Tag: ಸ್ಲಂ ಬೋರ್ಡ್

  • ʻಕೈʼ ಸುಡುತ್ತಾ ಸ್ಕ್ಯಾಮ್ ಬೆಂಕಿ – ಸ್ಲಂ ಬೋರ್ಡ್‌ನಲ್ಲಿ ಕಾಸು ಕೊಟ್ಟವರಿಗೆ ಸೈಟ್; ಸಿಎಂಗೆ ಪಂಚಾಯಿತಿ ಅಧ್ಯಕ್ಷೆ ಪತ್ರ

    ʻಕೈʼ ಸುಡುತ್ತಾ ಸ್ಕ್ಯಾಮ್ ಬೆಂಕಿ – ಸ್ಲಂ ಬೋರ್ಡ್‌ನಲ್ಲಿ ಕಾಸು ಕೊಟ್ಟವರಿಗೆ ಸೈಟ್; ಸಿಎಂಗೆ ಪಂಚಾಯಿತಿ ಅಧ್ಯಕ್ಷೆ ಪತ್ರ

    – ಕಾಂಗ್ರೆಸ್‌ ಪಕ್ಷದ ಪಂಚಾಯಿತಿ ಅಧ್ಯಕ್ಷೆಯಿಂದಲೇ ಲೆಟರ್‌ ಬಾಂಬ್‌

    ಬೆಂಗಳೂರು: ʻಬಡವರ ದುಡ್ಡು ತಿಂದ್ರೇ ಹುಳ ಬೀಳುತ್ತೆ, ಬಡವರ ದುಡ್ಡು ತಿಂದ್ರೆ ದೇವ್ರು ಮೆಚ್ಚುತ್ತಾನಾ? ಹೀಗೆ ನಿನ್ನೆ‌ ವೆರೈಟಿ ವೆರೈಟಿ ಡೈಲಾಗ್ ಹೊಡೆದ್ರು ಸಚಿವ ಜಮೀರ್ ಅಹಮ್ಮದ್ (Zameer Ahmed Khan). ಆದ್ರೆ ಅವ್ರ ಇಲಾಖೆಯಲ್ಲೇ ದಿನಕ್ಕೊಂದು ಗೋಲ್ಮಾಲ್‌ ಸರ್ಕಾರವನ್ನು ಈಗ ಮುಜಗರಕ್ಕೆ ಸಿಲುಕಿದೆ.

    ರಾಜೀವ್ ಗಾಂಧಿ ವಸತಿ ನಿಗಮದ ಬಳಿಕ ಈಗ ಸ್ಲಂ ಬೋರ್ಡ್‌ನಲ್ಲೂ (Slum Board) ಅಕ್ರಮದ ವಾಸನೆ ಕಂಡುಬಂದಿದೆ. ಯಲಹಂಕದಲ್ಲಿ ಸ್ಲಂ ಬೋರ್ಡ್‌ನಿಂದ (Yelahanka Slum Board) ಮಂಜೂರಾಗಿರುವ ನಿವೇಶನ ಬಡವರಿಗೆ ಸಿಗ್ತಿಲ್ಲ, ಬದಲಾಗಿ ದುಡ್ಟು ಕೊಟ್ಟವರಿಗೆ ಸೈಟು ಕೊಡ್ತಿದ್ದಾರೆ ಅಂತ ಕಾಂಗ್ರೆಸ್ ಪಕ್ಷದ ಪಂಚಾಯಿತಿ ಅಧ್ಯಕ್ಷೆಯೊಬ್ಬರು ಗಂಭೀರ ಆರೋಪ ಮಾಡಿ ಸಿಎಂ, ಡಿಸಿಎಂಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸರಿ ಮಾತಾಡ್ಸಲ್ಲ ಅಂತ ರಾಜು ಕಾಗೆ ಆರೋಪ – ಶಾಸಕರಿಗೆ ನಮ್ಮ ಮೇಲೆ ಪ್ರೀತಿ ಜಾಸ್ತಿ ಎಂದ ಡಿಕೆಶಿ

    ಈ ಗೋಲ್ಮಾಲ್‌ನಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಬಡವರಿಗೆ ಸೇರಬೇಕಾಗಿರುವ ಮನೆ ನಿವೇಶನ ದುಡ್ಡಿದ್ದವರ ಪಾಲಾಗಿದೆ. ಹಣ ಕೊಟ್ಟವರಿಗೆ ನಿವೇಶನ ಸೇಲ್ ಮಾಡಲಾಗುತ್ತಿದೆ ಅಂತ ಪತ್ರದಲ್ಲಿ ಆರೋಪಿಸಿದ್ದು, ಅನರ್ಹ ಫಲಾನುಭವಿಗಳ ಪಟ್ಟಿ ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: PUBLiC TV Impact | ಅಳಿವಿನಂಚಿನಲ್ಲಿದ್ದ ಸರ್ಕಾರಿ ಶಾಲೆಗೆ `ಪಬ್ಲಿಕ್’ ಪ್ರೋತ್ಸಾಹ – ಸರ್ಕಾರಿ ಶಾಲೆಗೆ ಹೆಚ್ಚಾಯ್ತು ಡಿಮ್ಯಾಂಡ್

    ಒಟ್ಟಿನಲ್ಲಿ ಸರ್ಕಾರದ ವಿರುದ್ಧ ಸಾಲು ಸಾಲು ಸ್ಕ್ಯಾಮ್ ಗಳು, ಅವರದ್ದೇ ಪಕ್ಷದವರು ಈ ಭ್ರಷ್ಟಾಚಾರದ ವಿರುದ್ಧ ತಿರುಗಿಬಿದ್ದು ಬುದ್ಧಿ ಕಲಿಸುವ ಮಟ್ಟಕ್ಕೆ ಬಂದಿದೆ. ಇದನ್ನೂ ಓದಿ: ಬಹಿರಂಗ ಹೇಳಿಕೆ ನೀಡುವ ಶಾಸಕರೇ ಹುಷಾರ್! ಕಾಂಗ್ರೆಸ್ ಹೈಕಮಾಂಡ್ ವಾರ್ನಿಂಗ್ ಕಾಲ್?

  • ಸ್ಲಂ ಬೋರ್ಡ್ ಕಟ್ಟಡ ಕುಸಿತ – 7 ವರ್ಷದ ಬಾಲಕ ದುರ್ಮರಣ

    ಸ್ಲಂ ಬೋರ್ಡ್ ಕಟ್ಟಡ ಕುಸಿತ – 7 ವರ್ಷದ ಬಾಲಕ ದುರ್ಮರಣ

    ರಾಯಚೂರು: ಜಿಲ್ಲೆಯಲ್ಲಿ ಸ್ಲಂ ಬೋರ್ಡ್ ಮನೆಗಳು ಜೀವಕ್ಕೆ ಮಾರಕವಾಗಿವೆ. ಆಟವಾಡುತ್ತಿದ್ದ ಮಕ್ಕಳ ಮೇಲೆ ಮನೆ ಕುಸಿದು ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ನಗರದ ಸಿಯಾತಲಾಬ್ ಪ್ರದೇಶದ ರಾಜೀವ್ ನಗರದಲ್ಲಿ ಸ್ಲಂ ಬೋರ್ಡ್ ನಿರ್ಮಿಸಿದ್ದ ಮನೆಯೊಂದು ಕುಸಿದು ಓರ್ವ ಬಾಲಕನ ಬಲಿ ಪಡೆದಿದೆ. ಐದು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. 7 ವರ್ಷದ ವಿಕಾಶ್ ಮೃತ ದುರ್ದೈವಿ. ಮೀನಮ್ಮ, ಸ್ವಾತಿ, ಕಾರ್ತಿಕ್, ಈರಮ್ಮ, ಶ್ವೇತಾ ಗಂಭೀರ ಗಾಯಗೊಂಡವರು. ಇದನ್ನೂ ಓದಿ: ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ

    ಕಟ್ಟಡದ ಮೆಟ್ಟಿಲು ಮೇಲೆ ಹತ್ತು ಹದಿನೈದು ಜನ ನಿಂತಿದ್ದ ವೇಳೆ ಛಾವಣಿ ಕುಸಿದು ಬಿದ್ದಿದೆ. ಕೆಳಗಡೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಕುಸಿದು ಬಿದ್ದಿರುವುದರಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ಘಟನೆಯ ಬಳಿಕ ಇಲ್ಲಿನ 108 ಕುಟುಂಬಗಳು ಜೀವಭಯದಲ್ಲಿ ವಾಸಿಸುತ್ತಿವೆ.

    ಬಾಲಕನ ಸಾವಿನಿಂದ ಮೃತನ ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ. ರಾಜೀವ್ ನಗರ ಸ್ಲಂನಲ್ಲಿ ಸ್ಲಂಬೋರ್ಡ್ ನಿರ್ಮಿಸಿದ ಮನೆಗಳಲ್ಲಿ 108 ಕುಟುಂಬಗಳು ವಾಸಿಸುತ್ತಿದ್ದು. ಈಗ ಎಲ್ಲರಿಗೂ ಜೀವ ಭಯ ಕಾಡುತ್ತಿದೆ. ಎಲ್ಲಾ ಮನೆಗಳು ಬಿರುಕು ಬಿಟ್ಟಿದ್ದು ಯಾವ ಸಮಯದಲ್ಲಿ ಬೇಕಾದರೂ ಬೀಳುವ ಸಾಧ್ಯತೆಗಳಿವೆ. ಹೀಗಾಗಿ ಕೂಡಲೇ ನಮ್ಮನ್ನು ಸ್ಥಳಾಂತರ ಮಾಡಿ ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರಾಯಚೂರು ಉಪವಿಭಾಗ ಸಹಾಯಕ ಆಯುಕ್ತ ರಜನಿಕಾಂತ್ ಸಿಎಂ ಪರಿಹಾರ ನಿಧಿಯಿಂದ ಮೃತನ ಕುಟುಂಬಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಇನ್ನೂ ನಿವಾಸಿಗಳ ಸ್ಥಳಾಂತರದ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ರಜನಿಕಾಂತ್ ಹೇಳಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಲೋಕಾರ್ಪಣೆಯಾಗಲಿದೆ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ

    ಸ್ಥಳಕ್ಕೆ ರಾಯಚೂರು ತಹಶೀಲ್ದಾರ್ ಹಂಪಣ್ಣ ಸಜ್ಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ನಿವಾಸಿಗಳು ಮೃತನ ಕುಟುಂಬಕ್ಕೆ ಪರಿಹಾರ ಹಾಗೂ ಬಡ ಕೂಲಿ ಜನರಿಗೆ ಇಲ್ಲಿಂದ ಸ್ಥಳಾಂತರದ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.

  • ಸ್ಲಂ ಬೋರ್ಡ್‍ನಿಂದ ಕೈಗೆತ್ತಿಕೊಂಡಿರುವ 50 ಮನೆಗಳನ್ನು ಜ.30 ರೊಳಗೆ ಪೂರ್ಣಗೊಳಿಸಬೇಕು: ಗೋಪಾಲಯ್ಯ

    ಸ್ಲಂ ಬೋರ್ಡ್‍ನಿಂದ ಕೈಗೆತ್ತಿಕೊಂಡಿರುವ 50 ಮನೆಗಳನ್ನು ಜ.30 ರೊಳಗೆ ಪೂರ್ಣಗೊಳಿಸಬೇಕು: ಗೋಪಾಲಯ್ಯ

    ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ವಾರ್ಡ್ ನಂಬರ್ 44 ರ ಮಾರಪ್ಪನ ಪಾಳ್ಯದ ಗಜಾನನ ಸ್ಲಂ.2 ರಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಆಶ್ರಯ ಯೋಜನೆಯಡಿ ಮೊದಲ ಹಂತದಲ್ಲಿ ಆರಂಭಿಸಿರುವ 50 ಮನೆಗಳ ಕಾಮಗಾರಿಯನ್ನು ಇದೇ ಜನವರಿ 30 ರೊಳಗೆ ಮುಗಿಸಬೇಕೆಂದು ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಬಿಬಿಎಂಪಿ ಎಂಜಿನಿಯರ್‍ಗಳಿಗೆ ಸೂಚಿಸಿದರು.

    ಇಂದು ಬೆಳಿಗ್ಗೆ ಗಜಾನನ ಸ್ಲಂ.2 ರಲ್ಲಿ ಸಾರ್ವಜನಿಕ ಸೌಲಭ್ಯ ಕುರಿತು ಪರಿವೀಕ್ಷಣೆ ನಡೆಸಿ ಈ ಸೂಚನೆ ನೀಡಿದ ಸಚಿವರು, ಮನೆಗಳ ನಿರ್ಮಾಣ ಕಾರ್ಯ ವಿಳಂಬವಾಗಿರುದುವುದಕ್ಕೆ ಇಂಜಿನಿಯರ್ ಗಳ ವಿರುದ್ದ ಕಿಡಿಕಾರಿದರು. ಇದನ್ನೂ ಓದಿ: ಆರತಿ ತಟ್ಟೆ ಹಿಡಿದು ಪೂಜೆಗಾಗಿ ಎರಡು ಕುಟುಂಬಗಳ ನಡುವೆ ಕಿತ್ತಾಟ – ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಮನೆಗಳ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಒಂದು ವೇಳೆ ಕಾಮಗಾರಿಯಲ್ಲಿ ಲೋಪ ಅಥವಾ ಕಳಪೆ ಕಾಮಗಾರಿ ಕಂಡುಬಂದರೆ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಇದೇ ವೇಳೆ ಶಂಕರ ಮಠ ಪಾರ್ಕ್ ನಿರ್ವಹಣೆ ಸರಿ ಇಲ್ಲದಿರುವುದನ್ನು ಗಮನಿಸಿದ ಸಚಿವರು, ಹಾಳಾಗಿರುವ ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ನೆಡಬೇಕು. ಅವುಗಳನ್ನು ಸರಿಯಾಗಿ ಪೋಷಣೆ ಮಾಡಬೇಕ ಎಂದು ಸೂಚಿಸಿದರು. ಇದನ್ನೂ ಓದಿ: ಕಾಳಿ ದೇವಿ ಪಾದದ ಕೆಳಗೆ ವ್ಯಕ್ತಿಯ ತಲೆ ಬುರುಡೆ!

    ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಎಂ.ಮಹದೇವ್, ಪುಟ್ಟಣ್ಣ, ವೆಂಕಟೇಶಮೂರ್ತಿ, ರೈಲ್ವೇ ನಾರಾಯಣ್ ವೆಂಕಟೇಶ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.