– 15-20 ದಿನದೊಳಗೆ ಸೈಟ್ ಕ್ಲೀನ್ ಮಾಡಿಸದಿದ್ರೆ 10,000 ರೂ. ದಂಡ
ಚಿತ್ರದುರ್ಗ: ಸೈಟ್ (Site) ಖರೀದಿಸಿ ವರ್ಷಗಟ್ಟಲೆ ಬಿಟ್ಟು ಹೋಗುವ ಮಾಲೀಕರಿಗೆ ಚಿತ್ರದುರ್ಗ ನಗರಸಭೆ (Chitradurga Municipal Council) ಶಾಕ್ ನೀಡಿದೆ. ಸ್ವಚ್ಛತೆಗೆ ಆದ್ಯತೆ ನೀಡಿರುವ ಚಿತ್ರದುರ್ಗ ನಗರಸಭೆ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ.
ಚಿತ್ರದುರ್ಗ ಮದ್ಯ ಕರ್ನಾಟಕದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಪ್ರವಾಸಿ ತಾಣ. ಆದರೆ ಇಲ್ಲಿ ಸ್ವಚ್ಛತೆ (Cleanliness) ಮರಿಚಿಕೆಯಾಗಿದೆ. ಅದರಲ್ಲೂ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಇಲ್ಲದೇ ಪರಿಸರ ನಾಶವಾಗಿದ್ದು, ಪ್ರಮುಖ ರಸ್ತೆಗಳಲ್ಲೇ ದುರ್ನಾಥ ಬೀರುತ್ತಿದೆ. ಹೀಗಾಗಿ ಚಿತ್ರದುರ್ಗ ನಗರಸಭೆ ಪೌರಾಯುಕ್ತರಾದ ರೇಣುಕಾ ನಗರಸಭೆ ವ್ಯಾಪ್ತಿಗೆ ಸೇರಿದ ಸುಮಾರು ಸಾವಿರಾರು ಸೈಟ್ ಮಾಲೀಕರಿಗೆ ನೋಟಿಸ್ ಜಾರಿಮಾಡಿದ್ದಾರೆ. ಇದನ್ನೂ ಓದಿ: ಕಡೆಯ ಕಾರ್ತಿಕ ಸೋಮವಾರ – ಕೋಲಾರದ ಅಂತರಗಂಗೆಗೆ ಭಕ್ತರ ದಂಡು
ನಿವೇಶನ ಕ್ಲೀನ್ ಮಾಡಿಸಿಕೊಳ್ಳಲು 15-20 ದಿನಗಳ ಕಾಲ ಸಮಯ ನೀಡಿ ನೋಟಿಸ್ ನೀಡಿದ್ದಾರೆ. ಒಂದು ವೇಳೆ ನೋಟಿಸ್‌ಗೆ ಮಾಲೀಕರಿಂದ ಪ್ರತಿಕ್ರಿಯೆ ಬಾರದಿದ್ದರೆ ನಗರಸಭೆಯಿಂದಲೇ ಸೈಟ್ ಕ್ಲೀನ್ ಮಾಡಿಸಲಿದ್ದು, ನಿವೇಶನ ಮಾಲೀಕರಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಈ ಕುರಿತು ಅಧಿಕಾರಿಗಳು, ಸೈಟ್ ಬಳಿ ನಗರಸಭೆಯ ನಾಮಫಲಕ ಅಳವಡಿಸುತ್ತಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಧ್ವನಿಯಾಗಿದ್ದ ಇಸ್ಕಾನ್‌ನ ಚಿನ್ಮಯ್ ಕೃಷ್ಣ ದಾಸ್ ಅರೆಸ್ಟ್
ಇನ್ನು ಕಡಿಮೆ ಬೆಲೆಗೆ ಸೈಟ್ ಖರೀದಿಸಿ, ಬೇಕಾದಾಗ ಮನೆಕಟ್ಟುವ ಪ್ಲಾನ್ ಮಾಡುವ ಮಾಲೀಕರು, ಆ ನಿವೇಶನವನ್ನು ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಅಕ್ಕಪಕ್ಕದ ಮನೆಯವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಖಾಲಿ ಸೈಟ್‌ನಲ್ಲಿ ಜಾಲಿ ಮರಗಳು, ಕಸ ತುಂಬಿ ಡೆಂಗ್ಯೂ, ಮಲೇರಿಯಾ ಖಾಯಿಲೆ ಹರಡುವ ಭೀತಿ ಶುರುವಾದ ಪರಿಣಾಮ ನಗರಸಭೆ ಅಧಿಕಾರಿಗಳೇ ಸ್ವಚ್ಛತಾ ಕಾರ್ಯಕ್ಕೆ ವಿನೂತನ ಪ್ಲಾನ್ ಮಾಡಿದ್ದು, ನಾಗರೀಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ನಾನೇನು ತಪ್ಪು ಮಾಡಿಲ್ಲ, ಐ ಡೋಂಟ್ ಕೇರ್: ಬೈರತಿ ಸುರೇಶ್
ಇನ್ನು ಚಿತ್ರದುರ್ಗ ನಗರವನ್ನು ಸ್ವಚ್ಛವಾಗಿಡಲು ನಗರಸಭೆ ಅಧಿಕಾರಿಗಳು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಿನೂತನ ಪ್ಲಾನ್ ಮಾಡಿರೋದು ಬಹುತೇಕ ವರ್ಕೌಟ್ ಆಗಿದೆ. ನೋಟಿಸ್ ನೀಡಿದ ಬೆನ್ನಲ್ಲೇ ಸೈಟ್‌ಗಳ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ಇದನ್ನೂ ಓದಿ: ಸಿಎಂ ಬಂಪರ್ ಗಿಫ್ಟ್ – ಹೆಸ್ಕಾಂ ಅಧ್ಯಕ್ಷರಾಗಿ ಅಜ್ಜಂಪೀರ್ ಖಾದ್ರಿ ನೇಮಕ
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಸ ವಿಲೇವಾರಿ, ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗೆ ಸುಮಾರು 2 ಸಾವಿರ ಕೋಟಿ ರೂ. ಹಣ ಹಂಚಿಕೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ 17ನೇ ಅಂತಾರಾಷ್ಟ್ರೀಯ ಮುನಿಸಿಪಾಲಿಕ-23 ಸಮ್ಮೇಳನದ ವಸ್ತುಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಡಿಎ, ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳು ಇದಕ್ಕೆ ಒಳಪಡಲಿದ್ದು, ಬೆಂಗಳೂರಿನ ಆಸ್ತಿ ಪತ್ರ ಮತ್ತು ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಕೆಲವೇ ದಿನಗಳಲ್ಲಿ ಸ್ವತ್ತಿನ ಪತ್ರಗಳನ್ನು ಜನರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುವುದು ಎಂದು ತಿಳಿಸಿದರು.
ನವದೆಹಲಿ, ಚಂಡೀಗಢದಂತೆ ನಮ್ಮ ರಾಜ್ಯಗಳಲ್ಲಿ ಯೋಜಿತವಾದ ನಗರಗಳಿಲ್ಲ. 20 ವರ್ಷಗಳ ಹಿಂದೆಯೇ ಕಾಂಗ್ರೆಸ್ ಸರ್ಕಾರ ಭೂಮಿ ತಂತ್ರಾಂಶದ ಮೂಲಕ ಪಹಣಿ ನೀಡುವ ಯೋಜನೆ ಜಾರಿಗೆ ತಂದಿತ್ತು. ಪ್ರಸ್ತುತ ಆಸ್ತಿ ಮೌಲ್ಯವನ್ನು ನಿಖರವಾಗಿ ಲೆಕ್ಕಾಚಾರ ಮಾಡಲು ಅನೇಕ ತಂತ್ರಜ್ಞಾನಗಳು ನಮ್ಮ ನಡುವೆ ಇವೆ. ಡ್ರೋನ್ ಸೇರಿದಂತೆ ಇತರೇ ತಂತ್ರಜ್ಞಾನ ಬಳಸಿ ನಿಖರವಾಗಿ ಆಸ್ತಿಮೌಲ್ಯವನ್ನು ಲೆಕ್ಕ ಹಾಕಲಾಗುವುದು ಎಂದರು.
ಸರ್ಕಾರದಿಂದ ಬರಬೇಕಾದ ಅನುದಾನ ಜನಸಂಖ್ಯೆಗೆ ಅನುಗುಣವಾಗಿ ಬಂದೇ ಬರುತ್ತದೆ. ಆದರೆ ಹೆಚ್ಚಿನ ತೆರಿಗೆ ಸಂಗ್ರಹದ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದಲ್ಲಿ ಇರುವವರು ಅವರ ಕ್ಷೇತ್ರಗಳನ್ನು ಆರ್ಥಿಕವಾಗಿ ಸದೃಢ ಮಾಡಬೇಕು. ನಿಮ್ಮ ಆದಾಯವನ್ನು ನೀವೆ ಉತ್ಪತ್ತಿ ಮಾಡಿಕೊಂಡು, ಸರ್ಕಾರದ ಯಾವುದೇ ಸಹಾಯವೇ ಇಲ್ಲದೇ ಬಲಿಷ್ಠವಾಗಬೇಕು. ಒಂದಷ್ಟು ಜನರು ಒಂದು ಅಂತಸ್ತಿನ ಕಟ್ಟಡ ಕಟ್ಟಲು ಅನುಮತಿ ಪಡೆದುಕೊಂಡು 4 ಅಂತಸ್ತಿನ ಕಟ್ಟಡ ಕಟ್ಟಿರುತ್ತಾರೆ. ಇಂತಹ ಕಟ್ಟಡಗಳನ್ನು ಗುರುತಿಸಬೇಕು. ರಾಜಕೀಯ ಒತ್ತಡಗಳಿಗೆ ಅಧಿಕಾರಿಗಳು ಒಳಗಾಗದೆ, ಆಸ್ತಿ ಮೌಲ್ಯಗಳನ್ನು ಸರಿಯಾಗಿ ಗುರುತಿಸಿ ತೆರಿಗೆ ಸಂಗ್ರಹ ಮಾಡಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪಂಪ್ ಮಾಡಿ ನೀರನ್ನು ತರುವ ವೆಚ್ಚ ಹೆಚ್ಚುತ್ತಿದ್ದು, ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ನೀರಿನ ದರವನ್ನು ರಾಜಕೀಯ ಕಾರಣಗಳಿಂದ ಏರಿಕೆ ಮಾಡಿಲ್ಲ. ನೀರು ಅತ್ಯಮೂಲ್ಯವಾದುದು ಆದ ಕಾರಣ ಲೆಕ್ಕಾಚಾರದಿಂದ ಸ್ಥಳೀಯ ಸಂಸ್ಥೆಗಳು ನೀರು ಸರಬರಾಜು ಮಾಡಬೇಕು. ಪ್ರತಿ ಊರಿನಲ್ಲಿ ಎಷ್ಟು ಕೊಳವೆ ಬಾವಿಗಳನ್ನು ಕೊರೆಯುತ್ತಿದ್ದಾರೆ, ಎಷ್ಟು ಆಳ ಕೊರೆಯುತ್ತಿದ್ದಾರೆ ಎನ್ನುವ ಲೆಕ್ಕ ಸ್ಥಳೀಯ ಸಂಸ್ಥೆಗಳ ಬಳಿ ಇರಬೇಕು. ಕೊಳವೆ ಬಾವಿ ಕೊರೆಯಲು ಅನುಮತಿ ಸೇರಿದಂತೆ ಇತರೇ ಮಾರ್ಗಸೂಚಿಗಳನ್ನು ಅಧಿಕಾರಿಗಳು ಅನುಸರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಈ ಬಗ್ಗೆ ಮಾರ್ಗಸೂಚಿಗಳಿದ್ದು ಇದನ್ನು ಸರಿಯಾಗಿ ಪಾಲಿಸಬೇಕು. ಕನಿಷ್ಟ 50 ರೂ. ಶುಲ್ಕ ನಿಗದಿ ಮಾಡಿದರೆ, ಒಟ್ಟು ಕೊಳವೆಬಾವಿಗಳ ಲೆಕ್ಕ ಸರ್ಕಾರಕ್ಕೆ ಸಿಗುತ್ತದೆ. ಜನರಿಂದ ಹಣ ವಸೂಲಿ ಮಾಡಬೇಕು ಎನ್ನುವ ಅರ್ಥದಲ್ಲಿ ನಾನು ಹೇಳುತ್ತಿಲ್ಲ ಹಾಗೂ ಈ ಹಣದಿಂದ ಸರ್ಕಾರಕ್ಕೆ ಯಾವುದೇ ಆದಾಯ ಬರುವುದಿಲ್ಲ. ಆದರೆ ಕೃಷಿ, ಗೃಹೋಪಯೋಗಿ, ವಾಣಿಜ್ಯ ಬಳಕೆಗೆ ಎಷ್ಟು ಕೊಳವೆ ಬಾವಿಗಳನ್ನು ಬಳಸಲಾಗುತ್ತಿದೆ ಎನ್ನುವ ಮಾಹಿತಿ ದೊರೆಯುತ್ತದೆ ಎಂದು ತಿಳಿಸಿದರು.
ಪ್ರತಿಯೊಂದು ಹನಿ ನೀರನ್ನು ವಿಚಾರವಂತಿಕೆಯಿಂದ ಬಳಸುವ ಕೆಲಸವಾಗಬೇಕಿದೆ. ಇದು ಸ್ಥಳೀಯ ಸಂಸ್ಥೆಗಳ ಮೊದಲ ಆದ್ಯತೆಯಾಗಬೇಕಿದೆ. ಕೆಲವು ಪಟ್ಟಣಗಳಲ್ಲಿ ವಾರಕ್ಕೊಮ್ಮೆ ನೀರು ಸರಬರಾಜು ಮಾಡುವ ಪರಿಸ್ಥಿತಿಯಿದೆ. ಕುಡಿಯುವ ನೀರನ್ನೇ ಬಟ್ಟೆ, ವಾಹನ, ಮನೆ ತೊಳೆಯಲು ಬಳಸುತ್ತಿದ್ದಾರೆ. ಅತ್ಯಮೂಲ್ಯವಾದ ನೀರನ್ನು ಹೀಗೆ ಬಳಸಬಾರದು ಎಂದು ಜನರಲ್ಲಿ ಅರಿವು ಮೂಡಿಸಬೇಕು. ಅಂತರ್ಜಲ ನೀರಿನ ಬಳಕೆ, ಅದರ ಮಾಲಿನ್ಯದ ವಿರುದ್ಧ ಜಾಗೃತಿ ಮೂಡಿಸಬೇಕು. ಹನಿ ನೀರಿನ ಬಳಕೆಯ ಲೆಕ್ಕಾಚಾರವೂ ಜನಪ್ರತಿನಿಧಿಗಳ ಬಳಿ ಇರಬೇಕು. ರೈತ ಹಾಲು ಉತ್ಪಾದಿಸಲು ಸಾಕಷ್ಟು ಶ್ರಮವಹಿಸಿದರು, ಒಂದು ಲೀಟರ್ ಹಾಲಿಗೆ 35-40 ರೂ. ಸಿಗುತ್ತದೆ. ಆದರೆ ನೀರಿನ ಬಾಟಲಿಗೆ 20 ರೂ. ನೀಡುತ್ತಿದ್ದೇವೆ. ಶುದ್ಧ ಕುಡಿಯುವ ನೀರಿನ ಬಗ್ಗೆ ಸ್ಥಳೀಯ ಸಂಸ್ಥೆಗಳು ಸಾಕಷ್ಟು ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ರಾಯಚೂರು ವಿಮಾನ ನಿಲ್ದಾಣಕ್ಕಾಗಿ 108 ಮನೆಗಳ ತೆರವಿಗೆ ಮುಂದಾದ ಜಿಲ್ಲಾಡಳಿತ; ಗ್ರಾಮಸ್ಥರ ಆಕ್ರೋಶ
ಕರ್ನಾಟಕದ ಜನಸಂಖ್ಯೆಯ 7 ಕೋಟಿ 40% ರಷ್ಟು ಅಂದರೆ 3.25 ಕೋಟಿ ಜನರು ನಗರ ಪ್ರದೇಶಗಳಲ್ಲಿ ವಾಸವಿದ್ದಾರೆ. ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷಕ್ಕೆ ಮುಟ್ಟಿದೆ. ಏಕೆ ಜನರು ನಗರ ಪ್ರದೇಶಗಳಿಗೆ ಬರುತ್ತಿದ್ದಾರೆ ಎನ್ನುವ ಕುರಿತು ನಾವೆಲ್ಲಾ ಯೋಚನೆ ಮಾಡಬೇಕಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಟ್ಟು ನಿಟ್ಟಿನ ಆದೇಶ ನೀಡಿದ್ದು, ನಗರದ ಸ್ವಚ್ಚತೆ, ನೈರ್ಮಲ್ಯದ ಬಗ್ಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಕರ್ನಾಟಕಕ್ಕೆ ಬೆಂಗಳೂರು ಹೃದಯ. ಪ್ರತಿ ಜಿಲ್ಲೆಯ, ತಾಲೂಕಿನ ನಗರಗಳು ಹೃದಯಗಳಂತೆ ತಿಳಿದು ಅವುಗಳನ್ನು ಕಾಪಾಡಬೇಕು ಎಂದರು.
ಕಟ್ಟಡ ತ್ಯಾಜ್ಯಗಳನ್ನು (ಡೆಬ್ರಿಸ್) ಎಲ್ಲೆಂದರಲ್ಲಿ ಸುರಿಯುವ ಕೆಟ್ಟ ಚಾಳಿಯನ್ನು ಜನ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಅಲ್ಲಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ, ದಂಡ ವಿಧಿಸಬೇಕು. ನಗರದ ಕೆರೆ, ಉದ್ಯಾನಗಳ ಸುಂದರೀಕರಣ, ಹಸಿರೀಕರಣ ಮಾಡಬೇಕು ಹಾಗೂ ಮಳೆ ನೀರು ಕೆರೆಗೆ ಹರಿಯುಂತೆ ವ್ಯವಸ್ಥೆ ಮಾಡಬೇಕು. ರಸ್ತೆ ಗುಂಡಿಗಳನ್ನು ಮುಚ್ಚಲು ಎಂಜಿನಿಯರುಗಳಿಗೆ ಸೂಚನೆ ನೀಡಬೇಕು. ಸಂಚಾರ ದಟ್ಟಣೆ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಗಮನ ಹರಿಸಬೇಕು. ಎಲ್ಲಾ ಸ್ಥಳೀಯ ಸಂಸ್ಥೆಗಳು ರಸ್ತೆ ಬದಿ ಗಿಡಗಳನ್ನು ನೆಡಲು ಶಾಲೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು. ಈಗಾಗಲೇ ಸುಮಾರು 50 ಸಾವಿರಕ್ಕೂ ಹೆಚ್ಚು ಮಕ್ಕಳು ಬೆಂಗಳೂರು ನಗರದಲ್ಲಿ ಸಸಿಗಳನ್ನು ಕಾಪಾಡುವ, ನಿರ್ವಹಣೆ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನಮ್ಮ ಮನೆಗಳ ಒಳಗೆ ಹಸಿರು ಇರಬೇಕು ಎಂದು ಗಿಡಗಳನ್ನು ಬೆಳೆಸುತ್ತೇವೆ. ಪ್ರಕೃತಿಗೂ ಮನುಷ್ಯನಿಗೂ ಬಿಡಿಸಲಾಗದ ಸಂಬಂಧ ಇದಕ್ಕೆ ನಾವು ಶಕ್ತಿ ತುಂಬಬೇಕು ಎಂದು ಹೇಳಿದರು.
