Tag: ಸ್ವರೂಪ್

  • ಹಾಸನದಲ್ಲಿ ಪ್ರೀತಂಗೌಡಗೆ ಸ್ವರೂಪ್ ಠಕ್ಕರ್ – ನಗರಸಭೆ ಆಡಳಿತ ಜೆಡಿಎಸ್ ತೆಕ್ಕೆಗೆ!

    ಹಾಸನದಲ್ಲಿ ಪ್ರೀತಂಗೌಡಗೆ ಸ್ವರೂಪ್ ಠಕ್ಕರ್ – ನಗರಸಭೆ ಆಡಳಿತ ಜೆಡಿಎಸ್ ತೆಕ್ಕೆಗೆ!

    – ಚಂದ್ರೇಗೌಡರಿಗೆ ಒಲಿದ ಅದೃಷ್ಟ – ಲತಾದೇವಿ ಉಪಾಧ್ಯಕ್ಷೆ!
    – ಶಿರಾಳಕೊಪ್ಪ ಪುರಸಭೆಯಲ್ಲಿ 25 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ಅಧಿಕಾರ

    ಹಾಸನ: ನಗರದಲ್ಲಿ ಮತ್ತೆ ಜೆಡಿಎಸ್-ಬಿಜೆಪಿ (BJP-JDS) ಸಂಘರ್ಷ ಮುಂದುವರಿದಿದೆ. ಹಾಸನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ (Preetham Gowda) -ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ಬೆಂಬಲಿಗರ ಮಧ್ಯೆ ಜಿದ್ದಾಜಿದ್ದಿ ನಡೆದಿದೆ. ಅಂತಿಮವಾಗಿ ಜೆಡಿಎಸ್‌ನ ಸ್ವರೂಪ್‌ಗೌಡ ಬೆಂಬಲಿಗರು ಮೇಲುಗೈ ಸಾಧಿಸಿದ್ದು, ಹಾಸನ ನಗರಸಭೆ (Hassan Municipality) ಜೆಡಿಎಸ್ ಪಾಲಾಗಿದೆ.

    ಅಧ್ಯಕ್ಷರಾಗಿ ಜೆಡಿಎಸ್ (JDS) ಚಂದ್ರೇಗೌಡ ಆಯ್ಕೆಯಾಗಿದ್ದಾರೆ. ಜೆಡಿಎಸ್‌ಗೆ ಮತ ಹಾಕದೇ ಬಿಜೆಪಿ ಸದಸ್ಯರು ತಟಸ್ಥವಾಗಿ ಉಳಿದಿದ್ದಾರೆ. ಇನ್ನು, ಬಿಜೆಪಿಯ ಲತಾದೇವಿ ಜೆಡಿಎಸ್‌ನಲ್ಲಿ ಗುರುತಿಸಿಕೊಂಡು ಉಪಾಧ್ಯಕ್ಷೆಯಾಗಿದ್ದಾರೆ. ಮೈತ್ರಿಯಂತೆ ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿ, ಶಿಲ್ಪಾವಿಕ್ರಮ್‌ರನ್ನು ಇಳಿಸಿತ್ತು. ಆದರೆ, ವಿಪ್ ಜಾರಿ ಹಿನ್ನೆಲೆಯಲ್ಲಿ ಶಿಲ್ಪಾವಿಕ್ರಂಗೆ ಕೈ ಎತ್ತುವ ಮೂಲಕ ತಮ್ಮ ವಿರುದ್ಧವೇ ಲತಾದೇವಿ ಮತ ಹಾಕಿದ್ದರು. ಆದರೆ, ಲತಾದೇವಿಗೆ ಜೆಡಿಎಸ್‌ನವರು ಹೆಚ್ಚು ವೋಟ್‌ ಹಾಕಿ ಗೆಲ್ಲಿಸಿಕೊಂಡಿದ್ದಾರೆ. ಇದನ್ನೂ ಓದಿ: ನರ್ಸರಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – ಭುಗಿಲೆದ್ದ ಹಿಂಸಾಚಾರ; 72 ಮಂದಿ ಅರೆಸ್ಟ್‌!

    ಕೊನೇ ಕ್ಷಣದಲ್ಲಿ ಗಿರೀಶ್ ಚನ್ನವೀರಪ್ಪರನ್ನು ಅಧ್ಯಕ್ಷ ಸ್ಥಾನಕ್ಕೆ ರೇವಣ್ಣ ಅಖಾಡಕ್ಕೆ ಇಳಿಸಿದ್ದರು. ಆದರೆ, ಶಾಸಕ ಸ್ವರೂಪ್ ಪ್ರಕಾಶ್ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡಿದ್ದು, ಹೆಚ್.ಡಿ.ರೇವಣ್ಣ, ಪ್ರೀತಂಗೌಡಗೂ ಟಾಂಗ್ ಕೊಟ್ಟಿದ್ದಾರೆ. ಮೈತ್ರಿ ಧರ್ಮ ಪಾಲಿಸಿಲ್ಲ ಅಂತ ಸ್ವರೂಪ್ ವಿರುದ್ಧ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನ್ಯಾಯ ಒದಗಿಸುವುದಕ್ಕಿಂತ ಅಪರಾಧ ಮರೆಮಾಚಲು ಹೆಚ್ಚಿನ ಪ್ರಯತ್ನ – ರಾಗಾ ಆಕ್ರೋಶ

    ಮತ್ತೊಂದುಕಡೆ, ಕಾರವಾರ ನಗರಸಭೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಜಯವಾಗಿದೆ. ಬಿಜೆಪಿಯ ರವಿರಾಜ್ ಅಂಕೋಲೇಕರ್ ಅಧ್ಯಕ್ಷರಾದರೆ. ಜೆಡಿಎಸ್‌ನ ಪ್ರೀತಿ ಮಧುಕರ್ ಜೋಶಿ ಉಪಾಧ್ಯಕ್ಷರಾಗಿದ್ದರೆ. ಹಾಸನ, ಕಾರವಾರ ಎರಡೂ ಕಡೆ ಕಾಂಗ್ರೆಸ್‌ಗೆ ಸೋಲಾಗಿದೆ. ಆದರೆ, ವಿಜಯೇಂದ್ರ ಸ್ವಕ್ಷೇತ್ರ ಶಿಕಾರಿಪುರದ ಶಿರಾಳಕೊಪ್ಪ ಪುರಸಭೆಯಲ್ಲಿ 25 ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಇದನ್ನೂ ಓದಿ: ಅಗತ್ಯಬಿದ್ದರೇ ಮುಲಾಜಿಲ್ಲದೇ ಕುಮಾರಸ್ವಾಮಿ ಅರೆಸ್ಟ್‌ – ಸಿದ್ದರಾಮಯ್ಯ ವಾರ್ನಿಂಗ್‌

  • ಸ್ವರೂಪ್‌ಗೆ ಇಬ್ಬರು ತಾಯಂದಿರು : ಭವಾನಿ ರೇವಣ್ಣ

    ಸ್ವರೂಪ್‌ಗೆ ಇಬ್ಬರು ತಾಯಂದಿರು : ಭವಾನಿ ರೇವಣ್ಣ

    ಹಾಸನ: ಎಲ್ಲರಿಗೂ ಒಬ್ಬರು ತಾಯಿ ಇರ್ತಾರೆ, ಆದರೆ ಸ್ವರೂಪ್‌ಗೆ (Swaroop) ಇಬ್ಬರು ತಾಯಂದಿರಿದ್ದಾರೆ ಎಂದು ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ (Bhavani Revanna) ತಿಳಿಸಿದರು.

    ಬುಧವಾರ ಪತಿ ರೇವಣ್ಣ, ಜೆಡಿಎಸ್ (JDS) ಅಭ್ಯರ್ಥಿ ಹೆಚ್.ಪಿ.ಸ್ವರೂಪ್ ಹಾಗೂ ಸಾವಿರಾರು ಮುಖಂಡರೊಂದಿಗೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನಂತರ ನಡೆದ ಮೆರವಣಿಗೆಯಲ್ಲಿ ಅವರು ಮಾತನಾಡಿದರು. ಹಾಸನ (Hassan) ಅಭ್ಯರ್ಥಿ ಯಾರು ಅಂತ ಗೊಂದಲ ಇತ್ತು. ನಾನು ಕೂಡ ಆಕಾಂಕ್ಷಿ ಆಗಿದ್ದೆ, ನನ್ನ ಜೊತೆ ನೀವು ನಿಂತಿದ್ದು ನಿಜ. ಆದರೆ ದಿನ ಕಳೆದಂತೆ ದೇವೇಗೌಡರ ಆದೇಶ ಧಿಕ್ಕರಿಸಲು ಆಗಲಿಲ್ಲ. ಹಾಗಾಗಿ ನಾನೇ ತೀರ್ಮಾನ ಮಾಡಿ ಕುಮಾರಣ್ಣ ಅವರಿಗೆ ಸ್ಚರೂಪ್‌ನನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿ ಎಂದೆ. ಈಗ ಸ್ವರೂಪ್‌ಗೆ ಇಬ್ಬರು ತಾಯಂದಿರಿದ್ದಾರೆ. ಲಲಿತಕ್ಕ ಹೆತ್ತವಳು. ಈ ಭಾರ ಹೊತ್ತುಕೊಂಡವಳು ನಾನು. ಈ ವಿಚಾರದಲ್ಲಿ ಸ್ವರೂಪ್ ಅದೃಷ್ಟವಂತ ಎಂದು ಭವಾನಿ ಬಣ್ಣಿಸಿದರು.

    ಈ ವೇಳೆ ಶಾಸಕ ಪ್ರೀತಂಗೌಡ ವಿರುದ್ಧ ಅವರು, ಮಹಿಳೆಯರ ಬಗ್ಗೆ ಗೌರವ ಇಲ್ಲದೆ ಮಾತಾಡಿರುವುದು ಅವರಿಗೆ ಗೌರವ ತರುತ್ತಾ? ದೇವೇಗೌಡರು ಇಡೀ ರಾಜ್ಯಕ್ಕೆ ತಂದೆ ಸಮಾನರು. ಅಂತಹವರಿಗೆ ಅವಮಾನ ಮಾಡಿ ಮಾತಾಡ್ತಾರೆ. ರೇವಣ್ಣ ಅವರು ಶಾಸಕರಾಗಿ, ಸಚಿವರಾದವರು. ಅವರ ಬಗ್ಗೆನೂ ಮಾತಾಡ್ತಾರೆ ಎಂದು ಆಕ್ರೋಶ ಹೊರಹಾಕಿದರು.

    ಮೇ.10 ರಂದು ಚುನಾವಣೆ ಇದೆ. ಮೇ 18ಕ್ಕೆ ದೇವೇಗೌಡರ ಹುಟ್ಟುಹಬ್ಬ ಇದೆ. ದೇವೇಗೌಡರ ಪಾದದಡಿಗೆ ಈ ಗೆಲುವು ಕೊಡುತ್ತೇವೆ. ಜಿಲ್ಲೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರ ಗೆಲ್ಲಿಸ್ತೀವಿ ಅಂತ ಮಾತು ಕೊಟ್ಟಿದ್ದೇವೆ. ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದರು. ಇದನ್ನೂ ಓದಿ: ಸೋಮಣ್ಣ ವೈರಲ್ ಆಡಿಯೋ – ಚುನಾವಣಾ ಆಯೋಗದಿಂದ ತನಿಖೆ

    ಬಿಜೆಪಿ ಶಾಸಕರಿಂದ ನೋವು ತಿಂದಿರುವ ಕುಟುಂಬ ಸಾಕಷ್ಟಿವೆ. ಪ್ರತಿಯೊಬ್ಬರೂ ಕೂಡ ಚಾಲೆಂಜ್ ಆಗಿ ಸ್ವೀಕಾರ ಮಾಡಬೇಕು. ನಮ್ಮ ಕೆಲಸ ಇದೇ ರೀತಿಯಲ್ಲಿ ಇರಬೇಕು, ಮುನ್ನುಗ್ಗುತ್ತಿರಬೇಕು. ಬಿಜೆಪಿ ಸೋಲಿಸಬೇಕು, ಇಲ್ಲಿನ ಶಾಸಕರೇ ಹೇಳುತ್ತಿರುವಂತೆ ಅವರನ್ನು ಹಾಸನ ಬಿಟ್ಟು ಓಡಿಸಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಶೆಟ್ಟರ್ ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಫೇಲ್ ಆದೆ: ಜೋಶಿ

  • ಸ್ವರೂಪ್ ನನ್ನ ಮಗನಿದ್ದಂತೆ, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡಿದ್ದೇನೆ – ಭವಾನಿ ರೇವಣ್ಣ

    ಸ್ವರೂಪ್ ನನ್ನ ಮಗನಿದ್ದಂತೆ, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡಿದ್ದೇನೆ – ಭವಾನಿ ರೇವಣ್ಣ

    – ಹಾಸನದಲ್ಲಿ ಅಬ್ಬರದ ಭಾಷಣ; ರೇವಣ್ಣ ಕುಟುಂಬ ಒಗ್ಗಟ್ಟು ಪ್ರದರ್ಶನ

    ಹಾಸನ: ಸ್ವರೂಪ್ (Swaroop) ನನ್ನ ಮಗನಿದ್ದಂತೆ, ನಾನು ಸ್ವರೂಪ್‌ನನ್ನ ಮಗನಾಗಿಯೇ ನೋಡಿದ್ದೇನೆ. ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡಿದ್ದೇನೆ, ಈ ಕ್ಷೇತ್ರದಲ್ಲಿ ಸ್ವರೂಪ್‌ ಗೆದ್ದೇ ಗೆಲ್ತಾನೆ ಎಂದು ಭವಾನಿ ರೇವಣ್ಣ (Bhavani Revanna) ಭವಿಷ್ಯ ನುಡಿದಿದ್ದಾರೆ.

