Tag: ಸ್ವಚ್ಛ ನಗರ

  • India’s Cleanest City: ದೇಶದ ‘ಸ್ವಚ್ಛ ನಗರ’ ಪಟ್ಟಿಯಲ್ಲಿ ಇಂದೋರ್‌ ನಂ.1 – ಮೈಸೂರಿಗೆ 3ನೇ ಸ್ಥಾನ

    India’s Cleanest City: ದೇಶದ ‘ಸ್ವಚ್ಛ ನಗರ’ ಪಟ್ಟಿಯಲ್ಲಿ ಇಂದೋರ್‌ ನಂ.1 – ಮೈಸೂರಿಗೆ 3ನೇ ಸ್ಥಾನ

    ನವದೆಹಲಿ: ದೇಶದ ಸ್ವಚ್ಛ ನಗರಗಳ (India’s Cleanest City) ಪಟ್ಟಿಯಲ್ಲಿ ಮಧ್ಯಪ್ರದೇಶದ ಇಂದೋರ್‌ (Indore) ಮೊದಲ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದ ಮೈಸೂರು (Mysuru) 3ನೇ ಸ್ಥಾನದಲ್ಲಿದೆ.

    ಗುರುವಾರ ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿಗಳನ್ನು ಘೋಷಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಸೂಪರ್ ಸ್ವಚ್ಛ ಲೀಗ್ ನಗರಗಳಲ್ಲಿ’ ಇಂದೋರ್ ಅನ್ನು ಅತ್ಯಂತ ಸ್ವಚ್ಛ ನಗರವೆಂದು ಘೋಷಿಸಲಾಗಿದೆ. ಇದನ್ನೂ ಓದಿ: ಬೇಲ್‌ ನೀಡುವಾಗ ಹೈಕೋರ್ಟ್ ತನ್ನ ವಿವೇಚನೆ ಬಳಸಿಲ್ಲ – ನ್ಯಾ.ಪರ್ದಿವಾಲಾ ಅಭಿಪ್ರಾಯ

    ಇಂದೋರ್‌ ಮೊದಲ ಸ್ಥಾನದಲ್ಲಿದ್ದರೆ, ಛತ್ತೀಸಗಢದ ಅಂಬಿಕಾಪುರ 2 ಹಾಗೂ ಕರ್ನಾಟಕದ ಮೈಸೂರು 3 ಸ್ಥಾನ ಪಡೆದುಕೊಂಡಿವೆ. ಹತ್ತು ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ಸ್ವಚ್ಛ ನಗರವಾಗಿ ಗುಜರಾತ್‌ನ ಅಹಮದಾಬಾದ್‌ ಹೊರಹೊಮ್ಮಿದೆ. ಛತ್ತೀಸಗಢದ ರಾಯ್ಪುರ, ಮಹಾರಾಷ್ಟ್ರದ ನವಿ ಮುಂಬೈ, ಮಧ್ಯಪ್ರದೇಶದ ಜಬಲ್ಪುರ, ಗುಜರಾತ್‌ನ ಸೂರತ್‌ ನಂತರದ ಸ್ಥಾನದಲ್ಲಿವೆ.

    ‘ಸೂಪರ್ ಲೀಗ್’ ವಿಭಾಗವು ಹೊಸದಾಗಿ ಸೇರ್ಪಡೆಯಾಗಿದೆ. 2024 ರ ಜನವರಿಯಲ್ಲಿ ಘೋಷಿಸಲಾದ ಈ ಪ್ರಶಸ್ತಿಗಳ ಹಿಂದಿನ ಆವೃತ್ತಿಯಲ್ಲಿ, ಇಂದೋರ್ ಸತತ ಏಳನೇ ಬಾರಿಗೆ ದೇಶದ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿತು. ಸೂರತ್ ಜಂಟಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಪ್ಲೇಗ್ ಪೀಡಿತ ನಗರ ಎಂಬ ತನ್ನ ಹಿಂದಿನ ಪರಂಪರೆಯನ್ನು ಅಳಿಸಿಹಾಕಿದೆ. ಇದನ್ನೂ ಓದಿ: ಭಾರೀ ಮಳೆಗೆ ಭೂಕುಸಿತ, ಓರ್ವ ಮಹಿಳೆ ಸಾವು – ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

    ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಕೇಂದ್ರದ ಸ್ವಚ್ಛ ಭಾರತ ಮಿಷನ್-ನಗರದ ಅಡಿಯಲ್ಲಿ ಆಯೋಜಿಸಲಾಗಿದೆ. ಇದನ್ನು ಸರ್ಕಾರವು ವಿಶ್ವದ ಅತಿದೊಡ್ಡ ನಗರ ನೈರ್ಮಲ್ಯ ಮತ್ತು ಸ್ವಚ್ಛತಾ ಸಮೀಕ್ಷೆ ಎಂದು ಪ್ರಚಾರ ಮಾಡಿದೆ.

    ಗುರುವಾರ ನಡೆದ ಕಾರ್ಯಕ್ರಮದ ಭಾಗವಾಗಿ ಒಟ್ಟು 78 ಪ್ರಶಸ್ತಿಗಳನ್ನು ಘೋಷಿಸಲಾಯಿತು. ಇದರಲ್ಲಿ ಖಟ್ಟರ್, ಅವರ ಕಿರಿಯ ಸಹೋದ್ಯೋಗಿ MoS ತೋಖನ್ ಸಾಹು ಮತ್ತು MoHUA ಕಾರ್ಯದರ್ಶಿ ಶ್ರೀನಿವಾಸ್ ಕೆ. ಭಾಗವಹಿಸಿದ್ದರು.

  • ಸತತ 6ನೇ ಬಾರಿಗೆ ದೇಶದ ಸ್ವಚ್ಛ ನಗರ ಕಿರೀಟ ಮುಡಿಗೇರಿಸಿಕೊಂಡ ಇಂದೋರ್

    ಸತತ 6ನೇ ಬಾರಿಗೆ ದೇಶದ ಸ್ವಚ್ಛ ನಗರ ಕಿರೀಟ ಮುಡಿಗೇರಿಸಿಕೊಂಡ ಇಂದೋರ್

    ಮುಂಬೈ: ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಮಧ್ಯಪ್ರದೇಶದ ಇಂದೋರ್ (Indore) ಸತತ ಆರನೇ ಬಾರಿಗೆ ಭಾರತದ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜಸ್ಥಾನದ ಸೂರತ್ (Surat) ಮತ್ತು ಮಹಾರಾಷ್ಟ್ರದ ನವಿ ಮುಂಬೈ (Navi Mumbai) ನಂತರದ ಎರಡು ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ.

    ‘ಸ್ವಚ್ಛ ಸರ್ವೇಕ್ಷಣ್ ಅವಾರ್ಡ್ಸ್ 2022’ (Swachh Survekshan Awards 2022) ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ರಾಜ್ಯಗಳ ವಿಭಾಗದಲ್ಲಿ ಮಧ್ಯಪ್ರದೇಶವು (Madhya Pradesh) ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಛತ್ತೀಸಗಢ (Chhattisgarh) ಮತ್ತು ಮಹಾರಾಷ್ಟ್ರವು (Maharashtra) ನಂತರದ ಸ್ಥಾನ ಗಿಟ್ಟಿಸಿಕೊಂಡಿದೆ. ಇದನ್ನೂ ಓದಿ: ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ; ತ್ರಿಪಾಠಿ ನಾಮಪತ್ರ ತಿರಸ್ಕೃತ – ಖರ್ಗೆ, ಶಶಿ ತರೂರ್‌ ನಡುವೆ ಫೈಟ್

    ಇಂದೋರ್ ಮತ್ತು ಸೂರತ್ ಈ ವರ್ಷ ದೊಡ್ಡ ನಗರಗಳ ವಿಭಾಗದಲ್ಲಿ ತಮ್ಮ ಅಗ್ರ ಸ್ಥಾನಗಳನ್ನು ಉಳಿಸಿಕೊಂಡರೆ, ವಿಜಯವಾಡ ನವಿ ಮುಂಬೈ ತನ್ನ ಮೂರನೇ ಸ್ಥಾನವನ್ನು ಕಳೆದುಕೊಂಡಿದೆ. 100ಕ್ಕಿಂತ ಕಡಿಮೆ ನಗರ ಸ್ಥಳೀಯ ಸಂಸ್ಥೆಗಳನ್ನು ಹೊಂದಿರುವ ರಾಜ್ಯಗಳ ಪೈಕಿ ತ್ರಿಪುರಾ ಅಗ್ರಸ್ಥಾನವನ್ನು ಪಡೆದುಕೊಂಡಿದೆ ಎಂದು ಸಮೀಕ್ಷೆಯ ಫಲಿತಾಂಶಗಳಿಂದ ತಿಳಿದುಬಂದಿದೆ.

    ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ (Union Housing and Urban Affairs Minister Hardeep Singh Puri) ಹಾಗೂ ಇತರರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಇದನ್ನೂ ಓದಿ: ನಿವೃತ್ತಿಯಾಗುವ ಮುನ್ನ ಪಾಕಿಸ್ತಾನದಲ್ಲಿ ಆಡಿ – ಕೊಹ್ಲಿ ಆಹ್ವಾನಿಸಿದ ಪಾಕ್ ಅಭಿಮಾನಿ

    ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ನಗರಗಳ ವಿಭಾಗದಲ್ಲಿ ಮಹಾರಾಷ್ಟ್ರದ ಪಂಚಗಣಿ ಮೊದಲ ಸ್ಥಾನದಲ್ಲಿದ್ದರೆ, ಛತ್ತೀಸ್‍ಗಢದ ಪಟಾನ್ ಮತ್ತು ಮಹಾರಾಷ್ಟ್ರದ ಕರ್ಹಾದ್ ನಂತರದ ಸ್ಥಾನದಲ್ಲಿದೆ.

    Live Tv
    [brid partner=56869869 player=32851 video=960834 autoplay=true]

  • ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮತ್ತೊಂದು ಗೌರವದ ಗರಿ

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮತ್ತೊಂದು ಗೌರವದ ಗರಿ

    – ಸ್ವಚ್ಛತಾ ಸಮೀಕ್ಷೆಯಲ್ಲಿ 3ನೇ ರ‍್ಯಾಂಕ್

    ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಿದೆ. ಸ್ವಚ್ಛ ಭಾರತ ಸಮೀಕ್ಷೆಯಲ್ಲಿ ಮೂರನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

    ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಭಾರತ ಸರ್ವೇಕ್ಷಣೆಯಲ್ಲಿ (ಸಮೀಕ್ಷೆಯಲ್ಲಿ) ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮೂರನೇ ಸ್ಥಾನ ಬಂದಿದೆ. ಗಣೇಶ ಚತುರ್ಥಿಯ ಮೊದಲ ದಿನ ಕೇಂದ್ರ ಸರ್ಕಾರ ಪ್ರಕಟಿಸಿರುವ ಸ್ವಚ್ಛತಾ ವರದಿಯಲ್ಲಿ ಮೈಸೂರಿಗೆ ಮೊದಲ ಸ್ಥಾನ, ತುಮಕೂರಿಗೆ ಎರಡನೇ ಸ್ಥಾನ ಬಂದಿದೆ. ಇನ್ನೂ ರಾಜ್ಯದ ಐದು ಸ್ವಚ್ಛ ನಗರಗಳ ಸಾಲಿನಲ್ಲಿ ಹು-ಧಾ ಮಹಾನಗರ ಮೂರನೇ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿದೆ.

    ದೇಶದ ರ‍್ಯಾಕಿಂಗ್‍ನಲ್ಲಿ 172ನೇ ಸ್ಥಾನದಲ್ಲಿದೆ. ಚುನಾಯಿತ ಪ್ರತಿನಿಧಿಗಳ ಕೌನ್ಸಿಲ್ ಇಲ್ಲದೇ ಒಂದೂವರೆ ವರ್ಷಗಳಾಗಿದ್ದು, ಆಡಳಿತ ಮಂಡಳಿಯ ದೃಷ್ಟಿ ಕೊರೊನಾ ನಿಯಂತ್ರಣದತ್ತ ನೆಟ್ಟಿದೆ. ಇದರ ಮಧ್ಯೆ ಹು-ಧಾ ಮಹಾನಗರ ಪಾಲಿಕೆ ರಾಜ್ಯದಲ್ಲಿ ಮೂರನೇ ರ‍್ಯಾಂಕ್ ಪಡೆದಿರುವುದು ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಹು-ಧಾ ಮಹಾನಗರದ ಸ್ವಚ್ಛತಗೆ ಪಾಲಿಕೆ ಕೈಗೊಂಡಿರುವ ಸ್ವಚ್ಛತಾ ಕಾರ್ಯಗಳು ಪಾಲಿಕೆಗೆ ಗೌರವದ ಗರಿ ಮುಡಿಗೇರಿಸಿಕೊಳ್ಳಲು ಸೂಕ್ತ ನಿದರ್ಶನವಾಗಿದೆ.

    ಸ್ಮಾರ್ಟ್ ಸಿಟಿ ಕಾಮಗಾರಿ ಜೊತೆ ಜೊತೆಗೆ ಸ್ವಚ್ಛ ಭಾರತದ ಯೋಜನೆಗಳಲ್ಲಿ ಸೂಕ್ತ ನಿರ್ಧಾರವನ್ನು ಪಾಲಿಕೆ ತೆಗೆದುಕೊಳ್ಳುವ ಮೂಲಕ ಒಳ್ಳೆಯ ಫಲಿತಾಂಶವನ್ನು ಪಾಲಿಕೆ ಪಡೆದುಕೊಂಡಿದೆ. ಅಲ್ಲದೇ ಮನೆ ಮನೆಗೆ ಕಸ ಸಂಗ್ರಹ, ತ್ಯಾಜ್ಯ ವಿಲೇವಾರಿ, ಜನರಲ್ಲಿ ಮೂಡಿದ ಅರಿವು, ಸ್ವಚ್ಛತಾ ಸಾಮಗ್ರಿ ಹಾಗೂ ಯಂತ್ರೋಪಕರಣಗಳು ಸಮರ್ಪಕ ಬಳಕೆಯಿಂದ ಹು-ಧಾ ಮಹಾನಗರ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪೌರಕಾರ್ಮಿಕರ ಕಾರ್ಯವನ್ನು ಇಲ್ಲಿ ಸ್ಮರಿಸಬಹುದಾಗಿದೆ.

  • ಎಲ್ಲೆಂದರಲ್ಲಿ ತುಪುಕ್ ಅನ್ನೋರಿಗೆ ಪಾಠ- ರಸ್ತೆಯಲ್ಲಿ ಉಗುಳಿದವನಿಂದ್ಲೇ ಕ್ಲೀನ್ ಮಾಡಿಸಿದ್ರು..!

    ಎಲ್ಲೆಂದರಲ್ಲಿ ತುಪುಕ್ ಅನ್ನೋರಿಗೆ ಪಾಠ- ರಸ್ತೆಯಲ್ಲಿ ಉಗುಳಿದವನಿಂದ್ಲೇ ಕ್ಲೀನ್ ಮಾಡಿಸಿದ್ರು..!

    ಪುಣೆ: ನಗರವನ್ನು ಶುಚಿತ್ವವಾಗಿಟ್ಟುಕೊಳ್ಳುವ ಹಿನ್ನೆಲೆಯಲ್ಲಿ ಇದೀಗ ಪುಣೆ ನಗರ ಸಭೆ ಶಿಕ್ಷೆ ನೀಡಲು ಮುಂದಾಗಿದೆ. ಈ ಶಿಕ್ಷೆಯಿಂದ ವ್ಯಕ್ತಿ ಮತ್ತೆ ಅಂತಹ ತಪ್ಪು ಮಾಡಲಾರ. ಯಾಕಂದ್ರೆ ಆ ಶಿಕ್ಷೆ ಅಷ್ಟೊಂದು ಅಸಹ್ಯವಾಗಿದೆ.

    ಏನ್ ಶಿಕ್ಷೆ..?:
    ಪುಣೆ ನಗರವನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ನಾಗರಿಕ ಸಂಸ್ಥೆ ಈ ಕ್ರಮ ಕೈಗೊಂಡಿದೆ. ಮನುಷ್ಯ ಎಲ್ಲೆಂದರಲ್ಲಿ ಉಗುಳುತ್ತಾನೆ. ಇದಕ್ಕೆ ಕ್ರಮ ಕೈಗೊಳ್ಳಬೇಕೆಂದು ಉಪಾಯ ಹೂಡಿದ ಸಂಸ್ಥೆ, ಉಗಿದವನಿಂದಲೇ ಅದನ್ನು ಕ್ಲೀನ್ ಮಾಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಆತನಿಗೆ 150 ರೂ ದಂಡ ಕಟ್ಟುವಂತೆ ಹೇಳುತ್ತಾರೆ.

    ಈ ಶಿಕ್ಷೆಯನ್ನು ಕಳೆದ ವಾರದಿಂದ ಆರಂಭ ಮಾಡಲಾಗಿದೆ. ಸದ್ಯ 5 ವಾರ್ಡ್ ಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆರಂಭಿಸಿದ 8 ದಿನದಲ್ಲಿ ನಗರಸಭೆಯವರು ರಸ್ತೆಯಲ್ಲಿ ಉಗುಳುತಿದ್ದ ಸುಮಾರು 156 ಮಂದಿಯನ್ನು ಹಿಡಿದಿದ್ದು, ಅವರಿಂದಲೇ ಉಗುಳಿದ ಜಾಗವನ್ನು ಕ್ಲೀನ್ ಮಾಡಿಸಿದ್ದಾರೆ. ಅಲ್ಲದೇ ಪ್ರತಿಯೊಬ್ಬರಿಂದಲೂ 150 ರೂ. ದಂಡ ವಸೂಲಿ ಮಾಡಿದ್ದಾರೆ ಅಂತ ಪುಣೆ ನಗರಸಭೆಯ ದಯಾನೇಶ್ವರ್ ಮೊಲಾಕ್ ತಿಳಿಸಿದ್ದಾರೆ.

    ಶಿಕ್ಷೆಯ ಉದ್ದೇಶವೇನು..?
    ಜನರಲ್ಲಿ ಕ್ಲೀನ್ ಬಗ್ಗೆ ಜಾಗೃತಿ ಮೂಡಿಸುವುದೇ ಈ ಶಿಕ್ಷೆಯ ಪ್ರಮುಖ ಉದ್ದೇಶವಾಗಿದೆ. ಯಾಕಂದ್ರೆ ಹೆಚ್ಚಿನವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎಲ್ಲೆಂದರಲ್ಲಿ ಉಗುಳುತ್ತಾರೆ. ಹೀಗಾಗಿ ಇದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ತಮ್ಮ ಉಗುಳನ್ನು ತಾವೇ ಶುಚಿಗೊಳಿಸಲು ಅಸಹ್ಯಪಡುತ್ತಾರೆ. ಇದರಿಂದ ಪಾಠ ಕಲಿಯುತ್ತಾರೆ. ಅಲ್ಲದೇ ಮತ್ತೊಮ್ಮೆ ಉಗುಳುವ ಮುನ್ನ 2 ಬಾರಿ ಯೋಚನೆ ಮಾಡುತ್ತಾರೆ ಅಂತ ಅವರು ತಿಳಿಸಿದ್ದಾರೆ.

    2018ರ ಸ್ವಚ್ಛ ಗ್ರಾಮದಲ್ಲಿ ಪುಣೆಗೆ 10 ನೇ ಸ್ಥಾನದಲ್ಲಿದೆ. ಮಧ್ಯಪ್ರದೇಶದ ಇಂದೋರ್ ನಗರ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಪುಣೆ ಸ್ವಚ್ಛ ನಗರ ಮಾಡುವಲ್ಲಿ ಮೊಲಾಕ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews