಗೆಯುವುದಾಗಿ ಬೆದರಿಕೆ ಹಾಕಲಾಗಿದೆ. ಹಾಗಾಗಿ ಸ್ವರಾ ಭಾಸ್ಕರ್ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಕೊಲೆ ಮಾಡುವುದಾಗಿ ಬರೆದ ಪತ್ರದೊಂದಿಗೆ ದೂರನ್ನೂ ಅವರು ದಾಖಲಿಸಿದ್ದಾರೆ. ಇದನ್ನೂ ಓದಿ: ಇಡಿ ವಿಚಾರಣೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್: ‘ವಿಕ್ರಾಂತ್ ರೋಣ’ ಪ್ರಚಾರಕ್ಕೆ ಗೈರಾದ ನಟಿ

    ಈ ಹಿಂದೆ ಸಲ್ಮಾನ್ ಖಾನ್ ಗೂ ಕೊಲೆ ಬೆದರಿಕೆ ಪತ್ರ ಬರೆಯಲಾಗಿತ್ತು. ಹಾಗಾಗಿ ಅವರಿಗೆ ಭದ್ರತೆಯನ್ನು ನೀಡಿತ್ತು ಪೊಲೀಸ್ ಇಲಾಖೆ. ತಮಗೂ ಜೀವ ಬೆದರಿಕೆ ಇರುವುದರಿಂದ ರಕ್ಷಣೆ ನೀಡುವಂತೆ ಸ್ವರಾ ಭಾಸ್ಕರ್ ವಿನಂತಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಪತ್ರ ಬರೆದವರು ಯಾರು ಎನ್ನುವುದು ತಮಗೆ ಗೊತ್ತಿಲ್ಲ. ಹಾಗಾಗಿ ಅವರ ಬಗ್ಗೆ ಆತಂಕ ಹೆಚ್ಚಾಗುತ್ತಿದೆ ಎಂದೂ ಅವರು ಹೇಳಿದ್ದಾರಂತೆ.  ಬಾಲಿವುಡ್ ನಟ ನಟಿಯರ ಮೇಲೆ ಈ ರೀತಿಯ ಬೆದರಿಕೆ ಕರೆಗಳು ಮತ್ತು ಪತ್ರಗಳು ಹೆಚ್ಚಾಗುತ್ತಿರುವುದರಿಂದ, ಸ್ವತಃ ಪೊಲೀಸ್ ಇಲಾಖೆಗೂ ಇದು ತಲೆನೋವಾಗಿದೆಯಂತೆ.

    Live Tv

  • 5 ವರ್ಷ ಡೇಟಿಂಗ್ ಮಾಡಿ ಬ್ರೇಕಪ್ – ಒಬ್ಬರಿಗೊಬ್ಬರು ಮೋಸ ಮಾಡಿಲ್ಲ ಎಂದ ಸ್ವರ ಭಾಸ್ಕರ್

    5 ವರ್ಷ ಡೇಟಿಂಗ್ ಮಾಡಿ ಬ್ರೇಕಪ್ – ಒಬ್ಬರಿಗೊಬ್ಬರು ಮೋಸ ಮಾಡಿಲ್ಲ ಎಂದ ಸ್ವರ ಭಾಸ್ಕರ್

    ಮುಂಬೈ: ಬರಹಗಾರ ಹಿಮಾಂಶು ಶರ್ಮಾ ಅವರ ಜೊತೆಗೆ ಸುಮಾರು 5 ವರ್ಷದಿಂದ ಡೇಟಿಂಗ್ ಮಾಡಿ, ಬ್ರೇಕಪ್ ಮಾಡಿಕೊಂಡ ಬಾಲಿವುಡ್ ನಟಿ ಸ್ವರ ಭಾಸ್ಕರ್ ಈಗ ತಮ್ಮ ಬ್ರೇಕಪ್‍ಗೆ ಕಾರಣವೇನು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ.

    2019ರ ಜುಲೈನಲ್ಲಿ ಸ್ವರ ಹಾಗೂ ಹಿಮಾಂಶು ಬ್ರೇಕಪ್ ಮಾಡಿಕೊಂಡಿದ್ದರು. ಆದರೆ ಬ್ರೇಕಪ್ ಆದ 7 ತಿಂಗಳ ಬಳಿಕ ಸ್ವರ ಇಬ್ಬರೂ ಬೇರೆ ಆಗಲು ಕಾರಣವೇನು ಎನ್ನೋದನ್ನ ಬಹಿರಂಗಪಡಿಸಿದ್ದಾರೆ.

    ನಾವಿಬ್ಬರು ಪ್ರೀತಿಯಲ್ಲಿ ಯಾವುದೇ ತಪ್ಪು ಮಾಡಿಲ್ಲ. ಒಬ್ಬರಿಗೊಬ್ಬರು ಮೋಸ ಕೂಡ ಮಾಡಿಲ್ಲ. ಆದರೆ ಕೆಲ ವಿಚಾರದಲ್ಲಿ ನಮ್ಮಿಬ್ಬರ ಆಲೋಚನೆ ಬೇರೆ ಬೇರೆ ಆಗಿತ್ತು. ಆದ್ದರಿಂದ ನಾವಿಬ್ಬರು ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದೆವು ಎಂದು ಸ್ವರ ಹೇಳಿಕೊಂಡಿದ್ದಾರೆ.

    ನನಗೆ ಹೆಚ್ಚು ಕೋಪ ಬರಲ್ಲ. ಒಂದು ವೇಳೆ ಕೋಪ ಬಂದಿದ್ದರೆ ಈ ಸಂಗತಿಯನ್ನು ಎದುರಿಸಲು ಸಹಾಯವಾಗುತ್ತಿತ್ತು ಅನಿಸುತ್ತೆ. ಆದರೆ ನಮ್ಮ ವಿಚಾರದಲ್ಲಿ ಯಾರೂ ಯಾವುದೇ ತಪ್ಪು ಮಾಡಿಲ್ಲ. ಒಬ್ಬರಿಗೊಬ್ಬರು ಕೆಡುಕು ಭಯಸಲಿಲ್ಲ. ಯಾರಿಗೂ ಯಾರೂ ವಂಚಿಸಲಿಲ್ಲ, ಅದೇ ದುರದೃಷ್ಟಕರ ಎಂದು ಸ್ವರ ಬೇಸರ ವ್ಯಕ್ತಪಡಿಸಿದ್ದಾರೆ.

    ತಮ್ಮ ಹಾಗೂ ಹಿಮಾಂಶು ಅವರ ಸಂಬಂಧದ ಬಗ್ಗೆ ವಿವರಿಸಿದ ಸ್ವರ, ಸಂಬಂಧ ಎನ್ನುವುದು ಒಂದು ಜೋಡಿಯಾಗಿ ನಡೆಸುವ ಪ್ರಯಾಣ. ನೀವು ಜೊತೆಯಾಗಿ ಉದ್ಯಾನದಲ್ಲಿ ಹೋಗುತ್ತಿದ್ದೀರಿ ಎಂದರೆ ನೀವು ಜೊತೆಯಾಗಿ ಪಯಣಿಸುತ್ತಿದ್ದೀರಿ ಎಂದರ್ಥ. ಆದರೆ ನಿಮ್ಮ ಮುಂದೆ ಎರಡು ದಾರಿ ಇದೆ ಎಂದಾದರೆ, ಇಬ್ಬರೂ ಜೊತೆಯಾಗಿ ಹೋಗಲು ಒಬ್ಬರು ತಮ್ಮ ದಾರಿ ತ್ಯಾಗ ಮಾಡಬೇಕು. ಒಬ್ಬರು ನಾನು ನನ್ನ ದಾರಿ ಬಿಟ್ಟು ನಿನ್ನ ಜೊತೆ ಬರುತ್ತೇನೆ ಎನ್ನಬೇಕು. ಆದರೆ ಇಬ್ಬರ ದಾರಿ ಬೇರೆಯಾಗಿದ್ದರೆ ಜೊತೆ ಸಾಗಲು ಸಾಧ್ಯವಿಲ್ಲ. ಹೀಗಾಗಿ ಇಬ್ಬರು ಬಾಯ್ ಹೇಳಿ ಮುಂದೆ ಸಾಗೋದು ಉತ್ತಮ. ನಾವು ನಮ್ಮ ಆಯ್ಕೆಯನ್ನು ಮಾತ್ರವಲ್ಲ, ಇತರರ ಆಯ್ಕೆಯನ್ನೂ ಒಪ್ಪಿಕೊಳ್ಳಬೇಕು ಎಂದು ಸ್ವರ ಸಂಬಂಧವನ್ನು ಅರ್ಥೈಸಿದ್ದಾರೆ.

    ಹಿಮಾಂಶು ಹಾಗೂ ಸ್ವರ ಇಬ್ಬರು ಜೊತೆಗೂಡಿ ಹಲವು ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದ್ದಾರೆ. 2013ರಲ್ಲಿ ತೆರೆಕಂಡ ‘ರಾಂಝಣಾ’ ಸಿನಿಮಾ, ‘ತನು ವೆಡ್ಸ್ ಮನು’ ಸೀರಿಸ್‍ನಲ್ಲಿ ಇಬ್ಬರು ಜೊತೆಗೂಡಿ ಕೆಲಸ ಮಾಡಿದ್ದರು.

    ಸ್ವರ ಅವರು ‘ಪ್ರೇಮ್ ರತನ್ ಧನ್ ಪಾಯೋ’, ‘ವೀರ್ ದಿ ವೆಡ್ಡಿಂಗ್’ ಹಾಗೂ ಕೆಲ ವೆಬ್ ಸೀರಿಸ್‍ಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇತ್ತ ಹಿಮಾಂಶು ಅವರು ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ಬರಹಗಾರರಾಗಿದ್ದು, ‘ಸ್ಟ್ರೇಂಜರ್’, ‘ತನು ವೆಡ್ಸ್ ಮನು’ ಹಾಗೂ ‘ಝೀರೋ’ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ‘ಶುಭ್ ಮಂಗಲ್ ಸಾವ್ಧಾನ್’, ‘ಮನ್ಮರ್ಜಿಯಾನ್’, ‘ಶುಭ್ ಮಂಗಲ್ ಜ್ಯಾದಾ ಸಾವ್ಧಾನ್’ ಇನ್ನಿತರೆ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.