    ಹಾಸನ ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ನಡೆದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕುಟುಂಬ ಭಾಗಿಯಾಗಿ, ಸ್ವರೂಪ್ ಗೆಲ್ಲಿಸುವಂತೆ ಮನವಿ ಮಾಡಿದರು. ಈ ವೇಳೆ ಸ್ವರೂಪ್ ಅವರು, ರೇವಣ್ಣ ಹಾಗೂ ಭವಾನಿ ರೇವಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಇದನ್ನೂ ಓದಿ: ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ : ಎ.ಮಂಜು – ಭವಾನಿ ಜುಗಲ್ ಬಂದಿ

    ಸಭೆಯಲ್ಲಿ ಮಾತನಾಡಿದ ಭವಾನಿ ಅವರು, ಯಾರಿಗೆ ಟಿಕೆಟ್ ನೀಡಬೇಕು ಅನ್ನುವ ಚರ್ಚೆ ನಡೆಯುತ್ತಿದ್ದಾಗ ಕುಮಾರಣ್ಣ ಸ್ವರೂಪ್‌ಗೆ ಟಿಕೆಟ್‌ ಕೊಟ್ಟಿದ್ದಾರೆ. ನಾವೂ ಮೂರು ಬಾರಿ ಫೋನ್ ಮಾಡಿ ಸ್ವರೂಪ್‌ಗೇ ಟಿಕೆಟ್ ಕೊಡಿ ಅಂತಾ ಕುಮಾರಣ್ಣಗೆ ಹೇಳಿದ್ವಿ ಎಂದು ಹೇಳಿದರು.

    ನನಗೆ ದೇವೇಗೌಡರ ಆರೋಗ್ಯ ಮುಖ್ಯವಾಗಿತ್ತು. ದೇವೇಗೌಡರಿಗಿಂತ ನಾನೇ ದೊಡ್ಡವಳಾ ಅಂತಾ ಅನ್ನಿಸಿಬಿಡ್ತು. ಹಾಗಾಗಿ ನಾನೇ ತೀರ್ಮಾನಿಸಿ ಸ್ವರೂಪ್ ಹೆಸರು ಅನೌನ್ಸ್ ಮಾಡಿಸಿದೆ. ಶುಕ್ರವಾರ ಒಳ್ಳೆಯ ದಿನ ಅನೌನ್ಸ್ ಮಾಡಿ ಅಂತಾ ಕುಮಾರಣ್ಣಗೆ ಹೇಳಿದೆ. ನನಗೆ ಟಿಕೆಟ್ ಸಿಕ್ಕಿಲ್ಲ ಅಂತಾ ಹಾಸನ ಕಡೆಗಣಿಸಲ್ಲ. ಒಟ್ಟಿನಲ್ಲಿ ಬಿಜೆಪಿ ಸೋಲಿಸಬೇಕು ಅಷ್ಟೇ ಎಂದು ಕರೆ ನೀಡಿದರು. ಇದನ್ನೂ ಓದಿ: ರೇವಣ್ಣ ಕುಟುಂಬದವ್ರು ನನ್ನ ಪರ ಪ್ರಚಾರಕ್ಕೆ ಬರುತ್ತಾರೆ: ಹಾಸನ ಜೆಡಿಎಸ್ ಅಭ್ಯರ್ಥಿ

    ಹಾಸನದಲ್ಲಿ ಬಿಜೆಪಿಯನ್ನ ಸಂಪೂರ್ಣವಾಗಿ ತೆಗೆದುಹಾಕಬೇಕು. ಅದಕ್ಕಾಗಿ ನಿದ್ರೆ ಬಿಟ್ಟು ಕೆಲಸ ಮಾಡಿ, ಸ್ವರೂಪ್ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದೇನೆ, ಈ ಕ್ಷೇತ್ರದಲ್ಲಿ ಗೆದ್ದೇ ಗೆಲ್ತಾನೆ ಎಂದು ನುಡಿದರು.

  • ಕಡೂರಿನಿಂದ ದತ್ತಾ : 1 ಕ್ಷೇತ್ರ ಬಿಟ್ಟು 49 ಕ್ಷೇತ್ರಗಳ ಜೆಡಿಎಸ್‌ ಪಟ್ಟಿ ಬಿಡುಗಡೆ

    ಕಡೂರಿನಿಂದ ದತ್ತಾ : 1 ಕ್ಷೇತ್ರ ಬಿಟ್ಟು 49 ಕ್ಷೇತ್ರಗಳ ಜೆಡಿಎಸ್‌ ಪಟ್ಟಿ ಬಿಡುಗಡೆ

    ಬೆಂಗಳೂರು: ಜೆಡಿಎಸ್‌ (JDS) ಇಂದು 49 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್‌ ಸಿಕ್ಕಿದೆ.

    ಕಡೂರಿನಿಂದ ವೈಎಸ್‌ವಿ ದತ್ತಾ (YSV Datta), ಅಥಣಿಯಿಂದ ಶ್ರೀ ಶಶಿಕಾಂತ್ ಪಡಸಲಿಗಿ ಗುರುಗಳು ಸ್ಪರ್ಧಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ, ಎಚ್‌ಡಿ ರೇವಣ್ಣ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.  ಹಾಸನದ ಅರಸೀಕೆರೆ (Arsikere) ಕ್ಷೇತ್ರವೊಂದನ್ನು ಬಿಟ್ಟು  ಉಳಿದ ಎಲ್ಲಾ ಕ್ಷೇತ್ರಗಳಿಗೆ ಜೆಡಿಎಸ್‌ ಟಿಕೆಟ್‌ ಫೈನಲ್‌ ಮಾಡಿದೆ.

    ಜೆಡಿಎಸ್‌ ನಾಯಕ, ಹಾಲಿ ಶಾಸಕ ಶಿವಲಿಂಗೇಗೌಡ  ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಇನ್ನೂ ಸರಿಯಾದ ಅಭ್ಯರ್ಥಿಯನ್ನು ಜೆಡಿಎಸ್‌ ಹುಡುಕಾಡುತ್ತಿದೆ.

    ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಗಳು?
    1 ಕುಡಚಿ- ಆನಂದ್ ಮಾಳಗಿ
    2 ರಾಯಭಾಗ- ಪ್ರದೀಪ್ ಮಾಳಗಿ
    3 ವದತ್ತಿ- ಸೌರಬ್ ಚೊಪ್ರಾ
    4 ಅಥಣಿ- ಶ್ರೀ ಶಶಿಕಾಂತ್ ಪಡಸಲಿಗಿ ಗುರುಗಳು
    5 ಹುಬ್ಬಳ್ಳಿ – ಧಾರವಾಡ ಪೂರ್ವ- ವೀರಭದ್ರಪ್ಪ ಹಾಲರವಿ
    6 ಕುಮಟಾ- ಸೂರಜ್ ಸೋನಿ ನಾಯಕ್
    7 ಹಳಿಯಾಳ- ಎಸ್‌. ಎಲ್‌. ಘೊಟ್ನೋಕರ್
    8 ಭಟ್ಕಳ- ನಾಗೇಂದ್ರ ನಾಯಕ್
    9 ಶಿರಸಿ- ಸಿದ್ದಾಪುರ- ಉಪೇಂದ್ರ ಪೈ
    10 ಯಲ್ಲಾಪುರ- ಡಾ. ನಾಗೇಶ್ ನಾಯಕ್

     

    11 ಚಿತ್ತಾಪುರ- ಸುಭಾಷ್ ಚಂದ್ರ ರಾಥೋಡ್
    12 ಕಲಬುರ್ಗಿ ಉತ್ತರ- ನಾಸೀರ್ ಹುಸೇನ್ ಉಸ್ತಾದ್
    13 ಬಳ್ಳಾರಿ ನಗರ- ಅಲ್ಲಾಭಕ್ಷ್ ಅಲಿಯಾಸ್ ಮುನ್ನ
    14 ಹಗರಿಬೊಮ್ಮನಹಳ್ಳಿ – ಪರಮೇಶ್ವರಪ್ಪ
    15 ಹರಪ್ಪನಹಳ್ಳಿ- ಎನ್‌. ಎಂ. ನೂರ್ ಅಹಮದ್
    16 ಸಿರಗುಪ್ಪ- ಪರಮೇಶ್ವರ್ ನಾಯಕ್
    17 ಕಂಪ್ಲಿ- ರಾಜು ನಾಯಕ್
    18 ಕೊಳ್ಳೇಗಾಲ- ಪುಟ್ಟಸ್ವಾಮಿ
    19 ಗುಂಡ್ಲುಪೇಟೆ- ಕಡಬೂರು ಮಂಜುನಾಥ್
    20 ಕಾಪು- ಸಬೀನಾ ಸಮದ್

    21 ಕಾರ್ಕಳ- ಶ್ರೀಕಾಂತ್ ಕೊಚ್ಚೂರ್
    22 ಉಡುಪಿ- ದಕ್ಷತ್ ಆರ್. ಶೆಟ್ಟಿ
    23 ಬೈಂದೂರು- ಮನ್ಸೂರ್ ಇಬ್ರಾಹಿಂ
    24 ಕುಂದಾಪುರ-ರಮೇಶ್ ಕುಂದಾಪುರ
    25 ಮಂಗಳೂರು ದಕ್ಷಿಣ- ಸುಮತಿ ಹೆಗಡೆ
    26 ಕನಕಪುರ- ನಾಗರಾಜು
    27 ಯಲಹಂಕ- ಮುನೇಗೌಡ
    28 ಸರ್ವಜ್ಞ ನಗರ- ಮೊಹಮ್ಮದ್ ಮುಸ್ತಾಫ್
    29 ಯಶವಂತಪುರ- ಜವರಾಯೀಗೌಡ
    30 ತಿಪಟೂರು- ಶಾಂತಕುಮಾರ್

     

    31 ಶಿರಾ- ಆರ್.ಉಗ್ರೇಶ್
    32 ಹಾನಗಲ್- ಮನೋಹರ ತಹಸೀಲ್ದಾರ್
    33 ಸಿಂದಗಿ- ವಿಶಾಲಕ್ಷಿ ಶಿವಾನಂದ
    34 ಗಂಗಾವತಿ- ಹೆಚ್‌. ಆರ್‌ ಚನ್ನಕೇಶವ
    35 ಹೆಚ್‌.ಡಿ ಕೋಟೆ- ಜಯಪ್ರಕಾಶ್
    36 ಜೇವರ್ಗಿ- ದೊಡಪ್ಪಗೌಡ ಶಿವಲಿಂಗಪ್ಪಗೌಡ
    37 ಶಹಾಪುರ- ಗುರುಲಿಂಗಪ್ಪಗೌಡ
    38 ಕಾರವಾರ- ಚೈತ್ರ ಕೋಟಾಕರ್
    39 ಪುತ್ತೂರು- ದಿವ್ಯಪ್ರಭ
    40 ಕಡೂರು- ವೈ.ಎಸ್.ವಿ ದತ್ತಾ

     

    41 ಹೊಳೆನರಸೀಪುರ – ಹೆಚ್‌.ಡಿ ರೇವಣ್ಣ
    42 ಬೇಲೂರು – ಕೆ.ಎಸ್‌ ಲಿಂಗೇಶ್
    43 ಸಕಲೇಶಪುರ – ಹೆಚ್‌.ಕೆ ಕುಮಾರಸ್ವಾಮಿ
    44 ಅರಕಲಗೂಡು- ಎ. ಮಂಜು
    45 ಹಾಸನ- ಸ್ವರೂಪ್ ಪ್ರಕಾಶ್‌
    46 ಶ್ರವಣಬೆಳಗೊಳ- ಸಿ.ಎನ್‌ ಬಾಲಕೃಷ್ಣ
    47 ಮಹಾಲಕ್ಷ್ಮಿ ಲೇಔಟ್- ರಾಜಣ್ಣ
    48 ಹಿರಿಯೂರು- ರವೀಂದ್ರಪ್ಪ49 ಮಾಯಕೊಂಡ- ಆನಂದಪ್ಪ

     

  • ಕೊನೆಗೂ ಹಾಸನ ಟಿಕೆಟ್‌ ಗೆದ್ದ ಸ್ವರೂಪ್‌

    ಕೊನೆಗೂ ಹಾಸನ ಟಿಕೆಟ್‌ ಗೆದ್ದ ಸ್ವರೂಪ್‌

    ಬೆಂಗಳೂರು: ಹಾಸನ ವಿಧಾನಸಭಾ ಕ್ಷೇತ್ರದ (Hassan Assembly Constituency) ಜೆಡಿಎಸ್‌ (JDS) ಟಿಕೆಟ್‌ ಕೊನೆಗೂ ಸ್ವರೂಪ್‌ಗೆ (Swaroop Gowda)ಸಿಕ್ಕಿದೆ. ಜೆಡಿಎಸ್‌ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು ಭವಾನಿ ರೇವಣ್ಣಗೆ ಟಿಕೆಟ್‌ ತಪ್ಪಿದೆ.

