Tag: ಸ್ವದೇಶಿ ಕಾರು

  • ಕಿಯಾ ಸ್ವದೇಶಿ ಎಸ್‍ಯುವಿ ಕಾರಿನ ವಿನ್ಯಾಸದ ಮಾದರಿ ಬಿಡುಗಡೆ – ಕಾರಿನ ಬೆಲೆ ಎಷ್ಟಿರಬಹುದು?

    ಕಿಯಾ ಸ್ವದೇಶಿ ಎಸ್‍ಯುವಿ ಕಾರಿನ ವಿನ್ಯಾಸದ ಮಾದರಿ ಬಿಡುಗಡೆ – ಕಾರಿನ ಬೆಲೆ ಎಷ್ಟಿರಬಹುದು?

    ಹೈದರಾಬಾದ್: ದಕ್ಷಿಣ ಕೊರಿಯಾದ ಪ್ರಸಿದ್ಧ ಆಟೋಮೊಬೈಲ್ ಕಂಪನಿ ಕಿಯಾ ಮೋಟಾರ್ಸ್ ಭಾರತದಲ್ಲಿ ಬಿಡುಗಡೆ ಮಾಡಲಿರುವ  ತನ್ನ ಸ್ಪೋರ್ಟ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಕಾರಿನ ವಿನ್ಯಾಸದ ಮಾದರಿಯನ್ನು ಬಿಡುಗಡೆ ಮಾಡಿದೆ.

    ನೂತನ ಎಸ್‍ಯುವಿ ಕಾರು ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. ಹುಂಡೈ ಕಂಪನಿಯ ಕ್ರೇಟಾ, ಟಾಟಾ ಹ್ಯಾರಿಯರ್, ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 500 ಪ್ರತಿ ಸ್ಪರ್ಧಿಯಾಗಿ ಕಿಯಾ ಎಸ್‍ಯುವಿ ಎಸ್‍ಪಿ2 ಮಾರಕುಟ್ಟೆಗೆ ಇಳಿಯಲಿದೆ.

    ಮೇಕ್ ಇನ್ ಇಂಡಿಯಾ ಅಭಿಯಾನದ ಅಡಿ ಎಸ್‍ಯುವಿ ಭಾರತದಲ್ಲಿ ತಯಾರಾಗಿ ವಿದೇಶಕ್ಕೆ ರಫ್ತು ಆಗಲಿದೆ. 12 ಲಕ್ಷ ರೂ. ಆರಂಭಿಕ ಬೆಲೆ ಇರುವ ಈ ಕಾರಿನ ಟಾಪ್ ಎಂಡ್ ಆವೃತ್ತಿಗೆ 16 ಲಕ್ಷ ರೂ. ದರ ನಿಗದಿಯಾಗುವ ಸಾಧ್ಯತೆಯಿದೆ.

    ದಕ್ಷಿಣ ಕೊರಿಯಾದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಕಿಯಾದಲ್ಲಿ ಶೇ.33.88 ರಷ್ಟು ಷೇರುಗಳನ್ನು ಹುಂಡೈ ಕಂಪನಿ ಖರೀದಿಸಿದೆ.

    ಬೆಂಗಳೂರು ಮತ್ತು ಅನಂತಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಎರ್ರಾಮಂಚಿ ಗ್ರಾಮದಲ್ಲಿ ಕಿಯಾ ಮೋಟಾರ್ಸ್ ತನ್ನ ಘಟಕವನ್ನು ತೆರೆದು ಉತ್ಪಾದನಾ ಕಾರ್ಯವನ್ನು ಆರಂಭಿಸಿದೆ. 536 ಎಕ್ರೆ ಜಾಗದಲ್ಲಿ ಘಟಕ ನಿರ್ಮಾಣವಾಗಿದ್ದು, ಕಿಯಾ 100 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ವಾರ್ಷಿಕವಾಗಿ 3 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡುವ ಗುರಿಯನ್ನು ಕಿಯಾ ಹಾಕಿಕೊಂಡಿದೆ.