Tag: ಸ್ವಯಂಪ್ರೇರಿತ ದೂರು

  • `ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ

    `ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ

    – ಸ್ವಯಂಪ್ರೇರಿತ ದೂರು ದಾಖಲಿಸಲು ನಿರ್ಧಾರ

    ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ (Actress Ramay) ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಅಶ್ಲೀಲ ಮೆಸೇಜ್ ಬರುತ್ತಿರುವ ಹಿನ್ನೆಲೆ ಮಹಿಳಾ ಆಯೋಗ (Women Commission) ಸ್ವಯಂಪ್ರೇರಿತ ದೂರು ದಾಖಲಿಸಲು ನಿರ್ಧರಿಸಿದೆ. ಅಲ್ಲದೇ ನಟಿ ರಮ್ಯಾ ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ದೂರು ಕೊಟ್ಟರೆ, 3 ರಿಂದ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

    ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ರಮ್ಯಾ ಅಂತಲ್ಲ, ಬೇರೆ ಬೇರೆ ಕಡೆ ಏನಾದರೂ ಆದಾಗ ಈ ತರ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ತುಂಬಾ ಜನ ಸೆಲೆಬ್ರಿಟಿಗಳು ನಮ್ಮಲ್ಲಿಗೆ ಬಂದು ದೂರು ಕೊಡುತ್ತಾರೆ. ಯಾರು ಅಶ್ಲೀಲ ಪದವನ್ನು ಬಳಕೆ ಮಾಡಬೇಡಿ. ಯಾವ ಮಹಿಳೆಗೂ ಕೂಡ ಅಗೌರವ ತೋರಬೇಡಿ. ನಿಮ್ಮ ಕೆಟ್ಟ ಪದಬಳಕೆಯಿಂದಾಗಿ ಮುಂದೊಂದು ದಿನ ಜೈಲಿಗೂ ಹೋಗಬಹುದು. ಕಾನೂನಿನ ಪ್ರಕಾರ ಇದು ದೊಡ್ಡ ಅಪರಾಧ. ಈ ರೀತಿ ಒಬ್ಬರನ್ನು ನೋಡಿ ಇನ್ನೊಬ್ಬರು ಮಾಡೋದು ಬೇಡ. ಇದು ಸರಿಯಲ್ಲ. ಒಂದು ವೇಳೆ ರಮ್ಯಾ ದೂರು ದಾಖಲು ಮಾಡಿದರೆ ಖಂಡಿತಾ ಎಫ್‌ಐಆರ್ ಆಗುತ್ತದೆ. ಬಳಿಕ ಮೂರರಿಂದ ಏಳು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿರುತ್ತದೆ ಎಂದು ಎಚ್ಚರಿಸಿದ್ದಾರೆ.ಇದನ್ನೂ ಓದಿ: `ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ

    ಸೋಷಿಯಲ್ ಮೀಡಿಯಾದಲ್ಲಿ ಮಾನಹಾನಿ ಪ್ರಕರಣ ಮಾಡಿದರೆ ಅದಕ್ಕೆ ತುಂಬಾ ಗಂಭೀರ ಶಿಕ್ಷೆ ಇದೆ. ಬಹುತೇಕರಿಗೆ ಇದರ ಬಗ್ಗೆ ಅರಿವೇ ಇಲ್ಲ. ಸದ್ಯ ಮಹಿಳಾ ಆಯೋಗ ರಮ್ಯಾ ವಿಚಾರವಾಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸ್ ಕಮೀಷನರ್‌ಗೆ ಪತ್ರ ಬರೆಯಲು ನಿರ್ಧರಿಸಿದೆ. ಇಲ್ಲದೇ ಹೋದರೆ ಇದೇ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ಜೊತೆಗೆ ಡಿ-ಬಾಸ್ ಅಭಿಮಾನಿಗಳು ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಟಿ ಕೂಡ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆಗಿದ್ದಾರೆ. ಜೊತೆಗೆ ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದ್ದವರ ಅಕೌಂಟ್‌ಗಳನ್ನು ಬಹಿರಂಗೊಳಿಸಿದ್ದಾರೆ.ಇದನ್ನೂ ಓದಿ: `I Stand With Ramya’ – ಸ್ಯಾಂಡಲ್‌ವುಡ್ ಕ್ವೀನ್ ಬೆಂಬಲಕ್ಕೆ ನಿಂತ ಒಳ್ಳೆ ಹುಡ್ಗ ಪ್ರಥಮ್

  • ರಾಷ್ಟ್ರೀಯ ಹಸಿರು ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅಧಿಕಾರವಿದೆ: ಸುಪ್ರೀಂಕೋರ್ಟ್

    ರಾಷ್ಟ್ರೀಯ ಹಸಿರು ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅಧಿಕಾರವಿದೆ: ಸುಪ್ರೀಂಕೋರ್ಟ್

    ನವದೆಹಲಿ: ಸಾರ್ವಜನಿಕ ದೂರು, ಪತ್ರಗಳು ಮತ್ತು ಮಾಧ್ಯಮ ವರದಿಗಳನ್ನು ಆಧರಿಸಿ ರಾಷ್ಟ್ರೀಯ ಹಸಿರು ನ್ಯಾಯಧಿಕರಣ(ಎನ್‍ಜಿಟಿ) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸಬಹುದು ಎಂದು ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠ ಹೇಳಿದೆ.

    ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ನೀಡಿದ ನ್ಯಾ.ಎ.ಎಮ್ ಖಾನ್ವಿಲ್ಕರ್, ನ್ಯಾ.ಹೃಷಿಕೇಶ್ ರಾಯ್ ಮತ್ತು ನ್ಯಾ.ಸಿ.ಟಿ ರವಿಕುಮಾರ್ ಒಳಗೊಂಡ ಪೀಠ ಈ ಮಹತ್ವದ ಆದೇಶ ನೀಡಿದೆ. ರಾಷ್ಟ್ರೀಯ ಹಸಿರು ನ್ಯಾಯಧಿಕರಣವು ಪರಿಸರ ರಕ್ಷಣೆಗೇ ಎಂದೇ ಸ್ಥಾಪಿತವಾದ ಪೀಠ. ಪರಿಸರ ರಕ್ಷಣೆ ಉದ್ದೇಶ ಹೊಂದಿರುವ ಕಾರಣ ತನ್ನ ಗಮನಕ್ಕೆ ಬರುವ ಪ್ರಮುಖ ಬೆಳವಣಿಗಳು, ನಿಯಮಗಳ ಉಲ್ಲಂಘನೆ ಬಗ್ಗೆ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲು ಬದ್ಧವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದನ್ನೂ ಓದಿ: ನವರಾತ್ರಿಯ ಮೊದಲದಿನ ಶೈಲಪುತ್ರಿಯ ಆರಾಧನೆ

    ಮುಂಬೈನ ತಾಜ್ಯ ವಿಲೇವಾರಿ ಸಂಬಂಧ ಮಾಧ್ಯಮ ವರದಿಯನ್ನು ಆಧರಿಸಿ ರಾಷ್ಟ್ರೀಯ ಹಸಿರು ನ್ಯಾಯಧಿಕರಣ ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ವಿರುದ್ಧ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಇದರ ಜೊತೆಗೆ ಕೇರಳದಲ್ಲಿ ವಸತಿ ಪ್ರದೇಶದಿಂದ ಕಲ್ಲು ಕ್ವಾರಿಗಳ ದೂರು ನಿಗಧಿ ಮಾಡುವ ವಿಚಾರದಲ್ಲೂ ವಿವಾದವಾಗಿತ್ತು. ಇದನ್ನೂ ಓದಿ: ಜಗಳವಾಡುತ್ತಿದ್ದಾಗ ಗುಂಡಿನ ದಾಳಿ ಮಾಡಿ ಪರಾರಿಯಾದ ವಿದ್ಯಾರ್ಥಿ

    ಈ ಹಿನ್ನೆಲೆ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಸೇರಿದಂತೆ ಹಲವು ಸಂಸ್ಥೆಗಳು ಮತ್ತು ಸರ್ಕಾರಗಳು ರಾಷ್ಟ್ರೀಯ ಹಸಿರು ನ್ಯಾಯಧಿಕರಣದ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅಧಿಕಾರ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಪೀಠ 2010 ರ ಎನ್‍ಜಿಟಿ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಬಹುದು ಎಂದು ಹೇಳಿದೆ.