Tag: ಸ್ವಚ್ಛ ಭಾರತ

  • ಸ್ವಚ್ಛನಗರಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕುಸಿದ ಬೆಂಗಳೂರು- ಬಿಗ್‌ಶೇಮ್‌ ಎಂದು ಕುಟುಕಿದ ಪೈ

    ಸ್ವಚ್ಛನಗರಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕುಸಿದ ಬೆಂಗಳೂರು- ಬಿಗ್‌ಶೇಮ್‌ ಎಂದು ಕುಟುಕಿದ ಪೈ

    ಬೆಂಗಳೂರು: ಬ್ರ್ಯಾಂಡ್ ಬೆಂಗಳೂರಿಗೆ(Bengaluru) ಮತ್ತೆ ಧಕ್ಕೆಯಾಗಿದೆ. ಸ್ವಚ್ಛ ಸರ್ವೇಕ್ಷಣ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ(Swachh Survekshan 2022 list) ಬೆಂಗಳೂರು ಕುಸಿದಿದೆ.

    ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕಳೆದ ವರ್ಷ 28ನೇ ಸ್ಥಾನದಲ್ಲಿ ಬೆಂಗಳೂರು ಈ ಬಾರಿ 43ನೇ ಸ್ಥಾನಕ್ಕೆ ಕುಸಿದಿದೆ.

    10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ 45 ನಗರಗಳನ್ನು ಅಧ್ಯಯನ ನಡೆಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಧ್ಯಪ್ರದೇಶದ ಇಂದೋರ್‌ ಸತತ 6ನೇ ಬಾರಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯುತ್ತಿದೆ. ಚೆನ್ನೈ ಮತ್ತು ಮಧುರೈ ಕೊನೆಯ ಸ್ಥಾನಗಳನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಯುವಕರ ಸಾಹಸ – ಭೂಗಳ್ಳರ ಕೈಯಿಂದ ಶಾಲೆಗೆ ಸೇರಿತು ಕೋಟ್ಯಂತರ ಮೌಲ್ಯದ ಜಮೀನು

    ನಗರದ ಸ್ವಚ್ಛತೆ, ನೈರ್ಮಲ್ಯ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಪಾಲಿಕೆಯಿಂದ ಕೈಗೊಂಡ ಕ್ರಮಗಳು, ಸಾರ್ವಜನಿಕ ಸ್ಥಳಗಳಲ್ಲಿನ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಕ್ಕೆ ಕೈಗೊಂಡ ಕ್ರಮ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ರ್‍ಯಾಂಕ್‌ ನೀಡಲಾಗುತ್ತದೆ.

    ಕುಟುಕಿದ ಪೈ
    ಉದ್ಯಮಿ ಮೋಹನ್‌ದಾಸ್‌ ಪೈ(Mohandas Pai), ಬಿಗ್‍ಶೇಮ್. ನಮ್ಮ ಶಾಸಕರು, ಸಂಸದರು ಮತ್ತೆ ವಿಫಲರಾಗಿದ್ದಾರೆ. ತುಂಬಾ ಶಾಸಕರು ಭ್ರಷ್ಟ್ಟಾಚಾರಿಗಳು ಎಂದು ಬರೆದು ಸಿಎಂ ಬೊಮ್ಮಾಯಿ ಸೇರಿದಂತೆ ಬೆಂಗಳೂರಿನ ಮಂತ್ರಿ ಮತ್ತು ಸಂಸದರಿಗೆ ಟ್ಯಾಗ್‌ ಮಾಡಿ ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ವಚ್ಛ ಭಾರತ್ ಬೆಂಗಳೂರು ಎಲ್ಲಿಗೆ ಹೋಗಿದೆ? ಬೀದಿಯಲ್ಲಿ ಕಸ ಬಿದ್ದು ಕೊಳೆಯುತ್ತಿದೆ: ಡಿಕೆ ಸುರೇಶ್‌

    ಸ್ವಚ್ಛ ಭಾರತ್ ಬೆಂಗಳೂರು ಎಲ್ಲಿಗೆ ಹೋಗಿದೆ? ಬೀದಿಯಲ್ಲಿ ಕಸ ಬಿದ್ದು ಕೊಳೆಯುತ್ತಿದೆ: ಡಿಕೆ ಸುರೇಶ್‌

    ಬೆಂಗಳೂರು: ಸ್ವಚ್ಛ ಭಾರತ್ ಬೆಂಗಳೂರು ಎಲ್ಲಿಗೆ ಹೋಗಿದೆ? ಬೀದಿಯಲ್ಲಿ ಕಸ ಬಿದ್ದು ಕೊಳೆಯುತ್ತಿದೆ ಎಂದು ಸಂಸದ ಡಿಕೆ ಸುರೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ಮಳೆಯ ಅವಾಂತರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳು ಯಾಕೆ ಇದರ ಬಗ್ಗೆ ಹೇಳುತ್ತಿಲ್ಲ? ನಾವಿದ್ದಾಗ ವೀಡಿಯೋ ತೆಗೆದು ವರದಿ ಮಾಡಲಾಗುತ್ತಿತ್ತು. ನಮ್ಮ ಉಸ್ತುವಾರಿ ಸಚಿವರನ್ನು ಪ್ರಶ್ನೆ ಮಾಡುತ್ತಿದ್ದರು. ಇವತ್ತು ಬೆಂಗಳೂರು ಮುಳುಗಿಹೋಗಿದೆ. ಯಾಕೆ ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಕೇಳಿದರು.

    ಮಂಡೂರು ಕಸವನ್ನು ದಿನ ತೋರಿಸಲಾಗುತ್ತಿತ್ತು. ಆಗ ನಾವು ಆರು ತಿಂಗಳಲ್ಲಿ ಬಂದ್ ಮಾಡಿದ್ದೇವೆ. ಇವತ್ತು ಕಸದಲ್ಲೂ ಕಮಿಷನ್ ಎತ್ತಿತ್ತಿದ್ದಾರೆ. ರೋಡ್,ಗುಂಡಿ ಮುಚ್ಚುವುದರಲ್ಲೂ ಕಮಿಷನ್. ಸತ್ತ ಹೆಣ ಹೂಳಲು ಕಮೀಷನ್ ಪಡೆಯುತ್ತಿದ್ದೀರಿ. ಇಂತಹ ಭ್ರಷ್ಟ ವ್ಯವಸ್ಥೆ ಸರ್ಕಾರ ನಾವು ನೋಡಿಲ್ಲ ಎಂದು ಕಿಡಿಕಾರಿದರು.

    ಸರ್ಕಾರದಲ್ಲಿ 40% ಕಮಿಷನ್ ಭ್ರಷ್ಟಾಚಾರ ನಡೆಯುತ್ತಿದೆ. ಮೋದಿ 40% ಕಮಿಷನ್ ಬಗ್ಗೆ ಮಾತನಾಡುತ್ತಿಲ್ಲ. ಕೇಂದ್ರದಲೂ ಯಾರೂ ಮಾತನಾಡುತ್ತಿಲ್ಲ. ಅದರಲ್ಲಿ ನಿಮಗೂ ಪಾಲು ಇದೆಯಾ? ಆರ್‌ಎಸ್‌ಎಸ್‌ನವರು ಏಕೆ 40% ಕಮಿಷನ್ ಬಗ್ಗೆ ಮಾತನಾಡುತ್ತಿಲ್ಲ. ನಿಮಗೂ ಪಾಲು ಇದ್ಯಾ? ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಾಗ್ದಾಳಿ ನಡೆಸಿದರು.

    Live Tv
    [brid partner=56869869 player=32851 video=960834 autoplay=true]

  • ಸ್ವಚ್ಛ ಭಾರತಕ್ಕೆ ವಿಶೇಷ ಪ್ರಯತ್ನ: ‘ನಮ್ಮ ಕಸ, ನಮ್ಮಲೇ ಗೊಬ್ಬರ’ ಪರಿಕಲ್ಪನೆ ಮೂಲಕ ವಿನೂತನ ಜಾಗೃತಿ

    ಸ್ವಚ್ಛ ಭಾರತಕ್ಕೆ ವಿಶೇಷ ಪ್ರಯತ್ನ: ‘ನಮ್ಮ ಕಸ, ನಮ್ಮಲೇ ಗೊಬ್ಬರ’ ಪರಿಕಲ್ಪನೆ ಮೂಲಕ ವಿನೂತನ ಜಾಗೃತಿ

    ಮಡಿಕೇರಿ: ದೇಶವನ್ನು ಸ್ವಚ್ಛವಾಗಿರಿಸಬೇಕೆಂಬ ದೃಷ್ಟಿಯಿಂದ ಕೇಂದ್ರ ಸರ್ಕಾರವೇ ಸ್ವಚ್ಛ ಭಾರತ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಇಂದಿಗೂ ಅದು ಪರಿಪೂರ್ಣವಾಗಿ ಜಾರಿಗೊಂಡಿಲ್ಲ. ಆದರೆ ಇಲ್ಲೊಬ್ಬರು ಜನಪ್ರತಿನಿಧಿ ಕಸವನ್ನು ಸಂಪೂರ್ಣವಾಗಿ ಪರಿಷ್ಕರಿಸಿ ಸ್ವಚ್ಛ ಪಟ್ಟಣವನ್ನಾಗಿ ಮಾಡುವುದಕ್ಕಾಗಿ ಪಣತೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಅವರೆ ಒಂದು ಯುವಕರ ತಂಡ ಕಟ್ಟಿಕೊಂಡು ಕಸಮುಕ್ತ ಪಟ್ಟಣವನ್ನು ಮಾಡಲು ಮುಂದಾಗಿದ್ದಾರೆ.

    ಕೊಡಗು ಜಿಲ್ಲೆ ಕುಶಾಲನಗರ ಪಟ್ಟಣ ಪಂಚಾಯಿತಿ ಬಿಜೆಪಿಯ ಸದಸ್ಯ ಮನು ಅವರು ಅಳಿಲು ಸೇವೆ ಸಂಸ್ಥೆ ಹೆಸರಿನಲ್ಲಿ ‘ನಮ್ಮ ಕಸ, ನಮ್ಮಲೇ ಗೊಬ್ಬರ’ ಪರಿಕಲ್ಪನೆ ಮೂಲಕ ವಿನೂತನ ಜಾಗೃತಿ ಮೂಡಿಸುತ್ತಿದ್ದಾರೆ. ಪಟ್ಟಣ, ನಗರಗಳು ಬೆಳೆದಂತೆ ದಿನನಿತ್ಯ ಕಸ ಉತ್ಪಾದನೆಯಾಗುವ ಪ್ರಮಾಣ ಹೆಚ್ಚುತ್ತಲೇ ಇದೆ. ಆ ಕಸವನ್ನು ಶುದ್ಧವಾಗಿ ಪರಿಷ್ಕರಣೆ ಮಾಡಿ ನಿರ್ವಹಣೆ ಮಾಡುವುದೇ ದೊಡ್ಡ ಸವಾಲಾಗುತ್ತಿದೆ. ಇದನ್ನು ತಪ್ಪಿಸುವ ವೈಜ್ಞಾನಿಕ ಕ್ರಮ ‘ನಮ್ಮ ಕಸ, ನಮ್ಮಲೇ ಗೊಬ್ಬರ’ ಪರಿಕಲ್ಪನೆ.  ಇದನ್ನೂ ಓದಿ: ಗೋಮಾಂಸ ಸಾಗಾಟ – ಇಬ್ಬರು ಆರೋಪಿಗಳು ಸೆರೆ

    ಕೋವಿಡ್ ತೀವ್ರಗೊಂಡು ದೇಶದಲ್ಲಿ ಲಾಕ್ಡೌನ್ ಜಾರಿಯಾದಾಗ ಮನೆಯಲ್ಲಿಯೇ ಇದ್ದ ಮನು ಅವರು, ತಮ್ಮ ಮನೆಯಲ್ಲಿ ಉತ್ಪಾದನೆ ಆಗುತ್ತಿದ್ದ ಕಸವನ್ನು ವಿಲೇವಾರಿ ಮಾಡುವುದು ಕಷ್ಟವಾಗಿ ಅದನ್ನು ಮನೆಯಲ್ಲೇ ಕರಗಿಸಿ ಗೊಬ್ಬರ ಮಾಡಲು ಚಿಂತಿಸಿದ್ದರು. ಆಗಲೇ ಈ ಯೋಜನೆ ತಲೆಗೆ ಒಳೆದಿದ್ದು ಎಂದು ವಿವರಿಸಿದ್ದಾರೆ.

    ಮಾಡುವುದು ಹೇಗೆ?
    ತರಕಾರಿ ಸಿಪ್ಪೆ, ಉಳಿದ ಆಹಾರ ಪದಾರ್ಥಗಳು, ಆಹಾರದ ವೇಸ್ಟ್ ಸೇರಿದಂತೆ ಯಾವುದೇ ರೀತಿಯ ಹಸಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಅದಕ್ಕಾಗಿ ಮನೆಯ ಸುತ್ತಮುತ್ತ ಕೇವಲ ಒಂದಡಿ ಜಾಗವಿದ್ದರೆ ಸಾಕು. ಜೊತೆಗೆ ಆರು ಅಡಿ ಎತ್ತರ, ಒಂದಡಿ ಅಗಲದ ಪ್ಲಾಸ್ಟಿಕ್ ಪೈಪು ಇದ್ದರೆ ಸಾಕು. ಒಂದಡಿ ಆಳದ ಗುಂಡಿ ತೆಗೆದು ಪ್ಲಾಸ್ಟಿಕ್ ಪೈಪನ್ನು ನೆಟ್ಟಗೆ ಹೂತರೆ ಕಸ ವಿಲೇವಾರಿ ಘಟಕ ರೆಡಿ.

    ಆರು ಅಡಿ ಉದ್ದದ ಪೈಪಿಗೆ ಮೂರು ತಿಂಗಳ ಹಸಿ ಕಸವನ್ನು ಅದಕ್ಕೆ ತುಂಬಬಹುದು. ಕಸ ತುಂಬುವುದಕ್ಕೂ ಮೊದಲು ಮೂರು ಹಿಡಿ ಬೆಲ್ಲದ ಪುಡಿ ಮತ್ತು ಮೂರು ಹಿಡಿಯಷ್ಟು ಸಗಣಿ ಹಾಕಬೇಕು. ಹೀಗೆ ಹಾಕಿದರೆ ನಾವು ತುಂಬುವ ಹಸಿಕಸ ಸುಲಭವಾಗಿ ಕರಗುತ್ತೆ ಎನ್ನುತ್ತಾರೆ ಮನು.

    ತಮ್ಮ ಅಳಿಲು ಸೇವಾ ಸಂಸ್ಥೆ ಮೂಲಕ ಇದುವರೆಗೆ 150 ಕುಟುಂಬಗಳಿಗೆ ಈ ಘಟಕ ಮಾಡಿಸಿದ್ದಾರೆ. ಇದೀಗ ಆ ಕುಟುಂಬಗಳಲ್ಲಿ ಕೆಲವರು ಕಾಂಪೋಸ್ಟ್ ಗೊಬ್ಬರ ತಯಾರಿಸಿ ಅದೇ ಗೊಬ್ಬರ ಬಳಸಿ ಮನೆಯ ತಾರಸಿಗಳಲ್ಲಿ ಹಣ್ಣು ತರಕಾರಿ ಮತ್ತು ಹೂವುಗಳನ್ನು ಬೆಳೆಯುತ್ತಿದ್ದಾರೆ. ಸ್ವಚ್ಛ ಭಾರತದ ಪರಿಕಲ್ಪನೆಯಲ್ಲಿ ಮಾಡಿರುವ ಈ ಒಂದು ಘಟಕ ಮೂರು ಜನರಿಗೆ ಮೂರು ರೀತಿಯ ಅನುಕೂಲಗಳನ್ನು ಒದಗಿಸುತ್ತಿದೆ.

    ಒಂದೆಡೆ ಕಸವಿಲೇವಾರಿ ಸರಳವಾಗಿದ್ದರೆ, ಮತ್ತೊಂದೆಡೆ ಅಲ್ಲಿ ಉತ್ಪಾದನೆಯಾಗುವ ಸಾವಯವ ಗೊಬ್ಬರದಿಂದ ಮನೆಯ ತಾರಸಿಗಳಲ್ಲಿ ಹಣ್ಣು ತರಕಾರಿಗಳನ್ನು ಬೆಳೆದು ಹಣ ಉಳಿಸಿಕೊಳ್ಳುತ್ತಿದ್ದಾರೆ. ಜೊತೆಗೆ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಯಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆ ಸಮಾಜದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

    150 ಕುಟುಂಬಗಳಲ್ಲಿ ಮಾಡಿರುವ ಈ ಕಸ ಸಂಸ್ಕರಣಾ ಘಟಕಗಳನ್ನು ಇನ್ನಷ್ಟು ಕುಟುಂಬಗಳಿಗೆ ವಿಸ್ತರಣೆ ಮಾಡುವ ಚಿಂತನೆಯಲ್ಲಿ ಇದ್ದಾರೆ. ಅಳಿಲು ಸೇವಾ ಸಂಸ್ಥೆಯವರು ಹೆಚ್ಚು ಸಾವಯವ ಗೊಬ್ಬರ ಉತ್ಪಾದನೆ ಆದಲ್ಲಿ ಅದನ್ನು ಅಳಿಲು ಸೇವಾ ಸಂಸ್ಥೆಯೇ ಖರೀದಿ ಮಾಡುವ ಚಿಂತನೆಯಲ್ಲಿದೆ ಎಂದು ವಿರಿಸಿದರು.

