Tag: ಸ್ವತಂತ್ರ ದಿನ

  • ಸ್ವಾತಂತ್ರ್ಯ ದಿನಾಚರಣೆಯಂದು ಕರಾಳ ದಿನ ಆಚರಿಸಲು ಮುಂದಾದ ಖಾಸಗಿ ಶಾಲೆಗಳು

    ಸ್ವಾತಂತ್ರ್ಯ ದಿನಾಚರಣೆಯಂದು ಕರಾಳ ದಿನ ಆಚರಿಸಲು ಮುಂದಾದ ಖಾಸಗಿ ಶಾಲೆಗಳು

    ಬೆಂಗಳೂರು: ಸರ್ಕಾರ ಮತ್ತು ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳನ್ನ ನಿಯಮಗಳ ಹೆಸರಿನಲ್ಲಿ ಹಿಂಸೆ ಮಾಡುತ್ತಿವೆ ಎಂದು ಆರೋಪಿಸಿ ಖಾಸಗಿ ಶಾಲೆಗಳು ಸರ್ಕಾರದ ವಿರುದ್ಧ ಹೋರಾಟ ನಡೆಸುವ ಘೋಷಣೆ ಮಾಡಿವೆ. ಆ.15 ರಂದು ಖಾಸಗಿ ಶಾಲೆಗಳಲ್ಲಿ ಕರಾಳ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತೇವೆ ಎಂದು ಘೋಷಣೆ ಮಾಡಿವೆ.

    ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕ್ಯಾಮ್ಸ್, ಕುಸ್ಮಾ, ಕುಂಸಾ, ಮಾಸ್ ಸೇರಿ ಹಲವು ಖಾಸಗಿ ಶಾಲೆಗಳ ಸಂಘಟನೆಗಳು ಭಾಗಿಯಾಗಿ ಸರ್ಕಾರದ ವಿರುದ್ಧ ಕಿಡಿಕಾರಿದವು. ಅಗ್ನಿಶಾಮಕ ಪ್ರಮಾಣ ಪತ್ರ, ಭೂನಕ್ಷೆ ಮಂಜೂರು, ಭೂ ಪರಿವರ್ತನೆ ಸೇರಿ ಹಲವು ಪ್ರಮಾಣ ಪತ್ರ ನೀಡಲು ಶಿಕ್ಷಣ ಇಲಾಖೆಯಲ್ಲಿ ಹಿಂಸೆ ಆಗ್ತಿದೆ. ಕೋರ್ಟ್ ನಿಯಮ ಮೀರಿ ಶಿಕ್ಷಣ ಇಲಾಖೆ ನಡೆದುಕೊಳ್ತಿದೆ. 2017-18ರ ಒಳಗೆ ನಿರ್ಮಾಣವಾದ ಶಾಲೆಗಳಿಗೂ ನಿಯಮಗಳನ್ನು ಹಾಕುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಭ್ರಷ್ಟಾಚಾರ ಮಾಡಲೇ ಇಂತಹ ನಿಯಮ ಖಾಸಗಿ ಶಾಲೆಗಳ ಮೇಲೆ ಹೇರಲಾಗಿದೆ ಎಂದು ಖಾಸಗಿ ಶಾಲೆಗಳು ಆರೋಪಿಸಿದವು. ಇದನ್ನೂ ಓದಿ: ಪ್ರತಿದಿನ ಪೊಲೀಸ್ ಅಧಿಕಾರಿಗಳು ಕಲೆಕ್ಷನ್ ಮಾಡ್ಲೇಬೇಕು: ಭಾಸ್ಕರ್ ರಾವ್ ಬೇಸರ

    ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಸಿಎಂ, ಶಿಕ್ಷಣ ಸಚಿವರಿಗೂ ಈ ಬಗ್ಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ಮಧು ಬಂಗಾರಪ್ಪ ಅತ್ಯಂತ ದುರ್ಬಲ ಶಿಕ್ಷಣ ಸಚಿವ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹ ಮಾಡಿದ್ದೆವು. ಸರ್ಕಾರಕ್ಕೆ ಈಗಾಗಲೇ ಎಲ್ಲಾ ಮಾಹಿತಿ ನೀಡಿದ್ದೇವೆ. ಹೀಗಿದ್ದರೂ ನಮ್ಮ ಮೇಲೆ ದಬ್ಬಾಳಿಕೆ ಮಾಡಲು ಮುಂದಾಗಿದ್ದು, ಸರ್ಕಾರ, ಶಿಕ್ಷಣ ಇಲಾಖೆ ನೀತಿ ಖಂಡಿಸಿ ಸ್ವಾತಂತ್ರ್ಯ ದಿನಾಚರಣೆಯನ್ನ ಕರಾಳ ದಿನಾಚರಣೆಯಾಗಿ ಆಚರಣೆ ಮಾಡ್ತೀವಿ‌ ಎಂದರು.

    ಅಂದು ಸುಮಾರು 8 ಸಾವಿರ ಖಾಸಗಿ ಶಾಲೆಗಳ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಸ್ವಾತಂತ್ರ್ಯ ದಿನ ಆಚರಣೆ ಮಾಡುತ್ತೇವೆ ಎಂದರು. ಸರ್ಕಾರ ಸಮಸ್ಯೆಗೆ ಪರಿಹಾರ ನೀಡದೇ ಹೋದರೆ ಶಿಕ್ಷಕರ ದಿನಾಚರಣೆಯನ್ನು ಕರಾಳ ದಿನವಾಗಿ ಆಚರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಇಂದಿನಿಂದ ಗೃಹಲಕ್ಷ್ಮಿಯರ ಖಾತೆಗೆ ಹಣ: ಲಕ್ಷ್ಮಿ ಹೆಬ್ಬಾಳ್ಕರ್‌ ಘೋಷಣೆ

  • ಪ್ರಧಾನಿ ಭಾಷಣದತ್ತ ಎಲ್ಲರ ಚಿತ್ತ-ಆಯುಷ್ಮಾನ್ ಭಾರತ್ ಯೋಜನೆ ಘೋಷಣೆ ಮಾಡ್ತಾರಾ ಮೋದಿ?

    ಪ್ರಧಾನಿ ಭಾಷಣದತ್ತ ಎಲ್ಲರ ಚಿತ್ತ-ಆಯುಷ್ಮಾನ್ ಭಾರತ್ ಯೋಜನೆ ಘೋಷಣೆ ಮಾಡ್ತಾರಾ ಮೋದಿ?

    ಬೆಂಗಳೂರು: ಇಂದು ಸ್ವಾತಂತ್ರ್ಯೋತ್ಸವದ ಸಂಭ್ರಮ. ದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಮೋದಿಯವರು ತಮ್ಮ ಈ ಅವಧಿಯ ಕೊನೆಯ ಭಾಷಣ ಮಾಡಲಿದ್ದು, ಈ ವೇಳೆ ದೇಶದ ಜನತೆಗೆ ಆರೋಗ್ಯ ಕೊಡುಗೆಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ.

    ದೇಶದ 50 ಕೋಟಿ ಜನರಿಗೆ ಆರೋಗ್ಯ ವಿಮೆ ಕಲ್ಪಿಸುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಘೋಷಿಸುವ ಸಾಧ್ಯತೆಯಿದೆ. ಅಲ್ಲದೆ ತಮ್ಮ ಭಾಷಣಕ್ಕೆ ದೇಶದ ನಾಗರಿಕೂ ಸಲಹೆಗಳನ್ನು ನೀಡುವಂತೆ ಪ್ರಧಾನಿ ಮೋದಿ ಕರೆ ನೀಡಿದರು. ಅದರಂತೆ ಒಟ್ಟು 30 ಸಾವಿರ ಸಲಹೆಗಳು ಬಂದಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ.

    ಆಯುಷ್ಮಾನ್ ಭಾರತ್’ ಯೋಜನೆ ವಿಶೇಷ

    * ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ವಿಮೆ
    * ವಿಶ್ವದ ಅತಿದೊಡ್ಡ ವೈದ್ಯಕೀಯ ಯೋಜನೆ
    * ಕುಟುಂಬವೊಂದಕ್ಕೆ ರೂ.5 ಲಕ್ಷ ಮೌಲ್ಯದ ಆರೋಗ್ಯ ವಿಮೆ
    * ವಾರ್ಷಿಕವಾಗಿ 5 ಲಕ್ಷದವರೆಗೆ ಆಸ್ಪತ್ರೆ ಖರ್ಚು
    * ಮೊದಲ ಹಂತವಾಗಿ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆ ಜಾರಿ
    * ಮೊದಲ ಹಂತದಲ್ಲಿ ಛತ್ತೀಸ್‍ಗಢ, ತ್ರಿಪುರ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯ, ದಮನ್ ಮತ್ತು ದಿಯುನಲ್ಲಿ ಜಾರಿ

    * 11 ರಾಜ್ಯಗಳ 70-80 ಜಿಲ್ಲೆಗಳಲ್ಲಿ ಜಾರಿ
    * ಯೋಜನೆಯಲ್ಲಿ 100 ಆಸ್ಪತ್ರೆಗಳಿರುತ್ತವೆ.
    * ಮೊದಲಿಗೆ ಶಸ್ತ್ರಚಿಕಿತ್ಸೆ ಹಾಗೂ ಇತರೆ ವೈದ್ಯಕೀಯ ಚಿಕಿತ್ಸಾ ಸೇವೆ ಸಿಗುತ್ತದೆ
    * ಈ ಯೋಜನೆಗೆ ಆಧಾರ್ ಕಾರ್ಡ್ ಕಡ್ಡಾಯ ಅಲ್ಲ
    * ಯೋಜನೆಯ ಸೌಲಭ್ಯಕ್ಕಾಗಿ ಪಡಿತರ ಚೀಟಿ ಇದ್ದರೆ ಸಾಕು
    * ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಚೀಟಿ ಇದ್ದರೂ ಸಾಕು
    * ಕುಟುಂಬದ ಗಾತ್ರ ಮತ್ತು ವಯಸ್ಸಿಗೆ ಯಾವುದೇ ಮಿತಿ ಹೇರಿಲ್ಲ
    * ವಿಮೆ ಪಡೆದ ದಿನದಿಂದಲೇ ಎಲ್ಲಾ ಪೂರ್ವ ನಿರ್ಧಾರಿತ ಕಾಯಿಲೆಗಳಿಗೂ ಚಿಕಿತ್ಸೆ
    * ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣ ಭತ್ಯೆಯೂ ಒಳಗೊಂಡಿದೆ
    * ಖಾಸಗಿ ಅಥವಾ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಸೇವೆ