Tag: ಸ್ವಚ್ಛತಾ ಅಭಿಯಾನ

  • ಬೆಂಗಳೂರಿನ BSF ಯೋಧರಿಂದ ಸ್ವಚ್ಛತಾ ಅಭಿಯಾನ

    ಬೆಂಗಳೂರಿನ BSF ಯೋಧರಿಂದ ಸ್ವಚ್ಛತಾ ಅಭಿಯಾನ

    ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜಯಂತಿ (ಅ.2) ಹಿನ್ನೆಲೆಯಲ್ಲಿ ‘1ನೇ ತಾರೀಖು, ಒಂದು ಗಂಟೆ’ ಘೋಷವಾಕ್ಯದೊಂದಿಗೆ ‘ಸ್ವಚ್ಛತಾ ಹೀ ಸೇವಾ’ (Swachhata Hi Seva) ಸ್ವಚ್ಛತಾ ಅಭಿಯಾನವನ್ನು ಬೆಂಗಳೂರಿನ ಭಾರತೀಯ ಗಡಿ ಭದ್ರತಾ ಪಡೆಯ ಯೋಧರು (BSF Soldiers) ಹಮ್ಮಿಕೊಂಡಿದ್ದರು.

    ಯಲಹಂಕದ ಸೆಡ್ಕೋ, BSF ಟೆಕ್ನಿಕಲ್ ಟ್ರೈನಿಂಗ್ ಸೆಂಟರ್‌ನ ಆವರಣದಲ್ಲಿ ಆಯೋಜನೆ ಮಾಡಿದ್ದ ಅಭಿಯಾನದಲ್ಲಿ, 500ಕ್ಕೂ ಹೆಚ್ಚು ಬಿಎಸ್‌ಎಫ್‌ ಯೋಧರು ಹಾಗೂ ತರಬೇತಿದಾರರು, ಬಾರ್ಡರ್ ವುಮೆನ್ಸ್ wives ಅಸೋಸಿಯೇಷನ್ ಸದಸ್ಯರು ಭಾಗಿಯಾಗಿದ್ದರು. ಟ್ರೈನಿಂಗ್ ಸೆಂಟರ್‌ನ ಆವರಣದ ಮೂಲೆ ಮೂಲೆಯನ್ನ ಸ್ವಚ್ಛಗೊಳಿಸಿದರು. ಇದನ್ನೂ ಓದಿ: ಗಾಂಧಿ ಜಯಂತಿ ವಿಶೇಷ – ಸ್ವಚ್ಛಾಂಜಲಿ ಅರ್ಪಿಸಿದ ಮೋದಿ

    BSF ಟ್ರೈನಿಂಗ್ ಸೆಂಟರ್‌ನಲ್ಲಿ ಇನ್ಫರ್ಮಿನೇಷನ್ ಟೆಕ್ನಾಲಜಿ, ಸೈಬರ್ ಸೆಕ್ಯೂರಿಟಿ, ವೆಬ್ ಡಾಟಾ ಆ್ಯಂಡ್ ಕ್ಲೌಡ್ ಕಂಪ್ಯೂಟಿಂಗ್ ಬಗ್ಗೆ ತರಬೇತಿ ನೀಡಲಾಗುತ್ತದೆ. ಈ ಎಲ್ಲಾ ತರಬೇತಿದಾರರು ಕೂಡ ಅಭಿಯಾನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಯಲಹಂಕದ ಸೆಡ್ಕೋ, BSF ಟೆಕ್ನಿಕಲ್ ಟ್ರೈನಿಂಗ್ ಸೆಂಟರ್‌ನ ಐಜಿ ಇಪೆನ್ ಪಿವಿ ಭಾಗವಹಿಸಿದ್ದರು.

    ಇತ್ತೀಚಿನ `ಮನ್ ಕಿ ಬಾತ್’ನಲ್ಲಿ ಮೋದಿಯವರು (Narendra Modi) ಅ.1 ರಂದು ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನ ಎಂಬ ಘೋಷಣೆಯೊಂದಿಗೆ ಕಾರ್ಯಪ್ರವೃತ್ತರಾಗುವಂತೆ ಕರೆಕೊಟ್ಟಿದ್ದರು. ಅದರಂತೆ ಸ್ವತಃ ಮೋದಿ ಅವರೇ ಭಾನುವಾರ ಕಸ ಗುಡಿಸಿ ಸ್ವಚ್ಛತಾ ಅಭಿಯಾನಕ್ಕೆ (Swachhata Abhiyan) ಚಾಲನೆ ನೀಡಿದ್ದರು. ಇದನ್ನೂ ಓದಿ: ಮೋದಿಯೊಂದಿಗೆ ಸ್ವಚ್ಛಾಂಜಲಿಯಲ್ಲಿ ಭಾಗಿಯಾಗಿದ್ದ ಅಂಕಿತ್ ಬೈಯನ್‍ಪುರಿಯಾ ಯಾರು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಭಾಷ್ ಚಂದ್ರ ಬೋಸ್ ಹುಟ್ಟುಹಬ್ಬದ ನಿಮಿತ್ತ ಸ್ವಚ್ಛತಾ ಅಭಿಯಾನ

    ಸುಭಾಷ್ ಚಂದ್ರ ಬೋಸ್ ಹುಟ್ಟುಹಬ್ಬದ ನಿಮಿತ್ತ ಸ್ವಚ್ಛತಾ ಅಭಿಯಾನ

    ಚಿಕ್ಕೋಡಿ: ಸ್ವಾತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್ ಹುಟ್ಟು ಹಬ್ಬದ ನಿಮಿತ್ತ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳಿಗೆರೆ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸುಭಾಷ್ ಚಂದ್ರ ಬೋಸರು ಬ್ರಿಟಿಷರ್ ವಿರುದ್ಧ ಸ್ವಾತಂತ್ರಕ್ಕಾಗಿ ಹೋರಾಟದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸುಭಾಷ್ ಚಂದ್ರ ಬೋಸ್ ಅವರ ಫೋಟೋ ಪೂಜಾ ಕಾರ್ಯಕ್ರಮ ನೆರವೇರಿಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇದನ್ನೂ ಓದಿ: ನೇತಾಜಿ ಜನ್ಮ ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸಿ: ಮಮತಾ ಬ್ಯಾನರ್ಜಿ

    ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಶಿಕ್ಷಕ ಸಿ.ಎಸ್.ಬುರ್ಲಿ ಅವರು ದೇಶ ಕಂಡ ಅಪ್ರತಿಮ ಹೋರಾಟಗಾರರಲ್ಲಿ ಸುಭಾಷ್ ಚಂದ್ರ ಬೋಸ್ ಆಗಿದ್ದರು. ಅವರ 125 ನೇ ಜಯಂತಿ ಉತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆ ಎನಿಸುತ್ತಿದ್ದು, ಅವರ ಹೋರಾಟವನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದರು. ಗ್ರಾಮಸ್ಥರಾದ ಹೈದರ್ ಬಾಲದಾರ್, ವಿಜಯಕುಮಾರ್ ಪವಾರ್,ಸಂಜು ಕಾಂಬಳೆ, ಕೃಷ್ಣ ದೊಡ್ಡಮನಿ, ಶಾಲೆ ವಿದ್ಯಾರ್ಥಿಗಳು ಮತ್ತಿತರು ಉಪಸ್ಥಿತರಿದ್ದರು. ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ದೇಶಕ್ಕೆ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ

  • ಕಿಚ್ಚ ಸುದೀಪ್ ಪುಟ್ಟ ಅಭಿಮಾನಿಗಳಿಂದ ಸ್ವಚ್ಛತಾ ಅಭಿಯಾನ

    ಕಿಚ್ಚ ಸುದೀಪ್ ಪುಟ್ಟ ಅಭಿಮಾನಿಗಳಿಂದ ಸ್ವಚ್ಛತಾ ಅಭಿಯಾನ

    ಬಾಗಲಕೋಟೆ: ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಗ್ರಾಮದ ಕಿಚ್ಚ ಸುದೀಪ್ ಅವರ ಅಭಿಮಾನಿ ಸಂಘದ ಕಾರ್ಯಕರ್ತರಿಂದ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

    ಹೊನ್ನಾಕಟ್ಟಿ ಗ್ರಾಮದ ರಸ್ತೆ ಹಾಗೂ ಕಳೆಯಿಂದ ತುಂಬಿದ್ದ ಶಾಲೆಯ ಆವರಣಗಳಲ್ಲಿನ ಕಸ-ಕಡ್ಡಿಗಳನ್ನು ಆರಿಸಿ, ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡುವಂತೆ ತಮ್ಮ ಶ್ರಮದಾನ ಕಾರ್ಯದ ಮೂಲಕ ಸಂದೇಶ ನೀಡಿದರು. ಸ್ವಚ್ಛತೆಯಿಂದ ನಾವು ಸ್ವಾಸ್ಥ್ಯ ಮತ್ತು ಆರೋಗ್ಯಕರ ಜೀವನ ನಡೆಸಬಹುದು. ತಮ್ಮ ನೆಚ್ಚಿನ ನಟ ಕಿಚ್ಚ ಸುದೀಪ್ ಅವರ ಹೆಸರಿನಲ್ಲಿ ಈ ಕಾರ್ಯವನ್ನು ಮಾಡಿದ ಬಾಲ ಅಭಿಮಾನಿಗಳ ಕೆಲಸ ಶ್ಲಾಘನೀಯವಾದುದು.ಇದನ್ನೂ ಓದಿ: ಮಂಗಳಮುಖಿಯರಿಗೆ ಕಿಚ್ಚನ ನೆರವು

    ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಮಾತೆಯರಾದ ಲಲಿತಾ ಖೋತ್ ಹಾಗೂ ಸಹಶಿಕ್ಷಕರಾದ ಶಿವಪ್ಪ ದೇವಸಂಗಿ, ಮತ್ತು ಎಸ್.ಆರ್.ಸೂಳಿಭಾವಿಯವರು ಉಪಸ್ಥಿತರಿದ್ದರು. ಮಕ್ಕಳ ಈ ನಿಸ್ವಾರ್ಥ ಸೇವೆ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯ 40ಕ್ಕೂ ಹೆಚ್ಚು ಮಕ್ಕಳಿರುವ ಪೃಥ್ವಿ ವಿಶೇಷ ಚೇತನರ ಶಾಲೆಯಲ್ಲಿರುವ ಬುದ್ದಿಮಾಂದ್ಯ ಮಕ್ಕಳು ಲಾಕ್‍ಡೌನ್ ವೇಳೆ ಆಹಾರಕ್ಕೂ ಪರದಾಡುವ ಸ್ಥಿತಿಯನ್ನು ಮನಗಂಡು ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ನೆರವು ನೀಡಿದ್ದರು. ಇದನ್ನೂ ಓದಿ: ವಿಶೇಷ ಚೇತನ ಮಕ್ಕಳ ಶಾಲೆಯ ನೆರವಿಗೆ ನಿಂತ ನಟ ಸುದೀಪ್

  • ಅಂತರ್ಜಲ ಮಾಲಿನ್ಯ ಕಡಿಮೆಗೊಳಿಸಿದ ಸ್ವಚ್ಛತಾ ಅಭಿಯಾನ

    ಅಂತರ್ಜಲ ಮಾಲಿನ್ಯ ಕಡಿಮೆಗೊಳಿಸಿದ ಸ್ವಚ್ಛತಾ ಅಭಿಯಾನ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನದಿಂದ ಭಾರತದಲ್ಲಿ ಅಂತರ್ಜಲ ಮಾಲಿನ್ಯ ಕಡಿಮೆಯಾಗಿದೆ ಎಂದು ಯುನಿಸೆಫ್ ಅಧ್ಯಯನ ಮಾಡಿ ವರದಿ ನೀಡಿದೆ.

    ಹೌದು, ಅಕ್ಟೋಬರ್ 2, 2014ರ ಗಾಂಧಿ ಜಯಂತಿಯಂದು ಮೋದಿ ಸರ್ಕಾರ ಆರಂಭಿಸಿದ `ಸ್ವಚ್ಛ ಭಾರತ್ ಅಭಿಯಾನ’ಕ್ಕೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಯುನಿಸೆಫ್ ಮತ್ತು ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಜಂಟಿಯಾಗಿ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ಅಧ್ಯಯನ ನಡೆಸಿದೆ. ಈ ರಾಜ್ಯಗಳಲ್ಲಿ ಸಂಗ್ರಹಿಸಿದ ಅಂತರ್ಜಲ ಮಾದರಿಗಳ ಮೇಲೆ ಅಧ್ಯಯನ ನಡೆಸಿರುವ ಯುನಿಸೆಫ್ ಈ ವರದಿ ನೀಡಿದೆ. ಶೌಚಕ್ಕಾಗಿ ಬಯಲುಗಳನ್ನು ಆಧರಿಸಿರುವ ಗ್ರಾಮಗಳಿಗೆ ಹೋಲಿಸಿದರೆ ಬಯಲು ಶೌಚ ಮುಕ್ತ ಗ್ರಾಮಗಳಲ್ಲಿ 11.25 ಪಟ್ಟು ಹೆಚ್ಚು ಅಂತರ್ಜಲ ಮಾಲಿನ್ಯ ಕಡಿಮೆಯಾಗಿದೆ. ಹೀಗಾಗಿ ಸ್ವಚ್ಛ ಭಾರತದ ಅಭಿಯಾನದಿಂದ ದೇಶದಲ್ಲಿ ಅಂತರ್ಜಲ ಮಾಲಿನ್ಯ ಕಡಿಮೆಯಾಗುತ್ತಿದೆ ಎಂದು ಯುನಿಸೆಫ್ ತಿಳಿಸಿದೆ.

    ಸ್ವಚ್ಛತಾ ಅಭಿಯಾನದ ಭಾಗವಾಗಿ ಬಯಲು ಶೌಚಮುಕ್ತ ರಾಷ್ಟ್ರದ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಡಿಯಲ್ಲಿ ಹಲವು ಗ್ರಾಮಗಳಲ್ಲಿ ಸರ್ಕಾರ ಶೌಚಾಲಯ ನಿರ್ಮಿಸಿ ಅದರ ಬಗ್ಗೆ ಜಾಗೃತಿ ಮೂಡಿಸಿದೆ.

    ಅಧ್ಯಯನ ಪ್ರಕಾರ, ಮಾದರಿಗಳನ್ನು ಸಂಗ್ರಹಿಸಿದ ಗ್ರಾಮೀಣ ಪ್ರದೇಶಗಳಲ್ಲಿ ಮೊದಲು ಬಯಲು ಶೌಚ ಸಾಮಾನ್ಯವಾಗಿತ್ತು. ಆದರೆ ಸ್ವಚ್ಛ ಭಾರತ ಅಭಿಯಾನದ ನಂತರ ಈ ಗ್ರಾಮೀಣ ಪ್ರದೇಶಗಳು ಬಯಲು ಶೌಚ ಮುಕ್ತ ಪ್ರದೇಶವಾಗಿರುವುದನ್ನು ಯುನಿಸೆಫ್ ವರದಿಯಲ್ಲಿ ಉಲ್ಲೇಖಿಸಿದೆ.

    ಕೇಂದ್ರದ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವರದಿ ಬಗ್ಗೆ ಪ್ರತಿಕ್ರಿಯಿಸಿ, ಸ್ವಚ್ಛತೆ ಹವಾಮಾನದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಬಯಲು ಶೌಚ ಮುಕ್ತ ಪ್ರದೇಶಗಳು ತನ್ನಿಂದ ತಾನೇ ರೋಗ ಮುಕ್ತ ಪ್ರದೇಶಗಳಾಗುತ್ತವೆ. 2018ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‍ಓ) ಅಧ್ಯಯನವು, ಭಾರತ ಬಯಲು ಶೌಚ ಮುಕ್ತವಾದರೆ ಸುಮಾರು 3 ಲಕ್ಷ ಮಂದಿಯ ಜೀವಗಳು ಉಳಿಯಬಹುದೆಂದು ತಿಳಿಸಿತ್ತು ಎಂದು ಹೇಳಿದರು.

  • ಗಂಗಾ ನದಿಯಂತೆ ನೇಪಾಳದಲ್ಲೂ ಬೃಹತ್ ಸ್ವಚ್ಛತಾ ಅಭಿಯಾನ ಆರಂಭ

    ಗಂಗಾ ನದಿಯಂತೆ ನೇಪಾಳದಲ್ಲೂ ಬೃಹತ್ ಸ್ವಚ್ಛತಾ ಅಭಿಯಾನ ಆರಂಭ

    – ಪರಿಸರ ದಿನದಂದು ಘನ ತ್ಯಾಜ್ಯ ಪ್ರದರ್ಶನ

    ಕಠ್ಮಂಡು: ನಮ್ಮ ದೇಶದಲ್ಲಿ ಗಂಗಾ ನದಿ ಸ್ವಚ್ಛತಾ ಅಭಿಯಾನದಂತೆ ನೇಪಾಳದಲ್ಲೂ ಬೃಹತ್ ಸ್ವಚ್ಛತಾ ಅಭಿಯಾನವೊಂದು ಆರಂಭವಾಗಿದೆ.

    ಜಗತ್ತಿನ ಎತ್ತರದ ಮೌಂಟ್ ಎವರೆಸ್ಟ್ ಶಿಖರದ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ನೇಪಾಳದಲ್ಲಿ ಹೊಸ ವರ್ಷದ ಆಚರಣೆಯ ಅಂಗವಾಗಿ ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಅಲ್ಲಿನ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿದೆ.

    ಏಪ್ರಿಲ್ 14 ರಿಂದ ಆರಂಭವಾಗಿರುವ ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯ ಸ್ವಚ್ಛತಾ ಅಭಿಯಾನ ಮೇ 29ಕ್ಕೆ ಮುಗಿಯಲಿದೆ. ಈಗಾಗಲೇ ಸುಮಾರು 3,000 ಕೆಜಿ ಘನ ತ್ಯಾಜ್ಯವನ್ನು ಎವರೆಸ್ಟ್ ಪರ್ವತ ಶ್ರೇಣಿಯಿಂದ ಸಂಗ್ರಹಿಸಲಾಗಿದೆ. ಒಟ್ಟು ಸುಮಾರು 10,000 ಕೆಜಿಯಷ್ಟು ತ್ಯಾಜ್ಯ ಸಂಗ್ರಹ ಗುರಿ ಹೊಂದಲಾಗಿದೆ. ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ 5,000 ಕೆಜಿಗೂ ಅಧಿಕ ತ್ಯಾಜ್ಯ ಸಂಗ್ರಹವಾಗುವ ನಿರೀಕ್ಷೆಯಿದೆ. ಕ್ಯಾಂಪ್ 2 ಹಾಗೂ 3 ಸೇರಿದಂತೆ 3000 ಕೆಜಿ ತ್ಯಾಜ್ಯ ಸಂಗ್ರಹ ಗುರಿಯಿದೆ.

    ತ್ಯಾಜ್ಯದ ಜೊತೆಗೆ ಟ್ರೆಕ್ಕಿಂಗ್ ಸಂದರ್ಭದಲ್ಲಿ ಮೃತಪಟ್ಟು ಅಲ್ಲೇ ಉಳಿದ ಶವಗಳಿದ್ದರೆ, ಅವುಗಳನ್ನು ಕೆಳಗಿಳಿಸಲಾಗುತ್ತದೆ. ಜೂನ್ 5ರ ಪರಿಸರ ದಿನದಂದು ಈ ಬೃಹತ್ ಘನ ತ್ಯಾಜ್ಯವನ್ನು ಪ್ರದರ್ಶನ ಮಾಡಿ ನಂತರ ಮರು ಬಳಕೆಗೆ ಸಂಸ್ಕರಣೆ ಮಾಡಲಾಗುತ್ತದೆ.

  • ಹುಟ್ಟಿ, ಬೆಳೆದ ಊರಿಗಾಗಿ ಅಭಿಮಾನಿಗಳಲ್ಲಿ ಯಶ್ ಮನವಿ – ವಿಡಿಯೋ ನೋಡಿ

    ಹುಟ್ಟಿ, ಬೆಳೆದ ಊರಿಗಾಗಿ ಅಭಿಮಾನಿಗಳಲ್ಲಿ ಯಶ್ ಮನವಿ – ವಿಡಿಯೋ ನೋಡಿ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಾವು ಬೆಳೆದ ಸಾಂಸ್ಕೃತಿಕ ನಗರಿ ಮೈಸೂರಿಗಾಗಿ ಅಭಿಮಾನಿಗಳ ಬಳಿ ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ.

    ಫೇಸ್‍ಬುಕ್ ನಲ್ಲಿ ಲೈವ್ ಬಂದು ಮಾತನಾಡುವ ಮೂಲಕ ಸ್ವಚ್ಛತಾ ಅಭಿಯಾದಲ್ಲಿ ಮೈಸೂರಿಗಾಗಿ ವೋಟ್ ಮಾಡಿ. ಸ್ವಚ್ಛತಾ ಸರ್ವೇಕ್ಷಣದಲ್ಲಿ ಮೈಸೂರನ್ನು ನಂಬರ್ 1 ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.

    ವಿಡಿಯೋದಲ್ಲೇನಿದೆ?:
    ಎಲ್ಲರಿಗೂ ನಮಸ್ಕಾರ, ಮೈಸೂರು ಸಾಂಸ್ಕೃತಿಕ ರಾಜಧಾನಿ, ನಮ್ಮ ನಾಡಿನ ಹೆಮ್ಮೆಯಾಗಿದೆ. ನಮಗೆಲ್ಲ ಮೈಸೂರು ಎಂದಾಕ್ಷಣ ಮೊದಲು ನೆನಪಾಗುವುದು ದಸರಾ. ವಿಶ್ವದಾದ್ಯಂತ ದಸರಾ ಖ್ಯಾತಿ ಪಡೆದಿದೆ. ಅಷ್ಟೇ ಅಲ್ಲದೇ ಮೈಸೂರು ಪಾಕ್, ಸಿಲ್ಕ್ ಮತ್ತು ಮೈಸೂರು ಮಲ್ಲಿಗೆ ಎಲ್ಲವೂ ಖ್ಯಾತಿ ಪಡೆದಿದೆ. ಮೈಸೂರು ಎಂದಾಕ್ಷಣ ಅದಕ್ಕೊಂದು ಇತಿಹಾಸ, ಸೊಗಡಿದೆ.

    ಹೊರ ದೇಶದವರು ಕೂಡ ಮೈಸೂರಿನ ಬಗ್ಗೆ ಮಾತನಾಡುತ್ತಾರೆ. ಅವರು ಕೂಡ ಮೈಸೂರಿನಲ್ಲಿ ಇರಬೇಕು ಎಂದು ಇಷ್ಟಪಡುತ್ತಾರೆ, ಅಷ್ಟು ಒಳ್ಳೆಯ ನಗರವಾಗಿದೆ. ನಾನು ಹುಟ್ಟಿ ಬೆಳೆದಂತಹ ಊರಾಗಿದ್ದು, ನನಗೆ ತುಂಬಾ ಅಟಾಚ್‍ಮೆಂಟ್ ಇದೆ. ನಾನು ಮೈಸೂರಿನವ ಎಂದು ಹೇಳುವುದಕ್ಕೆ ತುಂಬಾ ಹೆಮ್ಮೆಯಾಗುತ್ತವೆ ಎಂದು ಹೇಳಿದ್ದಾರೆ.

    ಇತ್ತೀಚೆಗೆ ಸ್ವಚ್ಛತಾ ಅಭಿಯಾನದಲ್ಲಿ ಮೈಸೂರು ಸ್ವಚ್ಛ ಸರ್ವೇಕ್ಷಣದಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿತ್ತು. ಈಗ 2019ರ ಸ್ವಚ್ಛತಾ ಸರ್ವೇಕ್ಷಣದ ಪೋಲ್ ನಡೆಯುತ್ತಿದೆ. ಆದ್ದರಿಂದ ನಾವೆಲ್ಲರೂ ಮೈಸೂರನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಂಡಿದ್ದೀವಿ ಎಂಬುದನ್ನು ಸ್ವಚ್ಛತಾ ಸರ್ವೇಕ್ಷಣ ವೆಬ್ ಸೈಟಿನಲ್ಲಿ ಅಥವಾ ಅಲ್ಲಿಗೆ ಹೋಗಿ ವೋಟ್ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು. ನಾವು ಸ್ಚಚ್ಛತೆಯನ್ನು ಕಾಪಾಡುತ್ತಿದ್ದೇವೆ ಜೊತೆಗೆ ಜನರು ಕೂಡ ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ನಾವು ತೋರಿಸಿ ಕೊಡಬೇಕಾಗುತ್ತದೆ ಎಂದಿದ್ದಾರೆ.

    ಮತ್ತೆ ಮೈಸೂರನ್ನು ನಂಬರ್ 1 ಆಗಬೇಕು. ಆದ್ದರಿಂದ ಮೈಸೂರು ನಂಬರ್ 1 ಮಾಡುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ. ವೋಟ್ ಮಾಡುವುದರ ಜೊತೆಗೆ ಸಿಟಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ದಯವಿಟ್ಟು ಎಲ್ಲರೂ ಎರಡು ನಿಮಿಷ ಸಮಯ ಮಾಡಿಕೊಂಡು ವೆಬ್ ಸೈಟ್‍ಗೆ ಹೋಗಿ ವೋಟ್ ಮಾಡಿ. ನಾನು ಕೂಡ ವೋಟ್ ಮಾಡುತ್ತಿದ್ದೇನೆ. ಇದು ನನ್ನ ಕಡೆಯಿಂದ ಮನವಿ, ಧನ್ಯವಾದಗಳು ಎಂದು ಹೇಳಿದ್ದಾರೆ.

    https://www.youtube.com/watch?v=YNT2Q9UI8yA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವತಃ ಶೌಚಾಲಯ, ಬಸ್ ಸ್ಟ್ಯಾಂಡ್ ಕ್ಲೀನ್ ಮಾಡಿದ ವಿನಯ್ ಗುರೂಜಿ!

    ಸ್ವತಃ ಶೌಚಾಲಯ, ಬಸ್ ಸ್ಟ್ಯಾಂಡ್ ಕ್ಲೀನ್ ಮಾಡಿದ ವಿನಯ್ ಗುರೂಜಿ!

    ಚಿಕ್ಕಮಗಳೂರು: ನಡೆದಾಡುವ ದೇವರೆಂದೇ ಜನರಿಂದ ಖ್ಯಾತಿ ಪಡೆದಿರುವ ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ಸಮೀಪದ ಸ್ವರ್ಣ ಪೀಠಿಕೇಶ್ವರಿ ಮಠದ ಅವಧೂತ ವಿನಯ್ ಗುರೂಜಿಯವರು ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡಿದ್ದಾರೆ.

    ಭಾನುವಾರ ಹರಿಹರಪುರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಅವಧೂತ ವಿನಯ್ ಗುರೂಜಿಯವರು, ಪೊರಕೆ ಹಿಡಿದು ಕೊಂಡು ರಸ್ತೆಗಳನ್ನು ಸ್ವಚ್ಛಗೊಳಿಸಿದ್ದರು. ಇದಲ್ಲದೇ ಸ್ವತಃ ಬಸ್ ಸ್ಟ್ಯಾಂಡ್‍ನಲ್ಲಿರುವ ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಅಭಿಯಾನದ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸಿಕೊಟ್ಟಿದ್ದಾರೆ.

    ಇತ್ತೀಚೆಗೆ ರಾಜಕಾರಣಿಗಳ ಭೇಟಿಯಿಂದ ವಿನಯ್ ಗುರೂಜಿ ಸಾಕಷ್ಟು ಸುದ್ದಿಯಾಗಿದ್ದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಗುರೂಜಿಯ ಪಾದಪೂಜೆ ನಡೆಸಿದ್ದರು. ಅಷ್ಟೇ ಅಲ್ಲದೇ ಸ್ಪೀಕರ್ ರಮೇಶ್ ಕುಮಾರ್ ಗುರೂಜಿಗೆ ಆರತಿ ಬೆಳಗಿದ್ದರು. ಇದೆಲ್ಲಾ ಮಾಧ್ಯಮದಲ್ಲಿ ಸುದ್ದಿಯಾದ ಮೇಲೆ ಬರುವ ಭಕ್ತರ ಸಂಖ್ಯೆ ಕೂಡ ಡಬಲ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv