Tag: ಸ್ವಯಂ ಸೇವಕ

  • ಕೊರೊನಾ ನಿಯಂತ್ರಣಕ್ಕೆ ಮೈಸೂರು ಪೊಲೀಸರಿಂದ ವಿನೂತನ ಪ್ರಯತ್ನ – ಸ್ವಯಂ ಸೇವಕರಿಗೆ ಗುರುತಿನ ಚೀಟಿ

    ಕೊರೊನಾ ನಿಯಂತ್ರಣಕ್ಕೆ ಮೈಸೂರು ಪೊಲೀಸರಿಂದ ವಿನೂತನ ಪ್ರಯತ್ನ – ಸ್ವಯಂ ಸೇವಕರಿಗೆ ಗುರುತಿನ ಚೀಟಿ

    ಮೈಸೂರು: ಕೊರೋನಾ ವೈರಸ್ ರೂಪಾಂತರಿ ಓಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚುತ್ತಿದ್ದು, ಇದೀಗ ಮೈಸೂರಿ ಪೊಲೀಸರು ಕೊರೋನಾ ನಿಯಂತ್ರಣಕ್ಕೆ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಮೈಸೂರು ಪೊಲೀಸರು ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಯೋಜಿಸಿದ್ದು, ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಮುಂದೆ ಬರುವವರಿಗೆ ಗುರುತಿನ ಚೀಟಿ ವಿತರಿಸಲಿದ್ದಾರೆ. ಇದನ್ನೂ ಓದಿ: ಕಸ ಎಸೆದ ಯುವಕನಿಗೆ ರಸ್ತೆ ಮಧ್ಯೆ ಸಿಟಿ ರವಿ ಕ್ಲಾಸ್

    ಮೈಸೂರಿನ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ 200 ಮಂದಿ ಸ್ವಯಂ ಸೇವಕರನ್ನು ನಿಯೋಜನೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದು, ಅವರಿಗೆ ಗುರುತಿನ ಚೀಟಿಯನ್ನೂ ವಿತರಿಸಲಾಗುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹೇಳಿದ್ದಾರೆ.

    ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ಈ ಪ್ರಯತ್ನ ಮುಂದುವರಿಯಲಿದ್ದು, ನಂತರದ ದಿನಗಳಲ್ಲಿ ಬೇರೆ ಉದ್ದೇಶಗಳಿಗೂ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ನೈಟ್ ಕರ್ಫ್ಯೂ ಮಾಡುವ ಬದಲು ಬೆಳಗ್ಗೆಯಿಂದಲೇ ಕರ್ಫ್ಯೂ ಜಾರಿ ಮಾಡಿ: ರೆಸಾರ್ಟ್ ಮಾಲೀಕರ ಅಕ್ರೋಶ

  • ಕಾಂಗ್ರೆಸ್ ಕಾರ್ಯಕ್ರಮಕ್ಕೆ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದ ಮೋದಿ

    ಕಾಂಗ್ರೆಸ್ ಕಾರ್ಯಕ್ರಮಕ್ಕೆ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದ ಮೋದಿ

    ನವದೆಹಲಿ: ದೇಶದಲ್ಲಿ ಹೆಚ್ಚು ಕಾಲ ಅಧಿಕಾರ ನಡೆಸಿದ ಹೆಗ್ಗಳಿಕೆಯನ್ನು ಕಾಂಗ್ರೆಸ್ ಪಕ್ಷ ಪಡೆದಿದ್ದು, ಆದರೆ ಕಳೆದ 2 ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳನ್ನು ಪಡೆದಿತ್ತು. ಕಾಂಗ್ರೆಸ್ ಪಕ್ಷದ ಸೋಲಿಗೆ ಹಲವು ಕಾರಣಗಳಿದ್ದರೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದ್ದ ಬೆಂಬಲ ಇದಕ್ಕೆ ಪ್ರಮುಖ ಕಾರಣ ಎನ್ನಬಹುದು. ಇಂತಹ ನರೇಂದ್ರ ಮೋದಿ ಅವರು ತಮ್ಮ ಬಾಲ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದಕ್ಕೆ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    1956 ರಲ್ಲಿ ಅಂದಿನ ಗುಜರಾತ್ ಕಾಂಗ್ರೆಸ್ ಪಕ್ಷದ ನಾಯಕರಾದ ರಸಿಕ್ ಭಾಯ್ ದವೆ ಅವರ ನೇತೃತ್ವದಲ್ಲಿ ವಡನಗರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮೋದಿ ಸ್ವಯಃ ಸೇವಕರಾಗಿ ಕಾರ್ಯ ನಿರ್ವಹಿಸಿದ್ದರು. ಅಂದು 6 ವರ್ಷದ ಬಾಲಕರಾಗಿದ್ದ ಮೋದಿ ಅವರಿಗೆ, ನೀನು ರಾಜಕೀಯ ಕಾರ್ಯಕ್ರಮದಲ್ಲಿ ಏನು ಕೆಲಸ ಮಾಡುತ್ತಿಯಾ ಎಂದು ದವೆ ಅವರು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ್ದ ಮೋದಿ ಅವರು, ಕಾರ್ಯಕ್ರಮಕ್ಕೆ ಬರುವ ಜನರಿಗೆ ಬ್ಯಾಡ್ಜ್ ಹಂಚಿಕೆ ಮಾಡುವುದಾಗಿ ಹೇಳಿದ್ದರು. ಇದಕ್ಕೆ ಸಮ್ಮತಿ ಸೂಚಿಸಿದ್ದ ದವೆ ಅವರು ಸ್ವಯಂ ಸೇವಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು.

    ‘ದಿ ಮ್ಯಾನ್ ಆಫ್ ಮೂಮೆಂಟ್: ನರೇಂದ್ರ ಮೋದಿ’ ಪುಸ್ತಕವನ್ನು ಬರೆದಿರುವ ಎಂವಿ ಕಾಮತ್ ಹಾಗೂ ಕಾಳಿಂದಿ ರಾಂಡೇರಿ ಅವರು ಈ ವಿಚಾರವನ್ನು ಉಲ್ಲೇಖ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮೋದಿ ಬ್ಯಾಡ್ಜ್ ವಿತರಣೆ ಮಾಡಿದ್ದು ನಿಜ ಎಂದು ವಡನಗರ ಕಾಂಗ್ರೆಸ್ ನಾಯಕರಾಗಿದ್ದ ದ್ವಾರಕನಾಥ್ ಅವರು ಸ್ಪಷ್ಟಪಡಿಸಿದ್ದರು. ದವೆ ಅವರ ಬಗ್ಗೆ ಹೆಚ್ಚು ಗೌರವವನ್ನು ಹೊಂದಿರುವ ಮೋದಿ ಅವರು ತಾವು ಓದಿದ್ದ ಶಾಲೆಯ ಗೋಲ್ಡನ್ ಜೂಬ್ಲಿ ಕಾರ್ಯಕ್ರಮದಲ್ಲಿ ದವೆ ಅವರಿಂದ ಆರ್ಶೀವಾದ ಪಡೆದಿದ್ದರು. ಅಲ್ಲದೇ 1999 ರಲ್ಲಿ ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ದವೆರನ್ನು ಆತ್ಮೀಯವಾಗಿ ಮಾತನಾಡಿದ್ದರು. ಇದರಿಂದ ದವೆ ಸಂತೋಷಗೊಂಡಿದ್ದರು. ಈ ವಿಚಾರವನ್ನು ದವೆ ಅವರ ಪತ್ನಿ ಹೇಳಿದ್ದಾಗಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಇಂದು ತಮ್ಮ 69ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಧಾನಿ ಮೋದಿ ಅವರು ಮೊದಲು ತಮ್ಮ ತಾಯಿಯವರನ್ನು ಭೇಟಿ ಮಾಡಿ ಆರ್ಶೀವಾದ ಪಡೆದುಕೊಂಡಿದ್ದಾರೆ.

  • ಸ್ವಚ್ಛಗೊಳಿಸಿದ್ದ ಜಾಗದಲ್ಲಿ ಎಸೆದ ಕಸವನ್ನು ಮತ್ತೆ ಅಂಗಡಿಯೊಳಗೆ ಸುರಿದು ಜಾಗೃತಿ ಮೂಡಿಸಿದ ಮಂಗ್ಳೂರು ಯುವಕ!

    ಸ್ವಚ್ಛಗೊಳಿಸಿದ್ದ ಜಾಗದಲ್ಲಿ ಎಸೆದ ಕಸವನ್ನು ಮತ್ತೆ ಅಂಗಡಿಯೊಳಗೆ ಸುರಿದು ಜಾಗೃತಿ ಮೂಡಿಸಿದ ಮಂಗ್ಳೂರು ಯುವಕ!

    ಮಂಗಳೂರು: ರಸ್ತೆಯಲ್ಲಿ ಕಸ ಎಸೆದಿದ್ದಕ್ಕೆ ಸಿಟ್ಟಾದ ಯುವಕನೊಬ್ಬ ಅದೇ ಕಸವನ್ನು ಬಟ್ಟೆ ಅಂಗಡಿ ಒಳಗೆ ಸುರಿದ ಘಟನೆ ಮಂಗಳೂರಿನ ಕರಂಗಲ್ಪಾಡಿಯಲ್ಲಿ ನಡೆದಿದೆ.

    ರಾಮಕೃಷ್ಣ ಮಿಷನ್ ವತಿಯಿಂದ ಪ್ರತಿ ಆದಿತ್ಯವಾರ ನೂರಾರು ಸ್ವಯಂ ಸೇವಕರು ಮಂಗಳೂರು ನಗರವನ್ನು ಸ್ವಚ್ಛಗೊಳಿಸುತ್ತಾರೆ. ಆದ್ರೆ ಮಾರನೇ ದಿನ ಮತ್ತೆ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಸಾರ್ವಜನಿಕರು ಕಸ ಹಾಕುತ್ತಿದ್ದರು. ಮಂಗಳೂರಿನ ಕರಂಗಲ್ಪಾಡಿಯಲ್ಲೂ ಡಿ.31 ರ ಆದಿತ್ಯವಾರ ಸ್ವಯಂಸೇವಕರು ಸ್ವಚ್ಛಗೊಳಿಸಿದ್ದು, ಅದೇ ದಿನ ಸ್ಥಳೀಯ ಶಾಪ್ ನ ಸಿಬ್ಬಂದಿ ಅದೇ ಜಾಗದಲ್ಲಿ ಕಸ ಎಸೆದಿದ್ದಾರೆ.

    ಇದರಿಂದ ಕೋಪಗೊಂಡ ಸೌರಜ್ ಮಂಗಳೂರು ಎಂಬ ಯುವಕ ಶಾಪ್ ನ ಸಿಬ್ಬಂದಿ ಎಸೆದ ಕಸವನ್ನು ರಸ್ತೆ ಬದಿಯಿಂದ ಸಂಗ್ರಹಿಸಿ ಶಾಪ್ ಒಳಗೆ ಸುರಿದಿದ್ದಾರೆ. ಸ್ವಚ್ಛಗೊಳಿಸಿದ ಸ್ಥಳದಲ್ಲೇ ಕಸ ಸುರಿದ ಶಾಪ್ ನ ಸಿಬ್ಬಂದಿ ಒಂದು ಕ್ಷಣ ವಿಚಲಿತರಾದ್ರೂ ಸೌರಜ್ ನ ಕೋಪದ ಮುಂದೆ ತಣ್ಣಗಾಗಿದ್ದಾರೆ. ಸೌರಜ್ ಫೇಸ್ ಬುಕ್ ಲೈವ್ ಮೂಲಕ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ಹಿಂದೆ ಮೋರ್ಗನ್ಸ್ ಗೇಟ್ ಬಳಿಯೂ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಅಕ್ಕಪಕ್ಕದ ಮನೆಯವರು ಕಸ ಸುರಿದಿದ್ದು, ಸೌರಜ್ ಅದೇ ಕಸವನ್ನು ಸಂಗ್ರಹಿಸಿ ಮನೆಯೊಳಗೆ ಹಾಕಿದ್ದರು. ಆ ನಂತರವಾಗಿ ಮನೆಯವರು ಎಚ್ಚೆತ್ತು ಕಸವನ್ನು ತೊಟ್ಟಿಯಲ್ಲಿ ಹಾಕಲು ಆರಂಭಿಸಿದ್ರು. ಇನ್ಮುಂದೇ ಇದೇ ರೀತಿಯ ಅಭಿಯಾನ ಮಾಡಲು ರಾಮಕೃಷ್ಣ ಮಿಷನ್ ನ ಸ್ವಯಂ ಸೇವಕರು ನಿರ್ಧರಿಸಿದ್ದು, ಎಲ್ಲೆಂದರಲ್ಲಿ ಕಸ ಎಸೆದವರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ.

    https://www.youtube.com/watch?v=SX_4fh8j_rk