    ಸ್ವರೂಪ್‌ ಮತ್ತು ಭವಾನಿ ರೇವಣ್ಣ (Bhavani Revanna) ಮಧ್ಯೆ ಟಿಕೆಟ್‌ಗಾಗಿ ಭಾರೀ ಸ್ಪರ್ಧೆ ನಡೆದಿತ್ತು. ಭವಾನಿ ರೇವಣ್ಣ ಈ ಬಾರಿ ನಾನೇ ಹಾಸನದಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದನ್ನೂ ಓದಿ: ವೋಟರ್ ಕಾರ್ಡ್‌ ತಗೊಳ್ಳೋಕೆ 9 ತಿಂಗಳ ನಂತರ ಮನೆಗೆ ಬಂದ ಪತಿಯನ್ನ ಕೂಡಿ ಹಾಕಿದ ಪತ್ನಿ

    ಇತ್ತ ಇನ್ನೊಂದು ಕಡೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಸ್ವರೂಪ್‌ ಪರ ಬ್ಯಾಟ್‌ ಬೀಸಿದ್ದರು. ಎಚ್‌ಡಿ ರೇವಣ್ಣ ಪತ್ನಿಯ ಪರವಾಗಿ ಮಾತನಾಡಿದ್ದರು.

    ಕಳೆದ ಎರಡು ತಿಂಗಳಿನಿಂದ ಭವಾನಿ ವರ್ಸಸ್‌ ಸ್ವರೂಪ್‌ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ಎಚ್‌ಡಿ ರೇವಣ್ಣ ಅವರು ಹಾಸನ ಟಿಕೆಟ್‌ ಯಾರಿಗೆ ಸಿಗಬೇಕು ಎನ್ನುವುದರ ಬಗ್ಗೆ ದೇವೇಗೌಡರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ ಅಂತಿಮವಾಗಿ ಹಾಸನ ಟಿಕೆಟ್‌ ಅನ್ನು ಸ್ವರೂಪ್‌ ಪಡೆದುಕೊಂಡಿದ್ದು ಭವಾನಿ ರೇವಣ್ಣಗೆ ಭಾರೀ ಹಿನ್ನಡೆಯಾಗಿದೆ.

  • ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್ ಫಿಕ್ಸ್ – ಪರೋಕ್ಷವಾಗಿ ಸುಳಿವು ಕೊಟ್ಟ HDK

    ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್ ಫಿಕ್ಸ್ – ಪರೋಕ್ಷವಾಗಿ ಸುಳಿವು ಕೊಟ್ಟ HDK

    – ನನ್ನ ಹತ್ರ ಬ್ಲ್ಯಾಕ್‌ಮೇಲ್‌ ನಡೆಯಲ್ಲ; ರೇವಣ್ಣ ದಂಪತಿಗೆ ಟಾಂಗ್

    ಬೆಂಗಳೂರು: ಹಾಸನ ಟಿಕೆಟ್ (Hassan Ticket) ಕಗ್ಗಂಟು ಮತ್ತೊಂದು ಹಂತದಲ್ಲಿ ಕುತೂಹಲ ಕೆರಳಿಸಿದೆ.

    ಯಲಹಂಕದಲ್ಲಿ ಪಂಚರತ್ನ ರಥಯಾತ್ರೆ ವೇಳೆ ಕಾರ್ಯಕರ್ತನೋರ್ವ, ಪಕ್ಷದ ಪರವಾಗಿ ಕೆಲಸ ಮಾಡಿದವರಿಗೆ ಟಿಕೆಟ್ ನೀಡಬೇಕು. ಹಾಸನದಲ್ಲಿ ಸ್ವರೂಪ್‌ಗೆ (Swaroop) ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಮುಲ್ ದೇಶದ ಬ್ರ್ಯಾಂಡ್‌, ಭಾರತದಲ್ಲೇ ಮಾರಾಟ ಮಾಡಿದ್ರೆ ಏನು ತೊಂದ್ರೆ – ಸಿ.ಟಿ ರವಿ ಪ್ರಶ್ನೆ

    ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಮಾಧ್ಯಮಮಿತ್ರರಿಗೂ ಹೇಳ್ತೀನಿ ಕೇಳಿಸಿಕೊಳ್ಳಿ. ಕಾರ್ಯಕರ್ತರ ಅಭಿಪ್ರಾಯವೇ ನಮ್ಮ ಅಭಿಪ್ರಾಯ. ಕಾರ್ಯಕರ್ತರಿಗೆ ಟಿಕೆಟ್ ಅಂತಾ ಹೇಳಿದ್ದೀನಿ. ಅದರಲ್ಲಿ ಬದಲಾವಣೆ ಇಲ್ಲ ಅಂತ ಪರೋಕ್ಷವಾಗಿ ಸ್ವರೂಪ್‌ಗೇ ಟಿಕೆಟ್ ಅಂತ ಹೇಳಿದ್ದಾರೆ. ಇದನ್ನೂ ಓದಿ: ದೇವೇಗೌಡ್ರು ಅಡುಗೆ ಮನೆಯಲ್ಲಿ ಅರ್ಧ ಗಂಟೆ ಕುಳಿತರೆ ಜೆಡಿಎಸ್ ಟಿಕೆಟ್ ಹಂಚಿಕೆ ಮುಗಿಯುತ್ತೆ: ತೇಜಸ್ವಿ ಸೂರ್ಯ ವ್ಯಂಗ್ಯ

    ಈ ಮಧ್ಯೆ, ಹಾಸನದಲ್ಲಿ ಭವಾನಿಗೆ (Bhavani Revanna) ಟಿಕೆಟ್ ತಪ್ಪಿದರೆ, ಹೊಳೇನರಸೀಪುರದಲ್ಲಿ ನಾನೂ ಕೂಡ ಸ್ಪರ್ಧೆ ಮಾಡಲ್ಲ ಅಂತಾ ಶುಕ್ರವಾರ ಸಭೆಯಲ್ಲಿ ರೇವಣ್ಣ (HD Revanna) ಹೇಳಿದ್ದಾರೆ ಅನ್ನೋದು ತಿಳಿದು ಬಂದಿದೆ. ಇದರ ಬೆನ್ನಲ್ಲೇ, ನನ್ನ ಹತ್ತಿರ ಬ್ಲ್ಯಾಕ್‌ ಮೇಲ್‌ ನಡೆಯಲ್ಲ ಅಂತಲೂ ಪರೋಕ್ಷವಾಗಿ ರೇವಣ್ಣ ದಂಪತಿಗೆ ಟಾಂಗ್ ಕೊಟ್ಟಿದ್ದಾರೆ.

  • ಭವಾನಿಗೆ ಟಿಕೆಟ್ ಮಿಸ್ ಆದ್ರೆ ಕೆಆರ್ ಪೇಟೆ ಮೇಲೂ ಪ್ರಭಾವ?

    ಭವಾನಿಗೆ ಟಿಕೆಟ್ ಮಿಸ್ ಆದ್ರೆ ಕೆಆರ್ ಪೇಟೆ ಮೇಲೂ ಪ್ರಭಾವ?

    ಹಾಸನ: ರಾಜ್ಯ ವಿಧಾನಸಭಾ ಚುನಾವಣೆಯ (Assembly Election) ಅಖಾಡ ಗರಿಗೆದರಿದೆ. ಅದರಲ್ಲೂ ಹಾಸನ (Hassan) ವಿಧಾನಸಭಾ ಕ್ಷೇತ್ರದ ಜೆಡಿಎಸ್ (JDS) ಟಿಕೆಟ್ ಹಂಚಿಕೆ ವಿಚಾರ ರಾಜ್ಯ ರಾಜಕಾರಣದಲ್ಲಿ ಫುಲ್ ಸೌಂಡ್ ಮಾಡ್ತಾ ಇದೆ. ಇಲ್ಲಿ ಭವಾನಿ ರೇವಣ್ಣ (Bhavani Revanna) ಬದಲಿಗೆ ಸ್ವರೂಪ್‌ಗೆ ‌(Swaroop) ಟಿಕೆಟ್ ನೀಡಿದರೆ ಕೇವಲ ಹಾಸನದಲ್ಲಿ ಮಾತ್ರವಲ್ಲ ಕೆಆರ್ ಪೇಟೆ (KR Pete) ಕ್ಷೇತ್ರದಲ್ಲಿ ಜೆಡಿಎಸ್ ಮೇಲೆ ಪ್ರಭಾವ ಬೀರಲಿದೆ.

    ಕಳೆದ 1-2 ತಿಂಗಳಿನಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವುದು ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಆಯ್ಕೆ ವಿಚಾರ. ಹಾಸನದಿಂದ ರೇವಣ್ಣ ಪತ್ನಿ ಭವಾನಿ ರೇವಣ್ಣ ಸ್ಪರ್ಧೆ ಮಾಡಬೇಕೆಂಬ ಅಭಿಲಾಷೆಯನ್ನು ಇಟ್ಟುಕೊಂಡಿದ್ದಾರೆ. ಇತ್ತ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತ ಸ್ವರೂಪ್‌ಗೆ ಟಿಕೆಟ್ ನೀಡಬೇಕೆಂದು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಇಬ್ಬರು ರಾಜಿಯಾಗದ ಕಾರಣ ಟಿಕೆಟ್ ಬಿಕ್ಕಟ್ಟಿನ ಫೈಟ್ ಜೋರಾಗಿ ನಡೆಯುತ್ತಿದೆ. ಇದಕ್ಕೆಲ್ಲಾ ಇದೇ ಶುಕ್ರವಾರ ದೇವೇಗೌಡರ ಸಮ್ಮುಖದಲ್ಲಿ ಇತಿಶ್ರೀ ಹಾಡಿ, ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಫೈನಲ್ ಮಾಡಲಾಗುತ್ತೆ ಎಂದು ಜೆಡಿಎಸ್ ಮೂಲಗಳು ಹೇಳುತ್ತಿವೆ.

    ಒಂದು ವೇಳೆ ಹಾಸನದಿಂದ ಭವಾನಿಗೆ ಟಿಕೆಟ್ ತಪ್ಪಿಸಿ ಸ್ವರೂಪ್‌ಗೆ ನೀಡಿದ್ದಲ್ಲಿ ಹಾಸನ ಕ್ಷೇತ್ರದ ಜೆಡಿಎಸ್‌ನಲ್ಲಿ ಒಂದಷ್ಟು ಡ್ಯಾಮೇಜ್ ಆಗೋದು ಗ್ಯಾರಂಟಿ. ಈ ಡ್ಯಾಮೇಜ್ ಕೇವಲ ಹಾಸನ ಕ್ಷೇತ್ರದಲ್ಲಿ ಮಾತ್ರವಲ್ಲ ಹಾಸನ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸಮಸ್ಯೆ ಎದುರಾಗೋದು ಕಟ್ಟಿಟ್ಟ ಬುತ್ತಿ. ಇದನ್ನೂ ಓದಿ: ಮಹಿಳೆಯನ್ನು ನಿಂದಿಸಿ ಹಲ್ಲೆ ಆರೋಪ – ಮುಳಬಾಗಿಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿರುದ್ಧ ಎಫ್‌ಐಆರ್

    ಏಕೆಂದರೆ ಕೆಆರ್ ಪೇಟೆ ಕ್ಷೇತ್ರದ ಮೇಲೆ ರೇವಣ್ಣ ಅವರ ಹಿಡಿತವಿದೆ. ಈಗಾಗಲೇ ಕೆಆರ್ ಪೇಟೆ ಜೆಡಿಎಸ್ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ರೇವಣ್ಣ ಆಪ್ತರಿಗೆ ಟಿಕೆಟ್ ನೀಡದೇ ಹೆಚ್‌ಡಿಕೆ ತಮ್ಮ ಆಪ್ತರಾಗಿರುವ ಹೆಚ್‌ಡಿ ಮಂಜುಗೆ ಟಿಕೆಟ್ ನೀಡಿದ್ದಾರೆ. ಈ ವಿಚಾರದಲ್ಲಿ ಬೇಸರಗೊಂಡು ರೇವಣ್ಣ ಆಪ್ತರಾದ ಬಿಎಲ್ ದೇವರಾಜು, ಬಸ್ ಕೃಷ್ಣೇಗೌಡ ಸೇರಿದಂತೆ ಹಲವರು ಕಾಂಗ್ರೆಸ್ ಸೇರಿದ್ದಾರೆ.

