Tag: ಸ್ವಪ್ನ ರಾವ್

  • ಅಪ್ಪನ ಭುಜದ ಮೇಲೆ ಕುಳಿತು ಸ್ಕ್ರೀನ್ ಪ್ಲೇ ಬರೆದ ಚರಿಷ್ಮಾ!

    ಅಪ್ಪನ ಭುಜದ ಮೇಲೆ ಕುಳಿತು ಸ್ಕ್ರೀನ್ ಪ್ಲೇ ಬರೆದ ಚರಿಷ್ಮಾ!

    ಬೆಂಗಳೂರು: ಚಂದನವನದ ಕೃಷ್ಣ ಎಂದೇ ಖ್ಯಾತಿವೊಂದಿರುವ ಕೃಷ್ಣ ಅಜಯ್ ರಾವ್ ಅವರ ಭುಜದ ಮೇಲೆ ಕುಳಿತು ಮಗಳು ಚರಿಷ್ಮಾ ಸ್ಕ್ರೀನ್ ಪ್ಲೇ ಬರೆದಿದ್ದಾಳೆ.

    ಅಜಯ್ ತನ್ನ ಮುದ್ದು ಮಗಳು ಚರಿಷ್ಮಾ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿರುತ್ತಾರೆ. ಇಂದು ಸಹ ವೀಕೆಂಡ್ ನಲ್ಲಿ ಮಗಳ ಜೊತೆ ಆಟ ಆಡುತ್ತಿರುವ ಅಜಯ್ ರಾವ್ ಇನ್‍ಸ್ಟಾದಲ್ಲಿ ಫೋಟೋ ಮತ್ತು ವೀಡಿಯೋವನ್ನು ಶೇರ್ ಮಾಡಿದ್ದಾರೆ. ಫೋಟೋಗಳಲ್ಲಿ ಅಪ್ಪ-ಮಗಳು ಸಖತ್ ಆಗಿ ಎಕ್ಸ್​ಪ್ರೆಷನ್​  ಕೊಟ್ಟಿದ್ದು, ಅಭಿಮಾನಿಗಳು ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಫೋಟೋ ನೋಡಿದ ಅಭಿಮಾನಿಗಳು ‘ಚೆರ್ರಿ ಸೂಪರ್’, ‘ಕ್ಯೂಟ್ ಗರ್ಲ್’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಫೋಟೋಗಳ ಜೊತೆಗೆ ಅಜಯ್ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಚರಿಷ್ಮಾ ಅಪ್ಪನ ಭುಜದ ಮೇಲೆ ಕುಳಿತುಕೊಂಡು ಏನೋ ಬರೆಯುತ್ತಿದ್ದಾಳೆ. ಅದಕ್ಕೆ ಅಜಯ್, ನನ್ನ ತಲೆ ಮೇಲೆ 1 ಹೊಸ ಚಿತ್ರಕಥೆ ಮೂಡ್ತಾ ಇದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Krishna Ajai Rao (@krishna_ajai_rao)

    ಈ ವೀಡಿಯೋ ನೋಡಿದ ಅಭಿಮಾನಿಗಳು, ಶುಭವಾಗಲಿ ಚೆರ್ರಿ ಪುಟ್ಟಿ ನಿಮ್ಮ ಸ್ಕ್ರೀನ್ ಪ್ಲೇಯನ್ನು ನಾವು ತೆರೆಯ ಮೇಲೆ ನೋಡುತ್ತೇವೆ ಎಂದು ಕಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇದನ್ನೂ ಓದಿ:  ಮುದ್ದು ಮಗಳಿಗೆ ಕನ್ನಡ ಕಲಿಸುತ್ತಿದ್ದಾರೆ ರಾಕಿಂಗ್ ಸ್ಟಾರ್

     

    View this post on Instagram

     

    A post shared by Krishna Ajai Rao (@krishna_ajai_rao)

    ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ 2018ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಡಿ.2ರಂದು ತಮ್ಮ ಮುದ್ದಾದ ಹೆಣ್ಣು ಮಗುವಿಗೆ `ಚರಿಷ್ಮಾ’ ಎಂದು ನಾಮಕರಣ ಮಾಡಿದ್ದರು. ಮಗು ಹುಟ್ಟಿದ ವೇಳೆ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನ ಹಾಗೂ ಪುಟ್ಟ ಕಂದಮ್ಮನ ಜೊತೆ ಸೆಲ್ಫಿ ಕ್ಲಿಕ್ಕಿಸಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದರು.

  • ಮನೆಯ ಪುಟ್ಟ ಬಸವಣ್ಣನನ್ನು ಪರಿಚಯಿಸಿದ ಅಜಯ್ ಪತ್ನಿ

    ಮನೆಯ ಪುಟ್ಟ ಬಸವಣ್ಣನನ್ನು ಪರಿಚಯಿಸಿದ ಅಜಯ್ ಪತ್ನಿ

    ಬೆಂಗಳೂರು: ಸ್ಯಾಂಡಲ್‍ವುಡ್ ಕೃಷ್ಣ ಅಜಯ್ ರಾವ್ ಅವರ ಪತ್ನಿ ತಮ್ಮ ಮಗಳಿಗೆ ಬಸವಣ್ಣನಂತೆ ಉಡುಪು ಹಾಕಿ ಫೋಟೋ ಕ್ಲಿಕ್ಕಿಸಿದ್ದಾರೆ.

    ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮಗಳು ಚರಿಷ್ಮಾಳ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ನಮ್ಮನೆ ಪುಟ್ಟ ಬಸವಣ್ಣ” ಎಂದು ಬರೆದುಕೊಂಡಿದ್ದಾರೆ. ಸ್ವಪ್ನ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೆ ಕ್ಯೂಟ್ ಪಿಕ್ ಎಂದು ಹೇಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    Nammane putta Basavanna????

    A post shared by Sapna Rao (@sapnajairao) on

    ಅಜಯ್ ಅವರು ಡಿಸೆಂಬರ್ 2ರಂದು ತಮ್ಮ ಮುದ್ದಾದ ಹೆಣ್ಣು ಮಗುವಿಗೆ `ಚೆರಿಷ್ಮಾ’ ಎಂದು ನಾಮಕರಣ ಮಾಡಿದ್ದರು. ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ನ. 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನ ಹಾಗೂ ಪುಟ್ಟ ಕಂದಮ್ಮನ ಜೊತೆ ಸೆಲ್ಫಿ ತೆಗೆದುಕೊಂಡ ಫೋಟೋ ವೈರಲ್ ಆಗಿತ್ತು.

    ಮೇ 28ರಂದು ಅಜಯ್ ಅವರ ಪತ್ನಿ ಸ್ವಪ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸ್ವಪ್ನ ಅವರ ಹುಟ್ಟುಹಬ್ಬಕ್ಕೆ ಅಜಯ್ ತಮ್ಮ ಫೇಸ್‍ಬುಕ್‍ನಲ್ಲಿ ಪತ್ನಿಗೆ ಶುಭಾಶಯ ತಿಳಿಸಿದ್ದರು. ಅಲ್ಲದೆ ಪತ್ನಿ ಜೊತೆ ಇರುವ ಮಗಳ ಫೋಟೋವನ್ನು ಕೂಡ ಹಂಚಿಕೊಂಡಿದ್ದರು.

    ಅಜಯ್ ರಾವ್ ಡಿಸೆಂಬರ್ 14, 2014ರಂದು ಸ್ವಪ್ನ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸ್ವಪ್ನ ಅವರು ಎಂಜಿನಿಯರ್ ಪದವಿ ಪಡೆದಿದ್ದು, ಅಜಯ್ ಅವರದ್ದು ಲವ್ ಕಮ್ ಅರೆಂಜ್ ಮ್ಯಾರೇಜ್. ಅಜಯ್ ಆಡಂಭರ ಇಲ್ಲದೆ ತುಂಬಾ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.