Tag: ಸ್ವರ್ಣಮುಖಿ ನದಿ

  • ಸ್ವರ್ಣಮುಖಿ ನದಿಯ ತಟದಲ್ಲಿ ಪುಷ್ಪ 2 ಚಿತ್ರದ ಕ್ಲೈಮ್ಯಾಕ್ಸ್

    ಸ್ವರ್ಣಮುಖಿ ನದಿಯ ತಟದಲ್ಲಿ ಪುಷ್ಪ 2 ಚಿತ್ರದ ಕ್ಲೈಮ್ಯಾಕ್ಸ್

    ಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 ಸಿನಿಮಾದ ಶೂಟಿಂಗ್ ಕುಂಟುತ್ತಾ ಸಾಗಿದೆ. ಸದ್ಯ ಚಿತ್ರದ ಕ್ಲೈಮ್ಯಾಕ್ಸ್ (Climax) ದೃಶ್ಯದ ಚಿತ್ರೀಕರಣವನ್ನು ಮಾಡಲು ನಿರ್ದೇಶಕ ಸುಕುಮಾರನ್ (Sukumaran) ಪ್ಲ್ಯಾನ್ ಮಾಡಿದ್ದು, ಅದೊಂದು ರೋಮಾಂಚನಕಾರಿ ನೀಡುವಂತಹ ಸನ್ನಿವೇಶವಾಗಿದೆ ಎಂದು ಹೇಳಲಾಗುತ್ತಿದೆ. ಈ ದೃಶ್ಯವನ್ನು ತಿರುಪತಿ ಜಿಲ್ಲೆಯ ಪೂರ್ವ ಘಟ್ಟದಲ್ಲಿರುವ ಸ್ವರ್ಣಮುಖಿ (Swarnamukhi) ನದಿಯ ತೀರದಲ್ಲಿ ಶೂಟ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

    ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಅಲ್ಲು ಅರ್ಜುನ್ ಜೊತೆ ಫಾಸಿಲ್ ಕೂಡ ಭಾಗಿಯಾಗಲಿದ್ದಾರಂತೆ. ಈ ದೃಶ್ಯಕ್ಕೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಕ್ತ ಚಂದನವನ್ನು ಕಳ್ಳ ಮಾರ್ಗದಲ್ಲಿ ಸಾಗಿಸುವ ಪುಷ್ಪರಾಜನ ವಿರುದ್ಧ ಭನ್ವಿರ್ ಸಿಂಗ್ ಮಾಡುವ ದಾಳಿಯೇ ಕ್ಲೈಮ್ಯಾಕ್ಸ್ ದೃಶ್ಯ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಗುಂಟೂರು ಖಾರ ಸವಿಯಲು ಬರುತ್ತಿದ್ದಾರೆ ರಮ್ಯಾ ಕೃಷ್ಣ

    ಈ ನಡುವೆ ‘ಪುಷ್ಪ 2’ (Pushpa 2) ಸಿನಿಮಾದ ಆಡಿಯೋ (Audio) ಹಕ್ಕು (Right) ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಈವರೆಗೂ ದಾಖಲಾಗಿದ್ದ ಎಲ್ಲ ಮೊತ್ತವನ್ನೂ ಅದು ಹಿಂದಿಕ್ಕಿದ್ದು ಟಿ ಸೀರಿಸ್ ಕಂಪೆನಿಯು 65 ಕೋಟಿ ರೂಪಾಯಿ ಹಣ ನೀಡಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ರಿಲೀಸ್ ಆಗುವ ಅಷ್ಟು ಭಾಷೆಗಳಿಗೆ ಈ ಹಕ್ಕು ಅನ್ವಯಿಸಲಿದೆ.

     

    ಈ ಹಿಂದೆ ರಿಲೀಸ್ ಆಗಿರುವ ಬಾಹುಬಲಿ ಚಿತ್ರದ ಆಡಿಯೋ ಹಕ್ಕು ಹತ್ತು ಕೋಟಿ ಸೇಲ್ ಆಗಿತ್ತು. ಆರ್.ಆರ್.ಆರ್ ಆಡಿಯೋ ಹಕ್ಕು 25 ಕೋಟಿಗೆ ಬಿಕರಿ ಆಗಿತ್ತು. ಸಾಹೋ ಸಿನಿಮಾದ ಆಡಿಯೋ ಹಕ್ಕು ಕೂಡ 22 ಕೋಟಿಗೆ ಸೇಲ್ ಆಗಿತ್ತು. ಈ ಎಲ್ಲ ದಾಖಲೆಗಳನ್ನೂ ಪುಷ್ಪ 2 ಸಿನಿಮಾ ಮುರಿದಿದೆ. ಅಲ್ಲದೇ, ಓಟಿಟಿಗೂ ಭಾರೀ ಮೊತ್ತಕ್ಕೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ.

  • ತಿರುಪತಿಯಲ್ಲಿ ಆಣೆಕಟ್ಟು ಬಿರುಕು – ಜನರಲ್ಲಿ ಹೆಚ್ಚಿದ ಆತಂಕ

    ತಿರುಪತಿಯಲ್ಲಿ ಆಣೆಕಟ್ಟು ಬಿರುಕು – ಜನರಲ್ಲಿ ಹೆಚ್ಚಿದ ಆತಂಕ

    ತಿರುಪತಿ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಿರುಪತಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಜಿಲ್ಲೆಯ ಅತಿದೊಡ್ಡ ಆಣೆಕಟ್ಟು ರಾಯಲ ಚೇವೂರು ಬಿರುಕು ಬಿಟ್ಟಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

    ಭಾರೀ ಮಳೆಯಿಂದಾಗಿ ಆಣೆಕಟ್ಟಿಗೆ ನೀರಿನ ಹರಿವು ಹೆಚ್ಚಾಗಿದೆ. ಈಗ ಮಳೆ ನಿಂತಿದ್ದರೂ ಬಿರುಕುಗಳಿಂದ ನೀರು ಸೋರಿಕೆಯಾಗುತ್ತಿರುವುದು ಈಗ ಭಯಕ್ಕೆ ಕಾರಣವಾಗಿದೆ.