  • ಕಸ ಎಸೆದ ಯುವಕನಿಗೆ ರಸ್ತೆ ಮಧ್ಯೆ ಸಿಟಿ ರವಿ ಕ್ಲಾಸ್

    ಕಸ ಎಸೆದ ಯುವಕನಿಗೆ ರಸ್ತೆ ಮಧ್ಯೆ ಸಿಟಿ ರವಿ ಕ್ಲಾಸ್

    ಚಿಕ್ಕಮಗಳೂರು: ರಸ್ತೆ ಬದಿಯ ಹಳ್ಳಕ್ಕೆ ಕಸ ಎಸೆದ ಯುವಕನಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಸ್ತೆ ಮಧ್ಯೆಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಿಟಿ ರವಿ ಮತ ಚಲಾಯಿಸಲು ಮತಗಟ್ಟೆಗೆ ತೆರಳುವ ಸಮಯದಲ್ಲಿ ಮಲ್ಲಂದೂರು ರಸ್ತೆ ಉಪ್ಪಳ್ಳಿ ಚಿತಾಗಾರ ಸಮೀಪದ ಯಗಚಿ ನದಿಗೆ ಸೇರುವ ಹಳ್ಳದಲ್ಲಿ ಯುವಕನು ಕಸ ಎಸೆಯುತ್ತಿದ್ದ. ಈ ವೇಳೆ ಕಾರಿನಿಂದ ರವಿಯವರು ಯುವಕನಿಗೆ ರಸ್ತೆ ಮಧ್ಯೆಯೇ ಕ್ಲಾಸ್ ನಡೆದಿದೆ. ಇದನ್ನೂ ಓದಿ: ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಸಿ.ಟಿ.ರವಿ ಅಸಮಾಧಾನ

    ಯುವಕನಿಗೆ ಹೊಟ್ಟೆಗೆ ಅನ್ನ ತಿನ್ನತೀಯಾ ಅಥವಾ ಏನು ತಿಂತೀಯಾ? ಎಂದು ಕೇಳಿದ್ದು, ಬೆಳಗ್ಗೆ ಕಸದ ವಿಲೇವಾರಿ ಗಾಡಿ ಬರುತ್ತೇ ಅದಕ್ಕೆ ಹಾಕಲಿಕ್ಕೆ ಏನು ಸಮಸ್ಯೆ? ಯಾರ ಮಗ ನೀನು? ಇನ್ನೊಂದು ಸಾರಿ ನೀನು ಏನಾದರೂ ಇಲ್ಲಿ ಕಸ ಚೆಲ್ಲಿದರೆ ನೋಡು ಎಂದು ಬೈದು ಬುದ್ದಿ ಹೇಳಿ ಕಳುಹಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಆತಂಕ – ಇಂದಿನಿಂದ ದೆಹಲಿಯಲ್ಲಿ ನೈಟ್ ಕರ್ಫ್ಯೂ

  • ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮತ್ತೊಂದು ಗೌರವದ ಗರಿ

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮತ್ತೊಂದು ಗೌರವದ ಗರಿ

    – ಸ್ವಚ್ಛತಾ ಸಮೀಕ್ಷೆಯಲ್ಲಿ 3ನೇ ರ‍್ಯಾಂಕ್

    ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಿದೆ. ಸ್ವಚ್ಛ ಭಾರತ ಸಮೀಕ್ಷೆಯಲ್ಲಿ ಮೂರನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

    ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಭಾರತ ಸರ್ವೇಕ್ಷಣೆಯಲ್ಲಿ (ಸಮೀಕ್ಷೆಯಲ್ಲಿ) ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮೂರನೇ ಸ್ಥಾನ ಬಂದಿದೆ. ಗಣೇಶ ಚತುರ್ಥಿಯ ಮೊದಲ ದಿನ ಕೇಂದ್ರ ಸರ್ಕಾರ ಪ್ರಕಟಿಸಿರುವ ಸ್ವಚ್ಛತಾ ವರದಿಯಲ್ಲಿ ಮೈಸೂರಿಗೆ ಮೊದಲ ಸ್ಥಾನ, ತುಮಕೂರಿಗೆ ಎರಡನೇ ಸ್ಥಾನ ಬಂದಿದೆ. ಇನ್ನೂ ರಾಜ್ಯದ ಐದು ಸ್ವಚ್ಛ ನಗರಗಳ ಸಾಲಿನಲ್ಲಿ ಹು-ಧಾ ಮಹಾನಗರ ಮೂರನೇ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿದೆ.

    ದೇಶದ ರ‍್ಯಾಕಿಂಗ್‍ನಲ್ಲಿ 172ನೇ ಸ್ಥಾನದಲ್ಲಿದೆ. ಚುನಾಯಿತ ಪ್ರತಿನಿಧಿಗಳ ಕೌನ್ಸಿಲ್ ಇಲ್ಲದೇ ಒಂದೂವರೆ ವರ್ಷಗಳಾಗಿದ್ದು, ಆಡಳಿತ ಮಂಡಳಿಯ ದೃಷ್ಟಿ ಕೊರೊನಾ ನಿಯಂತ್ರಣದತ್ತ ನೆಟ್ಟಿದೆ. ಇದರ ಮಧ್ಯೆ ಹು-ಧಾ ಮಹಾನಗರ ಪಾಲಿಕೆ ರಾಜ್ಯದಲ್ಲಿ ಮೂರನೇ ರ‍್ಯಾಂಕ್ ಪಡೆದಿರುವುದು ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಹು-ಧಾ ಮಹಾನಗರದ ಸ್ವಚ್ಛತಗೆ ಪಾಲಿಕೆ ಕೈಗೊಂಡಿರುವ ಸ್ವಚ್ಛತಾ ಕಾರ್ಯಗಳು ಪಾಲಿಕೆಗೆ ಗೌರವದ ಗರಿ ಮುಡಿಗೇರಿಸಿಕೊಳ್ಳಲು ಸೂಕ್ತ ನಿದರ್ಶನವಾಗಿದೆ.

    ಸ್ಮಾರ್ಟ್ ಸಿಟಿ ಕಾಮಗಾರಿ ಜೊತೆ ಜೊತೆಗೆ ಸ್ವಚ್ಛ ಭಾರತದ ಯೋಜನೆಗಳಲ್ಲಿ ಸೂಕ್ತ ನಿರ್ಧಾರವನ್ನು ಪಾಲಿಕೆ ತೆಗೆದುಕೊಳ್ಳುವ ಮೂಲಕ ಒಳ್ಳೆಯ ಫಲಿತಾಂಶವನ್ನು ಪಾಲಿಕೆ ಪಡೆದುಕೊಂಡಿದೆ. ಅಲ್ಲದೇ ಮನೆ ಮನೆಗೆ ಕಸ ಸಂಗ್ರಹ, ತ್ಯಾಜ್ಯ ವಿಲೇವಾರಿ, ಜನರಲ್ಲಿ ಮೂಡಿದ ಅರಿವು, ಸ್ವಚ್ಛತಾ ಸಾಮಗ್ರಿ ಹಾಗೂ ಯಂತ್ರೋಪಕರಣಗಳು ಸಮರ್ಪಕ ಬಳಕೆಯಿಂದ ಹು-ಧಾ ಮಹಾನಗರ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪೌರಕಾರ್ಮಿಕರ ಕಾರ್ಯವನ್ನು ಇಲ್ಲಿ ಸ್ಮರಿಸಬಹುದಾಗಿದೆ.

  • ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದ ಚಿತ್ರದುರ್ಗ ಸಂಸದ

    ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದ ಚಿತ್ರದುರ್ಗ ಸಂಸದ

    ತುಮಕೂರು: ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿ ಅವರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಕಸ ಸ್ವಚ್ಛಗೊಳಿಸಿದ್ದಾರೆ.

    ಸಂಸದ ನಾರಾಯಣಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚ ಭಾರತ್ ಹೇಳಿಕೆಯನ್ನು ಪಾಲಿಸಿದ್ದಾರೆ. ಭಾನುವಾರ ನಡೆದ ಗಣೇಶೋತ್ಸವದಲ್ಲಿ ರಸ್ತೆಗಳು ಮಲೀನವಾಗಿತ್ತು. ಹಾಗಾಗಿ ನಾರಾಯಣಗೌಡ ಅವರು ನಮ್ಮ ಕಸ ನಾವು ತೆಗೆಯಬೇಕು ಎಂದು ಹೇಳುವ ಮೂಲಕ ರಸ್ತೆಗಳನ್ನು ಸ್ವಚ್ಛ ಮಾಡಿದ್ದಾರೆ.

    ನಾರಾಯಣಸ್ವಾಮಿ ಅವರು ಭಾನುವಾರ ಬೆಳಗ್ಗೆನಿಂದಲೂ ಗಣೇಶೋತ್ಸವದಲ್ಲಿ ಭಾಗವಹಿಸಿದ್ದರು. ಮೆರವಣಿಗೆ ಮುಗಿದ ಮೇಲೆ ರಾತ್ರಿ ಎಲ್ಲಾ ರಸ್ತೆಗಳನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸಿದ್ದಾರೆ. ಸಂಸದರಿಗೆ ಸ್ಥಳೀಯ ಬಿಜೆಪಿ ಮುಖಂಡರ ಎಸ್.ಆರ್ ಗೌಡ ಸೇರಿದಂತೆ ಹಲವರು ಸಾಥ್ ನೀಡಿದ್ದರು.

    ಸದ್ಯ ಸಂಸದರು ಭಾನುವಾರ ತುಮಕೂರು ಜಿಲ್ಲೆ ಶಿರಾನಗರದ ಮಲಿಕ್ ರೇಹಾನ್ ದರ್ಗಾ ಮತ್ತು ಬಸ್ ನಿಲ್ದಾಣಗಳಲ್ಲಿ ಸ್ವಚ್ಛಗೊಳಿಸಿದ್ದಾರೆ.

  • ಚರಂಡಿ, ಶೌಚಾಲಯ ಸ್ವಚ್ಛಗೊಳಿಸಲು ಆಯ್ಕೆಯಾಗಿಲ್ಲ: ಸಾಧ್ವಿ ಪ್ರಜ್ಞಾ ಸಿಂಗ್

    ಚರಂಡಿ, ಶೌಚಾಲಯ ಸ್ವಚ್ಛಗೊಳಿಸಲು ಆಯ್ಕೆಯಾಗಿಲ್ಲ: ಸಾಧ್ವಿ ಪ್ರಜ್ಞಾ ಸಿಂಗ್

    ಭೋಪಾಲ್: ನಾನು ಶೌಚಾಲಯ ಹಾಗೂ ಚರಂಡಿ ಸ್ವಚ್ಛಗೊಳಿಸಲು ಸಂಸದೆಯಾಗಿ ಆಯ್ಕೆಯಾಗಿಲ್ಲ ಎಂದು ಹೇಳುವ ಮೂಲಕ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಸೆಹೋರೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡುವ ವೇಳೆ ಈ ರೀತಿ ಹೇಳಿದ್ದು, ನಾನು ಚರಂಡಿ ಹಾಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಆಯ್ಕೆಯಾಗಿಲ್ಲ ಅರ್ಥ ಮಾಡಿಕೊಳ್ಳಿ. ನಾನು ಯಾವ ಕೆಲಸ ಮಾಡಲು ಚುನಾಯಿತಳಾಗಿದ್ದೇನೆ ಎನ್ನುವುದು ತಿಳಿದಿದೆ. ಆ ಕೆಲಸವನ್ನು ನಾನು ಮಾಡುತ್ತೇನೆ, ಈ ಕುರಿತು ಹಲವು ಬಾರಿ ಹೇಳಿದ್ದೇನೆ ಎಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ.

    ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ಪ್ರದೇಶದಲ್ಲಿ ಹೆಚ್ಚು ನೈರ್ಮಲ್ಯವಿದ್ದು ಸ್ವಚ್ಛತೆಯ ಕೊರತೆ ಇದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ನಿಮ್ಮ ಶೌಚಾಲಯ, ಚರಂಡಿ ಸ್ವಚ್ಛಗೊಳಿಸುವುದು ನನ್ನ ಕೆಲಸವಲ್ಲ ಎಂದು ಕಿಡಿಕಾರಿದ್ದಾರೆ.

    ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸ್ಥಳೀಯ ಶಾಸಕರು, ಪುರಸಭೆ ಕೌನ್ಸಿಲರ್ ಗಳು ಸೇರಿದಂತೆ ಸ್ಥಳೀಯ ಸಾರ್ವಜನಿಕ ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುವುದು ಸಂಸತ್ ಸದಸ್ಯರ ಕರ್ತವ್ಯ. ಕ್ಷೇತ್ರದ ಜನರು ಹಾಗೂ ಕಾರ್ಯರ್ತರೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು ಎಂದು ಪ್ರಧಾನಿ ಮೋದಿ ಅವರು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಹಲವು ಬಾರಿ ಹೇಳಿದ್ದಾರೆ. ಆದರೂ ಸಹ ಪ್ರಜ್ಞಾ ಸಿಂಗ್ ಠಾಕೂರ್ ಅವರು ಕಾರ್ಯರ್ತರ ಬಳಿ ನಿರ್ಲಕ್ಷ್ಯದಿಂದ ವರ್ತಿಸಿದ್ದು, ಸ್ಥಳಿಯ ಸಮಸ್ಯೆಗಳನ್ನು ನಿಮ್ಮ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತನ್ನಿ ಎಲ್ಲ ಸಮಸ್ಯೆಗಳನ್ನೂ ನನ್ನ ಬಳಿ ಹೇಳಿಕೊಳ್ಳಬೇಡಿ ಎಂದು ಗುಡುಗಿದ್ದಾರೆ.

    ಪ್ರಜ್ಞಾ ಸಿಂಗ್ ಹೇಳಿಕೆಗೆ ಕಾಂಗ್ರೆಸ್ ನಾಯಕ ತಾರಿಖ್ ಅನ್ವರ್ ಪ್ರತಿಕ್ರಿಯಿಸಿ, ಈ ಹೇಳಿಕೆಯಿಂದ ಸ್ವಚ್ಛ ಭಾರತದ ಬಗ್ಗೆ ಅವರು ಯಾವ ರೀತಿಯ ಮನಸ್ಥಿತಿ ಹೊಂದಿದ್ದಾರೆ ಎನ್ನುವುದು ತಿಳಿಯುತ್ತದೆ. ಮೋದಿ ಸ್ವಾಧ್ವಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಲೋಕಸಭಾ ಚುನಾವಣೆಯ ಪ್ರಚಾರ ಮಾಡುವ ಸಂದರ್ಭದಲ್ಲಿ 2008ರ ಮಲೆಗಾಂವ್ ಸ್ಫೋಟದ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್, ಗಾಂಧಿ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ದೇಶಭಕ್ತ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ, ಗಾಂಧಿ ಹತ್ಯೆ ಕುರಿತು ಯಾರೇ ಹೇಳಿಕೆ ನೀಡಿದರೂ ಅವರನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

  • ನನ್ ಮಾತು ಕೇಳದಿದ್ರೆ, ನೀನೇನೂ ಕೀಳೋಕೆ ಇಲ್ಲಿ ಇರ್ತಿಯಾ: ಅಧಿಕಾರಿಗೆ ದುರ್ಯೋಧನ ಐಹೊಳೆ ಅವಾಜ್

    ನನ್ ಮಾತು ಕೇಳದಿದ್ರೆ, ನೀನೇನೂ ಕೀಳೋಕೆ ಇಲ್ಲಿ ಇರ್ತಿಯಾ: ಅಧಿಕಾರಿಗೆ ದುರ್ಯೋಧನ ಐಹೊಳೆ ಅವಾಜ್

    ಚಿಕ್ಕೋಡಿ: ಗಾಂಧಿ ಜಯಂತಿ ದಿನದಂದೇ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅಧಿಕಾರಿ ಮೇಲೆ ಗುಂಡಾಗಿರಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.

    ನನ್ನ ಮಾತು ಕೇಳದಿದ್ದರೆ ನೀನೇನೂ ಕೀಳೋಕೆ ಇಲ್ಲಿ ಇರ್ತಿಯಾ ಎಂದು ದುರ್ಯೋಧನ ಐಹೊಳೆ ರಾಯಭಾಗ ಕೆಎಸ್ಆರ್‌ಟಿಸಿ ಡಿಪೋ ಮ್ಯಾನೇಜರ್‌ಗೆ ನೇರವಾಗಿ ಧಮ್ಕಿ ಹಾಕಿದ್ದಾರೆ.

    ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಅಧಿಕಾರಿ ಮೇಲೆ ಶಾಸಕರು ದರ್ಪ ತೋರುವುದರ ಜೊತೆಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ನೀವು ಹಣ ತಿನ್ನಲಿ ಬಿಡಲಿ, ನೀವು ಹಣ ತಿಂದಿದ್ದೀರಿ ಎಂದು ನಾನು ಜಿಲ್ಲಾಧಿಕಾರಿಗೆ ನಾನು ದೂರು ನೀಡುತ್ತೇನೆ ಎಂದು ಹೇಳಿದ್ದಲ್ಲೇ ಜನರ ನಡುವೆ ಡಿಪೋ ಮ್ಯಾನೇಜರ್ ಎಆರ್ ಚಬ್ಬಿ ಅವರಿಗೆ ಶಾಸಕ ದುರ್ಯೋಧನ ಹೊಡೆಯಲು ಯತ್ನಿಸಿದ್ದಾರೆ.

    ಶಾಸಕರ ಅವತಾರ ಕಂಡು ಸಾರಿಗೆ ಇಲಾಖೆ ಅಧಿಕಾರಿಗಳು ತಬ್ಬಿಬ್ಬು ಆಗಿದ್ದಾರೆ. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತೆರವುಗೊಳಿಸದೇ ಇದ್ದಿದ್ದಕ್ಕೆ ನಾವು ಕಸ ಹೊಡೆಯಲು ಬಂದರೆ ನೀವು ಆರಾಮಾಗಿ ಬನ್ನಿ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಾತ್ಮ ಗಾಂಧೀಜಿಯಿಂದಾಗಿ ಸ್ವಚ್ಛ ಭಾರತ, ರೈಲು ಶೀರ್ಷಿಕೆಗೆ ರಾಯಚೂರು ರೈಲ್ವೇ ನಿಲ್ದಾಣ ಆಯ್ಕೆ

    ಮಹಾತ್ಮ ಗಾಂಧೀಜಿಯಿಂದಾಗಿ ಸ್ವಚ್ಛ ಭಾರತ, ರೈಲು ಶೀರ್ಷಿಕೆಗೆ ರಾಯಚೂರು ರೈಲ್ವೇ ನಿಲ್ದಾಣ ಆಯ್ಕೆ

    ರಾಯಚೂರು: ಜಿಲ್ಲೆಯ ನಗರ ರೈಲ್ವೇ ನಿಲ್ದಾಣ ಅಂದ್ರೆ ಈ ಹಿಂದೆ ಮೂಗು ಮುರಿಯುವಂತಿತ್ತು. ಆದರೆ ಈಗ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯಿಂದಾಗಿ ಇಡೀ ರೈಲ್ವೇ ನಿಲ್ದಾಣದಲ್ಲಿ ಹೊಸ ಲೋಕವೇ ಸೃಷ್ಟಿಯಾದಂತಾಗಿದೆ.

    ಈ ಹಿಂದೆ ಸ್ವಚ್ಛ ಭಾರತ ಅಭಿಯಾನದ ಸರ್ವೆಯಲ್ಲಿ ಕೆಳಗಡೆಯಿಂದ ನಾಲ್ಕನೇ ಸ್ಥಾನ ಪಡೆದು ಅಪಕೀರ್ತಿಗೆ ಒಳಗಾಗಿದ್ದ ರಾಯಚೂರು ರೈಲ್ವೇ ನಿಲ್ದಾಣ ಈಗ ಸಂಪೂರ್ಣ ಬದಲಾಗಿದೆ. ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಸೂಚನೆಯಂತೆ ದಕ್ಷಿಣ ಮಧ್ಯ ರೈಲ್ವೇ ನಿಲ್ದಾಣಗಳ ಸ್ವಚ್ಛತೆಗೆ ಆದ್ಯತೆ ನೀಡಿದ್ದರಿಂದ ರಾಯಚೂರು ನಿಲ್ದಾಣ ದೇಶದ ನೂರು ಸ್ವಚ್ಛ ನಿಲ್ದಾಣಗಳ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದಿದೆ.

    ಸ್ವಚ್ಛ ರೈಲು ಅಭಿಯಾನದಲ್ಲೂ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ, ಸ್ವಚ್ಛ ರೈಲು ಶೀರ್ಷಿಕೆಯಡಿ ಇಡೀ ರೈಲ್ವೇ ನಿಲ್ದಾಣ ಈಗ ಗಾಂಧೀಮಯವಾಗಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಾಂಧೀಜಿ ಅವರು ರಾಯಚೂರಿನಿಂದ ಮಹಾರಾಷ್ಟ್ರಕ್ಕೆ ತೆರಳಿದ್ದ ನೆನಪನ್ನ ಮರುಕಳಿಸುವಂತೆ ಸುಂದರವಾದ ಚಿತ್ರಗಳನ್ನ ಇಡೀ ರೈಲ್ವೇ ನಿಲ್ದಾಣದ ತುಂಬಾ ಬಿಡಿಸಲಾಗಿದೆ. ಗಾಂಧಿಜೀ ಅವರ 150ನೇ ಜಯಂತಿ ಹಿನ್ನೆಲೆ ರಾಯಚೂರು ನಿಲ್ದಾಣ ಈಗ ಚಿತ್ರಕಲೆಗಳಿಂದ ಕಂಗೊಳಿಸುತ್ತಿದೆ ಎಂದು ರೈಲ್ವೇ ಸಲಹಾ ಸಮಿತಿ ಮಾಜಿ ಸದಸ್ಯ ಜಗದೀಶ್ ಗುಪ್ತಾ ಹೇಳಿದ್ದಾರೆ.

    ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಕಲಾವಿದರು ಗಾಂಧೀಜಿ ರಾಯಚೂರಿಗೆ ಬಂದಿದ್ದ ಕ್ಷಣಗಳಿಗೆ ಮರುಜೀವ ನೀಡಿದ್ದಾರೆ. ಉಪ್ಪಿನ ಸತ್ಯಾಗ್ರಹ ಸೇರಿ ಸ್ವಾತಂತ್ರ್ಯ ಸಂಗ್ರಾಮದ ಘಟನಾವಳಿಗಳನ್ನ ಸುಂದರವಾಗಿ ಚಿತ್ರಿಸಲಾಗಿದೆ. ಅಲ್ಲದೆ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮಗಳನ್ನೆಲ್ಲಾ ಕೈಗೊಳ್ಳಲಾಗಿದೆ. ಗಾಂಧೀಜಿ ಅವರ 150ನೇ ಜನ್ಮದಿನದ ನೆನಪಿಗಾಗಿ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿ ಬಾಪೂಜಿ ಪುತ್ಥಳಿ ಅನಾವರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

    ದೇಶದ 10 ಸ್ವಚ್ಛ ರೈಲ್ವೇ ನಿಲ್ದಾಣಗಳನ್ನ ಆಯ್ಕೆ ಮಾಡಿ ವಿಶೇಷ ಕಲಾಚಿತ್ರಗಳಿಂದ ಸುಂದರಗೊಳಿಲಾಗಿದೆ. ಜಾನಪದ ಚಿತ್ರಗಳಿಗೆ ಸಿಖಂದರಬಾದ್ ರೈಲ್ವೇ ನಿಲ್ದಾಣವನ್ನ ಆಯ್ಕೆ ಮಾಡಿದ್ರೆ, ಸ್ವಚ್ಛ ಭಾರತ ಹಾಗೂ ಸ್ವಚ್ಛ ರೈಲು ಶೀರ್ಷಿಕೆಗೆ ರಾಯಚೂರು ರೈಲ್ವೇ ನಿಲ್ದಾಣ ಆಯ್ಕೆ ಮಾಡಲಾಗಿದೆ. ಈಗ ರಾಯಚೂರು ರೈಲ್ವೇ ನಿಲ್ದಾಣ ದಕ್ಷಿಣ ಮಧ್ಯ ರೈಲ್ವೇ ನಿಲ್ದಾಣಗಳಲ್ಲೇ ಸುಂದರ ನಿಲ್ದಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ಸ್ವಚ್ಛತೆಯೇ ಸೇವೆ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

    `ಸ್ವಚ್ಛತೆಯೇ ಸೇವೆ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

    ನವದೆಹಲಿ: ಅಕ್ಟೋಬರ್ 2ಕ್ಕೆ ಸ್ವಚ್ಛ ಭಾರತ ಅಭಿಯಾನಕ್ಕೆ 4 ವರ್ಷವಾಗುವ ಹಿನ್ನೆಲೆಯಲ್ಲಿ ಇಂದಿನಿಂದ ಅಕ್ಟೋಬರ್ 2ರವರೆಗೆ ದೇಶಾದ್ಯಂತ ಸ್ವಚ್ಛತಾ ಅಭಿಯಾನ ನಡೆಸಲು ಮೋದಿ ಕರೆಕೊಟ್ಟಿದ್ದು, ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮಕ್ಕೆ ದೆಹಲಿಯಲ್ಲಿ ಚಾಲನೆ ನೀಡಿದರು.

    ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿ, 4 ವರ್ಷದಲ್ಲಿ ದೇಶದ್ಯಾಂತ ಸುಮಾರು 9 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸ್ವಚ್ಛತೆಯಿಂದ ಆರೋಗ್ಯಯುತ ಭಾರತ ನಿರ್ಮಾಣ ಸಾಧ್ಯ. ಸ್ವಚ್ಛತಾ ಅಭಿಯಾನದಲ್ಲಿ ದೇಶದ ಹೆಣ್ಣುಮಕ್ಕಳ ಕೊಡುಗೆ ಅಪಾರ ಎಂದು ಹೇಳಿದರು.

    ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್, ಉದ್ಯಮಿ ರತನ್ ಟಾಟಾ ಸೇರಿದಂತೆ ಹಲವರು ಗಣ್ಯರು, ವಿದ್ಯಾರ್ಥಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಸಂವಾದ ನಡೆಸಿದರು.

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮೋದಿ, ಗಾಂಧೀಜಿ ಅವರ 152ನೇ ಜನ್ಮ ದಿನಾಚರಣೆಯನ್ನು ಅಕ್ಟೋಬರ್ 2ರಂದು ಆಚರಿಸಲಿದ್ದೇವೆ. ಅಂದೇ ಸ್ವಚ್ಛ ಭಾರತ ಅಭಿಯಾನಕ್ಕೆ 4 ವರ್ಷ ತುಂಬಲಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ. ಸ್ವಚ್ಛತಾ ಅಭಿಯಾನದ ಜೊತೆಗೆ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸುಧಾರಿಸಬೇಕು ಎಂದು ಮೋದಿ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರದ ರೈಲ್ವೇ ಇಲಾಖೆಯ ಬಗ್ಗೆಯೂ ಟ್ವೀಟ್ ಮಾಡಿರುವ ಮೋದಿ, ಸ್ವಚ್ಛ ಭಾರತ ಅಭಿಯಾನದಲ್ಲಿ ರೈಲ್ವೇ ಇಲಾಖೆ ಉತ್ತಮ ಕೆಲಸ ಮಾಡಿದೆ ಎಂದು ತಿಳಿಸಿದ್ದು, ಹರ್ಯಾಣದ ರೇವಾರಿ ರೈಲ್ವೆ ನಿಲಾಣದ ಜನರೊಂದಿಗೆ ಮೋದಿ ಸಂವಾದ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv