Tag: ಸ್ವಚ್ಛ ಭಾರತ್ ಅಭಿಯಾನ

  • ಸಂಸತ್ ಆವರಣದಲ್ಲಿ ಕಸ ಗುಡಿಸಿದ ಹೇಮಾ ಮಾಲಿನಿ, ಅನುರಾಗ್ ಠಾಕೂರ್

    ಸಂಸತ್ ಆವರಣದಲ್ಲಿ ಕಸ ಗುಡಿಸಿದ ಹೇಮಾ ಮಾಲಿನಿ, ಅನುರಾಗ್ ಠಾಕೂರ್

    – ಟ್ರೋಲ್ ಆದ ಹೇಮಾ ಮಾಲಿನಿ

    ನವದೆಹಲಿ: ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಸಂಸದೆ ಹೇಮಾ ಮಾಲಿನಿ ಸೇರಿದಂತೆ ಅನೇಕರು ಸಂಸತ್ ಆವರಣವನ್ನು ಸ್ವಚ್ಛಗೊಳಿಸಿದರು.

    ಸ್ವಚ್ಛ ಭಾರತ್ ಅಭಿಯಾನದ ನಿಮಿತ್ತ ಇಂದು ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಕೆಲ ಸಂಸದರು ಕಸ ಗುಡಿಸಿದರು. ಆದರೆ ಹೇಮಾ ಮಾಲಿನಿ ಅವರು ಕಸ ಗುಡಿಸಲು ಬಾರದೇ ಪೇಚಾಡಿದರು.

    ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ನಿಮಿತ್ತ ಸಂಸತ್ ಆವರಣದಲ್ಲಿ ಸ್ವಚ್ಛ ಭಾರತ್ ಅಭಿಯಾನ ನಡೆಸಲು ಸ್ಪೀಕರ್ ಅವರು ಅವಕಾಶ ನೀಡಿದ್ದು ಶ್ಲಾಘನೀಯ. ಮುಂದಿನ ವಾರ ನನ್ನ ಕ್ಷೇತ್ರವಾದ ಮಥುರಾಕ್ಕೆ ತೆರಳುತ್ತೇನೆ. ಅಲ್ಲಿಯೂ ಸ್ವಚ್ಛ ಭಾರತ್ ಅಭಿಯಾನ ಮಾಡುತ್ತೇನೆ ಎಂದು ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.

    ಕಸ ಗುಡಿಸಲು ಪೇಚಾಡಿದ ಹೇಮಾ ಮಾಲಿನಿ ಅವರನ್ನು ನೆಟ್ಟಿಗರು ಕುಟುಕಿದ್ದಾರೆ. ‘ಹೇಮಾ ಜಿ, ಚಲನಚಿತ್ರಗಳಲ್ಲಿ ಮಾಡಿದ್ದಕ್ಕಿಂತ ಇಂದು ಸಂಸತ್ ಆವರಣದಲ್ಲಿ ಮಾಡಿದ ನಟನೆ ಚನ್ನಾಗಿದೆ ಎಂದು ವಿಕಾಸ್ ವಿಕ್ರಂ ತಿವಾರಿ ಎಂಬವರು ವ್ಯಂಗ್ಯವಾಡಿದ್ದಾರೆ.

    ಹೇಮಾ ಮಾಲಿನಿ ಅವರೇ ನೀವು ಪೊರಕೆಯನ್ನು ಹಿಡಿಯುವುದನ್ನು ಮೊದಲು ಕಲಿಯಬೇಕು. ನಿಮ್ಮ ಮನೆಯಲ್ಲಿ ಕೆಲಸ ಮಾಡುವ ನೌಕರರ ಜೊತೆಗೆ ನೀವು ಮೊದಲು ಕೈಗೂಡಿಸಿ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.

  • ಸ್ವಚ್ಛ ಭಾರತ ಅಭಿಯಾನ ಹೆಸರಲ್ಲಿ ಮನೆಗೆ ಬಂದು ಕಳ್ಳತನ

    ಸ್ವಚ್ಛ ಭಾರತ ಅಭಿಯಾನ ಹೆಸರಲ್ಲಿ ಮನೆಗೆ ಬಂದು ಕಳ್ಳತನ

    ಹಾಸನ: ಸ್ವಚ್ಚ ಭಾರತ ಅಭಿಯಾನದ ಹೆಸರಿನಲ್ಲಿ ಮನೆಗೆ ಬಂದ ಇಬ್ಬರು ಕಳ್ಳರು ವಯೋವೃದ್ಧೆಯ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದಿದೆ.

    ರಾಮಯ್ಯ-ಶಾರದಮ್ಮ ವಂಚನೆಗೊಳಗಾದ ದಂಪತಿ. ಪ್ರಧಾನಿ ಮೋದಿಯವರ ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಿದ್ದೀರಾ ಇಲ್ಲವೆ ಎಂದು ಪರಿಶೀಲನೆ ನಡೆಸುವ ನೆಪದಲ್ಲಿ ಮನೆಯೊಳಗೆ ಬಂದಿದ್ದಾರೆ. ಈ ವೇಳೆ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

    ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.