ಆದಾಯ ಹೆಚ್ಚಳ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ನಾನು, ಬೈರತಿ ಸುರೇಶ್ ಮತ್ತು ಪೌರಾಡಳಿತ ಸಚಿವರಾದ ರಹೀಂಖಾನ್ ಅವರು ಸೇರಿ ಸಭೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರುತ್ತೇವೆ. ಸಂವಿಧಾನದ 73, 74ನೇ ತಿದ್ದುಪಡಿಯ ಮೂಲಕ ಜಾರಿಗೆ ಬಂದ ಸ್ಥಳೀಯ ಸಂಸ್ಥೆಗಳಿಂದ ಸಾವಿರಾರು ನಾಯಕರು ಬೆಳೆದು ಬಂದಿದ್ದಾರೆ. ಹಳ್ಳಿಯಿಂದ ಬಂದ ನಾನು ಈ ರಾಜ್ಯದ ಡಿಸಿಎಂ ಸ್ಥಾನಕ್ಕೆ ಏರಿದ್ದೇನೆ. ಈ ದೇಶದ ಮೊದಲ ಪ್ರಧಾನಿ ಜವಹರ ಲಾಲ್ ನೆಹರು ಅವರು ಉನ್ನತ ಹುದ್ದೆಗೆ ಏರುವ ಮೊದಲು ಅಲಹಬಾದ್ ಮುನಿಸಿಪಲ್ ಕಾರ್ಪೋರೇಷನ್ ಅಧ್ಯಕ್ಷರಾಗಿದ್ದರು. ಸುಭಾಷ್ ಚಂದ್ರ ಬೋಸ್ ಕಲ್ಕತ್ತಾ ಮುನಿಸಿಪಲ್‌ನ ಕಮಿಷನರ್, ರಾಜಗೋಪಾಲಾಚಾರಿ, ಕೆಂಗಲ್ ಹನುಮಂತಯ್ಯ ಸೇರಿದಂತೆ ನೂರಾರು ನಾಯಕರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದು ನಾಯಕರಾಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿದ್ದವರು ಇಂದು ದೊಡ್ಡನಾಯಕರಾಗಿ ಬೆಳೆದಿದ್ದಾರೆ ಎಂದರು. ಇದನ್ನೂ ಓದಿ: ಸಿಎಂರ ಜನಸ್ಪಂದನವನ್ನು ಅಭಿನಂದಿಸುತ್ತೇನೆ, ಎಲ್ಲವನ್ನು ಟೀಕಿಸಲ್ಲ: ಹೆಚ್‌ಡಿಕೆ
ಚಿಕ್ಕಬಳ್ಳಾಪುರ: ಜನವರಿ 7 ರಿಂದ 14ರವರೆಗೂ ದಸರಾ ಮಾದರಿಯಲ್ಲೇ ಚಿಕ್ಕಬಳ್ಳಾಪುರ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು, ಇದರ ಭಾಗವಾಗಿ ಗುರುವಾರ ಕ್ಲೀನ್ ಚಿಕ್ಕಬಳ್ಳಾಪುರ (Clean Chikkaballapur) ಅಭಿಯಾನಕ್ಕೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Sudhakar) ಚಾಲನೆ ನೀಡಿದರು.
ಚಿಕ್ಕಬಳ್ಳಾಪುರ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿರಿಸಲು ಸಹಕಾರಿಯಾಗುವಂತೆ ಸ್ವಚ್ಛ ಚಿಕ್ಕಬಳ್ಳಾಪುರ ಅಭಿಯಾನಕ್ಕೆ ಚಾಲನೆ ನೀಡಿದರು. ಚಿಕ್ಕಬಳ್ಳಾಪುರ (Chikkaballapur) ನಗರದ ಬಲಮುರಿ ವೃತ್ತದ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸಚಿವರು ಚಾಲನೆ ನೀಡಿದರು. ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ನಗರ ಮಾಡಲು ಸುಧಾಕರ್ ಪ್ರಯತ್ನ ಮಾಡುತ್ತಿದ್ದು, ಸಚಿವ ಸುಧಾಕರ್‌ಗೆ ಡಿಸಿ, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಸಾಥ್ ನೀಡಿದರು. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಅಸ್ಥಿ ಸಂಗ್ರಹ- ಭಾನುವಾರ ಕೂಡಲಸಂಗಮ, ಗೋಕರ್ಣದ ಸಾಗರದಲ್ಲಿ ವಿಸರ್ಜನೆ
ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧದ ಹಾಗೂ ಕಸ ವಿಂಗಡಣೆ ಕರಪತ್ರ ಅಂಟಿಸಿ ಸುಧಾಕರ್ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಇಡೀ ಕ್ಷೇತ್ರದಲ್ಲಿ ಕ್ಲೀನ್ ಚಿಕ್ಕಬಳ್ಳಾಪುರ ಸ್ವಚ್ಛ ಅಭಿಯಾನ ನಡೆಸಲಾಗುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಮಹಿಳಾ ಕಾರ್ಯಕರ್ತೆಯರು – ಇಬ್ಬರ ಬಂಧನ
Live Tv
[brid partner=56869869 player=32851 video=960834 autoplay=true]
ಸತತ ಮಳೆಯಿಂದಾಗಿ ಮುಂಬೈ ಸೇರಿದಂತೆ ಹಲವು ನಗರಗಳು ಕಸದಿಂದ ತುಂಬಿ ಹೋಗಿವೆ. ಕಸ ತಗೆಯುವುದಕ್ಕೆ ಆಗದೇ ಇರುವಷ್ಟು ಮಳೆ ಆವಾಂತರ ಸೃಷ್ಟಿ ಮಾಡಿದೆ. ಈಗೀಗ ಮಳೆ ನಿಂತರೂ ಕಸದ ಸಮಸ್ಯೆ ಮಾತ್ರ ನಿಂತಿಲ್ಲ. ಹಾಗಾಗಿ ಮುಂಬೈ ನಗರದಲ್ಲಿ ಅಲ್ಲಲ್ಲಿ ಬೀದಿಯಲ್ಲಿ ಕಸದ ರಾಶಿಯೇ ಬಿದ್ದಿವೆ. ಇದನ್ನು ಗಮನಿಸಿದ ವಿವಾದಿತ ನಟಿ ರಾಕಿ ಸಾವಂತ್, ತಾವೇ ಸಲಕಿ ಹಿಡಿದು ಕಸ ತಗೆಯಲು ಮುಂದಾಗಿದ್ದಾರೆ.
ದಿನವೂ ಜಿಮ್ ಗೆ ಹೋಗುವ ರಾಕಿ ಸಾವಂತ್, ತಾವು ಜಿಮ್ ಗೆ ಹೋಗುವ ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಹಲವು ದಿನಗಳಿಂದ ನೋಡಿದ್ದಾರೆ. ಮುಂಬೈನ ಬಿಎಂಸಿ ಸಿಬ್ಬಂದಿಗಳು ಯಾವಾಗ ಇದನ್ನು ಸರಿ ಮಾಡುತ್ತಾರೆ ಎಂದು ಕಾದಿದ್ದಾರೆ. ಎರಡ್ಮೂರು ದಿನಗಳ ನಂತರವೂ ಆ ಕಸ ಹಾಗೆಯೇ ಇದ್ದ ಕಾರಣಕ್ಕಾಗಿ ತಾವೇ ಸಲಕಿ ತಗೆದುಕೊಂಡು ಅದನ್ನು ತಗೆಯಲು ಮುಂದಾಗಿದ್ದಾರೆ. ಒಂದಷ್ಟು ಕಸವನ್ನೂ ಅವರು ಸ್ವಚ್ಚಗೊಳಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನೂ ಓದಿ:ಆಗಸ್ಟ್ ನಲ್ಲಿ ‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕರ ಸಿನಿಮಾ ಟೈಟಲ್ ಲಾಂಚ್ : ಶಿವರಾಜ್ ಕುಮಾರ್ ಹೀರೋ
ರಸ್ತೆಯನ್ನು ಸ್ವಚ್ಚ ಮಾಡುವುದರ ಜೊತೆಗೆ ಬಿಎಂಸಿ ಸಿಬ್ಬಂದಿ ಮತ್ತು ಕಮಿಷ್ನರ್ ಅವರನ್ನು ತರಾಟೆಗೆ ತಗೆದುಕೊಂಡಿರುವ ರಾಕಿ, ಅವರೆಲ್ಲರೂ ಗಡದ್ದಾಗಿ ನಿದ್ದೆ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಸದಾ ವಿವಾದವನ್ನೇ ಮಾಡಿಕೊಂಡು ಓಡಾಡುತ್ತಿದ್ದ ರಾಕಿಯ ಈ ನಡೆ ಕಂಡು ಬಹುತೇಕರು ಹೊಗಳಿದ್ದಾರೆ. ಇಂತಹ ಕೆಲಸಗಳ ಮೂಲಕ ಒಳ್ಳೆಯವರಾಗಿ ಎಂದು ಹಾರೈಸಿದ್ದಾರೆ. ರಾಕಿಯ ಈ ವಿಡಿಯೋವಂತೂ ಮುಂಬೈ ರಸ್ತೆಗಳ ದಾರುಣ ಸ್ಥಿತಿಯನ್ನು ಕಟ್ಟಿಕೊಡುತ್ತಿದೆ.
Live Tv
[brid partner=56869869 player=32851 video=960834 autoplay=true]
ಶ್ರೀನಗರ: ಅಮರನಾಥ ಯಾತ್ರೆ ಪ್ರಾರಂಭವಾಗಲು ಕೇವಲ ಎರಡು ದಿನಗಳು ಬಾಕಿಯಿದ್ದು, ದೇಗುಲಕ್ಕೆ ಭೇಟಿ ನೀಡಲು ಯೋಜಿಸುವ ಯಾತ್ರಾರ್ಥಿಗಳಿಗೆ ಹೊಸ ಸೂಚನೆಯನ್ನು ಹೊರಡಿಸಲಾಗಿದೆ.
ಅಮರನಾಥ ದೇವಸ್ಥಾನದ ಆಡಳಿತ ಮಂಡಳಿಯು, ಈ ವರ್ಷ ಎಲ್ಲ ಅಮರನಾಥ ಯಾತ್ರಿಗಳು ತಮ್ಮ ಆಧಾರ್ ಕಾರ್ಡ್ ಅಥವಾ ಯಾವುದೇ ಬಯೋಮೆಟ್ರಿಕ್ ಪರಿಶೀಲಿಸಿದ ಸರ್ಕಾರಿ ಗುರುತಿನ ಚೀಟಿಯೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಬೇಕು. ಯಾತ್ರೆಗೆ ಬರಲು ಸಾಧ್ಯವಾಗದ ಭಕ್ತರಿಗೆ ಆನ್‍ಲೈನ್‍ನಲ್ಲಿ ದರ್ಶನ, ಪೂಜೆ, ಹವನ ಮತ್ತು ಪ್ರಸಾದ ಸೌಲಭ್ಯವನ್ನು ಪಡಲಾಗುವುದು ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಕೆಲವೇ ದಿನ – ಗಡಿಯಲ್ಲಿ ಶೋಧ ಕಾರ್ಯ ಚುರುಕು
ಯಾತ್ರೆ ಯಾವಾಗ?
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ವಿರಾಮದ ನಂತರ ಅಮರನಾಥ ಯಾತ್ರೆಯು ಜೂನ್ 30 ರಂದು ದಕ್ಷಿಣ ಕಾಶ್ಮೀರದ ಪಹಲ್ಗಾಮ್‍ನ 48-ಕಿಮೀ ನುನ್ವಾನ್ ಮತ್ತು ಮಧ್ಯ ಕಾಶ್ಮೀರದ ಗಂಡರ್‍ಬಾಲ್‍ನ 14-ಕಿಮೀ ಬಾಲ್ಟಾಲ್‍ನಿಂದ ಎರಡು ಮಾರ್ಗಗಳಿಂದ ಪ್ರಾರಂಭವಾಗುತ್ತದೆ. ಆಗಸ್ಟ್ 11ರವರೆಗೆ ಯಾತ್ರಿಕರು ಯಾತ್ರೆ ಮಾಡಬಹುದು.
ಬಿಗಿ ಭದ್ರತೆ
ಜಮ್ಮು ಮತ್ತು ಕಾಶ್ಮೀರ ಆಡಳಿತವು ಪವಿತ್ರ ಗುಹೆಗೆ ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳಲ್ಲಿ ಭಾರೀ ಭದ್ರತೆಯನ್ನು ಒದಗಿಸುವ ಮೂಲಕ ಉಗ್ರರ ದಾಳಿಯನ್ನು ತಪ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಮಂಡಳಿಯು ವ್ಯವಸ್ಥೆ ಮಾಡುತ್ತಿದ್ದು, ಭೌತಿಕವಾಗಿ ಯಾತ್ರೆ ಕೈಗೊಳ್ಳಲು ಸಾಧ್ಯವಾಗದವರಿಗೆ ಆನ್‍ಲೈನ್ ದರ್ಶನದ ವ್ಯವಸ್ಥೆಯನ್ನೂ ಮಾಡಿದೆ.
ಆರೋಗ್ಯ ತಪಾಸಣೆ ಕೇಂದ್ರ
ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಇಲಾಖೆಯು ಯಾತ್ರಾರ್ಥಿಗಳಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. 109 ಬೇಸಿಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಸಹ ಇದೆ. ಪ್ರಾಥಮಿಕ ಚಿಕಿತ್ಸೆಯ ಸಾಮಾಗ್ರಿಗಳನ್ನು ಯಾತ್ರೆ ಮಾರ್ಗ ಮಧ್ಯೆ ಇಡಲಾಗಿದೆ. ಇದನ್ನೂ ಓದಿ: 2 ವರ್ಷದ ನಂತರ ಆರಂಭವಾಗಲಿದೆ ಅಮರನಾಥ ಯಾತ್ರೆ – ಸೈನಿಕರಿಗೆ ಹೈಟೆಕ್ ಗ್ಯಾಜೆಟ್ ವಿತರಣೆ
ಶೌಚಾಲಯದ ವ್ಯವಸ್ಥೆ
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮಾತನಾಡಿದ್ದು, ಈ ವರ್ಷದ ವಿಶೇಷ ಗಮನವು ಸ್ವಚ್ಛತೆಯ ಮೇಲೆ ಮಂಡಳಿಯು ‘ಸ್ವಚ್ಛ ಅಮರನಾಥ ಯಾತ್ರೆ’ಗಾಗಿ ಗುರಿಯನ್ನು ಹೊಂದಿದೆ. ನಾವು ಎಲ್ಲ ಮಾರ್ಗಗಳಲ್ಲಿ ಶೌಚಾಲಯಗಳನ್ನು ಒದಗಿಸಿದ್ದೇವೆ. ಒಟ್ಟಾರೆ ಸ್ವಚ್ಛತೆಯ ಬಗ್ಗೆ ನಾವು ತುಂಬಾ ಗಮನ ಕೊಡುತ್ತಿದ್ದೇವೆ. ಸ್ವಚ್ಛ ಭಾರತ ಕೇವಲ ಘೋಷಣೆಯಾಗಿರದೇ ಪ್ರಧಾನಮಂತ್ರಿ ಘೋಷಿಸಿದ ಬದ್ಧತೆಯಾಗಿದೆ ಎಂದು ಹೇಳಿದರು.
ರಾಯಚೂರು: ನಗರಸಭೆ ಕಲುಷಿತ ನೀರಿನಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜೀವಜಲ ವಿಷವಾಗಿರುವುಕ್ಕೆ ಒಂದೊಂದೇ ಹೊಸ ಕಾರಣಗಳು ಬೆಳಕಿಗೆ ಬರುತ್ತಿವೆ. ಶುದ್ಧೀಕರಣ ಘಟಕವಾಯ್ತು, ಚರಂಡಿ ನೀರು ಮಿಕ್ಸ್ ಆಯ್ತು, ಈಗ 25 ವರ್ಷಗಳಾದರೂ ನಗರದ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸದಿರುವುದರಿಂದ ನೀರು ಮಲಿನವಾಗಿರುವುದು ಬೆಳಕಿಗೆ ಬಂದಿದೆ. ಟ್ಯಾಂಕ್‌ನಲ್ಲಿ ನಾಯಿ, ಕೋತಿಗಳು ಬಿದ್ದು ಸತ್ತರೂ ಸ್ವಚ್ಛಗೊಳಿಸದೆ ನಿರ್ಲಕ್ಷ್ಯ ಮೆರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಯಚೂರು ನಗರದ ಜನರ ದೌರ್ಭಾಗ್ಯ ಎನ್ನಬೇಕೋ, ಅಧಿಕಾರಿ ವರ್ಗ ಜನಪ್ರತಿನಿಧಿಗಳ ಬೇಜವಾಬ್ದಾರಿ ಎನ್ನಬೇಕೋ ಗೊತ್ತಿಲ್ಲ. ನಗರಸಭೆ ಸರಬರಾಜು ಮಾಡಿದ ಕಲುಷಿತ ನೀರು ಕುಡಿದು 5 ಸಾವಾದ ಮೇಲೆ ಒಂದೊಂದೇ ಯಡವಟ್ಟು, ಅವ್ಯವಹಾರಗಳು ಬಯಲಿಗೆ ಬರುತ್ತಿವೆ.
ನಗರದಲ್ಲಿನ 35 ಓವರ್ ಹೆಡ್ ವಾಟರ್ ಟ್ಯಾಂಕ್‌ಗಳು, 7 ಗ್ರೌಂಡ್ ಲೆವೆಲ್ ಸ್ಟೋರೇಜ್ ರಿಸವೈಯರ್(ಜಿಎಲ್‌ಎಸ್‌ಆರ್)ಗಳನ್ನು ಇಲ್ಲಿನ ಅಧಿಕಾರಿಗಳು ಕಳೆದ 25 ವರ್ಷಗಳಿಂದ ಒಂದು ಬಾರಿಯೂ ಸ್ವಚ್ಛಗೊಳಿಸಿಲ್ಲ. ಟ್ಯಾಂಕ್‌ಗಳ ನಿರ್ಮಾಣವಾಗಿ ನೀರಿನ ಸಂಗ್ರಹ ಆರಂಭವಾದಾಗಿನಿಂದ ಒಂದು ಬಾರಿಯೂ ಸ್ವಚ್ಛತೆಗೆ ಮುಂದಾಗಿಲ್ಲ. ಇಲ್ಲಿನ ಬಹುತೇಕ ಟ್ಯಾಂಕ್‌ಗಳಿಗೆ ಮೇಲೆ ಏರಲು ಏಣಿಯೂ ಇಲ್ಲ. ಜಿಎಲ್‌ಎಸ್‌ಆರ್‌ಗಳ ಮೇಲೆ ಸ್ಲ್ಯಾಬ್‌ಗಳನ್ನು ಮುಚ್ಚದೇ ತೆರೆದು ಹಾಗೇ ಬಿಟ್ಟಿರುವುದರಿಂದ ಆಗಾಗ ನಾಯಿ, ಕೋತಿಗಳು ಬಿದ್ದು ಸತ್ತಿರುವ ಘಟನೆಗಳು ನಡೆದಿವೆ. ಆದರೂ ಸ್ವಚ್ಛತಾ ಕಾರ್ಯವನ್ನು ಮಾಡಿಲ್ಲ. ಟ್ಯಾಂಕ್ ಸುತ್ತಮುತ್ತಲಿನ ಮನೆಗಳ ನಿವಾಸಿಗಳಂತೂ ಟ್ಯಾಂಕ್ ಸ್ವಚ್ಛತೆ ಎನ್ನುವುದನ್ನೇ ನಾವು ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? – ಹಳೇ ಕಥೆ ಬಿಚ್ಚಿಟ್ಟ ಶ್ರೀನಿವಾಸ್ ಗೌಡ
ಕಲುಷಿತ ನೀರು ಕುಡಿದು ವಾಂತಿ-ಭೇದಿಯಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಇದುವರೆಗೂ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ನಗರಸಭೆ ಸರಬರಾಜು ಮಾಡುವ ನೀರನ್ನೇ ಜನ ಈಗಲೂ ಕುಡಿಯುತ್ತಿದ್ದಾರೆ. ಕಲುಷಿತ ನೀರಿನಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟರ ಮಟ್ಟಿಗೆ ಮುಂದುವರಿದಿದೆ ಎಂದರೆ ಜಲಸಂಗ್ರಹಗಾರಗಳ ಮೇಲೆ ಸ್ಲ್ಯಾಬ್ ಮುಚ್ಚಿಸುವ ಕೆಲಸವನ್ನು ಸ್ವತಃ ಜಿಲ್ಲಾಧಿಕಾರಿ ಮಾಡಬೇಕಾಗಿದೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಇದ್ದಿದ್ದರೆ…: ಭುಗಿಲೆದ್ದ ಪ್ರತಿಭಟನೆಗೆ ತಸ್ಲೀಮಾ ನಸ್ರೀನ್ ಪ್ರತಿಕ್ರಿಯೆ
ಕನಿಷ್ಠ ನಗರದಲ್ಲಿನ ಖಾಸಗಿ ಆರ್‌ಓ ಪ್ಲಾಂಟ್‌ಗಳ ಮುಖಾಂತರವಾದರೂ ಶುದ್ಧ ಕುಡಿಯುವ ನೀರನ್ನು ಬಾಧಿತ ಪ್ರದೇಶಗಳ ಜನರಿಗೆ ತಲುಪಿಸಬೇಕಿದೆ. ಆದರೆ ಎಲ್ಲವೂ ಸರಿಮಾಡದೆ ಜಲಶುದ್ಧೀಕರಣ ಘಟಕದಲ್ಲಿ ಕೇವಲ ಕ್ಲೋರಿನೇಷನ್ ಮಾಡಿ ಸರಬರಾಜು ಮಾಡಲಾಗುತ್ತಿದೆ. ಚರಂಡಿಯಲ್ಲಿರುವ ಪೈಪ್ ಲೈನ್ ದುರಸ್ತಿ, ಟ್ಯಾಂಕ್ ಸ್ವಚ್ಛತೆ ಮುಗಿಯುವವರೆಗೆ ರಾಯಚೂರು ಜನರಿಗೆ ನೆಮ್ಮದಿ ಸಿಗುವ ಹಾಗೆ ಕಾಣುತ್ತಿಲ್ಲ.
ಮುಂಬೈ: ರೂಮ್‍ಮೇಟ್ ಜೊತೆ ಕೊಠಡಿಯನ್ನು ಸ್ವಚ್ಛಗೊಳಿಸುವ ಕಾರಣಕ್ಕೆ ಜಗಳವಾಡಿ ನಂತರ ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮನೋಜ್ ಪುಲ್ವನಾಥ್ ಮೇದಕ್ ಆರೋಪಿ ಹಾಗೂ ದೇಬಜಿತ್ ಧಂಧಿರಾಮ್ ಚರೋಹ್(26) ಮೃತ ದುರ್ದೈವಿ. ಈ ಇಬ್ಬರು ಅಸ್ಸಾಂ ಮೂಲದವರು. ಇಬ್ಬರು ಮಹಾರಾಷ್ಟ್ರದ ಮುಂಬೈನ ಮಹಾಪೆ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜೊತೆಗೆ ಖಾಸಗಿ ಕಂಪನಿಯೊಂದರಲ್ಲಿ ಲ್ಯಾಬ್ ಬಾಯ್‍ಗಳಾಗಿ ಕೆಲಸ ಮಾಡುತ್ತಿದ್ದರು.
ದೇಬಜಿತ್ ಕುಡಿತದ ಚಟ ಹೊಂದಿದ್ದ. ಇದರಿಂದಾಗಿ ಪ್ರತಿನಿತ್ಯ ಮನೋಜ್‍ನನ್ನು ಹಿಂಸಿಸುತ್ತಿದ್ದ. ಜೊತೆಗೆ ಮನೆಗೆಲಸವನ್ನೆಲ್ಲಾ ಒಬ್ಬನೇ ಮಾಡು ಎಂದು ಒತ್ತಾಯಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಕೆಲದಿನಗಳ ಹಿಂದೆ ಮನೆ ಸ್ವಚ್ಛಗೊಳಿಸುವ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಇದು ಅತಿರೇಕಗೊಂಡು ಮನೋಜ್ ಮೇಲೆ ದೇಬಜಿತ್ ಮರದ ಹಲಗೆಯನ್ನು ಎಸೆದನು. ಇದರಿಂದ ಕೋಪಗೊಂಡ ಮನೋಜ್ ಅಡುಗೆ ಮನೆಯ ಚಾಕುವಿನಿಂದ ದೇಬಜಿತ್‍ನ ಕುತ್ತಿಗೆಗೆ ಇರಿದಿದ್ದಾನೆ. ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ಭಾರತದಿಂದ ಅಗತ್ಯ ವಸ್ತುಗಳ ಪೂರೈಕೆ
ತೀವ್ರ ಗಾಯಗೊಂಡಿದ್ದ ದೇಬಜಿತ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಇತರ ಸ್ನೇಹಿತರು ಪುರಸಭೆಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ತುರ್ಭೆ ಎಂಐಡಿಸಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ- ವಿಮಾನ ಸಂಚಾರದಲ್ಲಿ ತೊಡಕು
ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಬೆಳ್ಳಂಬೆಳಗ್ಗೆ ನಗರ ಸ್ವಚ್ಛತೆ ಮಾಡಿದ್ದಾರೆ.
ಬೆಳ್ಳಂಬೆಳಗ್ಗೆ ನಗರ ಸ್ವಚ್ಚತೆಗಿಳಿದ ರೇಣುಕಾಚಾರ್ಯ ಅವರು, ನಗರದ ಕೋರ್ಟ್ ರಸ್ತೆಯನ್ನು ಸ್ವಚ್ಛಗೊಳಿಸಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಗಿಡಗಂಟಿಗಳನ್ನು ಕತ್ತರಿಸಿ ರಸ್ತೆಯ ಅಕ್ಕಪಕ್ಕ ಸ್ವಚ್ಛಗೊಳಿಸಿದ್ದಾರೆ. ಇದನ್ನೂ ಓದಿ:ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ
ನಗರ ಸ್ವಚ್ಛತೆ ದೃಷ್ಟಿಯಿಂದ ಖುದ್ದು ಶಾಸಕರೇ ಸ್ವಚ್ಛತೆಗಿಳಿದಿದ್ದು ವಿಶೇಷವಾಗಿತ್ತು. ಸ್ವಚ್ಛತಾ ಕಾರ್ಯದಲ್ಲಿ ರೇಣುಕಾಚಾರ್ಯರಿಗೆ ಪುರಸಭೆ ಸದಸ್ಯರು ಸಾಥ್ ನೀಡಿದ್ದಾರೆ. ಈ ವೇಳೆ ನಗರ ಸ್ವಚ್ವವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ರೇಣುಕಾಚಾರ್ಯ ಅವರು ಸೂಚನೆಯನ್ನು ನೀಡಿದ್ದಾರೆ. ಇದನ್ನೂ ಓದಿ:ಬಿಜೆಪಿ ಹಿಂದುತ್ವದ ಮೇಲೆ ಪೇಟೆಂಟ್ ಹೊಂದಿಲ್ಲ: ಉದ್ಧವ್ ಠಾಕ್ರೆ
ರಾಯಚೂರು: ಗ್ರಾಮ ಪಂಚಾಯತಿಯನ್ನು ಸ್ವಚ್ಛತೆ ಕಾಪಾಡಿ ಎಂದು ಎಷ್ಟೇ ಕೇಳಿಕೊಂಡರು ಅಧಿಕಾರಿಗಳು ತಲೆ ಕೆಡಿಸಿಕೊಳ್ಳದ ಹಿನ್ನೆಲೆ ಗ್ರಾಮದ ಜನರೇ ಸ್ಥಳವನ್ನು ಸ್ವಚ್ಛ ಮಾಡುವ ಮೂಲಕ ಪಂಚಾಯ್ತಿಗೆ ಪಾಠ ಕಲಿಸಿದ್ದಾರೆ.
ಜಿಲ್ಲೆಯ ಸಿರವಾರ ತಾಲೂಕಿನ ಚಾಗಭಾವಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಎಷ್ಟೇ ಮನವಿ ಮಾಡಿದರೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕ್ರಮಕೈಗೊಂಡಿರಲಿಲ್ಲ. ಈ ಹಿನ್ನೆಲೆ ಗ್ರಾಮಸ್ಥರೇ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ, ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉನ್ನತ ಶಿಕ್ಷಣ ಸಚಿವರು ನಮಗೆ ಕೊಟ್ಟಿದ್ದು ಸಿಹಿಯಲ್ಲ, ಕಹಿ: ಅತಿಥಿ ಉಪನ್ಯಾಸಕರ ಆಕ್ರೋಶ
ಈ ಮೂಲಕ ಗ್ರಾಮಸ್ಥರು ಪಂಚಾಯ್ತಿಗೆ ಒಂದು ವಾರದ ಗಡುವು ನೀಡಿದ್ದು, ಶಾಲಾ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಒತ್ತಾಯಿಸಿದ್ದಾರೆ. ಬಹುದಿನಗಳಿಂದ ಕಸದಿಂದ ತಿಪ್ಪೆಯಂತಾಗಿದ್ದ ಶಾಲಾ ಆವರಣ ಸ್ವಚ್ಛಗೊಳಿಸುವಂತೆ ಚಾಗಭಾವಿ ಗ್ರಾಮ ಪಂಚಾಯ್ತಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ.
ಹೀಗಾಗಿ ಗ್ರಾಮದ ಯುವಕರು, ಶಿಕ್ಷಣ ಪ್ರೇಮಿಗಳು, ವಿವಿಧ ಸಂಘಟನೆಗಳು ಸೇರಿ ಶಾಲಾ ಆವರಣವನ್ನ ಸ್ವಚ್ಛಗೊಳಿಸಿದ್ದಾರೆ. ಶಾಲೆಗೆ ಅಗತ್ಯವಾದ ಕುಡಿಯುವ ನೀರು, ಶೌಚಾಲಯ ಸೇರಿ ಇತರ ಅಗತ್ಯ ಸೌಕರ್ಯಗಳನ್ನ ಒಂದು ವಾರದಲ್ಲಿ ಕಲ್ಪಿಸದಿದ್ದರೆ ಪಂಚಾಯ್ತಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಜನರಿಗೆ 14 ಕೋಟಿ ರೂ. ವಂಚಿಸಿದ ಆಫೀಸರ್ ಅರೆಸ್ಟ್
– ಪ್ರತಿ ದಿನ ಯಾವುದಾದರೂ ಸಂಸ್ಥೆಗೆ ತೆರಳಿ ಸ್ವಚ್ಛತೆ ಮಾಡುತ್ತೇನೆ
ಲಕ್ನೋ: ಸರ್ಕಾರಿ ಶಾಲೆಯಲ್ಲಿನ ಅವ್ಯವಸ್ಥೆ ಕುರಿತು ಬಾಲಕಿಯರು ದೂರು ನೀಡಿದ ಬೆನ್ನಲ್ಲೇ ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಸ್ವತಃ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ.
ಸರ್ಕಾರಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ಬಾಲಕಿಯರು ನೀಡಿದ ದೂರಿನ ಮೇರೆಗೆ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. ಹೀಗೆ ಪ್ರದ್ಯುಮನ್ ಅವರು ಶೌಚಾಲಯ ಸ್ವಚ್ಛಗೊಳಿಸಿವುದು ಕಂಡು ಬಂದಿದ್ದು, ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಮತ್ತು ರಸ್ತೆಯನ್ನು ಗುಡಿಸುವ ಮೂಲಕವಾಗಿ ಸುದ್ದಿಯಾಗಿದ್ದರು. ಇದನ್ನೂ ಓದಿ: 7 ಎಕರೆ ಆಸ್ತಿಗಾಗಿ ಕಿಡ್ನಾಪ್ ಆಗಿದ್ದ 98ರ ಅಜ್ಜಿ ಓಣಿಯಲ್ಲಿ ಪತ್ತೆ
Madhya Pradesh Energy Minister Pradhuman Singh Tomar cleaned the toilet of a govt school in Gwalior
“A girl student told me that there is no cleanliness in the toilets of the school, because of which the students face problems,” Minister Pradhuman Singh Tomar said. (17.12) pic.twitter.com/Lcqu7QfGWL
ಪ್ರದ್ಯುಮನ್ ಸಿಂಗ್ ತೋಮರ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ತಪಾಸಣೆಗೆ ಬಂದಿದ್ದರು. ಇಲ್ಲಿ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸುವಾಗ ಶಾಲೆಯ ಶೌಚಾಲಯ ತುಂಬಾ ಕೊಳಕಾಗಿದೆ. ಇದರಿಂದ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿದೆ ಎಂದು ವಿದ್ಯಾರ್ಥಿನಿಯರು ತಿಳಿಸಿದರು. ನೇರವಾಗಿ ಶೌಚಾಲಯಕ್ಕೆ ತೆರಳಿದ ಪ್ರದ್ಯುಮನ್ ಸಿಂಗ್ ಅವರು ಸಮಯ ವ್ಯರ್ಥ ಮಾಡದೆ ತಮ್ಮ ಕೈಯಿಂದಲೇ ಶೌಚಾಲಯ ಸ್ವಚ್ಛಗೊಳಿಸಲು ಆರಂಭಿಸಿದರು. ಸಂಪೂರ್ಣ ಶೌಚಾಲಯವನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಿದರು. ಸ್ವಚ್ಛತೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡುವುದರೊಂದಿಗೆ ಶಾಲೆಗಳ ಶೌಚಾಲಯಗಳನ್ನು ಪ್ರತಿನಿತ್ಯ ಸ್ವಚ್ಛವಾಗಿಟ್ಟುಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಹಳ್ಳಿಗೆ 300 ಕೋವಿಡ್ ಲಸಿಕೆಗಳನ್ನು ಸಾಗಿಸಿದ ಡ್ರೋನ್
स्वच्छता अभियान के आज #सातवें_दिवस पर शासकीय कन्या प्राथमिक/माध्यमिक विद्यालय में निरीक्षण के दौरान छात्राओं से बातचीत के दौरान मुझे बताया स्कूल परिसर की टायलेट साफ न होने का कारण हमें काफी परेशानी होती है। यह जानकर स्कूल परिसर में साफ-सफाई की। 3/3@ChouhanShivraj@JM_Scindiapic.twitter.com/wPCrxfjEJ2
ಪ್ರದ್ಯುಮನ್ ಸಿಂಗ್ ತೋಮರ್ ಮಾತನಾಡಿ ,ಶಾಲೆಯಲ್ಲಿನ ಶೌಚಾಲಯಗಳು ಸ್ವಚ್ಛವಾಗಿಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ವಿದ್ಯಾರ್ಥಿನಿಯೊಬ್ಬರು ನನಗೆ ಹೇಳಿದರು. 30 ದಿನಗಳಿಂದ ಸ್ವಚ್ಛತಾ ಪ್ರತಿಜ್ಞೆ ಮಾಡಿದ್ದು, ಪ್ರತಿ ದಿನ ಯಾವುದಾದರೂ ಸಂಸ್ಥೆಗೆ ತೆರಳಿ ಸ್ವಚ್ಛತೆ ಮಾಡುತ್ತೇನೆ, ಸ್ವಚ್ಛತೆಯ ಸಂದೇಶ ಎಲ್ಲ ಜನರಿಗೆ ತಲುಪಬೇಕು, ಎಲ್ಲರೂ ಸ್ವಚ್ಛತೆ ಹೊಂದಬೇಕು ಎಂಬ ಉದ್ದೇಶದಿಂದೇ ಸ್ಫೂರ್ತಿಯಾಗಲು ಈ ಕಾರ್ಯ ಮಾಡುತ್ತಿದ್ದೇನೆ ಎಂದು ತಿಳಿಸಿದರು.