Tag: ಸ್ವರ್ಣವಲ್ಲಿ ಮಠ

  • ಸ್ವರ್ಣವಲ್ಲಿ ಶ್ರೀಗಳ ಪೂರ್ವಾಶ್ರಮದ ಪಿತೃವಿಯೋಗ

    ಸ್ವರ್ಣವಲ್ಲಿ ಶ್ರೀಗಳ ಪೂರ್ವಾಶ್ರಮದ ಪಿತೃವಿಯೋಗ

    ಕಾರವಾರ: ಉತ್ತರ ಕನ್ನಡದ ಶಿರಸಿಯ (Sirsi) ಸ್ವರ್ಣವಲ್ಲಿ ಮಠದ (Shree Swarnavalli Matha) ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳಿಗೆ ಪೂರ್ವಾಶ್ರಮದ ಪಿತೃವಿಯೋಗವಾಗಿದೆ. ಅವರ ಪೂರ್ವಾಶ್ರಮದ ತಂದೆ ವೇ.ಶಿವರಾಮ ಭಟ್ಟ ನಡಗೋಡು ಅವರು ದೈವಾದೀನರಾಗಿದ್ದಾರೆ.

    ಶಿವರಾಮ ಭಟ್ಟರು ನಿತ್ಯಾನುಷ್ಠಾನಿಕರಾಗಿ, ನಿಷ್ಠಾವಂತ ವೈದಿಕರಾಗಿ ಧರ್ಮವನ್ನು ಉಳಿಸುವ ಪ್ರಯತ್ನವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದರು. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ, ತಮ್ಮ ಜೀವನದ ಕರ್ತವ್ಯವನ್ನು ನಿರ್ವಹಿಸಿ ಸದ್ಗತಿಯನ್ನು ಹೊಂದಿದ್ದಾರೆ. ಇದನ್ನೂ ಓದಿ: ನಟಿ ಲೀಲಾವತಿ ಅವರ ಒಂದು ತಿಂಗಳ ತಿಥಿ ಕಾರ್ಯ

    ಅವರು ಮೂರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹವ್ಯಕ ವಿಧಿ ವಿಧಾನದ ಮೂಲಕ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಇದನ್ನೂ ಓದಿ: ಸಹಕಾರಿ ಬ್ಯಾಂಕ್ ಚುನಾವಣೆಗೆ ಹೈಕೋರ್ಟ್ ಆದೇಶ – ಜಿಟಿಡಿ, ಸಿಎಂ ವಾರ್‌ಗೆ ಅಖಾಡ ಫಿಕ್ಸ್

  • ರಾತ್ರೋ ರಾತ್ರಿ ಸ್ವರ್ಣವಲ್ಲಿ ಶ್ರೀಗಳನ್ನು ಭೇಟಿಯಾದ ಶಿವರಾಮ್ ಹೆಬ್ಬಾರ್

    ರಾತ್ರೋ ರಾತ್ರಿ ಸ್ವರ್ಣವಲ್ಲಿ ಶ್ರೀಗಳನ್ನು ಭೇಟಿಯಾದ ಶಿವರಾಮ್ ಹೆಬ್ಬಾರ್

    ಕಾರವಾರ: ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಯಲ್ಲಾಪುರದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ಸ್ವರ್ಣವಲ್ಲಿ ಶ್ರೀಗಳನ್ನು ರಾತ್ರೋ ರಾತ್ರಿ ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ.

    ಬ್ರಾಹ್ಮಣ ಜನಾಂಗದ ಪೀಠಾಧಿಪತಿಯಾದ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಯಲ್ಲಾಪುರ ಕ್ಷೇತ್ರದಲ್ಲಿ ಬ್ರಾಹ್ಮಣ ಜನಾಂಗ ಹಾಗೂ ಹಿಂದುಳಿದ ಜನಾಂಗದ ಮೇಲೆ ತನ್ನದೇ ಆದ ಹಿಡಿತ ಹೊಂದಿದ್ದಾರೆ. ಅಲ್ಲದೆ ಹಸಿರು ಕ್ರಾಂತಿ ಮೂಲಕ ಈ ಭಾಗದಲ್ಲಿ ಹೆಚ್ಚು ಚಿರಪರಿಚಿತರು. ಅಷ್ಟೇ ಅಲ್ಲದೆ ಕೈಗಾ ವಿರೋಧಿ ಹೋರಾಟದ ಮೂಲಕ ಯಲ್ಲಾಪುರದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ.

    ಆದರೆ ಶಿವರಾಮ್ ಹೆಬ್ಬಾರ್ ಮಧ್ಯರಾತ್ರಿ 12 ಗಂಟೆಗೆ ಸ್ವರ್ಣವಲ್ಲಿ ಮಠಕ್ಕೆ ಭೇಟಿ ಕೊಟ್ಟಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಶಿವರಾಮ್ ಹೆಬ್ಬಾರ್ ಶ್ರೀಗಳನ್ನು ದಿಢೀರ್ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ.

    ಯಲ್ಲಾಪುರ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಸ್ವಾಮಿಗಳ ಭೇಟಿ ಮಹತ್ವವಾಗಿದ್ದು, ಈ ಹಿಂದೆ ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿಗೆ ಕಾರಣರಾಗಿದ್ದ ಶ್ರೀಗಳು ಹೆಬ್ಬಾರ್ ಪರ ನಿಲ್ಲುವರೇ ಎಂಬುದನ್ನು ಕಾದುನೋಡಬೇಕಿದೆ.

    ಯಲ್ಲಾಪುರದ ಕ್ಷೇತ್ರದಲ್ಲಿ ಅಧಿಕ ಬ್ರಾಹ್ಮಣ ಮತ ಇರುವ ಹಿನ್ನೆಲೆಯಲ್ಲಿ ಜಾತಿ ಮತ ಬೇಟೆಗೆ ಹೆಬ್ಬಾರ್ ಶ್ರೀಗಳನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಮಾತುಕತೆ ಬಳಿಕ ಶ್ರೀಗಳಿಂದ ಹೆಬ್ಬಾರ್ ಮಂತ್ರಾಕ್ಷತೆಯನ್ನೂ ಪಡೆದಿದ್ದಾರೆ.