    ಹೀಗಿರುವಾಗ ಭವಾನಿ ರೇವಣ್ಣಗೆ ಟಿಕೆಟ್ ಕೈ ತಪ್ಪಿದ್ರೆ, ರೇವಣ್ಣ ಬಯಸಿದ ಹಾಗೆ ಕೆಆರ್ ಪೇಟೆ ಕ್ಷೇತ್ರದಲ್ಲಿ ತಮ್ಮ ಆಪ್ತನಿಗೆ ಹಾಗೂ ಹಾಸನ ಕ್ಷೇತ್ರದಲ್ಲಿ ಪತ್ನಿಗೆ ಟಿಕೆಟ್ ಕೊಡಿಸದಂತೆ ಆಗುತ್ತದೆ. ಹೀಗಾಗಿ ಹಾಸನ ಕ್ಷೇತ್ರದ ಜೊತೆಗೆ ಕೆಆರ್ ಪೇಟೆ ಕ್ಷೇತ್ರದಲ್ಲೂ ರೇವಣ್ಣ ಬೆಂಬಲಿಗರು ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡದೇ ಇರಬಹುದು. ಇದೇ ಕಾರಣಕ್ಕೋ ಏನೋ ಕುಮಾರಸ್ವಾಮಿ ಕಳೆದ 2 ದಿನಗಳ ಹಿಂದೆ ಕೆಆರ್ ಪೇಟೆ ಭಾಷಣದ ವೇಳೆ, ನಮ್ಮ ನೆಂಟರೇ ಈ ಕ್ಷೇತ್ರಕ್ಕೆ ಬರಬಹುದು. ಅವರು ಬಂದು ಜೆಡಿಎಸ್ ಅಭ್ಯರ್ಥಿ ಸೋಲಿಸಿ ಎಂದು ಹೇಳಬಹುದು. ಅವರ ಕುತಂತ್ರಗಳಿಗೆ ಯಾರು ಒಳಗಾಗಬೇಡಿ ಎಂದು ಹೇಳಿದ್ದರು.

    ಒಟ್ಟಾರೆ ಭವಾನಿ ರೇವಣ್ಣಗೆ ಟಿಕೆಟ್ ಕೈ ತಪ್ಪಿದರೆ ಹಾಸನ ಕ್ಷೇತ್ರದ ಜೊತೆಗೆ ಕೆಆರ್ ಪೇಟೆ ಕ್ಷೇತ್ರದಲ್ಲೂ ಜೆಡಿಎಸ್‌ಗೆ ಪೆಟ್ಟು ಬೀಳಬಹುದು. ಅದೇ ಕಾರಣಕ್ಕೆ ಕುಮಾರಸ್ವಾಮಿ ಮೊದಲೇ ನಿರೀಕ್ಷಣಾ ಜಾಮೀನು ಹಾಕಿಕೊಂಡಿರಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಏ. 9ಕ್ಕೆ ಮೋದಿ ಬಂಡೀಪುರ ಭೇಟಿ – ಪ್ರವಾಸಿಗರಿಗೆ ಇಂದಿನಿಂದ 4 ದಿನ ಸಫಾರಿ, ರೆಸಾರ್ಟ್ ವಾಸ್ತವ್ಯ ಬಂದ್

  • ಹಾಸನದಲ್ಲಿ ಮತ್ತೆ ಸ್ವರೂಪ್ Vs ಭವಾನಿ ಫೈಟ್- ಇಬ್ಬರಿಂದಲೂ ವರಿಷ್ಠರಿಗೆ ಡೆಡ್‍ಲೈನ್ ಡಿಮ್ಯಾಂಡ್

    ಹಾಸನದಲ್ಲಿ ಮತ್ತೆ ಸ್ವರೂಪ್ Vs ಭವಾನಿ ಫೈಟ್- ಇಬ್ಬರಿಂದಲೂ ವರಿಷ್ಠರಿಗೆ ಡೆಡ್‍ಲೈನ್ ಡಿಮ್ಯಾಂಡ್

    ಹಾಸನ: ಜೆಡಿಎಸ್‌ನಲ್ಲಿ(JDS) ಹಾಸನ ಕ್ಷೇತ್ರಕ್ಕಾಗಿ (Hassana Assembly Constituency) ಸ್ವರೂಪ್‌ ಮತ್ತು ಭವಾನಿ ರೇವಣ್ಣ (Bhavani Revanna) ಮಧ್ಯೆ ಈಗಾಗಲೇ ಫೈಟ್‌ ಆರಂಭವಾಗಿದ್ದು ಇಬ್ಬರೂ ತಮಗೆ ಟಿಕೆಟ್‌ ಹಂಚಿಕೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

    ಹಳೇ ಮೈಸೂರು ಭಾಗದ ಹಾಸನ ಜೆಡಿಎಸ್‌ ಭದ್ರಕೋಟೆ. ಈ ಭದ್ರಕೋಟೆಯಲ್ಲಿ ಕಳೆದ ಚುನಾವಣೆಯಲ್ಲಿ ಪ್ರೀತಂ ಗೌಡ (Preetham J Gowda) ಕಮಲ ಅರಳಿಸಿದ್ದರು. ಕಮಲ ಅರಳಿದ್ದೇ ತಡ ಪ್ರೀತಂ ಗೌಡರನ್ನು ಈ ಬಾರಿ ಸೋಲಿಸಲು ಜೆಡಿಎಸ್‌ ಪಣ ತೊಟ್ಟಿದೆ. ಆದರೆ ಚುನಾವಣೆಯ ಯುದ್ಧಕ್ಕೆ ಧುಮುಕುವ ಮೊದಲು ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕಗ್ಗಂಟು ಮುಂದುವರಿದಿದೆ.

    ಭವಾನಿ, ಸ್ವರೂಪ್‌ (Swaroop Gowda) ಪೈಕಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ನೀಡಿದರೆ ಬಂಡಾಯ ಏಳುವುದು ಫಿಕ್ಸ್‌. ಈ ಇಬ್ಬರು ವರಿಷ್ಠರ ಮುಂದೆ ತಮಗೆ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇಬ್ಬರ ಪೈಕಿ ಅಂತಿಮವಾಗಿ ಟಿಕೆಟ್‌ ಯಾರಿಗೆ ಸಿಗಲಿದೆ ಎನುವುದೇ ಸದ್ಯದ ಕುತೂಹಲ.  ಇದನ್ನೂ ಓದಿ: ನನ್ನ ಜೀವನದ 3ನೇ ಪ್ರಭಾವಶಾಲಿ ವ್ಯಕ್ತಿ ರಾಹುಲ್‌ ಗಾಂಧಿ – ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ರಮ್ಯಾ ಮಾತು

    ಸ್ವರೂಪ್ ಬೇಡಿಕೆ ಏನು?
    ಹಾಸನದ ಟಿಕೆಟ್ ನನಗೆ ಎಂದು ಮೊದಲೇ ಮಾತು ಕೊಟ್ಟಿದ್ದೀರಿ ಅದರಂತೆ ಟಿಕೆಟ್ ನನಗೆ ಕೊಡಬೇಕು. ಈಗಾಗಲೇ ಈ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿ ಸಂಘಟನೆ ಮಾಡಿದ್ದೇನೆ. ಭವಾನಿ ಗೊಂದಲ ನಿವಾರಿಸಿ ಪಕ್ಷದ ಪರ ಕೆಲಸ ಮಾಡುವಂತೆ ಮನವೊಲಿಸಬೇಕು. ಟಿಕೆಟ್ ಕೊಡದಿದ್ದರೆ ನನ್ನ ರಾಜಕೀಯ ಜೀವನಕ್ಕಾಗಿ ಕಾಂಗ್ರೆಸ್ ಪಕ್ಷ ಸೇರುವುದು ಅನಿವಾರ್ಯ. ಆದಷ್ಟು ಬೇಗ ಟಿಕೆಟ್ ಗೊಂದಲ ನಿವಾರಣೆ ಮಾಡಿ ಟಿಕೆಟ್ ಘೋಷಣೆ ಮಾಡಬೇಕು.


    ಭವಾನಿ ರೇವಣ್ಣ ಬೇಡಿಕೆ ಏನು?
    ಕಳೆದ ಬಾರಿ ನಿಮ್ಮ ಮಾತಿಗೆ ಗೌರವ ನೀಡಿ ಹಿಂದೆ ಸರಿದಿದ್ದೆ. ಆದರೆ ಈ ಬಾರಿ ನನಗೆ ಟಿಕೆಟ್ ಕೊಡಲೇಬೇಕು. ಇದು ನನ್ನ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ ಎಂದು ಜನ ನಂಬಿದ್ದಾರೆ. ಈಗ ಟಿಕೆಟ್ ತಪ್ಪಿದರೆ ಕ್ಷೇತ್ರದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಸ್ವರೂಪ್‍ಗೆ ಟಿಕೆಟ್ ಕೊಟ್ಟರೆ ಆತ ಗೆಲ್ಲಲು ಸಾಧ್ಯವಿಲ್ಲ. ನಾನು ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿದ್ದು, ಪ್ರೀತಂಗೌಡ ವಿರುದ್ಧ ನಾನೇ ಸರಿಯಾದ ಅಭ್ಯರ್ಥಿ. ಸ್ವರೂಪ್‍ಗೆ ಪರ್ಯಾಯ ವ್ಯವಸ್ಥೆ ಮಾಡಿ ಮಾಡಿ ನನಗೆ ಬೆಂಬಲ ಕೊಡುವಂತೆ ಮನವೊಲಿಸಬೇಕು.

  • ಹಾಸನ ಟಿಕೆಟ್ ವಿಚಾರ – HDD ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ: HDK

    ಹಾಸನ ಟಿಕೆಟ್ ವಿಚಾರ – HDD ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ: HDK

    ರಾಮನಗರ: ಹಾಸನದಿಂದ (Hassan) ಭವಾನಿ ರೇವಣ್ಣ (Bhavani Revanna) ಅವರಿಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರಕ್ಕೆ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯೆ ನೀಡಿದ್ದಾರೆ.

    ಪ್ರತಿಭಟನೆಯನ್ನು ಎಲ್ಲರೂ ಮಾಡುತ್ತಾರೆ. ನಿನ್ನೆ ಸ್ವರೂಪ್ (Swaroop) ಬೆಂಬಲಿಗರು ಮಾಡಿದ್ರು. ಇಂದು ಭವಾನಿ ರೇವಣ್ಣ ಪರವಾಗಿ ಮಾಡುತ್ತಿದ್ದಾರೆ. ನಾನು ಎಲ್ಲವನ್ನೂ ಗಮನಿಸಿದ್ದೇನೆ. ಹಾಗಂತ ಎಲ್ಲರಿಗೂ ಟಿಕೆಟ್ ಕೊಡೋದಕ್ಕೆ ಆಗಲ್ಲ. ಈ ಬಗ್ಗೆ ಅಂತಿಮ ನಿರ್ಣಯ ಮಾಡಲಾಗುತ್ತದೆ ಎಂದರು.

    ಮಾಜಿ ಪ್ರಧಾನಿ ದೇವೇಗೌಡರು (HD Deve Gowda) ಹಾಸನದ ಟಿಕೆಟ್ ವಿಚಾರವಾಗಿ ಮಧ್ಯಸ್ಥಿಕೆ ವಹಿಸುತ್ತಾರಾ ಎಂಬ ಪ್ರಶ್ನೆಗೆ ಉತ್ತಿರಿಸಿದ ಅವರು, ಸದ್ಯ ಹೆಚ್‌ಡಿ ದೇವೇಗೌಡರ ಆರೋಗ್ಯದ ಪರಿಸ್ಥಿತಿ ಸರಿಯಿಲ್ಲ. ಈ ವಿಚಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವುದು ಅವರಿಂದ ಅಸಾಧ್ಯ. ಅದಕ್ಕಾಗಿ ಎಲ್ಲರೂ ಈ ಬಗ್ಗೆ ಕೂತು ಚರ್ಚೆ ಮಾಡಿ ಬಗೆಹರಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ನೀವು ವೋಟು ಹಾಕದೇ ಮನೆಯಲ್ಲಿಯೇ ಕುಳಿತರೆ ಬಿಜೆಪಿಗೆ ಲಾಭ: ಮುಸ್ಲಿಮರಲ್ಲಿ ಜಮೀರ್ ಮನವಿ

    ಅಭ್ಯರ್ಥಿಯಾಗಬೇಕು ಎಂಬ ಆಸೆ ಇದ್ದವರು ಈ ರೀತಿಯ ಒತ್ತಡ ಹಾಕುವುದು, ಪ್ರತಿಭಟನೆ ಮಾಡುವುದು ಸಹಜ. ಸದ್ಯದಲ್ಲೇ ಬಿಡುಗಡೆಯಾಗಲಿರುವ 2ನೇ ಪಟ್ಟಿಯಲ್ಲಿ ಹಾಸನ ಅಭ್ಯರ್ಥಿ ಹೆಸರು ಕೂಡಾ ಫೈನಲ್ ಆಗಲಿದೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇದನ್ನೂ ಓದಿ: ಹಾಸನ ರಾಜಕೀಯ ಡೊಂಬರಾಟಕ್ಕೆ ರೇವಣ್ಣ ಕಾರಣ: ಎ.ಟಿ.ರಾಮಸ್ವಾಮಿ

  • ಭವಾನಿ-ರೇವಣ್ಣ ನಡೆಯಿಂದ ಮತ್ತೆ ಗೊಂದಲಕ್ಕೆ ಬಿದ್ದ ಸ್ವರೂಪ್‌

    ಭವಾನಿ-ರೇವಣ್ಣ ನಡೆಯಿಂದ ಮತ್ತೆ ಗೊಂದಲಕ್ಕೆ ಬಿದ್ದ ಸ್ವರೂಪ್‌

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k