    ಜಿಲ್ಲಾಧಿಕಾರಿ ಹರಿ ನಾರಾಯಣನ್, ಜಿಲ್ಲಾ ಪೊಲೀಸ್, ಕಂದಾಯ ಅಧಿಕಾರಿಗಳು ಹಾಗೂ ನೀರಾವರಿ ತಂಡದ ಅಧಿಕಾರಿಗಳು ತಂಡವನ್ನು ಪರಿಶೀಲಿಸಿ, ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರನ್ನು ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.

    ಆಣೆಕಟ್ಟಿನಲ್ಲಿ ಬಿರುಕು ಮೂಡಿದ್ದರಿಂದ ಎಲ್ಲ ಅಮೂಲ್ಯ ಕಾಗದ ಪತ್ರಗಳು ಹಾಗೂ ಅಗತ್ಯ ವಸ್ತುಗಳೊಂದಿಗೆ ಎತ್ತರದ ಪ್ರದೇಶಕ್ಕೆ ತೆರಳಲು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸೂಚಿಸಲಾಗಿದೆ.

    ಜಿಲ್ಲೆಯಲ್ಲಿ ಅತಿ ದೊಡ್ಡದಾದ ಹಾಗೂ ಪುರಾತನ ಆಣೆಕಟ್ಟು ಇದಾಗಿದೆ. ಇದರಿಂದಾಗಿ ಯಾವುದೇ ಅವಕಾಶವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಆದ್ದರಿಂದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರಿನಾರಾಯಣ್ ಹೇಳಿದರು. ಇದನ್ನೂ ಓದಿ: ರಾಜ್ಯಕ್ಕೆ ತಪ್ಪದ ಮಳೆ ಕಾಟ – ರಾಜ್ಯಕ್ಕೆ ವಕ್ಕರಿಸಲಿದೆ ಮತ್ತೊಂದು ಸೈಕ್ಲೋನ್

    ಜಲಾಶಯದಲ್ಲಿ 0.9 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಆಣೆಕಟ್ಟು ನೀರನ್ನು ಸಂಗ್ರಹಿಸುವಷ್ಟು ಶಕ್ತಿಯನ್ನು ಹೊಂದಿಲ್ಲ. ಹೀಗಾಗಿ ಕೆಳಭಾಗದ ಗ್ರಾಮಗಳನ್ನು ಸ್ಥಳಾಂತರಿಸುವಂತೆ ತಿಳಿಸಲಾಗಿದೆ. ಜೊತೆಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಬಿರುಕು ತಡೆಗೆ ಕ್ರಮ ಕೈಗೊಳ್ಳಲು ಮಾತುಕತೆ ನಡೆಸಲಾಗಿದೆ.

    ಚಿತ್ತೂರು ಜಿಲ್ಲೆಯ ಮೇಲ್ದಂಡೆಗಳಿಂದ ಹಾಗೂ ತಿರುಮಲ ಬೆಟ್ಟಗಳಿಂದ ಅಧಿಕ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಸ್ವರ್ಣಮುಖಿ ನದಿಯು ಉಕ್ಕಿ ಹರಿಯುತ್ತಿದೆ. ಈ ನದಿಯಿಂದಲೇ ರಾಯಲ ಚೇವೂರು ಆಣೆಕಟ್ಟಿಗೆ ನೀರು ಸಂಗ್ರಹವಾಗುತ್ತದೆ.

    ಪ್ರವಾಹದಿಂದಾಗಿ ಹಲವಾರು ಹಳ್ಳಿಗಳ ಸಂಪರ್ಕ ಕಡಿತವಾಗಿದ್ದು, ಹೆದ್ದಾರಿ ಹಾಗೂ ಇತರ ರಸ್ತೆಗಳು ಜಲಾವೃತಗೊಂಡಿದೆ. ರೇಣಿಗುಂಟಾ ವಿಮಾನ ನಿಲ್ದಾಣದಲ್ಲಿ ಜನರ ರಕ್ಷಣೆಗೆ ಎನ್‍ಡಿಆರ್‍ಆಫ್ ಪಡೆ ಹಾಗೂ ವಾಯುಪಡೆಯ ಮೂರು ಹೆಲಿಕಾಪ್ಟರ್‍ಗಳು ಬಂದಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅನಾಹುತ – ರಾಜಕಾಲುವೆ ಒಡೆದು ರಸ್ತೆ, ಮನೆಗಳಿಗೆ ನುಗ್ಗಿದ ನೀರು

    ಭಾರೀ ಮಳೆ ಹಿನ್ನೆಲೆಯಲ್ಲಿ 2 ದಿನದ ಹಿಂದಷ್ಟೇ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಶಬರಿಮಲೆಯನ್ನು ಮುಚ್ಚುವುದಾಗಿ ಅಲ್ಲಿನ ಜಿಲ್ಲಾಡಳಿತ ಹೇಳಿತ್ತು.