Tag: ಸ್ವಯಂ ನಿವೃತ್ತಿ

  • ನಾರಾಯಣ ಬರಮನಿ ಕೇಸ್ – ಕೊನೆಗೂ ಮುಜುಗರದಿಂದ ಪಾರಾದ ಸರ್ಕಾರ

    ನಾರಾಯಣ ಬರಮನಿ ಕೇಸ್ – ಕೊನೆಗೂ ಮುಜುಗರದಿಂದ ಪಾರಾದ ಸರ್ಕಾರ

    ಬೆಂಗಳೂರು: ನಾರಾಯಣ ಬರಮನಿ (ASP Narayan Bharaman)i ಪ್ರಕರಣದಿಂದ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಸರ್ಕಾರ ಕೊನೆಗೂ ಮುಜುಗರದಿಂದ ಪಾರಾಗಿದೆ.

    ಧಾರವಾಡ ಎಎಸ್‌ಪಿ ನಾರಾಯಣ ಬರಮನಿ ಕೆಲಸಕ್ಕೆ ಹಾಜರಾಗಿದ್ದು ಸ್ವಯಂ ನಿವೃತ್ತಿ ಮನವಿಯನ್ನು ಸರ್ಕಾರ ಬದಿಗೆ ಸರಿಸಿದೆ. ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ್ ಮನವೊಲಿಕೆಯ ನಂತರ ನಾರಾಯಣ ಬರಮನಿ ಕೆಲಸಕ್ಕೆ ಹಾಜರಾಗಿದ್ದಾರೆ.

    ಸ್ವಯಂ ನಿವೃತ್ತಿ ಮನವಿಗೆ ಸೋಮವಾರ ಡೆಡ್ ಲೈನ್ ಇತ್ತು. ಸರ್ಕಾರ ಈಗ ವಿಆರ್‌ಎಸ್‌ ಮನವಿಯನ್ನು ಬದಿಗೆ ಸರಿಸಿದ್ದರಿಂದ ಇನ್ನೂ ಮೂರು ವರ್ಷ ನಾರಾಯಣ ಬರಮನಿ ಸೇವೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಬಹುಭಾಷಾ ನಟ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಡುತ್ತಿಲ್ಲ: ಪ್ರಕಾಶ್ ರೈಗೆ ಕುಟುಕಿದ ಎಂಬಿ ಪಾಟೀಲ್‌

     

    ಬಹಿರಂಗ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದ ಅವಮಾನಿತರಾಗಿದ್ದ ಎಎಸ್‌ಪಿ ನಾರಾಯಣ ಭರಮನಿ ಅವರು ಸ್ವಯಂ ನಿವೃತ್ತಿಗೆ ಮುಂದಾಗಿದ್ದರು.

    ಬೆಳಗಾವಿಯಲ್ಲಿ (Belagavi) ನಡೆದ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿದ್ದ ನಾರಾಯಣ ಬರಮನಿ ಅವರನ್ನು ವೇದಿಕೆಗೆ ಕರೆಸಿದ್ದ ಸಿಎಂ ಅಡ್ಡಿಪಡಿಸಲು ಪ್ರತಿಭಟನಾಕಾರರಿಗೆ ಯಾಕೆ ಅವಕಾಶ ನೀಡಿದ್ದೀರಿ ಎಂದು ಪ್ರಶ್ನಿಸಿ ಸಾರ್ವಜನಿಕವಾಗಿ ಹೊಡೆಯಲು ಕೈಎತ್ತಿದ್ದರು. ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾದ ನಂತರ ಬರಮನಿ ಅವರು ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದ್ದರು.

  • ಏರ್ ಇಂಡಿಯಾದ 4,500 ಉದ್ಯೋಗಿಗಳು ಸ್ವಯಂ ನಿವೃತ್ತಿ – ಹೊಸ ವ್ಯವಸ್ಥೆಯೆಡೆಗೆ ಟಾಟಾ ಗ್ರೂಪ್

    ಏರ್ ಇಂಡಿಯಾದ 4,500 ಉದ್ಯೋಗಿಗಳು ಸ್ವಯಂ ನಿವೃತ್ತಿ – ಹೊಸ ವ್ಯವಸ್ಥೆಯೆಡೆಗೆ ಟಾಟಾ ಗ್ರೂಪ್

    ಮುಂಬೈ: ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ಮರಳಿ ಸ್ವಾಧೀನಪಡಿಸುತ್ತಿದ್ದಂತೆಯೇ ತನ್ನ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ(ವಿಆರ್‌ಎಸ್)ಯನ್ನು ಪರಿಚಯಿಸಿದೆ. ಹೊಸ ಪ್ರತಿಭೆಗಳನ್ನು ಕಂಪನಿಗೆ ಆಹ್ವಾನಿಸುವ ಸಲುವಾಗಿ ಟಾಟಾ ಗ್ರೂಪ್ ಈ ಯೋಜನೆಯನ್ನು ಮಾಡಿದ್ದು, ಇದರ ಅಡಿಯಲ್ಲಿ 4,500 ಉದ್ಯೋಗಿಗಳು ನಿವೃತ್ತಿಯನ್ನು ಆಯ್ದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ಕಂಪನಿ ಮೊದಲ ಬಾರಿಗೆ ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಕೆಲವು ಖಾಯಂ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಹೊರತಂದಿದೆ. ವಿಆರ್‌ಎಸ್ ಮಾರ್ಗಸೂಚಿ ಪ್ರಕಾರ 55 ವರ್ಷ ಮೇಲ್ಪಟ್ಟ ಅಥವಾ 20 ವರ್ಷಗಳಿಂದ ಸೇವೆ ಸಲ್ಲಿಸಿದವರಿಗೆ ಮಾತ್ರವೇ ಈ ಯೋಜನೆ ಅನ್ವಯವಾಗುತ್ತದೆ. ಇದನ್ನೂ ಓದಿ: 5ಜಿ ನೆಟ್‌ ಭಾರತದಲ್ಲಿ ಬೆಲೆ ಎಷ್ಟಿರಬಹುದು?

    ಟಾಟಾ ಗ್ರೂಪ್ ಏರ್‌ಲೈನ್‌ನ ಕಾರ್ಯಾಚರಣೆಗೆ, ಸಂಸ್ಥೆಯ ಪರಿಷ್ಕರಣೆಗೆ, ಉತ್ಪಾದಕತೆಯನ್ನು ಸುಧಾರಿಸಲು ಹಾಗೂ ಹಳೆಯ ವ್ಯವಸ್ಥೆಗಳನ್ನು ತೆಗೆದು ಡಿಜಿಟಲೀಕರಣವಾಗಿ ಅಪ್‌ಡೇಟ್ ಮಾಡಲು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಲ್‌ಗೇಟ್ಸ್ ಹಿಂದಿಕ್ಕಿ ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ

    ಏರ್ ಇಂಡಿಯಾದಲ್ಲಿ 8,000 ಖಾಯಂ ಸಿಬ್ಬಂದಿ ಸೇರಿದಂತೆ ಒಟ್ಟು 12,000 ಉದ್ಯೋಗಿಗಳಿದ್ದಾರೆ. ಕಂಪನಿ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ದೇಶದ ಪ್ರಮುಖ ನಗರಗಳಲ್ಲಿ ನೇಮಕಾತಿ ಪ್ರಕಿಯೆ ನಡೆಸುತ್ತಿದೆ.

    Live Tv
    [brid partner=56869869 player=32851 video=960834 autoplay=true]